ಅಂಕಣ

ಸ್ಫೋಟಕ ಸುದ್ದಿ!!! ಭೂಗತ ಪಾತಕಿ ದಾವೂದ್ ಇಬ್ರಾಹಿಂನ ಸಹೋದರನನ್ನು ಬಂಧಿಸಿದ ಮುಂಬೈ ಪೋಲಿಸರು!!!

ಇಂತಹಾ ದೇಶದ್ರೋಹಿಗಳನ್ನು ಬಂಧಿಸೋದಕ್ಕಿಂತ ಅಲ್ಲೇ ಎನ್‍ಕೌಂಟರ್ ಮಾಡಿ ಬಿಸಾಕ್‍ಬಹುದಿತ್ತು!!!

ಅದೆಷ್ಟು ಮಂದಿಯ ಕಣ್ಣೀರು ಇದೆಯೋ ಗೊತ್ತಿಲ್ಲ. ಮುಂಬೈಯಲ್ಲಿ ಸರಣಿ ಬಾಂಬ್ ಸ್ಫೋಟಿಸಿ ನೂರಾರು ಮುಗ್ಧರನ್ನು ಹತ್ಯೆ ಮಾಡಿದ್ದ ದಾವೂದ್ ಇಬ್ರಾಹಿಂನ
ಸಹೋದರನ್ನು ಬಂಧಿಸುವುದಕ್ಕಿಂತ ಅಲ್ಲೇ ಎನ್‍ಕೌಂಟರ್ ಮಾಡಿ ಬಿಸಾಕ್‍ಬಹುದಿತ್ತು. ಇಸ್ಲಾಂ ಎಂಬ ಮತದ ಅಫೀಮನ್ನು ತಲೆಗೆ ಹತ್ತಿಸಿಕೊಂಡು ಸತ್ಯನಿಷೇಧಿಗಳೆಂಬ ಹೆಸರಲ್ಲಿ ಕೊಲ್ಲುವ ಇಂಥಾ ಕ್ರೂರಿಗಳಿಗೆ ಎನ್‍ಕೌಂಟರ್‍ಗಿಂತ ದೊಡ್ಡ ಶಿಕ್ಷೆಯೇ ಬೇಕಾಗಿಲ್ಲ. ಇದಕ್ಕೆ ಕಾರಣವೂ ಇದೆ. ಯಾಕೆಂದರೆ ಇಂತಹಾ ಕ್ರೂರಿಗಳ ಪರವಾಗಿ ಮಾನವ ಹಕ್ಕು ಸಂಘಟನೆಗಳು, ಪ್ರಗತಿಪರರೆಂಬ ಹಣೆಪಟ್ಟಿ ಕಟ್ಟಿಕೊಂಡ ಬುದ್ಧಿ ಇಲ್ಲದ ಲದ್ದಿಜೀವಿಗಳು ವಕಾಲತ್ ನಡೆಸುತ್ತಾರೆ.

ಇಸ್ಲಾಮಿಕ್ ಉಗ್ರ ಮುಂಬೈ ಸರಣಿ ಬಾಂಬ್ ಸ್ಫೋಟದ ಅಪರಾಧಿ ದಾವೂದ್ ಇಬ್ರಾಹಿಂನ ಸಹೋದರ ಇಕ್ಬಾಲ್ ಕಸ್ಕರ್‍ನನ್ನು ಎನ್‍ಕೌಂಟರ್ ಸ್ಪೆಷಲಿಸ್ಟ್ ಪ್ರದೀಪ್ ನೇತೃತ್ವದ ಥಾಣೆ ಪೊಲೀಸರ ತಂಡ ದಕ್ಷಿಣ ಮುಂಬಯಿಯ ನಾಗ್ಪದದಲ್ಲಿನ ನಿವಾಸಕ್ಕೆ ದಾಳಿ ನಡೆಸಿ ಬಂಧಿಸಿದ್ದಾರೆ.

ಕಸ್ಕರ್ ನಗರದ ಉದ್ಯಮಿಯೊಬ್ಬರಿಗೆ ಹಣ ನೀಡುವಂತೆ ಜೀವ ಬೆದರಿಕೆಯೊಡ್ಡುತ್ತಿದ್ದ ಮುಂಬೈ ಮೂಲದ ಬಿಲ್ಡರ್‍ರೊಬ್ಬರು ಇಕ್ಬಾಲ್ ಕಸ್ಕರ್ ವಿರುದ್ಧ ದೂರು ನೀಡಿದ್ದರು. ಮುಂಬೈನಲ್ಲಿ ಫ್ಲಾಟ್‍ಗಳನ್ನು ನೀಡುವಂತೆ ತಮಗೆ ಕಸ್ಕರ್ ಬೆದರಿಕೆವೊಡ್ಡಿದ್ದ. ಈ ಹಿಂದೆ ನಾಲ್ಕು ಫ್ಲಾಟ್‍ಗಳನ್ನೂ ನೀಡಿದ್ದರೂ ಮತ್ತೆ ಫ್ಲಾಟ್‍ಗಳಿಗೆ ಆರೋಪಿ ಕಸ್ಕರ್ ಬೇಡಿಕೆ ಇಟ್ಟಿದ್ದ ಎಂದು ಪೊಲೀಸರಿಗೆ ದೂರು ನೀಡಿದ್ದರು. ಇದೇ ದೂರಿನ ಆಧಾರದ ಮೇಲೆ ಸೋಮವಾರ ದಾವೂದ್‍ನ ಸಹೋದರ ಇಕ್ಬಾಲ್ ಕಸ್ಕರ್‍ನನ್ನು ಎನ್‍ಕೌಂಟರ್ ಸ್ಪೆಷಲಿಷ್ಟ್ ಪ್ರದೀಪ್ ಶರ್ಮಾ ನೇತೃತ್ವದ ಥಾಣೆ ಪೊಲೀಸರ ತಂಡ ಬಂಧಿಸಿದೆ.

100ಕ್ಕೂ ಅಧಿಕ ಪಾತಕಿಗಳನ್ನು ಎನ್‍ಕೌಂಟರ್‍ನಲ್ಲಿ ಹೊಡೆದುರುಳಿಸಿರುವ ಪೊಲೀಸ್ ಅಧಿಕಾರಿ ಶರ್ಮಾ ಸುಮಾರು 10 ವರ್ಷಗಳ ಬಳಿಕ ಇತ್ತೀಚಿಗಷ್ಟೇ ಥಾಣೆಯ ಸುಲಿಗೆ ವಿರೋಧಿ ವಿಭಾಗಕ್ಕೆ ಸೇರಿದ್ದರು. ಇದೀಗ ದಾವೂದ್‍ನ ಸಹೋದರನನ್ನು ಜೀವಂತವಾಗಿ ಹಿಡಿಯುವ ಮೂಲಕ ಶ್ಲಾಘನೆಗೆ ಪಾತ್ರವಾಗಿದ್ದಾರೆ.

ಕಸ್ಕರ್ ಬೆದರಿಕೆಯ ಮೂಲಕ ಫ್ಲಾಟ್‍ಗಳನ್ನು ಪಡೆದು ಅದರಲ್ಲಿ ವಿದೇಶಿ ಏಜಂಟರ್‍ಗಳಿಗೆ ತಂಗಲು ವ್ಯವಸ್ಥೆ ಮಾಡುತ್ತಿದ್ದ. ಹೆದರಿಸಿ ಬೆದರಿಸಿ ಫ್ಲಾಟ್ ಪಡೆದು ಅದನ್ನು ವಿದೇಶಿ ಏಜೆಂಟರ್‍ಗಳಿಗೆ ಕೊಡುವ ದಂಧೆಯನ್ನು ಕಸ್ಕರ್ ನಿರಂತರವಾಗಿ ಮಾಡುತ್ತಿದ್ದ. ಸ್ಥಳೀಯರ ಹೆಸರಲ್ಲಿ ಫ್ಲಾಟ್‍ಗಳನ್ನು ಪಡೆಯುವುದರಿಂದ ಕಸ್ಕರ್‍ನ ಅಡ್ಡದಂಧೆ ಬೆಳಕಿಗೆ ಬರುತ್ತಿರಲಿಲ್ಲ. ಬಿಲ್ಡರ್‍ಗಳಿಗೆ ಕೊಲೆಬೆದರಿಕೆಯೊಡ್ಡಿ ಈ ಬಗ್ಗೆ ಪೊಲೀಸರಿಗೆ ದೂರು ನೀಡದಂತೆ ಎಚ್ಚರಿಸುತ್ತಿದ್ದ. ಮುಂಬೈನ ಕೆಲವು ಉದ್ಯಮಿಗಳು ನಿಗೂಢವಾಗಿ ಸಾಯಲು ಈತನ ಪಾತ್ರವಿದೆ ಎಂದು ಆರೋಪಿಸಲಾಗಿದೆ. ಆದರೆ ಇತ್ತೀಚೆಗೆ ಈತನ ಬೆದರಿಕೆಯಿಂದ ಬೇಸತ್ತ ಉದ್ಯಮಿಯೊಬ್ಬರು ಪೊಲೀಸರಿಗೆ ದೂರು ನೀಡಿದ ಕಾರಣ ಕಸ್ಕರ್‍ನನ್ನು ಬಂಧಿಸಿದ್ದಾರೆ. ಎನ್‍ಕೌಂಟರ್ ಸ್ಪೆಷಲಿಷ್ಟ್ ಪ್ರದೀಪ್ ಶರ್ಮಾ ಎಂಬ ಪೊಲೀಸ್ ಅಧಿಕಾರಿಯ ಮುತುವರ್ಜಿಯಿಂದ ಈತನ ಬಂಧನ ಯಶಸ್ವಿಯಾಗಿ ನಡೆದಿದೆ.

ಈ ಹಿಂದೆ ಕೊಲೆ ಪ್ರಕರಣ ಹಾಗೂ ಸಾರಾ ಸಹಾರಾ ಕೇಸ್‍ಗಳಲ್ಲಿ ಇಕ್ಬಾಲ್ ಕಸ್ಕರ್ ಪಾತ್ರವಹಿಸಿರುವ ಆರೋಪವಿದೆ. 2013ರಲ್ಲಿ ಆರೋಪಿ ಕಸ್ಕರ್‍ನನ್ನು ಭಾರತ ಅರಬ್ ರಾಷ್ಟ್ರಗಳಿಗೆ ಗಡಿಪಾರು ಕೂಡ ಮಾಡಿತ್ತು. ಇದಾದ ನಾಲ್ಕು ವರ್ಷಗಳ ಬಳಿಕ ಕೊಲೆ, ಸಾರಾ ಸಹಾರಾ ಎರಡೂ ಕೇಸ್‍ಗಳಿಂದ ಕಸ್ಕರ್‍ನನ್ನು ಕೋರ್ಟ್ ಖುಲಾಸೆಗೊಳಿಸಿತ್ತು. ಭೂಗತ ಪಾತಕಿ ದಾವೂದ್ ಇಬ್ರಾಹಿಂ 1993ರ ಮಾರ್ಚ್ 12ರಂದು 260 ಜನರನ್ನು ಬಲಿ ಪಡೆದಿದ್ದ ಮುಂಬೈ ಸರಣಿ ಸ್ಫೋಟದ ರೂವಾರಿಯಾಗಿದ್ದಾನೆ. ಈ ದಾಳಿ ನಂತರ ತಲೆಮರಿಸಿಕೊಂಡಿರುವ ದಾವೂದ್ ಪಾಕಿಸ್ತಾನದಲ್ಲಿ ಅಡಗಿದ್ದಾನೆ. ದಾವೂದ್ 21 ಉಪನಾಮಗಳನ್ನು ಹೊಂದಿದ್ದು, ದಾವೂದ್ ಹೆಸರಲ್ಲಿ ಪಾಕಿಸ್ತಾನದ ವಿಳಾಸಗಳಿವೆ ಎಂದು ಇತ್ತೀಚೆಗೆ ಬ್ರಿಟನ್ ತಿಳಿಸಿತ್ತು.

ನಕಲಿ ಪಾಸ್‍ಪೋರ್ಟ್ ಮೂಲಕ ಸಂಚರಿಸುತ್ತಿದ್ದ ಇಕ್ಬಾಲ್ ಕಸ್ಕರ್ ದಾವೂದ್ ಇಬ್ರಾಹಿಂನ ಹೆಸರಲ್ಲಿ ಸುಲಿಗೆ ನಡೆಸುತ್ತಿದ್ದ. ತನ್ನ ಹುಡುಗರ ಮೂಲಕ ಕರೆ ಮಾಡಿಸಿ ಬಿಲ್ಡರ್‍ಗಳಿಗೆ ಹಫ್ತಾಕ್ಕಾಗಿ ಬೇಡಿಕೆ ಇಡುತ್ತಿದ್ದ. ಭೂಗತ ಲೋಕದ ಡಾನ್ ಆಗಲು ಪ್ರಯತ್ನಿಸುತ್ತಿದ್ದ ಕಸ್ಕರ್ ಅನೇಕರ ಪಾಲಿಗೆ ತಲೆನೋವಾಗಿದ್ದ. ಇದೀಗ ಅತನ ಬಂಧನ ನಡೆದಿದ್ದು, ಸಾಕಷ್ಟು ಮಾಹಿತಿ ಸಿಗುವ ಲಕ್ಷಣ ಗೋಚರಿಸಿದೆ.

ಅಂಡರ್‍ವಲ್ಡ್ ಡಾನ್ ದಾವೂದ್ ಇಬ್ರಾಹಿಂ ಜೊತೆ ನಿಕಟ ಸಂಬಂಧ ಹೊಂದಿರುವ ಕಸ್ಕರ್ ದಾವೂದ್‍ನ ಬಗ್ಗೆ ಸಾಕಷ್ಟು ಮಾಹಿತಿಗಳನ್ನು ನೀಡಲಿದ್ದಾನೆ ಎನ್ನಲಾಗಿದೆ. ಇದೇ ಮಾಹಿತಿಯ ಅನ್ವಯ ದಾವೂದ್ ಹಾಗೂ ಚೋಟಾ ಶಕೀಲ್ ಬೇಟೆಯಾಡಲು ಬಲೆ ಬೀಸುವ ಸಾಧ್ಯತೆ ಇದೆ.

ಕೇರಳ ಮೂಲದ ಮತ್ತೊಬ್ಬ ಭೂಗತ ಪಾತಕಿ ದಾವೂದ್ ಇಬ್ರಾಹಿಂನ ಬಂಟ ರಶೀದ್ ಮಲಬಾರಿ ನಾಪತ್ತೆಯಾಗಿದ್ದು, ಕಸ್ಕರ್‍ಗೂ ಈತನಿಗೂ ಸಂಬಂಧವಿರುವ ಬಗ್ಗೆ ಪೊಲೀಸರು ಮಾಹಿತಿ ಕಲೆ ಹಾಕಿದ್ದಾರೆ. ಭೂಗತ ಪಾತಕಿ ರಶೀದ್ ಮಲಬಾರಿ ಭಾರತದಲ್ಲಿಯೇ ಇದ್ದು, ಇತ್ತೀಚೆಗೆ ದಕ್ಷಿಣ ಕನ್ನಡದ ಪೊಲೀಸರು ಬೆಳಗಾವಿ, ಮುಂಬೈಗೆ ತೆರಳಿ ಸಾಕಷ್ಟು ಹುಡುಕಾಡಿದ್ದರು. ಪೊಲೀಸರು ಕಸ್ಕರ್‍ನಲ್ಲಿ ಮಲಬಾರಿಯ ಕುರಿತು ವಿಚಾರಣೆ ನಡೆಸಲಿದ್ದು, ಮಲಬಾರಿಯ ಕುರಿತು ಸುಳಿವು ಸಿಗುವ ಸಾಧ್ಯತೆ ಇದೆ. ಆದ್ದರಿಂದ ಶೀಘ್ರದಲ್ಲೇ ಮಲಬಾರಿ ಕೂಡಾ ಪೊಲೀಸರ ಬಲೆಗೆ ಬೀಳುವ ಸಾಧ್ಯತೆ ಇದೆ.

-ಚೇಕಿತಾನ

 

Tags

Related Articles

Close