ಅಂಕಣ

ಭಾರತ ಈ ಇಂಡೋನೇಷಿಯಾದ ಚಿಕ್ಕ ದ್ವೀಪದಿಂದ ಕಲಿಯುವುದು ಬಹಳಷ್ಟಿದೆ!!! ‘ಬಾಲಿ’ ಎಂಬ ಭಾರತದ ಶಿಷ್ಯ!!!!

ಭಾರತವು ಇಂಡೋನೇಷ್ಯಾದ ಗುರುವಿದ್ದಂತೆ ಯಾಕಂದ್ರೆ ಅವರ ಆಚರಣೆ ನಮ್ಮ ಆಚರಣೆಗಳೊಂದಿಷ್ಟು ಒಂದೇ ತೆರನಾಗಿವೆ. ಆ ಶಿಷ್ಯನಂತೆ ಇರುವ
ಇಂಡೋನೇಷ್ಯಾದಿಂದ ಗುರುವಾಗಿ ಭಾರತವೂ ಒಂದಷ್ಟು ಕಲಿಯಬೇಕು.

ಇಂಡೋನೇಷ್ಯಾದ ಬಾಲಿ ಎಂಬ ಚಿಕ್ಕ ರಾಜ್ಯದಲ್ಲಿ ಸುಮಾರು 4.22 ಮಿಲಿಯನ್ ಹಿಂದುಗಳಿದ್ದಾರೆ. ಹಿಂದೆ ಇಸ್ಲಾಂ ದಾಳಿಯಾದರೂ ಅದಕ್ಕೆ ಹೆದರದೆ ಅವರ
ಪರಂಪರೆಯ ಕ್ಷಾತ್ರ ತೇಜವನ್ನು ಪ್ರದರ್ಶಿಸಿತ್ತು. ಅವರೆಲ್ಲಾ ಸಾಯಲು ಸಿದ್ಧರಿದ್ದರೆ ಹೊರತು ಧರ್ಮಬಿಡಲು ಸಿದ್ಧರಿರಲಿಲ್ಲ. ಹಾಗಾಗಿಯೇ ಅವರೆಲ್ಲಾ ಹಿಂದುಗಳಾಗಿ
ಉಳಿದಿದ್ದಾರೆ. ಬಾಲಿಯವರಿಗೆ ಇದು ಅವರ ಶ್ರೇಷ್ಠ ಪರಂಪರೆ ಕೊಟ್ಟ ಕೊಡುಗೆ. ಅಂದಿನ ರಾಜ ಮಹಪಾಹಿತ್ ಧರ್ಮಕ್ಕಾಗಿ ಬೆಂಕಿಗೆ ಹಾರಿ ಪ್ರಾಣಾರ್ಪಣೆ ಮಾಡಿದ್ದ. ಬಾಲಿಯು ಶ್ರೇಷ್ಠ ಪರಂಪರೆಯ ರಕ್ತದಿಂದ ತೋಯ್ದ ಶ್ರೇಷ್ಠ ನೆಲ. ಹಿಂದೂ ಧರ್ಮ ಇಡೀ ಜಗತ್ತಿಗೆ ಪ್ರೇರಣೆ ನೀಡಬಲ್ಲಂತಹ ಧರ್ಮ. ಹಿಂದೂ ರಾಜರು ಯಾರ ಜೊತೆ ಯುದ್ಧ ಮಾಡಿ ಗೆದ್ದು ಸೆರೆಹಿಡಿದರೆ ಅವರ ಧರ್ಮದ ವಿಷಯಕ್ಕೆ ಅಡ್ಡಿ ಬರುತ್ತಿರಲಿಲ್ಲ . ಅವರ ಧರ್ಮ ಆಚರಣೆಗೆ ಅವಕಾಶ ಕೊಡತ್ತಿದ್ದರು. ಯಾಕಂದ್ರೆ ಜಗತ್ತಿನಲ್ಲಿ ನಮ್ಮಷ್ಟು ಸಹಿಷ್ಣುಗಳು ಯಾರೂ ಇಲ್ಲ. ಆದರೆ ಇಲ್ಲಿನ ಕೆಲ ಎಡಬಿಡಂಗಿಗಳು ಸಹಿಷ್ಣುತೆ ಬಗ್ಗೆ ಮಾತಾಡ್ತಾರೆ. ನಿಜ ಅಂದ್ರೆ ಹಿಂದುಗಳಿಗೆ ಸಹಿಷ್ಣುತೆಯ ಪಾಠದ ಅವಶ್ಯಕತೆಯೇ ಇಲ್ಲ.

ಇಂಡೋನೇಷಿಯಾದಿಂದ ನಾವು ಕಲಿಯಬೇಕಾದ ಅಂಶಗಳು.

1) ಇಂಡೋನೇಷ್ಯಾ ಪ್ರತಿವರ್ಷದ ಒಂದು ದಿನ ಮೌನ ದಿನಾಚರಣೆ ಮಾಡುತ್ತದೆ. ಆ ದಿನ ರಸ್ತೆಗೆ ಯಾವುದೇ ವಾಹನ ಇಳಿಯುವುದಿಲ್ಲ,ವಿಮಾನ ನಿಲ್ದಾಣವು
ಮುಚ್ಚಲ್ಪಡುತ್ತದೆ. ಟಿವಿಯಲ್ಲಿ ಮನರಂಜನೆ ಕಾರ್ಯಕ್ರಮಗಳು ಇರುವವುದಿಲ್ಲ. ಮುಸಲ್ಮಾನರು ಮನೆಯಲ್ಲಿಯೇ ಪ್ರಾರ್ಥನೆ ಮಾಡಬೇಕು.ಹೀಗೆ ಹತ್ತು ಹಲವಾರು
ನಿಯಮಗಳಿಗೆ ಬದ್ಧರಾಗಿ ಆಚರಣೆ ಮಾಡುತ್ತಾರೆ. ಆದರೆ ಭಾರತದಲ್ಲಿ ಬರೀ ಮುಸಲ್ಮಾನರ ಪ್ರಾರ್ಥನೆ ಬಗ್ಗೆ ಕಮೆಂಟ್ ಮಾಡಿದರೆ ಅದೇ ದೊಡ್ಡ ಅಪರಾಧ
ಎನ್ನುವಂತೆ ಸೋ ಕಾಲ್ಡ್ ಸೆಕ್ಯುಲರ್ ಬುದ್ಧಿ ಜೀವಿಗಳು ಬೊಗಳುತ್ತಾರೆ. ಇನ್ನೇನಾದರೂ ಮೌನಾಚರಣೆ ಬಗ್ಗೆ ಮಾತೆತ್ತಿದರೆ ಏನ್ ಗತಿ ಅಲ್ವಾ?

2)ಇಂಡೋನೇಷ್ಯಾದ ಸಂಸ್ಕೃತಿಯು ಭಾರತೀಯ ಮೂಲದ ಋಷಿಗಳಿಂದ ಸ್ಥಾಪಿತವಾಗಿದೆ. ಇಂಡೋನೇಷ್ಯಾದ ಪಠ್ಯದಲ್ಲಿ ಭಾರತದ ಪ್ರಸಿದ್ಧ ಋಷಿಗಳಾದ
ಮಾರ್ಕಂಡೇಯ,ಭಾರದ್ವಾಜ್,ಅಗಸ್ತ್ಯರ ಬಗ್ಗೆ ಇದೆ. ಋಗ್ವೇದದ 402 ಋಷಿಗಳ ಪರಿಚಯ ಅವರಿಗಿದೆ. ಆದರೆ ಭಾರತದಲ್ಲಿ ಋಷಿಗಳ,ಸಾಧು,ಸಂತರ ಬಗ್ಗೆ ಬಾಲಿವುಡ್ ಚಲನಚಿತ್ರಗಳಲ್ಲಿ ಅಪಹಾಸ್ಯ ಮಾಡುತ್ತಾರೆ. ನಮ್ಮ ಋಷಿಗಳ ಬಗ್ಗೆ ನಾವೇ ಅಪಹಾಸ್ಯ ಮಾಡ್ತೀವಿ ಆದರೆ ಬಾಲಿಯ ಜನ ನಮ್ಮ ಋಷಿಮುನಿಗಳನ್ನು ಆರಾಧಿಸುತ್ತಾರೆ.

ನಮ್ಮ ಪಠ್ಯದಲ್ಲಿ ಒಬ್ಬೇ ಒಬ್ಬ ಋಷಿಗಳ ಬಗ್ಗೆ ಇಲ್ಲ. ವಿದೇಶಿಯರ ದಾಳಿಗೊಳಗಾಗಿಯೂ ಭಾರತ ಭಾರತವಾಗಿಯೇ ಉಳಿದಿತ್ತು . ಸ್ವಾತಂತ್ರ್ಯ ನಂತರ ಬಂದ
ನಮ್ಮವರೇ ನಮ್ಮ ಪಠ್ಯವನ್ನು ಮನಸ್ಸಿಗೆ ಬಂದಂತೆ ವಿಕೃತಿ ಪಠ್ಯವನ್ನಾಗಿ ಮಾಡಿದರು. ಋಷಿಮುನಿಗಳ ಬಗ್ಗೆ ಪಠ್ಯದಲ್ಲಿ ಹಾಕಿದರೆ ಅದನ್ನ ಕೋಮುವಾದ ಅನ್ನುವ ರೀತಿ ಬಿಂಬಿಸಿ ನಮ್ಮ ಪರಂಪರೆಯ ಬಗ್ಗೆ ನಮಗೆ ಪರಿಚಯಸಲೇ ಇಲ್ಲ. ಆ ಋಷಿಗಳ ಸಂತಾನದಿಂದಲೇ ಹಿಂದೂ ಧರ್ಮ ಉಳಿದಿದೆ. ಭೂಮಿಯು ಗುಂಡಗಿದೆ ಅಂತ ಮೊದಲು ಹೇಳಿದವರು ನಮ್ಮ ಋಷಿಮುನಿಗಳೆ.

3)ಭಾರತದಲ್ಲಿ ಧೋತಿ,ಸೀರೆ ಧರಿಸುವುದು ಎಂದರೆ ಅಸಹ್ಯ ಪಟ್ಟುಕೊಳ್ತಾರೆ ಆದರೆ ಇಂಡೋನೇಷ್ಯಾದ ಬಾಲಿಯಲ್ಲಿ ಧೋತಿ ಉಡುಪು ರಾಷ್ಟ್ರೀಯ ಉಡುಪು. ಅಲ್ಲಿ ಆ ಧಿರಿಸು ಧರಿಸದಿದ್ದರೆ ದೇವಸ್ಥಾನಗಳಲ್ಲಿ ಪ್ರವೇಶವೇ ಇಲ್ಲ. ನಾವು ಕೊಟ್ಟ ಪರಂಪರೆಯನ್ನು ಅವರು ಅಳವಡಿಸಿಕೊಂಡಿದ್ದಾರೆ ಆದರೆ ನಾವು? ಹೀಗೆ ಮುಂದುವರೆದರೆ ಕೆಲವರ್ಷಗಳಲ್ಲಿ ಭಾರತೀಯ ಸಂಸ್ಕೃತಿ ಬದುಕುಳಿಯಲಾರದು.

4)ಇಂಡೋನೇಷ್ಯಾದ ಬಾಲಿಯಲ್ಲಿ ನಮ್ಮ ಋಷಿಗಳು ಬೋಧಿಸಿದ ತತ್ವಗಳನ್ನು ಅಳವಡಿಸಿಕೊಂಡಿದ್ದಾರೆ. ಅದರಲ್ಲಿ ಕರ್ತವ್ಯ,ದೇವರು ಮತ್ತು ಮಾನವನ ಸಂಭಂದದ ಬಗ್ಗೆಯೂ ಕೂಡಾ. ಅದರಿಂದ ಅವರ ಅಂತರಿಕ ಧರ್ಮ ಸುಧಾರಣೆಯಾಗುತ್ತಿದೆ. ಆದರೆ ಭಾರತದಲ್ಲಿ ನಮ್ಮ ಋಷಿಗಳು ಹೆಸರನ್ನು ನೆನಪಿಟ್ಟುಕೊಳ್ಳೋದಕ್ಕು ಪ್ರಯಾಸಪಡುತ್ತಿದ್ದೇವೆ. ತಪ್ಪು ನಮ್ಮದೆ ನಮ್ಮ ಶಿಕ್ಷಣ ವ್ಯವಸ್ಥೆಯದ್ದೆ.

5)ಬಾಲಿಯಲ್ಲಿ ಅನೇಕ ಅಚ್ಚರಿಗಳನ್ನು ನಾವು ನೋಡಬಹುದು. ಅಲ್ಲಿನ ಪ್ರತಿಯೊಂದು ಮಗು ದಿನಕ್ಕೆ 3 ಸಲ ಗಾಯಿತ್ರಿ ಮಂತ್ರ ಓದುತ್ತದೆ.
ರಾಮಾಯಣ,ಮಹಾಭಾರತದ ಅಧ್ಯಯನದ ಒಳಗೊಂಡಂತ ಶಿಕ್ಷಣ ಅಳವಡಿಸಿದ್ದಾರೆ. ಆದರೆ ಭಾರತದಲ್ಲಿ ಗಾಯಿತ್ರಿ ಮಂತ್ರ ಯಾವುದು ಅನ್ನೋದೇ ತುಂಬಾ ಜನಕ್ಕೆ ಗೊತ್ತಿಲ್ಲ,ಶಿಕ್ಷಣದ ವಿಷಯಕ್ಕೆ ಬಂದರೆ ರಾಮಾಯಣ ಮಹಾಭಾರತ ಕೋಮುವಾದಿ ಗ್ರಂಥಗಳು ಅಂತ ಬೊಬ್ಬೆ ಹೊಡಿತಾರೆ.

6)ಬಾಲಿಯಲ್ಲಿ ಧಾರ್ಮಿಕ ಸಾಮರಸ್ಯ ಹೇಗಿದೆ ಗೊತ್ತಾ? ಅಲ್ಲಿ ಪ್ರತಿವರ್ಷ ಧರ್ಮ ಸಮ್ಮೇಳನ ನಡೆಯುತ್ತವೆ. ಎಲ್ಲಾ ಧರ್ಮದವರು ಒಂದೆಡೆ ಸೇರುತ್ತಾರೆ. ಆದರೆ
ಭಾರತದಲ್ಲಿ ಹಿಂದುಗಳು ಮಾತ್ರ ಸಾಮರಸ್ಯ ಬೆಳೆಸೋ ಪ್ರಯತ್ನ ಮಾಡ್ತಾರೆ ಉಳಿದವರು ತದ್ವಿರುದ್ಧ.

7)ಭಾರತದಲ್ಲಿ ಸೆಕ್ಯುಲರಿಸಂ ಅಂದ್ರೆ ಹಿಂದೂ ಧರ್ಮವನ್ನು ಅವಮಾನಿಸುವುದು. ಅನ್ಯಧರ್ಮೀಯರು ತಪ್ಪು ಮಾಡಿದರೆ ಅದು ತಪ್ಪೇ ಅಲ್ಲ ಎನ್ನುವುದು. ದೇವಸ್ಥಾನದ ಶೇಕಡಾ ಪಾಲು ಹಣವನ್ನು ಅನ್ಯಧರ್ಮಿಯರ ಮಸೀದಿ,ಚರ್ಚಗಳಿಗೆ ಬಳಸುವುದೇ ಸೆಕ್ಯಲರಿಸಂ ಅಂತ ಭಾರತದ ಸೆಕ್ಯಲರಿಸಂನ ಸೋ ಕಾಲ್ಡ್ ಸೆಕ್ಯಲರ್ ಗಳು ಬೊಗಳುತ್ತವೆ. ಆದರೆ ಇಂಡೋನೇಷ್ಯಾದಲ್ಲಿ ಸರ್ಕಾರ ಪ್ರತಿ ಧಾರ್ಮಿಕ ದೇವಸ್ಥಾನ , ಮಸೀದಿ, ಚರ್ಚಗಳಿಗೆ ಸಮನಾದ ಹಣವನ್ನು ಕೊಡುತ್ತದೆ. ಇದೇ ಅಲ್ವಾ ನಿಜವಾದ ಸೆಕ್ಯುಲರಿಸಂ ರಾಷ್ಟ್ರ. ಭಾರತ ಯಾವಾಗ ಕಲಿಯುತ್ತೋ ಇದೆಲ್ಲವನ್ನು?

8)ಇಂಡೋನೇಷ್ಯಾ ಭಾರತದ ಹಿಂದೂ ಗ್ರಂಥಗಳಿಂದ ಅನೇಕ ವಿಚಾರಗಳನ್ನು ಅಳವಡಿಸಿಕೊಂಡಿದೆ. ಆದರೆ ಭಾರತ ಅದ್ಯಾವುದನ್ನು ಅಳವಡಿಸಿಕೊಂಡಿಲ್ಲ ಯಾಕಂದ್ರೆ ಅಳವಡಿಸಿದರೆ ಇಲ್ಲಿನ ಗಂಜಿಗಿರಾಕಿಗಳು ಬೊಗಳುತ್ತವೆ. ಭಗವಾನ್ ಶ್ರೀಕೃಷ್ಣನ ಆರಾಧಕರು ಇಂಡೋನೇಷ್ಯಾದ ಬಾಲಿಯವರು. ಎಲ್ಲಾ ಧರ್ಮ ಹೇಳುವುದು ಸತ್ಯದ ಬಗ್ಗೆ ,ಸತ್ಯದ ಕಡೆಗೆ ಕೊಂಡೊಯ್ಯುತ್ತದೆ ಅದಕ್ಕೆ ಹಿಂದೂ ಧರ್ಮದ ಗ್ರಂಥಗಳು ಎಲ್ಲಾ ಧರ್ಮದ ಗುರುವಿದ್ದಂತೆ ಅಂತ ಇಂಡೋನೇಷ್ಯಾದವರು ಪಾಲಿಸುತ್ತಾರೆ.

9)ಜಗತ್ತಿನಲ್ಲಿ ಅತೀ ಹೆಚ್ಚು ಅಕ್ಕಿಯನ್ನು ಬೆಳೆಯುವವರು ಅಂತ ಮಾತು ಬಂದರೆ ಅದರಲ್ಲಿ ಇಂಡೋನೇಷ್ಯಾದ ಕಡೆ ಇಡೀ ಜಗತ್ತೇ ನೋಡುತ್ತದೆ. ಇಂಡೋನೇಷ್ಯಾದ ಜನರು ಮಾತೃಭೂಮಿಯ ಕೃಪೆಯಿಂದ ಇದೆಲ್ಲಾ ಬೆಳೆಯುತ್ತೇವೆ ಅಂತ ಹೇಳ್ತಾರೆ ಕೃತಜ್ಞಾಪೂರಕವಾಗಿ ಮಾತೃಭೂಮಿಯ(ದೇವತೆ ಲಕ್ಷ್ಮಿಯ) ದೇವಸ್ಥಾಗಳನ್ನು ಕಟ್ಟಿಸಿದ್ದಾರೆ. ಅಲ್ಲಿಯ ಮುಸಲ್ಮಾನರು ಆ ದೇವತೆಗೆ ಕೃತಜ್ಞತೆಯಿಂದಿದ್ದಾರೆ. ಅವರು ಅಕ್ಕಿ ಬೆಳೆಯುವ ಯೋಜನೆ,ನೀರು ಮತ್ತು ಕೃಷಿಯ ಸುಧಾರಣೆ ನೋಡಿ ಹಾರ್ವರ್ಡ್,ಆಕ್ಸಫರ್ಡ್ ಯುನಿವರ್ಸಿಟಿಯ ಕೃಷಿಯ ವಿಭಾಗ ಬೆರಗಾಗಿದೆ. ಈ ಯೋಜನೆಗಳನ್ನು ಅವರು 9ನೇ ಶತಮಾನದಿಂದಲೇ ಅಳವಡಿಸಿಕೊಂಡಿದ್ದಾರೆ.ಅವರು ಹೇಳ್ತಾರೆ ಇದೆಲ್ಲಾ ಭಾರತೀಯ ಋಉಷಿಮುನಿಗಳ ಕೊಡುಗೆಯಂತೆ. ಭಾರತದಲ್ಲಿ ಮಾತ್ರ ಋಷಿಮುನಿಗಳು ನೆನಪೇ ಇಲ್ಲ.

10)ಹಿಂದೂ ಧರ್ಮದ ಪ್ರತಿಯೊಂದು ಹಬ್ಬವನ್ನು ಇಂಡೋನೇಷ್ಯಾದ ಜನ ವಿಶೇಷವಾಗಿ ಆಚರಿಸುತ್ತಾರೆ. ದೀಪಾವಳಿ,ರಾಮನವಮಿ ಹಬ್ಬಗಳಲ್ಲಿ ರಾಮಾಯಣ
ಪುಸ್ತಕವನ್ನು ಮೆರವಣಿಗೆ ಮಾಡಿ,ಒಂದು ವಿಶೇಷ ಸ್ಥಳಕ್ಕೆ ಕೊಂಡೊಯ್ದು ರಾಮಾಯಣವನ್ನು ಪಠಿಸುತ್ತಾರೆ. ಇದನ್ನು ಅಲ್ಲಿಯ ಅನ್ಯಧರ್ಮಿಯರು ವಿರೋಧಿಸಲ್ಲ ಇದೇ ಅಲ್ಲವೇ ಧಾರ್ಮಿಕ ಸಾಮರಸ್ಯ?

ಆದರೆ ಭಾರತದಲ್ಲಿ?

-ಮಹೇಶ್ **

Tags

Related Articles

Close