ಪ್ರಚಲಿತ

ಭಾರತದ ಮುಂದೆ ಮತ್ತೊಮ್ಮೆ ಮಂಡಿಯೂರಿದ ವಿಶ್ವದ ದೊಡ್ಡಣ್ಣ!! ಅಮೇರಿಕಾ ತಲೆ ಬಾಗಲು ಮೋದಿ ಮಾಡಿದ ಮೋಡಿ ಏನು ಗೊತ್ತೇ?

ಭಾರತಕ್ಕೆ ಸಂಪೂರ್ಣ ತಂತ್ರಜ್ಞಾನ ವರ್ಗಾವಣೆ ಮಾಡಿದರೆ ಮಾತ್ರವೇ ಅನುಮತಿ ಎಂದು ಅಮೆರಿಕಾಗೆ ಭಾರತ ಸ್ಪಷ್ಟ ಪಡಿಸಿದೆ  ..ಸಂಪೂರ್ಣ ಸಹಕಾರ ನೀಡುವುದಾಗಿ ಸಾಬ್(SAAB ) ಸಂಸ್ಥೆ ಹೇಳಿಕೆ ನೀಡಿದೆ…ಪ್ರಧಾನಿ ಮೋದಿಯ ಕನಸಿನ ಕೂಸಾಗಿರುವ ಮೇಕ್ ಇನ್ ಇಂಡಿಯಾ ಅಭೂತಪೂರ್ವ ಯಶಸ್ಸಿನತ್ತ ದಾಪುಗಾಲು ಹಾಕುತ್ತಿದೆ.

ಸ್ವೀಡಿಷ್ ರಕ್ಷಣಾ ದೈತ್ಯ ಸಾಬ್ ಗ್ರೂಪ್ ಇಂದು ಭಾರತೀಯ ವಾಯುಪಡೆಗೆ ಅತ್ಯಾಧುನಿಕ ಸಿಂಗಲ್ ಎಂಜಿನ್ ಪೈಟರ್ ಜೆಟ್ ಪೂರೈಸಲು ಕೇಂದ್ರ ಸರ್ಕಾರದಿಂದ ಒಪ್ಪಂದವನ್ನು ಪಡೆಯುವುದಾದರೆ “ಗ್ರಿಪೆನ್-ಇ” ಅತ್ಯಾಧುನಿಕ ಯುದ್ದ ವಿಮಾನವನ್ನು ಭಾರತಕ್ಕೆ ಸಂಪೂರ್ಣ ತಂತ್ರಜ್ಞಾನ ವರ್ಗಾವಣೆಗೆ ಮಾಡುವ ಮೂಲಕ ಖಚಿತಪಡಿಸುತ್ತದೆ ಎಂದು ಹೇಳಿದೆ.. ಅಮೆರಿಕಾ ರಕ್ಷಣಾ ಸಂಸ್ಥೆ ಲಾಕ್ಹೀಡ್ ಮಾರ್ಟಿನ್ ಮತ್ತು ಸಾಬ್ ( SAAB) ಭಾರತೀಯ ವಾಯುಪಡೆಗೆ ಯುದ್ದ ವಿಮಾನವನ್ನು ಪೂರೈಸಲು ಪೈಪೆÇೀಟಿ ನಡೆಸುತ್ತಿದೆ..,ಆದರೆ ಅಮೆರಿಕಾ ರಕ್ಷಣಾ ಸಂಸ್ಥೆ ತಂತ್ರಜ್ಞಾನ ವರ್ಗಾವಣೆಯ ಬಗ್ಗೆ ಯಾವುದೇ ಹೇಳಿಕೆ ನೀಡಿಲ್ಲ..

ಮೋದಿ ಸರ್ಕಾರ ಭಾರತಕ್ಕೆ ಸಂಪೂರ್ಣ ತಂತ್ರಜ್ಞಾನ ಮಾಡುವುದರ ಜೊತೆಗೆ ಭಾರತದಲ್ಲಿಯೇ ಉತ್ಪಾದನಾ ಘಟಕ ಸ್ಥಾಪಿಸುವಂತೆ ಈ ರಕ್ಷಣಾ ಸಂಸ್ಥೆಗಳಿಗೆ ಷರತ್ತು ವಿಧಿಸಿದೆ..ಇದರ ಬೆನ್ನಲ್ಲೇ ಭಾರತದಲ್ಲಿ ವಿಶ್ವದ ಅತ್ಯಂತ ಆಧುನಿಕ ಯುದ್ದ ವಿಮಾನ ತಯಾರಿಕಾ ಘಟಕ ನಿರ್ಮಿಸುವುದರ ಜೊತೆಗೆ ಪೂರಕ ವ್ಯವಸ್ಥೆಗಳ ಸ್ಥಳೀಯ ಸರಬರಾಜುದಾರರ ಮೂಲವನ್ನು ಸ್ಥಾಪಿಸುವುದಾಗಿ ಸಾಬ್ ಸಂಸ್ಥೆ ಸ್ಪಷ್ಟ ಪಡಿಸಿದೆ.. “ಗ್ರಿಪೆನ್-ಇ ಯುದ್ದ ವಿಮಾನವನ್ನು ಭಾರತೀಯ ಸಂಗ್ರಹಕ್ಕೆ ಸಂಬಂಧಿಸಿದಂತೆ ಸಾಬ್ ಸಂಸ್ಥೆ ಭಾರತಕ್ಕೆ ಸಂಪೂರ್ಣ ತಂತ್ರಜ್ಞಾನ ವರ್ಗಾವಣೆಗೆ ಬದ್ಧವಾಗಿದೆ” ಎಂದು ಸಾಬ್ ಇಂಡಿಯಾ ಅಧ್ಯಕ್ಷ ಜಾನ್ ವೈಡಸ್ಟ್ರ್ರೋಮ್ ಹೇಳಿದ್ದಾರೆ.

ಬಹು-ಶತಕೋಟಿ ಡಾಲರ್ ಒಪ್ಪಂದದ ಪ್ರಕಾರ ಲಾಕ್ಹೀಡ್ ಮಾರ್ಟಿನ್ ತನ್ನ ಎಫ್ -16 ಬ್ಲಾಕ್ 70 ಫೈಟರ್ ಜೆಟ್ ಗಳಿಗಾಗಿ ಭಾರತದಲ್ಲಿ ಉತ್ಪಾದನಾ ಘಟಕವನ್ನು ಸ್ಥಾಪಿಸುವದಾಗಿ ಹೇಳಿತ್ತು.. ಇದಕ್ಕೆ ಪ್ರತಿಯಾಗಿ ಕೇಂದ್ರ ಸರ್ಕಾರ ಸಂಪೂರ್ಣ ತಂತ್ರಜ್ಞಾನವನ್ನು ಭಾರತಕ್ಕೆ ವರ್ಗಾವಣೆ ಮಾಡಬೇಕೆಂದು ಸೂಚಿಸಿತ್ತು..

ಸೆಪ್ಟೆಂಬರ್ ನಲ್ಲಿ, ಸಾಬ್ ಮತ್ತು ಅದಾನಿ ಗ್ರೂಪ್ ರಕ್ಷಣಾ ಉತ್ಪಾದನೆಯಲ್ಲಿ ಸಹಭಾಗಿತ್ವದ ಜೊತೆಗೆ ಶತಕೋಟಿ ಡಾಲರ್ ಹೂಡಿಕೆಯೊಂದನ್ನು ಘೋಷಿಸಿವೆ ಮತ್ತು ಒಂದು ವೇಳೆ ಒಪ್ಪಂದವನ್ನು ಗೆದ್ದರೆ ಜಂಟಿ ಉದ್ಯಮವು ಗ್ರಿಫೆನ್ ಮಿಲಿಟರಿ ಜೆಟ್ ಗಳನ್ನು ಭಾರತೀಯ ವಾಯುಪಡೆಗೆ ಅಗತ್ಯವಿರುವಂತೆ ಸಿಂಗಲ್-ಎಂಜಿನ್ ಯುದ್ದ ವಿಮಾನವನ್ನು ಉತ್ಪಾದಿಸುವುದಾಗಿ ಘೋಷಿಸಿದೆ.. ಗ್ರಿಪೆನ್ ಸಿ / ಡಿ ನ ಮುಂದುವರಿದ ಆವೃತ್ತಿ ಗ್ರಿಪೆನ್- ಇ..ಯುದ್ದ ವಿಮಾನವಾಗಿದೆ ಇದು ಲೈಟ್ ಸಿಂಗಲ್ ಎಂಜಿನ್ ಮಲ್ಟಿರೋಲ್ ಫೈಟರ್ ಜೆಟ್ ಎನ್ನುವುದು ವಿಶೇಷವಾಗಿದೆ..!

Image result for MOdi

“ನಾವು ವಿಶ್ವದಲ್ಲೇ ಅತ್ಯಂತ ಆಧುನಿಕ ಯುದ್ದ ವಿಮಾನ ಘಟಕವನ್ನು ನಿರ್ಮಿಸುತ್ತೇವೆ ಇದಲ್ಲದೆ ಸಿಂಗಲ್ ಎಂಜಿನ್ ಫೈಟರ್ ಏರ್‍ಕ್ರಾಫ್ಟ್ ಯೋಜನೆಗೆ ಸರಕಾರ ಹೊಂದಿಸುವ ಸ್ಟ್ರಾಟೆಜಿಕ್ ಪಾಲುದಾರಿಕೆಯ ನಿಯಮಗಳನ್ನು ಅನುಸರಿಸುತ್ತೇವೆ ಅದೇ ರೀತಿ ಕೇಂದ್ರ ಸರ್ಕಾರದ ಒಪ್ಪಂದದ ಪ್ರಕಾರ ಭಾರತಕ್ಕೆ ಸಂಪೂರ್ಣ ತಾಂತ್ರಿಕತೆಯ ವರ್ಗಾವಣೆಯನ್ನು ಮಾಡುತ್ತೇವೆ.. ಎಂದು ಸಾಬ್ ಸಂಸ್ಥೆಯ ಮೂಲಗಳು ತಿಳಿಸಿವೆ.. ಭಾರತೀಯ ವಾಯುಪಡೆಗೆ “ಸಿಂಗಲ್-ಇಂಜಿನ್” ಪೈಟರ್ ಜೆಟ್ ಗಳನ್ನು ಒದಗಿಸುವ ಪ್ರಕ್ರಿಯೆಯನ್ನು ಮೋದಿ ಸರಕಾರ ಪ್ರಾರಂಭಿಸಲು ಸಿದ್ಧಪಡಿಸಿದಂತೆ ಸಂಸ್ಥೆಯ ಈ ಅಭಿಪ್ರಾಯಗಳು ಹೊರಬಿದ್ದಿದೆ..!

ಫೈಟರ್ ಜೆಟ್ ಗಳನ್ನು ವಿದೇಶಿ ವಿಮಾನ ತಯಾರಕರಿಂದ ಜಂಟಿಯಾಗಿ ಭಾರತ ಕಂಪೆನಿಯೊಂದಿಗೆ ಸಹಯೋಗ ನಡೆಸಿ ಯುದ್ಧತಂತ್ರದ ಪಾಲುದಾರಿಕೆ ಮಾದರಿಯಿಂದ ಭಾರತದಲ್ಲಿ ಶಸ್ತ್ರಾಸ್ತ್ರಗಳನ್ನು ಉತ್ಪಾದಿಸಬೇಕಾಗಿದೆ.. ತನ್ಮೂಲಕ ಭಾರತಕ್ಕೆ ಉನ್ನತ ರಕ್ಷಣಾ ತಂತ್ರಜ್ಞಾನವನ್ನು ತರಲು ಮೇಕ್ ಇನ್ ಇಂಡಿಯಾ ಯೋಜನೆಯ ಅಡಿಯಲ್ಲಿ ಕೇಂದ್ರ ಸರಕಾರ ಭಾರಿ ಪ್ರಮಾಣದಲ್ಲಿ ಪ್ರಯತ್ನಿಸುತ್ತದೆ.

ಅದಲ್ಲದೆ ಪ್ರಧಾನೀ ನರೇಂದ್ರ ಮೋದಿಜೀಯವರು ಭಾರತವನ್ನು ರಕ್ಷಣಾ ಉತ್ಪಾದನಾ ಕೇಂದ್ರವನ್ನಾಗಿ ನಿರ್ಮಿಸುವ ಉದ್ದೇಶದಿಂದ, ನರೇಂದ್ರ ಮೋದಿ ಸರಕಾರ ಇಸ್ರೇಲಿನ $ 500 ಮಿಲಿಯನ್ ವೆಚ್ಚದ ಮಿಸೈಲ್ ಒಪ್ಪಂದವನ್ನು ರದ್ದುಮಾಡಲು ಕೂಡಾ ನಿರ್ಧರಿಸಿದೆ!!. ಮೇಕ್ ಇನ್ ಇಂಡಿಯಾ ಯೋಜನೆಯ ಯಶಸ್ವಿಗಾಗಿ ಅದೇ ರೀತಿ ಭಾರತದಲ್ಲೇ ರಕ್ಷಣಾ ಶಸ್ತ್ರಾಸ್ತ್ರಗಳ ಉತ್ಪಾದನೆಯ ಮಹತ್ವಾಕಾಂಕ್ಷಿ ಉದ್ದೇಶದಿಂದ ಈ ನಿರ್ಧಾರವನ್ನು ಕೇಂದ್ರ ಸರಕಾರ ತೆಗೆದುಕೊಂಡಿದೆ ಎಂದು ಹೇಳಲಾಗಿದೆ.

ಇಸ್ರೇಲ್’ನಿಂದ ಇಂತಹ ಕ್ಷಿಪಣಿಗಳನ್ನು ಪಡೆದುಕೊಳ್ಳುವ ಬದಲು ನಿರ್ಮಲಾ ಸೀತಾರಾಮಾನ್ ನಾಯಕತ್ವದ ರಕ್ಷಣಾ ಸಚಿವಾಲಯ ಭಾರತದ “ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಗೆ” ಸ್ಥಳೀಯವಾಗಿ ಸೇನೆಗೆ ಶಸ್ತ್ರಾಸ್ತ್ರಗಳನ್ನು ಅಭಿವೃದ್ಧಿಪಡಿಸಲು ಮತ್ತು ಅತ್ಯಾಧುನಿಕ ಟ್ಯಾಂಕ್ ವಿರೋಧಿ ಮಾರ್ಗದರ್ಶಿ ಕ್ಷಿಪಣಿಗಳನ್ನು ನಿರ್ಮಿಸಲು ಬಯಸಿದೆ.

ಭಾರತದ ಡಿಆರ್ಡಿಒ ಯಶಸ್ವಿಯಾಗಿ ನಾಗ್ ನಂತಹ ಹಲವಾರು ಅತ್ಯಾಧುನಿಕ ಕ್ಷಿಪಣಿಗಳನ್ನು ಭಾರತೀಯ ಸೇನೆಗೆ ನಿರ್ಮಿಸಿದೆ.. ಮೂರು ಅಥವಾ ನಾಲ್ಕು ವರ್ಷಗಳಲ್ಲಿ ಸಮಾನಾಂತರವಾಗಿ 3 ನೇ ತಲೆಮಾರಿನ ಕ್ಷಿಪಣಿ ತಂತ್ರಜ್ಞಾನದೊಂದಿಗೆ ಸೈನ್ಯವನ್ನು ಒದಗಿಸುವ ಬಗ್ಗೆ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ ವಿಶ್ವಾಸ ಹೊಂದಿದೆ. “ಈ ಕ್ಷಿಪಣಿ ಯೋಜನೆಗೆ ವಿದೇಶೀ ತಂತ್ರಜ್ಞಾನದ ಯಾವುದೇ ವರ್ಗಾವಣೆಯ ಅಗತ್ಯವಿರುವುದಿಲ್ಲ” ಎಂದು ಸಚಿವಾಲಯದ ಮೂಲಗಳು ತಿಳಿಸಿವೆ.

ಈ ವಿದೇಶಿ ಆಮದಿನ ಒಪ್ಪಂದವನ್ನು ರದ್ದುಪಡಿಸುವ ಮಹತ್ತರ ನಿರ್ಧಾರವನ್ನು ಈ ಹಂತದಲ್ಲಿ ಭಾರತದ ಮೇಕ್ ಇನ್ ಇಂಡಿಯಾ ಯೋಜನೆಯ ಅಡಿಯಲ್ಲಿ ಅಭಿವೃದ್ಧಿ ಪಡಿಸುವ ಶಸ್ತ್ರಾಸ್ತ್ರಗಳ ಮೇಲೆ ಪ್ರತಿಕೂಲ ಪರಿಣಾಮ ಬೀರುವ ಹಿನ್ನೆಲೆಯಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಈ ಮೊದಲು ಇಂತಹದ್ದೇ ಅಮೆರಿಕಾ ಮೂಲದ ರೇಥಿಯೋನ್-ಲಾಕ್ಹೀಡ್ ಮಾರ್ಟಿನ್ ಪ್ರಸ್ತಾಪವನ್ನು ಕೂಡ ಭಾರತ ತಿರಸ್ಕರಿಸಿತ್ತು..

ಅದೇ ರೀತಿ ಮೇ 28 ರಂದು ಮನೋಹರ್ ಪರಿಕರ್ ಅವರು ಗೋವಾ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ನಂತರ ಅರುಣ್ ಜೇಟ್ಲಿ ಅವರು ಹೆಚ್ಚುವರಿ ಭದ್ರತಾ ಸವಾಲುಗಳನ್ನು ಪರಿಣಾಮಕಾರಿಯಾಗಿ ಎದುರಿಸಲು ಇಂತಹ ಕ್ರಮಗಳು ಅತ್ಯಗತ್ಯ ಎಂದು ಹೇಳಿದ್ದಾರೆ. ರಕ್ಷಣಾ ಸೌಲಭ್ಯಕ್ಕಾಗಿ ಇತರ ದೇಶಗಳನ್ನು ಅವಲಂಬಿಸಿರುವುದರಿಂದ ಯಾವುದೇ ದೇಶವೂ ತನ್ನನ್ನು ತಾನು ರಕ್ಷಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದ ಅರುಣ್ ಜೇಟ್ಲಿ ರಕ್ಷಣಾ ವಲಯದಲ್ಲಿ ಖಾಸಗಿ ಅಭಿವೃದ್ಧಿಗಾಗಿ ಸರಕಾರ ಕ್ರಮ ಕೈಗೊಂಡಿದೆ ಎಂದು ಹೇಳಿದ್ದಾರೆ.

“ನಾವು ನಮ್ಮ ನೆರೆಹೊರೆಯ ದೇಶಗಳನ್ನು ಬದಲಿಸಲು ಸಾಧ್ಯವಿಲ್ಲ ಆದರೆ ಇಂತಹ ನೆರೆಹೊರೆಯವರಿಂದ ಭದ್ರತಾ ಸವಾಲುಗಳನ್ನು ಎದುರಿಸಬೇಕಾಗಿದೆ.. ಕಳೆದ 70 ವರ್ಷಗಳಿಂದ ಬಂಡಾಯ ಮತ್ತು ಯುದ್ಧವನ್ನು ನಿರಂತರವಾಗಿ ಎದುರಿಸುತ್ತಿದ್ದೇವೆ ಆದ್ದರಿಂದ ಭಾರತ ಒಂದು ಪ್ರಮುಖ ರಕ್ಷಣಾ ಉತ್ಪಾದನಾ ಕೇಂದ್ರವಾಗಿ ಬೆಳೆಯಬೇಕಾಗಿರುವುದು ಅತ್ಯಗತ್ಯ” ಎಂದು ಅರುಣ್ ಜೇಟ್ಲಿ ಹೇಳಿದ್ದರು.

” ಬಲವಾದ ಆರ್ಥಿಕತೆ ನಮ್ಮನ್ನು ಉತ್ಪಾದನಾ ಕೇಂದ್ರವನ್ನಾಗಿಸಿದರೆ ಸಮರ್ಥ ಭದ್ರತೆಗಾಗಿ ನಾವು ರಕ್ಷಣಾ ಉತ್ಪಾದನೆಯ ಕೇಂದ್ರಬಿಂದುವಾಗಬೇಕು. ಇದು ಸ್ಥಳೀಯ ವಾಗಿ ಉದ್ಯೋಗ ಸೃಷ್ಟಿಗೂ ಕಾರಣವಾಗುತ್ತದೆ” ಎಂದು ಜೇಟ್ಲಿ ಸ್ಪಷ್ಟ ಪಡಿಸಿದ್ದರು.

ದೇಶ “ಐಐಟಿ, ಡಿಆರ್ಡಿಓ ಲ್ಯಾಬ್‍ಗಳು ಮತ್ತು ಹೆಚ್ಚಿನ ಸಂಖ್ಯೆಯ ಖಾಸಗಿ ಸಂಸ್ಥೆಗಳನ್ನು ಹೊಂದಿದೆ”, ನಮಗೆ ಪ್ರತಿಭೆಯ ಕೊರತೆಯಿಲ್ಲ ಈ ಗುರಿ ಸಾಧಿಸಲು ಇದುವೇ ನಮಗೆ ಬಲವಾದ ಸಹಾಯ.. ಎಂದು ಈ ಹಿಂದೆ ಸಚಿವರು ಹೇಳಿದ್ದರು..

ಹೊಸ ಭಾರತ ಹೆಚ್ಚು ಆತ್ಮವಿಶ್ವಾಸವನ್ನು ಹೊಂದಿದೆ, ಇದು ರಕ್ಷಣಾತ್ಮಕ ಭಾರತವಲ್ಲ,..ಬದಲಾಗಿ ಜಾಗತಿಕವಾಗಿ ಸಂಯೋಜಿಸಲು, ಜ್ಞಾನವನ್ನು ಹಂಚಿಕೊಳ್ಳಲು ಮತ್ತು ಹೊರಗಿನಿಂದ ಜ್ಞಾನವನ್ನು ಪಡೆದುಕೊಳ್ಳಲು ಸಿದ್ಧವಾಗಿರುವ ಭಾರತ, ” ಎಂದು ಅವರು ಸಂತೋಷ ವ್ಯಕ್ತಪಡಿಸಿದರು.
ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‍ಡಿಒ) ಈ ಕ್ಷಿಪಣಿಯನ್ನು ಅಭಿವೃದ್ಧಿಪಡಿಸಿದೆ. ಬಂಗಾಳಕೊಲ್ಲಿಯಲ್ಲಿ ನಿಲುಗಡೆ ಮಾಡಿದ್ದ ನೌಕೆ ಮೂಲಕ ಸುಮಾರು 2000 ಕಿ.ಮೀ. ದೂರದ ಗುರಿಯತ್ತ ಮತ್ತೊಂದು ಕ್ಷಿಪಣಿಯನ್ನು ಹಾರಿಸಲಾಗಿತ್ತು. ಒಡಿಶಾದ ಬಾಲಸೋರ್ನಿಂದ ಉಡಾಯಿಸಲಾದ ಕ್ಷಿಪಣಿ ನಾಶಕ ವ್ಯವಸ್ಥೆ ಹೊಂದಿದ್ದ ಮಿಸೈಲ್, ಬಂಗಾಳ ಕೊಲ್ಲಿಯಿಂದ ಹಾರಿಬಂದ ಕ್ಷಿಪಣಿಯನ್ನು ಆಗಸದಲ್ಲೇ ನಾಶಪಡಿಸುವ ಸಾಮಥ್ರ್ಯವನ್ನು ಹೊಂದಿರುತ್ತದೆ…

ಸ್ವಯಂಚಾಲಿತ ವ್ಯವಸ್ಥೆ ಹಾಗೂ ರಾಡಾರ್ ತಂತ್ರಜ್ಞಾನ ಹೊಂದಿರುವ ಈ ಕ್ಷಿಪಣಿ, ಶತ್ರು ದೇಶದ ಕ್ಷಿಪಣಿಗಳ ಮಾರ್ಗ, ಗುರಿ ಮತ್ತು ಅದರ ವೇಗಗಳನ್ನು ಪತ್ತೆ ಮಾಡಿ ಅವುಗಳ ಮೇಲೆ ದಾಳಿ ನಡೆಸುತ್ತದೆ. ಪ್ರಾಯೋಗಿಕ ಪರೀಕ್ಷೆಯನ್ನು ನಿಯಂತ್ರಣ ಕೇಂದ್ರದ ಮೂಲಕ ಪರಿಶೀಲಿಸಲಾಗಿದ್ದು, ಕ್ಷಿಪಣಿ ಅತ್ಯಂತ ನಿಖರವಾಗಿ ಗುರಿ ತಲುಪುತ್ತದೆ. ಇನರ್ಷಲ್ ನ್ಯಾವಿಗೇಶನ್ ಸಿಸ್ಟಮ್ ಮೂಲಕ ಈ ಕ್ಷಿಪಣಿ, ಶತ್ರು ದೇಶದ ಕ್ಷಿಪಣಿ ಗುರಿ, ವೇಗವನ್ನು ಪತ್ತೆ ಮಾಡುತ್ತದೆ.

ಆರ್ಥಿಕತೆಯನ್ನು ಜಾಗತಿಕ ಮಟ್ಟದಲ್ಲಿ ಉನ್ನತೀಕರಿಸುವುದು ಹಾಗೂ ಭಾರತೀಯರಿಗೆ ಮಿಲಿಯನ್ ಗಟ್ಟಲೇ ಉದ್ಯೋಗವಕಾಶ ಕಲ್ಪಿಸುವ ಸಲುವಾಗಿ ಭಾರತವನ್ನು ಜಾಗತಿಕ ಉತ್ಪದನಾ ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಪ್ರಧಾನಿ ಮೋದಿಯವರ “ಮೇಕ್ ಇನ್ ಇಂಡಿಯಾ” ಯೋಜನೆಯ ಮೂಲಕ ಭಾರತದಲ್ಲಿಯೇ ಕ್ಷಿಪಣಿಗಳನ್ನು ತಯಾರು ಮಾಡುವ ಉದ್ಧೇಶವನ್ನು ಮಾಡಿದ್ದಾರೆ.

ಮೋದಿಯವರ ಮಹತ್ವಾಕಾಂಕ್ಷೆಯ ಯೋಜನೆಗಳಲ್ಲಿ ಒಂದಾದ ಮೇಕ್ ಇನ್ ಇಂಡಿಯಾ ದೇಶೀಯ ಉತ್ಪನ್ನಗಳನ್ನೇ ಬಳಸಿ ದೇಶದಲ್ಲೇ ಉತ್ಪಾದಿಸಿ, ಮಾರಾಟ ಮಾಡುವ ಒಂದು ಯೋಜನೆ. ಜಾಗತಿಕ ಉತ್ಪಾದನೆಯ ಭೂಪಟದಲ್ಲಿ ಭಾರತವನ್ನು ಅಗ್ರಸ್ಥಾನಕ್ಕೇರಿಸುವ ಮಹತ್ತ್ವಾಕಾಂಕ್ಷೆಯ ‘ಮೇಕ್ ಇನ್ ಇಂಡಿಯಾ’ ಅಭಿಯಾನಕ್ಕೆ ಪ್ರಧಾನಿ ನರೇಂದ್ರ ಮೋದಿಯವರ ಪ್ರಮುಖ ಉದ್ಧೇಶವಾಗಿದೆ.

ದೇಶವನ್ನು ಜಗತ್ತಿನ ಉತ್ಪಾದನಾ ಕೇಂದ್ರವನ್ನಾಗಿ ರೂಪಿಸಿ, ಆ ಮೂಲಕ ಅಭಿವೃದ್ಧಿ ದರ(ಜಿಡಿಪಿ)ವನ್ನು ಹೆಚ್ಚಿಸುವುದು ಇದರ ಹಿಂದಿರುವ ಮುಖ್ಯ ಉದ್ದೇಶವಾಗಿದೆ. ವಿದೇಶಿ ನೇರ ಬಂಡವಾಳ ಹೂಡಿಕೆ ಸ್ನೇಹಿ ವಾತಾವಾರಣವನ್ನು ನಿರ್ಮಿಸಿದರೆ, ಸಹಜವಾಗಿ ಬಂಡವಾಳ ಹರಿದು ಬರುತ್ತದೆ. ಇದರಿಂದ ನಿರುದ್ಯೋಗದ ಸಮಸ್ಯೆಯ ನಿವಾರಣೆಯೂ ಸಾಧ್ಯವಾಗುತ್ತದೆ.
ಈ ಅವಧಿಯಲ್ಲಿ ಮೇಕ್ ಇನ್ ಇಂಡಿಯಾ ಯೋಜನೆ ಅನುಷ್ಠಾನ, ಸರಕಾರ ಭಾವಿಸಿದಷ್ಟು ವೇಗದಲ್ಲಾಗಿಲ್ಲವಾದರೂ ಒಂದಿಷ್ಟು ನಿರೀಕ್ಷೆಗಳಂತೂ ಗರಿಗೆದರಿವೆ….ಹಾಗಾಗಿ ನರೇಂದ್ರ ಮೋದಿಯವರು ಭಾರತದ ಅಭಿವೃದ್ಧಿಗಾಗಿ ಇಸ್ರೇಲಿನ $ 500 ಮಿಲಿಯನ್ ವೆಚ್ಚದ ಮಿಸೈಲ್ ಒಪ್ಪಂದವನ್ನು ರದ್ದುಮಾಡಿ ಮೇಕ್ ಇನ್ ಇಂಡಿಯಾ ಯೋಜನೆಯಡಿ ಈ ರಕ್ಷಣಾ ಶಸ್ತ್ರಾಸ್ತ್ರಗಳ ಉತ್ಪಾದನೆಯನ್ನು ಮಾಡುವಲ್ಲಿ ಹೊಸದೊಂದು ದಾಪುಗಾಲು ಹಾಕಿರುವುದಲ್ಲದೆ ವಿಶ್ವದ ಅತ್ಯಂತ ಆಧುನಿಕ ಯುದ್ದ ವಿಮಾನ ತಯಾರಿಕಾ ಘಟಕ ನಿರ್ಮಿಸುವಲ್ಲಿ ಕೂಡಾ ಹೊಸ ದಾಪುಗಾಲನ್ನು ಹಾಕುತ್ತಿದೆ.

-ಪವಿತ್ರ

Tags

Related Articles

Close