ಪ್ರಚಲಿತ

ವಿರೋಧಿಗಳಿಂದ ಕೀಳಲ್ಪಟ್ಟ ಜಾಗದಲ್ಲೇ ಮತ್ತೆ ರಾರಾಜಿಸಿದ ತ್ರಿವರ್ಣ ಧ್ವಜ.! ಮೋದಿ ಕೋಪಕ್ಕೆ ಕಂಗಾಲಾದ ಲಂಡನ್ ಭಾರತೀಯರಲ್ಲಿ ಕ್ಷಮೆ ಯಾಚಿಸಿದ್ದು ಯಾಕೆ ಗೊತ್ತಾ.?

ಕಾಂಗ್ರೆಸ್ ಆಡಳಿತದಲ್ಲಿ ಭಾರತ ಯಾವ ಸ್ಥಿತಿಯಲ್ಲಿತ್ತು, ಹಾಗೂ ಸದ್ಯ ನರೇಂದ್ರ ಮೋದಿ ಆಡಳಿತದಲ್ಲಿ ಭಾರತ ಯಾವ ಮಟ್ಟದಲ್ಲಿ ಇದೆ ಎಂಬುದು ಇಡೀ ಜಗತ್ತಿಗೆ ತಿಳಿದಿರುವ ವಿಚಾರ. ಯಾಕೆಂದರೆ ಭಾರತ ಎಂದರೆ ಹಿಂದಿನಿಂದಲೂ ಒಂದು ವಿಶೇಷ ಗೌರವ ಸಿಗುತ್ತಿತ್ತು, ಆದರೆ ಕಾಂಗ್ರೆಸ್ ಅದೆಲ್ಲವನ್ನೂ ಮಣ್ಣುಪಾಲು ಮಾಡಿತ್ತು. ಭಾರತವನ್ನು ಇಡೀ ವಿಶ್ವದ ಮುಂದೆ ಮಂಡಿಯೂರುವಂತೆ ಮಾಡಿ , ಭಾರತವನ್ನು ಜಗತ್ತಿನ ಮುಂದೆ ಮಂಕಾಗುವಂತೆ ಮಾಡಿತ್ತು. ಆದರೆ ಈಗಿನ ಪರಿಸ್ಥಿತಿ ಬದಲಾಗಿದೆ, ನರೇಂದ್ರ ಮೋದಿಯವರು ಪ್ರಧಾನಿಯಾಗುತ್ತಲೇ ಇಡೀ ವಿಶ್ವವೇ ಭಾರತದತ್ತ ತಿರುಗಿ ನೋಡಲು ಪ್ರಾರಂಭಿಸಿತ್ತು.

ಯಾಕೆಂದರೆ ಮೋದಿಯ ಕಾರ್ಯ ವೈಖರಿಗಳೇ ಆ ರೀತಿ ಇದೆ. ಯಾವ ದೇಶಗಳು ಮುಖ್ಯಮಂತ್ರಿ ಆಗಿದ್ದ ಮೋದಿಗೆ ತಮ್ಮ ದೇಶಕ್ಕೆ ಬರಲು ವಿಸಾ ನೀಡುವುದಿಲ್ಲ ಎಂದಿತ್ತೋ , ಅದೇ ರಾಷ್ಟ್ರಗಳು ಮೋದಿ ಪ್ರಧಾನಿಯಾಗುತ್ತಲೇ ರೆಡ್ ಕಾರ್ಪೆಟ್ ಹಾಕಿ ಸ್ವಾಗತಿಸಿತ್ತು. ಇವೆಲ್ಲಾ ಕೇವಲ ನರೇಂದ್ರ ಮೋದಿ ಎಂಬ ಅಪರೂಪದ ಮನುಷ್ಯನಿಂದ ಮಾತ್ರ ಸಾಧ್ಯ. ಮೋದಿ ಹೋದಲ್ಲೆಲ್ಲಾ ಅಭಿಮಾನಿಗಳ ಸಾಗರವೇ ಸೇರುತ್ತದೆ. ದೇಶ ಮಾತ್ರವಲ್ಲದೆ ವಿದೇಶದಲ್ಲೂ ಅಪಾರ ಅಭಿಮಾನಿಗಳನ್ನು ಹೊಂದಿರುವ ಮೋದಿಗೆ ವಿರೋಧಿಗಳ ಸಂಖ್ಯೆಯೂ ಕಡಿಮೆ ಏನಿಲ್ಲ. !

ಈಗಾಗಲೇ ಅನೇಕ ರಾಷ್ಟ್ರಗಳಿಗೆ ಭೇಟಿ ನೀಡಿ ಭಾರತದ ಜೊತೆ ಎಲ್ಲಾ ರಾಷ್ಟ್ರಗಳು ಉತ್ತಮ ಸಂಬಂಧ ಹೊಂದುವಂತೆ ಮಾಡಿರುವ ಮೋದಿ, ಸದ್ಯ ಲಂಡನ್ ಪ್ರವಾಸದಲ್ಲಿರುವ ಮೋದಿಗೆ ಸ್ವಾಗತಿಸಲು ಇಡೀ ಲಂಡರ್ ಭಾರತದ ತ್ರಿವರ್ಣ ಧ್ವಜ ಹಾಕಿ ತಮಗೆ ಭಾರತದ ಮೇಲಿರುವ ಗೌರವವನ್ನು ಪ್ರದರ್ಶಿಸಿತ್ತು. ಇದೇ ರೀತಿ ಲಂಡನ್ ಪಾರ್ಲಿಮೆಂಟಿನ ಸ್ಕ್ವೇರ್‌ ನಲ್ಲಿ ಭಾರತದ ಧ್ವಜ ಹಾಕಿ ಮೋದಿಗೆ ಸ್ವಾಗತ ಕೋರಿತ್ತು.!

ಭಾರತದ ಧ್ವಜ ಸುಟ್ಟ ಖಲೀಸ್ತಾನಿಗಳು..!

ಮೋದಿ ಸ್ವಾಗತಕ್ಕೆ ಲಂಡನ್ ಸರಕಾರ ಭರ್ಜರಿ ತಯಾರಿ ನಡೆಸಿದ್ದರೆ, ಇತ್ತ ಲಂಡನ್ ನಲ್ಲಿ ಇರುವ ಕೆಲ ಖಲೀಸ್ತಾನಿಗಳು ಪಾರ್ಲಿಮೆಂಟ್ ಸ್ಕ್ವೇರ್‌ ನಲ್ಲಿ ಹಾಕಿರುವ ಭಾರತದ ಧ್ವಜವನ್ನು ಕಿತ್ತು ಸುಟ್ಟು ಹಾಕಿದ್ದರು. ಒಂದೆಡೆ ಇಡೀ ಲಂಡನ್ ನಲ್ಲಿ ಭಾರತದ ಧ್ವಜ ರಾರಾಜಿಸುತ್ತಿದ್ದರೆ ಮೋದಿಯನ್ನು ವಿರೋಧಿಸುವ ಭರದಲ್ಲಿ ಭಾರತದ ಧ್ವಜವನ್ನು ಸುಟ್ಟು ಭಾರೀ ಅವಮಾನ ಮಾಡಿದ್ದರು. ಇದು ಕೇವಲ ಲಂಡನ್ ನಲ್ಲಿ ಇದ್ದ ಮೋದಿಗೆ ಮಾತ್ರವಲ್ಲದೆ ಇಡೀ ಭಾರತೀಯರ ಕೋಪಕ್ಕೆ ಕಾರಣವಾಗಿತ್ತು.

ಪಾರ್ಲಿಮೆಂಟ್ ಸ್ಕ್ವೇರ್‌ ಮೇಲೆ ಹಾರಾಡುತ್ತಿದ್ದ ಭಾರತದ ಧ್ವಜವನ್ನು ಕೆಳಗಿಳಿಸಿ ಅದೇ ಜಾಗದಲ್ಲಿ ಖಲಿಸ್ತಾನಿಯ ಕೆಲ ಪ್ರತಿನಿಧಿಗಳು ಪಾಕಿಸ್ತಾನದ ಧ್ವಜವನ್ನು ಹಾರಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಮೋದಿಯನ್ನು ವಿರೋಧಿಸಲೇಬೇಕು ಎಂದು ಕಾದು ಕೂತಿದ್ದ ಕೆಲ ವಿರೋಧಿಗಳು ಈ ರೀತಿ ನಡೆಸಿರಬಹುದು ಎಂದು ಹೇಳಿಕೊಂಡಿರುವ ಲಂಡನ್ ಸರಕಾರ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಹೇಳಿಕೊಂಡಿದೆ.!

ಭಾರತೀಯರ ಆಕ್ರೋಶಕ್ಕೆ ಮಣಿದ ಲಂಡನ್..!

ಖಲೀಸ್ತಾನಿಗಳು ಮೋದಿಯವರನ್ನು ವಿರೋಧಿಸುವ ಸಂದರ್ಭದಲ್ಲಿ ಭಾರತದ ತ್ರಿವರ್ಣ ಧ್ವಜವನ್ನು ಸುಟ್ಟ ಹಾಕಿರುವ ಘಟನೆಯನ್ನು ಮೋದಿ ಸಮೇತ ಭಾರತೀಯರು ಆಕ್ರೋಶ ವ್ಯಕ್ತಪಡಿಸಿದ್ದರು. ಇದರಿಂದ ಎಚ್ಚೆತ್ತ ಲಂಡನ್ ಸರಕಾರ ಕೂಡಲೇ ಭಾರತೀಯರಲ್ಲಿ ಕ್ಷಮೆ ಯಾಚಿಸಿದೆ. ಲಂಡನ್ ನಲ್ಲಿ ಇರುವ ಭಾರತೀಯರು ಈ ಬಗ್ಗೆ ಮಾಧ್ಯಮಗಳಲ್ಲಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಂತೆ ಕಂಗಾಲಾದ ಲಂಡನ್ ಸರಕಾರ ಆರೋಪಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದೆ.!

ಇದರಂತೆ ಘಟನೆ ಕುರಿತು, ವೆಬ್ ಪೋರ್ಟಲ್ ಕೂಡಾ ವರದಿ ಮಾಡಿದ್ದು, ಇದರಿಂದ ಪಾರ್ಲಿಮೆಂಟ್ ಸ್ಕ್ವೇರ್‌ ನಲ್ಲಿ ಮತ್ತೆ ಭಾರತದ ತ್ರಿವರ್ಣ ಧ್ವಜ ಹಾರಿಸಲು ಬ್ರಿಟಿಷ್ ಸರಕಾರ ಎಲ್ಲಾ ರೀತಿಯ ಸಿದ್ದತೆ ನಡೆಸುತ್ತಿದೆ ಎಂದು ಹೇಳಲಾಗಿದೆ. ಈ ನಡುವೆಯೇ ಭಾರತೀಯ ಪತ್ರಕರ್ತರ ಸಮೂಹ ಘಟನೆಯನ್ನು ತೀವ್ರವಾಗಿ ಖಂಡಿಸಿದ್ದು, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಆಗ್ರಹಿಸಿದೆ.

ಅದೇನೇ ಆದರೂ ಭಾರತದ ಧ್ವಜ ಸುಟ್ಟ ವಿಚಾರವಾಗಿ ಕೋಪಗೊಂಡ ಪ್ರಧಾನಿ ಮೋದಿಗೆ ಸ್ವತಃ ಬ್ರಿಟಿಷ್ ಸರಕಾರವೇ ತಲೆಬಾಗಿದೆ ಎಂದರೆ ಸದ್ಯ ಭಾರತದ ತಾಕತ್ತು ಯಾವ ರೀತಿ ಇದೆ ಎಂಬುದು ಜಗತ್ತಿಗೆ ಮತ್ತೆ ತಿಳಿಯುವಂತಾಗಿದೆ. ಭಾರತದ ವಿರೋಧ ಕಟ್ಟಿಕೊಳ್ಳಲು ಯಾವ ದೇಶವೂ ತಯಾರಿಲ್ಲ, ಯಾಕೆಂದರೆ ಮೋದಿ ಆಡಳಿತದಲ್ಲಿ ಭಾರತ ವಿಶ್ವಗುರು ಸ್ಥಾನದಲ್ಲಿ ನಿಲ್ಲುವುದು ಖಂಡಿತ. ಮೋದಿ ಭೇಟಿಯಿಂದಾಗಿ ಭಾರತ ಮತ್ತು ಲಂಡನ್ ನ ಸಂಬಂಧ ಮತ್ತಷ್ಟು ಗಟ್ಟಿಯಾಗಿದೆ ಎಂದು ಲಂಡನ್ ಅಧ್ಯಕ್ಷರು ಹೇಳಿಕೊಂಡಿದ್ದಾರೆ.!

–ಅರ್ಜುನ್

 

Tags

Related Articles

Close