ಅಂಕಣ

ಈ ಗ್ಯಾಂಗ್ ಇರುತ್ತಿದ್ದರೆ ಈ ಗುಂಡಿಗಳು ಇರುತ್ತಿರಲಿಲ್ಲ! ಸಿದ್ಧರಾಮಯ್ಯನವರೇ. . . . ಗಮನಿಸುವಿರಾ?!

ಈ ಸರಕಾರಗಳು ವಿವಿಧ ರೀತಿಯಲ್ಲಿ ಜನರ ತೆರಿಗೆಯ ಹಣವನ್ನು ಕೊಳ್ಳೆ ಹೊಡೆದು ತಾನೂ ತಿಂದು ತಾನು ಟೆಂಡರ್ ನೀಡುವ ತನ್ನ ಆಪ್ತನಿಗೂ ತಿನ್ನಿಸಿ ಅದರ ಕೆಳಗೆ ಮತ್ತಿಬ್ಬರನ್ನು ಹುಟ್ಟಿಸಿ ಅವರಿಗೂ ಸ್ವಲ್ಪ ಹಂಚಿ ಕೊನೆಗೆ ತಾನೂ ಬಿಡುಗಡೆಗೊಳಿಸಿದ ಬೃಹತ್ ಮೊತ್ತದ ಅನುದಾನವು ಕಾರ್ಯಗತಗೊಳಿಸುವಾಗ ಅದು ಪ್ರಸಾದದಷ್ಟು ಚಿಕ್ಕದಾಗಿ ಅಷ್ಟೂ ತೃಪ್ತಿಕರವಾಗರುವುದೇ ಹೊರತು ಹೊಟ್ಟೇನೂ ತುಂಬದೆ ಕೆಲಸಾನೂ ಆಗದೆ ಅರೆಬರೆಯಾಗಿ ತನ್ನ ಅನುಕೂಲಕ್ಕೆ ಸರಕಾರವನ್ನು ನಡೆಸಿಕೊಳ್ಳುವರು ಅದೆಷ್ಟೋ ಜನ…. ಈ ರೀತಿ ಇದನ್ನೇಕೆ ಹೇಳುತ್ತಿದ್ದೇವೆ ಎಂದರೆ ರಾಜ್ಯದಲ್ಲಿ ಈ ಕೆಲ ಕಾಲಗಳ ಹಿಂದೆ ಗುಂಡಿಬಿದ್ದಿರುವ ರಸ್ತೆಗಳನ್ನು ಸರಿಪಡಿಸಲೆಂದೇ ಗ್ಯಾಂಗ್ ಮೆನ್‍ಗಳಿದ್ದರು ಆದರೆ ಅವರೆಲ್ಲಿ ಮಾಯವಾದರು ಎಂಬುವುದೇ ನಮ್ಮೆಲ್ಲರಿಗೂ ಪ್ರಶ್ನೆಯಾಗಿ ಕಾಡುತ್ತಿದೆ.

ಹೌದು ಮುಂಚೆ ರಸ್ತೆ ದುರಸ್ತಿಯಾದರೆ ಗ್ಯಾಂಗ್ ಮ್ಯಾನ್‍ಗಳು ಬಂದು ಅದನ್ನು ಸರಿಮಾಡುತ್ತಿದ್ದರು. ಇದರಿಂದ ವಾಹನ ಚಲಾವಣೆ ಮಾಡಲೂ ಯಾವುದೇ ತೊಂದರೆ ಇರಲಿಲ್ಲ. ಆರಾಮಾಗಿ ಒಂದು ಕಡೆಯಿಂದ ಇನ್ನೊಂದು ಕಡೆಗೆ ವಾಹನ ಚಲಾವಣೆ ಮಾಡಲು ಸುಲಭವಾಗುತ್ತಿತು!!. ಆದರೆ ಈಗ ಇದು ರಸ್ತೆಗಳೋ ಅಥವಾ ಹೊಂಡಗಳೋ ಎಂದು ಸಂಶಯ ಬರುವಂತಾಗಿದೆ.!! ಯಾಕೆಂದರೆ ರಸ್ತೆ ದುರಸ್ತಿಯಾದರೆ ಸರಿಪಡಿಸಲು ಯಾರೂ ಜನ ಇಲ್ಲದಂತಾಗಿದೆ. !! ಮಳೆಗಾಲದಲ್ಲಂತೂ ನಾವು ರಸ್ತೆಗೆ ಇಳಿಯುದಕ್ಕೇ ಭಯವಾಗಿ ಹೋಗುತ್ತದೆ… ಇನ್ನು ವಾಹನಚಾಲಕರ ಗತಿ ಹೇಗೆ ಎಂಬುವುದೇ ಅರ್ಥವಾಗುತ್ತಿಲ್ಲ.!! ಆದರೆ ಇವೆಲ್ಲಕ್ಕಿಂತ ಮುಂಚೆ ಈ ಗ್ಯಾಂಗ್ ಮ್ಯಾನ್‍ಗಳು ಯಾಕೆ ಕಾಣೆಯಾಗಿದ್ದಾರೆ ಎಂಬುದೇ ಅರ್ಥವಾಗುತ್ತಿಲ್ಲ.!! ಮುಂಚೆ ರಸ್ತೆ ಗುಂಡಿಗಳಾಗಿದ್ದರೆ ಅವರು ರಾತ್ರಿ ಹಗಲೆನ್ನದೆ ಎಷ್ಟು ಹೊತ್ತಾಗಿದ್ದರೂ ರಸ್ತೆಯಲ್ಲಿ ಸಣ್ಣ ಗುಂಡಿಗಳಾದರೂ ಅದನ್ನು ಸರಿಪಡಿಸಿಯೇ ಹೋಗುತ್ತಿದ್ದರು. ಹೀಗಾಗಿ ಜನರಿಗೂ ಯಾವುದೇ ತೊಂದರೆ ಇಲ್ಲದೆ ಯಾವುದೇ ಭಯವಿಲ್ಲದೆ ವಾಹನ ಸವಾರರು ವಾಹನವನ್ನು ಚಲಾಯಿಸುತ್ತಿದ್ದರು. ಆದರೆ ಈಗ ಮಾತ್ರ ಇಂತಹ ಗ್ಯಾಂಗ್ ಮ್ಯಾನ್‍ಗಳನ್ನು ಕಾಣುವುದೇ ಅಪರೂಪವಾಗಿದೆ.!!

ಮಳೆಗಾಲಕ್ಕೆ ಮುನ್ನವೇ ಅಂದರೆ ಮೇ ಮೊದಲ ವಾರದೊಳಗೆ ಒಳಚರಂಡಿ ,ತೆರೆದ ಚರಂಡಿ ತೋಡುಗಳು ಎತ್ತುವುದು, ಗುಂಡಿ ಬಿದ್ದ ರಸ್ತೆಗಳನ್ನು ದುರಸ್ತಿ ಮಾಡುವುದು ಅಪಾಯ ಸ್ಥಿಯಲ್ಲಿರುವ ಮರ ಅಥವಾ ಅವುಗಳ ಗೆಲ್ಲುಗಳ ವಿಲೇವಾರಿ ಮಾಡುವುದು ರಸ್ತೆಯ ಇಕ್ಕಡೆಗಳಲ್ಲಿ ಕಸಕಡ್ಡಿ ಹಳೆ ಕಟ್ಟಡಗಳ ತ್ಯಾಜ್ಯ ವಸ್ತುಗಳನ್ನು ಡಂಪಿಂಗ್ ಮಾಡುವುದು ಇದೆಲ್ಲ ಕೆಲಸಗಳನ್ನು ಈ ಗ್ಯಾಂಗ್ ಮ್ಯಾನ್‍ಗಳೇ ನಿರ್ವಹಿಸುತ್ತಿದ್ದರು. ಆದರೆ ಈಗ ಈ ಗ್ಯಾಂಗ್ ಮ್ಯಾನ್‍ಗಳನ್ನು ಬದಿಗೆ ತಳ್ಳುತ್ತಿದೆ ಎಂದು ಅನಿಸುತ್ತಿದೆ. ಎಲ್ಲಾ ಕೆಲಸಗಳನ್ನು ನಿರ್ವಹಿಸುತ್ತಿದ್ದ ಇವರನ್ನು ಮೂಲೆ ಗುಂಪು ಮಾಡಿತು ಸರಕಾರ.!! ಇದನ್ನು ಸರಕಾರ ನಿರ್ಲಕ್ಷ್ಯವಹಿಸುತ್ತಿದೆ.

ಮುಂಚೆ ಎಲ್ಲಾ ವಾರ್ಡ್‍ಗಳಲಲ್ಲಿ ಗುತ್ತಿಗೆ ನೀಡಿ ಗ್ಯಾಂಗ್ ಮ್ಯಾನ್‍ಗಳನ್ನು ಆಯ್ಕೆ ಮಾಡಿ ಗುಂಪುಗಳನ್ನಾಗಿ ರಚಿಸಲಾಗಿತ್ತು. ಹಾಗೆ ರಚಿಸಿದ ಗ್ಯಾಂಗ್ಮ್ಯಾನ್‍ಗಳು ತಮ್ಮ ಕರ್ತವ್ಯವನ್ನು ನಿಷ್ಠೆಯಿಂದ ಪಾಲಿಸುತ್ತಾ ಬರತ್ತಿದ್ದರು. ಇದರಿಂದ ನಮಗೂ ಸುಲಭವಾಗಿ ರಸ್ತೆಯಲ್ಲಿ ವಾಹನ ಚಲಾಯಿಸಬಹುದಿತ್ತು. ಇವರ ಪ್ರತೀ ಗ್ಯಾಂಗ್‍ನಲ್ಲಿ 8 ಮಂದಿ ಕೂಲಿ ಕಾರ್ಮಿಕರು ಕೆಲಸ ನಿರ್ವಹಿಸುತ್ತಿದ್ದರು. ಇವರ ಜೊತೆ ಕತ್ತಿ, ಹಾರೆ, ಪಿಕ್ಕಾಸು, ಬುಟ್ಟಿ ಇತ್ಯಾದಿ ಇವರ ಜೊತೆ ಇರುತ್ತಿತ್ತು. ಈ ಗ್ಯಾಂಗ್ ನಿರಂತರವಾಗಿ ಮೂರು ತಿಂಗಳು ವಾರ್ಡ್ ವ್ಯಾಪ್ತಿಯ ಚರಂಡಿಯ ಹೂಳೆತ್ತುವುದು, ಮರಮಟ್ಟುಗಳನ್ನು ಕಡಿಯುವುದು ರಸ್ತೆ ಚರಂಡಿಗಳಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳವುದು ರಸ್ತೆ ಗುಂಡಿಗಳನ್ನು ಸರಿ ಮಾಡುವುದರ ಜೊತೆಗೆ ಇದೆಲ್ಲವುಗಳನ್ನು ಕಾರ್ಯನಿರ್ವಹಿಸುತ್ತಿದ್ದರು. ಆದರೆ ಇತ್ತೀಚೆಗೆ ಈ ಗ್ಯಾಂಗ್‍ಮಾನ್‍ಗಳನ್ನೇ ಕಾಣುವುದು ತುಂಬಾ ಕಡಿಮೆಯಾಗಿದೆ. ಹೀಗಾಗಿ ಅನೇಕ ರಸ್ತೆಯ ಮಧ್ಯೆ ಇರುವ ಮ್ಯಾನ್ ಹೋಲ್‍ಗಳ ಕಾಮಗಾರಿ ಕೂಡ ಮಂದಗತಿಯಲ್ಲಿ ಸಾಗಿವೆ. ರಸ್ತೆ ಮಧ್ಯೆ ಇರುವ ಮ್ಯಾನ್ ಹೋಲ್‍ಗಳ ಕಾಮಗಾರಿ ಕೂಡ ಮಂದಗತಿಯಲ್ಲಿ ಕಾಣ ಸಿಗುತ್ತಿದೆ. ಇದು ಕೂಡಾ ಮಂದಗತಿ ಸಾಗಿವೆ. ಇದು ಕೂಡಾ ವಾಹನ ಸಂಚಾರಕ್ಕೆ ತೊಂದರೆಯಾಗಿ ಪರಿಣಮಿಸಿವೆ. ಇದರಿಂದ ಸೃಷ್ಠಿಯಾಗುವ ಟ್ರಾಪಿಕ್ ಜಾಂ ಮಳೆಗಾಲದಲ್ಲಿ ಮತ್ತಷ್ಟು ಅಪಘಾತಕ್ಕೆ ಕಾರಣವಾಗಿದೆ.

ಈ ಕೆಳಗಿನ ಸಮೀಕ್ಷೆಯನ್ನು ಗಮನಿಸಿದರೆ ಸಿದ್ಧರಾಮಯ್ಯನವರ ಸರಕಾರದ ಸಾಧನೆ ಬಲುಬೇಗನೇ ಅರಿವಾಗುತ್ತದೆ!

ಗ್ಯಾಂಗ್ ಮಾನ್ ಮರೆಯಾಗುವಿಕೆಯಿಂದ ಅನೇಕ ತೊಂದರೆಗಳನ್ನು ಅನುಭವಿಸಬೇಕಾಗುತ್ತದೆ. ಅದೇನು ತೊಂದರೆ ಎಂದರೆ ಮೊದಲನೆಯನಾದಾಗಿ ಇದರಿಂದಾಗಿ ಅನೇಕ ಜನ ಉದ್ಯೋಗವನ್ನು ಕಳೆಯುವಂತಾಗಿದೆ.!! ದೇಶದಲ್ಲಿ ಹೆಚ್ಚುತ್ತಿರುವ ಜನಸಂಖ್ಯೆಯಿಂದ ಅದೆಷ್ಟೋ ಜನರು ಉದ್ಯೋಗವಿಲ್ಲದೆ ಅಲೆದಾಡುವಂತಾಗಿದೆ. ಆದರೆ ಇದಕ್ಕಿಂತ ಮುಂಚೆ ಈ ಗ್ಯಾಂಗ್ ಮಾನ್‍ಗಳಿಗೆ ಅದೆಷ್ಟೋ ಜನರಿಗೆ ಉದ್ಯೋಗ ಫಲಿಸಿತ್ತು…. ಆದರೆ ಇತ್ತೀಚೆಗೆ ಈ ಗ್ಯಾಂಗ್ ಮ್ಯಾನ್‍ಗಳೇ ಮರೆಯಾಗಿರುವುದರಿಂದ ಅಂದರೆ ಸರಕಾರವೇ ಇದರತ್ತ ಒಲವು ತರಿಸದೇ ಇರುವುದರಿಂದ ಅನೇಕ ಜನರಿಗೆ ಉದ್ಯೋಗವಿಲ್ಲದೆ ಅಲೆದಾಡುವ ಸ್ಥಿತಿ ಬಂದೊದಗಿದೆ ಅಂದರೆ ವಿಷಾದನೀಯ!! ಇದನ್ನೆಲ್ಲಾ ಸರಕಾರ ಮನವರಿತಿಕೊಂಡು ಗ್ಯಾಂಗ್‍ಮಾನ್‍ಗಳನ್ನು ಆಯ್ಕೆ ಮಾಡಿದರೆ ಮುಂದೆ ಜನರಿಗೆ ಉದ್ಯೋಗ ಹರಸಿ ಸುಖಮಯ ಜೀವನ ನಡೆಸಲು ಸಾಧ್ಯವಾಗುತ್ತದೆ. ಇದರಿಂದ ಅನೇಕ ಜನರಗೆ ಉದ್ಯೋಗ ನೀಡಿದಂತಾಗುತ್ತದೆ. ನಿರುದ್ಯೋಗಿಗಳು ಎನ್ನುವ ಮಾತಾದರೂ ಸ್ವಲ್ಪ ಮಟ್ಟಿಗೆ ಕಡಿಮೆಯಾಗಬಹುದಲ್ಲವೇ?

ಎರಡನೆಯದಾಗಿ ಗ್ಯಾಂಗ್ ಮ್ಯಾನ್‍ಗಳು ನಿರಂತರವಾಗಿ ಕೆಲಸ ನಿರ್ವಹಿಸುತ್ತಿದ್ದರೆ ರಸ್ತೆಗಳ ಗುಂಡಿಗಳ ನಿರ್ಮೂಲನೆ ಮಾಡಬಹುದು. ಆದರೆ ಗ್ಯಾಂಗ್ ಮ್ಯಾನ್‍ಗಳೇ ಇಲ್ಲದೆ ಸಣ್ಣ ರಸ್ತೆ ಗುಂಡಿಗಳು ಹೋಗಿ ದೊಡ್ಡ ದೊಡ್ಡ ಹೊಂಡಗಳೇ ಆಗುತ್ತಾ ಹೋಗುತ್ತಿವೆ…. ಆ ಸಮಯದಲ್ಲಿ ಮತ್ತೆ ಸರಕಾರ ರಸ್ತೆ ಗುಂಡಿಗಳನ್ನು
ಮುಚ್ಚುವುದಕ್ಕೋಸ್ಕರ ಮತ್ತೆ ಟೆಂಡರ್ ಕರೆಯ ಬೇಕಾಗುತ್ತದೆ.!! ಅದನ್ನು ಇಂಜಿನಿಯ್‍ಗೆ ವಹಿಸಲಾಗುತ್ತದೆ ಅಲ್ಲಿ ಸ್ವಲ್ಪ ಮಟ್ಟಿನ ಹಣ ವಿಲೇವಾರಿ ಮಾಡಲಾಗುತ್ತದೆ. ನಂತರ ಗ್ರಾಮ ಪಂಚಾಯತ್ ಅಧೀನಕ್ಕೆ ಬರುತ್ತದೆ. ಹೀಗೆ ಒಂದು ಕಡೆಯಿಂದ ಇನ್ನೊಂದು ಕಡೆಗೆ ಪ್ರಕ್ರಿಯೆಗಳು ಹೋದಾಗ ಅದೆಷ್ಟೋ ಹಣ ಪೋಲಾಗುತ್ತದೆ. ಹೀಗಾಗಿ ಮತ್ತೆ ಹೊಸತಾಗಿ ಗ್ಯಾಂಗ್‍ಮ್ಯಾನ್ ತಂಡವನ್ನು ರಚಿಸ ಬೇಕಾಗುತ್ತದೆ. ಜನರಿಂದ ತೆಗೆದುಕೊಂಡ ತೆರಿಗೆ ಹಣದಿಂದ ಸರಕಾರ ಅದೆಷ್ಟೋ ಹಣವನ್ನು ಈ ರೀತಿಯಾಗಿ ಪೋಲು ಮಾಡುವ ಬದಲು ಒಳ್ಳೆಯ ಕೆಲಸಕ್ಕಾದರೂ ಉಪಯೋಗಿಸಬಹುದಲ್ಲವೇ?

ಮಳೆಗಾಲ ಬಂದಾಗ ಪೂರ್ವ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಹೇಳಿಕೊಳ್ಳಲಾಗುತ್ತದೆ ಎಂದು ಬೊಗಳೆ ಬಿಡುತ್ತಾರೆ ಅಷ್ಟೆ!! ಈ ರೀತಿ ಗ್ಯಾಂಗ್‍ಮ್ಯಾನ್‍ಳನ್ನು ಆಯ್ಕೆ ಮಾಡಿದರೆ ರಸ್ತೆ ಗುಂಡಿಗಳು ಮುಚ್ಚಿ ಯಾವುದೇ ರಸ್ತೆ ಅಪಘಾತವಾಗುವುದನ್ನು ಕಡಿಮೆ ಮಾಡಬಹುದು ಹೀಗಾಗಿ ಅದೆಷ್ಟೋ ಜನರ ಪ್ರಾಣವಾದರೂ ಉಳಿಯಬಹುದು… ಅದಲ್ಲದೇ ಇಡೀ ದೇಶದ ಸ್ವಚ್ಛತೆಯನ್ನು ಕಾಪಾಡಬಹುದು. ಇದು ಇಡೀ ರಾಜ್ಯಾದ್ಯಂತ ಬೆಳೆಯುತ್ತಿರುವ ನಗರ ಮತ್ತು ಗ್ರಾಮಾಂತರ ಪ್ರದೇಶದ ಸಮಸ್ಯೆಯಾಗಿದೆ. ರಸ್ತೆಯಲ್ಲಿ ಗುಂಡಿಗಳನ್ನು ಗ್ಯಾಂಗ್ ಮ್ಯಾನ್ ಆಯ್ಕೆಯನ್ನು  ಮಾಡಿ ಮುಂದೆ ಅಪಾಯವಾಗದಂತೆ ಸರಕಾರ ಇದರತ್ತ ಗಮನಹರಿಸಬೇಕು.

-ಶೃಜನ್ಯಾ

Tags

Related Articles

Close