ಅಂಕಣ

ಭಾರತವನ್ನು ಜಗತ್ತಿನ ಉತ್ಪಾದನಾ ಕೇಂದ್ರವನ್ನಾಗಿ ರೂಪಿಸುವ ಮೋದಿಯವರ ಮೇಕ್ ಇನ್ ಇಂಡಿಯಾ…..!!!

ಆರ್ಥಿಕತೆಯನ್ನು ಜಾಗತಿಕ ಮಟ್ಟದಲ್ಲಿ ಉನ್ನತೀಕರಿಸುವುದು ಹಾಗೂ ಭಾರತೀಯರಿಗೆ ಮಿಲಿಯನ್ ಗಟ್ಟಲೇ ಉದ್ಯೋಗವಕಾಶ ಕಲ್ಪಿಸುವ ಸಲುವಾಗಿ ಭಾರತವನ್ನು ಜಾಗತಿಕ ಉತ್ಪದನಾ ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಪ್ರಧಾನಿ ಮೋದಿಯವರ “ಮೇಕ್ ಇನ್ ಇಂಡಿಯಾ” ಯೋಜನೆಯನ್ನು ಜಾರಿಗೆ ತಂದರು!!

ಮೋದಿಯವರ ಮಹತ್ವಾಕಾಂಕ್ಷೆಯ ಯೋಜನೆಗಳಲ್ಲೊಂದಾ ಮೇಕ್ ಇನ್ ಇಂಡಿಯಾ ದೇಶೀಯ ಉತ್ಪನ್ನಗಳನ್ನೇ ಬಳಸಿ ದೇಶದಲ್ಲೇ ಉತ್ಪಾದಿಸಿ, ಮಾರಾಟ ಮಾಡುವ ಒಂದು ಯೋಜನೆ. ಜಾಗತಿಕ ಉತ್ಪಾದನೆಯ ಭೂಪಟದಲ್ಲಿ ಭಾರತವನ್ನು ಅಗ್ರಸ್ಥಾನಕ್ಕೇರಿಸುವ ಮಹತ್ತ್ವಾಕಾಂಕ್ಷೆಯ ‘ಮೇಕ್ ಇನ್ ಇಂಡಿಯಾ’ ಅಭಿಯಾನಕ್ಕೆ ಪ್ರಧಾನಿ ನರೇಂದ್ರ ಮೋದಿ ಹೊಸದಿಲ್ಲಿಯ ವಿಗ್ಯಾನ್ ಭವನದಲ್ಲಿ 25 ನವೆಂಬರ್ 2014ಕ್ಕೆ ಅದ್ದೂರಿಯಾಗಿ ಚಾಲನೆ ನೀಡಿದರು.

ದೇಶವನ್ನು ಜಗತ್ತಿನ ಉತ್ಪಾದನಾ ಕೇಂದ್ರವನ್ನಾಗಿ ರೂಪಿಸಿ, ಆ ಮೂಲಕ ಅಭಿವೃದ್ಧಿ ದರ(ಜಿಡಿಪಿ)ವನ್ನು ಹೆಚ್ಚಿಸುವುದು ಇದರ ಹಿಂದಿರುವ ಮುಖ್ಯ ಉದ್ದೇಶವಾಗಿದೆ. ವಿದೇಶಿ ನೇರ ಬಂಡವಾಳ ಹೂಡಿಕೆ ಸ್ನೇಹಿ ವಾತಾವಾರಣವನ್ನು ನಿರ್ಮಿಸಿದರೆ, ಸಹಜವಾಗಿ ಬಂಡವಾಳ ಹರಿದು ಬರುತ್ತದೆ. ಇದರಿಂದ ನಿರುದ್ಯೋಗದ ಸಮಸ್ಯೆಯ ನಿವಾರಣೆಯೂ ಸಾಧ್ಯವಾಗುತ್ತದೆ.
ಈ ಅವಧಿಯಲ್ಲಿ ಮೇಕ್ ಇನ್ ಇಂಡಿಯಾ ಯೋಜನೆ ಅನುಷ್ಠಾನ, ಸರಕಾರ ಭಾವಿಸಿದಷ್ಟು ವೇಗದಲ್ಲಾಗಿಲ್ಲವಾದರೂ ಒಂದಿಷ್ಟು ನಿರೀಕ್ಷೆಗಳಂತೂ ಗರಿಗೆದರಿವೆ. ನಿರೀಕ್ಷಿತ ವೇಗಕ್ಕೆ ತಲುಪದಿರಲು ಅನೇಕ ಕಾರಣಗಳಿವೆ. ಆ ಪೈಕಿ, ಸರಕು ಮತ್ತು ಸೇವಾ ಬಿಲ್, ಭೂಸ್ವಾಧೀನ ಮಸೂದೆ…ಇತ್ಯಾದಿ.

 

Image result for make in india modi

ದೇಶದಲ್ಲಿ ಹೂಡಿಕೆದಾರರಿಗೆ ಸಕಾಲಕ್ಕೆ ಅಗತ್ಯ ನೆರವು, ಮಾರ್ಗದರ್ಶನ ನೀಡಲಿರುವ ‘ ಮೇಕ್ ಇನ್ ಇಂಡಿಯಾ’ ವೆಬ್ ಪೆÇೀರ್ಟಲ್, ಲಾಂಛನ ಮತ್ತು 25 ಪ್ರಮುಖ ಉತ್ಪಾದನಾ ವಲಯಗಳ ಬಗ್ಗೆ ವಿವರಗಳನ್ನು ಒಳಗೊಂಡ ಕೈಪಿಡಿಗಳನ್ನು ಪ್ರಧಾನಿ ಬಿಡುಗಡೆಗೊಳಿಸಿದ್ದು, ದೇಶ ಆರ್ಥಿಕವಾಗಿ ಅಭಿವೃದ್ಧಿ ಹೊಂದಬೇಕಾದರೆ ಬಡವರಿಗೆ ಉದ್ಯೋಗ ದೊರೆತು ಅವರ ಮಧ್ಯಮ ವರ್ಗಕ್ಕೇರಬೇಕು. ಆಗ ಅವರ ಖರೀದಿ ಸಾಮರ್ಥ್ಯ ಹೆಚ್ಚಲಿದ್ದು, ಆರ್ಥಿಕ ಪ್ರಗತಿಗೆ ಹಾದಿಯಾಗಲಿದೆ. ಇದೇ ಸಂದರ್ಭ ಉದ್ದಿಮೆಗಳಿಗೆ ಮಾರುಕಟ್ಟೆ ಕೂಡ ಅಗಾಧವಾಗಿ ವಿಸ್ತರಿಸಲಿದೆ ಎಂದು ಮೋದಿ ವಿವರಿಸಿದ್ದಾರೆ!!!

ಮೇಕ್ ಇನ್ ಇಂಡಿಯಾದ ಲಾಂಛನವು ಕೂಡ “ಅಭಿವೃದ್ಧಿಯ ಕಡೆಗೆ ಸಿಂಹದ ಹೆಜ್ಜೆಯಾಗಿದೆ. ಲಾಂಛನದಲ್ಲಿ ಸಿಂಹ ಮತ್ತು ಚಕ್ರದ ಚಿಹ್ನೆಯಿದ್ದು, ಅಶೋಕ ಚಕ್ರದ ಪ್ರೇರಣೆ ಇದರ ಹಿಂದಿದೆ. ಸಿಂಹವು ಬಲ ಮತ್ತು ಶಕ್ತಿಯಾಗಿದ್ದರೆ ಚಕ್ರವು ಅಭಿವೃದ್ಧಿ ಮತ್ತು ಪ್ರಗತಿಯ ಸಂಕೇತವಾಗಿದೆ,”
ಈ ಯೋಜನೆಯ ಮುಖ್ಯ ಉದ್ದೇಶವಾದರೂ ಏನು??

ನರೇಂದ್ರ ಮೋದಿ ನೇತೃತ್ವದ ಎನ್‍ಡಿಎ ಸರಕಾರದ ಮಹತ್ವಾಕಾಂಕ್ಷಿ ಯೋಜನೆ ಇದಾಗಿದ್ದು, ಭಾರತವನ್ನು ಜಗತ್ತಿನ ಉತ್ಪಾದನಾ ಕೇಂದ್ರವನ್ನಾಗಿ ರೂಪಿಸುವ ಪ್ರಯತ್ನ. ಇದಕ್ಕಾಗಿ ವಿದೇಶಿ ಹಾಗೂ ಸ್ವದೇಶಿ ಕಂಪನಿಗಳು ಹೆಚ್ಚೆಚ್ಚು ತಮ್ಮ ಘಟಕಗಳನ್ನು ದೇಶದಲ್ಲೇ ಪ್ರಾರಂಭಿಸಲು ಉತ್ತೇಜನ ನೀಡಲಾಗಿದೆ!! ಪ್ರಧಾನಿ ನರೇಂದ್ರ ಮೋದಿ ಅವರು 2014 ಸೆಪ್ಟೆಂಬರ್ 25ರಂದು ಅಧಿಕೃತವಾಗಿ ಚಾಲನೆ ನೀಡಿದ ನಂತರ, ಡಿಸೆಂಬರ್ 29ರಂದು ಕೈಗಾರಿಕಾ ನೀತಿ ಮತ್ತು ಉತ್ತೇಜನ ಇಲಾಖೆ ಕಾರ್ಯಾಗಾರವನ್ನು ಆಯೋಜಿಸಿತ್ತು. ಇದರಲ್ಲಿ ಪ್ರಧಾನಿ ಮೋದಿ ಹಾಗೂ ಎಲ್ಲ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳು ಮತ್ತು ಕೈಗಾರಿಕೋದ್ಯಮದ ಗಣ್ಯರು ಪಾಲ್ಗೊಂಡಿದ್ದರು.

ಈ ಯೋಜನೆಯ ಮುಖ್ಯ ಉದ್ದೇಶ ಆಟೋಮೊಬೈಲ್ಸ್, ಕೆಮಿಕಲ್ಸ್, ಐಟಿ, ಔಷಧ, ಜವಳಿ, ಬಂದರು, ವಿಮಾನಯಾನ, ಪ್ರವಾಸೋದ್ಯಮ ಸೇರಿದಂತೆ ಪ್ರಮುಖ 25 ಉದ್ಯಮ ವಲಯಗಳನ್ನು ಉತ್ಪಾದನಾ ಕ್ಷೇತ್ರದಲ್ಲಿ ಉನ್ನತೀಕರಿಸುವುದು. ಅಲ್ಲದೆ, ವಿದೇಶಿ ನೇರ ಬಂಡವಾಳ ಹೂಡಿಕೆ ಮೂಲಕ ಅಭಿವೃದ್ಧಿ ದರ ಮತ್ತು ತೆರಿಗೆ ಆದಾಯದ ಹೆಚ್ಚಳದ ಜೊತೆಗೆ ಪರಿಸರದ ಮೇಲಾಗುವ ಪ್ರತಿಕೂಲ ಪರಿಣಾಮಗಳನ್ನು ತಗ್ಗಿಸುವುದಾಗಿದೆ.

Related image

ರಕ್ಷಣಾ ಕ್ಷೇತ್ರದಲ್ಲಿ ಶೇ.49, ರೇಲ್ವೇ ಮೂಲಸೌಕರ್ಯಕ್ಕೆ ಶೇ.100ರಷ್ಟು ವಿದೇಶಿ ನೇರ ಬಂಡವಾಳ ಹೂಡಿಕೆಗೆ(ಎಫ್‍ಡಿಐ) ಸಂಬಂಧಿಸಿದಂತೆ 2014ರ ಆಗಸ್ಟ್‍ನಲ್ಲಿ ಕೇಂದ್ರ ಸಚಿವ ಸಂಪುಟ ಒಪ್ಪಿಗೆ ನೀಡಿದೆ. ಇದಕ್ಕೂ ಮೊದಲು ರಕ್ಷಣಾ ಕ್ಷೇತ್ರದಲ್ಲಿ ಶೇ.29ರಷ್ಟು ಮಾತ್ರ ಎಫ್‍ಡಿಐಗೆ ಅವಕಾಶವಿತ್ತು. ಎಲ್ಲಕ್ಕಿಂತ ಹೆಚ್ಚಾಗಿ ರೇಲ್ವೆ ಮೂಲಸೌಕರ್ಯಕ್ಕೆ ಸಂಬಂಧಿಸಿದಂತೆ ಎಫ್‍ಡಿಐಗೆ ಅವಕಾಶವೇ ಇರಲಿಲ್ಲ. ವಿದೇಶಿ ನೇರ ಬಂಡವಾಳ ಹೂಡಿಕೆಗೆ ಅನುವು ಮಾಡಿಕೊಟ್ಟಿದ್ದರಿಂದ ಭಾರತ ರಕ್ಷಣಾ ಕೇತ್ರದಲ್ಲಿನ ಆಮದು ತಗ್ಗಿ ಜಿಡಿಪಿ ಹೆಚ್ಚಳಕ್ಕೆ ಕಾರಣವಾಗಲಿದೆ ಎಂದು ವಿಶ್ಲೇಷಿಸಲಾಗಿದೆ.

ಮೇಕ್ ಇನ್ ಇಂಡಿಯಾ ಯೋಜನೆಯಡಿ ಸರಕಾರ ಗುರುತಿಸಿರುವ 25 ಉದ್ಯಮ ವಲಯಗಳ ಪೈಕಿ ಬಾಹ್ಯಾಕಾಶ-ಶೇ.74, ರಕ್ಷಣೆ-ಶೇ. 49, ಮಾಧ್ಯಮ-ಶೇ.26 ಹಾಗೂ ಉಳಿದ ವಲಯಗಳಿಗೆ ಶೇ.100ರಷ್ಟು ವಿದೇಶಿ ನೇರ ಬಂಡವಾಳ ಹೂಡಿಕೆಗೆ ಅವಕಾಶ ಕಲ್ಪಿಸಲಾಗಿದೆ. ಮೇಕ್ ಇನ್ ಇಂಡಿಯಾ ಯೋಜನೆಗೆ ಚಾಲನೆ ಸಿಕ್ಕ ಬಳಿಕ, ಅಂದರೆ, 2014 ಸೆಪ್ಟೆಂಬರ್‍ನಿಂದ ಆಗಸ್ಟ್ 2015ರ ಅವಧಿಯಲ್ಲಿ 1.10 ಲಕ್ಷ ಕೋಟಿ ರೂ.(17 ಶತಕೋಟಿ ಡಾಲರ್) ಬಂಡವಾಳ ಹರಿದು ಬಂದಿದೆ ಎಂದು ಸರಕಾರ ತಿಳಿಸಿದೆ. ಅನೇಕ ಕಂಪನಿಗಳು ಭಾರತದಲ್ಲಿ ತಮ್ಮ ಉತ್ಪಾದನಾ ಘಟಕಗಳನ್ನು ತೆರೆಯಲು ಒಪ್ಪಿಕೊಂಡಿವೆ. ಇದರ ಪರಿಣಾಮವಾಗಿ, 2015ರ ಏಪ್ರಿಲ್-ಜೂನ್ ತ್ರೈಮಾಸಿಕ ಅವಧಿಯಲ್ಲಿ ಶೇ.24.8ರಷ್ಟು ಸ್ಮಾರ್ಟ್ ಫೆÇೀನ್‍ಗಳ ಉತ್ಪಾದನೆ ದೇಶದಲ್ಲಾಗಿದೆ. ಕಳೆದ ವರ್ಷದ ಇದೇ ಅವಧಿಯಲ್ಲಿ ಈ ಪ್ರಮಾಣ ಕೇವಲ ಶೇ.19.9ರಷ್ಟಿತ್ತು.
ಯಾವೆಲ್ಲಾ ವಲಯಗಳನ್ನೊಳಗೊಂಡಿದೆ ಮೇಕ್ ಇನ್ ಇಂಡಿಯಾ??

ಮೇಕ್ ಇನ್ ಇಂಡಿಯಾದ ದೇಸೀಯ ನೀತಿ ನಿರೂಪಣೆಗೆ ಸಂಬಂಧಪಟ್ಟಂತೆ ಪ್ರಧಾನಿ ನರೇಂದ್ರ ಮೋದಿ ಅವರು, ಫೆÇೀರ್ಡ್ ಮೋಟಾರ್, ಲಾಕ್‍ಹೀಡ್ ಮಾರ್ಟಿನ್, ಪೆಪ್ಸಿ ಕೋ, ಡು ಪಾಂಟ್, ಮೆರ್ಕ್ ಆ?ಯಂಡ್ ಕಂಪನಿ, ಕ್ವಾಲ್‍ಕಾಂ, ಅಬ್ಬೋಟ್ ಸೇರಿದಂತೆ ಜಗತ್ತಿನ ಬೃಹತ್ ಕಾಪೆರ್Çರೇಟ್ ಕಂಪನಿಗಳ ಸಿಇಒಗಳ ಜತೆ ಈಗಾಗಲೇ ಮಾತುಕತೆ ನಡೆಸಿದ್ದಾರೆ. ಈಗಾಗಲೇ ಆಟೋಮೊಬೈಲ್, ಆಟೋಮೊಬೈಲ್ ಬಿಡಿಭಾಗಗಳು, ವಿಮಾನಯಾನ, ಬಯೋಟೆಕ್ನಾಲಜಿ, ರಾಸಾಯನಿಕ, ನಿರ್ಮಾಣ, ರಕ್ಷಣೆ, ಎಲೆಕ್ಟ್ರಿಕಲ್ ಮಷ್‍ನರಿ, ಎಲೆಕ್ಟ್ರಾನಿಕ್ ಸಿಸ್ಟಮ್ಸ್, ಆಹಾರ ಸಂಸ್ಕರಣೆ, ಐಟಿ ಮತ್ತು ಬಿಪಿಎಂ, ಚರ್ಮೋದ್ಯೋಗ, ಮಾಧ್ಯಮ ಮತ್ತು ಮನರಂಜನೆ, ಗಣಿ, ತೈಲ ಮತ್ತು ನೈಸರ್ಗಿಕ ಅನಿಲ, ಔಷಧೋತ್ಪನ್ನ, ಪೆÇೀರ್ಟ್ ಮತ್ತು ಶಿಪ್ಪಿಂಗ್, ರೈಲ್ವೆ, ನವೀಕರಿಸಬಹುದಾದ ಇಂಧನ, ರಸ್ತೆ ಮತ್ತು ಹೆದ್ದಾರಿ, ಬಾಹ್ಯಾಕಾಶ, ಜವಳಿ ಮತ್ತು ಸಿದ್ಧ ಉಡುಪು, ಉಷ್ಣ ವಿದ್ಯುತ್ ಸ್ಥಾವರ, ಪ್ರವಾಸೋದ್ಯಮ, ಆರೋಗ್ಯ ವಲಯಗಳು ಮೇಕ್ ಇನ್ ಇಂಡಿಯಾ ಯೋಜನೆಯಡಿ ಬರಲಿವೆ.

ಸಾಧಿಸಬಹುದಾದ ಗುರಿಗಳು ಏನು ಗೊತ್ತೇ??

* ಮಧ್ಯಮ ಅವಧಿಯಲ್ಲಿ ವರ್ಷಕ್ಕೆ ಶೇಕಡ 12 ರಿಂದ ಶೇಕಡ 14ರವರೆಗೆ ಉತ್ಪಾದನಾ ವಲಯದಲ್ಲಿ ಬೆಳವಣಿಗೆ ಹೆಚ್ಚಳದ ಗುರಿ
* 2022ರ ಹೊತ್ತಿಗೆ ದೇಶದ ಒಟ್ಟು ಪ್ರಾದೇಶಿಕ ಉತ್ಪನ್ನ ತಯಾರಿಕಾ ಪಾಲು ಶೇಕಡ 16ರಿಂದ ಶೇಕಡ 25ಗೆ ಹೆಚ್ಚಳ
* 2022ರ ಹೊತ್ತಿಗೆ ಉತ್ಪಾದನಾ ವಲಯದಲ್ಲಿ 100 ದಶಲಕ್ಷ ಹೆಚ್ಚವರಿ ಉದ್ಯೋಗಗಳ ಸೃಷ್ಟಿ
* ಗ್ರಾಮದಿಂದ ವಲಸೆ ಬಂದವರ ಮತ್ತು ನಗರದ ಬಡವರ ಬೆಳವಣೆಗೆಗಾಗಿ ಸೂಕ್ತ ನೈಪುಣ್ಯದ ಸೃಷ್ಟಿ
* ಉತ್ಪಾದನಾ ವಲಯದಲ್ಲಿ ದೇಶೀಯ ಮೌಲ್ಯದ ಜೊತೆಗೆ ಮತ್ತು ಉತ್ಪಾದನಾ ತಾಂತ್ರಿಕ ಆಳದ ಹೆಚ್ಚಳ
* ಜಾಗೃತಿಕ ಮಟ್ಟದಲ್ಲಿ ಭಾರತೀಯ ಉತ್ಪಾದನಾ ವಲಯದ ಸ್ಪರ್ಧಾತ್ಮಕತೆಯನ್ನು ಹೆಚ್ಚಿಸುವುದು
* ವಿಶೇಷವಾಗಿ ಪರಿಸರಕ್ಕೆ ಸಂಬಂದಿಸಿದಂತೆ, ಬೆಳವಣಿಗೆಯ ಸಮರ್ಥನೀಯತೆ ಖಾತರಿ
* 2020ರ ಆರಂಭದ ಹೊತ್ತಿಗೆ ಭಾರತ ದೇಶ ವಿಶ್ವದ ಮೂರು ಅಗ್ರ ಆರ್ಥಿಕ ಬೆಳವಣೆಗೆಗೊಂಡ ದೇಶಗಳಲ್ಲೊಂದು ಮತ್ತು ವಿಶ್ವದ ಮೂರು ಅಗ್ರ ಉತ್ಪಾದನಾ ಸ್ಥಳಗಳಲ್ಲೊಂದು ಸ್ಥಾನ ಪಡೆಯಬಹುದೆಂದು ನಿರೀಕ್ಷಿಸಲಾಗಿದೆ
* 2050ರಹೊತ್ತಿಗೆ ಭಾರತದ ಸ್ಥಾನವನ್ನು ಬ್ರಿಕ್ಸ್ ಮಟ್ಟದಲ್ಲಿ ಅಗ್ರವಾಗಿಸುವ ಗುರಿ ಇದೆ

ವಿಶ್ವದಲ್ಲಿ ಭಾರತವು ಈಗಾಗಲೇ ಆರ್ಥಿಕವಾಗಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ದೇಶ ಎಂದು ತನ್ನ ಅಸ್ತಿತ್ವವನ್ನು ಗುರುತಿಸಿದೆ. ಇನ್ನು 2020ರ ಹೊತ್ತಿಗೆ ಭಾರತ ದೇಶವು ವಿಶ್ವದಲ್ಲೇ ಮೂರನೇ ಅಗ್ರ ಆರ್ಥಿಕ ಬೆಳವಣಿಗೆಗೊಂಡ ರಾಷ್ಟ್ರ ಎನ್ನುವ ಕೀರ್ತಿಗೆ ಪಾತ್ರವಾಗಲಿರುವುದಂತೂ ಖಂಡಿತಾ……….!!

– ಅಲೋಖಾ

Tags

Related Articles

Close