ಅಂಕಣ

ಮಹಿಳಾ ಸಶಕ್ತೀಕರಣದ ಜ್ವಲಂತ ಉದಾಹರಣೆಯಾದ ಆರ್ ಎಸ್ ಎಸ್ ನಂತೆಯೆ ರಾಷ್ಟ್ರ ರಕ್ಷಣೆಯೆ ಪರಮ ಗುರಿ ಎನ್ನುವ ರಾಷ್ಟ್ರ ಸೇವಿಕಾ ಸಮಿತಿಯ ಬಗ್ಗೆ ತಿಳಿದಿದೆಯೆ?

ಎಲ್ಲಿ ಮಹಿಳೆಯರು ಸಶಕ್ತರಾಗಿರುತ್ತಾರೊ ಆ ರಾಷ್ಟ್ರವೆ ಸಶಕ್ತವಾಗಿರುತ್ತದೆ. ಸ್ವಲ್ಪ ನಿಮ್ಮ ಮನಸ್ಸನ್ನು ಸನಾತನ ಕಾಲದೆಡೆಗೆ ತೆಗೆದುಕೊಂಡು ಹೋಗಿ. ಸನಾತನ ಭಾರತದ ಮಹಿಳೆಯರು ಯಾವ ಪುರುಷನಿಗಿಂತಲೂ ಕಡಿಮೆಯಿರಲಿಲ್ಲ. ಆದಿ ಶಕ್ತಿ, ದುರ್ಗೆ, ಮಹಾ ಮಾಯೆ, ಉಗ್ರ ಕಾಳಿ ಇವರೆಲ್ಲ ರಕ್ಕಸರ ರುಂಡ ಚೆಂಡಾಡಿದವರೆ ಅಲ್ಲವೆ? ರಾಣಿ ದುರ್ಗಾ ದೇವಿ, ಝಾನ್ಸಿ ರಾಣಿ, ರಾಣಿ ಅಬ್ಬಕ್ಕ, ರಾಣಿ ನಾಯಕಿ ದೇವಿ ಅಂತಹ ವೀರಾಂಗನೆಯರು ಖಡ್ಗ ಹಿಡಿದು ರಣ ಚಂಡಿಯರಂತೆ ಹೋರಾಡಿರಲಿಲ್ಲವೆ? ಭಾರತಕ್ಕೆ ಇಸ್ಲಾಮಿನ ಮತಾಂಧ ಕಾಮುಕರು ಧಾಂಗುಡಿ ಇಟ್ಟ ಮೇಲೆ ನಮ್ಮ ಮಹಿಳೆಯರು ಶೋಚನೀಯ ಪರಿಸ್ಥಿತಿಯಲ್ಲಿ ಬಾಳಬೇಕಾದದ್ದು ನಮ್ಮ ದುರ್ದೈವ. ಅದು ಹೊರತು ಪಡಿಸಿ ಸನಾತನ ಸಭ್ಯತೆ ನಾರಿಯರನ್ನು ಯಾವತ್ತೂ ಪುರುಷರಿಗಿಂತ ಕೀಳಾಗಿ ಕಂಡದ್ದೆ ಇಲ್ಲ. ಸಾಕ್ಷಾತ್ ಶಿವನನ್ನು “ಅರ್ಧನಾರೀಶ್ವರ” ರೂಪದಲ್ಲಿ ಪೂಜಿಸುವ ಪುಣ್ಯ ಭೂಮಿ ನಾರಿಯರನ್ನು ಕೀಳಾಗಿ ಕಾಣಲು ಹೇಗೆ ಸಾಧ್ಯ?

ದೇಶದ ರಕ್ಷಣೆ ವಿಷಯ ಬಂದಾಗ ನಮ್ಮ ಭಾರತೀಯ ನಾರಿಯರು ತಮ್ಮ ಪ್ರಾಣವನ್ನೂ ಪಣಕಿಟ್ಟಿದ್ದಾರೆ ಮಾತ್ರವಲ್ಲ ಇವತ್ತೂ ಪಣಕ್ಕಿಡುತ್ತಿದ್ದಾರೆ. ರಾಷ್ಟ್ರ ರಕ್ಷಣೆಗಾಗಿ ಸದಾ ಸನ್ನದ್ಧರಾಗಿರುವ ರಾಷ್ಟೀಯ ಸ್ವಯಂ ಸೇವಕ ಸಂಘದ ಬಗ್ಗೆ ಪುಟ್ಟ ಮಗುವಿಗೂ ಗೂತ್ತು. ಅಂತೆಯೆ ರಾಷ್ಟ್ರ ರಕ್ಷಣೆಗಾಗಿ ಪಣ ತೊಟ್ಟಿರುವ ರಾಷ್ಟ ಸೇವಿಕಾ ಸಮಿತಿಯ ಬಗ್ಗೆ ಗೊತ್ತೆ? ಪಪ್ಪುನಂತಹ ಹಲವರಿಗೆ ಈ ವಿಷಯ ಗೊತ್ತೆ ಇರಲಿಕ್ಕಿಲ್ಲ. ಇಂತಹ ಮಂದಬುದ್ದಿಯ ಜನರು ಆರ್ ಎಸ್ ಎಸ್ ನಲ್ಲಿ ಮಹಿಳೆಯರಿಲ್ಲ ಎಂದು ವರಾತ ತೆಗೆಯುತ್ತಾರೆ. ಆದರೆ ಮಹಿಳೆಯರಿಂದ ಮಹಿಳಿಯರಿಗಾಗಿಯೆ ಇರುವ ರಾಷ್ಟ್ರ ಸೇವಿಕಾ ಸಮಿತಿಯ ಬಗ್ಗೆ ಇವರಿಗೆ ತಿಳಿದಿಲ್ಲ.

ರಾಷ್ಟ್ರ ಸೇವಿಕಾ ಸಮಿತಿ, ದೇಶದ ಎಲ್ಲಾ “ದೇಶಪ್ರೇಮಿ” ಮಹಿಳೆಯರ ಸಂಘಟನೆ. ಈ ಸಂಘಟನೆ ಥೇಟ್ ಆರ್ ಎಸ್ ಎಸ್ ನಂತೆಯೆ ಕಾರ್ಯ ನಿರ್ವಹಿಸಿದರೂ ಇದು ಆರ್ ಎಸ್ ಎಸ್ ನ ಅಂಗ ಸಂಸ್ಥೆಯಲ್ಲ ಬದಲಾಗಿ ಒಂದು ಸ್ವತಂತ್ರ ಸಂಘಟನೆ. ಆರ್ ಎಸ್ ಎಸ್ ನ ರಾಷ್ಟ್ರ ಸೇವೆಯಿಂದ ಪ್ರೇರಿತರಾಗಿ 1936 ರ ವಿಜಯದಶಮಿಯಂದು ವರ್ಧಾದಲ್ಲಿ ರಾಷ್ಟ್ರ ಸೇವಿಕಾ ಸಮಿತಿಯನ್ನು ಸ್ಥಾಪಿಸಲಾಯಿತು. ಶ್ರೀಮತಿ ಲಕ್ಷ್ಮಿ ಬಾಯಿ ಕೇಳ್ಕರ್(ಮೌಸಿಜಿ) ಅವರ ಕನಸಿನ ಕೂಸು ಈ ಸಮಿತಿ. ಪ್ರಸ್ತುತ ಶಾಂತಾ ಕುಮಾರಿ (ಶಾಂತಕ್ಕ) ಇದರ ಪ್ರಮುಖ ಸಂಚಾಲಕರಾದರೆ ಸೀತಾ ಅನ್ನದನಮ್ ಮುಖ್ಯ ಕಾರ್ಯವಾಹಿಕರಾಗಿದ್ದಾರೆ. ಕಳೆದ 80 ವರ್ಷಗಳಿಂದ ಸದ್ದಿಲ್ಲದೆ ಈ ಸಮಿತಿಯು ದೇಶಕ್ಕಾಗಿ ನಿಸ್ವಾರ್ಥ ಸೇವೆ ಸಲ್ಲಿಸುತ್ತಿದೆ ಎಂದರೆ ಹೆಮ್ಮೆ ಎನಿಸುತ್ತದೆ.

ಸಮಿತಿಯನ್ನು ಪ್ರಾರಂಭಿಸುವ ಮುನ್ನ ಶ್ರೀಮತಿ ಲಕ್ಷ್ಮಿ ಬಾಯಿ ಅವರು ಸಂಘ ಸಂಸ್ಥಾಪಕ ಡಾ.ಕೆ.ಬಿ.ಹೆಗಡೆವಾರ್ ಅವರ ಬಳಿ ಹೋಗಿ ಸಂಘದಲ್ಲಿ ಮಹಿಳೆಯರಿಗೆ ಸ್ಥಾನ ಮಾನ ಕೊಡಬೇಕೆಂದು ನಿವೇದಿಸುತ್ತಾರೆ. ಆದರೆ ಹೆಗಡೆವಾರರು ಸಂಘದಲ್ಲಿ ಸಹಭಾಗಿಯಾಗುವ ಬದಲು ತಮ್ಮದೆ ಸಮಿತಿಯನ್ನು ಸ್ಥಾಪಿಸುವಂತೆ ಹೇಳುತ್ತಾರೆ ಮಾತ್ರವಲ್ಲ ತಮ್ಮ ಸಂಪೂರ್ಣ ಸಹಕಾರ ಸಮಿತಿಯ ಮೇಲೆ ಇರುವುದಾಗಿ ಭರವಸೆ ನೀಡುತ್ತಾರೆ. ಅಂತೆಯೆ ಹುಟ್ಟಿಕೊಳ್ಳುತ್ತದೆ ರಾಷ್ಟ್ರ ಸೇವಿಕಾ ಸಮಿತಿ. ಕೊಟ್ಟ ಮಾತನ್ನು ಉಳಿಸಿ ಸಮಿತಿಗೆ ಸಂಪೂರ್ಣ ಬೆಂಬಲ ನೀಡುತ್ತಾರೆ ಹೆಗಡೆವಾರ್. ದೇಶಕ್ಕಾಗಿ ಎರಡು ಅತ್ಯುನ್ನತ ಸಂಘಗಳನ್ನು ನೀಡಿದ ಶ್ರೀ ಹೆಗಡೆವಾರ್ ಮತ್ತು ಶ್ರೀಮತಿ ಲಕ್ಷ್ಮಿ ಬಾಯಿ ಕೇಳ್ಕರ್ ಅವರಿಗೆ ನಮೋ ನಮಃ

 

ಸಮಿತಿಯ ಮೂರು ಆದರ್ಶಗಳು:

ಮಾತೃತ್ವ( ಸಾರ್ವಭೌಮಿಕ ಮಾತೃತ್ವ)
ಕೃತೃತ್ವ( ದಕ್ಷತೆ ಮತ್ತು ಸಾಮಾಜಿಕ ಸಕ್ರಿಯತಾವಾದ)
ನೇತೃತ್ವ( ಸಾರ್ವಭೌಮಿಕ ನೇತೃತ್ವ)

ಸಮಿತಿಯ ಧ್ಯೇಯ ಸೂತ್ರ: “ಸ್ತ್ರೀ ರಾಷ್ಟ್ರದ ಆಧಾರ ಶಿಲೆಯಾಗಿದ್ದಾಳೆ.” ಎಲ್ಲಾ ಮಹಿಳೆಯರಲ್ಲೂ ತಮ್ಮ ಸಮುದಾಯದಲ್ಲಿ ಸಕಾರಾತ್ಮಕ ಬದಲಾವಣೆ ಮಾಡುವ ಸಾಮರ್ಥ್ಯ ಇದೆಯೆನ್ನುವುದು ಸಮಿತಿಯ ಮುಖ್ಯ ನಂಬಿಕೆ.

ಸಮಿತಿಯ ಕಾರ್ಯ ಪ್ರಣಾಳಿ:

1.ದೈನಂದಿನ ಮತ್ತು ಸಾಪ್ತಾಹಿಕ ಶಾಖೆಗಳ ಮೂಲಕ ಸೇವಿಕಾಗಳ ದೈಹಿಕ-ಬೌದ್ಧಿಕ ವಿಕಾಸ ಮತ್ತು ಮನೋಬಲ ಹೆಚ್ಚಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು.
2.ಪ್ರತಿವರ್ಷವೂ ಬಾಲಿಕಾ, ಯುವತಿ ಮತ್ತು ಗೃಹಿಣಿ ಸೇವಿಕಾಗಳಿಗಾಗಿ ವಿಭಾಗೀಯ ಮತ್ತು ರಾಷ್ಟ್ರೀಯ “ಬೈಠಕ್”ಗಳನ್ನು ಆಯೋಜಿಸುವುದು
3.ಶಿಶು, ಬಾಲಿಕಾ ಮತ್ತು ಗೃಹಿಣಿ ಸೇವಿಕಾಗಳಿಗಾಗಿ ವನ ವಿಹಾರ ಮತ್ತು ಶಿಬಿರಗಳನ್ನು ಏರ್ಪಡಿಸುವುದು.
4.ಪ್ರಾಂತ್ಯ, ವಿಭಾಗ ಮತ್ತು ಅಖಿಲ ಭಾರತೀಯ ಮಟ್ಟದಲ್ಲಿ ಪ್ರಸಂಗೋತ್ಪಾತ ಸಮ್ಮೇಳನಗಳನ್ನು ಅಯೋಜಿಸುವುದು.
5.ಆರೋಗ್ಯ ಶಿಬಿರ, ಛಾತ್ರಾವಾಸ, ಉದ್ಯೋಗ ಮಂದಿರ, ಬಾಲ ಮಂದಿರ, ಸಂಸ್ಕಾರ ವರ್ಗದಂತಹ ವಿವಿಧ ಸಮಾಜ ಸೇವಾ ಕೈಂಕರ್ಯಗಳನ್ನು ಹಮ್ಮಿಕೊಳ್ಳುವುದು.
6.ವಿಶ್ವ ವಿಭಾಗದಲ್ಲಿ ಹಿಂದುತ್ವದ ಪ್ರಸಾರ ಮತ್ತು ಹಿಂದೂ ಬಾಂಧವರನ್ನು ಸಂಘಟಿಸುವುದು ಇವು ಸಮಿತಿಯ ಮುಖ್ಯ ಕಾರ್ಯಗಳು.

ಕಳೆದ 82 ವರ್ಷಗಳಿಂದ ಸ್ವಸ್ಥ ಮತ್ತು ಸಂಸ್ಕಾರಯುತ ಸಮಾಜಕ್ಕೆ ಅಡಿಗಲ್ಲು ಹಾಕಲು ಅಹೋರಾತ್ರಿ ದುಡಿಯುತ್ತಿರುವ ರಾಷ್ಟ್ರ ಸೇವಿಕಾ ಸಮಿತಿ ಆರ್ ಎಸ್ ಎಸ್ ನಂತೆಯೆ ದೇಶದ ಹೆಮ್ಮೆ. ತಮ್ಮ ಸೇವೆಗೆ ಪ್ರತಿಯಾಗಿ ಏನನ್ನೂ ಬಯಸದ ಈ ಎರಡು ಸಂಘಟನೆಗಳನ್ನು ವಿಶ್ವವೆ ಕೊಂಡಾಡುತ್ತದೆ. ನಾಲ್ಕು ಕಾಸಿನ ಪ್ರಯೊಜನಕ್ಕೂ ಇರದ ದೇಶದ ಮಹಿಳಾ “ಪರಪರ” ಸಂಘಟನೆ ಇದ್ದೂ ಸತ್ತಂತಿದೆ. ಕೇವಲ ಹಿಂದು ಸಂಘಟನೆಗಳ ಮೇಲೆ ಕಿಡಿಕಾರುವ ಪರ ಪರ ಸಂಘಟನೆಗಳು ಮಹಿಳೆಯ ಸಶಕ್ತೀಕರಣ ಎಂದರೇನು ಎನ್ನುವುದನ್ನು ರಾಷ್ಟ್ರ ಸೇವಿಕಾ ಸಮಿತಿಯನ್ನು ನೋಡಿ ಕಲಿಯಬೇಕು. ಧರ್ಮ ಮತ್ತು ಮಾತೃಭೂಮಿಯ ರಕ್ಷಣೆಗಾಗಿ ಪ್ರಾಣಾರ್ಪಣೆ ಮಾಡಲು ಸಿದ್ದರಿರುವ ಆರ್ ಎಸ್ ಎಸ್ ಮತ್ತು ರಾಷ್ಟ್ರ ಸೇವಿಕಾ ಸಮಿತಿಯಂತಹ ಸಂಘಟನೆಗಳಿರುವಾಗ ಭಾರತಮಾತೆಯ ಕೂದಲು ಕೊಂಕಿಸಲೂ ಶತ್ರುಗಳಿಗೆ ಅಸಾಧ್ಯ. ಸುಮ್ಮನೆ ಕಾಲಹರಣ ಮಾಡದೆ ದೇಶ ರಕ್ಷಣೆ ಮಾಡುವ ಇಂತಹ ದೇಶಪ್ರೇಮಿ ಸಂಘಟನೆಗಳ ಜೊತೆ ಕೈ ಜೋಡಿಸಿ ದೇಶ ರಕ್ಷಣೆ ಮಾಡಿ ಕೃತಾರ್ಥರಾಗೋಣ. ನಿಸ್ವಾರ್ಥ ಸೇವೆ ಸಲ್ಲಿಸುವ ಸಂಘ ಮತ್ತು ಸಮಿತಿಯ ಕಾರ್ಯಕರ್ತ ಮತ್ತು ಕಾರ್ಯಕರ್ತೆಯರಿಗೆ ಜೈ ಎನ್ನೋಣ.

-ಶಾರ್ವರಿ

Tags

Related Articles

Close