ಅಂಕಣ

ಹೊಗೆ ಗೂಡುಗಳಲ್ಲಿ ಬೇಯುತ್ತಿದ್ದ ಗ್ರಾಮೀಣ ಮಹಿಳೆಯರಿಗೆ ಕೊನೆಗೂ ನರೇಂದ್ರ ಮೋದಿಯವರ ‘ಪ್ರಧಾನಮಂತ್ರಿ ಉಜ್ವಲ ಯೋಜನೆ’ಯಿಂದ ಮುಕ್ತಿ!!

ಪ್ರಧಾನಿ ಮೋದಿ ಅವರು ಬಡವರ ಏಳಿಗೆಗಾಗಿ ಈಗಾಗಲೇ ಹತ್ತು ಹಲವಾರು ಯೋಜನೆಗಳನ್ನು ಹೊರತಂದಿದ್ದು, ಬಡ ಕುಟುಂಬದ ಮಹಿಳೆಯರಿಗಾಗಿ
ಉಪಯುಕ್ತವಾಗಲಿ ಎಂದು ‘ಪ್ರಧಾನಮಂತ್ರಿ ಉಜ್ವಲ ಯೋಜನೆ’ಗೆ ಚಾಲನೆ ನೀಡಿದ್ದಾರೆ. ಈ ಯೋಜನೆಯಡಿ ಬಿಪಿಎಲ್ ಕುಟುಂಬದ ಮಹಿಳೆಯರಿಗೆ ಉಚಿತವಾಗಿ ಎಲ್.ಪಿ.ಜಿ ಸೌಲಭ್ಯ ಕಲ್ಪಿಸುವುದಾಗಿದ್ದು, ಮುಂದಿನ 3 ವರ್ಷದ ಒಳಗೆ ಬಿಪಿಎಲ್ ಕುಟುಂಬದ 5 ಲಕ್ಷ ಮಹಿಳೆಯರಿಗೆ ಉಚಿತ ಗ್ಯಾಸ್ ಸೌಲಭ್ಯ ಒದಗಿಸುವುದು ಈ ಯೋಜನೆಯ ಮುಖ್ಯ ಗುರಿಯಾಗಿದೆ.

ನರೇಂದ್ರಮೋದಿಯವರ ಮಹತ್ವಾಕಾಂಕ್ಷೆ ಯೋಜನೆಗಳಲ್ಲೊಂದಾ ‘ಪ್ರಧಾನಮಂತ್ರಿ ಉಜ್ವಲ’ ಯೋಜನೆ ಮಹಿಳೆಯರ ಪಾಲಿಗೆ ನಿಜಕ್ಕೂ ವರದಾನವಾಗಿದೆ. ಬಡ ಕುಟುಂಬದ ಮಹಿಳೆಯರಿಗೆ ಉಚಿತ ಅಡುಗೆ ಅನಿಲ (ಎಲ್‍ಪಿಜಿ) ಸಂಪರ್ಕ ಒದಗಿಸಲು 8,000 ಕೋಟಿ ರೂಪಾಯಿ ಯೋಜನೆಗೆ ಸಂಪುಟ ಅನುಮೋದನೆ ನೀಡಿದೆ. ಹೊಗೆ ಗೂಡುಗಳಲ್ಲಿ ಬೇಯುತ್ತಿದ್ದ ಗ್ರಾಮೀಣ ಮಹಿಳೆಯರಿಗೆ ಕೊನೆಗೂ ಮುಕ್ತಿ ಸಿಕ್ಕಿದ್ದು, ಕಾರ್ಮಿಕ ದಿನಾಚರಣೆಯಂದು ಕೇಂದ್ರ ಸರಕಾರ ಬಿಪಿಎಲ್ ಕುಟುಂಬಗಳಿಗೆ ಉಚಿತ ಎಲ್.ಪಿ.ಜಿ ಸಂಪರ್ಕದ ಕಾಣಿಕೆ ನೀಡಿದೆ.

ಇನ್ನು ಮೂರು ವರ್ಷಗಳಲ್ಲಿ ದೇಶದ 5 ಕೋಟಿ ಕುಟುಂಬಗಳಿಗೆ ಅಡುಗೆ ಅನಿಲ ಸಂಪರ್ಕವನ್ನು ಕಲ್ಪಿಸುವ ಈ ಕಾರ್ಯಕ್ರಮಕ್ಕೆ 8 ಸಾವಿರ ಕೋಟಿ ಖರ್ಚಾಗುತ್ತದೆ.
ಬೊಕ್ಕಸಕ್ಕೆ ಭಾರಿ ಹೊರೆಯಾಗುತ್ತದೆ ಎಂದು ಕೆಲವು ತಜ್ಞರು ಗೊಣಗಿದರೂ ಇದೊಂದು ದೊಡ್ಡ ಜನೋಪಕಾರಿ ಯೋಜನೆ. ಸಬ್ಸಿಡಿ ಕಡಿತಗಳೇ ಆರ್ಥಿಕ ನೀತಿಗಳ ಮುಖ್ಯ ಧೋರಣೆಯಾಗಬೇಕು. ಉಚಿತ ಕೊಡುಗೆಗಳು ಅನುತ್ಪಾದಕ ಎನ್ನುವ ಕೂಗು ಜೋರಾಗಿ ಕೇಳಿ ಬರುತ್ತಿರುವ ಇವತ್ತಿನ ದಿನಗಳಲ್ಲಿ ಮೋದಿ ಸರಕಾರದ ನಡೆ ತುಂಬ ದಿಟ್ಟತನದಿಂದ ಕೂಡಿದೆ.

ಮಹಿಳೆಯರು ಮತ್ತು ಹೆಣ್ಣು ಮಕ್ಕಳ ದಿನಚರಿಯ ಬಹುಭಾಗ ಉರುವಲು ಸಂಗ್ರಹ ಮಾಡುವುದರಲ್ಲೇ ಕಳೆದುಹೋಗುತ್ತದೆ. ಮಳೆ, ಚಳಿಗಾಲದಲ್ಲಂತೂ ಕಟ್ಟಿಗೆಗಳನ್ನು ಉರಿಸಿದಾಗ ಅದರಿಂದ ಉಂಟಾಗುವ ಹೊಗೆ ಅದು ಮನೆಯನ್ನಷ್ಟೇ ಅಲ್ಲ, ಸುತ್ತಮುತ್ತಲ ಓಣಿಗಳಿಗೂ ವ್ಯಾಪಿಸುವುದು ಗ್ರಾಮೀಣ ಭಾರತದ ಸಾಮಾನ್ಯ ದೃಶ್ಯವಾಗಿದೆ!! ಇದೊಂದು ಬಹುಗಂಭೀರ ಆರೋಗ್ಯ ಸಮಸ್ಯೆಗಳನ್ನು ತಂದೊಡ್ಡುತ್ತದೆ ಎಂಬುದನ್ನು ಅನೇಕ ಅಧ್ಯಯನಗಳು ಸಾರಿ ಹೇಳಿದ್ದವು. ಒಂದು ಗಂಟೆ ಇಂಥ ಹೊಗೆಯಲ್ಲಿದ್ದರೆ ಅದು 400 ಸಿಗರೇಟ್ ಸೇವನೆಗೆ ಸಮ ಎಂದು ತಜ್ಞರು ಎಚ್ಚರಿಸಿದ್ದರು.

ಉರುವಲು ಆಧಾರಿತ ಒಲೆಗಳು ಮಹಿಳೆಯರ ಆಯುಷ್ಯವನ್ನೇ ಮುಕ್ಕುತ್ತಿತ್ತು. ಅವರ ಜೀವನ ಮಟ್ಟವನ್ನೇ ಶಿಥಿಲಗೊಳಿಸುತ್ತಿತ್ತು. ಉಜ್ವಲ ಯೋಜನೆ ಎಲ್ಲೆಡೆ
ಪರಿಣಾಮಕಾರಿಯಾಗಿ ಜಾರಿಯಾದರೆ ಇದೊಂದು ದೊಡ್ಡ ಆರೋಗ್ಯ ರಕ್ಷೆ ನೀಡುತ್ತದೆ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ. ಇದು ಕೇವಲ ಹೆಣ್ಣು ಮಕ್ಕಳಷ್ಟೇ ಅಲ್ಲ; ಇಡೀ ಕುಟುಂಬದ ಜೀವನ ಮಟ್ಟ ಸುಧಾರಣೆಯಲ್ಲೂ ಗಣನೀಯ ಕೊಡುಗೆ ನೀಡಬಲ್ಲದು. ಇದರೊಂದಿಗೆ ಗ್ರಾಮೀಣ ಭಾಗದಲ್ಲಿ ಸಿಲಿಂಡರ್ ಪೂರೈಕೆಯ ಉದ್ಯೋಗ ಕೂಡ ಉಂಟಾಗುತ್ತದೆ.

ಪ್ರಧಾನಮಂತ್ರಿ ನರೇಂದ್ರ ಮೋದಿಯವರ “ಪ್ರಧಾನಮಂತ್ರಿ ಉಜ್ವಲ ಯೋಜನೆ’ ಮೇ 1ರಂದು ದೇಶಾದ್ಯಂತ ಚಾಲನೆ ಪಡೆದಿದ್ದು, ಇದರನ್ವಯ ಬಿಪಿಎಲ್
ಕಾರ್ಡುದಾರರಿಗೆ ಉಚಿತ ಅಡುಗೆ ಅನಿಲ ಸಂಪರ್ಕ ನೀಡಲಾಗುತ್ತದೆ. ಮೋದಿ ನೇತೃತ್ವದ ಬಿಜೆಪಿ ಸರಕಾರ ಹಲವು ಜನಪ್ರಿಯ ಯೋಜನೆ ಮೂಲಕ ವಿಶ್ವದ ಗಮನ ಸೆಳೆಯುತ್ತಿದೆಯಲ್ಲದೇ ಬಡವರಿಗಾಗಿ ಉಜ್ವಲ ಸಿಲಿಂಡರ್ ಹಂಚಿಕೆ, ಜನ್‍ಧನ್‍ಯೋಜನೆ, ರಾಷ್ಟ್ರೀಯ ಹೆದ್ದಾರಿಗಳ ನಿರ್ಮಾಣ ಸೇರಿದಂತೆ ಹಲವು ಯೋಜನೆಗಳು ಜನರಿಗೆ ಹತ್ತಿರವಾಗಿವೆ.

Image result for narendra modi gramin ujjwala yojana

ಪ್ರಧಾನ ಮಂತ್ರಿ ಉಜ್ವಲ ಯೋಜನೆ ಎಂದರೇನು?

ಪ್ರಧಾನ ಮಂತ್ರಿ ಉಜ್ವಲ ಯೋಜನೆ ಅಡಿಯಲ್ಲಿ ಅರ್ಹ ಕುಟುಂಬಗಳಿಗೆ ಎಲ್‍ಪಿಜಿ ಸಂಪರ್ಕಕ್ಕೆ 1,600 ಸಹಾಯಧನ ನೀಡಲಾಗುತ್ತದೆ. ಆದ್ದರಿಂದ ಎಲ್‍ಪಿಜಿ
ಸಂಪರ್ಕ ಪಡೆಯಲು ಹಣ ನೀಡುವ ಅಗತ್ಯವಿಲ್ಲ. ಆದರೆ ಬಳಿಕ ಬಳಸುವ ಸಿಲಿಂಡರ್‍ಗಳಿಗೆ ಹಣ ನೀಡಬೇಕಾಗುತ್ತದೆ.

ಈ ಯೋಜನೆಯನ್ನು ಉದ್ಘಾಟಿಸಿ ಮಾತಾನಾಡಿದ ಮೋದಿ ‘ನಾನು ಅತೀ ಬಡ ಕುಟುಂಬದಲ್ಲಿ ಹುಟ್ಟಿದ್ದೇನೆ. ನಮ್ಮ ಮನೆಯಲ್ಲಿ ಕಿಟಕಿಗಳೇ ಇರಲಿಲ್ಲ.ನನ್ನ ತಾಯಿ
ಕಟ್ಟಿಗೆಗಳನ್ನು ಬಳಸಿ ಅಡುಗೆ ಮಾಡುತ್ತಿದ್ದರು .ಈ ವೇಳೆ ಮನೆಯಲ್ಲಿ ಹೊಗೆ ತುಂಬಿಕೊಂಡು ನಮ್ಮ ತಾಯಿ ನಮಗೆ ಕಾಣಿಸುತ್ತಿರಲಿಲ್ಲ’ ಎಂದಿದ್ದಾರೆ!! ಯೋಜನೆಯಡಿ ಬಿಪಿಎಲ್ ಕುಟುಂಬದ ಮಹಿಳೆಯರಿಗೆ ಉಚಿತವಾಗಿ ಎಲ್‍ಪಿಜಿ ಸೌಲಭ್ಯ ಕಲ್ಪಿಸುವುದಾಗಿದೆ. ಮುಂದಿನ 3 ವರ್ಷದ ಒಳಗೆ ಬಿಪಿಎಲ್ ಕುಟುಂಬದ 5 ಲಕ್ಷ ಮಹಿಳೆಯರಿಗೆ ಉಚಿತ ಗ್ಯಾಸ್ ಸೌಲಭ್ಯ ಒದಗಿಸುವುದು ಯೋಜನೆಯ ಗುರಿಯಾಗಿದೆ ಎಂದು ತಿಳಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರನ್ನೊಳಗೊಂಡ ಸಂಪುಟ 8,000 ಕೋಟಿ ರೂ. ಮೊತ್ತದ “ಪ್ರಧಾನಮಂತ್ರಿ ಉಜ್ವಲ ಯೋಜನೆ”ಯನ್ನು ಮೂರು ವರ್ಷಗಳ
ಅವಧಿಯಲ್ಲಿ ಉಚಿತವಾಗಿ ಕಲ್ಪಿಸಲು ಅನುಮೋದನೆ ನೀಡಿದೆ ಎಂದು ಕೇಂದ್ರ ಪೆಟ್ರೋಲಿಯಂ ಸಚಿವ ಧಮೇಂದ್ರ ಪ್ರಧಾನ್ ಹೇಳಿದ್ದಾರೆ. ಪ್ರಸಕ್ತ ಸಾಲಿನ ಬಜೆಟ್‍ನಲ್ಲಿ ಆರಂಭಿಕವಾಗಿ 2000 ಕೋಟಿ ಬಿಡುಗಡೆ ಮಾಡಲಾಗಿದ್ದು, 2016-17ನೇ ಸಾಲಿನಲ್ಲಿ ಸುಮಾರು 1 ಕೋಟಿ 50 ಲಕ್ಷ ಕುಟುಂಬಗಳು ಈ ಯೋಜನೆ ಅಡಿ ಎಲ್.ಪಿ.ಜಿ ಸಂಪರ್ಕ ಒದಗಿಸಗಿಸಲಾಗುವುದು ಎಂದು ಅವರು ಹೇಳಿದ್ದಾರೆ.

ನೊಂದಾಯಿಸುವ ಸಮಯದಲ್ಲಿ ಈ ದಾಖಲಾತಿಗಳನ್ನು ಸಲ್ಲಿಸಬೇಕು!!!

ಪ್ರಧಾನಮಂತ್ರಿ ಉಜ್ವಲ ಯೋಜನೆಯ ನೋಂದಾಯಿಸಲು ಮತ್ತು ಸೌಲಭ್ಯ ಪ್ರಯೋಜನಗಳನ್ನು ಪಡೆಯಲು ಈ ಕೆಳಗಿನ ದಾಖಲಾತಿಗಳನ್ನು ಒದಗಿಸಬೇಕಾಗುತ್ತದೆ.
* ಈ ಯೋಜನೆಗೆ ಮಹಿಳೆಯರು ಮಾತ್ರ ಅರ್ಹರಾಗಿದ್ದು, 18 ವರ್ಷ ಮೇಲ್ಪಟ್ಟಿರಬೇಕು.
* ರಾಜ್ಯಸರ್ಕಾರಗಳು ಬಡತನ ರೇಖೆಗಿಂತ ಕೆಳಗಿರುವ ನೀಡುವ ಬಿಪಿಎಲ್ ಕಾರ್ಡ್‍ನ್ನು ಹೊಂದಿರಬೇಕು.
* ಆಧಾರ್ ಕಾರ್ಡ್, ಎಲೆಕ್ಷನ್ ಕಾರ್ಡ್, ಅಥವಾ ಚಾಲನಾ ಪರವಾನಿಗೆ ಪತ್ರ ಇವುಗಳಲ್ಲಿ ಯಾವುದಾದರು ಒಂದು ನಕಲು ಪ್ರತಿಯನ್ನು ಒದಗಿಸಬೇಕು.
* ರಾಜ್ಯಸರ್ಕಾರಗಳು ಬಡತನ ರೇಖೆಗಿಂತ ಕೆಳಗಿರುವವರಿಗೆ ನೀಡುವ ಬಿಪಿಎಲ್ ಕಾರ್ಡ್‍ನ್ನು ಒದಗಿಸಬೇಕು.
* ಅಡ್ರೆಸ್ ಪ್ರೂಫ್‍ಗಾಗಿ ಆಧಾರ್ ಕಾರ್ಡ್, ಎಲೆಕ್ಷನ್ ಕಾರ್ಡ್, ಅಥವಾ ಚಾಲನಾ ಪರವಾನಿಗೆ ಪತ್ರ ಇವುಗಳಲ್ಲಿ ಯಾವುದಾದರೊಂದು ಒದಗಿಸಬೇಕು.
* ಪಾಸ್ಪೋರ್ಟ್ ಅಳತೆಯ ಭಾವಚಿತ್ರಗಳನ್ನು ಸಹ ಕೊಡಬೇಕಾಗುತ್ತದೆ.

ಈ ಯೋಜನೆಗೆ ಬೇಕಾದ ಅರ್ಹತೆ ಮಾನದಂಡ ಏನು ಗೊತ್ತೇ?

* ನಕಲು ಮತ್ತು ತಪ್ಪು ನಿರ್ವಹಣೆ ತಪ್ಪಿಸಲು ಪ್ರಸ್ತುತ ನೋಂದಾಯಿತ ಎಸ್.ಇ.ಸಿ.ಸಿ-2011 ಡೇಟಾ (ಗ್ರಾಮೀಣ)
* ಎಲ್.ಪಿ.ಜಿ ಸಂಪರ್ಕಗಳನ್ನು ಮಹಿಳಾ ಫಲಾನುಭವಿಗಳಿಗೆ ನೀಡಲಾಗುವುದು ಮತ್ತು ಅವರ ಹೆಸರಿನಲ್ಲಿ ನೋಂದಾಯಿಸಲಾಗುವುದು.
* ಬಿಪಿಎಲ್ ಕುಟುಂಬಗಳಿಗೆ ರೂ. 1,600 ವರೆಗೆ ಹಣಕಾಸಿನ ನೆರವು ನೀಡಲು ಯೋಜನೆ ಭರವಸೆ ನೀಡಿದೆ.

Image result for narendra modi gramin ujjwala yojana

ಎಲ್.ಪಿ.ಜಿ ಸಂಪರ್ಕ ಪಡೆಯುವುದು ಹೇಗೆ?

* ಈ ಯೋಜನೆಯಲ್ಲಿ ಪಾರದರ್ಶಕತೆ ಮತ್ತು ಒಗ್ಗಟ್ಟನ್ನು ಕಾಯ್ದುಕೊಳ್ಳಲು ರಾಜ್ಯ ಸರ್ಕಾರಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಬಿಪಿಎಲ್ ಕುಟುಂಬಗಳ ಪಟ್ಟಿ ಆನ್ಲೈನ್ ಮೂಲಕ ಲಭ್ಯವಾಗುವಂತೆ ಮಾಡಿವೆ.
* ಪ್ರಸ್ತುತ ಗ್ರಾಮೀಣ ಅಥವಾ ನಗರ ಪ್ರದೇಶಗಳಲ್ಲಿ ವಾಸಿಸುತ್ತಿದ್ದು, ಬಿಪಿಎಲ್ (ಬಡತನ ರೇಖೆಗಿಂತ ಕೆಳಗಿನವರು)ಎಂದು ನೋಂದಾಯಿಸಲ್ಪಟ್ಟವರು ತಮ್ಮ ಬಿಪಿಎಲ್ ಕಾರ್ಡ್ ಅನ್ನು ಹತ್ತಿರದ ಎಲ್ಪಿಜಿ ವಿತರಕರಿಗೆ ತೆಗೆದುಕೊಳ್ಳಬಹುದು. ಉಚಿತ ಅಥವಾ ಸಬ್ಸಿಡಿ ಎಲ್ಪಿಜಿ ಸಿಲಿಂಡರ್ ಗಾಗಿ ನೋಂದಾಯಿಸಿಕೊಳ್ಳಿ.
* 14.2 ಕೆಜಿ ಸಿಲಿಂಡರ್ ಮೇಲಿನ ರೂ. 1,600ಗಳ ಸರ್ಕಾರಿ ರಿಯಾಯಿತಿಯು ರೂ. 1,450 ಭದ್ರತಾ ಠೇವಣಿಯನ್ನು ಒಳಗೊಂಡಿರುತ್ತದೆ. ಜತೆಗೆ ಗ್ಯಾಸ್ ಸ್ಟೋವ್, ISI ಸ್ಟಾಡಂರ್ಡ್ ಪೈಪ್ ಸಹ ನೀಡಲಾಗುತ್ತದೆ.

ಇನ್ನು ಬಿಪಿಎಲ್ ಕುಟುಂಬಗಳಿಗೆ ರೂ. 1,600 ವರೆಗೆ ಹಣಕಾಸಿನ ನೆರವು ನೀಡಲು ಯೋಜನೆ ಭರವಸೆ ನೀಡಿದ್ದು, 14.2 ಕೆಜಿ ಸಿಲಿಂಡರ್ ಮೇಲಿನ ರೂ. 1,600ಗಳ ಸರ್ಕಾರಿ ರಿಯಾಯಿತಿಯು ರೂ. 1,450 ಭದ್ರತಾ ಠೇವಣಿಯನ್ನು ಒಳಗೊಂಡಿರುತ್ತದೆ. ಇದರ ಜತೆಗೆ ಗ್ಯಾಸ್ ಸ್ಟೋವ್, ಐ.ಎಸ್.ಐ ಸ್ಟಾಡಂರ್ಡ್ ಪೈಪ್ ಸಹ ನೀಡಲಾಗುತ್ತದೆ. ಇನ್ನು 5 ಕೆ.ಜಿ ಸಿಲಿಂಡರ್ ಕೂಡ ಬಿಪಿಎಲ್ ಕಾರ್ಡುದಾರರಿಗೆ ಲಭ್ಯವಿದ್ದು, ರೂ. 161 ವೆಚ್ಚದಲ್ಲಿ ವರ್ಷದಲ್ಲಿ ಒಟ್ಟು 34 ಬಾರಿ ಮರುಬಳಸಬಹುದು. ಅಷ್ಟೇ ಅಲ್ಲದೇ, ಪ್ರಧಾನಮಂತ್ರಿ ಉಜ್ವಲ ಯೋಜನೆಗೆ ಸಂಬಂಧಿತ ಅರ್ಜಿಯನ್ನು ಎಲ್.ಪಿ.ಜಿ ಹಂಚಿಕೆದಾರರು ಅಥವಾ ಅಂತರ್ಜಾಲದಿಂದ ಡೌನ್ಲೋಡ್ ಮಾಡಬಹುದು. ಈ ಯೋಜನೆಯ ಸೌಲಭ್ಯಗಳನ್ನು ಪಡೆಯಲು ಫಲಾನುಭವಿಗಳು ಸಂಬಂಧಿತ ದಾಖಲಾತಿ ಮತ್ತು ಬಿಪಿಎಲ್ ಕಾರ್ಡ್ ಗಳನ್ನು ಸಲ್ಲಿಸಬೇಕಾಗುತ್ತದೆ.

ಪ್ರಧಾನಮಂತ್ರಿ ಉಜ್ವಲ ಯೋಜನೆಯ ಲಾಭಗಳು ಏನು?

* ದೇಶದ ಎಲ್ಲ ನಾಗರಿಕರಿಗೂ ಎಲ್.ಪಿ.ಜಿ ಸಂಪರ್ಕ ಸಿಕ್ಕಿದಂತೆ ಆಗುತ್ತದೆ.
* ಅಡುಗೆ ಒಲೆಗಳಲ್ಲಿ ಬರುತ್ತಿದ್ದ ಹೊಗೆಯಿಂದ ಆಗುತ್ತಿದ್ದ ಮಹಿಳೆಯರ ಮೇಲಿನ ಅನಾರೋಗ್ಯದ ಪ್ರಮಾಣ ಕಡಿಮೆಯಾಗಲಿದೆ.
* ಹೊಗೆಯಿಂದ ಉದ್ಭವಿಸುವ ವಾಯು ಮಾಲಿನ್ಯ ನಿಯಂತ್ರಣ
* ಅಡುಗೆ ಮಾಡಲು ತೆಗೆದುಕೊಳ್ಳುತ್ತಿದ್ದ ಸಮಯದಲ್ಲಿ ಕಡಿಮೆಯಾಗಲಿದೆ.
* ಉಳ್ಳವರು ತ್ಯಜಿಸಿದ ಎಲ್.ಪಿ.ಜಿ ಸಬ್ಸಿಡಿಯನ್ನು ಬಳಸಿಕೊಂಡು ಕೇಂದ್ರ ಸರ್ಕಾರ ಯೋಜನೆಯನ್ನು ಕಾರ್ಯರೂಪಕ್ಕೆ ಇಳಿಸಿದೆ.
* ನರೇಂದ್ರ ಮೋದಿ ಅವರ ಮಾತಿಗೆ ಬೆಲೆ ನೀಡಿ 1.13 ಕೋಟಿ ಜನ ಎಲ್.ಪಿ.ಜಿ ಸಬ್ಸಿಡಿ ತ್ಯಜಿಸಿದ್ದರು.

Image result for narendra modi gramin ujjwala yojana

ಗ್ಯಾಸ್ ಸಂಪರ್ಕ ಕೇವಲ ಶ್ರೀಮಂತರಿಗೆ ಮಾತ್ರ ಎನ್ನುವ ಭಾವನೆ ಹಿಂದೆ ಇತ್ತು. ಆದರೆ, ಇದೀಗ ಕಾಲ ಬದಲಾಗಿದ್ದು, ಮೋದಿ ಅವರಿಂದ ಬಡವರಿಗೆ, ಮಹಿಳೆಯರಿಗೆ ಗೌರವ ದೊರಕುತ್ತಿದೆ. ಇನ್ನು ದೇಶದ 5 ಕೋಟಿ ಬಡ ಕುಟುಂಬಗಳಿಗೆ ಉಚಿತ ಎಲ್.ಪಿ.ಜಿ ಸಂಪರ್ಕ ಕಲ್ಪಿಸಿ ಅದನ್ನು ಅವರ ಮನೆ ಬಾಗಿಲಿಗೆ ಕೊಂಡೊಯ್ಯಲಾಗಿದ್ದು ಮೋದಿ ಅವರ ಯೋಜನೆಗಳು ಬಡವರ ಪಾಲಿಗೆ ವರದಾನವಾಗಿದ್ದಂತೂ ಖಂಡಿತಾ ನಿಜ!!

– ಅಲೋಖಾ

Tags

Related Articles

Close