ಪ್ರಚಲಿತ

ಭೋಜಶಾಲಾ ಮಸೀದಿಯ ಕೆಳಗೆ ಹುದುಗಿದೆ ಸರಸ್ವತಿ ಮಂದಿರ ಎಂಬ ಸತ್ಯ

ಹಿಂದೂಗಳು, ಹಿಂದೂ ಧರ್ಮ, ಹಿಂದೂ ಧಾರ್ಮಿಕತೆ, ನಂಬಿಕೆಗಳ ಮೇಲೆ ಅನ್ಯ ಧರ್ಮೀಯರಿಂದ ಸಾಕಷ್ಟು ಆಕ್ರಮಣಗಳು ನಡೆದಿವೆ, ನಡೆಯುತ್ತಲೇ ಇದೆ ಎನ್ನುವುದು ದುರಂತ.

ಹಿಂದೂ ಧಾರ್ಮಿಕ ಕಟ್ಟಡಗಳನ್ನು ಕೆಡಹಿ, ಅವುಗಳ ಮೇಲೆ ಅನ್ಯ ಧರ್ಮದ ಕಟ್ಟಡಗಳನ್ನು ನಿರ್ಮಾಣ ಮಾಡುವುದು, ಹಿಂದೂ ದೇವರುಗಳನ್ನು ಅವಹೇಳನ ಮಾಡುವುದು, ಆ‌ ಮೂಲಕ ಹಿಂದೂ ಧರ್ಮ, ಹಿಂದೂಗಳ ಮೇಲೆ ಸವಾರಿ ಮಾಡುವ ಇಸ್ಲಾಂ ಸೇರಿದಂತೆ ಇನ್ನೂ ಕೆಲವು ಧರ್ಮಗಳ ಬಗ್ಗೆ, ಅವುಗಳ ಕ್ರೌರ್ಯದ ಕುರಿತು ನಾವು ಇತಿಹಾಸದಲ್ಲಿ ಗಮನಿಸಿರಬಹುದು.

ಹಿಂದೂ ದೇಗುಲಗಳನ್ನು ಕೆಡವಿ, ಅದರ ಜಾಗದಲ್ಲಿ ಮಸೀದಿ ಕಟ್ಟಿದ ಮುಸಲ್ಮಾನರ ಆ ದಾರ್ಷ್ಠ್ಯ ಸದ್ಯ ಒಂದೊಂದಾಗಿ ಬೆಳಕಿಗೆ ಬರುತ್ತಿದೆ. ಅಯೋಧ್ಯೆಯಲ್ಲಿ ಮುಸಲ್ಮಾನರ ದಾಳಿಗೆ ತುತ್ತಾಗಿ, ಬಾಬ್ರಿ ಮಸೀದಿಯ ಅಡಿಯಲ್ಲಿ ಸಿಲುಕಿದ್ದ ಪ್ರಭು ಶ್ರೀರಾಮನ ಜನ್ಮಭೂಮಿ ಮರಳಿ ಹಿಂದೂಗಳಿಗೆ ಸಿಕ್ಕ ಬಳಿಕ, ಹಾಗೆಯೇ, ಅಲ್ಲಿ ಭವ್ಯ ಶ್ರೀರಾಮ ಮಂದಿರ ನಿರ್ಮಾಣವಾದ ಬಳಿಕ ಇಂತದ್ದೇ ಮುಸಲ್ಮಾನರ ದರ್ಪಕ್ಕೆ ಒಳಗಾಗಿ ಮಸೀದಿಗಳ ಅಡಿಯಲ್ಲಿ ಹುದುಗಿ ಹೋಗಿದ್ದ ಹಿಂದೂ ಮಂದಿರಗಳೆಂಬ ‌ಸತ್ಯಗಳು ಮತ್ತೆ ಬೆಳಕಿಗೆ ಬರಲಾರಂಭಿಸಿವೆ ಎನ್ನುವುದು ಸಂತಸದ ವಿಷಯ.

ಸದ್ಯ ಮಧ್ಯ ಪ್ರದೇಶದ ಧಾರ್ ಎಂಬಲ್ಲಿರುವ ವಿವಾದಿತ ಭೋಜಶಾಲಾ ಮಸೀದಿಯ ಬಗೆಗೂ ಇಂತಹ ಒಂದು ಸ್ಪೋಟಕ ಸಂಗತಿ ಬಯಲಾಗಿದೆ. ಈ ಮಸೀದಿ ಹಿಂದೆ ಸರಸ್ವತಿ ಮಂದಿರವಾಗಿತ್ತು ಎನ್ನುವ ಮಾಹಿತಿಯೊಂದನ್ನು ಖ್ಯಾತ ಇತಿಹಾಸ ತಜ್ಞ ಕೆ. ಕೆ. ಮಹಮ್ಮದ್ ಬಿಚ್ಚಿಟ್ಟಿದ್ದಾರೆ.

ಸದ್ಯ ಈ ವಿವಾದ ನ್ಯಾಯಾಲಯದಲ್ಲಿದ್ದು, ಇಲ್ಲಿ ಪ್ರಕಟವಾಗುವ ತೀರ್ಪಿಗೆ ಎರಡೂ ಧರ್ಮದವರು ಬದ್ಧರಾಗಿರಬೇಕು ಎಂದು ಅವರು ಮನವಿ ಮಾಡಿದ್ದಾರೆ. ಈ ಪ್ರದೇಶದಲ್ಲಿ ಮೊದಲು ಸರಸ್ವತಿ ಮಂದಿರ ನಿರ್ಮಾಣವಾಗಿತ್ತು.‌ ಬಳಿಕ ಅದನ್ನು ಕೆಡಹಿ ಅಲ್ಲಿ ಮಸೀದಿ ನಿರ್ಮಿಸಿರುವುದಾಗಿದೆ‌. ಈ ಪ್ರಕರಣ ನ್ಯಾಯಾಲಯದಲ್ಲಿ ಇದ್ದು, ಎರಡೂ ಧರ್ಮದ ಜನರು ಸೌಹಾರ್ದತೆಯಿಂದ ತೀರ್ಪನ್ನು ಪಾಲಿಸುವಂತೆ ಅವರು ಹೇಳಿದ್ದಾರೆ.

ನಮ್ಮ ದೇಶದ ಕಾಶಿ ಮತ್ತು ಮಥುರಾದಲ್ಲಿ ಸಹ ದೇಗುಲ ಕೆಡಹಿ ಮಸೀದಿ ನಿರ್ಮಾಣ ಮಾಡಲಾಗಿದ್ದು, ಅಯೋಧ್ಯೆಯ ಬಳಿಕ ಈ ಸ್ಥಳಗಳು ಸಹ ನ್ಯಾಯ ಪಡೆಯುವುದನ್ನು ಭಾರತ ಎದುರು ನೋಡುತ್ತಿದೆ. ಇಲ್ಲಿರುವ ಮಸೀದಿಗಳು ಮಹಮ್ಮದ್ ಪೈಗಂಬರ್‌ನಿಗೆ ಸೇರಿರುವುದಲ್ಲ. ಹಾಗಾಗಿ ಇವುಗಳನ್ನು ಬದಲಿಸಬಹುದು. ಆದರೆ ಇಲ್ಲಿ ಹಿಂದೂ ದೇವರುಗಳ ಪ್ರತಿಷ್ಠೆ ಬಹಳ ಹಿಂದೆಯೇ ಆಗಿರುವುದಾಗಿದೆ. ಹಾಗಾಗಿ ಅವುಗಳನ್ನು ಬದಲಾಯಿಸಲು ಅಸಾಧ್ಯ ಎಂಬ ಮಾಹಿತಿಯನ್ನು ಸಹ ಅವರು ಇದೇ ಸಂದರ್ಭದಲ್ಲಿ ನೀಡಿದ್ದಾರೆ.

Tags

Related Articles

Close