ಅಂಕಣ

ಮುಸಲ್ಮಾನ ರಾಷ್ಟ್ರವಾದ ಇಂಡೋನೇಶಿಯಾದಲ್ಲಿರುವ ಅತ್ಯಂತ ಪುರಾತನ ಶಿವಲಿಂಗವೊಂದನ್ನು ಅಲ್ಲಿಯ ಮುಸಲ್ಮಾನರೇ ಸಂರಕ್ಷಿಸಿಟ್ಟಿದ್ದು ಹೇಗೆ ಗೊತ್ತೇ?!

ಇಂಡೋನೇಷ್ಯಾ ಆಗ್ನೇಯ ಏಷ್ಯಾದಲ್ಲಿ 18,110 ದ್ವೀಪಗಳ ರಾಷ್ಟ್ರ. 200 ಮಿಲಿಯನ್ ಗಿಂತಲೂ ಅಧಿಕ ಪ್ರಜೆಗಳನ್ನು ಹೊಂದಿರುವ ಪ್ರಪಂಚದ 4ನೇ ಅತಿ ಹೆಚ್ಚು ಜನಸಂಖ್ಯೆಯುಳ್ಳ ದೇಶ ಎಂಬುವುದು ನಮಗೆ ತಿಳಿದಿರುವ ವಿಚಾರ!! ಆದರೆ ನಮ್ಮ ಹಿಂದೂ ಪುರಾಣಗಳ ಪ್ರಕಾರ ಈಡೀ ವಿಶ್ವವೇ ದೇವರ ಸೃಷ್ಟಿ ಎಂದು ನಂಬಿದವರು ನಾವು. ಅಷ್ಟೇ ಅಲ್ಲದೇ ಭರತಖಂಡ ಎಂದರೆ ಕೇವಲ ಭಾರತ ಮಾತ್ರವಲ್ಲ, ಅದರ ಸುತ್ತಮುತ್ತಲಿರುವ ಪ್ರದೇಶವು ಒಂದು ಕಾಲದಲ್ಲಿ ಭಾರತವೇ ಆಗಿದ್ದು ಹಿಂದೂ ದೇವಾಲಯಗಳು ನೆಲೆಸಿರುವ ಪುಣ್ಯ ಭೂಮಿಯಾಗಿತ್ತು!! ಆದರೆ ಬಹುಸಂಖ್ಯೆಯ ಮುಸಲ್ಮಾನ ವರ್ಗದವರೇ ಹೆಚ್ಚಿರುವ ಈ ರಮ್ಯ ಮನೋಹರವಾದ ಸ್ಥಳದಲ್ಲಿ ಹಿಂದೂ ದೇವಾಲಯಗಳು ಇದ್ದವು ಎನ್ನುವುದಕ್ಕೆ ಸಾಕ್ಷಿಯೇನಾದರೂ ಇದೆಯಾ ಎಂದರೆ ಖಂಡಿತವಾಗಿಯೂ ಇದೆ!!

ಹೌದು.. ಇಂಡೋನೇಷ್ಯಾದ ನೆಲೆಯಲ್ಲಿ ಹಿಂದೂ ಧರ್ಮಕ್ಕೆ ಸಂಬಂಧಿಸಿದಂತೆ ಸಾಕಷ್ಟು ಕುರುಹುಗಳು ಸಿಗುತ್ತಲೇ ಇವೆ!! ಅಷ್ಟೇ ಅಲ್ಲದೇ, ಇಲ್ಲಿರುವ ಪ್ರತಿಯೊಂದು ದ್ವೀಪದಲ್ಲೂ ಕೂಡ ಒಂದಲ್ಲಾ ಒಂದು ಹಿಂದೂ ದೇವರ ದೇವಸ್ಥಾನವನ್ನು ನೋಡಬಹುದಾಗಿದೆ ಕೂಡ…!! ಆದರೆ ಇಂಡೋನೇಷ್ಯಾದಲ್ಲಿ ಅತ್ಯಂತ ಹಳೇಯ ಶಿವಲಿಂಗದ ಬಗ್ಗೆ ಏನಾದರೂ ನಿಮಗೆ ತಿಳಿದೆಯಾ, ಇದರ ಬಗ್ಗೆ ತಿಳಿದರೆ ಒಂದು ಕ್ಷಣ ಆಶ್ಚರ್ಯವಾಗಬಹುದು!!

ಒಂದಲ್ಲಾ ಒಂದು ದೇವಾಲಯಗಳನ್ನು ಒಳಗೊಂಡ ಈ ಇಂಡೋನೇಷ್ಯಾ ದ್ವೀಪಗಳ ಪೈಕಿ ಇಂಡೋನೇಷ್ಯದ ಮಧ್ಯಭಾಗ ಮತ್ತು ಪೂರ್ವಭಾಗದ ನಡುವೆ ಇರುವ ಜಾವಾ ದ್ವೀಪದಲ್ಲಿದೆ ಅತ್ಯಂತ ಪ್ರಸಿದ್ಧಿಯನ್ನು ಹೊಂದಿರುವ ಸುಕುಹ್ ದೇವಸ್ಥಾನ!!

15ನೇ ಶತಮಾನದಲ್ಲಿದ್ದ ಈ ದೇವಸ್ಥಾನ ತನ್ನದೇ ಆದ ವಿಶಿಷ್ಟ ಶೈಲಿಯನ್ನು ಹೊಂದಿದ್ದು, ಬಹು ಆಕರ್ಷಣೆಯನ್ನು ಹೊಂದಿರುವ ಪ್ರದೇಶವಾಗಿದೆ!! ಅಲ್ಲಲ್ಲಿ ಶಿಥಿಲಗೊಂಡಿರುವ ಈ ದೇವಾಲಯ ಅಲ್ಲಿರುವ ಕಲಾಕೃತಿಗಳು ಎಂಥವರ ಮನಸ್ಸನ್ನು ಕೂಡ ಒಂದುಕ್ಷಣ ತನ್ನಡೆಗೆ ಸೆಳೆಯುವಂತೆ ಮಾಡುತ್ತೆ!! ಆದರೆ ಈ ದೇವಸ್ಥಾನ ಅತ್ಯಂತ ಪ್ರಾಮುಖ್ಯತೆಯನ್ನು ಪಡೆಯಲು ಕಾರಣವೇ ಅಲ್ಲಿರುವ ಶಿವಲಿಂಗ!! ಹೌದು… ಸುಂದರವಾದ ವಾಸ್ತುಶಿಲ್ಪದ ಜೊತೆ ಮಾಯನ್ ನಾಗರೀಕತೆಯ ಹೆಮ್ಮೆಯ ಪ್ರತೀಕವಾಗಿರುವ ಈ ದೇವಸ್ಥಾನ, ಇವತ್ತಿಗೂ ಕೂಡ ಇಂಡೋನೇಷ್ಯಾದಲ್ಲಿದೆ ಎಂದರೆ ನಂಬ್ತೀರಾ??? ಆದರೆ ಇದನ್ನು ನಂಬಲೇಬೇಕು… ಯಾಕೆಂದರೆ, ಅದ್ಭುತವಾದ ವಾಸ್ತುಶಿಲ್ಪದ ಜೊತೆ ರಮ್ಯಮನೋಹರವಾದ ಈ ದೇವಸ್ಥಾನವಿರುವ ರಾಷ್ಟ್ರವಾದ ಈ ಇಂಡೋನೇಷ್ಯಾ, ಸಂಪೂರ್ಣವಾಗಿ ಇಸ್ಲಾಮಿಕ್ ರಾಷ್ಟ್ರ ಆಗೋ ಮೊದಲು ಕಡೇಯದಾಗಿ ಕಟ್ಟಿರೋ ಕೆಲವು ಹಿಂದೂ ದೇವಸ್ಥಾನಗಳ ಪೈಕಿಯಲ್ಲಿದೆ ಈ ಒಂದು ದೇವಸ್ಥಾನ!!!

ಈ ದೇವಸ್ಥಾನದ ಮುಖ್ಯ ಆಕರ್ಷಕ ಬಿಂದುವೇ ಇಲ್ಲಿರುವ ಶಿವಲಿಂಗ!! ಅದು ಅಂತಿಂಥಹ ಶಿವಲಿಂಗವಲ್ಲ, ಸುಂದರಕಲಾಕೃತಿಯನ್ನು ಹೊಂದಿರುವ ಈ ದೇವಾಲಯದಲ್ಲಿರುವುದು ಮನೋಹರವಾದ ಸ್ಪಟಿಕದ ಲಿಂಗ!! ಇಲ್ಲಿರುವ ಕಲಾಕೃತಿಯನ್ನು ನೋಡಲು ಎರಡೂ ಕಣ್ಣು ಸಲದು ಎನ್ನುವಷ್ಟರಮಟ್ಟಿಗೆ ಆಕರ್ಷಣೆಯನ್ನು ಹೊಂದಿದೆ ಇಲ್ಲಿನ ಸ್ಪಟಿಕಲಿಂಗ. ಈ ಲಿಂಗವನ್ನು ಪ್ರತ್ಯೇಕವಾದ ಒಂದು ಕಂಚಿನ ಹೂಜಿಯಲ್ಲಿ ಇರಿಸಲಾಗಿದೆ. ಶಿವಲಿಂಗವನ್ನು ಇರಿಸಲಾದ ಕಂಚಿನ ಹೂಜಿಯಲ್ಲಿ ನೀರನ್ನು ಇಟ್ಟು ಶಿವಲಿಂಗವನ್ನು ಅದರ ಮೇಲೆ ಇರಿಸಲಾಗಿದೆ. ಆಶ್ಚರ್ಯ ಏನೆಂದರೆ ಶಿವಲಿಂಗವನ್ನು ಇರಿಸಲಾದ ಕಂಚಿನ ಹೂಜಿಯಲ್ಲಿರುವ ನೀರು, ಇಷ್ಟು ವರ್ಷಗಳಾದರೂ ಇನ್ನೂ ಬತ್ತಿಲ್ಲ!!

1000ದಷ್ಟು ಹಳೆಯದಾದ ಈ ದೇವಸ್ಥಾನದಲ್ಲಿ ಶಿವಲಿಂಗದಲ್ಲಿನ ನೀರು ಇನ್ನೂ ಬತ್ತಿಲ್ಲ ಎಂದರೆ ಇದನ್ನು ಪವಾಡ ಅಂತಾನೇ ಹೇಳಬಹುದು?? ಯಾಕೆಂದರೆ ನೂರಾರು ವರ್ಷಗಳ ಹಿಂದಿನ ದೇವಾಸ್ಥಾನವಲ್ಲ ಇದು, ಬದಲಾಗಿ ಸಾವಿರ ವರ್ಷಗಳ ಐತಿಹ್ಯವನ್ನು ಹೊಂದಿರುವ ದೇವಾಲಯವಾಗಿದ್ದು, ಸ್ಪಟಿಕ ಶಿವಲಿಂಗದ ಕಂಚಿನ ಹೂಜಿಯಲ್ಲಿರುವ ನೀರು ಇನ್ನೂ ಇದೆ ಅಂದರೆ ಮತ್ತೇನು?? ಆದರೆ ಇವೆಲ್ಲವೂ ಕೂಡ ನಾಶಹೊಂದುವ ಸ್ಥಿತಿಯಲ್ಲಿದ್ದು, ಇದನ್ನು ಮಧ್ಯ ಜಾವಾದ, ಪ್ರಂಬನನ್‍ನ ಕ್ಲಟೆನ್‍ನಲ್ಲಿರೋ ಪ್ರಾಚ್ಯಚಸ್ತು ಸಂಗ್ರಹಾಲಯದಲ್ಲಿ ಸಂರಕ್ಷಿಸಿ ಇರಿಸಲಾಗಿದೆ!!

ಆದರೆ ಇಂಡೋನೇಷ್ಯಾದಲ್ಲಿರುವ ಅದ್ಭುತವಾದ ವಾಸ್ತುಶಿಲ್ಪವನ್ನು ಹೊಂದಿರುವ ಅದೆಷ್ಟೋ ದೇವಾಲಯಗಳು ಇದೀಗ ಮರೆಯಾಗಿದ್ದು ಅದರ ಆವಿಷ್ಕಾರಗಳು ನಡೆಯುತ್ತಲೇ ಇದೆ. ಆದರೆ ಒಟ್ಟು ಜನಸಂಖ್ಯೆಯಲ್ಲಿ 87.5%ದಷ್ಟು ಜನ ಮುಸ್ಲಿಮರೇ ಇರುವ ಈ ದೇಶದಲ್ಲಿ ಇಂದಿಗೂ ರಾಮಾಯಣ ಮಹಾಭಾರತವನ್ನು ಇಲ್ಲಿನ ಜನ ತುಂಬಾನೇ ನಂಬುತ್ತಾರೆ. ಹಾಗಾಗಿಯೋ ಏನೋ ಇಂಡೋನೇಷ್ಯಾದ ಸೈನ್ಯದ ಲಾಂಛನ ಹನುಮಂತನಾಗಿದ್ದಾನೆ!! ಹಾಗಾಗಿ ಇಡೀ ಇಂಡೋನೇಷ್ಯವೇ ಹಿಂದೂ ಧರ್ಮದ ಪ್ರತೀಕವಾಗಿದ್ದು, ಇಲ್ಲಿ ಇಂದಿಗೂ ಹಿಂದೂ ಧರ್ಮದ ಆಚಾರವಿಚಾರಗಳು ಮಣ್ಣಿನ ಕಣಕಣದಲ್ಲಿಯೂ ಅಡವಾಗಿರುವುದಂತೂ ನಿಜ!!!

– ಅಲೋಖಾ

Tags

Related Articles

Close