ಪ್ರಚಲಿತ

ಮೋದಿ ಮೋಡಿ!! “ಮೇಕ್ ಇನ್ ಇಂಡಿಯಾ” ದಿಂದ ರಕ್ಷಣಾ ಇಲಾಖೆಗೆ 1,00,000 ಕೋಟಿ ಉಳಿತಾಯ!

ಮೋದಿಯ ಯೋಜನೆಗೆ ಕುಹಕವಾಡಿದ್ದ ಕಾಂಗ್ರೆಸ್ ಗೆ ಭಾರೀ ಮುಖಭಂಗ!

ಆರ್ಥಿಕತೆಯನ್ನು ಜಾಗತಿಕ ಮಟ್ಟದಲ್ಲಿ ಉನ್ನತೀಕರಿಸುವುದು ಹಾಗೂ ಭಾರತೀಯರಿಗೆ ಮಿಲಿಯನ್ ಗಟ್ಟಲೇ ಉದ್ಯೋಗವಕಾಶ ಕಲ್ಪಿಸುವ ಸಲುವಾಗಿ ಭಾರತವನ್ನು ಜಾಗತಿಕ ಉತ್ಪಾದನಾ ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಪ್ರಧಾನಿ ಮೋದಿಯವರ “ಮೇಕ್ ಇನ್ ಇಂಡಿಯಾ” ಯೋಜನೆಯನ್ನು ಜಾರಿಗೆ ತಂದರು!!

ಮೋದಿಯವರ ಮಹತ್ವಾಕಾಂಕ್ಷೆಯ ಯೋಜನೆಗಳಲ್ಲೊಂದಾದ ಮೇಕ್ ಇನ್ ಇಂಡಿಯಾ ದೇಶೀಯ ಉತ್ಪನ್ನಗಳನ್ನೇ ಬಳಸಿ ದೇಶದಲ್ಲೇ ಉತ್ಪಾದಿಸಿ, ಮಾರಾಟ ಮಾಡುವ ಒಂದು ಯೋಜನೆ. ಜಾಗತಿಕ ಉತ್ಪಾದನೆಯ ಭೂಪಟದಲ್ಲಿ ಭಾರತವನ್ನು ಅಗ್ರಸ್ಥಾನಕ್ಕೇರಿಸುವ ಮಹತ್ತ್ವಾಕಾಂಕ್ಷೆಯ ಮೇಕ್ ಇನ್ ಇಂಡಿಯಾ ಅಭಿಯಾನಕ್ಕೆ ಪ್ರಧಾನಿ ನರೇಂದ್ರ ಮೋದಿ ಹೊಸದಿಲ್ಲಿಯ ವಿಗ್ಯಾನ್ ಭವನದಲ್ಲಿ 25 ನವೆಂಬರ್ 2014ಕ್ಕೆ ಅದ್ದೂರಿಯಾಗಿ ಚಾಲನೆ ನೀಡಿದ್ದರು…ಪ್ರಧಾನಿ ಮೋದಿಯ ಆಕಾಂಕ್ಷೆಗೆ ತಕ್ಕಂತೆ ಈಗ ಪ್ರತಿಫಲ ದೊರಕಿದೆ ಎಂದೇ ಹೇಳಬಹುದು…

ಪ್ರಧಾನಿ ನರೇಂದ್ರ ಮೋದಿ ಮಹತ್ವಾಕಾಂಕ್ಷೆಯ ಮೇಕ್ ಇನ್ ಇಂಡಿಯಾ ಯೋಜನೆಯಿಂದಾಗಿ ರಕ್ಷಣಾ ಇಲಾಖೆಗೆ 1 ಲಕ್ಷ ಕೋಟಿ ರೂ. ವಿದೇಶಿ ವಿನಿಮಯ ರೂಪದಲ್ಲಿ ಉಳಿತಾಯವಾಗಿದೆ. ಕಳೆದ ಎರಡು ವರ್ಷಗಳಲ್ಲಿ, ಆರು ಕ್ಷಿಪಣಿಗಳನ್ನು ಡಿಆರ್‍ಡಿಒ ದೇಶೀಯವಾಗಿ ನಿರ್ಮಿಸಿದೆ. ಅಲ್ಲದೆ ಇನ್ನಷ್ಟು ಹೊಸ ಶಸ್ತ್ರಗಳು ಅಭಿವೃದ್ಧಿಗೊಳ್ಳುತ್ತಿವೆ. ಸರಕಾರದ ಈ ನಿರ್ಧಾರದಿಂದಾಗಿ ದೇಶದ ರಕ್ಷಣಾ ವಲಯದ ಕಂಪೆನಿಗಳಿಗೆ ಹೆಚ್ಚು ಪೆÇ್ರೀತ್ಸಾಹ ನೀಡಿದಂತಾಗಿದೆ. ಇಲ್ಲವಾದರೆ ಇದನ್ನು ನಾವು ವಿದೇಶದಿಂದ ಖರೀದಿಸಬೇಕಾಗಿತ್ತು ಎಂದು ರಕ್ಷಣಾ ವಲಯದ ಮೂಲಗಳು ತಿಳಿಸಿವೆ.

ದೇಶವನ್ನು ಜಗತ್ತಿನ ಉತ್ಪಾದನಾ ಕೇಂದ್ರವನ್ನಾಗಿ ರೂಪಿಸಿ, ಆ ಮೂಲಕ ಅಭಿವೃದ್ಧಿ ದರ(ಜಿಡಿಪಿ)ವನ್ನು ಹೆಚ್ಚಿಸುವುದು ಇದರ ಹಿಂದಿರುವ ಮುಖ್ಯ ಉದ್ದೇಶವಾಗಿದೆ. ವಿದೇಶಿ ನೇರ ಬಂಡವಾಳ ಹೂಡಿಕೆ ಸ್ನೇಹಿ ವಾತಾವಾರಣವನ್ನು ನಿರ್ಮಿಸಿದರೆ, ಸಹಜವಾಗಿ ಬಂಡವಾಳ ಹರಿದು ಬರುತ್ತದೆ. ಇದರಿಂದ ನಿರುದ್ಯೋಗದ ಸಮಸ್ಯೆಯ ನಿವಾರಣೆಯೂ ಸಾಧ್ಯವಾಗುತ್ತದೆ.ಈ ಅವಧಿಯಲ್ಲಿ ಮೇಕ್ ಇನ್ ಇಂಡಿಯಾ ಯೋಜನೆ ಅನುಷ್ಠಾನ, ಸರಕಾರ ಭಾವಿಸಿದಷ್ಟು ವೇಗದಲ್ಲಾಗಿಲ್ಲವಾದರೂ ಒಂದಿಷ್ಟು ನಿರೀಕ್ಷೆಗಳಂತೂ ಗರಿಗೆದರಿವೆ. ನಿರೀಕ್ಷಿತ ವೇಗಕ್ಕೆ ತಲುಪದಿರಲು ಅನೇಕ ಕಾರಣಗಳಿವೆ. ಆ ಪೈಕಿ, ಸರಕು ಮತ್ತು ಸೇವಾ ಬಿಲ್, ಭೂಸ್ವಾಧೀನ ಮಸೂದೆ…ಇತ್ಯಾದಿ.

ದೇಶದಲ್ಲಿ ಹೂಡಿಕೆದಾರರಿಗೆ ಸಕಾಲಕ್ಕೆ ಅಗತ್ಯ ನೆರವು, ಮಾರ್ಗದರ್ಶನ ನೀಡಲಿರುವ ಮೇಕ್ ಇನ್ ಇಂಡಿಯಾ ವೆಬ್ ಪೋರ್ಟಲ್, ಲಾಂಛನ ಮತ್ತು 25 ಪ್ರಮುಖ ಉತ್ಪಾದನಾ ವಲಯಗಳ ಬಗ್ಗೆ ವಿವರಗಳನ್ನು ಒಳಗೊಂಡ ಕೈಪಿಡಿಗಳನ್ನು ಪ್ರಧಾನಿ ಬಿಡುಗಡೆಗೊಳಿಸಿದ್ದು, ದೇಶ ಆರ್ಥಿಕವಾಗಿ ಅಭಿವೃದ್ಧಿ ಹೊಂದಬೇಕಾದರೆ ಬಡವರಿಗೆ ಉದ್ಯೋಗ ದೊರೆತು ಅವರ ಮಧ್ಯಮ ವರ್ಗಕ್ಕೇರಬೇಕು. ಆಗ ಅವರ ಖರೀದಿ ಸಾಮಥ್ರ್ಯ ಹೆಚ್ಚಲಿದ್ದು, ಆರ್ಥಿಕ ಪ್ರಗತಿಗೆ ಹಾದಿಯಾಗಲಿದೆ. ಇದೇ ಸಂದರ್ಭ ಉದ್ದಿಮೆಗಳಿಗೆ ಮಾರುಕಟ್ಟೆ ಕೂಡ ಅಗಾಧವಾಗಿ ವಿಸ್ತರಿಸಲಿದೆ ಎಂದು ಮೋದಿ ವಿವರಿಸಿದ್ದರು!!!

ಮೇಕ್ ಇನ್ ಇಂಡಿಯಾದ ಲಾಂಛನವು ಕೂಡ “ಅಭಿವೃದ್ಧಿಯ ಕಡೆಗೆ ಸಿಂಹದ ಹೆಜ್ಜೆಯಾಗಿದೆ. ಲಾಂಛನದಲ್ಲಿ ಸಿಂಹ ಮತ್ತು ಚಕ್ರದ ಚಿಹ್ನೆಯಿದ್ದು, ಅಶೋಕ ಚಕ್ರದ ಪ್ರೇರಣೆ ಇದರ ಹಿಂದಿದೆ. ಸಿಂಹವು ಬಲ ಮತ್ತು ಶಕ್ತಿಯಾಗಿದ್ದರೆ ಚಕ್ರವು ಅಭಿವೃದ್ಧಿ ಮತ್ತು ಪ್ರಗತಿಯ ಸಂಕೇತವಾಗಿದೆ,”

ಎನ್‍ಡಿಎ ಸರಕಾರದಲ್ಲಿ ಈವರೆಗೆ ಮೂವರು ರಕ್ಷಣಾ ಸಚಿವರಾಗಿದ್ದರೂ ಎಲ್ಲರೂ ದೇಶಿ ಯೋಜ?ನೆಗಳಿಗೆ ಒತ್ತು ನೀಡಿದ್ದಾರೆ. ಸೇನಾಧಿಕಾರಿಗಳು ಕೂಡ ದೇಶೀಯವಾಗಿ ವಿನ್ಯಾಸಗೊಳಿಸಿದ ಶಸ್ತ್ರಾಸ್ತ್ರಗಳಿಗೇ ಆದ್ಯತೆ ನೀಡಿದ್ದು, ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‍ಡಿಒ) ಸಂಶೋಧನೆಗೆ ಹೆಚ್ಚಿನ ಕಾಲಾವಕಾಶ ನೀಡಲಾಗಿದೆ.

ಆಕಾಶ್ ಯಶಸ್ಸು:

ಈ ಹಿಂದೆ ಆಕಾಶ್ ಕ್ಷಿಪಣಿಗಳನ್ನು ಡಿಆರ್‍ಡಿಒ ಅಭಿವೃದ್ಧಿಪಡಿಸಿತ್ತಾದರೂ, ಇದನ್ನು ಖರೀದಿಸಲು ಸರಕಾರ ಒಪ್ಪಿರಲಿಲ್ಲ. ಬದಲಿಗೆ ವಿದೇಶದಿಂದ ಶಾರ್ಟ್ ರೇಂಜ್ ಕ್ಷಿಪಣಿಗಳನ್ನು ಖರೀದಿಸಲು ನಿರ್ಧರಿಸಲಾಗಿತ್ತು. ಆದರೆ ಆಕಾಶ್ ಕ್ಷಿಪಣಿಗಳನ್ನು ಡಿಆರ್‍ಡಿಒ ಸುಧಾರಿಸಿದ್ದು, ಎನ್‍ಡಿಎ ಸರಕಾರ ಬಂದ ನಂತರ ಇದಕ್ಕೆ ಆದ್ಯತೆ ನೀಡಲಾಯಿತು. ಈ ಹಿನ್ನೆಲೆಯಲ್ಲಿ ರಷ್ಯಾ, ಇಸ್ರೇಲ್ ಮತ್ತು ಸ್ವೀಡನ್‍ನಿಂದ ಖರೀದಿಸಲು ನಿರ್ಧರಿಸಲಾಗಿದ್ದ ಯೋಜನೆಯನ್ನು ರದ್ದುಗೊಳಿಸಿ, ಆಕಾಶ್ ಖರೀದಿಸಲು ನಿರ್ಧರಿಸಲಾಗಿದೆ. ಇದರಿಂದ 30 ಸಾವಿರ ಕೋಟಿ ವಿದೇಶಿ ವಿನಿಮಯ ಉಳಿತಾಯವಾಗಿದೆ. ಇನ್ನೊಂದೆಡೆ ಡಿಆರ್‍ಡಿಒದ ಹೆಲಿನಾ ಮತ್ತು ಎನ್‍ಎಜಿ ಪರೀಕ್ಷೆಗಳೂ ಯಶಸ್ವಿಯಾಗುತ್ತಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ವಿದೇಶ ವಿನಿಮಯ ಉಳಿತಾಯವಾಗಲಿದೆ.

9 ಲಕ್ಷ ಹಿರಿಯ ನಾಗರಿಕರಿಂದ ಸಬ್ಸಿಡಿ ತ್ಯಾಗ:

ರೈಲ್ವೆ ಇಲಾಖೆಯ ಮನವಿ ಮೇರೆಗೆ ಕಳೆದ 3 ತಿಂಗಳಲ್ಲಿ 9 ಲಕ್ಷ ಹಿರಿಯ ನಾಗರಿಕರು “ಟಿಕೆಟ್ ಸಬ್ಸಿಡಿಯನ್ನು ಸ್ವಯಂ ಪ್ರೇರಿತರಾಗಿ ಬಿಟ್ಟುಕೊಟ್ಟಿದ್ದು, ಪರಿಣಾಮ ಇಲಾಖೆಗೆ 40 ಕೋಟಿ ರೂ. ಉಳಿತಾಯ ವಾಗಿದೆ. ಕಳೆದ ವರ್ಷ ಈ ಯೋಜನೆಯನ್ನು ಇಲಾಖೆ ಆರಂಭಿಸಿತ್ತು. ಇದರ ಪ್ರಕಾರ, ಹಿರಿಯ ನಾಗರಿಕರು ರೈಲ್ವೆ ಟಿಕೆಟ್ ಖರೀದಿ ಸಮಯದಲ್ಲಿ ಶೇ. 50ರಷ್ಟು ರಿಯಾಯಿತಿ ಪಡೆಯಬಹುದು ಅಥವಾ ಟಿಕೆಟ್‍ನ ಪೂರ್ತಿ ಹಣ ಸಂದಾಯ ಮಾಡುವ ಅವಕಾಶ ನೀಡಲಾಗಿತ್ತು. ರೈಲ್ವೇ ಇಲಾಖೆ ಆರ್ಥಿಕ ಹೊರೆ ಕಡಿಮೆ ಮಾಡಲು ಈ ಯೋಜನೆ ಆರಂಭಿಲಾಗಿತ್ತು. ಜುಲೈ – ಅಕ್ಟೋಬರ್ ಅವಧಿಯಲ್ಲಿ 22 ಲಕ್ಷ ಪುರುಷರು, 2.67 ಲಕ್ಷ ಮಹಿಳೆಯರು ಸಬ್ಸಿಡಿ ತ್ಯಾಗ ಮಾಡಿದ್ದಾರೆ.

ಸಾಧಿಸಬಹುದಾದ ಗುರಿಗಳು ಏನು ಗೊತ್ತೇ??

  • ಮಧ್ಯಮ ಅವಧಿಯಲ್ಲಿ ವರ್ಷಕ್ಕೆ ಶೇಕಡ 12 ರಿಂದ ಶೇಕಡ 14ರವರೆಗೆ ಉತ್ಪಾದನಾ ವಲಯದಲ್ಲಿ ಬೆಳವಣಿಗೆ ಹೆಚ್ಚಳದ ಗುರಿ
  •  2022ರ ಹೊತ್ತಿಗೆ ದೇಶದ ಒಟ್ಟು ಪ್ರಾದೇಶಿಕ ಉತ್ಪನ್ನ ತಯಾರಿಕಾ ಪಾಲು ಶೇಕಡ 16ರಿಂದ ಶೇಕಡ 25ಕ್ಕೆ ಹೆಚ್ಚಳ
  • 2022ರ ಹೊತ್ತಿಗೆ ಉತ್ಪಾದನಾ ವಲಯದಲ್ಲಿ 100 ದಶಲಕ್ಷ ಹೆಚ್ಚವರಿ ಉದ್ಯೋಗಗಳ ಸೃಷ್ಟಿ
  • ಗ್ರಾಮದಿಂದ ವಲಸೆ ಬಂದವರ ಮತ್ತು ನಗರದ ಬಡವರ ಬೆಳವಣೆಗೆಗಾಗಿ ಸೂಕ್ತ ನೈಪುಣ್ಯದ ಸೃಷ್ಟಿ
  • ಉತ್ಪಾದನಾ ವಲಯದಲ್ಲಿ ದೇಶೀಯ ಮೌಲ್ಯದ ಜೊತೆಗೆ ಮತ್ತು ಉತ್ಪಾದನಾ ತಾಂತ್ರಿಕ ಆಳದ ಹೆಚ್ಚಳ
  • ಜಾಗತಿಕ ಮಟ್ಟದಲ್ಲಿ ಭಾರತೀಯ ಉತ್ಪಾದನಾ ವಲಯದ ಸ್ಪರ್ಧಾತ್ಮಕತೆಯನ್ನು ಹೆಚ್ಚಿಸುವುದು
  •  ವಿಶೇಷವಾಗಿ ಪರಿಸರಕ್ಕೆ ಸಂಬಂದಿಸಿದಂತೆ, ಬೆಳವಣಿಗೆಯ ಸಮರ್ಥನೀಯತೆ ಖಾತರಿ
  • 2020ರ ಆರಂಭದ ಹೊತ್ತಿಗೆ ಭಾರತ ದೇಶ ವಿಶ್ವದ ಮೂರು ಅಗ್ರ ಆರ್ಥಿಕ ಬೆಳವಣೆಗೆಗೊಂಡ ದೇಶಗಳಲ್ಲೊಂದು ಮತ್ತು ವಿಶ್ವದ ಮೂರು ಅಗ್ರ ಉತ್ಪಾದನಾ ಸ್ಥಳಗಳಲ್ಲೊಂದು ಸ್ಥಾನ ಪಡೆಯಬಹುದೆಂದು ನಿರೀಕ್ಷಿಸಲಾಗಿದೆ
  • 2050ರಹೊತ್ತಿಗೆ ಭಾರತದ ಸ್ಥಾನವನ್ನು ಬ್ರಿಕ್ಸ್ ಮಟ್ಟದಲ್ಲಿ ಅಗ್ರವಾಗಿಸುವ ಗುರಿ ಇದೆ

ವಿಶ್ವದಲ್ಲಿ ಭಾರತವು ಈಗಾಗಲೇ ಆರ್ಥಿಕವಾಗಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ದೇಶ ಎಂದು ತನ್ನ ಅಸ್ತಿತ್ವವನ್ನು ಗುರುತಿಸಿದೆ. ಇನ್ನು 2020ರ ಹೊತ್ತಿಗೆ ಭಾರತ ದೇಶವು ವಿಶ್ವದಲ್ಲೇ ಮೂರನೇ ಅಗ್ರ ಆರ್ಥಿಕ ಬೆಳವಣಿಗೆಗೊಂಡ ರಾಷ್ಟ್ರ ಎನ್ನುವ ಕೀರ್ತಿಗೆ ಪಾತ್ರವಾಗಲಿರುವುದಂತೂ ಖಂಡಿತ!!

Source: India Today

Tags

Related Articles

Close