ಅಂಕಣಪ್ರಚಲಿತ

ಭಾರತದಲ್ಲಿ ಮಾತ್ರವಲ್ಲ, ಕಮ್ಯುನಿಸ್ಟ್ ಲೆನಿನ್ ನ ಪ್ರತಿಮೆಗಳು ಜಗತ್ತಿನಾದ್ಯಂತ ಧರೆಗುರುಳುತ್ತಲಿದೆ!! ಭಾರತದಲ್ಲಾದ ಬದಲಾವಣೆ ಜಗತ್ತನ್ನೂ ಬದಲಾಯಿಸಿತೇ?!

ಅಷ್ಟಕ್ಕೂ ಈ ಲೆನಿನ್ ಎಂಬಂತಹ ಕ್ರಾಂತಿಕಾರಿ ಕಮ್ಯುನಿಷ್ಟನ ಸಿದ್ದಾಂತವೊಂದು ೧೯ ನೇ ಶತಮಾನದಲ್ಲಿ ಇಡೀ ಸೋವಿಯತ್ ಯೂನಿಯನ್ನಿನ ದಿಕ್ಕು ಬದಲಾಯಿಸಿದ್ದು ಮಾತ್ರವಲ್ಲ, ಸರಕಾರದ ವಿರುದ್ಧ ಬಂಡಾಯವೆದ್ದ “ಸಮಾನತೆ” ಮಾತಾಡುವವರೆಲ್ಲರೂ ಸಹ, ಕಮ್ಯುನಿಸ್ಟರು, ಜಾತ್ಯಾತೀತ ವಾದಿಗಳೆಂದು ಹೆಸರು ಪಡೆದುಕೊಂಡಿದ್ದಲ್ಲದೇ, ತಮ್ಮ ಕೃತಿಗಳ ಮೂಲಕ ಸಮಾಜವನ್ನೇ ಸರಕಾರದ ವಿರುದ್ಧ ಎತ್ತಿ ಕಟ್ಟುವಂತಹಷ್ಟು ಸಾಮರ್ಥ್ಯವಿದ್ದ ಲೆನಿನ್ ಅಂತಹ, ಕಮ್ಯುನಿಸ್ಟರೆಲ್ಲ ವೈಯುಕ್ತಿಕವಾದ ಅಧಿಕಾರಕ್ಕಿಳಿದದ್ದು ದುರಂತವೋ, ಅಥವಾ ಲೆನಿನ್ ಅನ್ನು ಅನುಸರಿಸಿ ನಡೆದ ಹಲವು ಕಮ್ಯುನಿಸ್ಟ್ ಭಾರತೀಯರು ಕೊನೆ ಕೊನೆಗೆ ಭಾರತಕ್ಕೇ ಮುಳುವಾಗಿ ಹೋದರೂ ಸಹ ಉಹೂಂ! ಭಾರತ ಸಹಿಸಿಕೊಳ್ಳುತ್ತಲೇ ಬಂದಿತಲ್ಲವಾ?! ಮೊನ್ನೆ ಯಾವತ್ತು, ಭಾರತೀಯ ಜನತಾ ಪಕ್ಷ ಮೊನ್ನೆಯಷ್ಟೇ ೨೫ ವರ್ಷಗಳ ನಂತರ ತ್ರಿಪುರಾದಲ್ಲಿ ಕಮ್ಯುನಿಸ್ಟರ ಆಡಳಿತ ಆರ್ಭಟವನ್ನು ತಣ್ಣಗಾಗಿಸಿತೋ, ಅದೇ ಆವೇಶದಲ್ಲಿಯೇ ಪಕ್ಷದ ಕಾರ್ಯಕರ್ತರೂ ಸಹ ಕಮ್ಯುನಿಸ್ಟರ ಕಚೇರಿಯ ಮುಂದಿದ್ದ ಲೆನಿನ್ ಪ್ರತಿಮೆಯನ್ನು ಉರುಳಿಸಿದರಷ್ಟೇ! ಈಶಾನ್ಯ ರಾಜ್ಯಗಳಲ್ಲಿ ಅಧಿಕವಾಗಿದ್ದ ಕಮ್ಯುನಿಸ್ಟರ ಸೊಕ್ಕು ಮುರಿದಿದ್ದು, ಇತ್ತ ಕೇರಳದಲ್ಲೂ ವ್ಯಾಪಕವಾಗಿಯೇ ಪರಿಣಾಮ ಬೀರಿತ್ತು!

Lenin stands disowned in a Ukrainian forest.

ಹೇಳಬೇಕೆಂದರೆ, ಇದು ಮೊದಲ ಬಾರಿಯಲ್ಲ!! ಯಾಕೆ ಗೊತ್ತಾ?! ಈ ಲೆನಿನ್ ನ ಸಿದ್ಧಾಂತವೊಂದು ಇಪ್ಪತ್ತನೇ ಶತಮಾನದಲ್ಲಿಯೇ ಅಂತ್ಯವಾಗಿ ಹೋಗಿದೆ! ಅದಲ್ಲದೇ, ಈಗಾಗಲೇ ಸ್ವತಃ ರಶ್ಯನ್ನರೇ ಲೆನಿನ್ ನ ಪ್ರತಿಮೆಯನ್ನು ಸೋವಿಯತ್ ಯೂನಿಯನ್ ನಲ್ಲಿ ಧರೆಗುರುಳಿಸಿದ್ಧಾರೆಂದರೆ ಕಲ್ಪನೆ ಮಾಡಿಕೊಳ್ಳಿ! ವಾಸ್ತವವಾಗಿ, ವಿಶ್ವದಾದ್ಯಂತ ನಡೆದಿರುವ ಜನಪ್ರಿಯ ಚಳುವಳಿಗಳ ಗುರಿಯಾಗಿದೆ! ಅದಲ್ಲದೇ, ಲೆನಿನ್ ನ ಪ್ರತಿಮೆಗಳನ್ನು ಧರೆ ಗುರುಳಿಸುವುದರ ಮೂಲಕ, ತಮ್ಮ ಆಕ್ರೋಶವನ್ನೂ ವ್ಯಕ್ತಪಡಿಸಿದ್ದಾರೆ! ಅಷ್ಟಾದರೂ ಸಹ, ಭಾರತದಲ್ಲಿ ಮಾತ್ರ ಲೆನಿನ್ ನ ಜಪ ನಡೆಯುತ್ತಲೇ ಇದೆ!

ಅಚ್ಚರಿ ಏನು ಗೊತ್ತಾ!? ಎಲ್ಲಿ, ಲೆನಿನ್ ನ ಆರಾಧನೆ ನಡೆಯಬೇಕಿತ್ತೋ, ಯಾವ ರಾಷ್ಟ್ರದಲ್ಲಿ ಲೆನಿನ್ ಅನ್ನು ಒಪ್ಪಿ ನಡೆಯಬೇಕಿತ್ತೋ, ಅಂತಹ ಸೋವಿಯತ್ ಯೂನಿಯನ್ ರಾಷ್ಟ್ರವೇ ಲೆನಿನ್ ಪ್ರತಿಮೆಯನ್ನು ಕಿತ್ತೊಗೆದಿದೆ! ಸೋವಿಯತ್ ಪರಂಪರೆಯಿಂದ ಸ್ವತಃ ಲೆನಿನ್ ನ ಸಿದ್ದಾಂತಗಳನ್ನು ತೆಗೆದು ಹಾಕಲೇಬೇಕೇಂದು ನಿರ್ಧರಿಸಿದ ಪ್ರಜೆಗಳ ಇಚ್ಛೆಗನುಗುಣವಾಗಿಯೇ, ಲೆನಿನ್ ನ ಪ್ರತಿಮೆಗಳ ಜೊತೆ, ಸಿದ್ದಾಂತವೂ ಕೆಳಗುರುಳಿದೆ! ಅದರಲ್ಲೂ, ಸೋವಿಯತ್ ಯುನಿಯನ್ ನ ಹೆಚ್ಚಿನ ಜನಸಂಖ್ಯೆ ಹೊಂದಿರುವ ಎರಡನೇ ರಾಷ್ಟ್ರವಾದ ಉಕ್ರೇನಿನಲ್ಲೂ ಸಹ ಲೆನಿನ್ ನ ಸಿದ್ದಾಂತಗಳು ಉಕ್ರೇನಿಗರಿಗೆ ರುಚಿಸಲೇ ಇಲ್ಲ! ಲೆನಿನ್ ನ ಪ್ರತಿಮೆಗಳನ್ನು ರಾಷ್ಟ್ರಾದ್ಯಂತ ಉರುಳಿಸುವ ಮೂಲಕ, ಲೆನಿನ್ ಸಿದ್ದಾಂತಗಳ ಮೇಲೆ ಆಕ್ರೋಶವನ್ನು ವ್ಯಕ್ತಪಡಿಸಿದ್ದ ಉಕ್ರೇನಿಗರು ಸರಕಾರದ ವಿರುದ್ದ ಸಿಡಿದೇಳುವಾಗಲೂ ಸಹ, ಕಂಡದ್ದು ಲೆನಿನ್ ಸಿದ್ದಾಂತವನ್ನು ಪ್ರತಿಪಾದಿಸುವಂತಹ ಆಡಳಿತ ವ್ಯವಸ್ಥೆಯನ್ನೇ!

Protesters hammer a Lenin statue in Kiev as the Ukrainian flag is seen in the backdrop.

ಅದರಲ್ಲೂ, ಉಕ್ರೇನಿಗರು ಲೆನಿನ್ ಅನ್ನು ತೀವ್ರವೆನ್ನುವಷ್ಟು ದ್ವೇಷಿಸುವುದಕ್ಕೂ ಕಾರಣವಿದೆ!! ಲೆನಿನ್ ನೇತೃತ್ವದಿಂದ ಸೋವಿಯತ್ ರಾಜ್ಯಗಳು
ಮಾಡಿಕೊಂಡ ಒಪ್ಪಂದವೊಂದಿದೆಯಲ್ಲವಾ?! ೧೯೧೮ – ೧೯೨೩ ರವರೆಗಿನ ಭೀಕರ ಕ್ಷಾಮದಲ್ಲಿ ಆರರಿಂದ ಎಂಟು ದಶಲಕ್ಷ ಜನರು ಮೃತಪಟ್ಟರು! ಪರಿಸ್ಥಿತಿ ಭೀಕರವಾಗಿದ್ದಾಗಲೂ ಸಹ ಲೆನಿನ್ ತನ್ನ ನೇತೃತ್ವದಲ್ಲಿ ನಡೆದಂತಹ ನೀತಿಗಳಿಂದಾಗಿ, ಜನರು ಬದುಕುವುದಕ್ಕೂ ಪರದಾಡುತ್ತಿದ್ದಾರೆ ಎಂದರಿವಾದಾಗಲೂ ಸಹ, ಒಂದಷ್ಟಕ್ಕೆ ಒಂದಷ್ಟು ತ್ಯಾಗಗಳಿರಬೇಕಾಗುತ್ತದೆ ಎಂದಿದ್ದನಷ್ಟೇ! ಪರಿಸ್ಥಿತಿಯ ಅರಿವೇ ಆಗದ ಬಂಡಾಯಶಾಹಿ ಲೆನಿನ್ ನ ನಡೆಯ ಪ್ರತಿಫಲದಿಂದ, ೯,೦೦,೦೦೦ ಜನರು ಆಹಾರವಿಲ್ಲದೇ ಇರಬೇಕಾಯಿತು! ಆದರೆ, ಸರಕಾರದಿಂದ ಕೊಡುತ್ತಿದ್ದದ್ದು ಕೇವಲ ೧೦೦೦೦ ಜನಕ್ಕಾಗುವಷ್ಟು ರೇಷನ್ನುಗಳನ್ನು ಮಾತ್ರವೇ!! ಅದರಲ್ಲಿಯೂ, ಲೆನಿನ್ ಮ ನೀತಿಯೊಂದು ಮುoದಿನ ಪೀಳಿಗೆಯನ್ನೇ ಅರ್ಧ ನಾಶ ಮಾಡಿತ್ತು! ಭೀಕರ ಕ್ಷಾಮವಿದ್ದರೂ, ಸಹ ನೀತಿ ಬದಲಿಸದ ಬಂಡವಾಳಶಾಹಿಯೊಬ್ಬ, ತಾನು ಲೆನಿನಿಸಮ್ ಪ್ರತಿಪಾದಕನೆಂದು ಹೆಮ್ಮೆ ಪಡುತ್ತಲೇ ಹೋದ ಪರಿಣಾಮ, ಅದೆಷ್ಟೋ ದಶಲಕ್ಷ ಮಕ್ಕಳು ಸತ್ತು ಹೋಗಿದ್ದರು! ಆಹಾರವಿಲ್ಲದೇ!

At the time of independence, in 1991, Ukraine had 5,500 monuments dedicated to Lenin across he country, but by 2017, after the latest government sponsored De-communisation drive, only a few hundred remain.

ಸಹಜವೇ ಬಿಡಿ!! ಸೋವಿಯತ್ ಯೂನಿಯನ್ನಿನ ಲೆನಿನಿಸಮ್ ನ ಭ್ರಮೆಯೊಂದಕ್ಕೆ ಬಲಿಯಾದದ್ದು ಉಕ್ರೇನಿಗರು ಮಾತ್ರವೇ! ಇವತ್ತಿಗೂ, ಉಕ್ರೇನಿನ ಸರಕಾರ ಲೆನಿನ್ ಸಮಕಾಲೀನ ವರ್ಷದಲ್ಲಿ ನಡೆದ ಸೋವಿಯತ್ ಯೂನಿಯನ್ ನೀತಿಯಿಂದ ಉಂಟಾದ ದುರಂತವನ್ನು ನೆನಪಿಸಿಕೊಳ್ಳುತ್ತದೆ! ಅದರಲ್ಲೂ ಸಹ, ತನ್ನ ರಾಷ್ಟ್ರದಾದ್ಯಂತವಿದ್ದ ಲೆನಿನ್ ನ ಪ್ರತಿಮೆಗಳನ್ನು ಉರುಳಿಸಿರುವ ಉಕ್ರೇನ್ ಸರಕಾರ ಕಳೆದ ವರ್ಷದ ಪ್ರಾರಂಭದಲ್ಲಿ ಬೃಹತ್ತಾ ಲೆನಿನ್ ಪ್ರತಿಮೆಯೊಂದನ್ನು ಉರುಳಿಸಿತ್ತು! ಅದನ್ನು ಬಿಡಿ!! ಉಕ್ರೇನಿಗೆ ೧೯೯೧ ರಲ್ಲಿ ಸ್ವಾತಂತ್ರ್ಯ ಸಿಕ್ಕಾಗ, ಲೆನಿನ್ ಗಂತಲೇ ಮೀಸಲಾಗಿದ್ದ ೫,೫೦೦ ಸ್ಮಾರಕಗಳಿದ್ದದ್ದನ್ನು ಕೊನೆಗೆ ಸ್ವತಃ ಸರಕಾರವೇ ಮುಂದಡಿಯಿಟ್ಟು, ಕರೆ ಕೊಟ್ಟಿತ್ತು!! ಲೆನಿನ್ ನ ಪ್ರತಿಮೆಗಳನ್ನು ಉರುಳಿಸಲು ಸಜ್ಜಾಗಿದ್ದ ಉಕ್ರೇನಿನ ಸರಕಾರದ ನಿರ್ಧಾರದ ಪ್ರತಿಫಲದಿಂದ ಈಗ ದೇಶದಾದ್ಯಂತ ಉಳಿದಿರುವ ಲೆನಿನ್ ನ ಸ್ಮಾರಕಗಳು ನೂರಕ್ಕಿಂತಲೂ ಕಡಿಮೆಯಷ್ಟೇ!

Mongolia, which wasn’t a part of the Soviet Union, too wants a break from its communist association. The capital Ulan Bator, saw a Lenin statue being dismantled with popular support after the mayor ruled it as a symbol of Soviet oppression.

The Lenin Statue in Ulan Bator lies dismantled as people surround it and take pictures

ಮಂಗೋಲಿಯಾಗೂ ತಟ್ಟಿತ್ತು ಇದರ ಬಿಸಿ!! ಸೋವಿಯತ್ ರಾಜ್ಯಗಳ ಭಾಗವಾಗದಿದ್ದರೂ ಸಹ, ಕಮ್ಯುನಿಸ್ಟರ ಆಡಳಿತಕ್ಕೆ ಬೇಸತ್ತಿದ್ದ ಮಂಗೋಲಿಯನ್ನರೂ ಸಹ ಈ ಕಮ್ಯುನಿಸ್ಟ್ ಆಡಳಿತವನ್ನು ಹೇಗಾದರೂ ನಾಶಗೊಳಿಸಲೇಬೇಕೆಂದು ಪಣತೊಟ್ಟಿದ್ದರೇನೋ! ಪರಿಣಾಮವಾಗಿ, ಮಂಗೋಲಿಯನ್ನರೂ ಸಹ ಲೆನಿನ್ ಪ್ರತಿಮೆಗಳನ್ನು ವಿರೋಧಿಸಿದರು! ರಾಜಧಾನಿ ಉಲಾನ್ ಬಟೋರ್ ನಲ್ಲಿ ಅಲ್ಲಿನ ಮೇಯರ್ ನ ಬೆಂಬಲದಿಂದ, ಪ್ರಜೆಗಳೂ ಸಹ ಒಟ್ಟುಗೂಡಿದರು! ರಾಜಧಾನಿಯಲ್ಲಿದ್ದ ಪ್ರತೀ ಲೆನಿನ್ ಪ್ರತಿಮೆಗಳೂ ಸಹ ಧರೆಗುರುಳಿದವು!! ಮಂಗೋಲಿಯಾದ ವರದಿಗಾರನೊಬ್ಬನ ಪ್ರಕಾರ, ಲೆನಿನ್ ಪ್ರತಿಮೆ ಕೆಡವುತ್ತಲೇ ಅಲ್ಲಿನ ಜನರ ಕಣ್ಣಲ್ಲಿ ದೌರ್ಜನ್ಯಕ್ಕೊಳಗಾಗಿದ್ದರ ಆಕ್ರೋಶವಿತ್ತು! ಪ್ರತಿಮೆ ಕೆಡವುದಕ್ಕೂ ಮುಂಚೆ, ಅವರ ಕಣ್ಣುಗಳಲ್ಲಿ ಆಯಾಸವೊಂದು ಕಾಣುತ್ತಿತ್ತು! ಮಂಗೋಲಿಯಾದ ಜನರಿಗೆ ಕಮ್ಯುನಿಸ್ಟರ ಆಡಳಿತದಿಂದ ಮುಕ್ತಿ ಬೇಕಿತ್ತಲ್ಲದೇ, ಸೋವಿಯತ್ ರಾಜ್ಯಗಳು ನಡೆಸಿದ್ದರ ದೌರ್ಜನ್ಯವನ್ನು ಲೆನಿನ್ ಪ್ರತಿಮೆಗಳನ್ನು ನಾಶಗೊಳಿಸುವುದರ ಮೂಲಕ ವಿರೋಧಿಸಿದ್ದರಷ್ಟೇ!!

The Lenin statue that used to dominate the Romanian capital earlier.

ರೋಮೇನಿಯಾವೂ ಸಾಕ್ಷಿಯಾಗಿತ್ತು ಇದಕ್ಕೆ! ಸತತ ನಲವತ್ತು ವರ್ಷಗಳ ಕಾಲ ಕಮ್ಯುನಿಸ್ಟರಿಂದ ಆಳಿಸಿಕೊಂಡಿದ್ದಂತಹ ರಾಷ್ಟ್ರವದು!! ಸುಲಭವೇ ಅಲ್ಲ! ತಮ್ಮದೇ ಜನರ ಮೇಲಾದ ದೌರ್ಜನ್ಯ! ವಿಫಲ ಆಡಳಿತ! ಅಧಿಕಾರ ದರ್ಪ! ಬಂಡಾಯಶಾಹಿಗಳ ಮಿತಿಮೀರಿದ ನೀತಿ ವೈಫಲ್ಯಗಳು! ಇವಿಷ್ಟೂ
ರೊಮೆನಿಯನ್ನರಲ್ಲಿ, ನಲವತ್ತು ವರ್ಷಗಳ ಕಾಲ ಕುದಿಯುತ್ತಲೇ ಇತ್ತು! ಕೊನೆಗೂ, ೧೯೫೮ ರಲ್ಲಿ ಕೊನೆಗೂ ಹೊರಬಂದ ರೋಮೆನಿಯಾ, ರಾಜಧಾನಿಯ ಪ್ಲಾಜಾದಲ್ಲಿದ್ದ ಬೃಹತ್ ಲೆನಿನ್ ಪ್ರತಿಮೆಯನ್ನು ಕೆಡವುದರ ಮೂಲಕ, ತನ್ನ ವಿಮೋಚನಾ ದಿನವನ್ನು ಆಚರಿಸಿಕೊಂಡಿತು!! ಇವತ್ತಿಗೂ ಸಹ, ಕೆಡವಲಾಗಿರುವ ಲೆನಿನ್ ನ ಪ್ರತಿಮೆ ಹಾಗೆಯೇ ಇದೆ! ಅದು ನಲವತ್ತು ವರ್ಷಗಳ ನಂತರ ಸಿಕ್ಕ ಗೆಲುವು ಎಂಬುದಾಗಿಯೇ ಭಾವಿಸುವ ರೋಮೆನಿಯನ್ನರ ದ್ವೇಷದಿಂದ ಲೆನಿನ್ ನ ತುಂಡಾದ ಪ್ರತಿಮೆ ಪರಿತ್ಯಕ್ತ ಸ್ಥಿತಿಯಲ್ಲಿ ಅಲ್ಲಿಯೇ ಬಿದ್ದಿದೆ!

Romania too, emerging from 40 years of communist rule, celebrated its liberation by toppling a huge Lenin statue that dominated the capital’s plaza. The statue was removed amidst loud cheers from the people and now lies in a derelict condition, relegated from the position of prestige it held earlier.

Several African nations too, which have had to suffer communism in the past, directly or through Soviet influence, have moved to cut off all links with ideology, with the most prominent expressions being toppling communist monuments – usually Lenin’s statues.

ದಕ್ಷಿಣ ಆಫ್ರಿಕಾದ ರಾಷ್ಟ್ರಗಳೂ ಕೂಡಾ ಕಮ್ಯುನಿಸ್ಟ್ ಸಿದ್ದಾಂತದಿಂದ ಪಾರಾಗಲು ಹವಣಿಸಿದ್ದವು! ಕೇವಲ, ಸಿದ್ದಾಂತ ಮಾತ್ರವಲ್ಲ! ಆಫ್ರಿಕನ್ನರ ಬದುಕನ್ನೂ ನರಕವನ್ನಾಗಿಸಿದ್ದ ಕಮ್ಯುನಿಸ್ಟರ ಆಡಳಿತ, ಅಲ್ಲಿನ ಕಾಡು ಜನರನ್ನು ಎಂದಿಗೂ ಸಹ ಸಮಾಜಕ್ಕೆ ಬರಲು ಅವಕಾಶ ಮಾಡಿಕೊಡಲೇ ಇಲ್ಲ! ಎಲ್ಲರಿಗೂ ಸಮಾನತೆ ಎಂಬ ಮಂತ್ರವನ್ನು ಕೇವಲ ಕೃತಿಗಳಲ್ಲಷ್ಟೇ ತೋರಿಸಿದ ಕಮ್ಯುನಿಸ್ಟ್ ಸಿದ್ದಾಂತವೊಂದು, ಆಫ್ರಿಕನ್ನರ ಆಚಾರ ವಿಚಾರಗಳಲ್ಲಿಯೂ
ತಲೆದೋರಿದಾಗ, ಆಫ್ರಿಕನ್ನರು ತಿರುಗಿಬಿದ್ದರು!! ಬಂಡಾಯಶಾಹಿಗಳ ವಿರುದ್ಧ ವೇ ತಿರುಗಿ ಬಿದ್ದ ಆಫ್ರಿಕನ್ನರು ದಕ್ಷಿಣ ಆಫ್ರಿಕಾದಲ್ಲಿದ್ದಂತಹ ಪ್ರತೀ ಪ್ರತಿಮೆಗಳನ್ನು ಉರುಳಿಸ ತೊಡಗಿತು! ಇವತ್ತೂ ಸಹ, ದಕ್ಷಿಣ ಆಫ್ರಿಕಾದಲ್ಲಿ ಕಮ್ಯುನಿಸ್ಟ್ ಸಿದ್ದಾಂತಗಳಿಗೆ ಜಾಗವೇ ಇಲ್ಲ! ಉದ್ಧಾರ ಮಾಡುತ್ತೇವೆಂದು ಹೋಗಿದ್ದ ಪ್ರತಿ ಕಮ್ಯುನಿಸ್ಟರನ್ನು ಹೊರಗಟ್ಟಿದ್ದರು ದಕ್ಷಿಣ ಆಫ್ರಿಕನ್ನರು! ಇಥಿಯೋಪಿಯಾದಲ್ಲಿ ನಿರ್ಮಾಣ ಮಾಡಲಾಗಿದ್ದ ಬೃಹತ್ ಲೆನಿನ್ ನ ಪ್ರತಿಮೆಯೊಂದನ್ನು ಕೆಡವಲಾಗಿತ್ತು! ಅದೆಷ್ಟೋ ವರ್ಷಗಳ ಕಾಲ, ಸೋವಿಯತ್ ಯೂನಿಯನ್ ಗಳ ಮೇಲಿನ ದ್ವೇಷದ ಪರಿಣಾಮ, ಲೆನಿನ್ ನ ಪ್ರತಿಮೆಯೊಂದು ರೋಮೇನಿಯಾದ ಪ್ರತಿಮೆಗಳ ಹಾಗೆ ಪರಿತ್ಯಕ್ತ ಸ್ಥಿತಿಯಲ್ಲಿ ಅಲ್ಲಿಯೇ ಬಿಡಲಾಗಿತ್ತು ಅಷ್ಟೇ!!

A boy stands beside a toppled Lenin statue in Ethiopia in 1991.

ಅಚ್ಚರಿಯೆಂದರೆ, ಸೋವಿಯತ್ ಯೂನಿಯನ್ನಿನ ಒಕ್ಕೂಟದ ಉತ್ತರಾಧಿಕಾರಿಯಾದ ರಷ್ಯಾದಲ್ಲಿ, ಅದರ ಕಮ್ಯುನಿಸ್ಟ್ ಇತಿಹಾಸದ ಬಗ್ಗೆ
ಹೆಮ್ಮೆಯಿಂದ ಇದ್ದರೂ ಸಹ, ಇತ್ತೀಚೆಗೆ ಯಾವುದೇ ಹೊಸದಾದ ಲೆನಿನ್ ನ ಪ್ರತಿಮೆಗಳ ನಿರ್ಮಾಣ ಕಾಣುವುದಿಲ್ಲ! ಅದೇ ರೀತಿ, ಕಮ್ಯುನಿಸ್ಟ್ ಇತಿಹಾಸದಲ್ಲಿ ಸೃಷ್ಟಿಸಲಾಗಿರುವ ಹಾಗೆ, ಯಾವುದೇ ರಕ್ತಪಾತವೂ ಕಾಣುವುದಿಲ್ಲವಷ್ಟೇ!! ಆದರೆ, ರಶ್ಯಾವೂ ಸಹ ತನ್ನ ಕಮ್ಯುನಿಸ್ಟ್ ಸಿದ್ಧಾಂತವಾದಿಗಳಿಂದ ಹಲವಾರು ಕಷ್ಟಗಳನ್ನು ಅನುಭವಿಸಿದೆ! ಪರಿಣಾಮ, ರಶ್ಯಾದಲ್ಲಿ ಕೇವಲ ಒಂದಷ್ಟು ಶೇಕಡಾವಾರು ಪ್ರಜೆಗಳಷ್ಟೇ, ಕಮ್ಯುನಿಸಮ್ ಸಿದ್ದಾಂತವನ್ನು ಒಪ್ಪಿಕೊಂಡಿರುವುದು ಹೊರತು, ಬಹುತೇಕರಲ್ಲ! ಅಲ್ಲಿಯೂ ಸಹ, ಕಮ್ಯುನಿಸ್ಟ್ ಸಿದ್ದಾಂತಗಳಲ್ಲಿ ನಡೆಯುವ ಯಾವುದೇ ರೀತಿಯಾದಂತಹ ಆಡಳಿತವೇ ಬೇಡವೆಂದು ಸೇಂಟ್ ಪೀಟರ್ಸ್ ಬರ್ಗ್ ರೈಲ್ವೇ ಸ್ಟೇಷನ್ನಿನಲ್ಲಿದ್ದ ಲೆನಿನ್ ನ ಸ್ಮಾರಕಕ್ಕೆ ಬಾಂಬಿಟ್ಟು ಸಿಡಿಸಲಾಗಿತ್ತು!

A Lenin statue at the St. Petersburg railway station that was bombed.

ಇವತ್ತಿಗೂ ಸಹ, ರಶ್ಯನ್ನರು ತಮ್ಮ ಗತಕಾಲದಲ್ಲಿದ್ದ ಕಮ್ಯುನಿಸ್ಟ್ ಆಡಳಿತದಲ್ಲಿದ್ದಂತಹ ವೈಭವವನ್ನು ಮತ್ತೆ ತರಲು ಪ್ರಯತ್ನ ಮಾಡುತ್ತಲೇ ಸಾರ್ವಜನಿಕರು ವಿರೋಧಿಸಲು ಪ್ರಾರಂಭಿಸಿದರು!! ಜೊತೆ ಜೊತೆಗೇ, ಲೆನಿನ್ನಿನ ಪ್ರತಿಮೆಗಳನ್ನು ಉರುಳಿಸಿ ಎಂಬ ಕೂಗೂ ಕೇಳಿಸತೊಡಗಿತು!! ಆದರೆ, ಏನೇ ಆಗಿರಲಿ!! ಸ್ವತಃ ರಶ್ಯಾದಲ್ಲಿ ಲೆನಿನ್ನಿನ ಪ್ರತಿಮೆಗಳು ತಿರಸ್ಕಾರಕ್ಕೊಳಗಾದವು!! ಪ್ರತೀ ಬಾರಿಯೂ ಕೂಡ, ಲೆನಿನ್ನಿನ ಪ್ರತಿಮೆಗಳುನ್ನು ಯಾರೂ ಮೂಸಿಯೂ ನೋಡದಿದ್ದ ಪರಿಣಾಮ ರಶ್ಯಾದಲ್ಲಿಯೂ ಸಹ, ಲೆನ್ನಿನಿನ ಸಿದ್ಧಾಂತಗಳು ಗತಕಾಲಕ್ಕಷ್ಟೇ ಸೀಮಿತವಾಗಿ ಉಳಿದವಷ್ಟೇ! ಅಷ್ಟಾದರೂ ಸಹ ಭಾರತೀಯರಿಗೆ ಲೆನಿನ್ ಬೇಕು!! ಇದು ಹಾಸ್ಯಾಸ್ಪದ!! ಯಾಕೆಂದರೆ, ಪಾಶ್ಚಿಮಾತ್ಯ ರಾಷ್ಟ್ರಗಳೊಂದರಲ್ಲಿ ನೋಡಿದರೆ, ಲೆನಿನ್ನಿನ
ಸಿದ್ಧಾಂತವೊಂದನ್ನಾಗಲಿ, ಅಥವಾ ಯಾವುದೇ ಕಮ್ಯುನಿಸ್ಟ್ ಸಿದ್ಧಾಂತಗಳಾಗಲಿ, ಅವಿಷ್ಟನ್ನೂ ಸಹ, “ವಿಫಲ ಸಿದ್ಧಾಂತಗಳು” ಎಂದೇ ಬಿಂಬಿಸುವಾಗ, ನಮ್ಮ ಭಾರತದಲ್ಲಿ ಮಾತ್ರ, ಕಮ್ಯುನಿಸ್ಟರಿಗೆ ಮತ್ತದೇ ಲೆನಿನ್ ಬೇಕು! ಮತ್ತದೇ, ಪ್ರತಿಮೆಗಳು ಬೇಕು! ಸ್ವತಃ, ಸಮಾನತೆ, ಸಮಾಜವಾದ ಎಂದೆಲ್ಲ ಪ್ರತಿಪಾದಿಸುತ್ತಲೇ, ಸಮಾನತೆಯ ಅರ್ಥವನ್ನೇ ಕಸಿದಂತಹ ಕಮ್ಯುನಿಸ್ಟರ ಆಡಳಿತವನ್ನು ಪಾಶ್ಚಿಮಾತ್ಯ ರಾಷ್ಟ್ರಗಳೇ ಒಪ್ಪುವುದಿಲ್ಲವೆಂದಾಗ, ಸೋವಿಯತ್ ಒಕ್ಕೂಟದ ಸಾಮ್ರಾಜ್ಯದಲ್ಲಿಯೇ ಕಮ್ಯುನಿಸ್ಟ್ ಸಿದ್ಧಾಂತಗಳು ವಿಫಲವಾದಾಗ, ಸ್ವತಃ ಸೋವಿಯತ್ ರಾಜ್ಯಗಳ ಪ್ರಜೆಗಳೇ ಕಮ್ಯುನಿಸ್ಟರ ಸಿದ್ದಾಂತವನ್ನು ಒಪ್ಪಲಾರದೇ ಹೋದಾಗಲೂ ಸಹ, ಭಾರತದಲ್ಲಿ ಕಮ್ಯುನಿಸಮ್ ಅಥವಾ ಲೆನಿನಿಸಮ್ ಅಥವಾ ಇನ್ಯಾವುದೋ ಮಾರ್ಕ್ಸಿಸ್ಟ್ ಸಿದ್ಧಾಂತ್್ದ ಅವಶ್ಯಕತೆಯಾದರೂ ಏನಿರಬಹುದು ಹೇಳಿ?!

Lenin bust lies in disrepair. Sviyazhsk, Russia.

ಹಾಸ್ಯಾಸ್ಪದವೆಂದೆನ್ನಿಸುವುದು ಅದೇ!! ಭಾರತದ ಸಮಾಜದ ವ್ಯವಸ್ಥೆಗೆ ಇನ್ನೂ ಸಹ ಕಮ್ಯುನಿಸ್ಟರು ಪ್ರವೇಶಿಸುತ್ತಲೇ ಇರುವುದು ಮತ್ತು, ಬೇರೆ ಬೇರೆ ರಾಷ್ಟ್ರಗಳ ಆಡಳಿತದೊಳ ಪ್ರವೇಶಿಸಿದ ಇದೇ ಕಮ್ಯುನಿಸ್ಟ್ ಸಿದ್ಧಾಂತಗಳು ಮತ್ತದರ ಆಳಗಳು ಮಾತ್ರ ಇಡೀ ವ್ಯವಸ್ಥೆಯನ್ನೇ ಹಾಳುಗೆಡವಿದ್ದಾಗ ಭಾರತದಲ್ಲಿ ಲೆನಿನ್ ಸಿದ್ಧಾಂತಗಳು ಬೇಕೆಂಬುವವರಿಗೆ ಸರಿಯಾಗಿಯೇ ಉತ್ತರ ಕೊಟ್ಟಿದೆ ತ್ರಿಪುರಾ!! ಆಶ್ಚರ್ಯವೆಂದರೆ, ತ್ರಿಪುರಾದಲ್ಲಿ ನಡೆದ ಘಟನೆಗಳು ರಶ್ಯಾದಲ್ಲಿಯೂ ಪ್ರತಿಧ್ವನಿಸಿದ್ದು!! ಯಾಕೆ ಗೊತ್ತಾ?! ತ್ರಿಪುರಾದಲ್ಲಿ ಲೆನಿನ್ನಿನ ಪ್ರತಿಮೆಯೊಂದು ಉರುಳತೊಡಿದಂತೆ ಇತ್ತ ರಶ್ಯಾದಲ್ಲಿಯೂ ಲೆನಿನ್ನಿಮ ಪ್ರತಿಮೆಗಳನ್ನು ಉರುಳಿಸಬೇಕೆಂಬುದು ಕೇಳಿ ಬಂದಿರುವುದು!!

ಇಷ್ಟೆಲ್ಲ ನೋಡಿದ ಮೇಲೆ, ಒಂದಂತೂ ಸಹಜ! ತ್ರಿಪುರಾದಲ್ಲಿ ನಡೆದ ಘಟನೆಗಳು ಜಗತ್ತಿನಾದ್ಯಂತ ಇರುವ ಲೆನಿನ್ನುಗಳಿಗೆ ನಡುಕ ಹುಟ್ಟಿಸಿದೆ!
ಅದರಲ್ಲೂ, ಭಾರತದ ಲೆನಿನ್ನುಗಳಿಗೆ ಮಾತ್ರ ಬಿಸಿ ಸ್ವಲ್ಪ ಹೆಚ್ಚೇ ತಾಗಿದೆಯಷ್ಟೇ!!

Source :Swarajya – The Story where Lenin stood

– ಆಜೇಯ ಶರ್ಮಾ

Tags

Related Articles

Close