ಅಂಕಣ

14 ರಾಷ್ಟ್ರಗಳಲ್ಲಿ ಬ್ಯಾಂಕ್ ಖಾತೆಗಳು! 1000 ಕೋಟಿ ರೂಗಳ ಬೇನಾಮಿ ಆಸ್ತಿ! ಡಿಕೆಶಿ ಈ ಕಾಂಗ್ರೆಸ್ ನಾಯಕನ ಮುಂದೆ ಏನೇನೂ ಅಲ್ಲ!

ಕಾಂಗ್ರೆಸ್ ಮುಖಂಡ ಡಿ.ಕೆ. ಶಿವಕುಮಾರ್ ಅವರ ಬಳಿ ಬೇನಾಮಿ ಆಸ್ತಿಯ ಮೌಲ್ಯವನ್ನು ಕಂಡು ಬೆಕ್ಕಸಬೆರಗಾಗಿ ಇಷ್ಟೊಂದು ಹಣ ಎಲ್ಲಿಂದ ಬಂತಪ್ಪಾ ಎಂದು
ಅಚ್ಚರಿವ್ಯಕ್ತಪಡಿಸುತ್ತೇವೆ. ಡಿ.ಕೆ. ಶಿವಕುಮಾರನನ್ನು ದೇಶದ ಅತ್ಯಂತ ಭ್ರಷ್ಟ ಕಾಂಗ್ರೆಸ್ ಮುಖಂಡ ಎಂದು ಇಂದು ಎಲ್ಲರೂ ಆರೋಪಿಸುತ್ತಾರೆ. ಆದರೆ ಡಿ.ಕೆ.ಗಿಂತಲೂ ಜಾಸ್ತಿ ದುಡ್ಡುಮಾಡಿದ ರಾಜಕಾರಣಿ ನಮ್ಮ ಮುಂದಿದ್ದಾರೆ. ಈತ ಮಾಡಿದ ಬೇನಾಮಿ ಆಸ್ತಿ, ಕೂಡಿಟ್ಟ ದುಡ್ಡು ಇತ್ಯಾದಿಗಳನ್ನು ಅಳೆಯಲು ನಮ್ಮ ನಾರ್ಮಲ್ ಕ್ಯಾಲ್ಕುಲೇಟರ್‍ನಿಂದ ಸಾಧ್ಯವೇ ಇಲ್ಲವಂತೆ… ಅಂದರೆ ಆ ದುಡ್ಡಿನ ಮೌಲ್ಯವೆಷ್ಟಿಬಹುದು? ನಾವೆಲ್ಲಾ ಒಂದೊಂದು ರೂಪಾಯಿಗೂ ಪರಿತಪಿಸುತ್ತಿರುವಾಗ ಈ ರೀತಿ ಅಕ್ರಮವಾಗಿ ದುಡ್ಡು ಕೂಡಿಟ್ಟವರನ್ನು ಕಂಡಾಗ ಸಿಟ್ಟು ನೆತ್ತಿಗೇರುವುದಿಲ್ಲವೇ?

ಅಂದಹಾಗೆ ಅಕ್ರಮವಾಗಿ ಕೋಟಿಕೋಟಿ ಹಣ, ಆಸ್ತಿಯನ್ನು ಕೂಡಿಟ್ಟವನು ಯಾರು ಗೊತ್ತೇ….?

ಸೋನಿಯಾ ಗಾಂಧಿಯ ಬಲಗೈ ಬಂಟ ಹಾಗೂ ಮಾಜಿ ಹಣಕಾಸು ಸಚಿವ ಕಾಂಗ್ರೆಸ್‍ನ ಪಿ. ಚಿದಂಬರಂ.

ಇದನ್ನು ಖಂಡಿತಾ ನಂಬಲು ಸಾಧ್ಯವಿಲ್ಲ. ಯಾಕೆಂದರೆ ಚಿದಂಬರಂ ಹಾಗೂ ಇವರ ಕುಟುಂಬ ಬರೋಬ್ಬರಿ 14 ರಾಷ್ಟ್ರಗಳಲ್ಲಿ ವಿವಿಧ ಬ್ಯಾಂಕ್ ಖಾತೆಗಳನ್ನು ಹೊಂದಿದೆ. ಇಲ್ಲಿರುವ ಆಸ್ತಿಯ ಮೊತ್ತವೆಷ್ಟು ಎಂದು ಇನ್ನಷ್ಟೇ ಬಹಿರಂಗಗೊಳ್ಳಬೇಕಿದೆ.

ಮಾಜಿ ಹಣಕಾಸು ಮಂತ್ರಿಯಾಗಿರುವ ಪಿ. ಚಿದಂಬರಂ ಹಾಗೂ ಇವರ ಕುಟುಂಬಿಕರು ಬರೋಬ್ಬರಿ 14 ರಾಷ್ಟ್ರಗಳಲ್ಲಿ ವಿವಿಧ ಬ್ಯಾಂಕ್ ಖಾತೆಗಳನ್ನು ಹೊಂದಿದ್ದಾರೆ ಎನ್ನುವ ಮಾಹಿತಿಯನ್ನು ಬಿಜೆಪಿ ಮುಖಂಡ ಸುಬ್ರಹ್ಮಣಿಯನ್ ಸ್ವಾಮಿ ಅವರು ದಾಖಲೆ ಸಮೇತ ಬಿಡುಗಡೆ ಮಾಡಿದ್ದಾರೆ. ಆದರೆ ವಿಪರ್ಯಾಸವೇನು ಗೊತ್ತೇ? ಈ ಸ್ಫೋಟಕ ಸುದ್ದಿಯನ್ನು ಯಾವುದೇ ಮಾಧ್ಯಮಗಳು ಪ್ರಸಾರ ಮಾಡದೆ ಕಾಂಗ್ರೆಸ್ ಕೃಪೆಗೆ ಪಾತ್ರವಾದವು.

ಚಿದು ಪುತ್ರ ಕಾರ್ತಿ ಚಿದಂಬರಂ ಹಾಗೂ ಈತನ ಕಂಪೆನಿಗಳು ವಿದೇಶದಲ್ಲಿ ಬರೋಬ್ಬರಿ 21 ಬ್ಯಾಂಕ್ ಖಾತೆಗಳನ್ನು ಹೊಂದಿದ್ದಾರೆ ಎಂದು ಸುಬ್ರಹ್ಮಣಿಯನ್ ಸ್ವಾಮಿ ಆರೋಪಿಸುತ್ತಾರೆ. ಈ ಬ್ಯಾಂಕ್ ಖಾತೆಗಳ ಪೈಕಿ ಇಂಗ್ಲೆಂಡ್‍ನ ಮೆಟ್ರೋ ಬ್ಯಾಂಕ್, ಸಿಂಗಾಪುರದ ಓಸಿಬಿಸಿ ಬ್ಯಾಂಕ್ ಸೇರಿ ಹಲವಾರಿವೆ. ಇತ್ತೀಚೆಗೆ ಚಿದು ಕುಟುಂಬದ ಮೇಲೆ ಆದಾಯ ತೆರಿಗೆ ಇಲಾಖೆ ಹಾಗೂ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ದಾಳಿ ನಡೆಸಿದಾಗ ಇದೆಲ್ಲಾ ಮಾಹಿತಿಗಳು ಬಹಿರಂಗಗೊಂಡವು. ಬಹಿರಂಗಗೊಳ್ಳದ ಇನ್ನೆಷ್ಟಿದೆಯೋ…!!

10,000 ಕೋಟಿ ರೂ. ಬೇನಾಮಿ ಆಸ್ತಿಯ ಒಡೆಯನಾಗಿರುವ ಚಿದಂಬರಂ…!

ಇತ್ತೀಚಿನ ವರದಿಗಳ ಪ್ರಕಾರ ಚಿದಂಬರಂ ಕಟುಂಬ ಭಾರತದಲ್ಲೇ ಬರೋಬ್ಬರಿ 10,000 ಕೋಟಿ ರೂ. ಮೌಲ್ಯದ ಬೇನಾಮಿ ಆಸ್ತಿಯನ್ನು ಹೊಂದಿದೆ… ಪ್ರಧಾನಿ
ನರೇಂದ್ರ ಮೋದಿಯವರು ಇದರ ಬಗ್ಗೆ ತಕ್ಷಣ ತನಿಖೆ ನಡೆಸುವಂತೆ ಸಿಬಿಐ ಹಾಗೂ ಜಾರಿ ನಿರ್ದೇಶನಾಯಲಕ್ಕೆ ಆದೇಶ ನೀಡಬೇಕೆಂದು ಡಾ. ಸ್ವಾಮಿ ಅವರು
ಆಗ್ರಹಿಸಿದ್ದರು. ತನಿಖೆಯೇನೋ ನಡೆಯುತ್ತಿದೆ. ಆದರೆ ಚಿದು ಹಾಗೂ ಇವರ ಪುತ್ರ ಬೇರೆ ಬೇರೆ ಕಾರಣ ಕೊಟ್ಟು ತನಿಖೆಯಿಂದ ತಪ್ಪಿಸಿಕೊಳ್ಳುತ್ತಿದ್ದಾರೆ. ತನಿಖೆಯನ್ನು ವಿಳಂಬ ಮಾಡುತ್ತಾ ವಿದೇಶದಲ್ಲಿರುವ ಬ್ಯಾಂಕ್ ಖಾತೆಗಳನ್ನು ಮಂಗಮಾಯ ಮಾಡಲೆಂದು ಈ ರೀತಿ ನಾಟಕವಾಟುವ ಸಾಧ್ಯತೆಯನ್ನೂ ಅಲ್ಲಗಳೆಯುವಂತಿಲ್ಲ.

ಆದಾಯ ತೆರಿಗೆ ಇಲಾಖೆಯು ಕಾರ್ತಿ ಕಂಪೆನಿಗಳಿಂದ ಹಾರ್ಡ್ ಡಿಸ್ಕ್‍ಗಳನ್ನು ವಶಪಡಿಸಿಕೊಂಡಿದೆ. ಇದರಲ್ಲಿ ಪಿ.ಚಿದಂಬರಂ, ಪತ್ನಿ ನಳಿನಿ ಚಿದಂಬರಂ, ಪುತ್ರ ಕಾರ್ತಿ ಮತ್ತು ಅವರ ಪತ್ನಿ ಶ್ರೀನಿಧಿ ಅವರು 2008ರಲ್ಲಿ ಯು.ಕೆ.ಯ ಕೇಂಬ್ರಿಜ್ ಪಟ್ಟಣದಲ್ಲಿ ಜಂಟಿಯಾಗಿ ಆಸ್ತಿ ಮತ್ತು ದೊಡ್ಡ ಭವ್ಯ ಮನೆಯನ್ನು ಖರೀದಿಸಿರುವುದನ್ನು ಪತ್ತೆಹಚ್ಚಿದ್ದಾರೆ.

ಆದಾಯ ತೆರಿಗೆಯ ದಾಖಲೆಗಳ ಪ್ರಕಾರ, ಚಿದಂಬರಂ ಮತ್ತು ಅವರ ಕುಟುಂಬವು ಖರೀದಿಸಿದ ಆಸ್ತಿಗಳು ಒಟ್ಟು 5 ಪ್ರದೇಶಗಳಲ್ಲಿದೆ. ಅವೆಂದರೆ ಹೋಲ್ಬೆನ್ ಕ್ಲೋಸ್, ಕೇಂಬ್ರಿಡ್ಜ್, ಯು.ಕೆ. ಸಿಬಿ237ಎಕ್ಯು. ಇನ್ನು ಮನೆಯನ್ನು ಎಡ್ಮಂಡ್ ಸುಲೇಹಾಲ್ಟ್ ಮತ್ತು ಹೀದರ್ ಹಾಲ್ಟ್ರಿ ಎಂಬಲ್ಲಿದ್ದ ಖರೀದಿಸಲಾಗಿದೆ. ಇದಕ್ಕೆಲ್ಲಾ ಬೇಕಾದ ದುಡ್ಡನ್ನು ಕಾರ್ತಿ ಚಿದಂಬರಂನ ಪರ್ಸನಲ್ ಬ್ಯಾಂಕ್ ಖಾತೆ ಲಂಡನಿನ ಮೆಟ್ರೊ ಬ್ಯಾಂಕಿನ ಖಾತೆ ಸಂಖ್ಯೆ 16714313 ರಿಂದ ಹಣ ಡ್ರಾ ಮಾಡಲಾಗಿತ್ತು ಎನ್ನುವ ಸ್ಫೋಟಕ ಮಾಹಿತಿಯೊಂದು ಬಯಲಾಗಿದೆ.

ಇಷ್ಟೆಲ್ಲಾ ಆಸ್ತಿ ಇದ್ದರೂ ಚಿದಂಬರಂ ಅಫಿಡವಿಟ್‍ನಲ್ಲಿ ಘೋಷಿಸಿಲ್ಲ ಯಾಕೆ? ಸಿಕ್ಕಿಬೀಳುತ್ತೇನೆಂಬ ಭಯವೇ?

ಲೋಕಸಭೆ, ರಾಜ್ಯಸಭೆ ಹೀಗೆ ಯಾವುದೇ ಚುನಾವಣೆಗೆ ಅಭ್ಯರ್ಥಿಯಾಗಿರುವ ವ್ಯಕ್ತಿ ಕಡ್ಡಾಯವಾದ ಅಫಿಡವಿಟ್‍ಗಳಲ್ಲಿ ಆಸ್ತಿಯ ಬಗ್ಗೆ ಘೋಷಿಸಿಕೊಳ್ಳಬೇಕು. ಆದರೆ ಚಿದಂಬರಂ ಈ ಆಸ್ತಿಯ ಬಗ್ಗೆ ಎಂದಿಗೂ ಘೋಷಿಸಲಿಲ್ಲ. ಯಾಕೆಂದರೆ ಸಿಕ್ಕಿಬೀಳಬಹುದೆಂಬ ಭಯದಿಂದ ಈ ರೀತಿ ಮಾಡಿದ್ದಾರೆ.

ರಷ್ಯಾದ ಬ್ಯಾಂಕ್ ನಾಜ್ಪ್ರೊಮ್ ಸಹಿ ಮಾಡಿದ ಒಪ್ಪಂದದ ವಿವರಗಳನ್ನು ಸ್ವಾಮಿ ಹೊರತಂದಿದ್ದಾರೆ. ಇದರಲ್ಲಿ ಅಡ್ವಾಂಟೇಜ್ ಸ್ಟ್ರಾಟೆಜಿಕ್ ಕನ್ಸಲ್ಟಿಂಗ್ ಪ್ರೈವೇಟ್
ಲಿಮಿಟೆಡ್ (ASCPL)ನ ಒಪ್ಪಂದದ ಪ್ರಕಾರ ಕಾರ್ತಿ ಸಂಸ್ಥೆಯು ಇಂಡಿಯನ್ ಓವರ್‍ಸೀಸ್ ಬ್ಯಾಂಕಿನೊಂದಿಗೆ ವ್ಯವಹಾರ ನಡೆಸಲು ರಶ್ಯನ್ ಬ್ಯಾಂಕ್‍ನಿಂದ ಐದು ಶೇಕಡಾ ಕಮೀಷನ್ ಪಡೆಯಬೇಕು. ಆದರೆ ಚಿದಂಬರಂ ಹಣಕಾಸು ಸಚಿವರಾಗಿದ್ದಾಗ ಒಪ್ಪಂದಕ್ಕೆ ಸಹಿ ಹಾಕಿದ ಕಾರಣ ಇದು ಭ್ರಷ್ಟಾಚಾರದ ಸ್ಪಷ್ಟ ಪ್ರಕರಣವಾಗಿದೆ ಎಂದು ಸ್ವಾಮಿ ಹೇಳಿದ್ದಾರೆ.

ಯುಪಿಎಎ ಹತ್ತು ವರ್ಷದ ಆಡಳಿತವು ಸಿದ್ದುಗೆ ಲಾಟರಿ ಸಿಕ್ಕಿದಂತಾಯ್ತು…!

ಮನಮೋಹನ್ ಸಿಂಗ್ ಮೌನವಾಗಿರುವುದರಿಂದ ಅವರ ಮೌನಕ್ಕೆ ತಕ್ಕಂತೆ ಲಾಭ ಪಡೆದುಕೊಂಡರು. ಇದರಲ್ಲಿ ಪಿ. ಚಿದಂಬರಂ ಕೂಡಾ ಒಬ್ಬರು. ಮನಮೋಹನರ ಮೌನವನ್ನು ಅರ್ಥಮಾಡಿಕೊಂಡ ಅವರ ಮಂತ್ರಿಗಳು ಅಧಿಕಾರದ ದುರುಪಯೋಗಪಡಿಸಿಕೊಂಡು ಭ್ರಷ್ಟಾಚಾರ ನಡೆಸಿದರು. ಜೊತೆಗೆ ಕಿಕ್‍ಬ್ಯಾಕ್ ಪಡೆಯುತ್ತಾ ಗುಡ್ಡೆಯಷ್ಟು ಹಣವನ್ನು ಪೇರಿಸಿಕೊಂಡರು. ಇದರಲ್ಲಿ ಚಿದಂಬರಂಗಂತೂ ಲಾಟರಿ ಸಿಕ್ಕಂತಾಯಿತು. ಇವರ ಬಂಡವಾಳ ಬಯಲಾಗುತ್ತಿದ್ದಂತೆ ಮೋದಿ ಸರಕಾರ ತಮ್ಮ ಮೇಲೆ ಹಗೆ ತೀರಿಸುತ್ತಿದೆ ಎಂದು ಸುಖಾಸುಮ್ಮನೆ ಆರೋಪಿಸುತ್ತಿದ್ದಾರೆ.

-ಚೇಕಿತಾನ

Tags

Related Articles

Close