ಅಂಕಣ

1971 ರಲ್ಲಿ ಪ್ರಧಾನ ಮಂತ್ರಿಯಾಗಿದ್ದ ಇಂದಿರಾ ಗಾಂಧಿ 1971 ರಲ್ಲಿಯೇ ಭಾರತ ರತ್ನ ಪ್ರಶಸ್ತಿಯನ್ನು ಯಾಕೆ ಮತ್ತು ಹೇಗೆ ತೆಗೆದುಕೊಂಡರು ಗೊತ್ತೇ?!

ಇವೆಲ್ಲವೂ ಪ್ರಾರಂಭವಾಗಿದ್ದು ಒಂದೇ ಒಂದು ಕುತೂಹಲದಿಂದಷ್ಟೇ! ಸುಮ್ಮನೇ ಭಾರತ ರತ್ನವನ್ಜು ಯಾವ್ಯಾವ ಮಹೋದಯರು ತೆಗೆದುಕೊಂಡಿದ್ದಾರೆಂದು
ಕಣ್ಣಾಡಿಸುತ್ತಲಿದ್ದೆ! ಅದ್ಹೇಗೆ ಗಾಂಧಿ ಕುಟುಂಬದ ಆರು ಜನರಲ್ಲಿ ಮೂರು ಜನಕ್ಕೆ ಭಾರತ ರತ್ನ ಲಭಿಸಿತೆಂದೇ ತಿಳಿಯಲಿಲ್ಲ!!! ನೆಹರೂ 1955 ರಲ್ಲಿ, ಇಂದಿರಾ
1971 ರಲ್ಲಿ ಹಾಗೂ ರಾಜೀವ್ 1991 ರಲ್ಲಿ ಭಾರತ ರತ್ನವನ್ನು ಸ್ವೀಕರಿಸಿದ್ದರು! ಗೃಹ ಸಚಿವಾಲಯದ ವೆಬ್ ಸೈಟಿನಲ್ಲಿ ಭಾರತ ರತ್ನದ ಬಗೆಗೆ ಒಂದು ಚಿಕ್ಕದಾದ
ಟಿಪ್ಪಣಿಯಿತ್ತು! ಯಾರಿಗೆ ಭಾರತ ರತ್ನದಂತಹ ಶ್ರೇಷ್ಟ ಪ್ರಶಸ್ತಿಯನ್ನು ನೀಡಬಹುದೆಂದು!

ಯಾವುದೇ ಕ್ಷೇತ್ರದಲ್ಲಾಗಲೀ, ಮನುಕುಲದ ಒಳಿತಿಗಾಗಿ ಅಸಾಧಾರಣ ಸಾಮರ್ಥ್ಯ ಹಾಗೂ ಕರ್ತವ್ಯವನ್ನು ನಿಭಾಯಿಸಿದ್ದರೆ ಅತಹವರಿಗೆ ಭಾರತ ರತ್ನವನ್ನು ನೀಡಲಾಗುತ್ತದೆ.

ಇದನ್ನು ನೋಡಿದಾಗ ಮೊದಲನೆಯದಾಗಿ ನನಗೆ ಆಘಾತವಾಗಿತ್ತು! ಎರಡನೆಯದಾಗಿ, ಸ್ವತಃ ಪ್ರಧಾನ ಮಂತ್ರಿಯೇ ರಾಷ್ಟ್ರಪತಿಗೆ ತನಗೆ ಭಾರತ ರತ್ನ ನೀಡುವಂತೆ ಶಿಫಾರಸು ನೀಡಬಹುದೇ ಎಂಬ ಪ್ರಶ್ನೆಯೂ ಉದ್ಭವವಾಯಿತು!!ಅದಕ್ಕೆ ಉತ್ತರ ಸೂಕ್ಷ್ಮವಾಗಿ ಹೇಳುತ್ತೇನೆ! ಭಾರತದ ಪ್ರಧಾನ ಮಂತ್ರಿಯವರ ವೆಬ್ ಸೈಟಿನಲ್ಲಿದ್ದ ಮಾಹಿತಿಯ ಪ್ರಕಾರ, ನೆಹರೂ 1955 ರಲ್ಲಿ ಪ್ರಧಾನ ಮಂತ್ರಿಯಾಗಿದ್ದರು! ಇಂದಿರಾ 1971ರಲ್ಲಿ ಪ್ರಧಾನ ಮಂತ್ರಿಯಾಗಿದ್ದರು! ಅಲ್ಲಿಗೆ ಪ್ರಶ್ನೆ ಉದ್ಭವವಾಗಿದ್ದು ಸರಿಯೇ ಇದೆಯಲ್ಲವಾ?!

1. 1955 ರಲ್ಲಿ ಸ್ವತಃ ನೆಹರೂವೇ ತನಗೆ ಭಾರತ ರತ್ನವನ್ನು ನೀಡುವಂತೆ ಶಿಫಾರಸ್ಸು ಮಾಡಿದ್ದರಾ?!
2. 1971 ರಲ್ಲಿ ಅಪ್ಪನ ಹಾದಿಯನ್ನೇ ಹಿಡಿದ ಇಂದಿರಾಳೂ ಸ್ವಯಂ ಶಿಫಾರಸ್ಸು ನೀಡಿದ್ದಳಾ?!

ಈ ಎರಡು ಪ್ರಶ್ನೆಗಳನ್ನು PMO India ಕ್ಕೆ RTI ಅರ್ಜಿಯನ್ನು ಕಳುಹಿಸಿದ್ದೆ ನಾನು! ಎರಡು ತಿಂಗಳ ನಂತರ ನನ್ನೆಲ್ಲ ಪ್ರಶ್ನೆಗಳಿಗೂ ಹೀಗೆ ಉತ್ತರ
ಸಿಕ್ಕಿತ್ತು!

ಈ ಮೇಲಿನ ಎರಡೂ ಪ್ರಶ್ನೆಗಳಿಗೆ ಹೌದೆನ್ನುವಂತಹ ಉತ್ತರ ನೀಡಿದ್ದರು! 1955 ರಲ್ಲಿ ಹಾಗೂ 1971 ರಲ್ಲಿ ಯಾರಿಗೆ ಭಾರತ ರತ್ನ ಸಿಕ್ಕಿದೆಂದಾಗ ನೆಹರೂ ಹಾಗೂ ಇಂದಿರಾ ಗಾಂಧಿಯೆಂದರು! ನೆಹರೂ ಹಾಗೂ ಇಂದಿರಾ ರವರಿಗೆ ಭಾರತ ರತ್ನ ನೀಡಲು ಅವರ ಸಾಧನೆಗಳೇನು ಹಾಗೂ ಯಾರು ಶಿಫಾರಸ್ಸು ನೀಡಿದ್ದರು ಎಂಬ ಪ್ರಶ್ನೆಗೆ ಅದರ ಬಗ್ಗೆ ಯಾವುದೇ ದಾಖಲೆ ಲಭ್ಯವಿಲ್ಲವೆಂದರು! ಇಷ್ಟರಲ್ಲೇ ಭಾರತ ರತ್ನದ ಶಿಫಾರಸ್ಸನ್ನು ತಮಗೆ ತಾವೇ ಮಾಡಿಕೊಂಡಿದ್ದರೆಂದು ಧೃಢಪಟ್ಟಿತು!

ಅದಾದ ಮೇಲೂ ಸಹ, ಇನ್ನೊಂದು RTI ಅರ್ಜಿಯನ್ನು ನೀಡಿದೆ!

1. ಯಾವ ಸಾಧನೆಯ ಆಧಾರದ ಮೇಲೆ ಅತ್ಯುನ್ನತ ಮಟ್ಟದಲ್ಲಿ ನೆಹರೂ ಹಾಗೂ ಇಂದಿರಾವರು ಅಸಾಧಾರಣ ಸಾಧನೆಗೈದಿದ್ದರೆಂದು ಭಾರತ ರತ್ನಕ್ಕೆ ಭಾಜನರಾದರು?!

2. ಯಾವ ಸಾಧನೆಯ ಆಧಾರದ ಮೇಲೆ 1991 ರಲ್ಲಿ ರಾಜೀವ್ ಗಾಂಧಿಗೆ ಭಾರತ ರತ್ನವನ್ನು ನೀಡಲಾಯಿತು?!

3. ಎಷ್ಟು ಜನಕ್ಕೆ ಇಲ್ಲಿಯ ತನಕ ಭಾರತ ರತ್ನವನ್ನು ನೀಡಿದ್ದಾರೆ ಹಾಗೂ ಅದರಲ್ಲಿ ಎಷ್ಟು ಜನ ಕಾಂಗ್ರೆಸ್ ಪಕ್ಷದಲ್ಲಿದ್ದವರಾಗಿದ್ದರು?!

4. ಯಾವ ಪ್ರಧಾನ ಮಂತ್ರಿ 1971 ರಲ್ಲಿ ಇಂದಿರಾ ಗಾಂಧಿಗೆ ಭಾರತ ರತ್ನ ನೀಡಲು ಶಿಫಾರಸ್ಸು ಮಾಡಿದ್ದರು?!

5. ಯಾವ ಪ್ರಧಾನ ಮಂತ್ರಿ 1955 ರಲ್ಲಿ ನೆಹರೂವಿಗೆ ಭಾರತ ರತ್ನ ನೀಡಲು ಶಿಫಾರಸ್ಸು ಮಾಡಿದ್ದರು?!

6. ಭಾರತ ರತ್ನಕ್ಕೆ ಶಿಫಾರಸ್ಸನ್ನು ಯಾವ ಆಧಾರ ಅರ್ಹತೆಗಳ ಮೇಲೆ ಮಾಡುತ್ತಾರೆ?!

ಇರಲಿ! ನೆಹರೂ ಸ್ವಾತಂತ್ರ್ಯಕ್ಕೋಸ್ಕರ ಹೋರಾಡಿದ್ದರೆಂಬುದನ್ನು ಬಿಟ್ಟರೆ, ತದನಂತರದ ರಾಜಕೀಯ ಕ್ಷೇತ್ರದಲ್ಲಿ ಯಾವ ರೀತಿಯಲ್ಲಿ ನೋಡಿದರೂ ಸಹ
ಭಾರತ ರತ್ನ ಕೊಡಲು ಅರ್ಹರೇ ಅಲ್ಲವಾದರೂ, ಸ್ವತಂತ್ರ್ಯ ಹೋರಾಟಗಾರನೆಂಬ ಒಂದೇ ಕಾರಣಕ್ಕೆ ನೀಡಿದ್ದಾರಾದರೆ ಉಳಿದಂತಹ ಅದೆಷ್ಟೋ ಅಪ್ರತಿಮ ರಾಷ್ಟೀಯ ನಾಯಕರಿಗೆ ಭಾರತ ರತ್ನವನ್ನು ಯಾಕೆ ನೀಡಲಿಲ್ಲ ಎಂಬ ಪ್ರಶ್ನೆಗೆ ಉತ್ತರ?! ನೆಹರೂವಿನಿಗಿಂತ ಅದೆಷ್ಟೋ ನರಕ ಯಾತನೆ ಅನುಭವಿಸಿದ ಕ್ರಾಂತಿಕಾರಿಗಳು ಭಾರತ ರತ್ನಕ್ಕೆ ಅರ್ಹರಲ್ಲವೇ?!

ಬಿಡಿ! ನೆಹರೂವಿನ ಮಗಳಾದ ಇಂದಿರಾ ಗಾಂಧಿಯ ಸಾಧನೆಗಳೇನಿದ್ದವು?! ಇದೇ ಪ್ರಶ್ನೆಗೆ ಸ್ವತಃ RTI ಕೂಡ ‘ಸಾಧನೆಗಳಿಗೆ ಸಂಬಂಧಪಟ್ಟ
ಯಾವುದೇ ಮಾಹಿತಿಗಳಿಲ್ಲ’ ಎಂದುಬಿಟ್ಟಿತು! ಹಾಗಾದರೆ, ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಯನ್ನು ಯಾವ ಆಧಾರದ ಮೇಲೆ ಇಂದಿರಾಳಿಗೆ ನೀಡಿತೆಂದು ಗೊತ್ತೇ?!

1. ಇಂದಿರಾಳು 1917 ರಲ್ಲಿ ಜನ್ಮ ತಾಳಿದಳು!
2. ತನ್ನ ತಂದೆಯ ಅನಧಿಕೃತ ಪರ್ಸನಲ್ ಅಸಿಸ್ಟಾಂಟ್ ಆಗಿ ಕಾರ್ಯ ನಿರ್ವಹಿಸಿದ್ದಳು!
3.ತಂದೆಯ ಸಾವಿನ ನಂತರ 1964 ರಲ್ಲಿ ರಾಜ್ಯ ಸಭೆಯ ಸದಸ್ಯಳಾಗಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿಯವರ ಸಂಸತ್ತಿನಲ್ಲಿ ಮಾಹಿತಿ ಹಾಗೂ ಪ್ರಸರಣ ವಿಭಾಗದ ಮಂತ್ರಿಯಾಗಿ ಆಯ್ಕೆಯಾದಳು!
4. ಇಂದಿರಾ ತದನಂತದ 1966 ರಲ್ಲಿ ಪ್ರಧಾನ ಮಂತ್ರಿಯಾದಳು! ಆಗ ಕಾಂಗ್ರೆಸ್ ಎರಡು ಭಾಗಗಳಾಗುವ ಹಂತಕ್ಕೆ ಬಂದಿತ್ತು!
5.ಬ್ಯಾಂಕ್ ಗಳನ್ನೆಲ್ಲ ರಾಷ್ಟ್ರೀಯವಾಗಿಸಿದಳು!

ಇದನ್ನೆಲ್ಲ ಹೊರತು ಪಡಿಸಿ, ಅದೆಷ್ಟೋ ಹಿಂದುಗಳ ಮಾರಣ ಹೋಮ ನಡೆಸಿದಳು! ಅಮೃತಸರದ ಸ್ವರ್ಣ ದೇಗುಲಕ್ಕೆ ಬೂಟುಗಾಲಿನಲ್ಲಿ ಪೋಲಿಸರನ್ನು ನುಗ್ಗಿಸಿದ ಆಕೆ . . . . .

ಹೋಗಲಿ ಬಿಡಿ! 1971 ಎ ತನಕದ ಆಕೆಯ ಸಾರ್ವಜನಿಕ ಜೀವನದಲ್ಲಿಯೂ ನನಗೆ ಗಣನೆಗೆ ತೆಗೆದುಕೊಳ್ಳುವಂತಹ ಯಾವ ಸಾಧನೆಯೂ ಕಾಣಲಿಲ್ಲ! ಕೇವಲ ಐದು ವರ್ಷ ಪ್ರಧಾನ ಮಂತ್ರಿಯಾದರೆ ಭಾರತ ರತ್ನಕ್ಕೆ ಅರ್ಹರಾಗುತ್ತಾರೆಯೇ?! ಹೌದೆನ್ನುವುದಾದರೆ ಪ್ರತಿ ಪ್ರಧಾನ ಮಂತ್ರಿಗೂ ಸಿಗಬೇಕಾದುದು ನ್ಯಾಯವಲ್ಲವೇ?!

ಇದನ್ನು ಹೊರತು ಪಡಿಸಿ, ರಾಜೀವ್ ಗಾಂಧಿಗೆ ಯಾವ ಆಧಾರದ ಮೇಲೆ ನೀಡಿದರು ಇದೇ ಪ್ರಶಸ್ತಿಯನ್ನು?! ಸಹಸ್ರ ಸಿಖ್ಖರ ಹತ್ಯೆ ಗೈದಿದ್ದಕ್ಕಾ?! ಇಟಲಿಯವಳನ್ನು ವರಿಸಿದ್ದಕ್ಕಾ?! ಸ್ವಿಸ್ ಬ್ಯಾಂಕ್ ಖಾತೆಯಲ್ಲಿ 200 ಕೋಟಿ ಜಮಾವಣೆ ಹೂಡಿದ್ದಕ್ಕಾ?!

ಒಂದಷ್ಟು ಸಾಕ್ಷಿಗಳು!

1. DNA ಲೇಖನ, Ivarta Blog ಹಾಗೂ Outlook ಲೇಖನ ಇಂದಿರಾ ಗಾಂಧಿ ಸ್ವತಃ ತನಗೆ ಭಾರತ ರತ್ನ ನೀಡುವಂತೆ ಶಿಫಾರಸ್ಸು
ಮಾಡಿದ್ದಳೆಂಬುದನ್ನು ಧೃಢೀಕರಿಸಿದೆ!

DNA Article – Check Out

OutLookIndia – Original Link

Times Of India – Read here

Ivarta Blog – Read here

2. Times Of India ದ ವರದಿಯ ಪ್ರಕಾರ ಇಂದಿರಾಗಾಂಧಿಗೆ ಭಾರತ ರತ್ನ ನೀಡುವಂತೆ ಶಿಫಾರಸ್ಸು ಮಾಡಿದ್ದು ವಿ.ವಿ.ಗಿರಿ! ಅದೂ, ಬಾಂಗ್ಲಾದ ಜೊತೆ ಯುದ್ಧವಾದ ನಂತರ!

3. RTI ಯವರ ಹತ್ತಿರ ಇದಾವುದರ ಬಗ್ಗೆಯೂ ದಾಖಲೆಗಳೇ ಇಲ್ಲ!

4. ಇದಲ್ಲದೇ, 1955, ಜುಲೈ 15 ರಂದು ರಾಜೇಂದ್ರ ಪ್ರಸಾದ್ ಮಾಡಿದ ಭಾಷಣದಲ್ಲಿ ಸೂಚ್ಯವಾಗಿ ತಿಳಿಸಿದ್ದರು, ನೆಹರೂ ಸ್ವತಃ ಶಿಫಾರಸ್ಸು ನೀಡಿದ್ದರೆಂದು!

5. ವಿ.ವಿ.ಗಿರಿ ಯವರಿಗೆ ಭಾರತ ರತ್ನ ನೀಡಲು ಶಿಫಾರಸ್ಸು ನೀಡಿದ್ದು ಇಂದಿರಾ! ಅದೇ ರೀತಿ, ಇಂದಿರಾ ಗೆ ಭಾರತ ರತ್ನ ನೀಡಲು ಶಿಫಾರಸ್ಸು ನೀಡಿದ್ದು ವಿ.ವಿ.ಗಿರಿ! ನಂಬಿ ಕೊಟ್ಟವರಾದರು ಕೋಡಂಗಿಯಷ್ಟೇ!

“Excerpts from aforementioned Speech of Dr. rajendra Prasad on July 15th , 1955 after return of Pandit Nehru from the grand Europe trip – “In doing so, for once, I may be said to be acting unconstitutionally, as I am taking this step on my own initiative and without any recommendation or advice from my Prime Minister; but I know that my action will be endorsed most enthusiastically…”

About the contention the author of the blog makes in assuming 5 yr span or 1971 as ridiculously small contributions – he/she has made sure that his/her limits are not just mediocre & indoctrinated sense of curiosity . 1971 carved out a country , gave an insight into what is a just system of treating PoWs , strengthened our positioning against the US bullying – & surprisingly it was also one of the very few moments when the varied confusions around legitimacy , sovereignty ,Human Rights /Religious identities didn’t stop Indira from having the clarity that was needed. AB Vajp. hailed her as Durga after this .

And as in Nehru’ (Indira’)s Case , here too , another gentleman named V V Giri did the lobbying.”

 

ಇದೊಂದು ಅಪಮಾನ!

ತಮಗೆ ತಾವೇ ಶಿಫಾರಸ್ಸು ಕೊಟ್ಟುಕೊಂಡು ಅದೆಷ್ಟು ಸುಲಭವಾಗಿ ಅಧಿಕಾರ ಹಿಡಿದ ಕೆಲವೇ ವರ್ಷಗಳಲ್ಲಿ ಭಾರತ ರತ್ನ ದೊರಕಿತಲ್ಲ ನೆಹರೂ ವಂಶಕ್ಕೆ! ವ್ಹಾ! ಅದೇ, ಸಂವಿಧಾನ ರಚನೆ ಮಾಡಿ ದೇಶದ ಸುಭದ್ರತೆಗೆ ನೆಲೆ ಒದಗಿಸಿಕೊಟ್ಟ ಅಂಬೇಡ್ಕರ್ ರಿಗೆ ಮಾತ್ರ 40 ವರ್ಷ ತೆಗದುಕೊಂಡಿತು! ಆದರೆ, ರಾಜೀವ್ ಗಾಂಧಿ ಹಾಗೂ ಅಂಬೇಡ್ಕರ್ ರವರಿಗೆ ಭಾರತ ರತ್ನ ನೀಡಿದ ವರ್ಷ 1991!!

ಇದು ಭಾರತ ರತ್ನವೆಂಬ ಘನತೆಗೆ ಮಾಡಿದ ಅಪಮಾನವಲ್ಲವೇ?!

– ತಪಸ್ವಿ

Tags

Related Articles

Close