ಪ್ರಚಲಿತ

ಕಾಂಗ್ರೆಸ್ ಸಭೆಯಲ್ಲಿ ಕಣ್ಣೀರಿಟ್ಟ ಕುಮಾರಸ್ವಾಮಿ..! ದಯವಿಟ್ಟು ಕಾಪಾಡಿ ಎಂದು ಗೋಗರೆದ ಮಾಜಿ ಸಿಎಂ..!

ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷದ ನಾಯಕರು ಅಧಿಕಾರಕ್ಕಾಗಿ ಯಾವ ನಾಟಕ ಬೇಕಾದರೂ ಮಾಡಲು ಸಿದ್ದರಿದ್ದಾರೆ ಎಂಬುವುದು ಇದೀಗ ಗುಟ್ಟಾಗಿ ಉಳಿದಿಲ್ಲ. ಚುನಾವಣಾ ಪೂರ್ವದಲ್ಲಿ ಪರಸ್ಪರ ಬಾಯಿಗೆ ಬಂದ ಹಾಗೆ ಟೀಕಿಸುತ್ತಿದ್ದ ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರು ಇದೀಗ ಅಧಿಕಾರಕ್ಕಾಗಿ ಅವೆಲ್ಲವನ್ನೂ ಮರೆತು ಅಡ್ಡದಾರಿ ಹಿಡಿದಿದ್ದಾರೆ.

ಕಾಂಗ್ರೆಸ್ ಸಭೆಯಲ್ಲಿ ಕಣ್ಣೀರಿಟ್ಟ ಮಾಜಿ ಸಿಎಂ..!

ಈ ಹಿಂದೆ ಅಪ್ಪ ಮಕ್ಕಳಲ್ಲಿ ಚುನಾವಣೆ ಗೆಲ್ಲಲು ಕಣ್ಣೀರಿಟ್ಟ ಕಥೆಗಳನ್ನು ನಾವು ಕೇಳಿದ್ದೇವೆ. ನಾನು ಬದುಕಬೇಕು ಎಂದಾದರೆ ನನ್ನನ್ನು ಈ ಬಾರಿ ಮುಖ್ಯಮಂತ್ರಿ ಮಾಡಿ. ಇಲ್ಲವಾದಲ್ಲಿ ನಾನು ಸಾಯಬೇಕಾದ ಪರಿಸ್ಥಿತಿ ಎದುರಾಗಲಿದೆ ದ ಮತದಾರರನ್ನು ಹೈಜಾಕ್ ಮಾಡಿದ್ದರು. ಇದೀಗ ಅದು ಮತ್ತೆ ಮರುಕಳಿಸುತ್ತಿದೆ.

ಕುಮಾರಸ್ವಾಮಿ ಅವರು ಅಪ್ಪನಾಣೆಗೂ ಮುಖ್ಯಮಂತ್ರಿ ಆಗೋದಿಲ್ಲ ಎಂದು ಹೇಳಿದ್ದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಜೊತೆಗೆ ಸರಕಾರ ಮಾಡಲು ಮುಂದಾಗಿದ್ದಾರೆ. ಭಾರತೀಯ ಜನತಾ ಪಕ್ಷ ವನ್ನು ಅಧಿಕಾರದಿಂದ ದೂರ ಇಡಬೇಕು. ಆ ಪಕ್ಷ ಅಧಿಕಾರಕ್ಕೆ ಬಂದರೆ ತಮ್ಮ ಹಗರಣಗಳು ಎಲ್ಲಿ ಬಯಲಾಗುತ್ತೋ ಎನ್ನುವ ಭಯದಿಂದ ಜನತಾ ದಳದೊಂದಿಗೆ ಮೈತ್ರಿ ಮಾಡಿಕೊಳ್ಳಲು ಮುಂದಾಗುತ್ತಾರೆ. ಕುಮಾರಸ್ವಾಮಿಗೆ ಯಾವ ಪಕ್ಷ ಆದರೇನು ಮುಖ್ಯಮಂತ್ರಿ ಆದರೆ ಸಾಕು.

ಆದರೆ ಭಾರತೀಯ ಜನತಾ ಪಕ್ಷದ ಶಾಸಕಾಂಗ ಪಕ್ಷದ ನಾಯಕ ಬಿಎಸ್ ಯಡಿಯೂರಪ್ಪ ರಾಜ್ಯದ ಮುಖ್ಯಮಂತ್ರಿ ಯಾಗಿ ಪ್ರಮಾಣ ವಚನ ಸಲ್ಲಿಸಿದ ನಂತರ ಕಾಂಗ್ರೆಸ್ ಹಾಗೂ ಜನತಾ ದಳದ ಪಾಳಯದಲ್ಲಿ ಆದಂತಹ ಬೆಳವಣಿಗೆಯನ್ನು ರಾಜ್ಯವೇ ಕಂಡಿದೆ. ರಾಜ್ಯದ ಜನತೆ ಈ ಎರಡು ಪಕ್ಷಗಳನ್ನು ಮನೆಗೆ ಕಳಿಸಿದ್ದರೂ ಕೂಡಾ ಇರುವ ಅಲ್ಪಸ್ವಲ್ಪ ಸ್ಥಾನಗಳನ್ನು ಹಿಡಿದುಕೊಂಡು ಅಧಿಕಾರಕ್ಕಾಗಿ ಹಪಹಪಿಸುತ್ತಿದೆ.

Related image

ನಂತರ ನ್ಯಾಯಾಲಯದ ಮೊರೆ ಹೋಗಿದ್ದು ನಾಳೆ ೪ಗಂಟೆಯ ಒಳಗೆ ಬಹುಮತವನ್ನು ಸಾಭೀತು ಪಡಿಸಿ ಎಂದು ಕೋರ್ಟ್ ಆದೇಶಿಸಿದೆ. ಇದೀಗ ಹೈದರಾಬಾದ್ ರೆಸಾರ್ಟ್ ನಲ್ಲಿರುವ ಕಾಂಗ್ರೆಸ್ ಪಕ್ಷದ ಶಾಸಕರನ್ನು ಭೇಟಿ ಮಾಡಿ ಗೊಳೋ ಅಂತ ಕಣ್ಣೀರಿಡುತ್ತಾ ಮಾಜಿ ಸಿಎಂ ಮಾತನಾಡಿದ್ದಾರೆ.

“ದಯವಿಟ್ಟು ಪಕ್ಷದ ವಿರುದ್ದ ಮತ ನೀಡಬೇಡಿ, ಈ ಬಾರಿ ಒಂದು ಸಲ ಅವಕಾಶ ನೀಡಿ. ನಿಮ್ಮೊಂದಿಗೆ ಸದಾ ನಾನಿದ್ದೇನೆ. ನಾವೆಲ್ಲರೂ ಈ ಸಮಯದಲ್ಲಿ ಒಗ್ಗಟ್ಟನ್ನು ಪ್ರದರ್ಶಿಸಬೇಕು. ಇದು ನನ್ನ ಮಾತ್ರವಲ್ಲದೆ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷದ ಮರ್ಯಾದೆ ಯ ಪ್ರಶ್ನೆ. ದಯವಿಟ್ಟು ಯಾರೂ ಅಡ್ಡಮತದಾನ ಮಾಡಬೇಡಿ ” ಎಂದು ಹೇಳುತ್ತಲೇ ಕಣ್ಣೀರಿಟ್ಟರು.

ಭಾವುಕರಾಗಿ ಕಾಂಗ್ರೆಸ್ ಪಕ್ಷದ ಶಾಸಕರನ್ನು ಕಟ್ಟಿ ಹಾಕುವ ಪ್ರಯತ್ನವನ್ನು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಮಾಡಿದ್ದಾರೆ. ಆದರೆ ಇದು ನಾಳೆ ನಡೆಯುವ ಬಹುಮತ ಸಾಭೀತು ಪ್ರಕ್ರಿಯೆ ಯಲ್ಲಿ ಫಲಿಸುತ್ತಾ ಎಂಬುದನ್ನು ಕಾದುನೋಡಬೇಕಾಗಿದೆ.

-ಸುನಿಲ್ ಪಣಪಿಲ

Tags

Related Articles

Close