ಅಂಕಣ

ಆ ರಾತ್ರಿ… ಕಾಂಗ್ರೆಸಿನ ರಾಜಮಾತೆಯ ಕಣ್ಣಿನ ನಿದ್ದೆ ಹಾರಿತ್ತು! ದೆಹಲಿಯ ಕಾಂಗ್ರೆಸ್ ಕಾರ್ಯಾಲಯದಲ್ಲಿ ರಕ್ಷಣಾ ಸಚಿವರು ಬೆವರುತ್ತಿದ್ದರು!! ರಾಜಮಾತೆಯ ನಿದ್ದೆ, ಕಾಂಗ್ರೆಸಿನ ಮನಶ್ಶಾಂತಿ ಕದಡಿದ ಹುಲಿ ಯಾರು?

2012 ರ ಜನವರಿ ತಿಂಗಳ 16-17 ತಾರೀಕಿನ ಮಧ್ಯ ರಾತ್ರಿಯಂದು ಕಾಂಗ್ರೆಸಿನ ರಾಜಮಾತೆ ನಿದ್ದೆ ಇಲ್ಲದೆ ಬೆಚ್ಚಿ ಕುಳಿತಿದ್ದರು….ಕಾಂಗ್ರೆಸಿನ ನಾಯಕರ ಮನೆಯ ದೀಪಗಳು ಜಗ್ಗ್ ಎಂದು ಬೆಳಗಿದವು. ಕಾಂಗ್ರೆಸಿನ ನಾಯಕರುಗಳ ಫೋನುಗಳು ಪುರುಸೊತ್ತಿಲ್ಲದೆ ಟ್ರಿಣ್ ಗುಡುತ್ತಿದ್ದವು. ಮೇಡಮ್ ಜಿ ಎದೆ ಢವ ಢವ ಹೊಡೆದು ಕೊಳ್ಳುತ್ತಿತ್ತು. ಪ್ರತಿಕ್ಷಣವೂ ಯುಗದಂತೆ ಕಳೆಯುತ್ತಿತ್ತು. ರಾಜಮಾತೆಯ ಹಿಂಬಾಲಕರೆಲ್ಲ ಬಾಲ ಸುಟ್ಟ ಮಂಗನಂತೆ ಅತ್ತಿಂದಿತ್ತ ಓಡಾಡುತ್ತಿದ್ದರು!! ಯಾಕೆ? ಏನಾಗಿತ್ತು ಆ ರಾತ್ರಿ?

2012 ರಲ್ಲಿ ದ ಇಂಡಿಯನ್ ಎಕ್ಸ್ ಪ್ರೆಸ್ ನಲ್ಲಿ ಪ್ರಕಟವಾದ ವರದಿಯ ಪ್ರಕಾರ ಜನವರಿ 16-17 ತಾರೀಕಿನ ಮಧ್ಯ ರಾತ್ರಿಯಂದು ಭಾರತೀಯ ಸೇನೆಯ ಎರಡು ಬೆಟಾಲಿಯನ್ ಗಳು ಏಕಾ ಏಕಿ ದೆಹಲಿಯೆಡೆಗೆ ಮಾರ್ಚ್ ಮಾಡತೊಡಗಿದ್ದವು. ಭಾರತೀಯ ಸೇನೆಯ 33ನೇ ಡಿವಿಷನ್ ನ ಸಶಸ್ತ್ರ ಪಡೆಯ ಮೆಕಾನೈಸ್ಡ್ ಇನ್ ಫೆಂಟ್ರಿ ಹರಿಯಾಣದ ಹಿಸ್ಸಾರ್ ನಿಂದ ಮತ್ತು ಆಗ್ರಾದಿಂದ 50 ಪ್ಯಾರಾ ಬ್ರಿಗೇಡ್ ನ ಸೇನಾ ತುಕುಡಿಗಳು ಮಾರ್ಚ್ ಮಾಡುತ್ತಾ ರಾಜಧಾನಿ ದೆಹಲಿಯೆಡೆಗೆ ಇನ್ನೇನು ತಲುಪುವುದರಲ್ಲಿದ್ದುವು. ಅದರಲ್ಲೇನು ವಿಶೇಷ ಎಂದಿರಾ? ವಿಶೇಷವೆಂದರೆ ಸೇನೆ ಈ ರೀತಿ ದೆಹಲಿಯೆಡೆಗೆ ಮಾರ್ಚ್ ಮಾಡುತ್ತಿರುವುದು ದೆಹಲಿ ಸರಕ್ಕಾರಕಾಗಲಿ, ರಕ್ಷಣಾ ಮಂತ್ರಲಯಕ್ಕಾಗಲಿ ಸೇನೆಯ ಡಿ.ಜಿ.ಎಮ್.ಓ ಅವರಿಗಾಗಲಿ ಗೊತ್ತೆ ಇರಲಿಲ್ಲ!!

ತೀರ ರಹಸ್ಯಮಯ ರೀತಿಯಲ್ಲಿ ಸೇನೆಯ ಎರಡು ತುಕುಡಿಗಳು ದೆಹಲಿಯೆಡೆಗೆ ಪ್ರಯಾಣ ಬೆಳೆಸಿದ ಸುದ್ದಿ ತಿಳಿದದ್ದೆ ತಡ, ರಾಜಮಾತೆ ಬೆಚ್ಚಿ ಬಿದ್ದರು. ಸೇನೆ ತಮ್ಮ ಸರಕಾರವನ್ನು ಉರುಳಿಸಲಿಕ್ಕಾಗಿಯೆ ದೆಹಲಿಗೆ ಬರುತ್ತಿದೆ ಎಂದು ತಪ್ಪಾಗಿ ಭಾವಿಸಿದ ಮೇಡಮ್ ಜೀ ಕೂಡಲೆ ರಕ್ಷಾ ಮಂತ್ರಿ ಎ.ಕೆ.ಆಂಟೋನಿಗೆ ಕರೆ ಮಾಡಿ ಈಗಿಂದಲೇ ಸೇನೆಯನ್ನು ವಾಪಾಸು ಬರಾಕ್ ಗೆ ಕಳಿಸಿ ಎಂದು ಆಜ್ಞೆ ಇತ್ತರು. ಎ.ಕೆ.ಆಂಟನಿ ಆ ಕೂಡಲೆ ಕಾರ್ಯಾಲಯಕ್ಕೆ ದೌಡಾಯಿಸಿ, ವಿದೇಶ ಪ್ರಯಾಣಕ್ಕೆ ಹೊರಡುವವರಿದ್ದ ರಕ್ಷಣಾ ಸಚಿವ ಶಶಿಕಾಂತ ಶರ್ಮಾರನ್ನು ವಾಪಾಸು ಕರೆಸಿಕೊಂಡರು. ವಿದೇಶ ಪ್ರಯಾಣ ಮೊಟಕುಗೊಳಿಸಿ ಶಶಿಕಾಂತ ಶರ್ಮ ಮಧ್ಯರಾತ್ರಿಯಲ್ಲೆ ಸೇನೆಯ ಡಿ.ಜಿ.ಎಮ್.ಓ ಆದ ಲೆಫ್ಟಿನೆಂಟ್ ಜನರಲ್ ಚೌಧರಿ ಅವರನ್ನು ತಮ್ಮಲ್ಲಿಗೆ ಕರೆಸಿಕೊಂಡು “ನಾನು ಇದೀಗ ತಾನೆ ಸರಕಾರದ “ಅತ್ಯುಚ್ಚ ಪದ” ದಲ್ಲಿರುವವರನ್ನು ಭೇಟಿಯಾಗಿ ಬಂದೆ ಅವರು ಭಾರೀ ಚಿಂತಾಕ್ರಾಂತರಾಗಿದ್ದಾರೆ, ಈ ಕೂಡಲೆ ನೀವು ಸೇನೆಯನ್ನು ಹಿಂದೆ ಕಳುಹಿಸಿ ” ಎಂದು ಅಂಗಲಾಚಿಕೊಂಡರು.

ಈ ಸರಕಾರದ “ಅತ್ಯುಚ್ಚ ಪದದ” ವ್ಯಕ್ತಿ ಬೇರಾರು ಅಲ್ಲ ಸ್ವತಃ ಮೇಡಮ್ ಜಿ ಹಾಗೂ ಮೇಡಮ್ ಜಿ ಯ ನಿದ್ದೆಗೆಡಿಸಿದ ಹುಲಿ ಬೇರಾರೂ ಅಲ್ಲ ಅವರೆ ನಮ್ಮೆಲ್ಲರ ಹೆಮ್ಮೆಯ ಜನರಲ್ ವಿ.ಕೆ.ಸಿಂಗ್! ಪ್ರಪಂಚದ ಯಾವ ಮೂಲೆಯಲ್ಲಿ ಭಾರತೀಯರು ಸಿಲುಕಿದ್ದರೂ ಅವರ ಕೂದಲೂ ಕೊಂಕದಂತೆ ಅನಾಮತ್ತಾಗಿ ಎತ್ತಿಕೊಂಡು ತವರು ಮನೆಗೆ ತಂದು ಬಿಡುವ ಮೋದಿ ಸರಕಾರದ ಶ್ರೇಷ್ಠ ನಾಯಕ ಜನರಲ್ ವಿ.ಕೆ.ಸಿಂಗ್. ರಕ್ಷಣಾ ಕ್ಷೇತ್ರದಲ್ಲಿ ಕಾಂಗ್ರೆಸ್ ಮಾಡುತ್ತಿದ್ದ ಹಗರಣಗಳನ್ನು ದೇಶದ ಮುಂದೆ ತಂದು ಕಾಂಗ್ರೆಸಿನ ಮುಖವಾಡ ಬಯಲು ಮಾಡಿದ್ದು ವಿ.ಕೆ.ಸಿಂಗ್. ಭಾರತ-ಪಾಕಿಸ್ತಾನ ಯುದ್ದ ನಡೆದರೆ ಹೋರಾಡಲು ಭಾರತೀಯ ಸೇನೆಯ ಬಳಿ ಶಸ್ತ್ರಗಳೆ ಇಲ್ಲ ಎನ್ನುವ ಸತ್ಯವನ್ನು ಬಿಚ್ಚಿಟ್ಟವರೆ ವಿ.ಕೆ.ಸಿಂಗ್. ಕಾಂಗ್ರೆಸಿನ ಬಾಲಬಡುಕ ಮಾಧ್ಯಮದವರಿಗೆ “ಪ್ರೆಸ್ಸ್ಟಿಟ್ಯೂಟ್” ಎಂದು ನಾಮಕರಣ ಮಾಡಿದವರೆ ವಿ.ಕೆ.ಸಿಂಗ್.

ಜನವರಿ 16 ರ ಮಧ್ಯರಾತ್ರಿ ಸೇನೆಯ ಎರಡು ತುಕುಡಿಗಳು ದೆಹಲಿಯೆಡೆಗೆ ಮಾರ್ಚ್ ಮಾಡಿತಲ್ಲ, ಆಗ ಸೇನಾಧ್ಯಕ್ಷರಾಗಿದ್ದವರೆ ಜನರಲ್ ವಿ.ಕೆ.ಸಿಂಗ್. ಸೇನೆಯ ಎರಡು ತುಕುಡಿಗಳು ದೆಹಲಿಯೆಡೆಗೆ ಮಾರ್ಚ್ ಮಾಡಿದ ವಿಚಾರ ವಿ.ಕೆ.ಸಿಂಗ್ ಅವರಿಗೆ ಬಿಟ್ಟರೆ ಇನ್ನಾರಿಗೂ ಗೊತ್ತಿರಲಿಲ್ಲ. ಈ ಘಟನೆಯಿಂದ ಕಾಂಗ್ರೆಸ್ ಹೌಹಾರಿತ್ತು ಮತ್ತು ಆ ಕೂಡಲೆ ಸೇನಾ ತುಕುಡಿಗಳನ್ನು ವಾಪಾಸು ಕಳುಹಿಸಿತ್ತು. ಕಾಂಗ್ರೆಸಿನ ಹೈ ಕಮಾಂಡ್ ಎಷ್ಟು ಬೆದರಿತ್ತೆಂದರೆ ಸೇನೆ ವಾಪಾಸು ಬರಾಕಿಗೆ ಹೋಯಿತೋ ಇಲ್ಲವೊ ಎಂದು ಪರೀಕ್ಷಿಸಲು ಇಂಟಲಿಜೆನ್ಸ್ ವಿಭಾಗಕ್ಕೆ ಹೆಲೆಕಾಪ್ಟರ್ ಕಳುಹಿಸಿ ಸಮೀಕ್ಷೆ ನಡೆಸಲು ಆಜ್ಞೆ ಇತ್ತಿತ್ತಂತೆ! ನಿಜವೆಂದರೆ ಆವತ್ತು ನಡೆದದ್ದು ಏನು ಎಂದು ಯಾರಿಗೂ ಗೊತ್ತಿಲ್ಲ. ಸೇನಾಧ್ಯಕ್ಷ, ಸೇನೆಯ ಡಿ.ಜಿ.ಎಮ್.ಓ, ರಕ್ಷಾ ಮಂತ್ರಿ ಆದಿಯಾಗಿ ಎಲ್ಲರೂ ಇದು ಸೇನೆ ನಿಯಮಿತವಾಗಿ ಮಾಡುವ ಕವಾಯದು ಎಂದು ಸಾರಿ ಸಾರಿ ಹೇಳಿದರೂ ಹೈ ಕಮಾಂಡ್ ಅದನ್ನು ಕೇಳುವ ಸ್ಥಿತಿಯಲ್ಲೆ ಇರಲಿಲ್ಲ.

ರಷ್ಯಾ-ಪಾಕಿಸ್ತಾನದಂತಹ ದೇಶಗಳಲ್ಲಿ ಸೇನೆ ಸರಕಾರದ ವಿರುದ್ದ ತಿರುಗಿ ಬಿದ್ದು ಆಡಳಿತವನ್ನು ತನ್ನ ಸುಪರ್ದಿಗೆ ತೆಗೆದುಕೊಂಡಿರುವ ನಿದರ್ಶನಗಳನ್ನು ನೋಡಿರುವ ಕಾಂಗ್ರೆಸ್ ಹೈ ಕಮಾಂಡ್ ತನ್ನ ಬುಡ ಅಲುಗಾಡುವುದನ್ನು ಊಹಿಸಿ, ಸೇನೆ ತನ್ನನ್ನು ಗೃಹ ಬಂಧಿಯಾಗಿಸಲು ಬರುತ್ತಿದೆ ಎಂದು ಭ್ರಮೆ ಪಟ್ಟುಕೊಂಡಿತ್ತು. ಅಷ್ಟಕ್ಕೂ ವಿ.ಕೆ.ಸಿಂಗ್ ಮನದಲ್ಲಿ ಏನಿತ್ತೆನ್ನುವುದು ಅವರಿಗಷ್ಟೆ ಗೊತ್ತು. ಈ ಘಟನೆಯ ನಂತರ ಕಾಂಗ್ರೆಸ್ ಮಾತ್ರ ವಿ.ಕೆ.ಸಿಂಗ್ ಮೇಲೆ ಅಪವಾದಗಳ ಸುರಿಮಳೆಗೈದಿತು. ಅವರನ್ನು ದೇಶದ್ರೋಹಿಯೆಂಬತೆ ಬಿಂಬಿಸಿತು. ಜಮ್ಮು ಕಾಶ್ಮೀರ ಸರಕಾರವನ್ನು ಉರುಳಿಸಲು ವಿ.ಕೆ.ಸಿಂಗ್ ಶಡ್ಯಂತ್ರ ರಚಿಸಿದ್ದರೆಂದಿತು. ಸೇನೆಯ ರಹಸ್ಯ ತುಕುಡಿಯೊಂದನ್ನು ತಯಾರಿಸಿ ರಾಜಕಾರಣಿಗಳ ಮತ್ತು ಸೇನಾ ಕಾರ್ಯಗಳ ಮೇಲೆ ನಿಗಾ ಇಡುತ್ತಿದಾರೆ ಎಂದಿತು. ದೇಶ ಮಾರುವ ಇಂತಹ ರಾಜಕಾರಣಿಗಳ ಮೇಲೆ ನಿಗಾ ಇಟ್ಟಿದ್ದರೆ ಅದು ನಿಜವಾಗಿಯೂ ಅಭಿನಂದನೀಯ ವಿಚಾರ. ಒಂದು ವೇಳೆ ವಿ.ಕೆ.ಸಿಂಗ್ ಹೀಗೆ ಮಾಡಿದ್ದರೆ ದೇಶ ಅವರಿಗೆ ಚಿರಋಣಿ.

ವಿ.ಕೆ.ಸಿಂಗ್ ಅವರ ದೇಶ ಪ್ರೇಮದ ಬಗ್ಗೆ ಎರಡು ಮಾತಿಲ್ಲ. ಶಸ್ತ್ರಾಸ್ತ್ರ ಖರೀದಿಯಲ್ಲಿ ಅಕ್ರಮವೆಸಗಿದರೆ ಮೂರು ಮಿಲಿಯನ್ ಡಾಲರ್ ಕೊಡುವುದಾಗಿ ಕಾಂಗ್ರೆಸ್ ಕೇಳಿಕೊಂಡಾಗಲೂ ದೇಶದ ರಕ್ಷಣೆಯ ಜೊತೆ ರಾಜಿ ಮಾಡಕೊಳ್ಳದವರು ವಿ.ಕೆ.ಸಿಂಗ್. ಹತ್ತೊಂಬತ್ತನೆ ವಯಸ್ಸಿಗೇ ಸೇನೆಗೆ ಕಾಲಿಟ್ಟು ರಜಪೂತ ರೆಜಿಮೆಂಟಿನ ಜವಾನನಾಗಿ, ತದನಂತರ ಬಾಂಗ್ಲಾ ಯುದ್ದದಲ್ಲಿಯೂ ತಮ್ಮ ಪರಾಕ್ರಮ ಮೆರೆದ, ಬಳಿಕ ಭಾರತೀಯ ಸೇನೆಯ ಸೇನಾಧ್ಯಕ್ಷರಾಗಿ ದೇಶಸೇವೆಗೈದ ವಿ.ಕೆ.ಸಿಂಗ್ ಮೋದಿ ಸರಕಾರದ ಅನರ್ಘ್ಯ ರತ್ನಗಳಲ್ಲಿ ಒಬ್ಬರು. ಸಿಂಗರ ಮೂರು ತಲೆಮಾರುಗಳು ದೇಶ ಸೇವೆಗಾಗಿ ಸೇನೆಯಲ್ಲಿ ಜೀವ ಸವೆಸಿವೆ. ಕೌಂಟರ್ ಎಮರ್ಜೆನ್ಸಿ ಆಪರೇಶನ್ ಮತ್ತು ಎತ್ತರದ ಜಾಗಗಳಲ್ಲಿ ಶತ್ರುಗಳ ಮೇಲೆ ನೆಗೆಯುವುದರಲ್ಲಿ ನಿಸ್ಸೀಮರು ಸಿಂಗ್. ಅವರ ದೇಶಭಕ್ತಿ ಮತ್ತು ಅಪ್ರತಿಮ ಶೌರ್ಯಕ್ಕಾಗಿಯೆ ವಿದೇಶಾಂಗ ವ್ಯವಹಾರಗಳ ಸ್ವಂತತ್ರ ಪ್ರಭಾರ ಮಂತ್ರಾಲಯವನ್ನು ಅವರಿಗೆ ನೀಡಿದ್ದಾರೆ ಮೋದಿ. ಅವತ್ತಿಂದ ಇವತ್ತಿನವರೆಗೆ ವಿ.ಕೆ.ಸಿಂಗ್ ವಿದೇಶದಲ್ಲಿ ಸಿಲುಕಿದ ಸಾವಿರಾರು ಭಾರತೀಯರನ್ನು ರಕ್ಷಿಸಿದ್ದಾರೆ. ಪ್ರಪಂಚದ ಇತರ ದೇಶಗಳೆ ತಮ್ಮ ನಾಗರಿಕರನ್ನು ರಕ್ಷಿಸಲು ಭಾರತದ ಮೊರೆ ಹೋಗುತ್ತಾರೆಂದರೆ ವಿ.ಕೆ.ಸಿಂಗ್ ಅವರ ಸಾಮರ್ಥ್ಯ ಎಂಥದ್ದಿರಬೇಕು! ರಾಷ್ಟ್ರದ ಪ್ರತಿ ತನ್ನ ನಿಷ್ಟೆಯನ್ನು ಜಗತ್ತಿಗೆ ಸಾರಿ ಭಾರತೀಯರಿಗೆ ಹೆಮ್ಮೆ ಮೂಡಿಸಿದ ವಿ.ಕೆ.ಸಿಂಗ್ ಅವರಿಗೆ ಭಾರತೀಯರ ಕೋಟಿ ಪ್ರಣಾಮಗಳು.

-ಶಾರ್ವರಿ

Tags

Related Articles

Close