ಅಂಕಣ

ಭಾರತದ ಈ ರಾಜ್ಯದಲ್ಲಿರುವುದು ಕೇವಲ ಆರೇ ಚರ್ಚುಗಳು! ತೆರೆಯುವುದು ವರ್ಷಕ್ಕೊಂದೇ ದಿನ ಮಾತ್ರ! ಯಾಕೆ ಗೊತ್ತೇ?

ಕಾಶ್ಮೀರ ಪ್ರಕೃತಿ ಸೌಂದರ್ಯವನ್ನು ತನ್ನ ಒಡಲಲ್ಲಿ ತುಂಬಿಕೊಂಡು ಕಂಗೊಳಿಸುತ್ತಿರುವ ರಾಜ್ಯ. ಅಲ್ಲಿಯ ಸುಂದರವಾದ ಸೊಬಗು ಎಲ್ಲರಿಗೂ ಇಷ್ಟವಾಗುತ್ತೆ ಆದರೆ ಇಂದು ಅಲ್ಲಿಯ ಪರಿಸ್ಥಿತಿ ನೋಡಿದ್ರೆ ಎಂತವರಿಗೂ ಕೂಡ ಮರುಕ ಹುಟ್ಟಿಬಿಡುವುದಂತೂ ನಿಜ!! ಆದರೆ ಭಾರತದಾದ್ಯಂತ ಕ್ರೈಸ್ತರು ತಮ್ಮ ಅಧಿಪತ್ಯವನ್ನು ಎಲ್ಲೆಡೆ ಸ್ಥಾಪಿಸುತ್ತಿದ್ದರೂ ಕೂಡ ಕಾಶ್ಮೀರದ ಕಡೆ ಬೆರಳು ಮಾಡೋದಿಲ್ಲ. ಅಷ್ಟೇ ಅಲ್ಲದೇ ಕಾಶ್ಮೀರದಲ್ಲಿ ಕ್ರಿಸ್ಟಿಯನ್ನರು ಯಾವ ರೀತಿಯ ಜೀವನ ಸಾಗಿಸುತ್ತಾರೆ ಎಂದರೆ ಒಂದು ಸಲ ನೀವು ದಂಗಾಗುತ್ತೀರಿ!! ಅಷ್ಟೇ ಅಲ್ಲದೇ ಕಾಶ್ಮೀರದಲ್ಲಿರುವ ಕ್ರೈಸ್ತರ ಜನಜೀವನದ ಬಗ್ಗೆ ಇಷ್ಟರವರೆಗೂ ಯಾರು ಮಾತಾನಾಡಿದ್ದೇ ಇಲ್ಲ!!

ಭಾರತ ಜಾತ್ಯಾತೀತ ರಾಷ್ಟ್ರವಾಗಿದ್ದು, ಭಾರತಾಂಬೆ ತನ್ನ ಮಡಿಲಿನಲ್ಲಿ ಎಲ್ಲರಿಗೂ ಆಶ್ರಯವನ್ನು ನೀಡಿದ ಕರುಣಾಮಯಿ. ಈ ಮಾತು ಯಾಕೆ ಬಂತು ಎಂದರೆ
ಭಾರತವನ್ನು ಪರಾಕೀಯರು ಬಂದು ದಾಳಿ ನಡೆಸಿದ್ದಲ್ಲದೇ ತಮ್ಮ ಸಾಮ್ರಾಜ್ಯವನ್ನು ಕಟ್ಟಿದ್ದರು. ಆದರೆ ಭಾರತಕ್ಕೆ ಸ್ವಾತಂತ್ರ್ಯ ಯಾವಾಗ ಸಿಕ್ಕಿತೋ ತದನಂತರದಲ್ಲಿ ಅನೇಕ ರೀತಿಯ ಬದಲಾವಣೆಗಳು ಆಗುತ್ತಾ ಹೋಗಿರುವುದು ನಮಗೆಲ್ಲಾ ತಿಳಿದ ವಿಚಾರ. ಆದರೆ ಕಾಶ್ಮೀರದಲ್ಲಿರುವ ಕ್ರೈಸ್ತರ ಬಗ್ಗೆ ಗೊತ್ತಾದರೇ, ಕ್ರೈಸ್ತರ ಜೀವನ ಇಷ್ಟೊಂದು ಶೋಚನೀಯ ಸ್ಥಿತಿಯಲ್ಲಿದೆಯಾ ಅಂದುಕೊಳ್ಳೋದು ಗ್ಯಾರೆಂಟಿ!!

ಆದರೆ ಭಾರತದ ಸ್ವರ್ಗ ಎಂದೆನಿಸಿದ ಕಾಶ್ಮೀರ, ಇಂದು ಭಯೋತ್ಪಾದಕರ ದಾಳಿಗೆ ಒಳಗಾಗಿ ಹಿಂಸಾಚಾರಗಳೇ ತುಂಬಿತುಳುಕಾಡುತ್ತಿದೆ. ಜಮ್ಮು ಕಾಶ್ಮೀರದಲ್ಲಿರುವ ಜನಸಂಖ್ಯೆಯನ್ನು ತಾಳೆ ಹಾಕಿದಾಗ ಅದರಲ್ಲಿ ಶೇಕಡಾ 67ರಷ್ಟು ಮುಸಲ್ಮಾರು, ಶೇಕಡಾ 29.6ರಷ್ಟು ಹಿಂದುಗಳಿದ್ದರೆ ಕೇವಲ 0.2ರಷ್ಟು ಕ್ರಿಸ್ತಿಯನ್ನರು ಇದ್ದಾರೆ. ಆದರೆ ಕೇವಲ ಕಾಶ್ಮೀರದ ಕಣಿವೆ ಪ್ರದೇಶದಲ್ಲಿ ಶೇಕಡಾ 97ರಷ್ಟು ಮುಸಲ್ಮಾನರಿದ್ದಾರೆ!!! ಹಾಗೆಯೇ ಸುಮಾರು 650 ಮಂದಿ ಸ್ಥಳಿಯ ಕ್ರೈಸ್ತರು ಕಾಶ್ಮೀರ ಕಣಿವೆಯಲ್ಲಿ ತಮ್ಮ ಜೀವನವನ್ನು ಸಾಗಿಸುತ್ತಿದ್ದಾರೆ. ಹಾಗಾದರೆ ಇಲ್ಲಿ ಕ್ರೈಸ್ತರ ಜನಸಂಖ್ಯೆ ಕಡಿಮೆ ಇರಲು ಕಾರಣವೇನು? ಕಾರಣ ಇಷ್ಟೇ, ಮುಸಲ್ಮಾನರ ಭಯ!!

ಹೌದು….. ಕಾಶ್ಮೀರವು ಮುಸ್ಲಿಂ ಪ್ರದೇಶವಾದುದರಿಂದ ಇಲ್ಲಿನ ಕ್ರೈಸ್ತರ ಜೀವನವು ಬಹಳ ಕಷ್ಟಕರವಾಗಿದ್ದು, ಉದ್ವಿಗ್ನ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ. ಇತಿಹಾಸದ ಪುಟಗಳನ್ನು ತಿರುವುತ್ತಾ ಹೋದರೆ, ಕಾಶ್ಮೀರದಲ್ಲಿ 1947ಕ್ಕಿಂತಲೂ ಹಿಂದೆ ಅಂದರೆ ಬ್ರಿಟಿಷರ ಆಳ್ವಿಕೆಯ ಸಂದರ್ಭದಲ್ಲಿ ಸರಿ ಸುಮಾರು 6 ಚರ್ಚ್‍ಗಳನ್ನು ನಿರ್ಮಿಸಿದ್ದರು!! ಹೌದು ಬಹಳ ಪುರಾತನವಾದ ಚರ್ಚ್‍ಗಳನ್ನು ಹೊಂದಿರುವ ಕಾಶ್ಮೀರದಲ್ಲಿ ತುಂಬಾ ಹಳೆಯ ಚರ್ಚ್‍ಗಳಾದ ಶ್ರೀನಗರದ ಹೋಲಿ ಪ್ಯಾಮಿಲಿ ಕ್ಯಾಥೋಲಿಕ್ ಚರ್ಚ್, ಅಲ್ ಸೇಂಟ್ ಪ್ರೊಟೆಸ್ಟೆಣಟ್ ಚರ್ಚ್, ಬರಮುಲ್ಲಾದ ಸೇಂಟ್ ಜೋಸೆಫ್ ಮತ್ತು ಗುಲ್‍ಮಾರ್ಗದ ಸೇಂಟ್ ಮೇರಿಸ್ ಚರ್ಚ್ ಇದೆ. ಇವೆಲ್ಲವೂ ಬ್ರಿಟಿಷರು ತಮ್ಮ ಆಳ್ವಿಕೆಯ ಸಂದರ್ಭದಲ್ಲಿ ಕಟ್ಟಿದಂತಹ ಚರ್ಚ್‍ಗಳಾಗಿವೆ.

ಬ್ರಿಟಿಷರನ್ನು ಹೊರತುಪಡಿಸಿ ಇಲ್ಲಿ ಯಾವುದೇ ರೀತಿಯ ಚರ್ಚ್‍ಗಳನ್ನು ನಿರ್ಮಿಸಲಾಗಿಲ್ಲ!! ವಿಪರ್ಯಾಸ ಎಂದರೆ ಸುಂದರ ಕಾಶ್ಮೀರ ಕಣಿವೆಯಲ್ಲಿ ಇಷ್ಟು
ಪುರಾತನವಾದ ಚರ್ಚ್‍ಗಳು ಇದ್ದರೂ ಕೂಡ ಅವು ತೆರೆಯುವುದು ಮಾತ್ರ ವರ್ಷದ ಒಂದೇ ಒಂದು ದಿನ ಎಂದರೆ ನಂಬ್ತೀರಾ… ಆದರೆ ಇದನ್ನ ನೀವು ನಂಬಲೇ ಬೇಕು ಯಾಕೆಂದರೆ ಮುಸ್ಲಿಂಮರಿಂದ ಅನ್ಯಾಯಕ್ಕೊಳಗಾಗಿರುವ ಇವರಿಗೆ ಚರ್ಚ್‍ನಲ್ಲಿ ಪೂಜೆ ಸಲ್ಲಿಸಲು ಇರುವುದು ವರ್ಷದ ಒಂದು ದಿನ ಅಂದರೆ ಅದು ಕ್ರಿಸ್‍ಮಸ್ ದಿನದಂದು!!!

ಹೌದು… ಯಾಕೆಂದರೆ ಮುಸಲ್ಮಾನರೇ ತುಂಬಿರುವ ಈ ಪ್ರದೇಶದಲ್ಲಿ ಕ್ರೈಸ್ತರು ತಮ್ಮ ಜೀವನವನ್ನು ನಡೆಸುವುದೇ ಕಷ್ಟಕರವಾಗಿದೆ. ಅಷ್ಟೇ ಅಲ್ಲದೇ ಇಲ್ಲಿನ ಕ್ರೈಸ್ತರು ತಮ್ಮ ಧರ್ಮವನ್ನೇ ಮರೆತಿರುವ ಸ್ಥಿತಿಯಲ್ಲಿದ್ದಾರೆ ಎಂದರೆ ಅದಕ್ಕೆಲ್ಲಾ ಕಾರಣ ಮುಸಲ್ಮಾನರ ಭಯ!! ಅಷ್ಟೇ ಅಲ್ಲದೇ 1947ರ ನಂತರ ಇಲ್ಲಿ ಯಾವುದೇ ರೀತಿಯ ಹೊಸ ಚರ್ಚ್‍ಗಳು ನಿರ್ಮಾಣಗೊಂಡಿಲ್ಲ ಅನ್ನೋದು ಇನ್ನೊಂದು ವಿಚಿತ್ರ. ಕ್ರಿಸ್ಚಿಯನ್ ಮಿಷನರಿಗಳೇ ತುಂಬಿ ತುಳುಕಿರುವ ಭಾರತದಲ್ಲಿ ಕಾಶ್ಮೀರದ ಕಣಿವೆ ಪ್ರದೇಶದಲ್ಲಿ ಮಾತ್ರ ತಮ್ಮ ಮಿಷನರಿಗಳನ್ನು ಸ್ಥಾಪಿಸಿಲ್ಲ ಎನ್ನುವುದು ಇನ್ನೊಂದು ಆಶ್ಚರ್ಯ!

ಇಷ್ಟೆಲ್ಲಾ ವಿಚಾರಗಳು ಇದ್ದರೂ ಕೂಡ ನಮ್ಮ ಬುದ್ದಿಜೀವಿಗಳು ಯಾವಾತ್ತು ಇವರ ಬಗ್ಗೆ ಕಿಂಚಿತ್ತೂ ಕರುಣೆನೂ ತೋರಿಸಿಲ್ಲ. ಆದರೆ ಭಾರತದಾದ್ಯಂತ ತಮ್ಮ
ಮಿಷನರಿಗಳನ್ನು ಸ್ಥಾಪಿಸಿರುವ ಕ್ರೈಸ್ತರು ಕಾಶ್ಮೀರದಲ್ಲಿ ಮತಾಂಧರ ಮಾಡಲು ಮುಂದಾಗುತ್ತಿಲ್ಲ ಯಾಕೆ? ಬುದ್ದಿಜೀವಿಗಳೇ… ಕಾಶ್ಮೀರದಲ್ಲಿ ಇಂದಿನ ಪರಿಸ್ಥಿತಿಗೆ
ಕಾರಣವಾದರೂ ಯಾರು? ಇದಕ್ಕೆಲ್ಲ ನಿಮ್ಮಿಂದ ಉತ್ತರವೇ ಇಲ್ಲ ಬಿಡಿ. ಅಷ್ಟೇ ಅಲ್ಲದೇ ಕಾಶ್ಮೀರದಲ್ಲಿರುವ ಕ್ರೈಸ್ತರ ಸ್ಥಿತಿಯ ಬಗ್ಗೆ ಇಂದು ಯಾವುದೇ ಮಾಧ್ಯಮಗಳಾಗಲಿ ಅಥವಾ ಬುದ್ದಿ ಜೀವಿಗಳಾಗಲಿ ಮಾತಾನಾಡುತ್ತಿಲ್ಲ ಯಾಕೆ?

ವರ್ಷದಲ್ಲಿ ಒಂದು ಬಾರಿ ತೆರೆಯುವ ಚರ್ಚ್‍ಗಳು ಹೊಸತನವನ್ನು ಭಯಸುತ್ತೀವೆಯೋ ಏನೋ? ಬುದ್ದಿಜೀವಿಗಳೇ ಎಲ್ಲೆಡೆ ಮಸೀದಿ, ಚರ್ಚ್‍ಗಳನ್ನು ಕಟ್ಟಲು ಅನುಮತಿ ನೀಡುವ ನೀವುಗಳು ನಿಮಗೆ ಧಮ್ ಇದ್ದರೇ ಕಾಶ್ಮೀರ ಕಣಿವೆಯಲ್ಲಿ ಚರ್ಚ್‍ನ್ನು ನಿರ್ಮಿಸಲು ಅನುಮತಿ ನೀಡಿ!! ಮತಾಂತರ ಮಾಡಲು ಅಲ್ಲಿಗೂ ಸ್ವಲ್ವ ಕಳುಹಿಸಿ ಬುದ್ದಿಜೀವಿಗಳೇ.. ವಿಪರ್ಯಾಸ ಏನು ಗೊತ್ತಾ ನೀವು ಇದಕ್ಕೆಲ್ಲ ಅನುಮತಿಯನ್ನು ಯಾವತ್ತು ನೀಡಲಾರಿರಿ… ಯಾಕೆಂದರೆ ನಿಮಗೆ ನಿಮ್ಮ ಇರುವಿಕೆಯ ಚಿಂತೆ, ಅಷ್ಟೇ ಅಲ್ಲದೇ ನಿಮಗೆ ಭಯೋತ್ಪಾದಕರೆಂದರೆ ಒಡಹುಟ್ಟಿದವರ ಹಾಗೆ ಅಲ್ವೇ?

ಮೂಲ:ChristianPost – Original

– ಅಲೋಖಾ

Tags

Related Articles

Close