ಅಂಕಣ

ಭಾರತದ ಹೆಮ್ಮೆ, ಶತ್ರುಗಳ ದುಸ್ವಪ್ನ! ನಮ್ಮ ದೇಶದ ಬೇಹುಗಾರಿಕಾ ಸಂಸ್ಥೆಯಾದ ‘RAW’ ಬಗ್ಗೆ ನಿಮಗೆಷ್ಟು ಗೊತ್ತು?!

ನಮಗೆ RAW ಎನ್ನುವ ಹೆಸರನ್ನು ಕೇಳಿದರೆ ಸಾಕು, ಒಂದು ಸಲ ಮೈ ಜುಮ್ ಅನ್ನುತ್ತೆ!! ಹೌದು, ರಿಸರ್ಚ್ ಆ್ಯಂಡ್ ಅನಲಿಟಿಕ್ಸ್ ವಿಂಗ್(RAW) ದೇಶಕ್ಕೋಸ್ಕರ ಸಾವು ಮತ್ತು ಸವಾಲುಗಳನ್ನು ಎದುರಿಸುವ ಭಾರತದ ಒಂದು ಹೆಸರಾಂತ ಸಂಸ್ಥೆ. ಈ ‘ರೋ’ದ ಕಾರ್ಯಕರ್ತರುಗಳು ದೇಶಭಕ್ತಿಯನ್ನು ಮೈಗೂಡಿಸಿಕೊಂಡು ದೇಶಕೋಸ್ಕರ ಕೆಲಸ ಮಾಡುವ ಸಂಸ್ಥೆಯಾಗಿದೆ.

ಅಷ್ಟೇ ಅಲ್ಲದೇ, ಅವರು ಯಾವ ಪ್ರದೇಶದಲ್ಲಿ ನಿಂತಿದ್ದಾರೆ ಎಂಬುವುದರ ಬಗ್ಗೆ ಯಾವುದೇ ಯೋಚನೆ ಮಾಡದೇ ಶತ್ರುವಿನ ತಲೆಯನ್ನು ತುಂಡರಿಸುವುದೇ ಇವರ ಗುರಿ. ಇವರು ಒಂದು ಸಲ ಒಂದು ಪ್ರದೇಶಕ್ಕೆ ಪ್ರವೇಶವಾದರೆಂದರೆ ಸಾಕು ಶತ್ರುಗಳ ರುಂಡವನ್ನು ತುಂಡರಿಸುವುದು ನಿಶ್ಚಿತ!! ರೋ ಎನ್ನುವ ಸಂಸ್ಥೆ ಭಾರತದ ಬಾಹ್ಯ ಗುಪ್ತಚರ ಸಂಸ್ಥೆಯಾಗಿದೆ. ಅವರು ಶತ್ರುಗಳ ಪ್ರದೇಶಗಳ ಮೈಲಿಗಳನ್ನು ಭೇದಿಸಿ ಭಾರತಕ್ಕೆ ಪ್ರಮುಖ ಮಾಹಿತಿಯನ್ನು ನೀಡುವುದೇ ಇವರ ಕೆಲಸ.

ಈ RAW ಸಂಸ್ಥೆಯ ಧ್ಯೇಯವಾಕ್ಯವೇ “ಧರ್ಮೋ ರಕ್ಷತಿ ರಕ್ಷಿತಾಃ” ಧರ್ಮವು ನಾಶಮಾಡುವವರನ್ನು ನಾಶಮಾಡಿಸುತ್ತದೆ, ಧರ್ಮವನ್ನು ರಕ್ಷಿಸುವವರನ್ನು ಧರ್ಮ ರಕ್ಷಿಸುತ್ತದೆ. ಧರ್ಮ ಯಾವತ್ತು ನಾಶವಾಗುವುದಿಲ್ಲ ಮತ್ತು ನಾಶಮಾಡುವುದಿಲ್ಲ. ಆದುದರಿಂದ ಇಲ್ಲಿ ಧರ್ಮವೇ ಒಂದು ರಾಷ್ಟ್ರವಾಗಿದೆ.

ರಿಸರ್ಚ್ ಆ್ಯಂಡ್ ಅನಲಿಟಿಕ್ಸ್ ವಿಂಗ್(RAW ) ಭಾರತದ ಉನ್ನತ ಬಾಹ್ಯ ಗುಪ್ತಚರ ಸಂಸ್ಥೆಯಲ್ಲೊಂದು. ಇದು 1962ರಲ್ಲಿ ನಡೆದ ಭಾರತ-ಚೀನಾ ಯುದ್ದ ಹಾಗೂ 1965ರಲ್ಲಿ ನಡೆದ ಭಾರತ-ಪಾಕಿಸ್ತಾನ ಯುದ್ದದ ನಂತರ ಈ ಸಂಸ್ಥೆ ಆರಂಭವಾಯಿತು. ರೋ ಸಂಸ್ಥೆಯ ಮೊದಲ ಮುಖ್ಯಸ್ಥರಾಗಿದ್ದವರೇ ಆರ್ ಎನ್ ರಾವ್. ಇವರು ಉತ್ತರ ಭಾರತದ ಬನಾರಸ್‍ನ ಶ್ರೀಮಂತ ಕಾಶ್ಮೀರಿ ಬ್ರಾಹ್ಮಣ ಕುಟುಂಬದಲ್ಲಿ 1918ರಲ್ಲಿ ಜನಿಸಿದರು.

RAW ಸಂಸ್ಥೆಯ ಕಾರ್ಯಕರ್ತರು ಭಾರತದಲ್ಲಿ ಮಾತ್ರ ತರಬೇತಿಯನ್ನು ಪಡೆಯದೇ ಪ್ರಪಂಚದ ಮೂಲೆಮೂಲೆಗಳಲ್ಲಿ ತರಬೇತಿಯನ್ನು ಪಡೆಯುತ್ತಾರೆ. ಯುಎಸ್‍ಎ, ಯುಕೆ ಮತ್ತು ಇಸ್ರೇಲ್‍ಗಳಂತಹ ನಾನಾ ದೇಶಗಳಿಗೆ ಯುವಕರನ್ನು ಉತ್ತಮ ರೀತಿಯ ತರಬೇತಿಗಳನ್ನು ಪಡೆಯಲು ಕಳುಹಿಸಿಕೊಡಲಾಗುತ್ತದೆ. ವಿವಿಧ ರೀತಿಯ ಕೌಶಲ್ಯಗಳನ್ನು ಪಡೆಯುವುದರೊಂದಿಗೆ ‘ಕರ್ವ್ ಮಗ’ ಎನ್ನುವ ವಿಶೇಷ ತರಬೇತಿಯಿಂದ ಸ್ವ-ರಕ್ಷಣೆ ಮತ್ತು ದೈಹಿಕ ತರಬೇತಿಯನ್ನು ಕಲಿಯಲಾಗುತ್ತದೆ. ಇದು ಮೊದಲ ಬಾರಿಗೆ 1940ರಲ್ಲಿ ಇಸ್ರೇಲ್‍ನ ಸೈನ್ಯವು ಇದನ್ನು ಅಭಿವೃದ್ಧಿಪಡಿಸಿದ್ದು, ಬೆದರಿಕೆಯ ಸನ್ನಿವೇಶಗಳು ಬಂದಾಗ ಪ್ರತಿಫಲಿತ ಪ್ರತಿಕ್ರಿಯೆಯನ್ನು ಆಧರಿಸಿ ಇದನ್ನು ಬಳಸಿಕೊಳ್ಳಲಾಗುತ್ತದೆ.

ಸಾಲ್ಡ್ರೋರಿಡ್ಜ್‍ನ್ನು ವಶಪಡಿಸಿಕೊಳ್ಳಲು ಪಾಕಿಸ್ತಾನ ‘ಅಬಬೀಲ್’ ಎನ್ನುವ ಹೆಸರಿನ ರಹಸ್ಯ ಕಾರ್ಯಾಚರಣೆಯನ್ನು ಆರಂಭಿಸಿತ್ತು. ಆದರೆ ಈ ಕಾರ್ಯಾಚರಣೆಯ ಬಗ್ಗೆ ಭಾರತಕ್ಕೆ ಮುಂಚಿತವಾಗಿಯೇ ತಿಳಿದಿತ್ತು. ಹಾಗಾಗಿ ತಕ್ಷಣವೇ ಭಾರತೀಯ ಸೈನ್ಯವು ‘ಮೇಘದೂತ್’ ಕಾರ್ಯಾಚರಣೆಯನ್ನು ಆರಂಭಿಸಿದ್ದಲ್ಲದೇ ಭಾರತದ ಭೂಪ್ರದೇಶವನ್ನು ಪ್ರವೇಶಿಸದಂತೆ ಭಾರತೀಯ ಸೇನೆ ಮುಂದಾಗಿದ್ದರಿಂದ, ಪಾಕಿಸ್ತಾನದ ಉದ್ದೇಶವು ಯಶಸ್ವಿಯಾಗಲಿಲ್ಲ. ಈ ಬಗ್ಗೆ ಭಾರತೀಯ ಸೇನೆಗೆ ಮುಂಚಿತವಾಗಿ ಮಾಹಿತಿ ನೀಡಿದವರೇ ರೋ!! ಇಲ್ಲದಿದ್ದರೆ ಭಾರೀ ಪ್ರಮಾಣದ ಅನಾಹುತವನ್ನು ಎದುರಿಸಬೇಕಾಗಿತ್ತು.

ಇಂಡಿಯನ್ ಪೊಲೀಸ್ ಸರ್ವೀಸಸ್, ಐಬಿ(ಇಂಟೆಲಿಜೆನ್ಸ್ ಬ್ಯೂರೊ) ಮತ್ತು ಇಂಡಿಯನ್ ಮಿಲಿಟರಿ ಅಥವಾ ಕಂದಾಯ ಇಲಾಖೆಯಲ್ಲಿದ್ದವರು ರೋಗೆ ಸೇರಲು ಮಾತ್ರ ಹೆಚ್ಚಿನ ಸಾಧ್ಯತೆಗಳಿದ್ದವು. ಆದರೆ ಈಗ ಸಾಮಾನ್ಯ ಜನರಿಗೂ ಕೂಡ ರೋ ಗೆ ಪ್ರವೇಶಿಸಲು ಅವಕಾಶಗಳಿವೆ. ಈ ಬಗ್ಗೆ ರವೀಂದರ್ ಕೌಶಿಕ್ ಒಂದು ಉತ್ತಮ ನಿದರ್ಶನವಾಗಿದ್ದಾರೆ. ಯಾಕಂದರೆ ಅವರು ಮಿಲಿಟರಿ ಹಿನ್ನಲೆಯಿಂದ ಬಂದವರೇ ಅಲ್ಲ. ಆದರೆ ಇವರು ಮಾಡಿದ ಸಾಧನೆ ಮಾತ್ರ ವಿಶೇಷ, ಇವರ ಬಗ್ಗೆ ಪ್ರತಿಯೊಬ್ಬ ಭಾರತೀಯ ಓದಲೇಬೇಕಾದಂತಹ ನಿಜ ಸಂಗತಿಗಳು ಸಾಕಷ್ಟಿವೆ.

ಪಾಕಿಸ್ತಾನ ಸೇನೆಯ ಮುಖ್ಯಸ್ಥ ಪರ್ವೇಜ್ ಮುಶರಾಫ್ ಮತ್ತು ಅವರ ಮುಖ್ಯ ಸಿಬ್ಬಂದಿ ಲೆಫ್ಟಿನೆಂಟ್ ಜನರಲ್ ಮೊಹಮ್ಮದ್ ಅಝೀಝ್ ನಡುವೆ ನಡೆದ ದೂರವಾಣಿ ಕರೆಯನ್ನು ಟ್ಯಾಪ್ ಮಾಡಿ ಪಾಕಿಸ್ತಾನಕ್ಕೆ ಮುಜುಗರವನ್ನುಂಟು ಮಾಡುವಂತೆ ಮಾಡಿತ್ತು. ಇದರಿಂದ ಭಾರತವು ಪಾಕಿಸ್ತಾನವನ್ನು ಆಕ್ರಮಣ ಮಾಡುವಂತೆ ಸ್ಪಷ್ಟವಾಗಿ ಸಾಬೀತು ಮಾಡಿದಂತಾಯಿತು, ಇವರ ಸಂಭಾಷಣೆಯ ಮುಂಚೆ ಪಾಕಿಸ್ತಾನವು ಕಾರ್ಗಿಲ್ ಯುದ್ದಕ್ಕೆ ಸಂಬಂಧಿಸಿದ ಮಾಹಿತಿಯನ್ನು ತಳ್ಳಿಹಾಕಿತ್ತು.

RAW ಹಲವು ವಿಶೇಷ ಅಧಿಕಾರಗಳನ್ನು ಹೊಂದಿದೆ; ಯಾವುದೇ ಸಮಸ್ಯೆಗಳಿಗೂ ಭಾರತದ ಸಂಸತ್ತಿಗೆ ಉತ್ತರಿಸಬೇಕೆಂದಿಲ್ಲ ಮತ್ತು RAW ಸಂಸ್ಥೆ ಆರ್‍ಟಿಐನಿಂದ ಹೊರಗುಳಿದ ಸಂಸ್ಥೆಯಾಗಿದೆ.

1974ರಲ್ಲಿ ಭಾರತವು ಮೊದಲ ಪರಮಾಣು ಪರೀಕ್ಷೆಯ ರಹಸ್ಯವನ್ನು ಕಾಪಾಡುವಲ್ಲಿ RAW ಪ್ರಮುಖ ಪಾತ್ರವಹಿಸಿದೆ. ಇದು ವಾಸ್ತವವಾಗಿ, ಚೀನಾ ಮತ್ತು ಅಮೆರಿಕಾದಂತಹ ದೇಶಗಳಲ್ಲಿರುವ ಗುಪ್ತಚರ ಸಂಸ್ಥೆಗಳಿಗೂ, ಭಾರತದಲ್ಲಿ ನಡೆಯುವ ರಹಸ್ಯ ಕಾರ್ಯಾಚರಣೆಯ ಚಟುವಟಿಕೆಗಳ ಮಾಹಿತಿ ಬಗ್ಗೆ ತಿಳಿದುಕೊಳ್ಳಲು ಸಾಧ್ಯವಾಗಲಿಲ್ಲ.

ಭಾರತದ ಈ ಕಾರ್ಯಚರಣೆ ಯಶಸ್ವಿಯಾಗಿ ಕೈಗೊಂಡರೆ ಪಾಕಿಸ್ತಾನವು ಭಾರತವನ್ನು ಆಕ್ರಮಿಸಲೂ ಪ್ರಯತ್ನಿಸುತ್ತಲೇ ಇರಲಿಲ್ಲ. ಹೌದು ಭಾರತವು ಇಸ್ರೇಲ್‍ನೊಂದಿಗೆ ಸೇರಿ “ಕಹುತಾ” ಕಾರ್ಯಚರಣೆಯನ್ನು ಯೋಜಿಸಿತ್ತು ಮತ್ತು ಪರಮಾಣು ರಿಯಾಕ್ಟರ್‍ಗಳನ್ನು ನಾಶಪಡಿಸಲು ಪಾಕಿಸ್ತಾನಕ್ಕೆ ಪ್ರವೇಶಿಸಿತ್ತು. ಆದರೆ ಪಾಕಿಸ್ತಾನದ ಅಧ್ಯಕ್ಷ ಜಿಯಾ-ಉಲ್-ಹಕ್‍ಗೆ ಭಾರತದ ದೇಶದ್ರೋಹಿಗಳು ಮೊದಲೇ ಮಾಹಿತಿಯನ್ನು ನೀಡಿದ್ದರು. ಈ ರೀತಿಯಾಗಿ ಭಾರತಕ್ಕೆ ಮೋಸ ಮಾಡಿದವರೇ ಆಗಿನ ಪ್ರಧಾನ ಮಂತ್ರಿ ಮೊರಾರ್ಜಿ ದೇಸಾಯಿ!!

ಮೂಲ:

You should know about RAW without a fail!

ಅಲೋಖಾ**

Tags

Related Articles

Close