ಅಂಕಣ

RAW ಯಾಕೆ ವಿಶ್ವದಲ್ಲಿಯೇ ಅತ್ಯಂತ ಅಪಾಯಕಾರಿ ಗೂಢಾಚಾರಿ ಸಂಸ್ಥೆಯೆಂದು ಕರೆಯಲ್ಪಟ್ಟಿದೆ ಗೊತ್ತೇ?! ಇದರ ಹಿಂದಿರುವ ಭಯಾನಕತೆ ಏನೆಂದು ತಿಳಿದರೆ ದಂಗಾಗುವಿರಿ!!

ರಾ ಭಾರತದ ಪ್ರಧಮ ವಿದೇಶಿ ಗುಪ್ತಚರ ಸಂಸ್ಥೆ..ಚೀನಾ-ಭಾರತ ಮತ್ತು ಭಾರತ ಪಾಕಿಸ್ತಾನ ಯುದ್ಧಗಳ ನಂತರ ಗುಪ್ತಚರ ವೈಫಲ್ಯತೆ ಹಿನ್ನಲೆಯಲ್ಲಿ 1968 ರಲ್ಲಿ ಸ್ಥಾಪಿಸಲಾಗಿದೆ. ಈ ಸಂಸ್ಥೆಯು ಪ್ರಧಾನ ಮಂತ್ರಿಗಳ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಸಂಪುಟ ಕಾರ್ಯದರ್ಶಿಯವರಿಗೆ ಆಡಳಿತಾತ್ಮಕ ಆಧಾರದ ಮೇಲೆ ನೇರವಾಗಿ ವರದಿ ಮಾಡುತ್ತದೆ.. ಆ ನಂತರ ಕಾರ್ಯದರ್ಶಿಯವರು ಪ್ರಧಾನ ಮಂತ್ರಿಯವರಿಗೆ ವರದಿಯನ್ನು ಸಲ್ಲಿಸುತ್ತಾರೆ.. ವಿದೇಶಿ ಗುಪ್ತಚರ ಮಾಹಿತಿಯನ್ನು ಕಲೆ ಹಾಕುವುದು… ಭಯೋತ್ಪಾದನೆ ವಿರೋಧಿ ಚಟುವಟಿಕೆಗಳನ್ನು ನಡೆಸುವುದು ದೇಶದ ಭದ್ರತೆ ವಿಚಾರಕ್ಕೆ ಸಂಬಂಧಿಸಿದಂತೆ ಸಲಹೆ ನೀಡುವುದು ರಾ ದ ಪ್ರಮುಖ ಕಾರ್ಯಗಳು.. ರಾ ದ ಪ್ರಮುಖ ಕೆಂದ್ರ ಕಚೇರಿಯು ನವ ದೆಹಲಿಯಲ್ಲಿದೆ…

ಇದು ಮುಖ್ಯವಾಗಿ ಪಾಕಿಸ್ತಾನ ಮತ್ತು ಚೀನಾದ ಭಯೋತ್ಪಾದಕ ದಾಳಿಯಿಂದ ದೇಶದ ಕಾವಲುಗಾರಿಕೆಗೆ ಸಂಬಂಧಿಸಿದೆ. “ರಾ” ನ ಮತ್ತೊಂದು ಪ್ರಮುಖ ಕಾರ್ಯವೆಂದರೆ ಬಾಹ್ಯ ಗುಪ್ತಚರ ಮತ್ತು ಕೌಂಟರ್ ಭಯೋತ್ಪಾದನೆಯ ಸಂಗ್ರಹವನ್ನು ಒಳಗೊಂಡಿದೆ. ವಿದೇಶಿ ರಾಷ್ಟ್ರಗಳಿಂದ ಅನೇಕ ದಾಳಿಗಳಿಂದ ರಾಷ್ಟ್ರವನ್ನು ರಕ್ಷಿಸುವಲ್ಲಿ ಈ ರಾ ಪ್ರಮುಖ ಕಾರ್ಯಾಚರಣೆಯಲ್ಲಿ ತೊಡಗಿದೆ. ವಿದೇಶಿ ಮಾಹಿತಿಯನ್ನು ಪಡೆದುಕೊಳ್ಳುವಲ್ಲಿ ಈ ರಾ ಸಂಸ್ಥೆಯು ಅತ್ಯಂತ ಪರಿಣಾಮ ಕಾರಿಯಾಗಿ ಕೆಲಸ ನಿರ್ವಹಿಸುತ್ತದೆ.. ವಿದೇಶಿ ರಾಷ್ಟ್ರಗಳು ಭಾರತದ ವಿರುದ್ಧ ನಡೆಸುವ ಪಿತೂರಿಗಳ ಮಾಹಿತಿ ಸಂಗ್ರಹಣೆಯನ್ನು ಮಾಡುವುದೇ ಈ ರಾ ಪ್ರಮುಖ ಕಾರ್ಯಾಚರಣೆಯಾಗಿದೆ.. ಇವರ ಈ ಕಾರ್ಯಾಚರಣೆಗೆ ನಿಜವಾಗಲೂ ಭಾರತೀಯರಾದ ನಾವೆಲ್ಲರೂ ಬಹಳ ಹೆಮ್ಮೆ ಪಡಬೇಕಾಗಿದೆ.

ನಮಗೆ ರಾ ಎನ್ನುವ ಹೆಸರನ್ನು ಕೇಳಿದರೆ ಸಾಕು, ಒಂದು ಸಲ ಮೈ ಜುಮ್ ಅನ್ನುತ್ತೆ!! ಹೌದು, ರಿಸರ್ಚ್ ಆಂಡ್ ಅನಾಲಿಟಿಕ್ಸ್ ವಿಂಗ್( ರಾ ) ದೇಶಕ್ಕೋಸ್ಕರ ಸಾವು ಮತ್ತು ಸವಾಲುಗಳನ್ನು ಎದುರಿಸುವ ಭಾರತದ ಒಂದು ಹೆಸರಾಂತ ಸಂಸ್ಥೆ. ಈ ರಾ ದ ಕಾರ್ಯಕರ್ತರುಗಳು ದೇಶಭಕ್ತಿಯನ್ನು ಮೈಗೂಡಿಸಿಕೊಂಡು ದೇಶಕೋಸ್ಕರ ಕೆಲಸ ಮಾಡುವ ಸಂಸ್ಥೆಯಾಗಿದೆ. ಅಷ್ಟೇ ಅಲ್ಲದೇ, ಅವರು ಯಾವ ಪ್ರದೇಶದಲ್ಲಿ ನಿಂತಿದ್ದಾರೆ ಎಂಬುವುದರ ಬಗ್ಗೆ ಯಾವುದೇ ಯೋಚನೆ ಮಾಡದೇ ಶತ್ರುವಿನ ತಲೆಯನ್ನು ತುಂಡರಿಸುವುದೇ ಇವರ ಗುರಿ. ಇವರು ಒಂದು ಸಲ ಒಂದು ಪ್ರದೇಶಕ್ಕೆ ಪ್ರವೇಶವಾದರೆಂದರೆ ಸಾಕು ಶತ್ರುಗಳ ರುಂಡವನ್ನು ತುಂಡರಿಸುವುದು ನಿಶ್ಚಿತ!! ರಾ ಎನ್ನುವ ಸಂಸ್ಥೆ ಭಾರತದ ಬಾಹ್ಯ ಗುಪ್ತಚರ ಸಂಸ್ಥೆಯಾಗಿದೆ. ಅವರು ಶತ್ರುಗಳ ಪ್ರದೇಶಗಳ ಮೈಲಿಗಳನ್ನು ಭೇದಿಸಿ ಭಾರತಕ್ಕೆ ಪ್ರಮುಖ ಮಾಹಿತಿಯನ್ನು ನೀಡುವುದೇ ಇವರ ಕೆಲಸ.

ಈ ರಾ ಸಂಸ್ಥೆಯ ಧ್ಯೇಯವಾಕ್ಯವೇ “ಧರ್ಮೋ ರಕ್ಷತಿ ರಕ್ಷಿತಾಃ” ಧರ್ಮವು ನಾಶಮಾಡುವವರನ್ನು ನಾಶಮಾಡಿಸುತ್ತದೆ, ಧರ್ಮವನ್ನು ರಕ್ಷಿಸುವವರನ್ನು ಧರ್ಮ ರಕ್ಷಿಸುತ್ತದೆ. ಧರ್ಮ ಯಾವತ್ತು ನಾಶವಾಗುವುದಿಲ್ಲ ಮತ್ತು ನಾಶಮಾಡುವುದಿಲ್ಲ. ಆದುದರಿಂದ ಇಲ್ಲಿ ಧರ್ಮವೇ ಒಂದು ರಾಷ್ಟ್ರವಾಗಿದೆ.

ರಿಸರ್ಚ್ ಆಂಡ್ ಅನಾಲಿಟಿಕ್ಸ್ ವಿಂಗ್ ಅಂದರೆ ರಾ ಭಾರತದ ಉನ್ನತ ಬಾಹ್ಯ ಗುಪ್ತಚರ ಸಂಸ್ಥೆಯಲ್ಲೊಂದು. ಇದು 1962ರಲ್ಲಿ ನಡೆದ ಭಾರತ-ಚೀನಾ ಯುದ್ದ ಹಾಗೂ 1965ರಲ್ಲಿ ನಡೆದ ಭಾರತ-ಪಾಕಿಸ್ತಾನ ಯುದ್ದದ ನಂತರ ಈ ಸಂಸ್ಥೆ ಆರಂಭವಾಯಿತು. ರಾ ಸಂಸ್ಥೆಯ ಮೊದಲ ಮುಖ್ಯಸ್ಥರಾಗಿದ್ದವರೇ ಆರ್ ಎನ್ ರಾವ್. ಇವರು ಉತ್ತರ ಭಾರತದ ಬನಾರಸ್‍ನ ಶ್ರೀಮಂತ ಕಾಶ್ಮೀರಿ ಬ್ರಾಹ್ಮಣ ಕುಟುಂಬದಲ್ಲಿ 1918ರಲ್ಲಿ ಜನಿಸಿದರು.

Related image

ರಾ ಸಂಸ್ಥೆಯ ಕಾರ್ಯಕರ್ತರು ಭಾರತದಲ್ಲಿ ಮಾತ್ರ ತರಬೇತಿಯನ್ನು ಪಡೆಯದೇ ಪ್ರಪಂಚದ ಮೂಲೆಮೂಲೆಗಳಲ್ಲಿ ತರಬೇತಿಯನ್ನು ಪಡೆಯುತ್ತಾರೆ. ಯುಎಸ್‍ಎ, ಯುಕೆ ಮತ್ತು ಇಸ್ರೇಲ್‍ಗಳಂತಹ ನಾನಾ ದೇಶಗಳಿಗೆ ಯುವಕರನ್ನು ಉತ್ತಮ ರೀತಿಯ ತರಬೇತಿಗಳನ್ನು ಪಡೆಯಲು ಕಳುಹಿಸಿಕೊಡಲಾಗುತ್ತದೆ. ವಿವಿಧ ರೀತಿಯ ಕೌಶಲ್ಯಗಳನ್ನು ಪಡೆಯುವುದರೊಂದಿಗೆ ‘ಕರ್ವ್ ಮಗ’ ಎನ್ನುವ ವಿಶೇಷ ತರಬೇತಿಯಿಂದ ಸ್ವ-ರಕ್ಷಣೆ ಮತ್ತು ದೈಹಿಕ ತರಬೇತಿಯನ್ನು ಕಲಿಯಲಾಗುತ್ತದೆ. ಇದು ಮೊದಲ ಬಾರಿಗೆ 1940ರಲ್ಲಿ ಇಸ್ರೇಲ್‍ನ ಸೈನ್ಯವು ಇದನ್ನು ಅಭಿವೃದ್ಧಿಪಡಿಸಿದ್ದು, ಬೆದರಿಕೆಯ ಸನ್ನಿವೇಶಗಳು ಬಂದಾಗ ಪ್ರತಿಫಲಿತ ಪ್ರತಿಕ್ರಿಯೆಯನ್ನು ಆಧರಿಸಿ ಇದನ್ನು ಬಳಸಿಕೊಳ್ಳಲಾಗುತ್ತದೆ.

ಸಾಲ್ಡ್ರೋರಿಡ್ಜ್‍ನ್ನು ವಶಪಡಿಸಿಕೊಳ್ಳಲು ಪಾಕಿಸ್ತಾನ ‘ಅಬಬೀಲ್’ ಎನ್ನುವ ಹೆಸರಿನ ರಹಸ್ಯ ಕಾರ್ಯಾಚರಣೆಯನ್ನು ಆರಂಭಿಸಿತ್ತು. ಆದರೆ ಈ ಕಾರ್ಯಾಚರಣೆಯ ಬಗ್ಗೆ ಭಾರತಕ್ಕೆ ಮುಂಚಿತವಾಗಿಯೇ ತಿಳಿದಿತ್ತು. ಹಾಗಾಗಿ ತಕ್ಷಣವೇ ಭಾರತೀಯ ಸೈನ್ಯವು ‘ಮೇಘದೂತ್’ ಕಾರ್ಯಾಚರಣೆಯನ್ನು ಆರಂಭಿಸಿದ್ದಲ್ಲದೇ ಭಾರತದ ಭೂಪ್ರದೇಶವನ್ನು ಪ್ರವೇಶಿಸದಂತೆ ಭಾರತೀಯ ಸೇನೆ ಮುಂದಾಗಿದ್ದರಿಂದ, ಪಾಕಿಸ್ತಾನದ ಉದ್ದೇಶವು ಯಶಸ್ವಿಯಾಗಲಿಲ್ಲ. ಈ ಬಗ್ಗೆ ಭಾರತೀಯ ಸೇನೆಗೆ ಮುಂಚಿತವಾಗಿ ಮಾಹಿತಿ ನೀಡಿದವರೇ ರೋ!! ಇಲ್ಲದಿದ್ದರೆ ಭಾರೀ ಪ್ರಮಾಣದ ಅನಾಹುತವನ್ನು ಎದುರಿಸಬೇಕಾಗಿತ್ತು.

ಇಂಡಿಯನ್ ಪೆÇಲೀಸ್ ಸರ್ವೀಸಸ್, ಐಬಿ(ಇಂಟೆಲಿಜೆನ್ಸ್ ಬ್ಯೂರೊ) ಮತ್ತು ಇಂಡಿಯನ್ ಮಿಲಿಟರಿ ಅಥವಾ ಕಂದಾಯ ಇಲಾಖೆಯಲ್ಲಿದ್ದವರು ರಾ ಗೆ ಸೇರಲು ಮಾತ್ರ ಹೆಚ್ಚಿನ ಸಾಧ್ಯತೆಗಳಿದ್ದವು. ಆದರೆ ಈಗ ಸಾಮಾನ್ಯ ಜನರಿಗೂ ಕೂಡ ರಾ ಗೆ ಪ್ರವೇಶಿಸಲು ಅವಕಾಶಗಳಿವೆ. ಈ ಬಗ್ಗೆ ರವೀಂದರ್ ಕೌಶಿಕ್ ಒಂದು ಉತ್ತಮ ನಿದರ್ಶನವಾಗಿದ್ದಾರೆ. ಯಾಕಂದರೆ ಅವರು ಮಿಲಿಟರಿ ಹಿನ್ನಲೆಯಿಂದ ಬಂದವರೇ ಅಲ್ಲ. ಆದರೆ ಇವರು ಮಾಡಿದ ಸಾಧನೆ ಮಾತ್ರ ವಿಶೇಷ, ಇವರ ಬಗ್ಗೆ ಪ್ರತಿಯೊಬ್ಬ ಭಾರತೀಯ ಓದಲೇಬೇಕಾದಂತಹ ನಿಜ ಸಂಗತಿಗಳು ಸಾಕಷ್ಟಿವೆ.

ಪಾಕಿಸ್ತಾನ ಸೇನೆಯ ಮುಖ್ಯಸ್ಥ ಪರ್ವೇಜ್ ಮುಶರಾಫ್ ಮತ್ತು ಅವರ ಮುಖ್ಯ ಸಿಬ್ಬಂದಿ ಲೆಫ್ಟಿನೆಂಟ್ ಜನರಲ್ ಮೊಹಮ್ಮದ್ ಅಝೀಝ್ ನಡುವೆ ನಡೆದ ದೂರವಾಣಿ ಕರೆಯನ್ನು ಟ್ಯಾಪ್ ಮಾಡಿ ಪಾಕಿಸ್ತಾನಕ್ಕೆ ಮುಜುಗರವನ್ನುಂಟು ಮಾಡುವಂತೆ ಮಾಡಿತ್ತು. ಇದರಿಂದ ಭಾರತವು ಪಾಕಿಸ್ತಾನವನ್ನು ಆಕ್ರಮಣ ಮಾಡುವಂತೆ ಸ್ಪಷ್ಟವಾಗಿ ಸಾಬೀತು ಮಾಡಿದಂತಾಯಿತು, ಇವರ ಸಂಭಾಷಣೆಯ ಮುಂಚೆ ಪಾಕಿಸ್ತಾನವು ಕಾರ್ಗಿಲ್ ಯುದ್ದಕ್ಕೆ ಸಂಬಂಧಿಸಿದ ಮಾಹಿತಿಯನ್ನು ತಳ್ಳಿಹಾಕಿತ್ತು.

1974ರಲ್ಲಿ ಭಾರತವು ಮೊದಲ ಪರಮಾಣು ಪರೀಕ್ಷೆಯ ರಹಸ್ಯವನ್ನು ಕಾಪಾಡುವಲ್ಲಿ ರಾ ಪ್ರಮುಖ ಪಾತ್ರವಹಿಸಿದೆ. ಇದು ವಾಸ್ತವವಾಗಿ, ಚೀನಾ ಮತ್ತು ಅಮೆರಿಕಾದಂತಹ ದೇಶಗಳಲ್ಲಿರುವ ಗುಪ್ತಚರ ಸಂಸ್ಥೆಗಳಿಗೂ, ಭಾರತದಲ್ಲಿ ನಡೆಯುವ ರಹಸ್ಯ ಕಾರ್ಯಾಚರಣೆಯ ಚಟುವಟಿಕೆಗಳ ಮಾಹಿತಿ ಬಗ್ಗೆ ತಿಳಿದುಕೊಳ್ಳಲು ಸಾಧ್ಯವಾಗಲಿಲ್ಲ.

ಭಾರತದ ಈ ಕಾರ್ಯಚರಣೆ ಯಶಸ್ವಿಯಾಗಿ ಕೈಗೊಂಡರೆ ಪಾಕಿಸ್ತಾನವು ಭಾರತವನ್ನು ಆಕ್ರಮಿಸಲೂ ಪ್ರಯತ್ನಿಸುತ್ತಲೇ ಇರಲಿಲ್ಲ. ಹೌದು ಭಾರತವು ಇಸ್ರೇಲ್‍ನೊಂದಿಗೆ ಸೇರಿ “ಕಹುತಾ” ಕಾರ್ಯಚರಣೆಯನ್ನು ಯೋಜಿಸಿತ್ತು ಮತ್ತು ಪರಮಾಣು ರಿಯಾಕ್ಟರ್ಗಳನ್ನು ನಾಶಪಡಿಸಲು ಪಾಕಿಸ್ತಾನಕ್ಕೆ ಪ್ರವೇಶಿಸಿತ್ತು. ಆದರೆ ಪಾಕಿಸ್ತಾನದ ಅಧ್ಯಕ್ಷ ಜಿಯಾ-ಉಲ್-ಹಕ್‍ಗೆ ಭಾರತದ ದೇಶದ್ರೋಹಿಗಳು ಮೊದಲೇ ಮಾಹಿತಿಯನ್ನು ನೀಡಿದ್ದರು.

ರಿಸರ್ಚ್ ಆಂಡ್ ಅನಾಲಿಸಿಸ್ ವಿಂಗ್ (ಆರ್ ಅಥವಾ ರಾ) ಭಾರತದ ಪ್ರಾಥಮಿಕ ವಿದೇಶಿ ಗುಪ್ತಚರ ಸಂಸ್ಥೆ. ಇದು ಸಿನೊ-ಭಾರತ ಯುದ್ಧದಲ್ಲಿ 1962 ಮತ್ತು 1965 ರ ಭಾರತ-ಪಾಕಿಸ್ತಾನ ಯುದ್ಧದಲ್ಲಿ ಗುಪ್ತಚರ ಇಲಾಖೆ (ಅಲ್ಲಿಯವರೆಗೆ ನಿರ್ವಹಿಸಿದೆ ದೇಶೀಯ ಮತ್ತು ವಿದೇಶಿ ಗುಪ್ತಚರ ಎರಡೂ) ಕೈಗೊಂಡ ಗುಪ್ತಚರ ಅಂತರವನ್ನು ಒಡ್ಡಿಕೊಂಡಾಗ ಅದು ನಂತರ ಸ್ಥಾಪಿಸಲಾಯಿತು. ಇದು ಭಾರತ ಸರ್ಕಾರ ಮನದಟ್ಟು ವಿಶೇಷ ಸ್ವತಂತ್ರ ಸಂಸ್ಥೆ ವಿದೇಶಿ ಗುಪ್ತಚರ ಬೇಕಾಗಿತ್ತು. ಇದರಿಂದಾಗಿ ನಿರ್ದೇಶಕ, ರಾಮೇಶ್ವರ್ ನಾಥ್ ಕಾವ್ ಮಾರ್ಗದರ್ಶನದಲ್ಲಿ ಸೆಪ್ಟೆಂಬರ್ 1968 ರಲ್ಲಿ ರಚಿಸಲಾಯಿತು.

1933-68 ರಿಸರ್ಚ್ ಆ ಯಂಡ್ ಅನಾಲಿಸಿಸ್ ವಿಂಗ್ ಪ್ರಾರಂಭವನ್ನು ಮೊದಲು ಸಾಗರೋತ್ತರ ಗುಪ್ತಚರ ಸಂಗ್ರಹ ಪ್ರಾಥಮಿಕವಾಗಿ ಬ್ರಿಟಿಷ್ ದಾಖಲಿಸಿದವರು ಇದು ಗುಪ್ತಚರ ಇಲಾಖೆ (ಐಬಿ) ಕರ್ತವ್ಯವಾಗಿದೆ. 1933 ರಲ್ಲಿ, ಅಂತಿಮವಾಗಿ ಎರಡನೆಯ ಜಾಗತಿಕ ಯುದ್ಧದ ಕಾರಣವಾಯಿತು ವಿಶ್ವದ ರಾಜಕೀಯ ಪ್ರಕ್ಷುಬ್ಧತೆ ಸೆನ್ಸಿಂಗ್, ಗುಪ್ತಚರ ಇಲಾಖೆ ಜವಾಬ್ದಾರಿಗಳನ್ನು ಭಾರತದ ಗಡಿಗಳನ್ನು ಜೊತೆಗೆ ಸುದ್ದಿಯ ಸಂಗ್ರಹದಲ್ಲಿಯೂ ಸೇರಿಸಲು ಹೆಚ್ಚಿಸಿತು.

1947 ರಲ್ಲಿ, ಸ್ವಾತಂತ್ರ್ಯದ ನಂತರ, ಪಿಳ್ಳೈ ಮೇಲೆ ಐಬಿ ಮೊದಲ ಭಾರತೀಯ ನಿರ್ದೇಶಕರಾಗಿ ತೆಗೆದುಕೊಂಡಿತು. ಬ್ರಿಟಿಷ್ ನಿರ್ಗಮನ ತರಬೇತಿ ಮಾನವಶಕ್ತಿಯನ್ನು ವಂಚಿತವಾಗಿರುವ ನಂತರ, ಪಿಳ್ಳೈ ಸಾಲುಗಳ ಮೇಲೆ ಬ್ಯೂರೋ ಔಟ್ ಪ್ರಯತ್ನಿಸಿದರು. 1949 ರಲ್ಲಿ, ಪಿಳ್ಳೈ ಸಣ್ಣ ವಿದೇಶಿ ಗುಪ್ತಚರ ವ್ಯವಸ್ಥೆಯನ್ನು, ಆದರೆ 1962 ರ ಚೀನಾ-ಭಾರತ ಯುದ್ಧದಲ್ಲಿ ಭಾರತೀಯ ಡೆಬಾಕಲ್ ಇದು ನಿಷ್ಪ್ರಯೋಜಕ ಎಂದು ತೋರಿಸಿದರು. 1962 ರ ಸಿನೊ-ಭಾರತ ಯುದ್ಧದಲ್ಲಿ ಸಮಯದಲ್ಲಿ ವಿದೇಶಿ ಗುಪ್ತಚರ ವೈಫಲ್ಯ ಅಂದಿನ ಪ್ರಧಾನಿ ಜವಾಹರಲಾಲ್ ನೆಹರು ಮೀಸಲಿಟ್ಟ ವಿದೇಶಿ ಗುಪ್ತಚರ ಸಂಸ್ಥೆ ಸ್ಥಾಪಿತವಾದ ಆದೇಶ ಕಾರಣವಾಯಿತು. ಸೇನಾ ಸಿಬ್ಬಂದಿ ಇಂಡಿಯಾದ ಮುಖ್ಯಸ್ಥ ಜನರಲ್ ನಾಥ್ 1965 ರ ಭಾರತ-ಪಾಕಿಸ್ತಾನ ಯುದ್ಧದ ನಂತರ ಚೌಧರಿ ಹೆಚ್ಚು ಬೇಹುಗಾರಿಕೆ ಸಂಗ್ರಹವನ್ನು ಕರೆ. 1966 ಕೊನೆಯಲ್ಲಿ ಸುಮಾರು ಒಂದು ಪ್ರತ್ಯೇಕ ವಿದೇಶಿ ಗುಪ್ತಚರ ಸಂಸ್ಥೆ ಪರಿಕಲ್ಪನೆಯನ್ನು ಪಡೆಯಲು ಆರಂಭಿಸಿತು.

ಇದರ ಉಪಶೀರ್ಷಿಕೆಗಳು ದೇಶದಾದ್ಯಂತದ ವಿವಿಧ ಸ್ಥಳಗಳಿಗೆ ಮತ್ತು ಪ್ರಪಂಚವನ್ನು ಕಠಿಣ ತರಬೇತಿಗಾಗಿ ಕಳುಹಿಸಲಾಗುತ್ತದೆ, ಅವುಗಳಲ್ಲಿ ಯುನೈಟೆಡ್ ಸ್ಟೇಟ್ಸ್, ಯುನೈಟೆಡ್ ಕಿಂಗ್ಡಮ್ ಮತ್ತು ಇಸ್ರೇಲ್ನಂತಹ ದೇಶಗಳು. ಸ್ವರಕ್ಷಣೆ, ಮುಖ್ಯವಾಗಿ ಕ್ರಾವ್ ಮಾಗಾ ಮತ್ತು ತಾಂತ್ರಿಕ ಬೇಹುಗಾರಿಕೆ ಸಾಧನಗಳ ಬಳಕೆಯನ್ನು ಕಲಿಕೆಯಲ್ಲಿ ತರಬೇತಿ ಪಡೆದವರು ತರಬೇತಿ ಪಡೆಯುತ್ತಾರೆ. ಹಿಂದಿನ ರಾವು ಐಬಿ (ಇಂಟೆಲಿಜೆನ್ಸ್ ಬ್ಯೂರೋ), ಇಂಡಿಯನ್ ಪೆÇೀಲಿಸ್ ಸೇವೆ ಮತ್ತು ಭಾರತೀಯ ಮಿಲಿಟರಿ ಮತ್ತು ಆದಾಯ ಇಲಾಖೆಗಳಿಂದ ಮಾತ್ರ ಜನರನ್ನು ನೇಮಿಸಿಕೊಳ್ಳಲು ಬಳಸಿಕೊಂಡರು. ಆದಾಗ್ಯೂ, ಪ್ರಸ್ತುತ ಕಾಲದಲ್ಲಿ, ರಾ ದ ಭಾಗವಾಗಿರುವುದರಿಂದ ಹಿಂದಿನಕ್ಕಿಂತ ಹೆಚ್ಚು ಸರಳವಾಗಿದೆ. ಸಂಸ್ಥೆಯಂತೆ ವಿಶ್ವವಿದ್ಯಾನಿಲಯಗಳಿಂದ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲು ಪ್ರಾರಂಭಿಸಿದೆ. ರಾಷ್ಟ್ರದ ಸೇವೆ ಮತ್ತು ರಕ್ಷಿಸುವ ಸಲುವಾಗಿ ಭಾರತೀಯ ಯುವಜನರಿಗೆ ಈ ಸಂಸ್ಥೆಯನ್ನು ಪ್ರವೇಶಿಸಲು ಒಳ್ಳೆಯ ಅವಕಾಶ.

ಭಾರತದ ಬಾಹ್ಯ ಗುಪ್ತಚರ ಸಂಸ್ಥೆ ರಚಿತ ಮೂರು ವರ್ಷಗಳ ಬಳಿಕ ಅಂದರೆ 1971ರಲ್ಲಿ ಪಾಕಿಸ್ತಾನವನ್ನು ಯುದ್ಧದಲ್ಲಿ ಸೋಲಿಸುವಂತೆ ಮಾಡಿತ್ತು… ರಾ ಸಂಸ್ಥೆಯಿಂದ ಕಾರ್ಯಾಚರಣೆಯನ್ನು ಕೈಗೊಂಡರು… ಆ ಸಮಯದಲ್ಲಿ ಪಾಕಿಸ್ತಾನ ಸೇನಾ ಮುಖ್ಯಸ್ಥ ಪರ್ವೇಜ್ ಮುಷರಫ್ ಮತ್ತು ಅವನ ಮುಖ್ಯ ಸಿಬ್ಬಂದಿ ಲೆಫ್ಟಿನೆಂಟ್ ಜನರಲ್ ಮೊಹಮ್ಮದ್ ಅಜೀಜ್‍ರ ನಡುವೆ ನಡೆದ ದೂರವಾಣಿ ಸಂಭಾಷಣೆಯನ್ನು ಯಶಸ್ವಿಯಾಗಿ ಟ್ಯಾಪ್ ಮಾಡಿದ್ದರು. ಪಾಕಿಸ್ತಾನವು ಕಾರ್ಗಿಲ್ ದಾಳಿಯಲ್ಲಿ ಭಾಗಿಯಾಗಿದೆಯೆಂದು ಮೊದಲೇ ಸ್ಪಷ್ಟವಾಗಿ ಕಾರ್ಯಾಚರಣೆ ಮಾಡಿದ್ದರು.. ಅವರ ಆ ಸಂಭಾಷಣೆಯನ್ನು ಟ್ಯಾಪ್ ಮಾಡಿದ್ದರಿಂದ ಕಾರ್ಗಿಲ್‍ಯುದ್ಧದಲ್ಲಿ ಪಾಕ್ ಭಾಗವಹಿಸುವಿಕೆಯನ್ನು ಅವರ ಆ ಸಂಭಾಷಣೆ ಸಾಬೀತಾಗಿತ್ತು… ಇದೆಲ್ಲಾ ರಾ ದ ಚತುರತೆ ಎಂದೇ ಹೇಳಬಹುದು.

ಆದರೆ ವಿಮರ್ಷಕರು ಮಾತ್ರ ಕಾರ್ಗಿಲ್ ಯುದ್ಧದಲ್ಲಿ ರಾ ದ ಕಾರ್ಯಾಚರಣೆ ಯಾವುದು ಇಲ್ಲಿ ನಡೆದಿಲ್ಲ… ಅವರು ಕಾರ್ಯಾಚರಣೆಯನ್ನು ನಡೆಸುವಲ್ಲಿ.. ವಿಫಲವಾಗಿದೆಯೆಂದು ವಿಮರ್ಶಕರು ಆರೋಪಿಸಿದ್ದಾರೆ. ಸಂಭಾಷಣೆಯ ವಶಪಡಿಸಿಕೊಂಡ ಟೇಪ್ ಅನ್ನು ನಂತರ ಭಾರತವು ಪ್ರಕಟಿಸಿತು..ಕಾರ್ಗಿಲ್ ಪಿತೂರಿಯಲ್ಲಿ ಪಾಕಿಸ್ತಾನಿ ಪಾಲ್ಗೊಳ್ಳುವಿಕೆಯನ್ನು ಸಾಬೀತುಪಡಿಸಿರುವುದನ್ನು ಸ್ಪಷ್ಟಪಡಿಸಿತ್ತು. ಆದರೆ ರಾ ಪ್ರಧಾನ ಮಂತ್ರಿಗಳ ಅಡಿಯಲ್ಲಿ ಮತ್ತು ರಾ ಮುಖ್ಯ ಅಧಿಕಾರಿಗೆ ಮಾತ್ರ ಉತ್ತರಿಸುವ ಅಗತ್ಯವಿರುವುದು ಅಷ್ಟೆ!! ಬದಲಾಗಿ ಬೇರೆ ಯಾರಿಗೂ ಸ್ಪಷ್ಟನೆ ಕೊಡಬೇಕಾದಂತಹ ಅವಶ್ಯಕತೆ ಇಲ್ಲ ಎಂಬುವುದನ್ನು ಅರ್ಥಮಾಡಿಕೊಳ್ಳ ಬೇಕಾಗಿದೆ. ಸಂಘಟನೆಯು ಸಂಸತ್ತಿನಲ್ಲಿ ಅಥವಾ ಸರ್ವೋಚ್ಚ ಅಧಿಕಾರಿಗಳ ಕಾರ್ಯಾಚರಣೆಗಾಗಿ ಯಾರಿಗೂ ಉತ್ತರಿಸಲಾಗುವುದಿಲ್ಲ. ಇದು ಕಾರ್ಯನಿರ್ವಹಿಸುತ್ತಿದೆ ಅದು ಸಂಘಟಿತವಾಗಿದೆ ಮತ್ತು ಎಲ್ಲಾ ರೀತಿಯ ಹಕ್ಕುಗಳನ್ನು ರಾ ಗೆ ನೀಡಲಾಗಿದೆ. ಪ್ರಶ್ನಿಸುವ ಅಧಿಕಾರವು ಪ್ರಧಾನಿ ಮತ್ತು ಅದರ ಮುಖ್ಯ ಅಧಿಕಾರಿಗಳ ಜೊತೆ ಮಾತ್ರ. ರಾ ದ ಹಲವು ವಿಶೇಷ ಅಧಿಕಾರಗಳನ್ನು ಹೊಂದಿದೆ; ಯಾವುದೇ ಸಮಸ್ಯೆಗಳಿಗೂ ಭಾರತದ ಸಂಸತ್ತಿಗೆ ಉತ್ತರಿಸಬೇಕೆಂದಿಲ್ಲ ಮತ್ತು ರಾ ಸಂಸ್ಥೆ ಆರ್‍ಬಿಐನಿಂದ ಹೊರಗುಳಿದ ಸಂಸ್ಥೆಯಾಗಿದೆ.

ಪವಿತ್ರ

Tags

Related Articles

Close