ಪ್ರಚಲಿತ

ಕಾಂಗ್ರೆಸ್ ನಾಯಕರಿಂದ ಕರ್ನಾಟಕದ ಸಂಸ್ಕೃತಿಗೆ ಧಕ್ಕೆ: ಪ್ರಲ್ಹಾದ ಜೋಶಿ

ಪ್ರಧಾನಿ ಮೋದಿ ಅವರು ಈ ರಾಷ್ಟ್ರದ ಆಡಳಿತ ಚುಕ್ಕಾಣಿ ಹಿಡಿದ ಬಳಿಕ ದೇಶದಲ್ಲಿ ಸಾಕಷ್ಟು ಧನಾತ್ಮಕ ಬದಲಾವಣೆಗಳಾಗಿವೆ. ರಾಷ್ಟ್ರ ಭಕ್ತಿ ಜನರಲ್ಲಿ ಹೆಚ್ಚು ಜಾಗೃತವಾಗಿದೆ. ದೇಶ ವಿರೋಧಿಗಳಿಗೆ ಭಾರತದಲ್ಲಿ ಸಂಕಷ್ಟ ಎದುರಾಗಿದೆ ಎನ್ನುವುದು ಸತ್ಯ.

ಇಲ್ಲಿ ಭ್ರಷ್ಟಾಚಾರ, ಅದಕ್ಕೆ ಕುಮ್ಮಕ್ಕು ನೀಡುವವರಿಗೂ ನೆಲೆ ಇಲ್ಲ ಎಂಬಂತಾಗಿದೆ. ಈ ಕಾರಣಕ್ಕಾಗಿಯೇ ಕಾಂಗ್ರೆಸ್ ಸೇರಿದಂತೆ ಇತರ ವಿರೋಧ ಪಕ್ಷಗಳಿಗೆ ಪ್ರಧಾನಿ ಮೋದಿ ಅವರೆಂದರೆ ಇಷ್ಟವಿಲ್ಲದಿರುವುದು. ಸದಾ ಕಾಲ ಪ್ರಧಾನಿ ಮೋದಿ, ಬಿಜೆಪಿ ವಿರುದ್ಧ ಸಾರ್ವಜನಿಕ ವಲಯದಲ್ಲಿ ಸುಳ್ಳು ಬಿತ್ತುವ ವ್ಯರ್ಥ ಪ್ರಯತ್ನ ನಡೆಸುವುದು. ಇಂತಹ ದುಷ್ಟ ಬುದ್ಧಿಗೆ ಜನರಿಂದ ಅದೆಷ್ಟೇ ಉಗಿಸಿಕೊಂಡರೂ ತಲೆ ಕೆಡಿಸಿಕೊಳ್ಳದೆ ತನ್ನ ಹಳೆ ಕಾಯಕದಲ್ಲಿಯೇ ಮುನ್ನಡೆಯುತ್ತಿರುವುದು ಹಾಸ್ಯಾಸ್ಪದ.

ಪ್ರಧಾನಿ ಮೋದಿ ಅವರನ್ನು ದ್ವೇಷಿಸುವ ಕಾಂಗ್ರೆಸಿಗರ ಬಗ್ಗೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರು ಮಾತನಾಡಿದ್ದು, ದೇಶದ ಅಭಿವೃದ್ಧಿ ಮಾಡುತ್ತಿರುವ ಪ್ರಧಾನಿ ಮೋದಿ ಅವರನ್ನು ಕಾಂಗ್ರೆಸ್ ದ್ವೇಷಿಸುತ್ತಿದೆ. ಆದರೆ ಅವರು ದ್ವೇಷಿಸುವುದಕ್ಕಿಂತ ಹೆಚ್ಚಾಗಿ ಜನರು ಪ್ರಧಾನಿ ಮೋದಿ ಅವರನ್ನು ಪ್ರೀತಿಸುತ್ತಾರೆ ಎಂದು ಹೇಳಿದ್ದಾರೆ.

ಕಾಂಗ್ರೆಸ್ ಪಕ್ಷದವರು ಪ್ರಧಾನಿ ಮೋದಿ ಅವರನ್ನು ದ್ವೇಷಿಸುತ್ತಲೇ ಇದ್ದೀರಿ. ನಿಮ್ಮ ಕೈಯಲ್ಲಿ ಅದೆಷ್ಟು ಶಕ್ತಿ ಇದೆ ಎಂಬುದನ್ನು ನಾವು ನೋಡಿಯೇ ಬಿಡೋಣ. ನಿಮ್ಮ ಶಕ್ತಿಯನ್ನು ತೋರಿಸಿ ಎಂದು ಸವಾಲು ಎಸೆದಿದ್ದಾರೆ. ರಾಜ್ಯದ ಸಿ ಎಂ ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್ ಪಕ್ಷದ ಎಲ್ಲಾ ನಾಯಕರೂ ಪ್ರಧಾನಿ ಮೋದಿ ಮೇಲೆ ದ್ವೇಷ ಕಾರುತ್ತಿದ್ದಾರೆ. ಸೇಡಿನ ಮನೋಭಾವ ಪ್ರದರ್ಶನ ಮಾಡುತ್ತಿದ್ದಾರೆ ಎಂದು ಜೋಶಿ ಕಾಂಗ್ರೆಸ್ ವಿರುದ್ಧ ಕಿಡಿ ಕಾರಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು ಅಲಂಕರಿಸಿರುವ ಸ್ಥಾನಕ್ಕೂ ಬೆಲೆ ಕೊಡದೆ ಸಿದ್ದರಾಮಯ್ಯ ಅವರು ಏಕವಚನದಲ್ಲೇ ಕರೆದಿದ್ದಾರೆ. ಅಗೌರವ ನೀಡಿದ್ದಾರೆ. ಹಾಗೆಯೇ ಸಚಿವ ಶಿವರಾಜ್ ತಂಗಡಗಿ ಪ್ರಧಾನಿ ಮೋದಿ ಹಿಂಬಾಲಕರಿಗೆ ಕಪಾಳ ಮೋಕ್ಷ ಮಾಡುವಂತೆ ಹೇಳಿ ಜನರನ್ನು ದಾರಿ ತಪ್ಪಿಸಿದ್ದಾರೆ. ಆ ಮೂಲಕ ಕರುನಾಡಿನ ಸಂಸ್ಕೃತಿಗೆ ಅವಮಾನ ಮಾಡಿದ್ದಾರೆ ಎಂದು ಜೋಶಿ ಕಿಡಿ ಕಾರಿದ್ದಾರೆ.

Tags

Related Articles

Close