ಪ್ರಚಲಿತ

ಮಲೇಷಿಯಾ – ಭಾರತ ಬಾಂಧವ್ಯದ ಬಗ್ಗೆ ಎಸ್. ಜೈಶಂಕರ್ ಏನಂದ್ರು ಗೊತ್ತಾ?

ವಿದೇಶಗಳ ಜೊತೆಗೆ ಉತ್ತಮ ಬಾಂಧವ್ಯ ಬೆಳೆಸಿಕೊಳ್ಳುವಲ್ಲಿ ಪ್ರಧಾನಿ ಮೋದಿ ಅವರ ಸರ್ಕಾರ ಯಶಸ್ಸು ಪಡೆದಿದೆ. ವಿಶ್ವವನ್ನು ವಿಶ್ವಾಸಕ್ಕೆ ತೆಗೆದುಕೊಂಡು ಭಾರತವನ್ನು ವಿಶ್ವಗುರುವನ್ನಾಗಿಸುವ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಅದರಲ್ಲಿ ಫಲ ಕಾಣುತ್ತಿದೆ ‌ಎನ್ನುವುದರಲ್ಲಿ ಎರಡು ಮಾತಿಲ್ಲ.

ಭಾರತ‌ ಮತ್ತು ಮಲೇಷ್ಯಾ ನಡುವೆ ಉತ್ತಮ ಬಾಂಧವ್ಯ ಸೃಷ್ಟಿಸುವ ನಿಟ್ಟಿನಲ್ಲಿಯೂ ಕೇಂದ್ರ ಸರ್ಕಾರ ಮಾತುಕತೆ ನಡೆಸಿದೆ.

ಈ ಬಗ್ಗೆ ಕೇಂದ್ರ ಸಚಿವ ಜೈಶಂಕರ್ ‌ಅವರು ಮಾತನಾಡಿದ್ದು, ಭಾರತ ಮತ್ತು ಮಲೇಷ್ಯಾ ನಡುವೆ ಪರಸ್ಪರ ಉತ್ತಮ ಮಾರುಕಟ್ಟೆ ಪ್ರವೇಶ, ಹೆಚ್ಚುತ್ತಿರುವ ಹೂಡಿಕೆ, ವಾಯು ಸಂಪರ್ಕ, ಪ್ರವಾಸೋದ್ಯಮ, ಚಲನಶೀಲತೆಯ ಆಡಳಿತ ನಿರ್ಮಾಣಕ್ಕಾಗಿ ಎರಡೂ ದೇಶಗಳು ಪರಸ್ಪರ ಚರ್ಚೆ ನಡೆಸಿರುವುದಾಗಿ ತಿಳಿಸಿದ್ದಾರೆ.

ಮಲೇಷ್ಯಾಗೆ ಅಧಿಕೃತ ಭೇಟಿಯಲ್ಲಿ ಇರುವ ಜೈ ಶಂಕರ್, ಕೌಲಾಲಂಪುರ್ ‌ನಲ್ಲಿ ಭಾರತೀಯ ವಲಸಿಗರನ್ನು ಉದ್ದೇಶಿಸಿ ಮಾತನಾಡಿದ್ದಾರೆ. ಎರಡೂ ರಾಷ್ಟ್ರಗಳ ನಡುವೆ ಉತ್ತಮ ಮಾರುಕಟ್ಟೆ ಹೊಂದುವುದು, ಉಭಯ ರಾಷ್ಟ್ರಗಳ ನಡುವೆ ವಾಯು ಸಂಪರ್ಕ ಬೆಸೆಯುವುದು, ಚಲನಶೀಲ ಆಡಳಿತದ ಸುಧಾರಣೆ ಹೇಗೆ ಎಂಬುದರ ಬಗೆಗೆ ಮಾತುಕತೆಯನ್ನು ಉಭಯ ದೇಶಗಳು ಚರ್ಚಿಸಿವೆ ಎಂದಿದ್ದಾರೆ.

ಹಾಗೆಯೇ ಮಲೇಷಿಯಾವು ಭಾರತದ ಹಲವು ಪ್ರತಿಭೆಗಳಿಗೆ ಮುಕ್ತ ಅವಕಾಶವನ್ನು ನೀಡಿದೆ. ಪ್ರವಾಸೋದ್ಯಮವನ್ನು ಹೇಗೆ ಹೆಚ್ಚಿಸುವುದು ಎನ್ನುವುದರ ಬಗೆಗೂ ಚರ್ಚಿಸಲಾಗಿದೆ. ಮಲೇಷಿಯಾ ದೇಶವು ಭಾರತೀಯ ಪ್ರವಾಸಿಗರನ್ನು ತನ್ನತ್ತ ಬರುವಂತೆ ಮಾಡಲು ತೆಗೆದುಕೊಂಡ ಉಪಕ್ರಮಗಳ ಬಗ್ಗೆ ನಾವು ಹರ್ಷಿತರಾಗಿದ್ದೇವೆ ಎಂದು ತಿಳಿಸಿದ್ದಾರೆ.

ಉಭಯ ರಾಷ್ಟ್ರಗಳು ಪಾಲುದಾರಿಕೆಯ ಎರಡನೇ ದಶಕವನ್ನು ಪ್ರವೇಶಿಸುತ್ತಿವೆ. 2015 ರಲ್ಲಿ ನಮ್ಮ ಮತ್ತು ಮಲೇಷ್ಯಾ ನಡುವಿನ ವರ್ಧಿತ ಕಾರ್ಯತಂತ್ರದ ಸಹಭಾಗಿತ್ವ ಆರಂಭವಾಯಿತು. ಪ್ರಸ್ತುತ ಮಹತ್ವಾಕಾಂಕ್ಷೆಗಳನ್ನು ರೂಪಿಸುವ ಮೂಲಕ ಈ ಸಂಬಂಧವನ್ನು ಗಟ್ಟಿ ಮಾಡುವುದು ನಮ್ಮ ಉದ್ದೇಶ ಎಂದು ಅವರು ಹೇಳಿದ್ದಾರೆ. ಹಲವಾರು ಡೊಮೇನ್‌ಗಳಲ್ಲಿ ಎರಡೂ ರಾಷ್ಟ್ರಗಳು ಸಂಬಂಧ ವೃದ್ಧಿಯ ಬಗ್ಗೆ ನಿಕಟ ಸಂವಹನ ನಡೆಸುತ್ತಿರುವುದಾಗಿ ಮಾಹಿತಿ ನೀಡಿದ್ದಾರೆ.

Tags

Related Articles

Close