ಅಂಕಣ

ಮೊದಲ ಲೋಕಸಭಾ ಚುನಾವಣೆಯಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಗೆಲ್ಲದೇ ಇರಲು ನೆಹರೂ ಹಾಗೂ ಕಾಂಗ್ರೆಸ್ ಮಾಡಿದ ಕುತಂತ್ರವೇನು ಗೊತ್ತೇ?!!

ನೆಹರೂ ತಮ್ಮ ಆಡಳಿತ ಅವಧಿಯಲ್ಲಿ ತಮ್ಮ ಸಚಿವ ಸಂಪುಟದ ಸಂಭಾವ್ಯ ಅಭ್ಯರ್ಥಿಗಳನ್ನು ಸಂಪೂರ್ಣವಾಗಿ ವಿರೋಧಿಸುತ್ತಿದ್ದರು ಎಂಬ ಅಂಶಗಳು ಎಷ್ಟೋ
ವರ್ಷಗಳಿಂದ ತಿಳಿದ ವಿಚಾರ. ಅಷ್ಟೇ ಅಲ್ಲದೇ ಅವರನ್ನು ಪಕ್ಷದಿಂದಲೇ ಯಾವಾಗಲೂ ದೂರವಿಡಲು ಬಯಸುತ್ತಿದ್ದಿದ್ದೂ ಗೊತ್ತಿದೆ!!

ನೆಹರೂ ಎಂತಹ ಒಬ್ಬ ವ್ಯಕ್ತಿ ಅಂದರೆ ಸರ್ದಾರ್ ವಲ್ಲಭಬಾಯಿ ಪಟೇಲ್ ಹಾಗೂ ಡಾ. ಅಂಬೇಡ್ಕರ್‍ರನ್ನು ಕಾಂಗ್ರೆಸ್ ಅಧ್ಯಕ್ಷರಾಗುವಂತೆ ತಡೆದಿದ್ದರು!! ಅಷ್ಟೇ ಅಲ್ಲದೇ ತಮ್ಮ ಸಚಿವ ಸಂಪುಟದಲ್ಲಿ ಅಂಬೇಡ್ಕರ್‍ಗೆ ಯಾವುದೇ ಸ್ಥಾನವನ್ನು ನೀಡಲು ನಿರಾಕರಿಸಿದಂತಹ ವ್ಯಕ್ತಿ. ಇದು ನಡೆದಿದ್ದು ಸುಮಾರು ಅಕ್ಟೋಬರ್ 1951 ಮತ್ತು ಫೆಬ್ರವರಿ 1952ರ ನಡುವೆ. ಅಂದರೆ ಲೋಕಸಭಾ ಚುನಾವಣೆ 5 ತಿಂಗಳವರೆಗೆ ನಡೆಯಿತು!! 1947ರ ಆಗಸ್ಟ್ 15ರಂದು ಭಾರತ ಸ್ವತಂತ್ರಗೊಂಡಾಗ ಜವಹರಲಾಲ್ ನೆಹರೂ ಮೊದಲ ಪ್ರಧಾನಿಯಾಗಿದ್ದರು. ಅಲ್ಲದೇ ಸಚಿವ ಸಂಪುಟವನ್ನು ಈ ಒಂದು ಸಂದರ್ಭದಲ್ಲಿ ಮಾಡಲಾಗಿದ್ದು ವಿವಿಧ ಸಮುದಾಯಗಳಿಂದ ಆಯ್ಕೆ ಮಾಡಿ ಮೊದಲ ಸಚಿವ ಸಂಪುಟವನ್ನು ರಚಿಸಿದರು. ಆದರೆ ಮತದಾನ ನಡೆಯುವ ಮುಂಚಿತವಾಗಿ ಶ್ಯಾಮ್ ಪ್ರಸಾದ್ ಮುಖರ್ಜಿ (ಕೈಗಾರಿಕಸಚಿವರು)ಭಾರತೀಯ ಜನಸಂಘವನ್ನು ಸ್ಥಾಪಿಸಿದರು. ಹಾಗೆಯೇ ಡಾ.ಬಿ. ಆರ್ ಅಂಬೇಡ್ಕರ್ ಅವರು ಪರಿಶಿಷ್ಟ ಜಾತಿ ಒಕ್ಕೂಟವನ್ನು ರಚಿಸಿದರು. ತದನಂತರಗಳಲ್ಲಿ ಇದು ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ ಎನ್ನುವ ಹೆಸರಿನಿಂದ ಜನಪ್ರಿಯಗೊಂಡಿತು.

ಅಷ್ಟೇ ಅಲ್ಲದೇ, ಇನ್ನೊಬ್ಬ ಕಾಂಗ್ರೆಸ್ ನಾಯಕ ಆಚಾರ್ಯ ಜೆಬಿ ಕ್ರಿಪ್ಲಾನಿಯವರು ಕಿಸಾನ್ ಮಜ್ದೂರ್ ಪ್ರಜಾ ಪಕ್ಷವನ್ನು ಕಂಡುಕೊಂಡರೆ, ರಾಮ್ ಮನೋಹರ್
ಲೋಹಿಯಾ ಮತ್ತು ಜೆಪಿ ನಾರಾಯಣ್ ನಂತರದಲ್ಲಿ ಸೋಷಿಯಲಿಸ್ಟ್ ಪಕ್ಷದ ಹಿಂಬಾಲಕರಾಗಿದ್ದರು!!! ಆದರೆ ಜವಾಹರಲಾಲ್ ನೆಹರು ಅವರು ಪ್ರಧಾನಿಯಾಗಿ
ಚುನಾಯಿತರಾದರು. ಈ ಸಂದರ್ಭದಲ್ಲಿ ಲೋಕಸಭೆಯ ಪೂರ್ಣಾವಧಿ ಮುಗಿದ್ದು, ಇಲ್ಲಿ ಯಾವುದೇ ಪ್ರತಿಪಕ್ಷದ ನಾಯಕರು ಪ್ರತಿನಿಧಿಸಿರಲಿಲ್ಲ!!

ಮೊದಲ ಲೋಕಸಭಾ ಚುನಾವಣೆಯಲ್ಲಿ ನೆಹರೂ, ಡಾ.ಅಂಬೇಡ್ಕರ್‍ಗೆ ಚುನಾವಣೆಯ ಟಿಕೆಟ್ ನೀಡಿರಲಿಲ್ಲ. ಆದ್ದರಿಂದ ಅವರು ಬಾಂಬೆ ಕ್ಷೇತ್ರದಿಂದ ತಮ್ಮ ಪಕ್ಷದ ಪರಿಶಿಷ್ಟ ಜಾತಿ ಒಕ್ಕೂಟದಿಂದ ಸ್ಪರ್ಧಿಸಿದರು. ಆದರೆ ಕಾಂಗ್ರೆಸ್‍ನಿಂದ ನಾರಾಯಣ್ ಕಜೋಲ್ಕರ್‍ರನ್ನು ಅಂಬೇಡ್ಕರ್‍ರ ವಿರುದ್ದ ಸ್ಪರ್ಧಿಸಿ ಚುನಾವಣೆಯನ್ನು ಗೆದ್ದುಕೊಂಡರು!!! ಆದರೆ ಕಾಂಗ್ರೆಸ್‍ನಲ್ಲಿದ್ದ ಬಹುಪಾಲು ದಲಿತರು ಜಗ್ಜೀವನ್‍ರಾಮ್‍ನ ನೇತೃತ್ವದಲ್ಲಿದ್ದ ಆಲ್ ಇಂಡಿಯಾ ಡಿಪ್ರೆಸ್ಸ್ಡ್ ಕ್ಲಾಸ್ಸ್ ಲೀಗ್‍ನಲ್ಲಿ ಉತ್ತಮ ಬಾಂಧವ್ಯವನ್ನು ಹೊಂದಿದ್ದರು!!

1952ರಲ್ಲಿ ನಡೆದ ಮೊದಲ ಚುನಾವಣೆಗಿಂತಲೂ ಮೊದಲು ಅಂದರೆ, 1946ರ ಜುಲೈನಲ್ಲಿ ಬ್ರಿಟಿಷ್ ಇಂಡಿಯಾದ ಪ್ರಾಂತೀಯ ಶಾಸಕಾಂಗಗಳಿಗೆ
ಚುನಾವಣೆಗಳನ್ನು ನಡೆಸಲಾಯಿತು. ಆದರೆ ಇದು ಕಾಂಗ್ರೆಸ್ ಮತ್ತು ಮುಸ್ಲಿಂಲೀಗ್‍ಗಳ ನಡುವಿನ ಒಪ್ಪಂದಕ್ಕೆ ಮಧ್ಯವರ್ತಿಗಳಾಗಿ ಕ್ಯಾಬಿನೆಟ್ ಮಿಷನ್‍ಗೆ ದುರ್ದೈವದ ಪ್ರಯತ್ನವಾಗಿತ್ತು. ಈ ಶಾಸನ ಸಭೆಯಲ್ಲಿ 296ಸದಸ್ಯರನ್ನು ಸಂವಿಧಾನ ಸಭೆಗೆ ಆಯ್ಕೆ ಮಾಡಿತು. 1946ರಲ್ಲಿ ಅಸೆಂಬ್ಲಿಗೆ ಆಯ್ಕೆಯಾದ 296 ಸದಸ್ಯರಲ್ಲಿ ಅಂಬೇಡ್ಕರ್ ಅವರು ಕೂಡ ಒಬ್ಬರಾಗಿದ್ದರು. ಬಿ. ಶಿವ ರಾವ್ ಅವರು ಮೊದಲ ಸಂಪುಟವು ಸಂವಿಧಾನದ ರಚನೆಯಲ್ಲಿ ಎಲ್ಲಾ ಸದಸ್ಯರ ಮೂಲ ಪಟ್ಟಿಯನ್ನು ಹೊಂದಿದ್ದರು ಮಾತ್ರವಲ್ಲದೇ, ಅಂಬೇಡ್ಕರ್ ಅವರ ಹೆಸರನ್ನು ಬಂಗಾಳದ ಪ್ರತಿನಿಧಿಯಾಗಿ ಪಟ್ಟಿಯಲಲಿ ಸೇರಿಸಲಾಗಿತ್ತು. ಆದರೆ ಅಂಬೇಡ್ಕರ್ ಅವಿಭಜಿತ ಬಂಗಾಳ ಶಾಸಕಾಂಗದಿಂದ ಐದು ವರ್ಗಾವಣೆ ಮಾಡಬಹುದಾದ ಮತಗಳಿಂದ ಚುನಾಯಿತರಾದರು.

ಅಂಬೇಡ್ಕರ್ ಅವರನ್ನು ಬಂಗಾಳದಿಂದ ಚುನಾವಣೆಗೆ ಸ್ಪರ್ಧಿಸಲು ಕಾಂಗ್ರೆಸ್ ಬಲವಂತಪಡಿಸಿತ್ತು. ಆದರೆ ಅಂಬೇಡ್ಕರ್ ಅವರಿಗೆ ಈ ಪ್ರದೇಶದಲ್ಲಿ ಚುನಾವಣೆ
ಸ್ಪರ್ಧಿಸಲು ಇಷ್ಟವೇ ಇರಲಿಲ್ಲ. ಯಾಕೆಂದರೆ ಇವರು ಈ ಪ್ರಾಂತ್ಯದ ಬಗ್ಗೆ ಯಾವುದೇ ಸಂಬಂಧವನ್ನು ಹೊಂದಿರಲಿಲ್ಲ ಹಾಗೂ ಗೃಹ ಪ್ರಾಂತ್ಯದ ಬಾಂಬೆಯಲ್ಲಿ ಕೂಡ ಅಗತ್ಯವಾದ ಬೆಂಬಲವನ್ನು ಅವರು ಹೊಂದಿರಲಿಲ್ಲ. ಹಾಗಾಗೆ 1940ರ ದಶಕಗಳ ಉದ್ದಕ್ಕೂ ಅಂಬೇಡ್ಕರ್ ಹಾಗೂ ಕಾಂಗ್ರೆಸ್‍ಗೆ ಪರಿಶಿಷ್ಟ್ ಜಾತಿ ಹಕ್ಕುಗಳು ಮತ್ತು ಪ್ರಾತಿನಿಧ್ಯದ ಬಗ್ಗೆ ತೀವ್ರವಾಗಿ ಘರ್ಷಣೆಗಳು ನಡೆಯುತ್ತಿದ್ದವು. ದೇಶದಲ್ಲಿ ದಲಿತರ ಆಸಕ್ತಿಗೆ ವಿರುದ್ದವಾಗಿ ಕಾಂಗ್ರೆಸ್ ಹೋಗುತ್ತಿತ್ತು. ಹಾಗಾಗಿ ನೆಹರೂ ಹಾಗೂ ಅಂಬೇಡ್ಕರ್ ನಡುವೆ ಈ ಬಗ್ಗೆ ಸಾಕಷ್ಟು ಘರ್ಷಣೆಗಳು ನಡೆಯುತ್ತಿದ್ದಾದರೂ ಅಂಬೇಡ್ಕರ್ ಸಂವಿಧಾನ ರೂಪಿಸುವಲ್ಲಿ ನಿಕಟವಾಗಿ ಕೆಲಸ ಮಾಡಲು ಸಹಾಯ ಮಾಡಿದ್ದರು!!

ಆದರೆ ವಿಭಜನಾ ಯೋಜನೆಯಡಿ, ಅಂಬೇಡ್ಕರ್ ಅವರು ಅಸೆಂಬ್ಲಿ ಸ್ಥಾನ ಕಳೆದುಕೊಂಡರು ಏಕೆಂದರೆ ಬಂಗಾಳ ಪ್ರಾಂತ್ಯವು ವಿಭಜನೆಯಾಗಿತ್ತಲ್ಲದೆ, ಹೊಸ ಸಂವಿಧಾನ ಸಭೆಗೆ ಹೊಸ ಚುನಾವಣೆಗಳು ಪಶ್ವಿಮ ಬಂಗಾಳದಲ್ಲಿ ನಡೆಯಬೇಕಾಗಿತ್ತು. ಆ ಸಂದರ್ಭದಲ್ಲಿ ಅಂಬೇಡ್ಕರ್ ಅಸೆಂಬ್ಲಿಯಲ್ಲಿ ಮುಂದುವರೆಯಲಾಗುವುದಿಲ್ಲ ಎಂದು ಸ್ಪಷ್ಟಪಡಿಸಿದಾಗ, ಕಾಂಗ್ರೆಸ್ ಹೈಕಮಾಂಡ್ ಅಂಬೇಡ್ಕರ್ ಸ್ಥಾನ ಕಳೆದುಕೊಳ್ಳುವುದು ಮೌಲ್ಯಯುತವಾಗಿದೆ ಎಂದು ನಿರ್ಧರಿಸಿತು!! ಎಂ. ಆರ್ ಜಯಕರ್ ಬಾಂಬೆಯ ನ್ಯಾಯಧೀಶರಾಗಿದ್ದು ಅಸ್ಲೆಂಬಿಗೆ ಈ ಸಂದರ್ಭದಲ್ಲಿ ರಾಜೀನಾಮೆ ನೀಡಿದ್ದಲ್ಲದೇ ಇವರ ಸ್ಥಾನವನ್ನು ಜಿ.ವಿ ಮಾವ್ಲಾಂಕರ್ ಪಡೆದುಕೊಂಡರು!! ಆದರೆ ಕಾಂಗ್ರೆಸ್ ಪಕ್ಷವು ಅಂಬೇಡ್ಕರ್ ಅವರನ್ನು ಜಯಕರ್ ಅವರ ಸ್ಥಾನವನ್ನು ತುಂಬಿಸಲು ನಿರ್ಧರಿಸಿತ್ತು. ಹಾಗಾಗಿ 1947ರ ಜೂನ್ 30ರಂದು ರಾಜೇಂದ್ರ ಪ್ರಸಾದ್ ಬಾಂಬೆ ಪ್ರಧಾನಿಯಾಗಿದ್ದ ಬಿ.ಜಿ ಖೇರ್ ಅವರೊಂದಿಗೆ ಅಂಬೇಡ್ಕರ್ ಅವರನ್ನು ಕಾಂಗ್ರೆಸ್‍ಗೆ ಟಿಕೆಟ್ ನೀಡಿ ಅಸೆಂಬ್ಲಿಗೆ ಆಯ್ಕೆ ಮಾಡಲು ನಿರ್ದೇಶಿಸಿದರು. ಅಷ್ಟೇ ಅಲ್ಲದೇ, “ಇಲ್ಲಿರುವ ಎಲ್ಲಾ ಜನರು ಹೇಳುವ ಪ್ರಕಾರ ಅಂಬೇಡ್ಕರ್ ಅವರ ವರ್ತನೆ ಬದಲಾಗಿದೆ ಹಾಗೂ ಅವರ ಸಮಿತಿಯಲ್ಲಿ ಉಪಯುಕ್ತ ಸದಸ್ಯರಾಗಿದ್ದಾರೆ” ಎಂದು ಪಟೇಲ್ ಮಾವ್ಲಾಂಕರಿಗೆ ಹೇಳಿದ್ದರು!!

ಆದರೆ ಲಾರ್ಡ್ ಮೌಂಟ್‍ಬ್ಯಾಟನ್ ಅವರು ನೆಹರೂ ಅವರ ನಿರ್ಧರಾದ ಮೇಲೆ ಬಹಳ ಪ್ರಭಾವ ಬೀರಿದರು. ಅಷ್ಟೇ ಅಲ್ಲದೇ ಯಾರನ್ನು ಸೇರಿಸಬೇಕು ಅಥವಾ
ಹೊರಗಿಡಬೇಕೆಂದು ಅವರು ನಿರ್ಧರಿಸಿದರು. ಆದರೆ ಸಚಿವ ಸಂಪುಟದಲ್ಲಿ ಅಂಬೇಡ್ಕರ್ ಅವರ ಸೇರ್ಪಡೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದು ಮಾತ್ರವಲ್ಲದೇ
ಅಂಬೇಡ್ಕರ್‍ನ ಸಲಹೆಯನ್ನು ಪ್ರಶ್ನಿಸಿದರು!!!

ಅಂಬೇಡ್ಕರ್ ಅವರ ಜೀವನಚರಿತ್ರಕಾರನಾದ ಧನಂಜಯ್ ಕೀರ್ ಅವರು ಸಚಿವ ಸಂಪುಟದಲ್ಲಿ ಅಂಬೇಡ್ಕರ್ ಅವರೊಂದಿಗೆ ಸರ್ದಾರ್ ಪಟೇಲ್, ಎಸ್ ಕೆ ಪಾಟೀಲ್ ಮತ್ತು ಆಚಾರ್ಯ ಡೋಂಡೆ ಸೇರಿದ್ದಾರೆ ಎಂದು ನಂಬಿದ್ದರು.

ಆದರೆ 1952ರಲ್ಲಿ ಅಂಬೇಡ್ಕರ್ ಚುನಾವಣೆಯಲ್ಲಿ ಸೋತರು ಎಂದು ನೆಹರು ಖಾತ್ರಿಪಡಿಸಿದರು. ಈ ಸಂದರ್ಭದಲ್ಲಿ ಅಂಬೇಡ್ಕರ್ ವಿರುದ್ದದ ಚುನಾವಣೆಗಳಲ್ಲಿ
ಕಜೋಲ್ಕರ್ ಗೆದ್ದರು. ಹಾಗಾಗಿ ಸಚಿವ ಸಂಪುಟದಿಂದ ಹೊರಗುಳಿದರು ಅಂಬೇಡ್ಕರ್!! ಅಷ್ಟೇ ಅಲ್ಲದೇ ಅಂಬೇಡ್ಕರ್ ರಾಜೇಂದ್ರ ಪ್ರಸಾದ್ ಅವರಲ್ಲಿ ಚುನಾವಣೆಯಲ್ಲಿ ಸಮಾಜವಾದಿಗಳ ಬೆಂಬಲ ಸಿಗದಿರುವುದರಿಂದ ಚುನಾವಣೆಯನ್ನು ಗೆಲ್ಲಲು ಸಾಧ್ಯವಾಗಲಿಲ್ಲ ಎಂದು ಹೇಳಿದ್ದರು. ಆದರೆ 1952ರಲ್ಲಿ ಅಂಬೇಡ್ಕರ್ ರಾಜ್ಯಸಭೆಗೆ ಚುನಾಯಿತರಾದರು. ಆದರೆ 1954ರಲ್ಲಿ ಲೋಕಸಭೆಗೆ ಭಂಡಾರ ಕ್ಷೇತ್ರದಿಂದ ಉಪಚುನಾವಣೆಯಲ್ಲಿ ಎರಡನೇ ಪ್ರಯತ್ನದಲ್ಲಿ ಸೋಲನ್ನು ಅನುಭವಿಸಿದರು ಅಂಬೇಡ್ಕರ್!!

ಇವೆಲ್ಲವೂ ನಡೆದಿದ್ದು ಯಾಕೆಂದರೆ ಭಾರತದ ಅಭಿವೃದ್ದಿಯ ಸತ್ಯವನ್ನು ಜೀರ್ಣಿಸಿಕೊಳ್ಳಲು ಸಾಧ್ಯವಿಲ್ಲದ ಕಾರಣ ನೆಹರು, ಅಂಬೇಡ್ಕರ್ ಅವರನ್ನು ದೂರವಿರಲು
ಬಯಸಿದ್ದರು ಎಂಬುವುದು ಖಚಿತವಾಗಿತ್ತು. ಅಷ್ಟೇ ಅಲ್ಲದೇ ರಾಜಕೀಯವಾಗಿ ಒಳ್ಳೆಯ ಅಭ್ಯರ್ಥಿಗಳು ತಮ್ಮ ಸಚಿವ ಸಂಪುಟದಲ್ಲಿ ಇದ್ದರೇ ತಮ್ಮ ರಹಸ್ಯಗಳು
ಹೊರಬೀಳುತ್ತೆ ಅನ್ನೋ ಭಯ ಇವರನ್ನು ಕಾಡುತ್ತಿತ್ತೋ ಏನೋ ಗೊತ್ತಿಲ್ಲ!!

– ಅಲೋಖಾ

Tags

Related Articles

Close