ಅಂಕಣ

ಭಾರತದ ಎಲ್ಲಾ ಸುದ್ದಿ ವಾಹಿನಿಗಳೂ ಸಹ ಹಿಂದೂ ವಿರೋಧಿ ಸುದ್ದಿಯನ್ನು ಒಗ್ಗಟ್ಟಿನಿಂದ ಬಿತ್ತರಿಸುವ ಹಿಂದಿನ ಅಜೆಂಡಾ!! ಓದಿದರೆ ದಂಗಾಗುವಿರಿ!

ಗೌರಿ ಲಂಕೇಶ್ ರವರ ಹತ್ಯೆಯ ಪ್ರಕರಣವನ್ನು ಭಾರತದ ಬಹುತೇಕ ಮಾಧ್ಯಮಗಳು ತೀರಾ ಪ್ರಮುಖವಾಗಿಯೇ ಬಿತ್ತರಿಸಿದೆ. ಭಾರತದಲ್ಲಿ ಯಾವುದು ಪ್ರಮುಖ
ವಿಚಾರ ಎಂದು ನಿರ್ಧರಿಸುವ ಅವರು, ಸುದ್ದಿಗೆ ಒಂದಷ್ಟು ಊಹಾಪೋಹಗಳನ್ನು ಹರಿಯಬಿಡುತ್ತಾರೆ!

ಯಾವಾಗ ಭಾರತದ ಎಲ್ಲಾ ರಾಷ್ಟ್ರೀಯ ಸುದ್ದಿ ವಾಹಿನಿಗಳಲ್ಲಿ ಹತ್ಯೆಯನ್ನು ವಿಶೇಷವಾಗಿ ಬಿತ್ತರಿಸಿದ್ದೇ, ಅಂತರಾಷ್ಟ್ರೀಯ ಮಾಧ್ಯಮಗಳೂ ಲಗ್ಗೆಯಿಟ್ಟವು!
ಪರಿಣಾಮವಾಗಿ ಜರ್ಮನ್ನಿನ ಸುದ್ದಿ ವಾಹಿನಿಯಲ್ಲಿಯೂ ಸಹ ಪ್ರಸಾರವಾಯಿತು! ಹೇಗೆ ಭಾರತದಲ್ಲಿ ‘ಅಸಹಿಷ್ಣುತೆ’ ಹೆಚ್ಚಾಗುತ್ತಿದೆ ಹಾಗೂ ‘ಹಿಂದುತ್ವ’ ಪ್ರತಿಪಾದಿಸುವ ಸರಕಾರವು ಹೇಗೆ ಇದನ್ನು ಅಲ್ಲಗೆಳೆಯುತ್ತಿದೆ ಎಂಬುದನ್ನೂ ಪ್ರಸಾರ ಮಾಡಿಯೇ ಬಿಟ್ಟವು!

ಸುದ್ದಿ ವಾಹಿನಿಗಳ ಊಹಾಪೋಹದ ರೆಕ್ಕೆಗಳಿಗೆ ಹೊಡೆತ ಕೊಟ್ಟಿದ್ದು ಗೌರಿ ಲಂಕೇಶ್ ತಮ್ಮನಾದ ಇಂದ್ರಜಿತ್ ಲಂಕೇಶ್ ರವರ ಹೇಳಿಕೆ! ಅಲ್ಲಿಯ ತನಕವೂ
ಊಹಾಪೋಹಗಳನ್ನೇ ತೆರೆದಿಟ್ಟಿದ್ದ ಮಾಧ್ಯಮಗಳ ಪ್ರಯತ್ನವೆಲ್ಲಾ ವ್ಯರ್ಥವೇ ಆಯಿತು!

ತನಿಖೆಯ ಕೊನೆಯ ವರದಿ ಏನಿರಬಹುದು ಎಂಬ ಆಸಕ್ತಿಯೂ ಅಲ್ಲಿ ಯಾರಿಗೂ ಉಳಿದಿಲ್ಲ. ಈ ಮಾಧ್ಯಮಗಳ ‘ಗೊತ್ತು’ ಎಂಬ ಧೋರಣೆಯೆಂಬುದಿದೆಯಲ್ಲ,
ಅದೀಗಾಗಲೇ ‘ಹಿಂದೂ ಮೂಲಭೂತವಾದಿ’ಗಳನ್ನೇ ಗುರಿಯಾಗಿಸಿಬಿಟ್ಟಿದ್ದೂ ಅಲ್ಲದೆಯೇ ಸಮಾಜಕ್ಕೆ ‘ಹಾನಿಕರ’ ಎಂದು ಬಿಂಬಿಸಿದ ಮಾಧ್ಯಮಗಳದು ನಿಜಕ್ಕೂ
ಅನ್ಯಾಯ ಹಾಗೂ ಅಪರಾಧವೇ!

ಸತ್ಯವೇ ತಾನೇ?! ಒಂದಷ್ಟು ಸುಳ್ಳುಗಳನ್ನೇ ನೂರಾರು ಬಾರಿ ಆಡಿದಾಗ ಅದು ಸತ್ಯವೆಂದೇ ಕೆಲಕಾಲ ಬಿಂಬಿತವಾಗುತ್ತದೆ. ಅಂತ್ಯದಲ್ಲಿ ಅದರ ಅರಿವಾದರೂ ಸಹ, ಅಲ್ಲಿಯವರೆಗೂ ಸಮಾಜ ಸುಳ್ಳಿನ ನೆಲೆಗಟ್ಟಿನ ಮೇಲೆಯೇ ಬದುಕಿರುತ್ತದೆ!

ಈ ಭಾರತದ ಮಾಧ್ಯಮಗಳು ಪರದೆಯ ಮೇಲೆ ತೋರಿಸುವ ದೃಶ್ಯಾವಳಿಗಳಿಂದ ನಾನದೆಷ್ಟು ಆಘಾತಕ್ಕೊಳಗೊಂಡೆನೋ! ಒಂದಷ್ಟು ಶತಮಾನಗಳ ಹಿಂದೆ ನಾನು ಮನೋವಿಜ್ಞಾನದ ವಿದ್ಯಾರ್ಥಿಯಾಗಿದ್ದಾಗ, ಹೇಗೆ ಪ್ರಜ್ಞಾಪೂರ್ವಕವಾದ ಒಂದಷ್ಟು ಸಂದೇಶಗಳು ಜಾಹೀರಾತುಗಳ ಮೂಲಕವಾಗಿ ಹೇಗೆ ಸಮಾಜದ ಮನಃಸ್ಥಿತಿಯ ಮೇಲೆ ಅದೆಷ್ಟು ಪ್ರಭಾವ ಬೀರುತ್ತದೆಂದು ಕಲಿತಿದ್ದೆ. ಒಂದು ಜಾಹೀರಾತನ್ನಾಗಲಿ ಅಥವಾ ಸುದ್ದಿಯನ್ನಾಗಲಿ, ಅಧ್ಯಯನ ಮಾಡದೇ ಹಾಗೂ ವಿಷಯವನ್ನು ಸಂಸ್ಕರಿಸದೇ ಪ್ರಸಾರ ಮಾಡುವ ಮನಸ್ಥಿತಿಯನ್ನೂ ಸಹ ಅರಿತಿದ್ದೆ.

ಒಮ್ಮೆ ನಾನು ಒಂದು ಮಾಧ್ಯಮದಲ್ಲಿ ಪರದೆಯ ಬಲಪಕ್ಕದಲ್ಲಿ ಒಂದು ಪಿಸ್ತೂಲು ಹಿಡಿದ ಕೈ ಗುಂಡು ಹಾರಿಸುತ್ತಿರುವ ಗ್ರಾಫಿಕ್ಸ್ ನನ್ನು ನೋಡಿದೆಯಷ್ಟೇ. 20
ಸೆಕೆಂಡುಗಳಿಗೊಮ್ಮೆ ಪರದೆಯ ತುದಿಯಿಂದ ಆ ಕೈ ಎಲ್ಲೆಲ್ಲೂ ಗುಂಡು ಹಾರಿಸುತ್ತಿತ್ತು. ನಾನು ಕೊನೆ ಕೊನಗೆ ಅದರ ಬರುವಿಕೆಗಾಗಿ ಕಾಯುತ್ತಾ ಕುಳಿತೆನಾದರೂ ಸಹ ಆ ಕೈ ಯಾರದ್ದು, ಯಾಕಾಗಿ ಎಂಬುದೂ ಅರಿಯದೇ ಹೋದೆ!

ಇದರ ಬಗ್ಗೆ ನಾನು ಟ್ವಿಟ್ಟರ್ ನಲ್ಲಿ ಬರೆದಾಗ ಎರಡು ಜನ ಅವರೂ ನೋಡಿದ್ದಾಗಿ ನನಗೆ ಪ್ರತ್ಯುತ್ತರ ಕೊಟ್ಟರು. ಕೆಲವು ತಿಂಗಳ ಹಿಂದೆಯಷ್ಟೇ, ಒಂದು ಮಾಧ್ಯಮದಲ್ಲಿ, ಪರದೆಯ ಎಡ ಬದಿಯ ಕೆಳಗೆ ಕುರಾನ್ ಎಂದು ಬರೆದು ಅದರ ಕೆಳಗೆ ಒಂದಷ್ಟು ಸಾಲುಗಳನ್ನೂ ನೋಡಿದೆ. ಅದೇನೆಂದು ಖಾತ್ರಿ ಪಡಿಸಿಕೊಳ್ಳುವ ಮುನ್ನವೇ ಅದು ಮಾಯವಾಗಿ ಬಿಡುತ್ತಿತ್ತು.

ಯಾಕೆ ಈ ಮಾಧ್ಯಮದವರು ಅಂತರಾಷ್ಟ್ರೀಯ ಸುದ್ದಿ ವಾಹಿನಿಗಳನ್ನು ಅನುಸರಿಸುವುದಿಲ್ಲ?! ಭಾರತದಲ್ಲಿ ಮಾತ್ರ ಯಾಕೆ ಸುದ್ದಿ ವಾಹಿನಿಗಳು ಅತಿರೇಕವೆನ್ನುವಷ್ಟು ನಡೆದುಕೊಳ್ಳುತ್ತಾರೆ?! ಒಮ್ಮೆ ಅವರೆಲ್ಲರೂ ಸಹ ಅಂತರಾಷ್ಟ್ರೀಯ ವಾಹಿನಿಗಳನ್ನು ನೋಡಬೇಕು. ಹೊಂದಿಸಿ ನೋಡುವುದಾದರೆ, ‘ಡಚ್ ವೆಲ್ಲೆ’ ಎಂಬ ಸುದ್ದಿ ವಾಹಿನಿಯೊಂದನ್ನು ನೋಡಲು ತೀರಾ ಬೇಸರವೆನಿಸಬಹುದು. ಆದರೆ, ಅದರ ಪ್ರತಿ ಗಳಿಗೆಯ ದೃಶ್ಯಾವಳಿಗಳೆಲ್ಲವೂ ಸಹ ಶಾಂತಿಯುತವಾದ ಪೃಕ್ರತಿಯ ಚಲನಚಿತ್ರವಿದು ಎನ್ನಿಸುತ್ತದೆ!

ನಾನು ನಿಜಕ್ಕೂ ಇಂತಹ ಕ್ರೂರತೆಯನ್ನು ಬಿಂಬಿಸುವ ಮಾಧ್ಯಮದವರ ದೃಶ್ಯಾವಳಿಗಳನ್ನು ಒಪ್ಪುವುದಿಲ್ಲ. ಭಾರತದ ಮಾಹಿತಿ ಹಾಗೂ ಪ್ರಸರಣ ಇಲಾಖೆ ಹೇಗೆ
ಭೀಭತ್ಸವಾದ ಶಬ್ದಗಳು, ದೃಶ್ಯಾವಳಿಗಳು ಒಬ್ಬ ವ್ಯಕ್ತಿಯ ಮೆದುಳನ್ನು ಹಾಗೂ ಚಿಂತನೆಯನ್ನು ಹಾಳುಗೆಡಿಸುತ್ತವೆ ಎಂಬುದರ ಬಗ್ಗೆ ನಿರಂತರವಾಗಿ ಅಧ್ಯಯನ ನಡೆಸಿ ತದನಂತರ ಅದನ್ನು ಅಳವಡಿಸಿಕೊಳ್ಳುವುದು ಅಗತ್ಯವಾಗಿದೆ! ಆದರೆ, ಈ ತರಹದ ಜಾಹೀರಾತುಗಳು ಯಾವುದೇ ಕಾರಣಕ್ಕೂ ಸಹ ಇದು
ಪ್ರಯೋಜನಕಾರಿಯಾಗುವುದಿಲ್ಲ, ಬದಲಿಗೆ ಸಮಾಜದ ಸ್ವಾಸ್ಥ್ಯವನ್ನು ಹಾಳುಗೆಡವುತ್ತದೆಯಷ್ಟೇ!

ಮೂಲ : ಮರಿಯಾ ವ್ರಿತ್

– ಪೃಥ

Tags

Related Articles

Close