ಪ್ರಚಲಿತ

ಅಂದು ಜಾರ್ಖಂಡಿನಲ್ಲಿ ಬಿಜೆಪಿ ಸರ್ಕಾರ ರಚಿಸುವುದನ್ನು ತಡೆಯಲು ಬಿಜೆಪಿ ಶಾಸಕರಿದ್ದ ವಿಮಾನ ಚಾಲಕನ ಮೇಲೆ ದಾಳಿ ನಡೆಸಲು ತನ್ನ ಉಪ ಮುಖ್ಯಮಂತ್ರಿಯನ್ನೆ ಕಳುಹಿಸಿತ್ತು ಯೂಪಿಎ ಸರಕಾರ!!

ಅಧಿಕಾರದ ಲಾಲಸೆ ಕಾಂಗ್ರೆಸಿನ ರಾಜಮಾತೆಯನ್ನು ಎಂಥಹ ಕಚಡಾ ಕೆಲಸ ಮಾಡಲೂ ಪ್ರೇರಿಪಿಸುತ್ತದೆ ಎನ್ನುವುದು ಮತ್ತೆ ಮತ್ತೆ ಸಾಬೀತಾಗುತ್ತಿದೆ. ತನ್ನ “ಕೊನೆ ಉಸಿರುವವರೆಗೂ ಭಾರತವನ್ನು ಕೊಳ್ಳೆ ಹೊಡೆಯುತ್ತೇನೆ ಮತ್ತು ಹಿಂದೂಗಳನ್ನು ನಿರ್ನಾಮ ಮಾಡುತ್ತೇನೆ” ಎಂದು ‘ವೆಟಿಕನಿನಲ್ಲಿ’ ಶಪಥಗೈದು ಬಂದಿರುವ ಮೇಡಮ್ ಜಿ ಯಾವುದೆ ರಾಜ್ಯದಲ್ಲಾಗಲಿ ಅಥವಾ ದೇಶದಲ್ಲಾಗಲಿ ಒಬ್ಬ ದೇಶಪ್ರೇಮಿ, ಅಪ್ಪಟ ಹಿಂದೂ ಪ್ರಧಾನಮಂತ್ರಿ ಅಥವಾ ಮುಖ್ಯ ಮಂತ್ರಿಯನ್ನು ಅಧಿಕಾರ ನಡೆಸಲು ಬಿಡುವುದಿಲ್ಲ. ಇವತ್ತು ಮಾತು ಮಾತಿಗೂ ಮೋದಿ-ಬಿಜೆಪಿ-ಆರ್.ಎಸ್.ಎಸ್ ನವರು ಸಂವಿಧಾನದ ಕಗ್ಗೊಲೆ ನಡೆಸುತ್ತಿದ್ದಾರೆ ಎಂದು ಗಂಟಲು ಹರಿದು ಕಿರುಚಾಡುವ ಇಟಲಿ ಗುಲಾಮರು ಆವತ್ತು ತಮ್ಮ ಯೂಪಿಎ ಆಡಳಿತದಲ್ಲಿ ಸಂವಿಧಾನವನ್ನು ಕೊಲೆ ಮಾಡಿದ್ದಲ್ಲದೆ ಅದನ್ನು ಆಳವಾದ ಗುಂಡಿ ತೋಡಿ ಹೂತಿಟ್ಟದ್ದನ್ನು ಮರೆತೆ ಬಿಟ್ಟಿದ್ದಾರೆ!!

2005ರಲ್ಲಿ ಕೇಂದ್ರದಲ್ಲಿ ಯೂಪಿಎ ಆಡಳಿತವಿತ್ತು. ಜಾರ್ಖಂಡ್ ವಿಧಾನಸಭೆಗೆ ಚುನಾವಣೆ ನಡೆದು ಬಿಜೆಪಿ ಅತಿ ದೊಡ್ಡ ಪಕ್ಷವಾಗಿ ಹೊರ ಹೊಮ್ಮಿದ್ದರೂ ಸರಕಾರ ರಚಿಸಲು 5 ಸೀಟುಗಳು ಕಡಿಮೆ ಇದ್ದವು. ಸಂವಿಧಾನಿಕವಾಗಿ ಅಧಿಕಾರ ರಚಿಸುವ ಮೊದಲ ಹಕ್ಕು ಬಿಜೆಪಿಗೇ ದೊರೆಯುತ್ತಿತ್ತು. 81 ಸೀಟುಗಳ ಜಾರ್ಖಂಡ್ ವಿಧಾನಸಭೆಯಲ್ಲಿ ಬಿಜೆಪಿಗೆ ಅತ್ಯಾಧಿಕ 30 ಸೀಟುಗಳು ದೊರೆತಿದ್ದವು. ಸರಕಾರ ರಚಿಸಲು 41 ಸೀಟುಗಳ ಬಹುಮತ ಬೇಕಾದ್ದರಿಂದ ಜೆಡಿಯು ಜೊತೆ ಸೇರಿ ಎನ್.ಡಿ.ಎ ಪಕ್ಷ ಸ್ಥಾಪಿಸಿ ಜೆಡಿಯುನ 6 ಸೀಟುಗಳನ್ನು ತೆಕ್ಕೆಗೆ ತೆಗೆದುಕೊಂಡಿತು ಬಿಜೆಪಿ. ಬಹುಮತಕ್ಕೆ ಇನ್ನೂ 5 ಸೀಟುಗಳು ಬೇಕಾಗಿದ್ದರಿಂದ ಎ.ಜೆ.ಎಸ್.ಯುನ ಎರಡು ಮತ್ತು ಮೂರು ಪಕ್ಷೇತರರು ಸ್ವ ಪ್ರೇರಣೆಯಿಂದ ಎನ್.ಡಿ.ಎಯಲ್ಲಿ ವಿಲಯಗೊಳ್ಳಲು ಒಪ್ಪಿಗೆ ನೀಡುತ್ತಾರೆ.

ಜಾರ್ಖಂಡ್ ವಿಧಾನ ಸಭೆಯಲ್ಲಿ ಕಾಂಗ್ರೆಸಿಗೆ ಎಷ್ಟು ಸೀಟ್ ಸಿಕ್ಕಿತ್ತು ಗೊತ್ತೆ?

ಚುನಾವಣೆಯಲ್ಲಿ ಕಾಂಗ್ರೆಸ್ ಮುಸುಡಿಗೆ ಸಿಕ್ಕಿದ್ದು ಬರಿ 9 ಸೀಟುಗಳು!! ಆದರೂ ಸರಕಾರ ರಚಿಸಲೇ ಬೇಕೆಂಬ ಹಠಕ್ಕೆ ಬಿದ್ದ ಮೇಡಮ್ ಜಿ ಅಕ್ಷರಶ ಸಂವಿಧಾನದ ಕಗ್ಗೊಲೆ ಮಾಡಿಬಿಟ್ಟರು. ನ್ಯಾಯಯುತವಾಗಿ ಸರಕಾರ ರಚಿಸಲು ಬಹುಮತವಿದ್ದ ಎನ್.ಡಿ.ಎ ತನ್ನ ಶಾಸಕರ ಜೊತೆಗೂಡಿ ರಾಜ್ಯಪಾಲರ ಮುಂದೆ ಹೋದರೆ ರಾಜ್ಯಪಾಲ ಸೈಯದ್ ಸಿಬ್ಟಿ ರಝಿ ಯಾರೂ ಊಹಿಸಲೂ ಸಾಧ್ಯವಿಲ್ಲದಂತಹ ನಿರ್ಣಯ ತೆಗೆದುಕೊಂಡು ಬಿಟ್ಟರು. ಎನ್.ಡಿ.ಎಗೆ ಅಧಿಕಾರ ನಡೆಸಲು ಅವಕಾಶ ಕೊಡದೆ ಜೆಎಂಎಂ ಮುಖಂಡ ಶಿಬು ಸೊರೆನ್ ಅವರನ್ನು ಸರ್ಕಾರ ರಚಿಸುವಂತೆ ಆಹ್ವಾನಿಸಿದರು. ಮೇಡಮ್ ಕೃಪೆಯಿಂದ ಕೇವಲ 17 ಸೀಟುಗಳನ್ನು ಗೆದ್ದಿದ್ದ ಶಿಬು ಸೋರೆನ್ ಮುಖ್ಯಮಂತ್ರಿ ಮತ್ತು ಸ್ಟೀಫೆನ್ ಮರಾಂಡಿ ಉಪ ಮುಖ್ಯಮಂತ್ರಿಯಾದರು!! ಇದು ಸಂವಿಧಾನಕ್ಕೆ ಕಾಂಗ್ರೆಸ್ ಕೊಟ್ಟ ಗೌರವ! ಇಂಥಾ ಕಚಡಾ ಪಕ್ಷದ ಇಟಲಿ ಗುಲಾಮರು ಗೋವಾ ಮತ್ತು ಮಣಿಪುರದ ಬಗ್ಗೆ ಮಾತನಾಡುತ್ತಾರೆ.

ರಾಜ್ಯಪಾಲರ ಈ ನಿರ್ಣಯದ ವಿರುದ್ದ ರಾಷ್ಟ್ರಪತಿಗೆ ಮನವಿ ಸಲ್ಲಿಸಲು ಎನ್.ಡಿ.ಎ ನಿರ್ಧರಿಸುತ್ತದೆ. ಮಾರ್ಚ್3- 2005 ರಂದು ಎನ್.ಡಿ.ಎ ತನ್ನ 36 ಶಾಸಕರ ಜೊತೆ ರಾಂಚಿಯಿಂದ ದೆಹಲಿಗೆ ಪ್ರಯಾಣಿಸಲು ವಿಮಾನ ಹತ್ತುತ್ತದೆ. ಇನ್ನೇನು ವಿಮಾನ ಹೊರಡಲು ಅಣಿಯಾಗುತ್ತಿರುವಂತೆಯೆ ಸಿನೀಮೀಯ ಘಟನೆ ನಡೆಯುತ್ತದೆ. ರಾಂಚಿ ವಿಮಾನ ನಿಲ್ದಾಣಕ್ಕೆ ಓಡೋಡಿ ಬಂದ ಉಪ ಮುಖ್ಯ ಮಂತ್ರಿ ಸ್ಟೀಫನ್ ಮರಾಂಡಿ ಮತ್ತು ಕಂಪನಿ ಹೊರಟಿದ್ದ ವಿಮಾನವನ್ನು ರನ್ ವೇಯಲ್ಲೆ ನಿಲ್ಲುಸುವಂತೆ ಆಜ್ಞೆ ಹೊರಡಿಸುತ್ತಾರೆ. ವಿಮಾನವನ್ನು ತಿರುಗಿಸಿ, ಚಾಲಕನ ಮೇಲೆ ದಾಳಿ ನಡೆಸಿ ಆ ವಿಮಾನದೊಳಗೆ ಎನ್.ಡಿ.ಎಗೆ ಬೆಂಬಲ ನೀಡಿದ 5 ಶಾಸಕರಿಗಾಗಿ ತಡಕಾಡುತ್ತಾರೆ. ಟೇಕ್ ಆಫ್ ಗೆ ತಯಾರಾಗಿದ್ದ ವಿಮಾನವನ್ನು ನಿಲ್ಲಿಸುವುದೆಂದರೆ, ಎಂತಹ ದುರಾಹಂಕಾರ, ಏನು ದಾರ್ಷ್ಟ್ಯ? ಇಷ್ಟೆಲ್ಲವೂ ನಡೆದದ್ದು ಕಾಂಗ್ರೆಸಿನ ರಾಜಮಾತೆಯ ಅಣತಿಯಂತೆ. ಇವತ್ತು ಮೇಡಮ್ ಸಂವಿಧಾನದ ಬಗ್ಗೆ ತನ್ನ ಹರುಕು ಮುರುಕು ಹಿಂದಿಯಲ್ಲಿ ಭಾಷಣ ಬಿಗಿಯುತ್ತಾರೆ. ಅದನ್ನು ಗುಲಾಮರು ಮಂತ್ರ ಮುಗ್ಧರಾಗಿ ಕೇಳುತ್ತಾರೆ. ಆಗ ಹಿಂದಿ ಹೇರಿಕೆ, ಕನ್ನಡದ ಅಪಮಾನ, ಸಂವಿಧಾನದ ಕಗ್ಗೊಲೆ ಒಂದೂ ನೆನಪಿಗೆ ಬರುವುದಿಲ್ಲ ಬಾಲ ಬಡುಕರಿಗೆ. ಇದೂ ಒಂದು ಜನ್ಮ!!

ಆವತ್ತು ವೆಂಕಯ್ಯ ನಾಯ್ಡು ಅವರ ಸಮಯ ಪ್ರಜ್ಞೆಯಿಂದ ವಿಮಾನದಲ್ಲಿ ಹೋಗಬೇಕಾಗಿದ್ದ 5 ಶಾಸಕರನ್ನು ರಸ್ತೆಯ ಮೂಲಕ ಬಹು ಉಪಾಯವಾಗಿ ದೆಹಲಿಗೆ ಸಾಗಿಸಲಾಗಿರುತ್ತದೆ. ಆದರೆ ದುಷ್ಟ ಯೂಪಿಎ ಸರಕಾರ ಶಾಸಕರು ಹೊರ ಹೋಗದಂತೆ ಜಾರ್ಖಂಡಿನ ಪಕ್ಕದ ರಾಜ್ಯ ಛತ್ತಿಸ್ ಗಡ್ ನ ಸರಹದ್ದನ್ನೆ ಸೀಲ್ ಮಾಡಿಬಿಟ್ಟಿರುತ್ತದೆ. ಇದರ ಅರಿವಿದ್ದ ಚಾಣಾಕ್ಷ ವೆಂಕಯ್ಯ ನಾಯ್ಡು ಶಾಸಕರನ್ನು ಕಮ್ಯೂನಿಷ್ಟ್ ಆಡಳಿತವಿದ್ದ ಪಶ್ಚಿಮ ಬಂಗಾಳದ ಮೂಲಕ ದೆಹಲಿಗೆ ಕಳುಹಿಸುವ ಯೋಜನೆ ರೂಪಿಸಿರುತ್ತಾರೆ!! ನಾಯ್ಡು ಅವರ ಗೂಗ್ಲಿ ಎಸೆತದ ಪರಿವೆಯೆ ಇಲ್ಲದ ಮಂದಮತಿ ಯೂಪಿಎ, ಶಾಸಕರನ್ನು ಹುಡುಕಲು ಆಕಾಶ ಭೂಮಿ ಒಂದು ಮಾಡುತ್ತಿರುತ್ತದೆ. ಆದರೆ ಅಷ್ಟರಲ್ಲಾಗಲೆ ಎನ್.ಡಿ.ಎಯ 36 ಮತ್ತು ಇನ್ನಿತರ 5 ಶಾಸಕರು ದೆಹಲಿ ತಲುಪಿ ಮಾನ್ಯ ರಾಷ್ಟ್ರಪತಿ ಅಬ್ದುಲ್ ಕಲಾಂ ಅವರನ್ನು ಭೇಟಿ ಆಗಿ ಸರಕಾರ ರಚಿಸಲು ಬಹುಮತ ಸಾಬೀತು ಪಡಿಸುತ್ತಾರೆ. ರಾಷ್ಟ್ರಪತಿ ಅಬ್ದುಲ್ ಕಲಾಂ ಜಾರ್ಖಂಡಿನ ರಾಜ್ಯಪಾಲರ ಜೊತೆ ಚರ್ಚಿಸುವ ಭರವಸೆ ನೀಡಿ ಶಾಸಕರನ್ನು ಕಳುಹಿಸುತ್ತಾರೆ. ಅಪ್ಪಟ ಸಿನೀಮೀಯ ರೀತಿಯ ರಾಜಕೀಯ ಬೆಳವಣಿಗೆಯೊಂದು ಸುಖಾಂತ್ಯ ಕಂಡು ಸಂವಿಧಾನದ ದೇವಿ ಮಂದಹಾಸ ಬೀರುತ್ತಾಳೆ.

ರಾಷ್ಟ್ರಪತಿ ಅಬ್ದುಲ್ ಕಲಾಂ ಅವರ ಆಜ್ಞೆಯ ಮೇರೆಗೆ ಜಾರ್ಖಂಡಿನ ರಾಜ್ಯಪಾಲ ಸೈಯದ್ ಸಿಬ್ಟಿ, ಶಿಬು ಸೊರೆನ್ ಅವರನ್ನು ಮುಖ್ಯಮಂತ್ರಿಯ ಹುದ್ದೆಯಿಂದ ವಜಾಗೊಳಿಸಿ ರಾಜ್ಯದಲ್ಲಿ ಸರ್ಕಾರದ ರಚಿಸಲು ಅರ್ಜುನ್ ಮುಂಡಾ ಅವರನ್ನು ಆಹ್ವಾನಿಸುತ್ತಾರೆ. ಈ ರೀತಿಯಾಗಿ ಹರಸಾಹಸ ಪಟ್ಟು ಎನ್.ಡಿ.ಎ ಸರಕಾರ ಜಾರ್ಖಂಡಿನ ಆಡಳಿತದ ಚುಕ್ಕಾಣಿ ಹಿಡಿಯುತ್ತದೆ. ಈಗ ಹೇಳಿ ಸಂವಿಧಾನದ ಕಗ್ಗೊಲೆ ನಡೆಸಿದ್ದು ಯಾರು? ಆವತ್ತು ಜಾರ್ಖಂಡ್ ನಲ್ಲಿ ಆಡಿದ ಆಟವನ್ನೆ ಇವತ್ತು ಕರ್ನಾಟಕದಲ್ಲಿ ಆಡಲು ಹೊರಟಿರುವುದು ಯಾರು? ಅಧಿಕಾರಕ್ಕಾಗಿ ಕೀಳು ಮಟ್ಟದ ರಾಜಕೀಯ ಮಾಡುವವರು ಯಾರು? ಭಾರತವನ್ನು ಕೊಳ್ಳೆ ಹೊಡೆದು ಅಭಿವೃದ್ದಿಗೆ ಎಳ್ಳು ನೀರು ಬಿಟ್ಟು ಮೂಟೆಗಟ್ಟಲೆ ಹಣವನ್ನು ವಿದೇಶಿ ಬ್ಯಾಂಕ್ ಗಳಲ್ಲಿ ಜಮೆ ಮಾಡುವುದು ಯಾರು? ದೇಶವನ್ನು ಜಾತಿ ಆಧಾರದ ಮೇಲೆ ವಿಭಜಿಸುವುದು ಯಾರು….?

-ಶಾರ್ವರಿ

Tags

Related Articles

Close