ಪ್ರಚಲಿತ

ಅಂತರರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿರುವ ನೃತ್ಯ ಸಂಯೋಜಕಿಗೆ ಮೋದಿ ನೀಡಿದ ಗಿಫ್ಟ್ ಏನು ಗೊತ್ತಾ?! ನರ್ತಿಸಿತು ಮಯೂರಿ ಟ್ವೀಟ್!!

ಸಮಕಾಲೀನ ನೃತ್ಯಗಳ ಮೂಲಕವೇ ಗಮನ ಸೆಳೆದಿರುವ ಅದೆಷ್ಟೋ ಮಂದಿ ನೃತ್ಯಗಾರ್ತಿಯರಿಗೆ ಒಲಿಯದ ಗಿಫ್ಟ್ ಇದೀಗ ಈ ನೃತ್ಯಗಾರ್ತಿಯ ಮಡಿಲು ಸೇರಿದೆ!! ಹೌದು… ನೃತ್ಯ ಪ್ರಕಾರಗಳೆಲ್ಲವನ್ನೂ ಕರಗತ ಮಾಡಿಕೊಂಡಿರುವ ಈ ನೃತ್ಯಗಾರ್ತಿ ಹುಟ್ಟುವ ಮೊದಲೇ, “ಹುಟ್ಟುವ ಕಂದನ ಪುಟ್ಟ ಹೆಜ್ಜೆಯಲ್ಲೂ ಗೆಜ್ಜೆ ಸಪ್ಪಳ ಕೇಳಿಸಬೇಕು” ಅಂತ ಈಕೆಯ ತಾಯಿ ಕನಸು ಕಂಡಿದ್ದರಂತೆ. ಹೊಟ್ಟೆಯಲ್ಲಿರುವಾಗಲೇ ಹೆಸರು ಇಟ್ಟಿಸಿಕೊಂಡ ಮಗಳು ಅಮ್ಮನ ಆಸೆ ನೇರವೇರಿಸಿದ್ದಲ್ಲದೇ ಅಂತಾರಾಷ್ಟ್ರೀಯ ಮಟ್ಟದಲ್ಲಿ ಅಪರೂಪದ ನೃತ್ಯಗಾರ್ತಿಯ ಪಟ್ಟವೇರಿದ್ದಾರೆ ಎಂದರೆ ಅದು ನಿಜಕ್ಕೂ ಗ್ರೇಟ್!!

ಹೌದು…. ನ್ಯತ್ಯ ಪ್ರಕಾರಗಳಲ್ಲಿನ ಎಲ್ಲಾ ಪ್ರಕಾರಗಳ ಬಗ್ಗೆ ಅಗಾಧವಾದ ಜ್ಞಾನವನ್ನು ಹೊಂದಿರುವಂತಹ ನೃತ್ಯಗಾರ್ತಿ ಬೇರಾರು ಅಲ್ಲ ರಾಷ್ಟ್ರ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಕನ್ನಡದ ಆಲ್ಬಂ ಗೀತೆಗಳಿಂದ ಯುವಜನರನ್ನು ತಮ್ಮತ್ತ ಸೆಳೆಯುವಲ್ಲಿ ಸಫಲರಾಗಿ, ತಮ್ಮ ಹಾಡಿನ ಮೂಲಕ ಕನ್ನಡದ ಕಂಪನ್ನು ವಿದೇಶದ ನೆಲದಲ್ಲೂ ಪಸರಿಸುತ್ತಿರುವಂತಹ ಗಾಯಕ ರಘು ದೀಕ್ಷಿತ್ ಅವರ ಮುದ್ದಿನ ಮಡದಿ ಮಯೂರಿ ಉಪಾಧ್ಯ!!

ತನ್ನ ಪತಿಯ ಹಾದಿಯನ್ನೇ ಹಿಡಿದಿರುವ ಮಯೂರಿ ಉಪಾಧ್ಯ ಒರ್ವ ಜನಪ್ರಿಯ ನೃತ್ಯಗಾರ್ತಿ!! ತಮ್ಮ ಡ್ಯಾನ್ಸ್ ಟ್ರೂಪ್ ಅನ್ನು ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರುವಾಸಿಯಾಗುವಂತೆ ಮಾಡಿರುವ ಇವರು ದೇಶದಾದ್ಯಂತ ಮಾತ್ರವಲ್ಲದೆ ಪ್ರಪಂಚದ ಮೂಲೆ ಮೂಲೆಯಲ್ಲೂ ಭಾರತೀಯ ನೃತ್ಯವನ್ನು ಪ್ರದರ್ಶನ ಮಾಡಿ ಕಲೆಯ ಕಂಪನ್ನು ಪಸರಿಸಿರುವ ಇವರು, ನಾಟ್ಯ ಮಯೂರಿ ಅಂತಾನೇ ಫೇಮಸ್ ಆದವರು.

ಸಂಗೀತ ನಿರ್ದೇಶಕ ರಘು ದೀಕ್ಷಿತ್ ಪತ್ನಿ ನಾಟ್ಯ ಮಯೂರಿ ಎಂದೇ ಪ್ರಖ್ಯಾತಿ ಪಡೆದಿರುವ ಮಯೂರಿ ಉಪಾಧ್ಯ, ತಮ್ಮ ನೃತ್ಯದ ಮೂಲಕ ಹೆಸರುವಾಸಿಯಾಗಿದ್ದ ಇವರಿಗೆ ಇದೀಗ ಪ್ರಧಾನಿ ನರೇಂದ್ರ ಮೋದಿ ಅವರಿಂದಲೇ ಒಂದು ವಿಷೇಶವಾದ ಉಡುಗೊರೆ ಸಿಕ್ಕಿದೆ.

ನೃತ್ಯದ ಮೂಲಕ ದೇಶ ವಿದೇಶದಲ್ಲಿ ಮಿಂಚುತ್ತಿರುವ ಮಯೂರಿ ತಮ್ಮದೇ ಆದ ನೃತ್ಯ ತಂಡವನ್ನು ಕಟ್ಟಿಕೊಂಡು ದೇಶ ವಿದೇಶಗಳಲ್ಲಿ ನಾಟ್ಯವನ್ನು ಪ್ರದರ್ಶನ ಮಾಡುತ್ತಾರಲ್ಲದೇ, ಸಿನಿಮಾಗಳಿಗೂ ಕೋರಿಯೋಗ್ರಫಿ ಮಾಡಿರುವ ಹಿರಿಮೆ ಇವರದ್ದಾಗಿದೆ. ಇದರ ಜೊತೆಗೆ ರಿಯಾಲಿಟಿ ಶೋಗಳಲ್ಲಿ ತೀರ್ಪುಗಾರರಾಗಿ ಕಾಣಿಸಿಕೊಳ್ಳುತ್ತಿರುವ ಇವರು ಕಲೆಯೆಂದರೆ ಹವ್ಯಾಸವಲ್ಲ, ಬದುಕು ಅನ್ನುವ ಅವರದ್ದು ಅಂತಾರಾಷ್ಟ್ರೀಯ ಕೀರ್ತಿ!! ಇಂತಹ ಕಲಾ ಆರಾಧಕಿ ಮಯೂರಿ ಅವರಿಗೆ ಗಣರಾಜ್ಯೋತ್ಸವದ ಅಂಗವಾಗಿ ಪ್ರಧಾನಮಂತ್ರಿ ಕಡೆಯಿಂದ ವಿಶೇಷವಾದ ಉಡುಗೊರೆಯೊಂದು ಸಿಕ್ಕಿದೆ. ಈ ಬಗ್ಗೆ ಅವರು ಟ್ವಿಟ್ಟರ್ ನಲ್ಲಿ ಹೇಳಿಕೊಂಡಿದ್ದಾರೆ.

ಅಷ್ಟಕ್ಕೂ ಮೋದಿ ನೀಡಿರುವ ಗಿಫ್ಟ್ ಅದರೂ ಏನೂ ಗೊತ್ತಾ?

ಮೈಸೂರು ಮೂಲದ ಮಯೂರಿ ಅಂಬೆಗಾಲಿಡುವಾಗಲೇ ನೃತ್ಯವನ್ನು ಒಲಿಸಿಕೊಂಡವರು. ಆರು ವರ್ಷದ ಹೊತ್ತಿಗೆ ಭರತನಾಟ್ಯ ತರಗತಿ ಸೇರುವ ಮೂಲಕ ನೃತ್ಯವನ್ನು ಸಾಂಪ್ರದಾಯಿಕವಾಗಿ ಕಲಿಯಲು ಆರಂಭಿಸಿದರು. ಅಷ್ಟೇ ಅಲ್ಲದೇ, ಭರತನಾಟ್ಯ, ಕಥಕ್ ಹಾಗೂ ಕಲರಿಪಟ್ಟು ಮಯೂರಿ ಅವರಿಗೆ ಸಿದ್ಧಿಸಿದ ಕಲೆ. ಕಾಲೇಜು ಮುಗಿಯುವ ಹೊತ್ತಿಗೆ ನೃತರುತ್ಯ ಸಮಕಾಲೀನ ನೃತ್ಯಗಳ ಒಂದು ಸಂಸ್ಥೆಯನ್ನು ಹುಟ್ಟು ಹಾಕಿ 2-3 ಸಾವಿರ ಪ್ರದರ್ಶನಗಳನ್ನು ದೇಶ, ವಿದೇಶಗಳಲ್ಲಿ ನೀಡಿದ್ದಾರೆ.

ಫಿಜಿಕಲ್ ಮೂಮೆಂಟ್, ಸೈಕೋಲಜಿಕಲ್ ಎಫೆಕ್ಟ್ ಅಂತಲೇ ಪ್ರೇಕ್ಷಕರೆದುರು ಎದುರಾಗುವ ಅವರು, ಮಾಡೆಲಿಂಗ್, ಕೊರಿಯೋಗ್ರಫಿ ಅಂತೆಲ್ಲ ಬಿಝಿ ಇದ್ದವರು ಇದೀಗ ಡಾನ್ಸಿಂಗ್ ಸ್ಟಾರ್ ಮೂಲಕ ಕಿರುತೆರೆಗೂ ಪ್ರವೇಶಿಸಿದ್ದಾರೆ. ಆದರೆ ಇದೀಗ ಮಯೂರಿ ಉಪಾಧ್ಯ ಅವರಿಗೆ ಗಣರಾಜ್ಯೋತ್ಸವದ ಅಂಗವಾಗಿ ಪ್ರಧಾನಮಂತ್ರಿಗಳ ಕಡೆಯಿಂದ ವಿಶೇಷವಾದ ಉಡುಗೊರೆಯೊಂದು ಸಿಕ್ಕಿದೆ. ಈ ಬಗ್ಗೆ ಮಯೂರಿ ಸಾಮಾಜಿಕ ಜಾಲತಾಣದಲ್ಲಿ ಹೇಳಿಕೊಂಡಿದ್ದಾರೆ.

ಪ್ರಧಾನಿ ಕಡೆಯಿಂದ ಮೇಕ್ ಇನ್ ಇಂಡಿಯಾ ಥೀಮ್ ನಲ್ಲಿ ಸಿದ್ಧವಾಗುವ ಕೈ ಗಡಿಯಾರವನ್ನು ಮಯೂರಿ ಅವರಿಗೆ ಉಡುಗೊರೆಯಾಗಿ ಕಳುಹಿಸಿಕೊಟ್ಟಿದ್ದಾರೆ. ಉಡುಗೊರೆಯನ್ನು ಪಡೆದ ಮಯೂರಿ ಈ ಬಗ್ಗೆ ತಮ್ಮ ಸಂತಸವನ್ನು ಟ್ವಿಟ್ಟರ್ ನಲ್ಲಿ ವ್ಯಕ್ತಪಡಿಸಿದ್ದಾರೆ.

“ನಮ್ಮ ಪ್ರಧಾನಿ ಮೋದಿ ಅವರ ಅಮೂಲ್ಯ ಕೊಡುಗೆ ಇದು. ಅವರಿಂದ ಉಡುಗೊರೆ ಬಂದಿರುವುದು ಬೆಲೆ ಕಟ್ಟಲು ಸಾಧ್ಯವಾಗದೆ ಇರುವಂತದ್ದು” ಎಂದು ಅವರು ಟ್ವೀಟ್ ಮಾಡಿದ್ದಾರೆ. ಮೇಕ್ ಇನ್ ಇಂಡಿಯಾ ಕಾರ್ಯಕ್ರಮದಲ್ಲಿ ಮಯೂರಿ ಅವರ ತಂಡದಿಂದ ನೃತ್ಯವನ್ನ ಪ್ರದರ್ಶನ ಮಾಡಲಾಗಿತ್ತು. ಆದ್ದರಿಂದ ಪ್ರಧಾನಿ ಮೋದಿ ಅವರು ಈ ಉಡುಗೊರೆ ನೀಡಿದ್ದಾರೆ ಎಂದು ತಿಳಿದುಬಂದಿದೆ.

ಈ ವರ್ಷದ ಗಣರಾಜ್ಯದ ದಿನದಂದು ತಮ್ಮ ನೃತ್ಯ ತಂಡದ ಜೊತೆ ನವಿಲಿನಂತೆ ಕುಣಿಸಿದ್ದ ಮಯೂರಿ ಇದರ ಫಲವಾಗಿ ಮೇಕ್ ಇಂಡಿಯಾ ಥೀಮ್ ಇರುವ ವಾಚೊಂದನ್ನು ಮೋದಿ ಅವರಿಂದ ಪಡೆದು ಕೊಂಡಿದ್ದಾರೆ!! ಈ ಬಗ್ಗೆ ಟ್ವೀಟರ್ ಮೂಲಕ ಸಂತಸವನ್ನು ವ್ಯಕ್ತಪಡಿಸಿದ್ದಾರೆ.

https://kannada.filmibeat.com/news/mayuri-upadhya-has-been-received-special-gift-from-prime-minister-modi-029824.html

ನೃತ್ಯ ಅಂದ್ರೆ ಸಂಗೀತ….ಸಂಗೀತ ಅಂದ್ರೆ ನೃತ್ಯ. ಒಂದಕ್ಕೊಂದು ಬಿಟ್ಟಿರದ ಕಲೆಗೆ ದಾಂಪತ್ಯದ ನಂಟು. ಗಾಯಕ ರಘು ದೀಕ್ಷಿತ್ ಪತ್ನಿ ಮಯೂರಿ ಉಪಾಧ್ಯ ಅವರ ಬದುಕು ತೆರೆದುಕೊಳ್ಳುವುದೇ ಕಲೆಯ ಮೂಲಕ. ಬದುಕನ್ನು ಸ್ವಚ್ಛಂದವಾಗಿಯೇ ಬದುಕುವ ಅವರಿಗೆ ಕಲೆಯೇ ಉಸಿರಾಗಿದ್ದು, ಸಿನಿಮಾಗಳಿಗೂ ಕೋರಿಯೋಗ್ರಾಫ್ ಮಾಡುವುದರ ಜೊತೆಯಲ್ಲಿ ರಿಯಾಲಿಟಿ ಶೋನಲ್ಲಿಯೂ ತೀರ್ಪುಗಾರರಾಗಿ ಕಾಣಿಸಿಕೊಳ್ಳುತ್ತಿರುವ ಇವರು ಮೇಕ್ ಇನ್ ಇಂಡಿಯಾ ಥೀಮ್ ನಲ್ಲಿ ರೆಡಿಯಾಗಿರುವ ಕೈ ಗಡಿಯಾರವನ್ನು ಪ್ರಧಾನಿ ನರೇಂದ್ರ ಮೋದಿಯವರಿಂದಲೇ ಪಡೆದುಕೊಂಡಿದ್ದಾರೆ ಎಂದರೆ ಅದಕ್ಕಿಂತ ದೊಡ್ಡ ಸಂತಸದ ವಿಚಾರ ಬೇರೊಂದಿಲ್ಲ!!

– ಅಲೋಖಾ

Tags

Related Articles

Close