ಅಂಕಣಇತಿಹಾಸದೇಶಪ್ರಚಲಿತ

“ನಿಮ್ಮ ಈ ತಪ್ಪು ನಿರ್ಧಾರದಿಂದ ಇಡೀ ಭಾರತವೇ ಮುಂದೊಂದು ದಿನ ಪಶ್ಚಾತ್ತಾಪದಿಂದ ತಲೆತಗ್ಗಿಸುವ ಪರಿಸ್ಥಿತಿ ಬರುತ್ತದೆ!” – ಸರದಾರ್ ವಲ್ಲಭ್ ಭಾಯ್ ಪಟೇಲ್

ಭಾರತದ ಉಕ್ಕಿನ ಮನುಷ್ಯ ಎಂದೇ ಪ್ರಸಿದ್ಧವಾಗಿದ್ದ ಸರದಾರ್ ವಲ್ಲಭ ಭಾಯ್ ಪಟೇಲ್, ಭಾರತದ ಮೊದಲನೇ ಪ್ರಧಾನಿಯಾಗಿದ್ದ ‘ಚಾಚಾ’ ನೆಹರೂವಿಗೆ ಎಚ್ಚರಿಕೆ ನೀಡುತ್ತಲೇ ಇದ್ದರು! ಈ ನಿರ್ಧಾರದಿಂದ ಒಂದು ದಿನ ಇಡೀ ದೇಶ ಅಳಬೇಕಾದ ಪರಿಸ್ಥಿತಿ ಬರುತ್ತದೆ!”

ಅಂದು ಹೇಳಿದ ಮಾತು ಇವತ್ತು ನಿಜವಾಗಿದೆ! ಇವತ್ತು ನೆಹರೂವೂ ಇಲ್ಲ, ಆತನ ಮಕ್ಕಳೂ ಇಲ್ಲ! ಆದರೆ, 125 ಕೋಟಿ ಭಾರತೀಯರು ಹಾಗೂ ಕಾಶ್ಮೀರಿ ಪಂಡಿತರು ನರಕ ಯಾತನೆ ಅನುಭವಿಸುವ ಪರಿಸ್ಥಿತಿ ಇವತ್ತಿದೆ ಅಂದರೆ ನೆಹರೂವಿನ ಅಂದಿನ ನಿರ್ಧಶರ ಅದೆಷ್ಟು ಅವಿವೇಕತನದ್ದಾದೀತೆಂಬುದನ್ನು ಯೋಚಿಸಿರುವಿರಾ?!

ಈ ದುರಂತ ಮೊದಲು ಪ್ರಾರಂಭವಾದದ್ದೆಲ್ಲಿ ಗೊತ್ತಿದೆಯಾ?! ಯಾವತ್ತೂ ಭಾರತ ಸ್ವಾತಂತ್ರ್ಯ ಗಳಸಿದ್ದೂ ಅಲ್ಲದೇ, ಜೊತೆ ಜೊತೆಗೆ ಪಾಕಿಸ್ಥಾನವೆಂಬುದನ್ನು ಸೃಷ್ಟಿಸಿತೋ, ಅವತ್ತು ಲಕ್ಷಾಂತರ ಜನರ ರಕ್ತದಿಂದ ತೋಯ್ದ ನೆಲವೊಂದು ಪಾಕಿಸ್ಥಾನವೆಂಬ ಹೆಸರು ಪಡೆದುಕೊಂಡಿತು! ಬಿಡಿ! ಯಾವಾಗ ಒಂದಷ್ಟು ಮತಾಂಧ ಜನರು ಪಾಕಿಸ್ಥಾನಿಗಳಾದರೋ, ಕೆಲವೇ ದಿನಗಳಲ್ಲಿ ಅಲ್ಲಿನ ಸರಕಾರದ ಬೆಂಬಲ ಪಡೆದುಕೊಂಡು ಕಾಶ್ಮೀರದ ಕಣಿವೆಗಳ ಮೇಲೆ ದಾಳಿ ನಡೆಸಿತು! ತದನಂತರವೇ, ಅಂದಿನ ಗೃಹ ಸಚಿವರಾಗಿದ್ದ ಸರದಾರ್ ವಲ್ಲಭ ಭಾಯ್ ಪಟೇಲ್ ತಿರುಗೇಟು ನೀಡಲು ಅಣಿಯಾದರು! ತಕ್ಷಣವೇ ಲಭ್ಯವಿದ್ದ ಸೈನಿಕರನ್ನೆಲ್ಲ ಒಟ್ಟು ಮಾಡಿ ಪ್ರತಿದಾಳಿ ನಡೆಸಿದ ಪಟೇಲ್ ರ ವಿವೇಕತನವೊಂದು ಅಲ್ಲೊದ್ದ ಪಾಕಿಸ್ಥಾನಿ ಬೆಂಬಲಿತ ಉಗ್ರರನ್ನೆಲ್ಲ ಕಣಿವೆಯಿಂದ ಹೊರಗೋಡಿಸಿತ್ತು!

ಆದರೆ, ಅವತ್ತು ‘ಚಾಚಾ’ನೆಂಬ ಮುಟ್ಠಾಳನೊಬ್ಬ ತೆಗೆದುಕೊಂಡ ನಿರ್ಧಾರ ಇದೆಯಲ್ಲ, ಅದು ಅದೆಷ್ಟೋ ಸಹಸ್ರ ಕಾಶ್ಮೀರಿ ಪಂಡಿತರ ಮಾರಣಹೋಮಕ್ಕೆ ಕಾರಣವಾಯ್ತು! ಅದಲ್ಲದೇ, ಇನ್ನೆಂದೂ ಪರಿಹರಿಸಲಾಗದ ಸಮಸ್ಯೆಯಾಗಿ ಪರಿಣಮಿಸಿತು! ಅವತ್ತು, ಇಡಿಯ ದೇಶಕ್ಕೆ ಆಘಾತವಾಗಿತ್ತು! ಒಬ್ಬ ಸಾಮಾನ್ಯ ಪ್ರಜೆಗೂ ಪರಿಣಾಮದ ಅರಿವಿದ್ದಾಗ, ಹೆಣ್ಣಿನ ದೇಹದಾಸೆಯ ಜೊತೆ ಜೊತೆಗೇ ಭಾರತದ ಅಧಿಕಾರವನ್ನೂ ಹಿಡಿದಿದ್ದ ಚಾಚಾ ಅಕ್ಷರಶ: ಕಾಶ್ಮೀರಿಯ ಒಡಲನ್ನು ಬರಿದಾಗಿಸಿತ್ತು!!

ಸ್ವಾತಂತ್ರ್ಯಾನಂತರ ಅಸ್ಸಾಂ ನ ಕೆಲವು ಭಾಗಗಳು ಇವತ್ತಿನ ಬಾಂಗ್ಲಾ ಹಾಗೂ ಉತ್ತರ ಪಾಕಿಸ್ಥಾನದ ಭಾಗವಾಗಿ ಸೇರಿತ್ತು! ಸರದಾರ್ ವಲ್ಲಭ್ ಭಾಯ್ ಪಟೇಲ್ ನಾಲ್ಕು ದಿನ ಅಸ್ಸಾಂ ಪ್ರವಾಸಕ್ಕೆ ಅಣಿಯಾದರು! ಅಲ್ಲಿನ, ಬಹುತೇಕ ಪ್ರಜೆಗಳು ಕ್ರೈಸ್ತ ಮತವನ್ನನುಸರಿಸುತ್ತಿದ್ದರೂ ಸಹ ಭಾರತಕ್ಕೆ ಸೇರಬೇಕೆಂಬ ಆಶಯವನ್ನು ಹೊತ್ತು ವಿನಂತಿಯನ್ನೂ ಸರಕಾರಕ್ಕೆ ಮಾಡಿಕೊಂಡಿದ್ದರು! ಆ ಕಾರಣಕ್ಕಾಗಿಯೇ, ಪಟೇಲ್ ಅಸ್ಸಾಂ ಗೆ ತೆರಳಿ ಅಲ್ಲಿನ ಸಾರ್ವಜನಿಕ ಸಭೆಗೆ ಹಾಜರಾಗಿ, ಜನರ ಅಭಿಪ್ರಾಯ ಸಂಗ್ರಹಿಸುವಂತಹ ಕಾರ್ಯ ನಡೆಯಿತು. ತದನಂತರದ, ಅಸ್ಸಾಂ ನ ಮುಖ್ಯ ಮಂತ್ರಿ ಗೋಪಿನಾಥ್ ಬರ್ದೊಲಿ ಹಾಗೂ ಗವರ್ನರ್ ಅಕ್ಬರ್ ಹಾಯ್ದಾರಿಗೂ ಕೂಡ ನಿರ್ದೇಶನಗಳನ್ನು ನೀಡಿದ್ದ ಪಟೇಲ್, ಆ ನಾಲ್ಕು ದಿನಗಳಲ್ಲಿ ಇಡೀ ಅಸ್ಸಾಂ ನನ್ನು ನೋಡಿದ್ದರು! ಅದರ ಸಮಸ್ಯೆಗಳನ್ನೂ ಪರಿಶೀಲಿಸಿದ್ದರು!

ಕುತಂತ್ರಿ ನೆಹರೂ ಗೆ ತಕ್ಷಣವೇ ಹೀರೋವಾಗಬೇಕಿತ್ತು! ಪಟೇಲ್ ರವರು ದೆಹಲಿಯಲ್ಲಿಲ್ಲದ ಸಮಯ ನೋಡಿದ ನೆಹರೂ, ಯುನೈಟೆಡ್ ನೇಷನ್ಸ್ ಆರ್ಗನೈಸೇಷನ್ಸ್ ಗೆ ಸಂಪರ್ಕಿಸಬೇಕಿತ್ತು! ಇಂತಹ ಅವಿವೇಕತನಕ್ಕೆ ಪಟೇಲರು ಒಪ್ಪುವುದೇ ಇಲ್ಲ ಎಂಬ ಅರಿವಿದ್ದ ಚಾಚಾನೊಬ್ಬ UNO ನ ಕದ ತಟ್ಟಿದ್ದ!! ಅಲ್ಲದೆಯೇ, ಪಟೇಲರ ಜೊತೆ ಇಲ್ಲದೇ ಸರಕಾರವನ್ನು ನಡೆಸಲು ಅಸಧ್ಯ ಎಂಬ ಅರಿವಿದ್ದ ನೆಹರೂ, ಪಟೇಲರ ಗೈರಿನಲ್ಲಿ ಅಂತರ್ ರಾಷ್ಟ್ರೀಯ ನ್ಯಾಯಾಲಯದ ಬಾಗಿಲಿಗೆ ಹೋಗಿ ನಿಂತದ್ದೂ ಆಯಿತು!

ಯಾವಾಗ ಪಟೇಲರು ದೆಹಲಿಗೆ ಅಸ್ಸಾಂ ಪ್ರವಾಸದಿಂದ ವಾಪಾಸಾದರೋ, ನೆಹರೂ ಅಂತರ್ ರಾಷ್ಟ್ರೀಯ ನ್ಯಾಯಾಲಯಕ್ಕೆ ಜಮ್ಮು-ಕಾಶ್ಮೀರದ ಸಮಸ್ಯೆ ಬಗೆಹರಿಸುವಂತೆ ವಿನಂತಿ ಮಾಡಲು ತೆರಳಿದ್ದನ್ನು ಅರಿತ ಪಟೇಲರಿಗೆ ಆಘಾತವಾಗಿತ್ತು! ಅವರಿಗೆ, ತನ್ನ ಗೈರಿನಲ್ಲಿ ನಡೆದ ಈ ಕುತಂತ್ರವೂ ಅರಿವಾಗಿತ್ತು!

ಆಘಾತಕ್ಕೊಳಗಾಗಿದ್ದ ಪಟೇಲರಿಗೆ ನೆಹರೂ ಎಂಬ ಅಧಿಕಪ್ರಸಂಗಿಯ ಈ ನಿರ್ಧಾರದಿಂದ ಭ್ರಮನಿರಸನವಾದಂತಿತ್ತು!! ಮುಸ್ಲಿಂ ಲೀಗ್, ಬ್ರಿಟಿಷ್ ಲೀಗ್ ಗಳ ವಿರೋಧವನ್ನೆಲ್ಲ ಧೈರ್ಯವಾಗಿ ಎದುರಿಸಿ ಸಮಸ್ಯೆಗೆ ಅಂತ್ಯ ಹಾಡಿದ್ದ ಪಟೇಲರು ತನ್ನ ನಂಬಿಕಸ್ಥ ನೆಹರೂವಿನಿಂದಲೇ ತಲೆ ಬಗ್ಗಿಸಬೇಕಾಗಿ ಬಂದಿತ್ತು!

ಈ ನಿರ್ಧಾರಕ್ಕೆ ಪಟೇಲರು ಪ್ರತಿಕ್ರಿಯಿಸಿದ್ದು ಹೇಗೆ ಗೊತ್ತೇ?!
” ಒಬ್ಬ ಜಿಲ್ಲಾ ನ್ಯಾಯಾಲಯದಲ್ಲಿ ಕೆಲಸ ಮಾಡುವ ವಕೀಲನಿಗೂ ಗೊತ್ತಿರುತ್ತದೆ, ಅಕಸ್ಮಾತ್ ಕಾನೂನು ನ್ಯಾಯಾಲಯದಲ್ಲಿ ದಾವೆ ಹೂಡಿದರೆ ಅದಕ್ಕೆ ತಕ್ಕ ಸಾಕ್ಷಿಗಳನ್ನೂ ಒದಗಿಸಬೇಕಾಗುತ್ತದೆಂಬ ಅರಿವು ಸಾಮಾನ್ಯನಿಗೂ ಇರುತ್ತದೆ! ಆದರೆ, ಇಲ್ಲಿನ ಅಪರಾಧಿಗೆ ತಪ್ಪನ್ನು ಧಿಕ್ಕರಿಸುವುದೊಂದೇ ಕಾಯಕವಾಗಿದೆ.”

ಸರದಾರ್ ಪಟೇಲ್ ರು ಇನ್ನೂ ಹೇಳಿದರು, ” ನೆಹರೂ ಮುದೊಂದು ದಿನ ಇಂದು ತೆಗೆದುಕೊಂಡ ನಿರ್ಧಾರದಿಂದ ಪಶ್ಚಾತ್ತಾಪ ಪಡುವುದಲ್ಲದೇ, ಅಳಬೇಕಾದ ಪರಿಸ್ಥಿತಿ ಬರುತ್ತದೆ.”

ಆದರೆ, ಆಕ್ರಮಣಕ್ಕೊಳಗಾಗಿದ್ದ ಕಾಶ್ಮೀರದ ಪ್ರದೇಶ ಪಾಕ್ ಆಕ್ರಮಿತ ಪ್ರದೇಶವೆಂದಾಯಿತು! ಕಾಶ್ಮೀರಕ್ಕೆ ಬೇರೆಯದಾದ ಸಂವಿಧಾನ, ಸರಕಾರ, ಕಾನೂನುಗಳೂ ಬಂತು! ಇವತ್ತು, ಕಾಶ್ಮೀರವೆಂದರೆ ಗಾಳಿಪಟವಾಗಿದೆ! ಯಾವಾಗ ಸೂತ್ರ ಹರಿಯುತ್ತದೆಯೋ ಎಂಬ ಹೆದರಿಕೆಯಲ್ಲಿಯೇ ಇಡೀ ದೇಶ ಬದುಕುವಂತಾಯಿತು!

ಬಿಡಿ! ಮುಟ್ಠಾಳ ನೆಹರೂ ಪರಂಪರೆಗೆ ಯಾವ ದೂರದೃಷ್ಟಿಯೂ ಇಲ್ಲವೆಂಬುದು ಜಗತ್ತಿಗೇ ಗೊತ್ತಾಗಿರುವಾಗ, ಇನ್ನೂ ಕೆಲವು ಮಂದಮತಿಗಳು ಅವರ ಬೆಂಬಲಿಸುವ ಮೊದಲು ಒಮ್ಮೆ ಮಾರಣಹೋಮಕ್ಕೊಳಗಾದ ಕಾಶ್ಮೀರಿ ಪಂಡಿತರ ಬಗ್ಗೆ ಯೋಚಿಸಿದ್ದರೆ ಇಂತಹ ದರಿದ್ರ ಕಾಂಗ್ರೆಸ್ ಪಕ್ಷವೂ ಉಳಿಯುತ್ತಿರಲಿಲ್ಲ.

ಅವತ್ತು, ಗಾಂಧೀ ಹತ್ಯೆಯನ್ನು ಬಳಸಿ ತಾನೊಬ್ಬನೇ ಅಧಿಕಾರಕ್ಕಿಳಿಯುವಂತೆ ಮಾಡಿದ ನೆಹರೂ, ಕೊನೆಗೂ ಕಾಶ್ಮೀರವೊಂದನ್ನು ಸಮಸ್ಯೆಯ ಗೂಡಾಗಿಯೇ ಮಾಡಿದ ದುರಂತಕ್ಕೆ ಇವತ್ತೂ ಭಾರತ ಪಶ್ಚಾತ್ತಾಪಿಸುತ್ತಿದೆ!

– ತಪಸ್ವಿ

Tags

Related Articles

Close