ಅಂಕಣ

ಭಜರಂಗದಳದ ಕಾರ್ಯಕರ್ತ ಪ್ರಶಾಂತ್ ಪೂಜಾರಿಯ ಹತ್ಯೆ ಸಾಮಾಜಿಕ ಜಾಲತಾಣದ ಯೋಚನಾ ಲಹರಿಯನ್ನೇ ಬದಲಿಸಿತೇ?!

ಅದು ಅಕ್ಟೋಬರ್ 09.2015. ದಕ್ಷಿಣ-ಕನ್ನಡ ಜಿಲ್ಲೆಯ ಮೂಡುಬಿದ್ರಿ ಎಂದಿನಂತೆ ಎದ್ದು ಶಾಂತಿಯ ಸುಪ್ರಭಾತವನ್ನು ಹಾಡುತ್ತಾ ಮುಂಜಾನೆ ಆಗಮಿಸುತ್ತಿದ್ದ
ಸೂರ್ಯದೇವನಿಗೆ ಸ್ವಾಗತ ಕೋರುತ್ತಿತ್ತು. ಅಷ್ಟರಲ್ಲೇ ಅಲ್ಲಿ ಆಘಾತಕಾರಿ ಸುದ್ಧಿಯೊಂದು ಕೇಳಿ ಬಂದಿತ್ತು. ಆತ ಹೂವಿನ ವ್ಯಾಪಾರಿ, ಬಜರಂಗದಳದ ಸಕ್ರಿಯ
ಕಾರ್ಯಕರ್ತ ಪ್ರಶಾಂತ ಪೂಜಾರಿ. ಬೆಳ್ಳಂಬೆಳಗ್ಗೆ ಎಂದಿನಂತೆ ತನ್ನ ತಂದೆಯೊಂದಿಗೆ ಹೂವಿನ ವ್ಯಾಪರಕ್ಕಾಗಿ ದಕ್ಷಿಣ-ಕನ್ನಡ ಜಿಲ್ಲೆಯ ಮೂಡುಬಿದ್ರಿಯ ಪೇಟೆಗೆ
ಬಂದಿದ್ದ. ಇನ್ನೇನು ಕೆಲಸ ಶುರು ಮಾಡಬೇಕು ಎನ್ನುವಷ್ಟರಲ್ಲಿ ಪಿ.ಎಫ್.ಐ. ನ ಮತಾಂಧ ಉಗ್ರರು ಆತನನ್ನು ಬರ್ಬರವಾಗಿ ಹತ್ಯೆ ಮಾಡಿದ್ದರು. ಹೆತ್ತ ತಂದೆಯ ಎದುರೇ ಪಾಪಿಗಳು ತಲವಾರುಗಳಿಂದ ಕೊಚ್ಚಿ ಬಿಟ್ಟಿದ್ದರು. ರಕ್ತದ ಮಡುವಿನಲ್ಲೇ ಪ್ರಶಾಂತನನ್ನು ಆಸ್ಪತ್ರೆಗೆ ಕೊಂಡೊಯ್ಯಲಾಯಿತಾದರೂ ಅಷ್ಟರಲ್ಲೇ ಆತನ ಪ್ರಾಣ ಪಕ್ಷಿ ಹಾರಿ ಹೋಗಿತ್ತು.

ಇಡಿಯ ಮೂಡುಬಿದಿರೆ ಮಾತ್ರವಲ್ಲದೆ ಜಿಲ್ಲೆಯೇ ಬೆಚ್ಚಿ ಬಿದ್ದಿತ್ತು. ಸದಾ ಹಿಂದೂ ಸಂಘಟನೆಗೆ ಬೆನ್ನುಲುಬಾಗಿ ಕೆಲಸ ಮಾಡುತ್ತಿದ್ದ ಕಾರ್ಯಕರ್ತನನ್ನು ಕಳೆದುಕೊಂಡ ಭಜರಂಗದಳದ ನೋವು ಒಂದೆಡೆಯಾದರೆ, ಬೆಳ್ಳಂಬೆಳಗ್ಗೇ ಶಾಂತಿಗೆ ಹೆಸರಾಗಿದ್ದ ಮೂಡುಬಿದಿರೆಯಲ್ಲಿ ರಕ್ತಪಾತವಾಗಿದ್ದನ್ನು ಕಂಡು ಬೆಚ್ಚಿ ಬಿದ್ದ ನಾಗರಿಕರು ಮತ್ತೊಂದೆಡೆ. ಈ ಮಧ್ಯೆ ತಮ್ಮ ಕುಟುಂಬಕ್ಕೆ ಆಧಾರ ಸ್ತಂಭವಾಗಿದ್ದ ಒಬ್ಬನೇ ಒಬ್ಬ ಮಗನನ್ನು ಕಳೆದುಕೊಂಡ ಪೋಷಕರ ಮುಗಿಲು ಮುಟ್ಟಿದ ಆಕ್ರಂದನ.

ಗೋಕಳ್ಳರ ವಿರುದ್ಧ ಸಿಂಹಸ್ವಪ್ನನಾಗಿ, ಹಿಂದೂ ಹೆಣ್ಣು ಮಕ್ಕಳ ಜೊತೆ ಕಾಮಾಂಧರಂತೆ ವರ್ತಿಸುವವರನ್ನು ಕಂಡರೆ ಸಿಡಿದೇಳುತ್ತಿದ್ದ ಪ್ರಶಾಂತ್ ಪೂಜಾರಿಯನ್ನು
ಎಂದರೆ ಮೂಡುಬಿದಿರಿಯ ನಾಗರೀಕರಿಗೆ ಅದೇನೋ ಪ್ರೀತಿ. ರಾತ್ರಿ 12 ಗಂಟೆಗೆ ಕರೆ ಮಾಡಿದ್ರೂ ಯೋಚನೆ ಮಾಡದೆ ಎದ್ದು ಬಂದು ಸಹಾಯಕ್ಕೆ ಧಾವಿಸುತ್ತಿದ್ದ
ಪ್ರಶಾಂತನಿಗೆ ನೆರೆಹೊರೆಯವರೆಂದರೆ ಅಚ್ಚುಮೆಚ್ಚು. ತನ್ನ ತಂದೆಯೊಂದಿಗೆ ಹೂವಿನ ವ್ಯಾಪಾರವನ್ನು ಮಾಡಿ ತನ್ನ ಕುಟುಂಬವನ್ನು ನೋಡಿಕೊಂಡು ಹೇಗೋ ಜೀವನ ಸಾಗಿಸುತ್ತಿದ್ದ ಪ್ರಶಾಂತ್ ಪೂಜಾರಿ.

ಅನಾವಶ್ಯಕವಾಗಿ ಯಾರ ರಗಳೆಗೂ ಹೋಗದ ಆತನನ್ನು, ತಮ್ಮ ಅಕ್ರಮ ದಂಧೆಗಳಿಗೆ ಅಡ್ಡಗಾಲಿಡುತ್ತಿದ್ದ ಎಂಬ ಕಾರಣಕ್ಕೆ ಪಾಪಿಗಳು ಕೊಲೆ ಮಾಡಿಯೇ ಬಿಟ್ಟಿದ್ದರು. ಕೊಲೆ ಸುದ್ಧಿ ಕೇಳುತ್ತಲೇ ಮೂಡುಬಿದಿರಿ ಮಾತ್ರವಲ್ಲದೆ ದೂರದೂರುಗಳಿಂದಲೂ ಜನ ತಂಡೋಪ ತಂಡಗಳಾಗಿ ಆಗಮಿಸುತ್ತಿದ್ದರು. ಆರ್‍ಎಸ್‍ಎಸ್ ಪ್ರಮುಖ ಕಲ್ಲಡ್ಕ ಡಾ.ಪ್ರಭಾಕರ್ ಭಟ್, ಮಂಗಳೂರು ಸಂಸದ ನಳಿನ್ ಕುಮಾರ್ ಕಟೀಲು ಸೇರಿದಂತೆ ಪರಿವಾರದ ಗಣ್ಯರೆಲ್ಲರೂ ಪ್ರಶಾಂತನ ಅಂತಿಮ ದರ್ಶನ ಪಡೆದಿದ್ದರು.

ಅಂದು ನಡೆದ ಆತನ ಕೊಲೆ ಸಂಘ ಪರಿವಾರವನ್ನು ಮಾತ್ರವಲ್ಲದೆ ಇಡೀ ಮೂಡುಬಿದ್ರಿಯನ್ನೇ ಕೆರಳಿಸಿತ್ತು. ಶಾಂತಿಯ ತವರೂರಲ್ಲಿ ತಾಳ್ಮೆಯ ಕಟ್ಟೆ ಒಡೆದು
ಹೋಗಿತ್ತು. ಯಾವಾಗ ಪ್ರಶಾಂತನ ಮೃತದೇಹ ಮೂಡುಬಿದ್ರಿಯ ಪೇಟೆಯನ್ನು ಬಿಟ್ಟು ಮನೆಯ ಕಡೆ ಸಾಗಿತ್ತೋ ಆವಾಗಲೇ ತಡ ಮಾಡದೆ ತಾಳ್ಮೆಯ
ಕಟ್ಟೆಯೊಡೆದಿತ್ತು. ಕಾರ್ಯಕರ್ತರು ದಾಂಧಲೆಗೆ ಇಳಿದಿದ್ದರು. ಅಂಗಡಿಗಳನ್ನು ಸ್ವಯಂಪ್ರೇರಿತವಾಗಿ ಮುಚ್ಚಿತ್ತಾದರೂ, ಮುಚ್ಚದ ಅಂಗಡಿಗಳಿಗೆ ಕಲ್ಲು ತೂರಾಟ
ನಡೆಸಿದರು. ಮುಸಲ್ಮಾನರಿಗೆ ಸಂಬಂಧಪಟ್ಟ ಅಂಗಡಿಗಳ ಗಾಜುಗಳನ್ನು ಹುಡಿ ಹುಡಿ ಮಾಡಿದರು. ಬಸ್ಸುಗಳಿಗೆ ಕಲ್ಲು ತೂರಾಟ ನಡೆಸಿದರು. ಮೂಡುಬಿದಿರಿ ಎಂದು ಕಾಣದಂತಹ ಭೀಕರ ವಿಕೋಪಕ್ಕೆ ತಿರುಗಿಯೇ ಬಿಟ್ಟಿತ್ತು. ಅದೆಷ್ಟೂ ಪೊಲೀಸರನ್ನು ನೇಮಿಸಿದರೂ ನಿಯಂತ್ರಿಸಲು ಸಾಧ್ಯವಾಗಲೇ ಇಲ್ಲ. ಪ್ರಶಾಂತನ ಹತ್ಯೆಯಿಂದ ಸ್ತಭ್ದವಾಗಿದ್ದ ಮೂಡುಬಿದಿರಿ ಸಂಪೂರ್ಣವಾಗಿ ಬಂದ್ ಆಗಿತ್ತು. ಈ ಬಂದ್ ಎರಡನೇ ದಿನವೂ ಮುಂದುವರೆದಿತ್ತು. ಎರಡನೇ ದಿನವೂ ಬಸ್ಸುಗಳಿಗೆ ಕಲ್ಲು ತೂರಾಟ ನಡೆದಿತ್ತು. ಎಲ್ಲಿ ಏನೇ ಆದರೂ ಶಾಂತಿಯುತವಾಗಿದ್ದ ಮೂಡುಬಿದಿರಿ ಪ್ರಶಾಂತ್ ಪೂಜಾರಿ ಹತ್ಯೆಯ ವಿಷಯದಲ್ಲಿ ಮಾತ್ರ ಕುದಿದು ಕೆಂಡವಾಗಿತ್ತು. ಮೂಡುಬಿದಿರೆ ಇತಿಹಾಸದಲ್ಲೇ ಮೊದಲ ಭಾರಿಗೆ ಎರಡು ದಿನ ಬಂದ್ ಆಚರಿಸಿತ್ತು. ತನ್ನ ಉಗ್ರ ಸ್ವರೂಪವನ್ನು ತೋರಿಸಿದ್ದ 150 ಕಾರ್ಯಕರ್ತರ ಮೇಲೆ ಕೇಸು ಜಡಿಯಲಾಗಿತ್ತು.

ಈ ಮಧ್ಯೆ ಮೂಡುಬಿದಿರಿ ಶಾಸಕ ಅಭಯಚಂದ್ರ ಜೈನ್ ವಿರುದ್ಧ ಜನತೆ ಆಕ್ರೋಷಗೊಂಡಿದ್ದರು. ತನ್ನ ಕ್ಷೇತ್ರದಲ್ಲಿ ಒಬ್ಬ ಹಿಂದೂ ಸಂಘಟನೆಯ ಕಾರ್ಯಕರ್ತನ
ಹತ್ಯೆಯಾಗಿದ್ದರೂ ಆತನ ಕುಟುಂಬವನ್ನು ಭೇಟಿ ಮಾಡದ ಅಂದು ಸಚಿವರೂ ಆಗಿದ್ದ ಜೈನ್ ವಿರುದ್ಧ ಜನತೆ ಬೀದಿಗಿಳಿದಿದ್ದರು. ಪರಿಹಾರ ಬಿಡಿ, ಕನಿಷ್ಟ ಸಾಂತ್ವನವನ್ನೂ ನೀಡದ ಶಾಸಕರ ವರ್ತನೆ ಜನತೆಗೆ ಹಿತವೆನಿಸಲಿಲ್ಲ. ಈ ಕುರಿತು ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ್ದ ಅಭಯಚಂದ್ರ ಜೈನ್ “ಒಬ್ಬ ರೌಡಿ ಸತ್ತರೆ ನಾನ್ಯಾಕೆ ಹೋಗಬೇಕು” ಎಂಬ ದರ್ಪದ ಮಾತುಗಳನ್ನಾಡಿದ್ದರು. ಆದರೆ ಹಿಂದೂ ಸಂಘಟನೆಗಳು ಮಾತ್ರ ಈ ವಿಷಯವನ್ನು ಬಹಳ ಸೀರಿಯಸ್ ಆಗಿ ತೆಗೆದುಕೊಂಡಿತ್ತು.

ವಾರ ಕಳೆದರೂ ಆರೋಪಿಗಳ ಪತ್ತೆ ಹಚ್ಚದ ಪೊಲೀಸರ ವಿರುದ್ಧವೂ ಸಂಘಟನೆಗಳು ಸಿಟ್ಟಿಗೆದ್ದಿದ್ದವು. ಆರೋಪಿಗಳು ಶಾಸಕ ಅಭಯಚಂದ್ರ ಜೈನ್‍ರ ಭದ್ರ
ಕೋಟೆಯಲ್ಲಿ ಆರಾಮಾಗಿದ್ದುದು ಗುಟ್ಟಾಗಿ ಉಳಿದಿರಲಿಲ್ಲ. ಸಂಘಟನೆಗಳ ತೀವ್ರ ಒತ್ತಾಯದ ನಂತರ ಒಂದೊಂದೇ ಆರೋಪಿಗಳನ್ನು ಬಂಧಿಸಲಾಗಿತ್ತಾದರೂ ಶಾಸಕನ ಕುತಂತ್ರಿ ಬುದ್ಧಿಯಿಂದ ಕ್ರಮೇಣ ಎಲ್ಲರಿಗೂ ಜಾಮೀನು ಸಿಗುವಂತಾಯಿತು. ಅದ್ರಲ್ಲಿ ಓರ್ವ ಆರೋಪಿ ಮೈಸೂರಿನ ಕಾರಾಗೃಹದಲ್ಲೇ ಕೊಲೆಯಾಗಿದ್ದನು. ಕಿರಣ್ ಶೆಟ್ಟಿ ಎಂಬಾತ ಆರೋಪಿಯನ್ನು ಕೊಲೆ ಮಾಡಿದ್ದನು.

ಆರೋಪಿಗಳು ಶಾಸಕರ ಆಪ್ತರು ಎಂಬುವುದೂ ಬಟಬಯಲಾಗಿತ್ತು. ಪಿಎಫ್‍ಐ ಸಂಘಟನೆಯ ಕಾರ್ಯಕ್ರಮದಲ್ಲಿ ಒಟ್ಟಾಗಿ ನಿಂತಿದ್ದ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.

ಗಣ್ಯರ ಭೇಟಿ!!!

ಮತಾಂಧರಿಂದ ಹತ್ಯೆಗೊಳಗಾಗಿದ್ದ ಪ್ರಶಾಂತ್ ಪೂಜಾರಿ ಮನೆಗೆ ರಾಜ್ಯ ಹಾಗೂ ರಾಷ್ಟ್ರ ನಾಯಕರ ದಂಡೇ ಹರಿದು ಬಂದಿತ್ತು. “ಒಬ್ಬ ಮಗನನ್ನು ಕಳೆದುಕೊಂಡಿದ್ದೀರಿ ಎಂಬ ಬೇಸರ ಬೇಡ. ನಾವೆಲ್ಲಾ ನಿಮ್ಮ ಮಕ್ಕಳೇ… ಸದಾ ಕಾಲ ನಿಮ್ಮೊಂದಿಗೆ ಇದ್ದೇವೆ” ಎಂಬ ಭರವಸೆಯನ್ನು ನೀಡಿದ್ದರು. ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಸಂಸದೆ ಶೋಭಾ ಕರಂದ್ಲಾಜೆ, ವಿಧಾನ ಪರಿಷತ್ ಸದಸ್ಯ ಕ್ಯಾಪ್ಟನ್ ಗಣೇಶ್ ಕಾರ್ಣಿಕ್, ಕಾರ್ಕಳ ಶಾಸಕ ವಿ.ಸುನಿಲ್ ಕುಮಾರ್ ಸೇರಿದಂತೆ ರಾಜಕೀಯ ಮುಖಂಡರು ಸಂತಾಪ ಸೂಚಿಸಲು ಆಗಮಿಸಿದ್ದರು. ಉದ್ಯಮಿಗಳು, ಸಾಮಾಜಿಕ ಮುಖಂಡರು, ಶಿಕ್ಷಣ ಸಂಸ್ಥೆಯ ಮುಖ್ಯಸ್ಥರು ಎಂಬಂತೆ ತಂಡೋಪತಂಡವಾಗಿ ಗಣ್ಯರು ಪ್ರಶಾಂತ್ ಮನೆಗೆ ಆಗಮಿಸಿ ಸಾಂತ್ವನ ಹೇಳಿ ಧನಸಹಾಯವನ್ನು ನೀಡಿದ್ದರು.

ದಾಖಲೆ ಸೃಷ್ಟಿಸಿದ ಹಣ ಸಂಗ್ರಹ…

ಹತ್ಯೆಗೊಳಗಾದ ಪ್ರಶಾಂತ್ ಪೂಜಾರಿಯ ಪೋಷಕರಿಗೆ ಪರಿಹಾರ ನೀಡಬೇಕೆಂದು ಸರ್ಕಾರವನ್ನು ಅದೆಷ್ಟು ಒತ್ತಾಯಿಸಿದರೂ ಬಿಡಿಗಾಸನ್ನೂ ಘೋಷಿಸದ
ಸರ್ಕಾರಕ್ಕೆ ಸಂಘಟನೆಗಳು, ಸಾಮಾಜಿಕ ಕಳಕಳಿಯುಳ್ಳವರು ದಾಖಲೆಯ ಹಣವನ್ನು ಸಂಗ್ರಹಿಸಿ ಪ್ರಶಾಂತ್ ಹೆತ್ತವರಿಗೆ ನೀಡಿ ಸೆಡ್ಡು ಹೊಡೆದಿದ್ದರು. ಇಂತಹ
ಘಟನೆಗಳಿಗೆ ದೇಶದಲ್ಲಿ ಎಲ್ಲೂ ಸಂಗ್ರಹಿಸಿರದ ಮೊತ್ತವನ್ನು ಮೂಡುಬಿದ್ರಿಯಲ್ಲಿ ಸಂಗ್ರಹಿಸಿ ರಾಜ್ಯ ಕಾಂಗ್ರೇಸ್ ಸರ್ಕಾರಕ್ಕೆ ಸರಿಯಾಗಿಯೇ ಪಾಠ ಕಲಿಸಿದ್ದರು.

ಪೋಸ್ಟ್ ಕಾರ್ಡ್ ಕಳಕಳಿ…

ಭಜರಂಗದಳ ಕಾರ್ಯಕರ್ತ ಪ್ರಶಾಂತ್ ಪೂಜಾರಿಯ ಹತ್ಯೆಯ ವಿಚಾರದಲ್ಲಿ ರಾಜ್ಯ ಸರ್ಕಾರದ ನಡೆಯನ್ನು ಖಂಡಿಸಿ ಪೋಸ್ಟ್ ಕಾರ್ಡ್ ಸಂಸ್ಥೆಯ ಮಾಲೀಕರಾದ
ಮಹೇಶ್ ವಿಕ್ರಮ್ ಹೆಗ್ಡೆಯವರು ಪ್ರಶಾಂತ್ ಹೆತ್ತವರ ಸಹಾಯಕ್ಕೆ ಧಾವಿಸಿದ್ದರು. ಈ ಬಗ್ಗೆ ಸಾಮಾಜಿಕ ಜಾಲತಾಣಗಳನ್ನು ಸಮರ್ಥವಾಗಿ ಬಳಸಿದ ಮಹೇಶ್ ವಿಕ್ರಮ್ ಹೆಗ್ಡೆಯವರು ಫೇಸ್ ಬುಕ್, ಟ್ವಿಟರ್‍ಗಳನ್ನು ಬಳಸಿಕೊಂಡು ಅಭಿಯಾನವನ್ನು ಮಾಡಿ ಬರೋಬ್ಬರಿ 16 ಲಕ್ಷ ರೂಪಾಯಿಗಳನ್ನು ಸಂಗ್ರಹಿಸಿ ಮಾನವೀಯತೆಯನ್ನು ಮರೆಯುವುದರೊಂದಿಗೆ ಸಮಾಜ ಇಂತಹ ಉತ್ತಮ ಕಾರ್ಯಗಳಲ್ಲಿ ಪಾಲ್ಗೊಳ್ಳಬೇಕು ಎಂಬ ಸಂದೇಶವನ್ನು ಸಾರಿದ್ದರು. ಸರ್ಕಾರದ ದೃಷ್ಟಿಯಲ್ಲಿ ಪ್ರಶಾಂತ್ ಪೂಜಾರಿ ಗೂಂಡಾನಂತೆ ಕಂಡರೆ ನಮ್ಮ ಸಂಸ್ಥೆಯ ಮಾಲೀಕರಾದ ಮಹೇಶ್ ವಿಕ್ರಮ್ ಹೆಗ್ಡೆಯವರಿಗೆ ಅವನೊಬ್ಬ ಧರ್ಮ ರಕ್ಷಕನಂತೆ, ಸಮಾಜದ ಉದ್ಧಾರಕ್ಕಾಗಿ ಕಾರ್ಯನಿರ್ವಹಿಸುತ್ತಿರುವ ಸಾಮಾನ್ಯ ಮನುಷ್ಯನಂತೆ ಕಂಡಿದ್ದ. ಇವರ ಈ ಕಾರ್ಯ ಆ ಕುಟುಂಬಕ್ಕೆ ಮತ್ತಷ್ಟು ಸಹಕಾರ ಮಾಡುವಲ್ಲಿ ಪ್ರೇರಣೆಯಾಯ್ತು. ಈ ಅಭಿಯಾನದಿಂದ ಪ್ರೇರಿತಗೊಂಡ ಇತರ ಸಮಾಜ ಸೇವಾ ತಂಡಗಳೂ ಆತನ ಮನೆಯವರ ಸಂಕಷ್ಟಕ್ಕೆ ಸ್ಪಂಧಿಸಿತ್ತು.

ಪೋಸ್ಟ್ ಕಾರ್ಡ್ ಸಂಸ್ಥೆಯು ಇಂತಹ ಅನೇಕ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಕೊಂಡಿದ್ದು ಇತ್ತೀಚೆಗೆ ರಾಷ್ಟ್ರಮಟ್ಟದಲ್ಲಿ ಚರ್ಚೆಯಾಗಿದ್ದ “ಭಿಕ್ಷಾಂದೇಹಿ”
ಅಭಿಯಾನವೇ ಸಾಕ್ಷಿಯಾಗಿತ್ತು. ಆರ್‍ಎಸ್‍ಎಸ್ ಪ್ರಮುಖ ಡಾ.ಪ್ರಭಾಕರ ಭಟ್ ಒಡೆತನದ ಶ್ರೀ ರಾಮ ವಿದ್ಯಾ ಕೇಂದ್ರಕ್ಕೆ ಕೊಲ್ಲೂರು ದೇವಾಲಯದಿಂದ ಬರುತ್ತಿದ್ದ ವಿದ್ಯಾರ್ಥಿಗಳಿಗೆ ಭೊಜನದ ವ್ಯವಸ್ಥೆಗೆ ಸರ್ಕಾರ ಕನ್ನ ಹಾಕಿ ಧ್ವೇಷದ ಪರಮಾವಧಿಯನ್ನು ಮೆರೆದಿತ್ತು. ಪೋಸ್ಟ್ ಕಾರ್ಡ್ ಸಂಸ್ಥೆಯು “ಭಿಕ್ಷಾಂದೇಹಿ” ಆಂದೋಲನವನ್ನು ಹಮ್ಮಿಕೊಂಡು 42 ಲಕ್ಷಕ್ಕೂ ಮಿಕ್ಕಿದ ಮೊತ್ತವನ್ನೂ ಹಾಗೂ 11 ಸಾವಿರ ಕೆ.ಜಿ. ನ್ನೂ ಮೀರಿದ ಅಕ್ಕಿಯನ್ನೂ ಸಂಗ್ರಹಿಸಿ ವಿದ್ಯಾ ಕೇಂದ್ರಕ್ಕೆ ದಾನ ಮಾಡಲಾಗಿತ್ತು. ಸರ್ಕಾರಕ್ಕೆ ಡಾ.ಪ್ರಭಾಕರ ಭಟ್ ಧ್ವೇಷಿಯಾಗಿ ಕಂಡರೆ ನಮ್ಮ ಸಂಸ್ಥೆಗೆ ಮಕ್ಕಳ ಅನ್ನವನ್ನು ಕಸಿದ ಕೆಟ್ಟ ಸರ್ಕಾರವೂ ಹಾಗೂ ಮೂರು ಸಾವಿರ ಮಕ್ಕಳ ಹೊಟ್ಟೆ ತಣಿಸುವ ಪುಣ್ಯ ಕಾರ್ಯವೂ ಎಂಬತೆ ಕಂಡಿತ್ತು.

ಕೇರಳದಲ್ಲಿ ಆರ್‍ಎಸ್‍ಎಸ್ ಕಾರ್ಯಕರ್ತನನ್ನು ಬರ್ಬರವಾಗಿ ಕೊಲೆ ಮಾಡಲಾಗಿತ್ತು. ನಂತರ ಆ ಹುತಾತ್ಮನ ಪುತ್ರಿ ವಿಸ್ಮಯ ಎಂಬಾಕೆ ಆಕೆಯ ಅಳಲನ್ನು
ತೋಡಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ವೀಡಿಯೋ ಬಿತ್ತರಿಸಿದ್ದಳು. “ತನ್ನ ತಂದೆಯ ಮರಣದಿಂದ ನನ್ನ ವಿದ್ಯಾಭ್ಯಾಸ ಸ್ಥಗಿತಗೊಡಿದೆ.ನನ್ನ ಸಹಾಯಕ್ಕೆ
ಧಾವಿಸುವಿರಾ..?” ಎಂಬ ಒಂದೇ ಒಂದು ಕೂಗಿಗೆ ತಟ್ಟನೆ ಸ್ಪಂಧಿಸಿದ ಮಹೇಶ್ ವಿಕ್ರಮ್ ಹೆಗ್ಡೆಯವರು ಕೇರಳಕ್ಕೆ ತೆರಳಿ ಆಕೆಯ ವಿದ್ಯಾಭ್ಯಾಸದ ಸಂಪೂರ್ಣ
ಮೊತ್ತವನ್ನು ನೀಡಿ “ಎದೆಗುಂದದಿರಿ ನಾವಿದ್ದೇವೆ” ಎಂದು ದೈರ್ಯ ಹೇಳಿ ಬಂದಿದ್ದರು.

ಎಲ್ಲೇ, ಏನೇ, ಯಾರೇ ಕಷ್ಟದಲ್ಲಿದ್ದರು ಅವರ ಬಳಿ ದಾವಿಸಿ ನೆರವಿನ ಹಸ್ತವನ್ನು ಚಾಚುವ ಪೋಸ್ಟ್ ಕಾರ್ಡ್ ಸಂಸ್ಥೆಯ ಮಾಲೀಕರಾದ ಮಹೇಶ್ ವಿಕ್ರಮ್ ಹಗ್ಡೆಯವರು ಸಮಾಜದ ಬಗ್ಗೆ ಕಳಕಳಿ ಉಳ್ಳವರಾಗಿದ್ದಾರೆ. ಉತ್ತಮ ಸಮಾಜಕ್ಕಾಗಿ ಇಂತಹ ಕೆಲಸಗಳನ್ನು ಮುಂದುವರೆಸಿಕೊಂಡು ಹೋಗಲು ನಮ್ಮ ಪೋಸ್ಟ್ ಕಾರ್ಡ್ ಸಂಸ್ಥೆ ಬದ್ಧವಾಗಿರುತ್ತದೆ ಎಂದೂ ಹೆಮ್ಮೆಪಡುತ್ತಾರೆ.

ಒಟ್ನಲ್ಲಿ ಪ್ರಶಾಂತ್ ಪೂಜಾರಿ ಹತ್ಯೆಯು ನಮ್ಮ ರಾಜ್ಯದಲ್ಲಿ ದುಷ್ಟರ ಅಟ್ಟಹಾಸವನ್ನೂ, ಅದನ್ನು ನಿಯಂತ್ರಿಸಲಾಗದ ಮತಾಂಧ ಸರ್ಕಾರದ ನೀತಿಗೆಟ್ಟ ಆಡಳಿತವನ್ನೂ ತೋರಿಸುತ್ತದೆ. ಪ್ರಶಾಂತ್ ನಂತರ ಅನೇಕ ಹಿಂದೂ ಸಂಘಟನೆಗಳ ಕಾರ್ಯಕರ್ತರನ್ನು ಹತ್ಯೆ ಮಾಡಲಾಗಿತ್ತಾದರೂ ರಾಜ್ಯ ಸರ್ಕಾರ ಮಾತ್ರ ಕೈಗೆ ಬಳೆ ತೊಟ್ಟವರಂತೆ ವರ್ತಿಸುತ್ತಿದೆ.

ಪ್ರಶಾಂತ್ ನಮ್ಮನ್ನಗಲಿ 2 ವರ್ಷಗಳಾದರೂ ಆತನ ನೆನಪು ಮಾತ್ರ ಅಜರಾಮರ. ಅದೆಷ್ಟೋ ಯುವಕರು ಪ್ರಶಾಂತನನ್ನು ಕಳೆದುಕೊಂಡ ಕಿಚ್ಚಿಗೆ ಸಂಘಟನೆಗೆ
ಧುಮುಕಿ ಬಲಪಡಿಸಿದ್ದರೇ ವಿನಃ, ಭಯಪಟ್ಟು ದೂರವಾಗಲಿಲ್ಲ. “ಇದು ಅಂಜುವ ಸಂತಾನವಲ್ಲ, ಆಂಜನೇಯನ ಸಂತಾನ”ವೆಂದು ಮತ್ತೆ ಮತ್ತೆ ನಿರೂಪಿಸಿದರು. ಇದಕ್ಕೆ ಆತನ ಮರಣಾ ನಂತರ ಮೂಡುಬಿದ್ರಿಯಲ್ಲಿ ನಡೆದ ಆರ್‍ಎಸ್‍ಎಸ್ ನ ಪಥ ಸಂಚಲನಕ್ಕೆ ಸೇರಿದ್ದ ಕಾರ್ಯಕರ್ತರೇ ಸಾಕ್ಷಿಯಾಗಿದ್ದರು…

“ನೀನಿಲ್ಲದಿದ್ದರೇನಂತೆ, ನೀ ತೋರಿಸಿಕೊಟ್ಟ ಧರ್ಮ ರಕ್ಷಣೆಯ ಮಾರ್ಗ ನಿನ್ನನ್ನು ಮತ್ತೆ ಮತ್ತೆ ನೆನಪಿಸುವಂತೆ ಮಾಡುತ್ತಿದೆ. ಹಿಂದೂ ಧರ್ಮದ ಕ್ರಾಂತಿಯನ್ನು ಮತ್ತೆ ಮತ್ತೆ ಮೊಳಗಿಸುತ್ತಿದೆ. ದುಷ್ಟರ ಸಂಹಾರಕ್ಕಾಗಿ, ಹಿಂದೂ ಧರ್ಮದ ರಕ್ಷಣೆಗಾಗಿ, ಮತ್ತೊಮ್ಮೆ ಹುಟ್ಟಿ ಬಾ ವೀರ ಶಿವಾಜಿಯಾಗಿ. ನಮ್ಮ ಪ್ರೀತಿಯ ಪ್ರಶಾಂತನಾಗಿ”.

-ಸುನಿಲ್

Tags

Related Articles

Close