ಅಂಕಣ

ಕಾಶಿಯ ಸರ್ವೋಚ್ಚ ಪರಿಷದ್ ಅಶೋಕನನ್ನು ಚಾಂಡಲನೆಂದು ಘೋಷಿಸಿದ್ದರೂ ಇತಿಹಾಸಕಾರರು ಅವನನ್ನು ಮಹಾನ್ ಸಾಮ್ರಾಟನೆಂಬಂತೆ ಬಿಂಬಿಸಿದ್ದೇಕೆ?!

ಅಖಂಡ ಭಾರತದ ಪರಿಕಲ್ಪನೆಯನ್ನು ಸಾಕಾರಗೊಳಿಸಿದ ಸಾಮ್ರಾಟ ಕನಿಷ್ಕರಂತಹ ಬೌದ್ದ ಧರ್ಮ ಪ್ರತಿಪಾದಕರಿದ್ದರೂ, ಅಶೋಕನ್ನನೇ ಮಹಾನ್ ರಾಜನೆಂದೇಕೆ ಬಿಂಬಿಸಲಾಯಿತು? ಸ್ವತಃ ಅಶೋಕನ ತಾತ ಚಂದ್ರಗುಪ್ತ ಮೌರ್ಯ ಅಖಂಡ ಭಾರತಕ್ಕೆ ಪಂಚಾಗ ಇಟ್ಟವನಾದರೂ ಆತನ ಹೆಸರನ್ನು ಎಲ್ಲಿಯೂ ಪ್ರಸ್ತಾಪವಾಗದಂತೇಕೆ ನೋಡಿಕೊಳ್ಳಲಾಯಿತು? ಸ್ವತಃ ರಾಮ ನಾಮ ಜಪ ಮಾಡುತ್ತಿದ್ದ ಗಾಂಧೀಜಿಯವರು ರಾಮನ ಕ್ಷಾತ್ರ ಗುಣದ ಭೋಧನೆ ಮಾಡದೆ ಬುದ್ದನ ಅಹಿಂಸೆಯನ್ನು ಪ್ರತಿಪಾದಿಸಿದ್ದೇಕೆ?

ಎಲ್ಲವೂ ಬ್ರಿಟಿಷರಿಂದಾಗಿ ಮತ್ತು ಬ್ರಿಟಿಷರಿಗಾಗಿ. ಭಾರತದಂತಹ ಹುಟ್ಟಾ ಕ್ಷಾತ್ರ ತೇಜದ ನಾಡನ್ನು ನಪುಂಸಕನನ್ನಾಗಿಸಿ ಶತ ಶತಮಾನಗಳವರೆಗೆ ದಬ್ಬಾಳಿಕೆ ಮಾಡಲಿಕ್ಕೆ. ಅದಕ್ಕಾಗಿ ಅವರು ಆಯ್ದುಕೊಂಡದ್ದು ಯಾರಿಗೂ ಬೇಡವಾಗಿದ್ದ, ಅಕ್ಷರಶ ಮರೆತೇ ಹೋಗಿದ್ದ ಅಶೋಕನನ್ನು. ರಾಕ್ಷಸೀ ರೂಪದ “ಚಂಡ” ಅಶೋಕನನ್ನು ಮಹಾನ್ ಸಾಮ್ರಾಟನನ್ನಾಗಿಸಿದ್ದು ಭಾರತದ ಮೇಲೆ ನಿರಂತರ ದಬ್ಬಾಳಿಕೆ ಮಾಡಲಿಕ್ಕಾಗಿ. ಬ್ರಿಟಿಷರ ಕಾಲದ ಇತಿಹಾಸಕಾರರು ಅಶೋಕನ್ನನು ಮುನ್ನೆಲೆಗೆ ತಂದು ಇತಿಹಾಸವನ್ನು ತಿರುಚಿದ್ದರು.

ಅಶೋಕನ ಬಗ್ಗೆ ನಿಮಗೆ ಗೊತ್ತಿಲ್ಲದ ವಿಷಯಗಳಿವೆ ಅವೇನೆಂದರೆ:

ಅಶೋಕ ಅತ್ಯಂತ ಕುರೂಪಿಯಾಗಿದ್ದ ಮಾತ್ರವಲ್ಲ ಅಶೋಕನ ತಂದೆ ಬಿಂದುಸಾರ ತನ್ನ ಮಗನನ್ನು ದ್ವೇಶಿಸುತ್ತಿದ್ದ.

274 BC ಯಲ್ಲಿ ಬಿಂದುಸಾರನ ಮರಣ ಹೊಂದುತ್ತಾನೆ ಆ ಸಮಯದಲ್ಲಿ ಸುಶೀಮ(ಬಿಂದುಸಾರನ ಪ್ರಥಮ ಪುತ್ರ) ಯುದ್ದನಿರತನಾಗಿರುತ್ತಾನೆ. ತಂದೆಯ ಮರಣದ ವಿಷಯ ತಿಳಿದು ಪಾಟಲೀಪುತ್ರಕ್ಕೆ ಬರುವ ಮುನ್ನವೇ ಅಶೋಕ ಗ್ರೀಕರೊಡಗೂಡಿ ಸಿಂಹಾಸನವನ್ನೇರುತ್ತಾನೆ.

ಭ್ರಾತೃ ಮತ್ಸರ ಹೊಂದಿದ್ದ ಅಶೋಕ ಸುಶೀಮನನ್ನು ಮೋಸದಿಂದ ಕೊಲೆಮಾಡುತ್ತಾನೆ ಮಾತ್ರವಲ್ಲ, ತನ್ನ ಸ್ವಂತ ತಮ್ಮನ್ನನ್ನು ಹೊರತು ಪಡಿಸಿ 99 ಮಲ
ಸಹೋದರರ ಹತ್ಯೆ ಮಾಡುತ್ತಾನೆ. ತನಗೆ ನಿಷ್ಟಾವಂತರಲ್ಲದ 500 ಮಂತ್ರಿಗಳನ್ನು ಹತ್ಯೆ ಮಾಡಿದ್ದ ತಥಾಕಥಿತ ಸಾಮ್ರಾಟ ಅಶೋಕ.

ಅಶೋಕನ ಅತ್ಯಂತ ಕ್ರೂರ, ಕಾಮುಕ ಮತ್ತು ಸದಾ ಸಿಟ್ಟಿನ ಸ್ವಭಾವಕ್ಕಾಗಿ ಅತನಿಗೆ “ಚಂಡ ಅಶೋಕ”ನೆಂಬ ಹೆಸರು ಬಂದಿರುತ್ತದೆ.

ಆತನ ಅರಮನೆಯಲ್ಲಿ 100 ಜನ ಮಹಿಳೆಯರಿದ್ದರಂತೆ ಅವರಲ್ಲಿ ಯಾರಾದರೊಬ್ಬರೂ ಆತನಿಗೆ ಅಪಮಾನ ಮಾಡಿದರೆ ಅವರನ್ನ ಜೀವಂತವಾಗಿ ಸುಡುತ್ತಿದ್ದನಂತೆ.

ತನ್ನ ವಿರೋಧಿಗಳಿಗೆ ಯಮ ಯಾತನೆಗಳನ್ನು ಕೊಡಲು ಆತ ತನ್ನ ಮಹಲಿನಲ್ಲಿ ಯಾತನಾ ಕೋಣೆಯನ್ನು ಅಣಿಗೊಳಿಸಿದ್ದನಂತೆ. ಈ ಕೋಣೆಯನ್ನು ‘ಭೂಮಿಯ ನರಕ’ ಅಥವಾ ‘ಅಶೋಕನ ನರಕ’ ಎಂದು ಕರೆಯಲಾಗುತ್ತಿತ್ತು. ಈ ಕೋಣೆಯನ್ನು ಅವನು ಹೇಗೆ ನಿರ್ಮಾಣ ಮಾಡಿದ್ದನೆಂದರೆ ಹೊರಗಿನಿಂದ ನೋಡುವವರಿಗೆ ಅದೊಂದು ಸುಂದರ ಮಹಲಿನಂತೆ ಕಾಣುತ್ತಿತ್ತು, ಆದರೆ ಒಳಗೆ ಅಕ್ಷರಶ ನರಕವಿರುತ್ತಿತ್ತು.

ಇವನ ಎಲ್ಲಾ ವಿಕೃತ ಪಾಪ ಕೃತ್ಯಗಳಲ್ಲಿ ಇವನಿಗೆ ಬೆನ್ನುಲುಬಾಗಿ ಸಹಾಯಮಾಡುತ್ತಿದ್ದವ “ಗಿರಿಕಾ” ಎಂಬ ಹೆಸರಿನ ಕಟುಕ. ಇವನೆಷ್ಟು ಕಟುಕನೆಂದರೆ ಅಶೋಕನ ಬಳಿ ಕೆಲಸ ಮಾಡಬಾರದೆಂದು ಹೇಳಿದ್ದಕ್ಕೆ ತನ್ನ ಹೆತ್ತವರನ್ನೇ ಕೊಂದು ಹಾಕಿದ್ದ. ಅಶೋಕನ ಎಲ್ಲಾ ವಿಕೃತ ಕೆಲಸಗಳಲ್ಲಿ ಗಿರಿಕಾ ಆತನಿಗೆ ಸಹಾಯ ಮಾಡುತ್ತಿದ್ದ.

ಅಶೋಕನ ಕಾಲದಲ್ಲಿ ಜನರು ರೌರವ ನರಕ ಅನುಭವಿಸುತ್ತಿದ್ದರು. ಅಶೋಕ ತನ್ನ ಪ್ರಜೆಗಳಿಗೆ ಸತ್ತ ಪ್ರಾಣಿ ಮತ್ತು ಜನರ ತಲೆಬುರುಡೆಯನ್ನು ಮಾರುವಂತೆ ಆಜ್ಞೆ ಮಾಡುತ್ತಿದ್ದನಂತೆ. ಯಾರು ಅವನಾಜ್ಞೆಯನ್ನು ಪಾಲಿಸುತ್ತಿರಲಿಲ್ಲವೋ ಅವರಿಗೆ ಅಶೋಕನ ನರಕದಲ್ಲಿ ಸಾಕ್ಷಾತ್ “ನರಕ ದರ್ಶನ” ಮಾಡಿಸುತ್ತಿದ್ದ. ಬಿಸಿ ಲೋಹವನ್ನು ಅವರ ಬಾಯಿಗೆ ಸುರಿಯುತ್ತಿದ್ದ, ಕಬ್ಬಿಣದ ಸಲಾಖೆಗಳಿಂದ ಅವರಿಗೆ ತಿವಿಯುತ್ತಿದ್ದ. ಅವರು ನೋವಿನಿಂದ ನರಳಾದುವಾಗ ತಾನು ವಿಕೃತ ಆನಂದ ಹೊಂದುತ್ತಿದ್ದ.

ಕಳಿಂಗ ಯುದ್ದಕ್ಕೂ ಅಶೋಕನ ಬೌದ್ದ ಧರ್ಮ ಸ್ವೀಕಾರಕ್ಕೂ ಸಂಬಂದವೇ ಇರಲಿಲ್ಲವೆನ್ನಲಾಗುತ್ತದೆ. ವಾಸ್ತವವಾಗಿ ಕಳಿಂಗ ಯುದ್ದಕ್ಕೆ ಎರಡು ವರ್ಷ ಮೊದಲೇ ಆತ ಬೌದ್ದ ಧರ್ಮ ಸ್ವೀಕಾರ ಮಾಡಿಯಾಗಿತ್ತು. ಕಾಶಿಯ ಸರ್ವೋಚ್ಚ ಪರಿಷದ್ ಅಶೋಕನನ್ನು “ಚಾಂಡಾಲ” ನೆಂದು ಘೋಷಿಸಿತ್ತು. ಭರತ ಚಕ್ರವರ್ತಿಯ ಸಂಧಿಯ ಅನುಸಾರ ತನ್ನ ಸಹೋದರರನ್ನು ವಧೆ ಮಾಡಿ ಸಿಂಹಾಸನವನ್ನೇರುವಂತಿಲ್ಲ. ಆದರೆ ಅಶೋಕ ಈ ಸಂಧಿಯನ್ನು ಮುರಿದಿದ್ದ ಆದ್ದರಿಂದ ಕಾಶಿಯು ಆತನನ್ನು ಚಾಂಡಾಲನೆಂದು ಕರೆದಿತ್ತು.

ಇದೇ ಕಾರಣಕ್ಕಾಗೆ ಆತ ಬ್ರಾಹ್ಮಣರನ್ನು ದ್ವೇಶಿಸುತ್ತಿದ್ದ. ವೈದಿಕ ಪರಂಪರೆ, ಸಂಸ್ಕೃತ ಮತ್ತು ಬ್ರಾಹ್ಮಣತ್ವವನ್ನು ಉನ್ಮೂಲನೆ ಮಾಡಿದ್ದ. ವೈದಿಕ ಮಂದಿರ ಮತ್ತು ಗುರುಕುಲಗಳನ್ನು ಪುಡಿಗಟ್ಟಿದ್ದ. ಇಡಿಯ ವೈದಿಕ ಪರಂಪರೆಯನ್ನೇ ಸರ್ವನಾಶ ಮಾಡಿ ಬಿಟ್ಟಿದ್ದ ಅಶೋಕ. ತನ್ನನ್ನು ಬೌದ್ಧ ಧರ್ಮದ ಅನುಯಾಯಿಯೆಂದು ಘೋಷಿಸಿಕೊಂಡಿದ್ದ ಆದರೆ “ಧಮ್ಮ”ದಲ್ಲಿ ಆಸ್ತೆ ಹೊಂದಿರಲಿಲ್ಲ ಅಶೋಕ.

ನಿರ್ಗ್ರಂಥ ಪ್ರತಿಪಾದಕನೊಬ್ಬ ಬುದ್ದ, ಮಹಾವೀರನ ಚರಣ ವಂದನೆ ಮಾಡುವುದನ್ನು ಚಿತ್ರಿಸಿದ್ದಕ್ಕೆ ಆತನನ್ನು ಆತನ ಪರಿವಾರದೊಂದಿಗೆ ಜೀವಂತ ಸುಟ್ಟಿದ್ದ. ಮಾತ್ರವಲ್ಲ ಯಾರು ನಿರ್ಗ್ರಂಥ ಪ್ರತಿಪಾದಕರ ತಲೆ ಕಡಿಯುತ್ತಾರೋ ಅವರಿಗೆ ಚಿನ್ನದ ವರಾಹಗಳನ್ನು ಕೊಡಲಾಗುವುದೆಂದು ಘೋಷಣೆ ಹೊರಡಿಸಿದ್ದ. ಪುನ್ದ್ರವರ್ಧನದಲ್ಲಿದ್ದ 18000 ಅಜೀವಿಕಾ ಅನುಯಾಯಿಗಳನ್ನು ಕೊಲ್ಲಿಸಿದ್ದ ಅಶೋಕ. ಕಳಿಂಗ ಯುದ್ದದಲ್ಲಿ ಮಡಿದ ಸೈನಿಕರ ಸಂಖ್ಯೆ 100000 ಆದರೆ ಹಸಿವಿನಿಂದ ಸತ್ತವರ ಸಂಖ್ಯೆ 150000 ಎಂದೆನ್ನಲಾಗುತ್ತದೆ. ಕಳಿಂಗ ಯುದ್ದ ಎಷ್ಟು ಭೀಕರವಾಗಿತ್ತೆಂದರೆ ಪಕ್ಕದ ದಯಾ ನದಿಯಲ್ಲಿ ನೀರಿಗೆ ಬದಲಾಗಿ ರಕ್ತವೇ ಹರಿಯುತ್ತಿತ್ತೆನ್ನಲಾಗುತ್ತದೆ.

ತಾತ ಚಂದಗುಪ್ತ ಮೌರ್ಯ ಕಟ್ಟಿದ ಅಖಂಡ ಭಾರತವನ್ನು ಸರ್ವನಾಶ ಮಾಡಿದ ಶ್ರೇಯ ಅಶೋಕನಿಗೆ ಸಲ್ಲುತ್ತದೆನ್ನುತ್ತಾರೆ ಬಲ್ಲವರು. ಆತನ ಆಳ್ವಿಕೆಯಲ್ಲಿ ಅರಾಜಕತೆ ಮಿತಿ ಮೀರಿ ಹೊಗಿತ್ತು. ಜನರು ತಮ್ಮ ತಮ್ಮಲ್ಲೇ ಜಗಳವಾಡುತ್ತಿದ್ದರು. ಅಶೋಕ ಸಾಯುವ ಮುಂಚೆಯೇ ಮೌರ್ಯ ಸಾಮ್ರಾಜ್ಯದ ಪತನವಾಗಲು ಅಶೋಕನ ಮಿತಿ ಮೀರಿದ ಕ್ರೌರ್ಯವೇ ಕಾರಣವೆನ್ನುತ್ತಾರೆ ಇತಿಹಾಸಕಾರರು. ಇಂತಹ ಚಂಡ ಅಶೋಕನನ್ನು ಬೌದ್ದ ಧರ್ಮದ ಅನುಯಾಯಿ ಅಹಿಂಸೆಯ ಪ್ರತಿಪಾದಕನೆಂದು ಮಂಕು ಬೂದಿ ಎರಚಿದರು ಬ್ರಿಟಿಷರು ಮತ್ತು ಅವರ ಬಾಲಂಗೋಚಿಗಳು.

ಕ್ಷತ್ರಿಯ ನಾಡಾದ ಭಾರತದ ಮೇಲೆ ದಬ್ಬಾಳಿಕೆ ಮಾಡುವುದು ಸುಲಭವಲ್ಲ ಎಂದು ಬ್ರಿಟಿಷರಿಗೆ ಗೊತ್ತಿತ್ತು. ಅದಕ್ಕೇ ಉಪಾಯವಾಗಿ ಬುದ್ದ, ಅಶೋಕ, ಗಾಂಧಿಯನ್ನು ಮುನ್ನೆಲೆಗೆ ತಂದು ಅಹಿಂಸೆ ಅಹಿಂಸೆ ಎಂಬ ಜಪ ಮಾಡಿಸಿ ಭಾರತೀಯರನ್ನು ನಪುಸಂಕರನ್ನಾಗಿಸಿ ಅಜೀವನ ಪರ್ಯಂತ ಭಾರತದ ಮೇಲೆ ದಬ್ಬಾಳಿಕೆ ನಡೆಸುವುದು ಅವರ ಮನದಿಂಗಿತ ವಾಗಿತ್ತು. ಆದರೆ ಭಗತ್, ಸಾವರ್ಕರ್, ಮದನ್ ಲಾಲ್, ಸುಭಾಸ್ ಚಂದ್ರ, ಲಾಲ ಲಜಪತ್ ರಾಯ್ ಅಂತಹ ಕ್ರಾಂತಿಕಾರಿಗಳು ಬ್ರಿಟಿಷರ ಆಸೆಯನ್ನು ಮಣ್ಣುಗೂಡಿಸಿದರು. ಎಷ್ಟೆಂದರೂ ಕ್ಷಾತ್ರ ತೇಜದ ನಾಡಲ್ಲವೇ? ರಕ್ತದ ಗುಣ ಬಿಟ್ಟು ಹೋಗುವುದಿಲ್ಲ. ಭಾರತೀಯ ಕ್ರಾಂತಿಕಾರಿಗಳ ಕ್ಷಾತ್ರ ತೇಜಕ್ಕೆ ಹೆದರಿ ಬಾಲ ಮುದುರಿಕೊಂಡು ಓಡಿ ಹೋದರು ಬ್ರಿಟಿಷರು.

ಅವರೇನೋ ಹೋದರು ಆದರೆ ಅವರ ಬಾಲಂಗೋಚಿಗಳನ್ನು ದೇಶ ಮತ್ತು ಧರ್ಮ ಒಡೆಯಲು ಬಿಟ್ಟು ಹೋದರು. ಆದರಿದು ರಾಮ-ಕೃಷ್ಣ-ಮಾಹಾಕಾಲ-ದುರ್ಗೆಯರ ಜನ್ಮ ಭೂಮಿ. ಧರ್ಮ ಮತ್ತು ಮಾತೃ ಭೂಮಿಯ ರಕ್ಷಣೆಗಾಗಿ ಹಿಂದೆಯೂ ಶಸ್ತ್ರ ಹಿಡಿಯಲಾಗಿದೆ ಅಗತ್ಯ ಬಿದ್ದರೆ ಮುಂದೆಯೂ ಹಿಡಿಯಲಾಗುವುದು ಸಂಶಯವೇ ಇಲ್ಲ.

-Sharvari

Tags

Related Articles

Close