ಅಂಕಣ

ವಾವ್!! ಪ್ಲಾನ್ ಅಂದ್ರೆ ಇದಪ್ಪಾ..!!! ಕರ್ನಾಟಕದಲ್ಲಿ ತಾವರೆ ಅರಳಿಸಲು ಮೋದಿ-ಷಾ ಮಾಡಿರುವ ಗೇಮ್‍ಪ್ಲಾನ್ ಏನು ಗೊತ್ತಾ…..?!!

ವಾವ್ ಅಮಿತ್ ಶಾ ಪ್ಲಾನ್ ಅಂದ್ರೆ ಇದಪ್ಪಾ…!!! ಯಾವ ಬಿಜೆಪಿ ನಾಯಕರೂ ಟಿಕೆಟ್‍ಗಾಗಿ ಕಚ್ಚಾಟ ನಡೆಸುವಂತೆಯೂ ಇಲ್ಲ ಲಾಬಿ ನಡೆಸುವಂತೆಯೂ ಇಲ್ಲ.ಕರ್ನಾಟಕದಲ್ಲಿ ತಾವರೆಯನ್ನು ಅರಳಿಸಲು ಮೋದಿ-ಶಾ ಮಾಡಿದ ಐಡಿಯಾ ನೋಡಿದ್ರೆ ಕರ್ನಾಟಕದಲ್ಲಿ ಕಾಂಗ್ರೆಸನ್ನು ಮುಂದೆ ದುರ್ಬಿನ್ ಹಿಡಿದು ಹುಡುಕಬೇಕಷ್ಟೆ.

ಕರ್ನಾಟಕದ ಹಿಂದೂಗಳ ಪಾಲಿಗೆ ದುಃಸ್ವಪ್ನವಾಗಿರುವ ಕಾಂಗ್ರೆಸ್ ಸರಕಾರ ಯಾವಾಗ ತೊಲಗುತ್ತದೋ ಎಂದು ಜನರು ಹಿಡಿಶಾಪ ಹಾಕುತ್ತಿದ್ದಾರೆ. ಅತ್ತ ಸ್ಥಳೀಯ ಪಕ್ಷವಾಗಿದ್ದ ಜಾತ್ಯತೀತ ಜನತಾದಳದ ಮುಖಂಡ ಎಚ್.ಡಿ. ದೇವೇಗೌಡ ಅವರು ನಾನು ಕರ್ನಾಟಕವನ್ನು ಹಿಂದೂ ರಾಜ್ಯವಾಗಲು ಬಿಡೋಲ್ಲ ಅನ್ನುತ್ತಿದ್ದಾರೆ. ಒಟ್ಟಿನಲ್ಲಿ ಹಿಂದೂಗಳನ್ನು ಎಷ್ಟು ತುಳಿಯಲು ಸಾಧ್ಯವೋ ಅಷ್ಟು ತುಳಿದು ಅವರನ್ನು ಇಬ್ಭಾಗವನ್ನಾಗಿಸಲು ಇನ್ನಿಲ್ಲದ ಸರ್ವ ಪ್ರಯತ್ನ ಮುಖ್ಯವಾಗಿ ಎಲ್ಲಾ ರಾಜಕೀಯ ಪಕ್ಷಗಳು ಮಾಡುತ್ತಿವೆ.

ಕರ್ನಾಟಕವನ್ನು ಹಗರಣಗಳಿಂದ ನಂಬರ್ ವನ್ ಪಟ್ಟಕ್ಕೇರಿಸಿದ್ದ ಕಾಂಗ್ರೆಸ್ ಪಕ್ಷ ಈ ಬಾರಿ ಮತ್ತೊಮ್ಮೆ ಕರ್ನಾಟಕದ ಅಧಿಕಾರದ ಚುಕ್ಕಾಣಿಯನ್ನು ಪಡೆಯಲು ಶತಾಯಗತಾಯ ಪ್ರಯತ್ನಿಸುತ್ತದೆ. ಅದಕ್ಕಾಗಿ ಏನನ್ನೂ ಮಾಡಲು ಹೇಸದ ಕಾಂಗ್ರೆಸ್ ಹಿಂದೂಗಳನ್ನು ಒಡೆದು ಮತಧ್ರುವೀಕರಣ ಮಾಡಿಕೊಂಡು ಅದರಿಂದ ಮತ್ತೆ ಮತಗಳನ್ನು ಪಡೆದು ಚುನಾವಣೆ ಗೆಲ್ಲಲು ರಣತಂತ್ರ ರೂಪಿಸಿತ್ತು. ಅದಕ್ಕಾಗಿ ಕಾಂಗ್ರೆಸ್ ಮಾಡಿದ್ದ ಕಿತಾಪತಿ ಏನು ಗೊತ್ತಾ? ವೀರಶೈವ-ಲಿಂಗಾಯತ
ಸಮುದಾಯವನ್ನು ಮುಂದಿಟ್ಟುಕೊಂಡು ಅವರನ್ನು ಪರಸ್ಪರ ಕಚ್ಚಾಡಿಸಿ ಪ್ರತ್ಯೇಕ ಧರ್ಮವಾಗಿಸಲು ಹುನ್ನಾರ!!!

ಇಷ್ಟೆಲ್ಲಾ ಕೃತ್ಯಗಳಲ್ಲಿ ತೊಡಗಿದ್ದ ಕಾಂಗ್ರೆಸ್ ಪಕ್ಷವನ್ನು ಮೂಲೋತ್ಪಾಟನೆ ಮಾಡಲು ಬಿಜೆಪಿ ಮಾಡಿದ ಪ್ಲಾನ್ ಏನು ಗೊತ್ತಾ? ಈ ಬಾರಿ ಬಿಜೆಪಿಯ ಅಧ್ಯಕ್ಷ ಅಮಿತ್ ಶಾ ಅವರು ಮಾಡಿದ ಪ್ಲಾನ್ ನೋಡಿ ದಂಗಾಗ್ಲೇಬೇಕು… ಅಮಿತ್ ನೀಡಿರುವ ಶಾಕ್ ನೋಡಿ ಕಾಂಗ್ರೆಸ್ ಬಿಡಿ ಸ್ವತಃ ಕರ್ನಾಟಕದ ಬಿಜೆಪಿ ಮುಖಂಡರೇ ದಂಗಾಗಿ ಹೋಗಿದ್ದಾರೆ. ಕರ್ನಾಟಕದ ಪರಿಸ್ಥಿತಿಯನ್ನು ಸಾಕಷ್ಟು ಅಧ್ಯಯನ ಮಾಡಿಕೊಂಡಿರುವ ಅಮಿತ್ ಷಾ ಬಿಜೆಪಿಯನ್ನು ಗೆಲ್ಲಿಸಲು ರಣತಂತ್ರ ರೂಪಿಸಿದ್ದಾರೆ. ಇದು ಕಾಂಗ್ರೆಸ್ ಹಾಗೂ ಇತರ ಪಕ್ಷಗಳನ್ನು ಧೂಳೀಪಟ ಮಾಡುವುದರಲ್ಲಿ ಯಾವುದೇ ಸಂಶಯವಿಲ್ಲ. ಈ ಪ್ಲಾನ್‍ನಿಂದ ಬಿಜೆಪಿಗೆ ಆಗುವ ಲಾಭ ಏನು ಎಂಬುವುದನ್ನು ವಿಶ್ಲೇಷಿಸೋಣ.

ಕರ್ನಾಟಕದಲ್ಲಿ ಕ್ಷೇತ್ರವಿಂಗಡನೆ, ಜಾತಿ ಲೆಕ್ಕಾಚಾರ, ರಾಜ್ಯದ ಜನತೆಯ ದೃಷ್ಟಿಕೋನ, ಸಿದ್ದರಾಮಯ್ಯ ಸರಕಾರದ ವೈಫಲ್ಯ, ಹಿಂದೂ ವಿರೋಧಿ ನೀತಿ, ಮೋದಿ ಸರಕಾರ ಕೈಗೊಂಡಿರುವ ಅಭಿವೃದ್ಧಿ ಕಾರ್ಯಗಳು ಜನರ ಮೇಲೆ ಬಿದ್ದಿರುವ ಪರಿಣಾಮ, ಕರ್ನಾಟಕ ರಾಜ್ಯದ ಬಿಜೆಪಿ ಮುಖಂಡರ ವರ್ಚಸ್ಸು, ಇತ್ತೀಚೆಗೆ ನಡೆದ ಹಲವಾರು ಸಮೀಕ್ಷೆ ಅದಕ್ಕಿಂತಲೂ ಮುಖ್ಯವಾಗಿ ಕಾರ್ಯಕರ್ತರ ಮನೋಭಾವ ಇತ್ಯಾದಿಗಳನ್ನು ಸಾಕಷ್ಟು ಅಧ್ಯಯನ ನಡೆಸಿದ ಚಾಣಾಕ್ಷ ಅಮಿತ್ ಷಾ ಬಿಜೆಪಿಯನ್ನು ರಾಜ್ಯದಲ್ಲಿ ಗೆಲ್ಲಿಸಲು ಪ್ಲಸ್ ಆಗುವಂಥಾ ಪ್ಲಾನ್‍ಗಳನ್ನು ಮಾಡಿದ್ದಾರೆ. ಉತ್ತರ ಪ್ರದೇಶದಲ್ಲಿ ಈ ಬಾರಿ ಬಿಜೆಪಿ ಅರಳಿದೆ. ಅದೇ ರೀತಿ ಕರ್ನಾಟಕಲ್ಲಿಯೂ ಅರಳಿಸಿ ಕಾಂಗ್ರೆಸ್ ಮುಕ್ತ ಭಾರತ ಅಭಿಯಾನ ಯಶಸ್ವಿಗೊಳಿಸಲು ಉದ್ದೇಶಿಸಲಾಗಿದೆ. ಉತ್ತರ ಪ್ರದೇಶಕ್ಕೂ ಕರ್ನಾಟಕ್ಕೂ ಸಾಕಷ್ಟು ವ್ಯತ್ಯಾಸ ಇರುವುದನ್ನು ಗಮನಿಸಿ ಅದಕ್ಕೆ ತಕ್ಕಂತೆ ಯೋಜನೆ ರೂಪಿಸುವುದು ಷಾ ರಣನೀತಿಯ ಒಂದು ಭಾಗ.

ಕ್ಷೇತ್ರಬದಲಾವಣೆ:

ಸಮೀಕ್ಷಾ ವರದಿಗಳನ್ನು ಗಮನಿಸಿರುವ ಅಮಿತ್ ಷಾ ಹಾಗೂ ನರೇಂದ್ರ ಮೋದಿಯವರು ರಾಜ್ಯದ ಹಲವು ದಿಗ್ಗಜ ನಾಯಕರು ಕ್ಷೇತ್ರ ಬದಲಾವಣೆ ಮಾಡಿಕೊಳ್ಳಬೇಕು. ಬಿಜೆಪಿ ಪ್ರಾಬಲ್ಯ ಕಡಿಮೆ ಇರುವ ಕಡೆಗಳಲ್ಲಿ ರಾಜ್ಯದ ನಾಯಕರ ವರ್ಚಸ್ಸು, ಜಾತಿಲೆಕ್ಕಾಚಾರ ಇತ್ಯಾದಿಗಳನ್ನು ಕಂಡುಕೊಂಡು ರಾಜ್ಯ ಬಿಜೆಪಿ ಮುಖಂಡರು ತನ್ನ ಸ್ವಕ್ಷೇತ್ರ ಬಿಟ್ಟು ಬೇರೆ ಕ್ಷೇತ್ರಗಳಲ್ಲಿ ಸ್ಪರ್ಧಿಸಬೇಕು. ಅಲ್ಲದೆ ಸ್ವಕ್ಷೇತ್ರದಲ್ಲಿಯೂ ತನ್ನ ಪಕ್ಷದ ಗೆಲುವಿಗೆ ಶ್ರಮಿಸಬೇಕು ಎನ್ನುವುದು ಷಾ ಗೇಮ್‍ಪ್ಲಾನ್. ಇದರಿಂದ ಎರಡೂ ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲುವುದರಿಂದ ರಾಜ್ಯದಲ್ಲಿ ಅನಾಯಾಸವಾಗಿ ಸರಕಾರ ರಚಿಸಬಹುದು. ಚುನಾವಣೆಯಲ್ಲಿ ಲೆಕ್ಕಾಚಾರ ಪ್ರಮುಖ ಪಾತ್ರವಹಿಸುತ್ತದೆ. ಇದೇ ಲೆಕ್ಕಾಚಾರವನ್ನಿಟ್ಟುಕೊಂಡು ಈ ಪ್ಲಾನ್ ರೂಪಿಸಲಾಗಿದೆ.

ಕ್ಷೇತ್ರ ವಿಂಗಡನೆ, ಲೆಕ್ಕಾಚಾರ ಹೇಗೆ ಕೆಲಸ ಮಾಡುತ್ತದೆ ಗೊತ್ತಾ?

ಉದಾಹರಣೆಗೆ ರಾಜ್ಯದಲ್ಲಿ ಯಡಿಯೂರಪ್ಪ, ಜಗದೀಶ್ ಶೆಟ್ಟರ್, ಆರ್. ಅಶೋಕ್ ಮುಂತಾದವರು ಸಾಕಷ್ಟು ವರ್ಚಸ್ಸು ಇರುವ ನಾಯಕರು. ಇವರು ಯಾವ ಕ್ಷೇತ್ರದಲ್ಲಿ ಸ್ಪರ್ಧಿಸಿದರೂ ಅನಾಯಾಸವಾಗಿ ಗೆಲ್ಲುತ್ತಾರೆ. ಅವರು ತನ್ನ ಸ್ವಕ್ಷೇತ್ರದಲ್ಲಿ ಸ್ಪರ್ಧಿಸಿ ಪ್ರಚಂಡ ಮತಗಳಿಂದ ಗೆಲ್ಲುವುದಕ್ಕಿಂತಲೂ ಬೇರೆ ಪಕ್ಷ ಕಡಿಮೆ ಅಂತರದಲ್ಲಿ ಹೆಚ್ಚು ಕ್ಷೇತ್ರಗಳಲ್ಲಿ ಗೆಲ್ಲುವುದಕ್ಕೂ ಸಾಕಷ್ಟು ವ್ಯತ್ಯಾಸವಿದೆ. ಇಲ್ಲಿ ಮತಗಳ ಸಂಖ್ಯೆಗಿಂತಲೂ ಗೆಲ್ಲಬೇಕಾದ ಕ್ಷೇತ್ರಗಳು ಮುಖ್ಯ. ಜಾಸ್ತಿ ಕ್ಷೇತ್ರಗಳಲ್ಲಿ ಗೆದ್ದರಷ್ಟೇ ಬಹುಮತಗೊಂಡು ಸರಕಾರ ರಚಿಸಲು ಸಾಧ್ಯ. ಇದೇ ಅಮಿತ್-ಮೋದಿ ಮಾಸ್ಟರ್ ಪ್ಲಾನ್… ಅದಕ್ಕಾಗಿಯೇ ಮುಖಂಡರಿಗೆ ಕ್ಷೇತ್ರ ಬದಲಾವಣೆ ಮಾಡಲು ಸೂಚಿಸಿರುವುದು. ಕಾಂಗ್ರೆಸ್ ಹಾಗೂ ಇತರ ಪಕ್ಷಗಳಿಗೆ ನಷ್ಟವೇನು? ಕಾಂಗ್ರೆಸ್ ಅಲ್ಪಸಂಖ್ಯಾತರ ಮತಗಳನ್ನೇ ನೆಚ್ಚಿಕೊಂಡಿದೆ. ಯಾವ ಕ್ಷೇತ್ರದಲ್ಲಿ ಅಲ್ಪಸಂಖ್ಯಾತರ ಸಂಖ್ಯೆ ಜಾಸ್ತಿ ಇದೆಯೋ ಆ ಕ್ಷೇತ್ರಗಳನ್ನು ಗೆಲ್ಲಲು ಕಾಂಗ್ರೆಸ್ ಇನ್ನಿಲ್ಲದಂತೆ ಪ್ರಯತ್ನಿಸುತ್ತದೆ. ಆದರೆ ಷಾ ಅವರ ನೂತನ ಪ್ಲಾನ್‍ನಿಂದ ಕಾಂಗ್ರೆಸ್ ಪಕ್ಷಕ್ಕೆ ತೀವ್ರ ಹಿನ್ನಡೆ ಆಗಬಹುದು. ಬಿಜೆಪಿ ಮುಖಂಡರು ತನ್ನ ಕ್ಷೇತ್ರದ ಗೆಲುವಿಗಷ್ಟೇ ಶ್ರಮಿಸಬಾರದು ಇತರ ಕ್ಷೇತ್ರದ ಗೆಲುವಿಗೂ ಶ್ರಮಿಸಿ ಹೆಚ್ಚು ಕ್ಷೇತ್ರಗಳನ್ನು ಬಗಲಿಗೆ ಹಾಕಲು ಶ್ರಮಿಸುವಂತೆ ಪ್ರೋತ್ಸಾಹಿಸಲು ಉತ್ತೇಜನ ನೀಡುವ ಸಲುವಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ.

ಜಾತಿ ಲೆಕ್ಕಾಚಾರನೂ ಇದೆ…!!

ಮುಖಂಡರೊಬ್ಬರ ಜಾತಿ ಬೇರೆ ಕ್ಷೇತ್ರದಲ್ಲಿ ಹೆಚ್ಚಿನ ಪ್ರಮಾಣದಲ್ಲಿದ್ದರೆ ಆ ಕ್ಷೇತ್ರಕ್ಕೆ ಆ ಮುಖಂಡರು ವಲೆ ಹೋಗಬೇಕು. ಯಾವ ಕ್ಷೇತ್ರದಲ್ಲಿ ಯಾವ ಜಾತಿ ಪ್ರಬಲವಾಗಿದೆ ಎಂದು ಅಮಿತ್ ಷಾ ಸಾಕಷ್ಟು ಅಧ್ಯಯನ ನಡೆಸಿದ್ದು, ಜಾತಿವಾರು ಪಟ್ಟಿಗಳನ್ನೂ ತಯಾರಿಸಲಾಗಿದೆ. ಬೇರೆ ಬೇರೆ ಕ್ಷೇತ್ರಗಳನ್ನು ತೋರಿಸಿ ಆ ಕ್ಷೇತ್ರದಲ್ಲಿ ಚುನಾವಣೆ ಗೆಲ್ಲುವಂತೆ ಸೂಚಿಸಲಾಗಿದೆ. ಒಂದು ಕ್ಷೇತ್ರವನ್ನು ಒಪ್ಪಿಕೊಂಡು ಅಲ್ಲಿ ಸಾಕಷ್ಟು ಶ್ರಮವಹಿಸಿ ಕ್ಷೇತ್ರಾವಾರು ಗೆಲ್ಲಲು ಪ್ಲಾನ್ ಮಾಡಲಾಗಿದೆ. ಷಾ ಅವರು ಸಮೀಕ್ಷಾ ವರದಿಯನ್ನು ಮುಂದಿಟ್ಟುಕೊಂಡು ಜಾತಿ ಲೆಕ್ಕಾಚಾರದಲ್ಲಿ ತೊಡಗಿಕೊಂಡು ಉತ್ತರ ಕರ್ನಾಟಕದ ಭಾಗವನ್ನು ಬಿಜೆಪಿ ಗೆಲ್ಲಿಸಲು ರಣನೀತಿ ರೂಪಿಸಿದ್ದಾರೆ. ಬಹುಸಂಖ್ಯಾತ ವೀರಶೈವ ಲಿಂಗಾಯತ ಮತದಾರರಿರುವ ಉತ್ತರ ಕರ್ನಾಟಕದಿಂದ ಯಡಿಯೂರಪ್ಪ ಅವರನ್ನು ಸ್ಪರ್ಧಿಸುವಂತೆ ವರಿಷ್ಠರು ಈಗಾಗಲೇ ಸೂಚನೆ ನೀಡಿದ್ದಾರೆ. ಇದಕ್ಕೆ ಯಡಿಯೂರಪ್ಪ ಕೂಡಾ ಒಪ್ಪಿಕೊಂಡಿದ್ದಾರೆ.

ಮುಂದಿನ ಬದಲಾವಣೆಗಳನ್ನು ಹೊರತುಪಡಿಸಿ ಬಿಜೆಪಿ ಮುಖಂಡರು ಬೇರೆ ಬೇರೆ ಕ್ಷೇತ್ರಗಳಲ್ಲಿ ಸ್ಪರ್ಧಿಸಬೇಕಾಗಿದೆ. ಪ್ರತಿಪಕ್ಷದ ನಾಯಕ ಜಗದೀಶ್ ಶೆಟ್ಟರ್ ಅವರು ಗದಗ ಜಿಲ್ಲೆಯಿಂದ ಸ್ಪರ್ಧಿಸಬೇಕಾಗಿದೆ. ಬೆಂಗಳೂರಿನ ಪ್ರಭಾವಿ ಮುಖಂಡರಾಗಿರುವ ಅರವಿಂದ ಲಿಂಬಾವಳಿ ಅವರು ಬಾಗಲಕೋಟೆ ಕ್ಷೇತ್ರದಲ್ಲಿ ಸ್ಪರ್ಧಿಸಬೇಕಾಗಿದೆ. ಉರಿನಾಲಗೆಯ ಪ್ರಭಾವಿ ಮುಖಂಡ ಕೆ.ಎಸ್. ಈಶ್ವರಪ್ಪ ಅವರು ಹಾಲಿ ಶಿವಮೊಗ್ಗ ಕ್ಷೇತ್ರದಿಂದ ಕೊಪ್ಪಳ ಕ್ಷೇತ್ರದಲ್ಲಿ ಸ್ಪರ್ಧಿಸಬೇಕಿದೆ. ನಾರಾಯಣ ಸ್ವಾಮಿ ವೈ.ಎ ಅವರು ಹೆಬ್ಬಾಳವನ್ನ ಬಿಟ್ಟು ಶ್ರೀನಿವಾಸಪುರ ಕ್ಷೇತ್ರದಲ್ಲಿ ಸ್ಪರ್ಧಿಸಲಿದ್ದಾರೆ. ಲಿಂಗಾಯತ ಮಠಗಳಲ್ಲಿ ತನ್ನದೇ ಹಿಡಿತ ಹೊಂದಿರುವ ವಿ. ಸೋಮಣ್ಣ ಅವರು ಗುಂಡ್ಲುಪೇಟೆಯಲ್ಲಿ ಸ್ಪರ್ಧಿಸಬೇಕಾಗಿದೆ. ಮಲ್ಲೇಶ್ವರಂನ ಶಾಸಕರಾಗಿರುವ ಡಾ. ಅಶ್ವಥ್ ನಾರಾಯಣ ಅವರು ಬ್ಯಾಟರಾಯನಪುರದಿಂದ ಸ್ಪರ್ಧೆಗೆ ಇಳಿಯಲಿದ್ದಾರೆ. ಸತೀಶ್ ರೆಡ್ಡಿ ಬೊಮ್ಮನಹಳ್ಳಿಯನ್ನು ಬಿಟ್ಟು ಮುಂದಕ್ಕೆ ಬಿಟಿಎಂ ಲೇಔಟ್‍ನಲ್ಲಿ ಸ್ಪರ್ಧಿಸಬೇಕಾಗಿದೆ.

ಆರ್. ಅಶೋಕ ಅವರನ್ನು ಬಹುಸಂಖ್ಯಾತ ಒಕ್ಕಲಿಗ ಜನಾಂಗದ ಮತದಾರರಿರುವ ಮಂಡ್ಯ ಅಥವಾ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಕ್ಷೇತ್ರದಿಂದ ಸ್ಪರ್ಧಿಸುವಂತೆ ಸೂಚಿಸಲಾಗಿದೆ. ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಅವರಿಗೆ ಒಕ್ಕಲಿಗ ಬಾಹುಳ್ಯವುಳ್ಳ ಹಾಸನ ಜಿಲ್ಲೆಯ ಕ್ಷೇತ್ರದಿಂದ ಸ್ಪರ್ಧೆಗೆ ಸೂಚನೆ ನೀಡಲಿದ್ದಾರೆ. ರಘು ಎಸ್. ಅವರನ್ನು ಪುಲಿಕೇಶಿ ನಗರಕ್ಕೂ ಸೀಟು ಬದಲಾಯಿಸಲಿದ್ದಾರೆ. ಮುನಿರಾಜು ಅವರು ದಾಸರಹಳ್ಳಿಯಿಂದ ಯಲಹಂಕದಿಂದ ಸ್ಪರ್ಧಿಸಲಿದ್ದಾರೆ.

ಸಂಘಪರಿವಾರದ ಭದ್ರಕೋಟೆಯಾಗಿರುವ ಕರಾವಳಿ ಕರ್ನಾಟಕದಲ್ಲಿ ಬಿಜೆಪಿಗೆ ನಿಚ್ಚಳ ಬಹುಮತ ಸಿಗುವುದು ನಿಚ್ಚಳವಾಗಿದೆ ಎಂದು ಸಮೀಕ್ಷೆಗಳು ಬಹಿರಂಗಪಡಿಸಿದೆ. ಅಲ್ಲದೆ ಪಕ್ಷಕ್ಕಾಗಿ ದುಡಿದ ಪಕ್ಷ ಮತ್ತು ಸಿದ್ದಾಂತದ ಅನ್ವಯ ನಾಯಕತ್ವ ರೂಪಿಸಿಕೊಂಡಿರುವವರನ್ನು ಪಕ್ಷ ಪ್ರಧಾನವಾಗಿ ಪರಿಗಣಿಸಲಿದೆ. ಉತ್ತರ ಕರ್ನಾಟಕದಲ್ಲಿ ಕನಿಷ್ಠ 100 ಸ್ಥಾನಗಳನ್ನು ಗೆದ್ದು, ಕರಾವಳಿ ಭಾಗದಲ್ಲಿ ಸಿಗುವ ಸ್ಪಷ್ಟ ಸ್ಥಾನಗಳ ಲೆಕ್ಕಾಚಾರವನ್ನಿಟ್ಟುಕೊಂಡು ಕರ್ನಾಟಕದಲ್ಲಿ ತಾವರೆ ಅರಳಿಸುವುದು ಅಮಿತ್ ಷಾ ಹೊಸ ಲೆಕ್ಕಾಚಾರಗಳಲ್ಲಿ ಒಂದು.

ಕಾಂಗ್ರೆಸ್ ಷಾ ಪ್ಲಾನ್‍ಗೆ ಯಾವ ರೀತಿಯ ಪ್ರತಿತಂತ್ರ ರೂಪಿಸಿದೆ ಎಂದು ಇನ್ನಷ್ಟೇ ತಿಳಿದುಬರಬೇಕಾಗಿದೆ. ಮುಖ್ಯವಾಗಿ ಉತ್ತರ ಕರ್ನಾಟಕವು ಮುಖ್ಯಮಂತ್ರಿ ಸಿದ್ದರಾಮಯ್ಯ ಪಾಲಿಗೆ ಪ್ರತಿಷ್ಠೆಯ ಕಣವಾಗಿರುವುದರಿಂದ ಅವರ ಭವಿಷ್ಯವೂ ಇದರಲ್ಲಿ ಅಡಕವಾಗಿದೆ. ಯಾಕೆಂದರೆ ಸ್ವಪಕ್ಷೀಯರಿಂದಲೇ ಸಾಕಷ್ಟು ಟೀಕೆಗೊಳಗಾಗಿರುವ ಸಿದ್ದುವನ್ನು ಕೆಲವರಿಗೆ ಕಂಡರಾಗುವುದಿಲ್ಲ. ಮುಂದಿನ ಬಾರಿಯೂ ನಾನೇ ಮುಖ್ಯಮಂತ್ರಿ ಎಂದು ಸಿದ್ದು ಘೋಷಣೆ ಮಾಡಿರುವುದು ಕಾಂಗ್ರೆಸ್‍ನ ಹಿರಿಯ ಮುಖಂಡರ ಸಿಟ್ಟಿಗೆ ಕಾರಣವಾಗಿದೆ. ಸಮೀಕ್ಷೆಯ ಪ್ರಕಾರ ಸಿದ್ದರಾಮಯ್ಯ ಈ ಚುನಾವಣೆಯಲ್ಲಿ ಸೋತರೆ ಅವರ ರಾಜಕೀಯ ಭವಿಷ್ಯವೇ ಅಂತ್ಯವಾಗಲಿದೆ. ವೈಯಕ್ತಿಕ ದ್ವೇಷ ಸಾಧಿಸುತ್ತಾ ರಾಜಕಾರಣ ಮಾಡುವ ಸಿದ್ದರಾಮಯ್ಯನ ರಾಜಕೀಯ ಭವಿಷ್ಯವನ್ನು ಹೇಗಾದರೂ ಮಾಡಿ ಅಂತ್ಯಗೊಳಿಸುವಂತೆ ಮಾಡುವುದು ಅಮಿತ್ ಷಾ ಅವರ ನಿಲುವಾಗಿದೆ.

-ಚೇಕಿತಾನ

Tags

Related Articles

Close