ಪ್ರಚಲಿತ

ರಾಷ್ಟ್ರದ ವಿಶ್ವಾಸ ಗೆದ್ದ ಪಕ್ಷ ಬಿಜೆಪಿ

ಅಭಿವೃದ್ಧಿ ಪರ ಆಡಳಿತದ ಮೂಲಕವೇ ಕೇಂದ್ರದ ಮೋದಿ ಸರ್ಕಾರ ದೇಶದ ಜನರ ಮನಸ್ಸನ್ನು ಗೆದ್ದಿದೆ. ಮಾತ್ರವಲ್ಲದೆ, ಈ ಹತ್ತು ವರ್ಷಗಳ ಅಭಿವೃದ್ಧಿಯ ಪರ್ವ ವನ್ನು ಗಮನಿಸಿ ಜನರು ಈ ಬಾರಿಯೂ ಪ್ರಧಾನಿ ಮೋದಿ ನೇತೃತ್ವದ ಬಿಜೆಪಿ ಅಭ್ಯರ್ಥಿಗಳಿಗೆ ಮತ ನೀಡಿ, ಜಯ ದೊರಕಿಸಿಕೊಟ್ಟಲ್ಲಿ, ಮೂರನೇ ಬಾರಿಯ ಸರ್ಕಾರ ರಚಿಸಿದ ಬಳಿಕ ದೇಶದಲ್ಲಿ ಇನ್ನಷ್ಟು ಅಭಿವೃದ್ಧಿಯ ಕಾರ್ಯಗಳನ್ನು ನಡೆಸುವುದಾಗಿಯೂ ಈಗಾಗಲೇ ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ ತಿಳಿಸಿದೆ.

ಕೇಂದ್ರದ ಬಿಜೆಪಿ ಸರ್ಕಾರದ ಸಾಧನೆಗಳ ಚಿತ್ರಣವನ್ನು ಕೇರಳದ ಜನತೆಯ ಮುಂದಿರಿಸಿದ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು, ದೇಶದ ಸರ್ವತೋಮುಖ ಅಭಿವೃದ್ಧಿಗೆ, ಸಮಗ್ರ ಪ್ರಗತಿಗೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಅತ್ಯುತ್ತಮ ಯೋಜನೆಗಳಿಗೆ ಜೀವ ತುಂಬಿದೆ. ಕೃಷಿ, ಕೈಗಾರಿಕೆ, ಶಿಕ್ಷಣ, ಉದ್ಯೋಗ, ಮಹಿಳೆಯರು, ಯುವ ಜನತೆ, ಬಡ ಜನರು ಹೀಗೆ ಎಲ್ಲಾ ವಿಚಾರಗಳನ್ನೂ ಗಮನದಲ್ಲಿರಿಸಿಕೊಂಡು, ಎಲ್ಲಾ ಕ್ಷೇತ್ರಗಳ ಸರ್ವತೋಮುಖ ಪ್ರಗತಿಗಾಗಿ ಒತ್ತು ನೀಡಿ ಶ್ರಮಿಸಿದೆ ಎಂದು ಅವರು ತಿಳಿಸಿದ್ದಾರೆ.

ದೇಶದ ರಕ್ಷಣಾ ವಿಚಾರಕ್ಕೆ ಸಂಬಂಧಿಸಿದ ಹಾಗೆಯೂ ಯಾವುದೇ ರಾಜಿ ಮಾಡಿಕೊಳ್ಳದ ಕೇಂದ್ರದ ಪ್ರಧಾನಿ ಮೋದಿ ಸರ್ಕಾರ, ಭದ್ರತಾ ಕ್ಷೇತ್ರಕ್ಕೂ ವಿಶೇಷ ಪ್ರಾಧಾನ್ಯತೆ ನೀಡಿದೆ. ದೇಶಕ್ಕೆ ಮಾರಕವಾದ ಎಲ್ಲಾ ರೀತಿಯ ಭಯೋತ್ಪಾದನಾ ಚಟುವಟಿಕೆಗಳನ್ನು ನಿಗ್ರಹ ಮಾಡುವಲ್ಲಿ ಹಲವಾರು ಪರಿಣಾಮಕಾರಿ ಕ್ರಮಗಳನ್ನು ಕೈಗೊಂಡ ಕೀರ್ತಿ ನಮ್ಮ ಸರ್ಕಾರದ್ದಾಗಿದೆ ಎಂದು ಅವರು ಹೇಳಿದ್ದಾರೆ.

ಕಣಿವೆ ರಾಜ್ಯ ಜಮ್ಮು ಕಾಶ್ಮೀರದಲ್ಲಿ ನಡೆಯುತ್ತಿದ್ದ ಉಗ್ರ ಅಟ್ಟಹಾಸವನ್ನು ನಮ್ಮ ಸರ್ಕಾರ ಮಟ್ಟ ಹಾಕಿದೆ. ಜೊತೆಗೆ ದೇಶದ ಶಾಂತಿಗೆ ಭಂಗ ತರುವ ಭಾರತ ವಿರೋಧಿಗಳಿಗೂ ತಕ್ಕ ಪ್ರತ್ಯುತ್ತರ ನೀಡಲಾಗುತ್ತಿದೆ. ಆ ಮೂಲಕ ದೇಶದ ಭದ್ರತೆ, ಸಮಗ್ರತೆ, ಅಖಂಡತೆಯ ವಿಷಯದಲ್ಲಿ ಯವುದೇ ರಾಜಿ ಮಾಡಿಕೊಳ್ಳದೆ ಭಾರತೀಯ ಜನತಾ ಪಕ್ಷ ಆಡಳಿತ ನಡೆಸುತ್ತಿದೆ. ಇದು ಎಲ್ಲರ ಅರಿವಿಗೂ ಬಂದಿದೆ ಎಂದು ಅವರು ತಿಳಿಸಿದ್ದಾರೆ. ಇದು ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಬದ್ಧತೆ ಎಂದು ಅವರು ತಿಳಿಸಿದ್ದಾರೆ.

ಕಮ್ಯುನಿಸ್ಟ್‌ರ ಕೈಯಲ್ಲಿರುವ ಕೇರಳದ ಮಣ್ಣಿನಲ್ಲಿ ಬಿಜೆಪಿ ಸಾಧನೆಗಳ ಪಟ್ಟಿಯನ್ನು ಜನರ ಮುಂದಿಟ್ಟರು ಸಚಿವರು, ಕೇರಳದ ಅಭಿವೃದ್ಧಿಗಾಗಿ ಭಾರತೀಯ ಜನತಾ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸುವಂತೆ ಮನವಿ ಮಾಡಿದ್ದಾರೆ. ಆ ಮೂಲಕ ಈ ಬಾರಿ ಕೇರಳಿಂದಲೂ ಎನ್‌ಡಿಎ‌ಯ ಸಂಸದರು ಪಾರ್ಲಿಮೆಂಟ್ ಪ್ರವೇಶಿಸುವಂತೆ ಮಾಡಲು ಅವರು ಜನರಲ್ಲಿ ಭಿನ್ನವಿಸಿಕೊಂಡರು.

ಬಿಜೆಪಿ ಪರ ಅಭ್ಯರ್ಥಿಯ ಗೆಲುವಿಗೆ ಕಾರ್ಯಕರ್ತರು ಮನೆ ಮನೆ ಪ್ರಚಾರ ಕಾರ್ಯವನ್ನು, ಅಭಿಯಾನವನ್ನು ವ್ಯವಸ್ಥಿತ ರೀತಿಯಲ್ಲಿ ಮಾಡಬೇಕು. ಬಿಜೆಪಿಯು ಜನರ ವಿಶ್ವಾಸ ಗೆದ್ದ ಪಕ್ಷ ವಾಗಿದ್ದು, ಈ ಬಾರಿಯೂ ಮೂರನೇ ಅವಧಿಗೆ ಅಧಿಕಾರ ಹಿಡಿಯುವುದು ಸ್ಪಷ್ಟ ಎಂದು ಅವರು ಭರವಸೆ ವ್ಯಕ್ತಪಡಿಸಿದ್ದಾರೆ.

Tags

Related Articles

Close