ಪ್ರಚಲಿತ

ಈ ಕಾರಣದಿಂದಾಗಿಯೇ ಕಾಂಗ್ರೆಸ್ ಹೀನಾಯವಾಗಿ ಸೋಲನ್ನನುಭವಿಸುತ್ತಿದೆ! ಮುಂದೆನೂ..

ಉಡಪಿಯಲ್ಲಿ “ಧರ್ಮ ಸಂಸದ್” ಕಾರ್ಯಕ್ರಮ ಜೋರಾಗಿಯೇ ನಡೆಯುತ್ತಿದೆ. ಕೇವಲ ಕರ್ಣಾಟಕಕ್ಕೆ ಮಾತ್ರವಲ್ಲದೆ ಇಡೀ ದೇಶವೇ ಉಡುಪಿಯ ಈ ಕಾರ್ಯಕ್ರಮವನ್ನು ಬಿಟ್ಟ ಕಣ್ಣು ಬಿಟ್ಟಂಗೆ ನೋಡುತ್ತಿದೆ. 2800ಕ್ಕಿಂತಲೂ ಅಧಿಕ ಹಿಂದೂ ಧರ್ಮದ ಸಂತರು ಒಂದೇ ವೇದಿಕೆಯಲ್ಲಿ ಕುಳಿತು ಸನಾತನ ಧರ್ಮ ಹಾಗೂ ಭಾರತೀಯತೆಯ ಸಾರವನ್ನು ಮತ್ತಷ್ಟು ಎತ್ತರಕ್ಕೆ ಹಾರಿಸಲು ಸಜ್ಜಾಗಿ ನಿಂತಿದೆ. ಪೊಡವಿಗೊಡೆಯನ ನಾಡಿನಲ್ಲಿ ಕೇಸರೀ ಕಲರವ ಮೈಮನ ಪುಳಕಿತಗೊಳ್ಳುವಂತೆ ಮಾಡುತ್ತಿದೆ. ಎಲ್ಲೆಲ್ಲೂ ಹಾರುತ್ತಿರುವ ಕೇಸರೀ ಪತಾಕೆಗಳು ಮುಂದಿನ ದಿನಗಳಲ್ಲಿ ಭಾರತ ಹಿಂದೂರಾಷ್ಟ್ರ ಆಗೋದು ಖಚಿತ ಎಂಬ ಸಂದೇಶವನ್ನು ಸಾರುತ್ತಿದೆ.

ಕಾಂಗ್ರೆಸ್ಸಿಗರ ಎಡಬಿಡಂಗಿ ನೀತಿ-ಜಾತ್ಯಾತೀತವಾದಿಗಳೇ ಇವರಿಗೆ ಪ್ರೀತಿ…!!!

ಕ್ಷಮಿಸಿ… ನಿಜವಾಗಿಯೂ ಈ ಒಂದು ಪುಣ್ಯ ಕೆಲಸದಲ್ಲಿ ರಾಜಕೀಯವನ್ನು ಬೆರೆಸಲೇ ಬಾರದು. ಇದು ರಾಜಕೀಯ ರಹಿತವಾದ ಹಿಂದೂ ಧರ್ಮ ಸಂಸದ್. ಹಿಂದೂ ಧರ್ಮದ ಶ್ರದ್ಧೆಯ ಸಂತರು ಒಂದೇ ವೇದಿಕೆಯಲ್ಲಿ ತಮ್ಮ ದಿವ್ಯ ದರ್ಶನವನ್ನು ತೋರಿಸುವ ವಿಶೇಷವಾದ ಸಮಯ. ಆದರೆ ಕೆಲವು ನೀತಿಗಳು ನಮ್ಮನ್ನೂ ಹಲವಾರು ಪ್ರಶ್ನೆಗಳಿಗೆ ದೂಡುತ್ತಿದೆ.

ಬಿಜೆಪಿ ಅನ್ನೋದು ಹಿಂದುತ್ವದ ಆಧಾರದಲ್ಲಿ ಬೆಳೆದು ಬಂದ ಪಕ್ಷ. ಒಂದರ್ಥದಲ್ಲಿ ಉಳಿದೆಲ್ಲಾ ಪಕ್ಷಗಳಿಗೆ ಇರುವ ದೇಶಪ್ರೇಮಕ್ಕಿಂತ ಹೆಚ್ಚು ಈ ಪಕ್ಷಕ್ಕೆ ಇದೆ ಅನ್ನೋದು ಸುಳ್ಳಲ್ಲ. ಹಿಂದೂ ಸಮಾಜವನ್ನು, ಹಿಂದೂ ಸಂತರನ್ನು, ಹಿಂದೂ ಕಾರ್ಯಕರ್ತರನ್ನು ಅತಿಯಾಗಿಯೇ ಪ್ರೀತಿಸುತ್ತದೆ. ಈ ಕಾರಣಕ್ಕಾಗಿಯೇ ಉಳಿದೆಲ್ಲಾ ಪಕ್ಷಗಳು ಹಿಂದೂ ಧರ್ಮದ ವಿರುದ್ಧ ನಿಲ್ಲಲು ಆರಂಭಿಸುತ್ತೆ. ಹಿಂದೂಗಳನ್ನು, ಬಿಜೆಪಿಯನ್ನು ಧ್ವೇಷಿಸುವ ಭರದಲ್ಲಿ ಹಿಂದೂ ಧರ್ಮವನ್ನೇ ಧ್ವೇಷಿಸಲು ಆರಂಭಿಸಿದ್ದವು ಉಳಿದ ಪಕ್ಷಗಳು. ತಮ್ಮ ಪಕ್ಷ ಜಾತ್ಯಾತೀತ ಪಕ್ಷ ಎಂಬ ಪಟ್ಟವನ್ನು ಗಟ್ಟಿ ಮಾಡಿಕೊಳ್ಳಲು ಹಿಂದೂ ಧರ್ಮವನ್ನು ಕಾಲಡಿಗೆ ಹಾಕಿ ತುಳಿಯಲು ಆರಂಭಿಸಿತ್ತು. ಕಾಂಗ್ರೆಸ್ ಪಕ್ಷಕ್ಕಂತೂ ಕೇಸರಿ ಕಂಡರೆ ಉರಿದು ಬೀಳುವಂತಿತ್ತು.

ಕಳೆದ ಬಾರಿ ಕಾಂಗ್ರೆಸ್‍ನ ಓರ್ವ ವ್ಯಕ್ತಿ, “ವಿಶ್ವ ಹಿಂದೂ ಪರಿಷತ್ತಿಗೆ” ಪರ್ಯಾಯವಾಗಿ “ಭಾರತೀ ಹಿಂದೂ ಪರಿಷತ್” ಎಂಬ ಸಂಘಟನೆಯನ್ನು ಸೃಷ್ಟಿಸಿದ್ದರು. ಆದರೆ ಅದಾದ 2 ದಿನದಲ್ಲಿ ಕಾಂಗ್ರೆಸ್ ಹೈಕಮಾಂಡ್‍ಗಳ ಆದೇಶ ಹೊರ ಬೀಳುತ್ತೆ. ಯಾವುದೇ ಕಾರಣಕ್ಕೂ ಹಿಂದು ಧರ್ಮದ ಹೆಸರಿನಲ್ಲಿ ಕಾಂಗ್ರೆಸ್ ಸಂಘಟನೆ ಕಟ್ಟುವಂತಿಲ್ಲ ಎಂದು ಕಟ್ಟಪ್ಪಣೆ ಮಾಡಿತ್ತು. ಅದರಂತೆಯೇ ಜಿಲ್ಲಾ ಕಾಂಗ್ರೆಸ್ ಭಾರತೀಯ ಹಿಂದೂ ಪರಿಷತ್ ಸಂಘಟನೆಯನ್ನು ಬರ್ಖಾಸ್ತುಗೊಳಿಸಿತ್ತು.

ಮುಸಲ್ಮಾನ ಸಂಘಟನೆಗಳಾದ ಪಿಎಫ್‍ಐ ಹಾಗೂ ಕೆಎಫ್‍ಡಿ ಸಂಘಟನೆಗಳನ್ನು ಚೆನ್ನಾಗಿಯೇ ಬೆಳೆಸಿತ್ತು ಕಾಂಗ್ರೆಸ್. ಈ ಸಂಘಟನೆಗಳಿಂದ ಓಟು ಪಡೆಯುವ ಒಳತಂತ್ರವನ್ನು ಅನುಸರಿಸುತ್ತಲೇ ಇತ್ತು. ಆದರೆ ಯಾವಾಗ ಎಸ್‍ಡಿಪಿಐ ಎಂಬ ಮುಸ್ಮಾನರ ಪಕ್ಷವೊಂದು ಉದಯವಾಯಿತೋ ಅಂದಿನಿಂದ ಕಾಂಗ್ರೆಸ್‍ಗೆ ಹಿನ್ನೆಡೆಯಾಗಿತ್ತು. ಆದರೂ ಹಿಂಬಾಗಿಲಲ್ಲಿ ಅವುಗಳಿಗೆ ಪ್ರೋತ್ಸಾಹವನ್ನು ನೀಡಿ ಅವುಗಳನ್ನು ಸಮರ್ಥವಾಗಿಯೇ ಉಪಯೋಗಿಸುತ್ತಿದ್ದು ಮುಸಲ್ಮಾನರ ಪಕ್ಷ ಎಂದೆನಿಸಿಕೊಂಡಿದೆ.

ಕಾಂಗ್ರೆಸ್‍ನ ಇಬ್ಬಗೆ ನೀತಿಗೆ ಇದಕ್ಕಿಂತಾ ಉದಾಹರಣೆ ಬೇಕಾ..? ಉಡುಪಿಯಲ್ಲಿ ನಡೆಯುವ ಧರ್ಮ ಸಂಸತ್ ಕೇವಲ ಒಂದು ಪಕ್ಷಕ್ಕೆ ಸೀಮಿತವಾಗಿಲ್ಲ. ಅದು ಸಾದು ಸಂತರ ಸಮಾಗಮ. ದೇಶದಾದ್ಯಂತ ಸಾವಿರಾರು ಸಂತರು ಒಂದು ಗೂಡುವ ಸುಸಂದರ್ಭ. ಆದರೆ ಇದರಲ್ಲೂ ರಾಜಕೀಯ ಬೆರೆಸುವ ಕಾಂಗ್ರೆಸ್ಸಿಗರಿಗೆ ಏನನ್ನಬೇಕೋ ಗೊತ್ತಿಲ್ಲ.

ಹಿಂದೂ ಧರ್ಮದ ಸಾಂಸ್ಕøತಿಕ ಲೋಕವೇ ಅನಾವರಣಗೊಳ್ಳುತ್ತಿರುವ ಈ ಧರ್ಮ ಸಂಸದ್‍ಗೆ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಅಡಿಯಲ್ಲಿ ಕೆಲಸ ಮಾಡುವ ವಿವಿಧ ಸಂಘಟನೆಗಳನ್ನು ಹೊರತುಪಡಿಸಿ ಇನ್ನಿತರ ಯಾವುದೇ ರಾಜಕೀಯ ಪಕ್ಷಗಳ ಮುಖಂಡರುಗಳು ಕನಿಷ್ಟ ಬ್ಯಾನರನ್ನೂ ಹಾಕಿಲ್ಲವೆಂದರೆ ನಂಬಲೇಬೇಕು. ಯಾವೊಬ್ಬ ಕಾಂಗ್ರೆಸ್ಸಿನ ವ್ಯಕ್ತಿಯೂ ಈ ಸಮ್ಮೇಳನಕ್ಕೆ ಬೆಂಬಲ ನೀಡಿಲ್ಲ ಎಂದಾದರೆ ಜಾತ್ಯಾತೀತ ಮುಖವಾಡದ ರಾಜಕೀಯ ಸ್ಥಿತಿ ಎಷ್ಟರ ಮಟ್ಟಿಗೆ ಇರಬಹುದು.

ಅನುಮತಿಯಿಲ್ಲದೆ ನಡೆದ ಬೈಕ್ ರ್ಯಾಲಿ-ಕಾಂಗ್ರೆಸ್ ಮಾತ್ರ ಜಾಲಿ..!!!

ಕಾಂಗ್ರೆಸ್‍ನ ಯಾವುದೇ ಕಾರ್ಯಕ್ರಮವಿದ್ದರೂ ಅದಕ್ಕೆ ನಿರಾಯಸವಾಗಿ ಅನುಮತಿ ನೀಡುವ ಸರ್ಕಾರ ಕೇಸರೀ ಕಂಡರೆ ಮಾತ್ರ ಕೆಂಡ ಕಾರುತ್ತೆ. ಧರ್ಮ ಸಂಸದ್‍ಗೆ ಸಂಬಂಧ ಪಟ್ಟಂತೆ ನವೆಂಬರ್ 19ರಂದು ಮಂಗಳೂರಿನಲ್ಲಿ ಬೃಹತ್ ಬೈಕ್ ಜಾಥಾ ಆಯೋಜಿಸಲಾಗಿತ್ತು. ಆದರೆ ಇದಕ್ಕೆ ಸರ್ಕಾರ ಅನುಮತಿಯೇ ನೀಡಲಿಲ್ಲ. ಸರ್ಕಾರದ ಕರಾಳ ಮುಖವನ್ನು ಮತ್ತೊಮ್ಮೆ ಅನಾವರಣಗೊಳಿಸಿತ್ತು. ಆದರೂ ಬೈಕ್ ಜಾಥಾ ನಡೆದೇ ಬಿಟ್ಟಿತ್ತು.

ಇತ್ತೀಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಉಡುಪಿಗೆ ಆಗಮಿಸಿದ್ದರು. ಈವರೆಗೆ ಶ್ರೀ ಕೃಷ್ಣನ ಸನ್ನಿಧಾನಕ್ಕೆ ಸೌಜನ್ಯಕ್ಕೂ ಆಗಮಿಸಿಲ್ಲ. ಅಷ್ಟೊಂದು ವೈರತ್ವ ಯಾಕೋ ಶ್ರೀ ಕೃಷ್ಣನೇ ಬಲ್ಲ. ಪೇಜಾವರ ಶ್ರೀಗಳು ಹಿಂದೂ ಧರ್ಮವನ್ನು ರಕ್ಷಣೆ ಮಾಡುತ್ತಾರೆಂದೋ ಅಥವಾ ಕನಕ ದಾಸನಿಗೆ ಒಲಿದ ಶ್ರೀ ಕೃಷ್ಣನನ್ನು ವೈಷ್ಣವ ಪಂಥದ ಸ್ವಾಮೀಜಿಯೋರ್ವರು ಪೂಜಿಸುತ್ತಾರೆಂದೋ..?

ಬಾಂಬ್ ಪತ್ತೆ-ಕಾಂಗ್ರೆಸ್ ನಾಪತ್ತೆ..!!!

ಉಡುಪಿಯಲ್ಲಿ ನಡೆಯುವ ಧರ್ಮ ಸಂಸದ್‍ಗೆ ಕೆಲವೇ ದಿಗಳಿರುವಾಗಲೇ ಉಡುಪಿಯಲ್ಲಿ ನಾಡಬಾಂಬ್‍ಗಳು ಪತ್ತೆಯಾಗಿವೆ. ಕಾರ್ಯಕ್ರಮಕ್ಕೆ ಲಕ್ಷ ಲಕ್ಷ ಜನರು ಆಗಮಿಸುವ ನಿರೀಕ್ಷೆ ಇದೆ. ಉಗ್ರರ ಬೆದರಿಕೆಯುಳ್ಳ ದೇಶದ ಅನೇಕ ಹಿರಿಯರು ಈ ಒಂದು ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಈ ಸಮಯದಲ್ಲಿ ನಾಡ ಬಾಂಬ್ ಪತ್ತೆಯಾಗಿರುವುದು ಬೆಚ್ಚಿ ಬೀಳಿಸಿದೆ. ಆದರೆ ಸರ್ಕಾರ ಮಾತ್ರ ಈ ಬಗ್ಗೆ ಖ್ಯಾರೇ ಅನ್ನುತ್ತಿಲ್ಲ. ಅಲ್ಲಿಗೆ ಬರುವ ಓಟುಗಳು ಭಾರತೀಯ ಜನತಾ ಪಕ್ಷಕ್ಕೆ ಸಂಬಂಧಿಸಿದೆಂದೋ ಅಥವಾ ಹಿಂದೂ ಧರ್ಮ ನಾಶವಾಗಲಿ ಎಂಬ ನಿರ್ಲಕ್ಷವೋ…!!!

ಒಟ್ಟಾರೆ ಈ ದೇಶದ ಕಾಂಗ್ರೆಸ್ಸಿಗರ ಮನಸ್ಥಿತಿ ಅದ್ಯಾವಾಗ ಬದಲಾಗುತ್ತೋ ದೇವನೇ ಬಲ್ಲ.ಹಿಂದಿನಿಂದಲೂ ಜಾತ್ಯಾತೀತ ತತ್ವಗಳನ್ನೇ ಅನುಸರಿಸಿಕೊಂಡು ಬಂದ ಕಾಂಗ್ರೆಸ್ ಪಕ್ಷ ಈಗ ತನ್ನ ಮುಖವನ್ನೇ ಬದಲಾಯಿಸಿಕೊಂಡಿದೆ. ನೆಹರೂರಿಂದ ಆರಂಭವಾದ ಹಿಂದೂ ವಿರೋಧಿ ನೀತಿ ಇಂದು ತನ್ನ ಉಗ್ರ ಸ್ವರೂಪವನ್ನೇ ಪಡೆದುಕೊಂಡಿದೆ. ಅಲ್ಪ ಸಂಖ್ಯಾತರ ಓಲೈಕೆಗಾಗಿ ಹಿಂದೂಗಳನ್ನು ಧಮನಿಸುತ್ತಿದ್ದ ಕಾಂಗ್ರೆಸ್‍ಗೆ ಇದು ಈಗ ಕೇವಲವಾಗಿ ಬಿಟ್ಟಿದೆ.

ನೆನಪಿದೆಯಾ ಹಿಂದೂ ವಿರೋಧಿ ನೀತಿಯ ಎಫೆಕ್ಟ್…!!!

ಕಳೆದ ಬಾರಿಯ ಲೋಕಸಭೆಯ ಚುನಾವಣೆಯಲ್ಲಿ ಕಾಂಗ್ರೆಸ್ ಹೀನಾಯವಾಗಿ ಸೋಲಲು ಕಾಂಗ್ರೆಸ್ ಸರ್ಕಾರದ ಬ್ರಹ್ಮಾಂಡ ಭ್ರಷ್ಟಾಚಾರ ಎನ್ನುವುದು ಸತ್ಯ. ಆದರೆ ಅದಕ್ಕಿಂತಲೂ ಆ ಸರ್ಕಾರ ಅನುಸರಿಸಿದ್ದ ಹಿಂದೂ ವಿರೋಧಿ ನೀತಿಗಳೇ ಅವರ ಸೋಲಿಗೆ ಪ್ರಮುಖ ಕಾರಣ ಎಂದು ಹೇಳಲಾಗುತ್ತಿದೆ. ಅದು ಅಕ್ಷರಷಃ ಸತ್ಯ. ಯಾಕೆಂದರೆ ಕಳೆದ ಯುಪಿಎ ಅವಧಿಯಲ್ಲಿ ಅನುಸರಿಸುತ್ತಿದ್ದ ಹಿಂದೂ ವಿರೋಧಿ ನೀತಿ ಅವರಿಗೆ ಮುಳುವಾಗಿದೆ.

ಕಳೆದ ಯುಪಿಎ ಸರ್ಕಾರದ ಅವಧಿಯಲ್ಲಿ ಉಗ್ರರಿಗೆ ಪ್ರೋತ್ಸಾಹ ನೀಡಲಾಗುತ್ತಿತ್ತು. ಮುಸಲ್ಮಾನರನ್ನು ಓಲೈಸುವ ಭರದಲ್ಲಿ ಉಗ್ರರಿಗೂ ಸಹಕಾರ ಮಾಡುತ್ತಿದ್ದರು ಕಾಂಗ್ರೆಸ್ಸಿಗರು. ಹಲವಾರು ಉಗ್ರ ಕೃತ್ಯಗಳಲ್ಲಿ ಭಾಗಿಯಾಗಿದ್ದ ಕಸಬ್ ಸಹಿತ ಅನೇಕ ಉಗ್ರರನ್ನು ಕೋಟಿ ಕೋಟಿ ಖರ್ಚು ಮಾಡಿ ಸಾಕುತ್ತಿದ್ದರು ಇದೇ ಕಾಂಗ್ರೆಸ್ ನಾಯಕರು. ಅಂದಿನ ಕೇಂದ್ರ ಗೃಹ ಮಂತ್ರಿ ಸುಶೀಲ್ ಕುಮಾರ್ ಶಿಂಧೆ “ಮುಸಲ್ಮಾನರು ಅಮಾಯಕರು ಅವರನ್ನು ಬಂಧಿಸಬೇಡಿ” ಎಂದು ಬೊಗಳೆ ಬಿಟ್ಟಿದ್ದರು. ಅವರಿಗಾಗಿ ಕಾಯ್ದೆಯೊಂದನ್ನು ತರಲು ಮುಂದಾದರು. ಇಷ್ಟು ಸಾಕಲ್ವೇ ಹಿಂದೂಗಳ ಧಮನಕ್ಕೆ ನಡೆಯುತ್ತಿರುವ ಷಡ್ಯಂತ್ರ.

ಕಾಂಗ್ರೆಸ್‍ನ ಹಿಂದೂಗಳಿಗೆ ರಾಮ ಮಂದಿರ ಬೇಡವಾ…?

ರಾಮ ಮಂದಿರಕ್ಕಾಗಿ ಹಿಂದೂ ಸಂಘಟನೆಗಳು ಹೋರಟ ನಡೆಸುವುದು ಸಹಜ. ಜವಬ್ಧಾರಿಯುಳ್ಳ ರಾಜಕೀಯ ಪಕ್ಷವಾದ ಭಾರತೀಯ ಜನತಾ ಪಕ್ಷ ಕೂಡಾ ಇದರ ಬೆಂಬಲಕ್ಕೆ ನಿಂತಿದೆ. ಆದರೆ ದಾಳಿಕೋರ ಬಾಬರ್ ನಮ್ಮ ಶ್ರದ್ಧಾ ಕೇಂದ್ರವಾದ ರಾಮಮಂದಿರವನ್ನು ನಾಶ ಮಾಡಿ ಮಸೀದಿ ನಿರ್ಮಿಸಿದರೆ ಅದಕ್ಕೆ ಕಾಂಗ್ರೆಸ್ ಬೆಂಬಲ..! ನಂತರ ಅದನ್ನು ಒಡೆದಿದ್ದ ಹಿಂದೂ ನಾಯಕರ ಮೇಲೆ ಕಾಂಗ್ರೆಸ್ ದಾಳಿ. ಇಂದಿಗೂ ಕಾಂಗ್ರೆಸ್ ಎಂಬ ಹಿಂದೂ ವಿರೋಧಿ ಪಕ್ಷ ರಾಮಮಂದಿರದ ವಿರೋಧ ಮಾತನಾಡುತ್ತದೆಯೇ ಹೊರತು ಎಂದಿಗೂ ರಾಮ ಮಂದಿರದ ಪರ ಮಾತನಾಡಿಯೇ ಇಲ್ಲ.

ಇಂದಿಗೂ ಅನೇಕ ಆಕ್ರಮಣಕಾರಿಗಳ ದಾಳಿಗೆ ತುತ್ತಾಗಿರುವ ದೇವಸ್ಥಾನಗಳು ಹಾಗೆನೇ ಇದೆ. ಆದರೆ ಕಾಂಗ್ರೆಸ್ ಮಾತ್ರ ಚಕಾರವೆತ್ತಲ್ಲ. ಈ ಬಗ್ಗೆ ಮಾತನಾಡಿದ್ರೆ ಮುಸಲ್ಮಾನರ ಓಟು ಕಳೆದುಕೊಳ್ಳುತ್ತೇವೋ ಎನ್ನುವ ಭಯ ಕಾಂಗ್ರೆಸ್ಸಿಗರಿಗೆ. ದೇವಸ್ಥಾನಗಳ ಮೇಲೆ ಆಕ್ರಮಣ ಮಾಡಿದ ಎಲ್ಲಾ ಆಕ್ರಮಣಕಾರಿಗಳು ವಿದೇಶಿ ದಾಳಿಕೋರರು. ಅವರ್ಯಾರೂ ಭಾರತೀಯರಲ್ಲ. ಹಾಗಾದರೆ ಕಾಂಗ್ರೆಸ್ ಪಕ್ಷದ ನಿಲುವೇನು..?

ವಿನಾಶಕಾಲೇ ವಿಪರೀತ ಬುದ್ಧಿ…

ಇದು ಕಾಂಗ್ರೆಸ್ ಪಕ್ಷಕ್ಕೆ ಹೇಳಿ ಮಾಡಿಸಿದಂತಿದೆ. ಕಳೆದ ಕಾಂಗ್ರೆಸ್ ಆಡಳಿತದ ಕೇಂದ್ರ ಸರ್ಕಾರವೂ ತನ್ನ ಕಡೇಯ ಅವಧಿಯಲ್ಲಿ ವಿಪರೀತ ಬುದ್ಧಿಯಿಂದ ತನ್ನ ಆಡಳಿತವನ್ನೇ ಕಳೆದುಕೊಂಡಿತ್ತು. ಈಗ ಮುಂದಿನ ಸರದಿ ರಾಜ್ಯ ಕಾಂಗ್ರೆಸ್ ಸರ್ಕಾರದ್ದು. ಹಿಂದೂಗಳ ವಿರುದ್ಧ ಧಮನ ನೀತಿಯನ್ನು ಅನುಸರಿಸುತ್ತಿರುವ ರಾಜ್ಯ ಕಾಂಗ್ರೆಸ್ ಸರ್ಕಾರ ಈಗ ಸಮಸ್ತ ಹಿಂದೂ ಬಾಂಧವರು ಪೂಜಿಸುವ ಶ್ರೀ ಕೃಷ್ಣನ ನಾಡಿನಲ್ಲಿ ನಡೆಯುವ ಬೃಹತ್ ಧರ್ಮ ಸಂಸತ್‍ಗೆ ವಿರೋಧಾಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದಾರೆ. ಇದು ಮುಂದಿನ ಕಾಂಗ್ರೆಸ್ ವಿನಾಶದ ಮುನ್ಸೂಚನೆಯಲ್ಲದೆ ಮತ್ತೇನೂ ಅಲ್ಲ.

ಹಿಂದೂ ಧರ್ಮವನ್ನು ವಿರೋಧಿಸಿ ಅದರ ಆಚರಣೆಗಳನ್ನು ಧಿಕ್ಕರಿಸುವ ರಾಜನಿರುವಾಗ ಪ್ರಜೆಗಳು ಅದು ಹೇಗೆ ನಿರ್ಭೀತಿಯಿಂದ ಇರಲು ಸಾಧ್ಯ..? ಹಿಂದೂಗಳ ಓಟು ಬೇಕು ಆದರೆ ಹಿಂದೂಗಳು ಆಚರಿಸುವ ಆಚರಣೆಗಳು, ಅವುಗಳ ಹಬ್ಬ ಹಾಗೂ ಹಿಂದೂ ಸಮಾರಂಭಗಳು ಬೇಡವೆಂದರೆ ಇದರ ಅರ್ಥವೇನು..? ಮುಂದಿನ ಚುನಾವಣೆಯಲ್ಲಿ ಕಳೆದ ಯುಪಿಎ ಸರ್ಕಾರ ಅನುಭವಿಸಿದಂತೆ ತೀವ್ರ ಮುಜುಗರವನ್ನು ಎದುರಿಸುವುದಂತು ಸುಳ್ಳಲ್ಲ…

-ಸುನಿಲ್ ಪಣಪಿಲ

Tags

Related Articles

Close