ಪ್ರಚಲಿತ

“ಕಿಂಗ್ ಆಫ್ ಗುಡ್ ಟೈಮ್ಸ್” ವಿಜಯ್ ಮಲ್ಯನಿಗೆ ಶುರುವಾಯಿತು ಬ್ಯಾಡ್ ಟೈಮ್ಸ್!! ಭಾರತದ ಬ್ಯಾಂಕುಗಳು ಕಾನೂನು ಕ್ರಮ ಜರುಗಿಸದಿರಬೇಕಾದರೆ ಹಣ ವಾಪಾಸು ಕೊಡಿ ಎಂದಿತು ಯುಕೆ ಹೈ ಕೋರ್ಟ್!!

ಯುಪಿಎ ಕಾಲದಲ್ಲಿ ತಿಂದು ಸೊಕ್ಕಿ ಮೆರೆದವರೆಲ್ಲ, ಮೋದಿ ಕಾಲದಲ್ಲಿ ತಿಂದದ್ದನ್ನು ಕಕ್ಕುವ ಕಾಲ ಬಂದಿದೆ!! ಮಲ್ಯ, ದಾವೂದ್, ಜಾಕೀರ್ ನಾಯಕ್, ಲಲಿತ್ ಮೋದಿ ಮತ್ತು ನೀರವ್ ಮೋದಿ ಅಂತಹ ಭಾರೀ ಕುಳಗಳು ಕಾಂಗ್ರೆಸ್ ನ ಕಾಲದಲ್ಲಿ ಬೇಕಾ ಬಿಟ್ಟಿ ಲೂಟಿ ಮಾಡಿ, ಮೋದಿ ಸರಕಾರ ಬಂದ ಕೂಡಲೆ ಕಂಬಿ ಕಿತ್ತು ವಿದೇಶಕ್ಕೆ ಓಡಿದ್ದಾರೆ. ಆದರೆ ಮೋದಿ ಅವರ ಕಬಂಧ ಬಾಹುಗಳು ಅವರನ್ನು ಅಲ್ಲಿಯೂ ಬೆನ್ನಟ್ಟಿ ಅಲ್ಲಿನ ಸರಕಾರಗಳು ಅವರ ಮೇಲೆ ಕಾನೂನು ಕ್ರಮ ಜರುಗಿಸುವಂತೆ ಮಾಡುವಲ್ಲಿ ಸಫಲರಾಗಿದ್ದಾರೆ.

ಜನಸತ್ತಾ ವರದಿಯ ಪ್ರಕಾರ, ಭಾರತದ 13 ಬ್ಯಾಂಕ್ ಗಳಿಗಾದ ನಷ್ಟವನ್ನು ಸರಿದೂಗಿಸಲು ಯುಕೆ ಹೈ ಕೋರ್ಟ್ ಮಲ್ಯನಿಗೆ ಆದೇಶ ನೀಡಿದೆ. ಭಾರತದ ಬ್ಯಾಂಕುಗಳು ನಿಮ್ಮ ವಿರುದ್ದ ಕಾನೂನು ಕ್ರಮ ಜರುಗಿಸದಿರಬೇಕಾದರೆ ಮೊದಲು ಬ್ಯಾಂಕುಗಳ ನಷ್ಟ ಸರಿದೂಗಿಸಿ ಎಂದು ಹೈ ಕೋರ್ಟ್ ಮಲ್ಯನಿಗೆ ಹೇಳಿದೆ ಎನ್ನಲಾಗಿದೆ. ಯೂಕೆ ಹೈ ಕೋರ್ಟ್ ಭಾರತದ ಬ್ಯಾಂಕುಗಳಿಗೆ ನೀಡಬೇಕಾದ 2 ಲಕ್ಷ ಪೌಂಡ್ ಅಂದರೆ ಸುಮಾರು 1.8 ಕೋಟಿ ರುಪಾಯಿಗಳನ್ನು ಬ್ಯಾಂಕ್ ಗಳಿಗೆ ಮರು ಪಾವತಿ ಮಾಡಲು ತಿಳಿಸಿದೆ.

ಮಲ್ಯನ ವಿರುದ್ದ ಭಾರತದ ನ್ಯಾಯಾಲಯದಲ್ಲಿ ಕೇಸು ದಾಖಲಾಗಿದೆ ಮತ್ತು ಭಾರತದ ಬ್ಯಾಂಕುಗಳಿಗೆ ಮಲ್ಯ 1.145 ಶತಕೋಟಿ ಪೌಂಡ್ ಗಳಷ್ಟು ಬಾಕಿ ಪಾವತಿ ಮಾಡಬೇಕೆಂದು ಆದೇಶ ನೀಡಿದೆ. ಈ ಆದೇಶವನ್ನು ಕಳೆದ ಮೇ ತಿಂಗಳಿನಲ್ಲಿ ಯೂಕೆ ನ್ಯಾಯಾಧೀಶ ಆಂಡ್ರ್ಯೂ ಹೆನ್ಶಾ ಅವರೂ ಎತ್ತಿ ಹಿಡಿದಿದ್ದರು. ಇದರ ಜೊತೆಗೆ ಭಾರತವು ಮಲ್ಯನನ್ನು ಹಸ್ತಾಂತರಿಸುವಂತೆ ಯೂಕೆ ಅನ್ನು ಕೇಳಿ ಕೊಂಡಿದೆ. ಈ ವಿಚಾರವೂ ಯೂಕೆ ಕೋರ್ಟಿನಲ್ಲಿದೆ.

ಈಗ ಯೂಕೆ ಕೋರ್ಟ್, ಭಾರತದ ಬ್ಯಾಂಕ್ ಗಳ ಪರವಾಗಿ ತೀರ್ಪು ನೀಡಿರುವುದು ಮಲ್ಯನಿಗೆ ಬ್ಯಾಡ್ ಟೈಮ್ಸ್ ಶುರುವಾಗುತ್ತಿರುವ ಲಕ್ಷಣ ಎಂದರೆ ತಪ್ಪಾಗಲಾರದು. ಕಳ್ಳ-ಕಾಕರನ್ನು ಸಾಕಲು ಇದು ಹಿಂದಿನ ‘ಅಮ್ಮಿ ಜಾನ್’ ಸರಕಾರವಲ್ಲ, ಇದು ಮೋದಿ ಸರಕಾರ. ದೇಶದ ಹಣವನ್ನು ಕೊಳ್ಳೆ ಹೊಡೆದವರು ಆರಾಮಾಗಿರಲು ಅಷ್ಟು ಸುಲಭವಾಗಿ ಮೋದಿ ಬಿಡುವುದಿಲ್ಲ. ಪಾತಾಳದಲ್ಲಿ ಅಡಗಿದ್ದರೂ ಮೋದಿ ಹುಡುಕಿ ತೆಗೆಯುತ್ತಾರೆ. ಮಲ್ಯ, ಜಾಕೀರ್,ದಾವೂದ್, ಲಲಿತ್ ನಂತವರನ್ನು ಗಡಿ ಪಾರು ಮಾಡುವಂತೆ ಭಾರತ ಈಗಾಗಲೇ ಪ್ರಕ್ರಿಯೆಗಳನ್ನು ನಡೆಸುತ್ತಿದೆ. ಶೀಘ್ರದಲ್ಲೆ ಇವೆರೆಲ್ಲರ ಜುಟ್ಟು ಮೋದಿ ಸರಕಾರದ ಕೈಗೆ ಬರಲಿದೆ ಎಂದರೆ ತಪ್ಪಾಗಲಾರದು.

-ಶಾರ್ವರಿ

Tags

Related Articles

Close