ಪ್ರಚಲಿತ

ಭಾರತ CAA ಜಾರಿಗೆ ತಂದ್ರೆ ಪಾಕಿಸ್ತಾನಕ್ಕೆ ಯಾಕೆ ಉರಿ?

ಕೇಂದ್ರದ ಪ್ರಧಾನಿ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಸಿಎಎ ಜಾರಿಗೆ ತಂದಿದೆ. ಆ ಮೂಲಕ ಬಾಂಗ್ಲಾದೇಶ, ಪಾಕಿಸ್ತಾನ, ಅಫ್ಘಾನಿಸ್ತಾನಗಳ ಅಲ್ಪಸಂಖ್ಯಾತ ನಿರಾಶ್ರಿತರು, ಭಾರತಕ್ಕೆ ಆಶ್ರಯ ಕೋರಿ ಬಂದವರಿಗೆ ಈ ದೇಶದ ಪೌರತ್ವವನ್ನು ಕೊಡಲು ಮುಂದಾಗಿದೆ. ಭಾರತೀಯರಿಗೆ ಕೇಂದ್ರ ಸರ್ಕಾರ ಈ ಕಾಯ್ದೆಯನ್ನು ಅನುಷ್ಠಾನಕ್ಕೆ ತಂದಿರುವುದು ಸಂತಸ ನೀಡಿದೆ.

ಪ್ರಧಾನಿ ಮೋದಿ ಮತ್ತು ಅವರ ತಂಡ ಪ್ರಣಾಳಿಕೆಯಲ್ಲಿ ಹೇಳಿದ ಕಠಿಣಾತಿಕಠಿಣ ಕಾರ್ಯಗಳನ್ನು ಸಹ ಹೂವನ್ನು ಎತ್ತಿ ಪಕ್ಕಕ್ಕೆ ಇಟ್ಟ ಹಾಗೆ ಸಾಧಿಸಿ ತೋರಿಸುತ್ತಿದೆ. ಕೇಂದ್ರದ ಬಿಜೆಪಿ ಸರ್ಕಾರಕ್ಕೆ ಅಸಾಧ್ಯ ಎನ್ನುವುದು ಇಲ್ಲವೇ ಇಲ್ಲವೇನೋ ಎಂದು ಜನರು ಅತಿಶಯ ಪಡುವಂತೆ ಕಷ್ಟದ ಕೆಲಸಗಳನ್ನು ಸಹ ಯಾವುದೇ ರೀತಿಯ ಗೊಂದಲಗಳಾಗದ ಹಾಗೆ ಎಚ್ಚರ ವಹಿಸಿ ಮಾಡುತ್ತಿರುವುದು ವಿರೋಧಿಗಳ ಪಾಲಿಗೆ ನುಂಗಲಾರದ ಬಿಸಿ ತುಪ್ಪದ ಹಾಗಾಗಿದೆ. ಕಾಂಗ್ರೆಸ್ ಸೇರಿದಂತೆ ಇತರ ವಿರೋಧ ಪಕ್ಷಗಳು ಸಹ ಈ ಸಂಬಂಧ ಸುಳ್ಳು ಹಬ್ಬಿಸಿ, ತಮ್ಮ ಬೇಳೆ ಬೇಯಿಸಲು ಹೊರಟಿವೆ. ಬಿಜೆಪಿ ಮಾತ್ರ ಇದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳದೆ, ಅಭಿವೃದ್ಧಿ ಕಾರ್ಯ ನಡೆಸುವತ್ತ ಕಾರ್ಯ ಪ್ರವೃತ್ತವಾಗಿದೆ.

ಸಿಎಎ ಭಾರತದಲ್ಲಿ ಜಾರಿಯಾಗುತ್ತಿರುವುದು ಕೇವಲ ಭಾರತದಲ್ಲಿರುವ ಬಿಜೆಪಿ, ಪ್ರಧಾನಿ ಮೋದಿ ಅವರಿಗೆ ಮಾತ್ರವೇ ಉರಿ ಹೆಚ್ಚಿಸಿಲ್ಲ. ಬದಲಾಗಿ ನಮ್ಮ ನೆರೆಯ ರಾಷ್ಟ್ರ ಪಾಕಿಸ್ತಾನಕ್ಕೂ ಬಿಸಿ ತುಪ್ಪವಾಗಿ ಪರಿಣಮಿಸಿದೆ. ಸಿಎಎ ವಿರುದ್ಧ ಪ್ರತಿಪಕ್ಷಗಳ ಕಹಳೆಯ ಮೊಳಗಿದೆ‌. ಅದರ ಜೊತೆಗೆ ಭಾರತದ ಆಜನ್ಮ ಶತ್ರು ಪಾಕಿಸ್ತಾನ ಕೂಡ ಅರಚಾಟ ಮಾಡಲಾರಂಭಿಸಿದೆ.

ಸಿಎಎಯ ಬಗ್ಗೆ ಪಾಕ್ ನಾಲಿಗೆ ಹರಿಯ ಬಿಟ್ಟಿದ್ದು, ಇದು ತಾರತಮ್ಯ ಮಾಡುವ ಕಾನೂನು ಎಂದು ಹೇಳಿದೆ. ಇದು ಧರ್ಮದ ಆಧಾರದಲ್ಲಿ ಜನರನ್ನು ವಿಭಜನೆ ಮಾಡುತ್ತದೆ. ಈ ಕಾನೂನಿಗೆ ಭಾರತದ ಮುಸಲ್ಮಾನರಿಗೆ ಯಾವುದೇ‌ ತರದ ಸಂಬಂಧ ಇಲ್ಲ. ಹಾಗಾಗಿ ಮುಸಲ್ಮಾನರು ಭಯ ಪಡಬೇಕಿಲ್ಲ ಎಂದಿದೆ. ಸಿಎಎ ಪೌರತ್ವ ಪರಿಣಾಮ ಬೀರದು ಎಂದಿದೆ

ಆದರೆ, ಸಿಎಎ ಜಾರಿಯಿಂದ ತಾರತಮ್ಯ ಭಾವನೆ ಹೆಚ್ಚಾಗುತ್ತದೆ. 2019 ರಲ್ಲೇ ಪಾಕಿಸ್ತಾನ ಸಿಎಎ ಅಂತರಾಷ್ಟ್ರೀಯ ಸಮಾನತೆಯ ವಿಷಯಗಳಿಗೆ ವಿರುದ್ಧ ಎಂದು ಹೇಳಲಾಗಿದೆ ಎಂದು ತಿಳಿಸಿದೆ.

ಒಟ್ಟಿನಲ್ಲಿ ಪಾಕ್ ಕುಂಬಳಕಾಯಿ ಕಳ್ಳ ಎನ್ನುವಾಗ ಹೆಗಲು ಮುಟ್ಚಿ ನೋಡುತ್ತಿರುವುದು ಹಾಸ್ಯಾಸ್ಪದವೇ ಸರಿ.

Tags

Related Articles

Close