ಪ್ರಚಲಿತ

ಭಾರತದ ಮೇಲೆ ಯುದ್ಧ ಮಾಡಲು ಸಾಧ್ಯವಾಗದ ಹೇಡಿ ಚೀನಾ ಭಾರತದ ನದಿಗೆ ವಿಷ ಬೆರೆಸಿ ಬೆನ್ನಿಗೆ ಚೂರಿ ಹಾಕಿತೇ?

ದೋಕಲಂ ವಿಚಾರದಲ್ಲಿ ಭಾರತದ ಜೊತೆಗೆ ಕಾಲ್ಕೆರೆದು ಯುದ್ಧಕ್ಕೆ ಬಂದು, ಕೊನೆಗೆ ಯುದ್ಧ ಮಾಡಿದ್ರೆ ಮಣ್ಣು ಮುಕ್ಕುತ್ತೇವೆ ಎಂದು ಕಾಲಿಗೆ ಬುದ್ಧಿ ಹೇಳಿ ಓಡಿ ಹೋಗಿದ್ದ ಚೀನಾದ ಬುದ್ಧಿ ನೆಟ್ಟಗಾದಂತೆ ಕಂಡುಬರುತ್ತಿಲ್ಲ. ಯಾಕೆಂದರೆ ಈ ಬಾರಿ ಭಾರತದ ಮೇಲೆ ಜಲಯುದ್ಧದಲ್ಲಿ ತೊಡಗಿದೆಯೇ ಎಂಬ ಅನುಮಾನ ಮೂಡಿದೆ. ಯಾಕೆಂದರೆ ಉತ್ತರ ಅರುಣಾಚಲ ಪ್ರದೇಶದ ಜೀವಸೆಲೆ ಎಂದೇ ಕರೆಯಲ್ಪಡುವ ಸಿಯಾಂಗ್ ನದಿಯಲ್ಲಿ ಕೆಲವು ತಿಂಗಳಿನಿಂದ ಕಪ್ಪು ಬಣ್ಣದ ನೀರು ಹರಿಯಲು ಪ್ರಾರಂಭವಾಗಿದ್ದು, ಇದರಿಂದ ನದಿಯ ತಟದಲ್ಲಿನ ಜನರಲ್ಲಿ ಭಯ ಹುಟ್ಟಿಸಿದೆ. ನದಿಯ ಬಣ್ಣ ಕಪ್ಪು ಬಣ್ಣಕ್ಕೆ ತಿರುಗಲು ಚೀನಾ ಏನಾದರೂ ಆ ನದಿಗೆ ವಿಷ ಬೆರೆಸಿದೆಯೇ ಎಂಬ ಬಗ್ಗೆ ಅಲ್ಲಿನ ಅಧಿಕಾರಿಗಳಿಗೆ ಅನುಮಾನ ಕಾಡಲು ಪ್ರಾರಂಭಿಸಿದೆ.

ನೀರಿನಲ್ಲಿ ಸಿಮೆಂಟಿನಂತಹ ಪದಾರ್ಥ ಹರಿಯುತ್ತಿದ್ದು, ಈ ಕಲುಷಿತ ನೀರನ್ನು ಯಾವುದೇ ಚಟುವಟಿಕೆಗಳಿಗೂ ಬಳಸಬಾರದು ಎಂದು ಪೂರ್ವ ಸಿಯಾಂಗ್ ಜಿಲ್ಲೆಯ ಉಪ ಆಯುಕ್ತ ತಮ್ಯಾ ತಾತಕ್ ಎಂಬವರು ಎಚ್ಚರಿಕೆ ನೀಡಿದ್ದಾರೆ. ಮಳೆಗಾಲದಿಂದಲೇ ಈ ರೀತಿಯ ಕಪ್ಪು ನೀರು ಹರಿಯಲು ಪ್ರಾರಂಭವಾಗಿತ್ತು. ಮಳೆಯ ಕಾರಣ ನೀರಿನೊಂದಿಗೆ ಮಣ್ಣು ಕೂಡ ಕೊಚ್ಚಿಕೊಂಡು ಬರುತ್ತಿರಬಹುದು ಎಂದು ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಆದರೆ, ಮುಂದೆ ಬ್ರಹ್ಮಪುತ್ರ ನದಿ ಸೇರುವ ಈ ನದಿಯಲ್ಲಿ ಮಳೆಗಾಲ ಮುಗಿದು ತಿಂಗಳುಗಳೇ ಕಳೆದರೂ ಕಪ್ಪು ನೀರು ಹರಿಯುತ್ತಿರುವುದು ಮಾತ್ರ ನಿಂತಿಲ್ಲ. ಈ ಕಲುಷಿತ ನೀರಿನಿಂದಾಗಿ ಕೆಲವು ದಿನಗಳ ಹಿಂದೆಯೇ ಮೀನುಗಳು ಮೃತಪಟ್ಟಿದ್ದವು.

ಸ್ಫಟಿಕದಂತಿದ್ದ ನೀರು;

ಬ್ರಹ್ಮಪುತ್ರದ ಪ್ರಮುಖ ಘಟಕ ನದಿಯಾದ ಸಿಯಾಂಗ್ ಸುಮಾರು 1,6000 ಕಿ.ಮೀ. ಉದ್ದ ಹರಿಯುತ್ತಿದ್ದು, ಸ್ಫಟಿಕದಷ್ಟು ಸ್ಪಷ್ಟವಾಗಿರುತ್ತಿದ್ದ ನೀರು ಹಿಂದೆಂದೂ ಈ ರೀತಿ ಕಲುಷಿತವಾದ ಇತಿಹಾಸವೇ ಇಲ್ಲ. ಟಿಬೆಟ್‍ನಲ್ಲಿರುವ ನದಿಯ ಮೇಲ್ಭಾಗದಲ್ಲಿ ಚೀನಾ ಯಾವುದೋ ಭಾರೀ ಕಾಮಗಾರಿ ಅಥವಾ ಕೊರೆಯುವ ಕೆಲಸ ಕೈಗೊಂಡಿರಬೇಕು. ಆದ್ದರಿಂದಲೇ ನೀರಿನಲ್ಲಿ ಈ ಪದಾರ್ಥ ಸೇರ್ಪಡೆಯಾಗಿರಬೇಕು ಎಂಬುದು ಉಪ ಆಯುಕ್ತ ತಾತಕ್ ಅಭಿಪ್ರಾಯ. ಈ ಕುರಿತು ಅರುಣಾಚಲ ಪ್ರದೇಶಕ್ಕೆ ಸ್ವತಂತ್ರ ವರದಿಯನ್ನು ಕೂಡ ಅವರು ಸಲ್ಲಿಸಿದ್ದಾರೆ.

ಯಾರ್ಲುಂಗ್ ತ್ಸಾಂಗ್ಪೊ ನದಿಯನ್ನು ಟಿಬೆಟ್‍ನಿಂದ ಚೀನಾದತ್ತ ತಿರುಗಿಸಿಕೊಳ್ಳಲು 1000 ಕಿ. ಮೀ ಸುರಂಗವೊಂದನ್ನು ಕೊರೆಯಲು ಚೀನಾ ಯೋಚಿಸಿತ್ತು. ಭಾರತದಿಂದ ಭಾರೀ ವಿರೋಧ ವ್ಯಕ್ತವಾದ ಮೇಲೆ, ನಾವು ಈ ರೀತಿ ಯೋಜನೆಯನ್ನೇ ಹೊಂದಿಲ್ಲ ಎಂದು ಹೇಳಿ ಸುಮ್ಮನಾಗಿತ್ತು. ಆದರೆ, ಈಗ ಗುಪ್ತವಾಗಿ ತಮ್ಮ ಕೆಲಸ ಸಾಧಿಸಿಕೊಳ್ಳಲು ಹೋಗಿ ಕಪ್ಪು ನೀರಿಗೆ ಚೀನಾ ಕಾರಣವಾಯಿತಾ ಎನ್ನುವ ಅನುಮಾನ ವ್ಯಕ್ತವಾಗಿದೆ. ಈ ನೀರು ಕುಡಿಯಲು ಬಿಡಿ, ಬೇರೆ ಯಾವುದೇ ಬಳಕೆಗೂ ಯೋಗ್ಯವಲ್ಲವೆಂದು ಜಿಲ್ಲಾಡಳಿತ ಎಚ್ಚರಿಸಿದ್ದು, ಈ ನೀರಿನಲ್ಲಿ ಸಿಮೆಂಟ್‍ನಂಥ ವಸ್ತು ಮಿಶ್ರಣವಾಗಿದೆ, ಎಂದು ಹೇಳಿದೆ.

ಭಾರತ ಚೀನಾಗಳ ನಡುವಿನ ಬ್ರಹ್ಮಪುತ್ರ ನೀರಿನ ಹಂಚಿಕೆಯ ವಿವಾದವನ್ನು ಬಗೆಹರಿಸಿದೆ, ಟಿಬೆಟ್ ಅನ್ನು ನೆಹರು ಪ್ರಶ್ನಿಸದೆಯೇ ಚೀನಾಕ್ಕೆ ಬಿಟ್ಟುಕೊಟ್ಟಾಗಲೇ ಈ ಸಮಸ್ಯೆ ಶುರುವಾಯ್ತು. ಕೈಲಾಸ ಪರ್ವತ ಶ್ರೇಣಿಯ ಟಿಬೆಟ್‍ನಲ್ಲಿ ಬ್ರಹ್ಮಪುತ್ರ ಉಗಮಗೊಳ್ಳುತ್ತದೆ. ಅದು ಮುಂದೆ ಚೀನಾ, ಭಾರತ, ಬಾಂಗ್ಲಾದೇಶಗಳ ಮೂಲಕ ಹಾದು ಸಮುದ್ರವನ್ನು ಸೇರಿಕೊಳ್ಳುತ್ತದೆ. ಈ ನದಿಯಿಂದ ನೇಪಾಳ, ಭೂತಾನ್, ಬರ್ಮಾ ದೇಶಗಳಿಗೆ ಅನುಕೂಲವಾಗಿದೆ.

ಬ್ರಹ್ಮಪುತ್ರ ಹರಿವು 1625 ಕಿ.ಮೀ.ನಷ್ಟಿದೆ. ಚೀನಾದಲ್ಲಿ ಯಾರ್ಲುಂಗ್ ಸಾಂಗ್ಪೊ ಎಂದು ಕರೆಯಲ್ಪಡುವ ಈ ನದಿ, ಅರುಣಾಚಲಕ್ಕೆ ಬಂದೊಡನೆ ಸಿಯಾಂಗ್ ಎನ್ನಲ್ಪಡುತ್ತದೆ. ಇನ್ನೂ ಅನೇಕ ನದಿಗಳನ್ನು ತನ್ನೊಡಲಿಗೆ ಹಾಕಿಕೊಳ್ಳುತ್ತ ಅಸ್ಸಾಂನಲ್ಲಿ ಬ್ರಹ್ಮಪುತ್ರ ಎಂದಾಗುವ ನದಿ ಬಾಂಗ್ಲಾದೇಶಕ್ಕೆ ಹೋಗುವಾಗ ಜಮುನಾ ಆಗುತ್ತದೆ. ಅಲ್ಲಿ ಗಂಗೆ ಮತ್ತು ಮೇಘನೆ ಎಂಬ ನದಿಯೊಂದಿಗೆ ಸೇರಿ ಬಂಗಾಳ ಕೊಲ್ಲಿಗೆ ಸೇರುವ ಈ ನದಿ ಜಗತ್ತಿನ ಅತ್ಯಂತ ವಿಸ್ತಾರ ಹೊಂದಿದ ನದಿಯಾಗಿದೆ. ಒಟ್ಟಾರೆ ಹರಿವಿನ ಪಾತ್ರ ಭಾರತದಲ್ಲಿ ಸುಮಾರು ಶೇ. 60ರಷ್ಟಿದ್ದರೆ, ಚೀನಾದಲ್ಲಿ ಅದರ ಪ್ರಮಾಣ ಶೇ. 20ರಷ್ಟು ಮಾತ್ರ.

ಅರುಣಾಚಲ ಪ್ರದೇಶದ ಮೂಲಕ ಭಾರತವನ್ನು ಪ್ರವೇಶಿಸಿ, ಅಸ್ಸಾಂ ಹಾಗೂ ಈಶಾನ್ಯ ರಾಜ್ಯಗಳ ಜೀವನದಿಯಾಗಿ ಕೃಷಿ, ಮೀನುಗಾರಿಕೆ, ನೌಕಾ ಸಂಚಾರಗಳ ಮೂಲಕ ಈ ಭಾಗದ ಆರ್ಥಿಕತೆಯನ್ನು ಪ್ರಭಾವಿಸುವ ಬ್ರಹ್ಮಪುತ್ರ ನದಿಯಲ್ಲಿನ ನೀರಿನ ಪ್ರಮಾಣಕ್ಕೂ, ಟಿಬೆಟ್‍ನ ಪ್ರಸ್ಥಭೂಮಿಯಲ್ಲಿ ಚೀನಾ ನಿರ್ಮಿಸುತ್ತಿರುವ ಜಲ ವಿದ್ಯುತ್ ಯೋಜನೆಗಳಿಗೂ ನಿಕಟವಾದ ಸಂಬಂಧವಿದೆ.

ಬ್ರಹ್ಮಪುತ್ರ ಉಗಮ ಸ್ಥಾನದಲ್ಲಿ ಎರಡು ಬಗೆಯ ಯೋಜನೆಗಳಿಗೆ ಚೀನಾ ಅನೇಕ ವರ್ಷಗಳಿಂದ ತಯಾರಿ ನಡೆಸುತ್ತಿದೆ. ಮೊದಲನೆಯದು ಜಲವಿದ್ಯುತ್ ಯೋಜನೆ, ಎರಡನೆಯದು ಈ ನೀರನ್ನು ಉತ್ತರ ದಿಕ್ಕಿಗೆ ತಿರುಗಿಸಿ ಅಲ್ಲಿ ಕಂಡುಬಂದಿರುವ ನೀರಿನ ಬವಣೆಯನ್ನು ನೀಗಿಸುವ ಯೋಜನೆ. ಎರಡೂ ಯೋಜನೆಗಳು ಭಾರತದ ಪಾಲಿಗೆ ಬಲು ಭಯಾನಕವೇ. ನದಿ ತಿರುಗಿಸಿಬಿಟ್ಟರೆ ಈಶಾನ್ಯ ರಾಜ್ಯಗಳು ನೀರಿಲ್ಲದೇ ತಪಿಸುತ್ತವೆ; ಜಲವಿದ್ಯುತ್‍ಗೆಂದು ಡ್ಯಾಮ್ ಕಟ್ಟಿ ನೀರು ನಿಲ್ಲಿಸಿಕೊಂಡರೆ, ತಮಗೆ ಮನಸ್ಸು ಬಂದಾಗ ಅವರು ಅದನ್ನು ಹೊರ ಚೆಲ್ಲಿದರೆ ಸದಾ ಪ್ರವಾಹದ ಭೀತಿಯಲ್ಲಿಯೇ ಇರಬೇಕಾಗುತ್ತದೆ ಈಶಾನ್ಯ ಭಾರತ.

ಈಗ ನದಿ ಕಪ್ಪು ಬಣ್ಣಕ್ಕೆ ತಿರುಗಲು ಇದೂ ಒಂದು ಕಾರಣವಿರಬಹುದು. ಯಾಕೆಂದರೆ ಜಲವಿದ್ಯುತ್ ಯೋಜನೆಗೆ ನೀರನ್ನು ಸಂಗ್ರಹಿಸಿ ಟರ್ಬೆನುಗಳಿಗೆ ಅಗತ್ಯಬಿದ್ದಾಗ ನೀರನ್ನು ಹರಿಸುವ ಪ್ರಕ್ರಿಯೆಯಿಂದ ಅದೇ ನೀರನ್ನು ವಿಷಕಾರಿಯಾಗಿಸಿಬಿಡುತ್ತದೆ. ಜಲಚರಗಳು ಬದುಕಲು ಯೋಗ್ಯವಲ್ಲದ ಸ್ಥಿತಿಯನ್ನು ನಿರ್ಮಾಣ ಮಾಡಿಬಿಡುತ್ತದೆ. ಆದ್ದರಿಂದ ಬ್ರಹ್ಮಪುತ್ರ ನದಿ ಕಲುಷಿತವಾಗಲು ಚೀನಾದ ಜಲವಿದ್ಯುತ್ ಯೋಜನೆಯೇ ಕಾರಣವಾಗಿರುವ ಸಾಧ್ಯತೆ ಇದೆ.

ಆದ್ದರಿಂದ ಭಾರತದೊಡನೆ ಮುಖಾಮುಖಿ ಯುದ್ಧ ಮಾಡಲು ಸಾಧ್ಯವಾಗದ ಹೇಡಿ ಚೀನಾ ಭಾರತದ ನದಿಯನ್ನು ಕಲುಷಿತ ಮಾಡುವ ಮೂಲಕ ಸೇಡು ತೀರಿಸುತ್ತಿದೆಯೇ ಎಂಬ ಅನುಮಾನ ವ್ಯಕ್ತವಾಗಿದೆ. ಈ ಬಗ್ಗೆ ಚೀನಾಕ್ಕೆ ತಕ್ಕ ಪಾಠ ಕಲಿಸಲು ಮೋದಿ ಸರಕಾರ ಮುಂದಾಗಲಿದೆ.

ಚೇಕಿತಾನ

Tags

Related Articles

Close