ಪ್ರಚಲಿತ

ಕಾಂಗ್ರೆಸ್ ಗೆ ಬಿಗ್ ಶಾಕ್! ಕಾಂಗ್ರೆಸ್ ನ ಒಂದು ವಿಕೆಟ್ ಪತನ.! ರಾಜೀನಾಮೆ ನೀಡಿದ ಕಾಂಗ್ರೆಸ್ ಶಾಸಕ..?

ಈ ಬಾರಿ ಭಾರತೀಯ ಜನತಾ ಪಕ್ಷ ಸರ್ಕಾರ ರಚನೆಯನ್ನು ಮಾಡಿಯೇ ಸಿದ್ದ ಎಂದು ಪಣ ತೊಟ್ಟಿರುವ ಬೆನ್ನಲ್ಲೇ ರಾಜ್ಯ ರಾಜಕೀಯದಲ್ಲಿ ಭಿನ್ನ ವಿಭಿನ್ನ ಬೆಳವಣಿಗೆಗಳು ನಡೆಯುತ್ತಿವೆ. ಭಾರತೀಯ ಜನತಾ ಪಕ್ಷದ ನಾಯಕ ಬಿಎಸ್ ಯಡಿಯೂರಪ್ಪನವರು ಇಂದು ತಾನೇ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಆದರೆ ಅವರಿಗೆ ಬಹುಮತ ಸಾಭೀತು ಪಡಿಸಲು ಇನ್ನೂ 9 ಶಾಸಕರ ಅಗತ್ಯತೆ ಇದೆ. ಈ ಕಾರಣದಿಂದಾಗಿ ಕಾಂಗ್ರೆಸ್ ಹಾಗೂ ಜನತಾ ದಳದ ಶಾಸಕರ ಅವಶ್ಯಕತೆ ಇದೆ.

ಈ ಎಲ್ಲಾ ವಿಧ್ಯಾಮಾನಗಳು ನಡೆಯುತ್ತಿದ್ದಂತೆ ಕರ್ನಾಟಕ ಕಾಂಗ್ರೆಸ್ ಹಾಗೂ ಜನತಾ ದಳದಲ್ಲಿ ಅಲ್ಲೋಲ ಕಲ್ಲೋಲವೇ ಭುಗಿಲೆದ್ದಿದೆ. ಯಡಿಯೂರಪ್ಪನವರ ಸರ್ಕಾರಕ್ಕೆ ಬಹುಮತ ಸಾಭೀತು ಪಡಿಸಲು ತಮ್ಮ ಸರ್ಕಾರದ ಶಾಸಕರನ್ನು ಎಲ್ಲಿ ಉಪಯೋಗಿಸಿಕೊಳ್ಳುತ್ತಾರೋ ಎಂಬ ಭಯದಿಂದ ಕಾಂಗ್ರೆಸ್ ಹಾಗೂ ಜನತಾ ದಳದ ಶಾಸಕರನ್ನು ರೆಸಾರ್ಟ್‍ನಲ್ಲಿ ಕೂಡಿಟ್ಟಿದ್ದಾರೆ. ಆದರೆ ಒಂದೊಂದೇ ಸಚಿವರು ನಾಪತ್ತೆಯಾಗುತ್ತಿರುವುದು ಕಾಂಗ್ರೆಸ್ ಪಾಳಯದಲ್ಲಿ ಭಾರೀ ಕುತೂಹಲಗಳೇ ಕೆರಳಿಸಿವೆ.

ಆನಂದ್ ಸಿಂಗ್ ರಾಜೀನಾಮೆ..?

ಇದೀಗ ಬಂದ ಬ್ರೇಕಿಂಗ್ ಸುದ್ದಿಯಂತೆ ಬಳ್ಳಾರಿಯ ಹೊಸಪೇಟೆ ಶಾಸಕ ಆನಂದ್ ಸಿಂಗ್ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಎಂದು ತಿಳಿದು ಬಂದಿದೆ. ಬಳ್ಳಾರಿ ವಿಜಯನಗರ (ಹೊಸಪೇಟೆ) ಶಾಸಕ ಆನಂದ್ ಸಿಂಗ್ ಈ ಹಿಂದೆ ಭಾರತೀಯ ಜನತಾ ಪಕ್ಷದ ಶಾಸಕರಾಗಿದ್ದರು. ಆದರೆ ಬದಲಾದ ವಿದ್ಯಮಾನದಲ್ಲಿ ಅವರು ಕಾಂಗ್ರೆಸ್ ಸೇರ್ಪಡೆಯಾಗಿದ್ದರು. ಆದರೆ ಜನಾರ್ಧನ ರೆಡ್ಡಿ ಹಾಗೂ ಶ್ರೀ ರಾಮುಲು ಅವರ ಆಪ್ತತೆಯನ್ನು ಮಾತ್ರ ಶಾಸಕ ಆನಂದ್ ಸಿಂಗ್ ಬಿಟ್ಟಿರಲಿಲ್ಲ.

ಈ ವಿಚಾರವೇ ಇದೀಗ ಕಾಂಗ್ರೆಸ್‍ಗೆ ಮುಳುವಾಗಿದೆ ಎಂದು ತಿಳಿದು ಬಂದಿದೆ. ಇದೀಗ ಶಾಸಕ ಆನಂದ್ ಸಿಂಗ್ ರಾಜೀನಾಮೆ ನೀಡಿದ್ದಾರೆ ಎನ್ನುವ ಮಾಹಿತಿ ವ್ಯಾಪಕವಾಗಿ ಹರಡುತ್ತಿದೆ. ಈಗಾಗಲೇ ಶಾಸಕ ಸ್ಥಾನಕ್ಕೆ ಆನಂದ್ ಸಿಂಗ್ ರಾಜೀನಾಮೆ ನೀಡಿದ್ದು ತಮ್ಮ ರಾಜೀನಾಮೆ ಪತ್ರವನ್ನು ಕೆಪಿಸಿಸಿ ಅಧ್ಯಕ್ಷರಿಗೆ ರವಾನಿಸಿದ್ದಾರೆ ಎನ್ನುವ ಮಾಹಿತಿಯೂ ಮಾಧ್ಯಮಗಳಿಗೆ ಕಾಂಗ್ರೆಸ್ ಮೂಲದಿಂದ ದೊರಕಿದೆ ಎನ್ನಲಾಗುತ್ತಿದೆ.

ಫಲಿತಾಂಶ ಬಂದಾಗಿನಿಂದ ಕಾಂಗ್ರೆಸ್ ಹಿಡಿತದಿಂದ ತಪ್ಪಿಸಿಕೊಂಡಿದ್ದ ಬಳ್ಳಾರಿ ಜಿಲ್ಲೆಯ ಹೊಸಪೇಟೆ ಶಾಸಕ ಆನಂದ್ ಸಿಂಗ್ ಭಾರತೀಯ ಜನತಾ ಪಕ್ಷದ ಪಾಳಯಕ್ಕೆ ಜಿಗಿಯುತ್ತಾರೆ ಎನ್ನುವ ಮಾತುಗಳು ಕೇಳಿಬಂದಿದ್ದವು. ಆದರೆ ಕಾಂಗ್ರೆಸ್ ಮಾತ್ರ ಆನಂದ್ ಸಿಂಗ್ ನಮ್ಮ ಜೊತೆಗೇ ಇದ್ದಾರೆ ಎಂದು ಹೇಳಿಕೊಳ್ಳುತ್ತಿದ್ದರು. ಇಂದು ಕೂಡ ಆನಂದ್ ಸಿಂಗ್ ನಮಗೆ ಪತ್ರದ ಮೂಲಕ ಬೆಂಬಲ ನೀಡಿದ್ದಾರೆ ಎಂದು ಡಿಕೆಶಿ ಹೇಳಿಕೆ ನೀಡಿದ್ದರು. ಆದರೆ ಇದೀಗ ಆನಂದ್ ಸಿಂಗ್ ರಾಜೀನಾಮೆ ನೀಡಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.

-ಏಕಲವ್ಯ

Tags

Related Articles

Close