ಪ್ರಚಲಿತ

ನಾನು ಇರುವ ತನಕ ಹಿಂದೂ ರಾಷ್ಟ್ರವಾಗಲು ಬಿಡೋದಿಲ್ಲ ಎಂದವರಿಗೆ ನಾಗಾಸಾಧುಗಳು ಭವಿಷ್ಯ ನುಡಿದರಂತೆ.! ಏನಂತೆ..?

ಮೊನ್ನೆ ಮೊನ್ನೆವರೆಗೂ “ಭಾರತವನ್ನು ಹಿಂದೂ ರಾಷ್ಟ್ರ ಆಗಲು ಬಿಡೋದಿಲ್ಲ” ಎಂಬ ಹೇಳಿಕೆ ಕೊಡುತ್ತಿದ್ದ, ದೇಶದಲ್ಲಿ 10 ತಿಂಗಳು ಆಡಳಿತ ಮಾಡಿ ಮಾಜಿ ಪ್ರಧಾನಿ ಎನಿಸಿಕೊಂಡ ಹೆಚ್.ಡಿ.ದೇವೇಗೌಡರ ಪಕ್ಷ ಈಗ ಚುನಾವಣೆ ಬರುತ್ತಿದ್ದಂತೆಯೇ ಉಲ್ಟಾ ಹೊಡೆದಿದೆ. ಅಲ್ಪ ಸಂಖ್ಯಾತರ ಓಟಿಗಾಗಿ, ಎಡಪಂಥೀಯರ ಓಲೈಕೆಗಾಗಿ ಪಕ್ಕಾ ನಾಸ್ತಿಕರ ರೀತಿ ಮಾತನಾಡುತ್ತಿದ್ದ ಜೆಡಿಎಸ್ ಪಕ್ಷದ ನಾಯಕರಿಗೆ ಈಗ ಹಿಂದೂ ಧರ್ಮದ ಸ್ವಾಮೀಜಿಗಳು ಹಾಗೂ ನಾಗಾ ಸಾಧುಗಳು ನೆನಪಾಗುತ್ತಿದ್ದಾರೆ.

“ಮುಂದಿನ 2018ರ ರಾಜ್ಯ ವಿಧಾನ ಸಭಾ ಚುನಾವಣೆಯಲ್ಲಿ ಜೆಡಿಎಸ್ ಪಕ್ಷ ಅಧಿಕಾರಕ್ಕೆ ಬರುತ್ತೆ. ಜೆಡಿಎಸ್‍ಗೆ ಉತ್ತಮ ಭವಿಷ್ಯವಿದೆ” ಎಂದು ನಾಗಾ ಸಾಧುಗಳು ಹೇಳಿದ್ದರಂತೆ. ಹಿಮಾಲಯದಲ್ಲಿರುವ ಸುಮಾರು 90 ವರ್ಷದ ಹರಿದಾಸ್ ಎಂಬ ನಾಗಾಸಾಧು ಭವಿಷ್ಯ ನುಡಿದಿದ್ದಾರೆ ಎಂದು ಬೊಗಲೆ ಬಿಡುತ್ತಿದ್ದಾರೆ. “ಕೈಮುಷ್ಠಿ ಕಟ್ಟುವುದು, ಕಮಲ ಮುದುಡುವುದು, ಹೊಸ ತೆನೆಗೆ ದಾರಿಯಾಗುವುದು” ಎಂದು ನಾಗಾಸಾಧುಗಳು ಭವಿಷ್ಯ ನುಡಿದ್ದಿದ್ದಾರಂತೆ. ಹೀಗೆ ಹೇಳಿ ನನ್ನನ್ನು ಹರಸಿ ಆಶೀರ್ವಾದ ಮಾಡಿದ್ದಾರೆಂದು ಮಾಜಿ ಮುಖ್ಯಮಂತ್ರಿ, ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.

ಈ ಹಿಂದೆ “ತಾನು ಬದುಕಿರುವವರೆಗೂ ಭಾರತ ಹಿಂದೂ ರಾಷ್ಟ್ರವಾಗಲು ಬಿಡಲ್ಲ” ಎಂಬ ದರ್ಪದ ಮಾತುಗಳನ್ನಾಡಿದ್ದ ದೇವೇಗೌಡರು ಮತ್ತು ಅವರ ಕೌಟುಂಬಿಕ ಪಕ್ಷಕ್ಕೆ ಈಗ ಆಸ್ತಿಕರ ನೆನಪಾಗಿದೆ. ತಮ್ಮ ಹಿಂದೂ ವಿರೋಧಿ ಮಾತುಗಳು ಜನತೆಯಲ್ಲಿ ಆಕ್ರೋಷಕ್ಕೆ ಕಾರಣವಾಗಿದ್ದರಿಂದ ಗೌಡರ ಕುಟುಂಬ ಯೂಟರ್ನ್ ಹೊಡೆದಿದೆ. ಹಿಂದೂಗಳು ಅತ್ಯಂತ ಗೌರವದಿಂದ ಕಾಣುವ ನಾಗಾಸಾಧುಗಳನ್ನು ಮುಂದೆ ತಂದು ಚುನಾವಣೆ ಎದುರಿಸುವ ತಂತ್ರಗಾರಿಕೆಯಲ್ಲಿ ತೊಡಗಿವೆ ಗೌಡರ ಕುಟುಂಬ.

ಇತ್ತೀಚೆಗೆ “ಯಾದಗಿರಿಯ ಶಹಾಪುರದಲ್ಲಿ ಶುಕ್ರವಾರ ನಡೆದ ಜೆಡಿಎಸ್ ಸಮಾವೇಶದಲ್ಲಿ ಮಾತನಾಡಿದ್ದ ದೇವೇಗೌಡರು, ರಾಜ್ಯ ಸೇರಿದಂತೆ ಇಡೀ ದೇಶವನ್ನು ಹಿಂದೂ ರಾಷ್ಟ್ರವನ್ನಾಗಿ ಮಾಡುವ ಹಗಲುಗನಸು ಪ್ರಧಾನಿ ಮೋದಿ ಕಾಣುತ್ತಿದ್ದಾರೆ. ಆದರೆ ಇಡೀ ದೇಶವನ್ನು ಹಾಗೂ ರಾಜ್ಯವನ್ನು ನಾನು ಬದುಕಿರುವವರೆಗೂ ಹಿಂದೂ ರಾಜ್ಯವನ್ನಾಗಿಲು ಬಿಡೋದಿಲ್ಲ” ಎಂದು ಹೇಳಿ ಹಿಂದೂಗಳ ಕೋಪಕ್ಕೆ ತುತ್ತಾಗಿದ್ದರು.

ಹೀಗೆ ಅಲ್ಪಸಂಖ್ಯಾತರನ್ನು ಓಲೈಸುವಲ್ಲಿ ಮುಂದುವರೆದ ಅವರು “ಮಂಗಳೂರಿನಲ್ಲಿ ಕ್ರೈಸ್ತರು ಮತ್ತು ಅಲ್ಪಸಂಖ್ಯಾತರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಅಲ್ಲಿ ಕೋಮು ಭಾವನೆ ಕೆರಳಿಸಿ ಸಾಮರಸ್ಯ ಜೀವನಕ್ಕೆ ಧಕ್ಕೆ ತಂದಿರುವುದು ಸರಿಯಲ್ಲ. ಎಲ್ಲರಿಗೂ ಸಮಾನವಾಗಿ ಬದುಕುವ ಹಕ್ಕಿದೆ. ಕೋಮು ಗಲಭೆ ಹತ್ತಿಕ್ಕುವಲ್ಲಿ ಕಾಂಗ್ರೆಸ್ ಸರ್ಕಾರ ವಿಫಲವಾಗಿದೆ” ಎಂದೂ ಆರೋಪಿಸಿದ್ದರು.

ಈ ಹೇಳಿಕೆಯ ನಂತರ ಇಡೀ ಹಿಂದೂ ಸಮಾಜವೇ ಗೌಡರ ವಿರುದ್ಧ ಕೆಂಡ ಕಾರಿತ್ತು. ಎಡಪಂಥೀಯರು ಬೀದಿಗಿಳಿದು ಪ್ರತಿಭಟಿಸಿದ್ದರು. ಸ್ವತಃ ಸ್ಪಕ್ಷೀಯರೇ ದೇವೇಗೌಡರ ಮಾತಿಗೆ ಬೇಸರ ವ್ಯಕ್ತಪಡಿಸಿದ್ದರು. ಇದು ಹಿಂದೂಗಳ ಮತವಿಭಜನೆಗೆ ಹಾದಿಯಾಗುತ್ತದೆ. ಹೀಗಾಗಿ ಪಕ್ಷಕ್ಕೆ ಇದು ನಷ್ಟವಾಗುತ್ತದೆ ಎಂದಿದ್ದರು.

ಹೀಗಾಗಿಯೇ ಈಗ ಅವರ ಸುಪುತ್ರ ಹೆಚ್.ಡಿ.ಕುಮಾರಸ್ವಾಮಿ ಅಪ್ಪ ಮಾಡಿದ್ದ ಅಚಾತುರ್ಯಕ್ಕೆ ತೇಪೆ ಹಚ್ಚುವ ಕೆಲಸವನ್ನು ಮಾಡುತ್ತಿದ್ದಾರೆ. ಹಿಮಾಲಯಕ್ಕೆ ತೆರಳಿ ನಾಗಾಸಾಧುಗಳನ್ನು ಭೇಟಿಯಾಗಿ ಆಶೀರ್ವಾದ ಪಡೆದುಕೊಂಡಿದ್ದೇನೆ. ಮುಂದಿನ ದಿನಗಳಲ್ಲಿ ಜೆಡಿಎಸ್ ರಾಜ್ಯದಲ್ಲಿ ಅಧಿಕಾರ ಹಿಡಿಯಲಿದೆ ಎಂಬ ಭವಿಷ್ಯವನ್ನು ನುಡಿದ್ದಾರೆಂದು ಹೇಳಿ, ಆಸ್ತಿಕರ ಹಾಗೂ ಹಿಂದೂಗಳ ಓಟು ಗಿಟ್ಟಿಸುಕೊಳ್ಳುವಲ್ಲಿ ಪ್ರಯತ್ನ ಪಡುತ್ತಿದ್ದಾರೆ.

ರಾಜ್ಯದಲ್ಲಿ ಹಿಂದೂಗಳ ಸಾಲು ಸಾಲು ಹತ್ಯೆಗಳು ನಡೆದರೂ ಈ ಜಾತ್ಯಾತೀತ ನಾಯಕರು ತುಟಿ ಬಿಚ್ಚಲ್ಲ. ಅಯೋಧ್ಯೆಯಲ್ಲಿ ರಾಮ ಮಂದಿರ ಕಟ್ಟುವ ವಿಚಾರದಲ್ಲಿ ಉಸಿರೇ ಎತ್ತಲ್ಲ. ರಾಜ್ಯ ಸರ್ಕಾರ ಮುಸಲ್ಮಾನರ ಓಲೈಕೆಗೆ ಜಾರಿಗೆ ತಂದ ಟಿಪ್ಪು ಜಯಂತಿಯ ಬಗ್ಗೆ ಚಕಾರವೆತ್ತದೆ ನಾಲ್ಕು ಗೋಡೆಯ ಮಧ್ಯೆ ಟಿಪ್ಪು ಜಯಂತಿ ಆಚರಿಸಿ ನಾಟಕವಾಡುತ್ತಿದೆ. ಗೋಹತ್ಯೆ ನಿಷೇಧ ವಿಚಾರದಲ್ಲಿ ಜಾಣ ಮೌನ. ಹೀಗೆ ಹಿಂದೂಗಳ ಭಾವನೆಯನ್ನು ಕೆರಳಿಸುವ ಯಾವುದೇ ವಿಚಾರಗಳು ಬಂದರೂ ದಿವ್ಯ ಮೌನವನ್ನು ಅನುಸರಿಸುವ ಈ ಜೆಡಿಎಸ್ ಪಕ್ಷಕ್ಕೆ ಹಿಂದೂಗಳ ಓಟ್‍ಬ್ಯಾಂಕ್ ಭದ್ರಗೊಳಿಸಲು ಸಿಕ್ಕಿದ್ದು ಒಂದೇ ಅಸ್ತ್ರ. ಅದುವೇ ನಾಗಾ ಸಾಧುಗಳು.

ನಾಗಾಸಾಧುಗಳ ಬಗ್ಗೆ ಮಾತನಾಡಿದರೆ ಹಿಂದೂಗಳ ಭಾವನೆ ಮೃದುವಾಗುತ್ತದೆ. “ನಾಗಾಸಾಧುಗಳ ಮಾತನ್ನು ಜೆಡಿಎಸ್ ಪಕ್ಷ ನಂಬುತ್ತದೆ. ಅವರಿಗೂ ಭಕ್ತಿ ಇದೆ ಎಂದು ನಂಬುತ್ತಾರೆ” ಎಂದು ತಿಳಿದುಕೊಂಡಿದ್ದಾರೆ ಕುಮಾರ ಸ್ವಾಮಿ. ಆದರೆ ಜನರು ಇಂತಹ ನಾಟಕಗಳನ್ನು ಎಷ್ಟೋ ನೋಡಿದ್ದಾರೆ ಎಂಬುವುದು ಈ ಗೌಡರ ಕುಟುಂಬಗಳಿಗೆ ತಿಳಿದಿಲ್ಲ. ತಮ್ಗೆ ಎನಿಸಿದಾಗ ಪ್ರಧಾನಿ ನರೇಂದ್ರ ಮೋದಿಯನ್ನು ಭೇಟಿಯಾಗಿ ಅನುದಾನವನ್ನು ಪಡೆದುಕೊಂಡು ಬರುವ ಮಾಜಿ ಪ್ರಧಾನಿ ದೇವೇಗೌಡರಿಗೆ ಮತ್ತೆ ರಾಜ್ಯಕ್ಕೆ ಬರುವಾಗ ಮೋದೀಜಿಯನ್ನು ತೆಗಳುವುದೇ ತಮ್ಮ ಕಾಯಕವೆಂದು ಭಾವಿಸುತ್ತಾರೆ. ಆದರೆ ಮಾಜಿ ಪ್ರಧಾನಿಯಾದ ದೇವೇಗೌಡರಿಗೆ ಮೋದಿಯವರು ಅದೆಷ್ಟು ಗೌರವ ನೀಡುತ್ತಾರೆ, ಅದನ್ನು ಉಳಿಸುವ ಯೋಗ್ಯತೆ ದೇವೇಗೌಡರಿಗೆ ಇದೆಯೇ..?

ವಿನಾಶಕಾಲೇ ವಿಪರೀತ ಬುದ್ಧಿ ಎಂಬ ಮಾತು ಅಕ್ಷರಷಃ ಸತ್ಯ. ತನ್ನ ಪಕ್ಷ ಉಳಿದಷ್ಟೂ ಸೀಟನ್ನು ಕಳೆದುಕೊಳ್ಳುವ ಭೀತಿ ಎದುರಾಗಿದೆ. ಒಂದು ಕಾಲದಲ್ಲಿ ಜೆಡಿಎಸ್ ಪಕ್ಷದಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳಿಲ್ಲದೆ ಬಿ ಫಾರಂ ಹಿಡಿದುಕೊಂಡು ಬೀದಿ ಬೀದಿ ಸುತ್ತುತ್ತಿದ್ದರು. ಅಲ್ಪ ಸಂಖ್ಯಾತರ ಜಪ ಮಾಡುತ್ತಿದ್ದ ಈ ಪಕ್ಷಕ್ಕೆ ಅಲ್ಪ ಸಂಖ್ಯಾತರು ಮೋಸ ಮಾಡಿದ್ದರು. ಯಾವೊಬ್ಬ ಅಲ್ಪ ಸಂಖ್ಯಾತನೂ ಆ ಪಕ್ಷಕ್ಕೆ ಓಟ್ ಹಾಕಲಿಲ್ಲ. ಇದಕ್ಕಾಗಿಯೇ ದೇವೇಗೌಡರು ಈ ದೇಶವನ್ನು ಹಿಂದೂ ರಾಷ್ಟ್ರವಾಗಿಸಲು ಬಿಡೋದಿಲ್ಲ ಎಂದಿದ್ದರು. ಇದೀಗ ಈ ಮಾತೇ ತನಗೆ ಉಲ್ಟಾ ಆಗಿ ಪರಿಣಮಿಸುವ ಎಲ್ಲಾ ಸಾಧ್ಯತೆಗಳು ಗೋಚರಿಸುತ್ತಿದೆ.

ಈಗ ಹಿಂದೂಗಳ ಪರ, ನಾಗಸಾಧುಗಳು, ಸ್ವಾಮೀಜಿಗಳು ಎಂದುಕೊಂಡು ಸನಾತನ ಜಪ ಮಾಡುತ್ತಿದ್ದಾರೆ. ಕೊನೆಗೆ ಅತ್ತ ಅಲ್ಪಸಂಖ್ಯಾತರ ಮತವೂ ಇಲ್ಲದೆ ಇತ್ತ ಹಿಂದೂಗಳ ಮತವೂ ದೊರಕದೆ, ಮತ್ತೆ ಹಿಂದಿನ ಪರಿಸ್ಥಿತಿ ಈ ಜೆಡಿಎಸ್‍ಗೆ ಬರಲಿದೆ ಅನ್ನೋದು ಅಷ್ಟೇ ಸತ್ಯ. ಈ ಮಾತನ್ನು ಜೆಡಿಎಸ್ ವಿರೋಧಿಗಳು ಹೇಳುತ್ತಿಲ್ಲ. ಬದಲಾಗಿ ರಾಷ್ಟ್ರದ ಪ್ರಮುಖ ಚಾನೆಲ್‍ಗಳು ನಡೆಸಿದ ಸಮೀಕ್ಷೆ ಹೇಳುತ್ತಿವೆ… 2018ರ ವಿಧಾನ ಸಭಾ ಚುನಾವಣೆ ಜೆಡಿಎಸ್ ಪಾಲಿನ ಕೊನೆಯ ಮೊಳೆ ಆಗಿರಬಹುದಲ್ಲವೇ….?

-ಸುನಿಲ್ ಪಣಪಿಲ

 

Tags

Related Articles

Close