ಪ್ರಚಲಿತ

ಬಿಎಸ್ ಯಡಿಯೂರಪ್ಪ ಮತ್ತೆ ಮುಖ್ಯಮಂತ್ರಿ! ಕಾಂಗ್ರೆಸ್ ಕುಸ್ತಿಯಿಂದ ಬೀಳಲಿದೆ ಸರ್ಕಾರ..! ಕುಮಾರಸ್ವಾಮಿಗೆ ಗುನ್ನಾ ಇಡಲಿದ್ದಾರಾ ಕಾಂಗ್ರೆಸ್ ಅತೃಪ್ತರು?

ಕೇವಲ 8 ಸ್ಥಾನಗಳ ಕೊರತೆಯಿಂದ ಸರ್ಕಾರವನ್ನೇ ಕಳೆದುಕೊಂಡ ಭಾರತೀಯ ಜನತಾ ಪಕ್ಷ ಮತ್ತೆ ಅಧಿಕಾರದ ಗದ್ದುಗೆಗೆ ಏರಲಿದೆ. ಜನತಾ ಆದೇಶ ನೀಡದಿದ್ದರೂ ಕಾಂಗ್ರೆಸ್ ಹಾಗೂ ಜನತಾ ದಳ ಸೇರಿಕೊಂಡು ರಾಜ್ಯದಲ್ಲಿ ಮೈತ್ರಿ ಸರ್ಕಾರವನ್ನು ರಚಿಸಿದ್ದವು. ಈ ಮೈತ್ರಿ ಸರ್ಕಾರಕ್ಕೆ ಜನತಾ ದಳದ ರಾಜ್ಯಾಧ್ಯಕ್ಷ ಕುಮಾರ ಸ್ವಾಮಿಯವರು ಸಾಂಧರ್ಭಿಕ ಶಿಶು ಆಗಿ ಮುಖ್ಯಮಂತ್ರಿಯಾಗಿ ಪ್ರಮಾಣ ವಚನವನ್ನು ಸ್ವೀಕರಿಸಿದ್ದರು. ಆದರೆ ಯಾವಾಗ ಮೈತ್ರಿ ಸರ್ಕಾರ ಆರಂಭವಾಯಿತೋ ಅಂದಿನಿಂದ ಸರ್ಕಾರ ನೆಟ್ಟಗೆ ಆಡಳಿತ ನಡೆಸಿಯೇ ಇಲ್ಲ.

ಕೆಲವೇ ದಿನಗಳಲ್ಲು ಉಪಮುಖ್ಯಮಂತ್ರಿ ಆಯ್ಕೆಯ ವಿಚಾರವಾಗಿ ಭಿನ್ನಮತ ಎದ್ದಿದ್ದರೆ ನಂತರ ಸಚಿವ ಸ್ಥಾನ ಆಕಾಂಕ್ಷಿಗಳ ಭಿನ್ನಮತವೂ ಸ್ಪೋಟಗೊಂಡಿತ್ತು. ಸಚಿವ ಸ್ಥಾನದ ಆಕಾಂಕ್ಷಿಗಳು ಬಂಡಾಯ ಸಾರಿ ಮೈತ್ರಿ ಸರ್ಕಾರದ ವಿರುದ್ಧವೇ ತೊಡೆ ತಟ್ಟಿದ್ದರು. ಶಾಸಕ ಸುಧಾಕರ್, ರೋಷನ್ ಬೇಗ್, ತನ್ವೀರ್ ಸೇಠ್,ರಮೇಶ್ ಜಾರಕಿಹೊಳಿ, ಎಂಬಿ ಪಾಟೀಲ್, ಬಿಸಿ ಪಾಟೀಲ್ ಸೇರಿದಂತೆ ಅನೇಕ ಶಾಸಕರು ಸಚಿವ ಸ್ಥಾನ ಹಾಗೂ ವಿವಿಧ ಖಾತೆಗಳಿಗಾಗಿ ಫೈಟ್ ಮಾಡಿ ಮೈತ್ರಿ ಸರ್ಕಾರವನ್ನೇ ಇಕ್ಕಟ್ಟಿಗೆ ಸಿಲುಕಿಸಿದ್ದರು.

ನಂತರ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪ್ಲಾನ್. ತನಗಿಷ್ಟವಿಲ್ಲದ ಈ ಮೈತ್ರಿ ಸರ್ಕಾರವನ್ನು ಹೇಗಾದರೂ ಮಾಡಿ ಉರುಳಿಸಲೇ ಬೇಕು ಎಂಬ ಹಠ ಹೊದಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರವನ್ನು ಉರುಳಿಸುವ ಖತರ್ನಾಕ್ ಯೋಜನೆಯನ್ನು ರೂಪಿಸುತ್ತಿದ್ದಾರೆ. ಧರ್ಮಸ್ಥಳದಲ್ಲಿ ಕುಳಿತುಕೊಂಡೇ ಸಂಪೂರ್ಣ ಯೋಜನೆಯನ್ನು ರೂಪಿಸುತ್ತಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ತಮ್ಮ ಆಪ್ತ ಶಾಸಕರ ಮೂಲಕ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸುವ ಕೆಲಸವನ್ನು ಮಡುತ್ತಿದ್ದಾರೆ.

Related image

ಈ ಮಧ್ಯೆ 15ಕ್ಕೂ ಅಧಿಕ ಕಾಂಗ್ರೆಸ್ ಶಾಸಕರು ಮಾಜಿ ಮುಖ್ಯಮಂತ್ರಿ ಹಾಗೂ ವಿರೋಧ ಪಕ್ಷದ ನಾಯಕ ಯಡಿಯೂರಪ್ಪನವರ ಸಂಪರ್ಕದಲ್ಲಿ ಇದ್ದಾರೆ ಎನ್ನಲಾಗಿದೆ. ಕರ್ನಾಟಕದಲ್ಲಿ ರಾಜಕೀಯ ಬಿಕ್ಕಟ್ಟು ಆರಂಭವಾದ ಹಿನ್ನೆಲೆಯಲ್ಲಿ ನಿನ್ನೆ ತಾನೇ ಮಾಜಿ ಸಿಎಂ ಬಿಎಸ್ ವೈ ದಿಢೀರ್ ಗುಜರಾತ್‍ಗೆ ಭೇಟಿ ನೀಡಿದ್ದರು. ಗುಜರಾತಿನ ಅಹಮದಬಾದಿನಲ್ಲಿರುವ ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರ ನಿವಾಸಕ್ಕೆ ತೆರಳಿ ಮಾತುಕತೆ ನಡೆಸಿದ್ದಾರೆ.

ಈ ಮೂಲಕ ಯಥಾಶೀಘ್ರ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರವನ್ನು ಉರುಳಿಸಿ ಮತ್ತೆ ಭಾರತೀಯ ಜನತಾ ಪಕ್ಷವನ್ನು ಅಧಿಕಾರಕ್ಕೆ ತರುವ ತಂತ್ರ ಹೆಣೆಯುತ್ತಿದ್ದಾರೆ. ಮುಖ್ಯಮಂತ್ರಿಯಾಗಿ ಪ್ರಮಾಣ ವಚನವನ್ನು ಸ್ವೀಕರಿಸಿ ಬಹುಮತ ಸಾಭೀತುಪಡಿಸಿದ ನಂತರ ಮತ್ತೆ ಬಹುಮತ ಸಾಭೀತುಪಡಿಸಲು 6 ತಿಂಗಳು ಕಾಯಬೇಕಾಗಿರುತ್ತದೆ. ಈ ಹಿನ್ನೆಲೆಯಲ್ಲಿ ಈಗ ಬಹುಮತದ ಬೇಡಿಕೆಗೆ ಪ್ರಯತ್ನ ಪಡುವುದು ವ್ಯರ್ಥ ಪ್ರಯತ್ನ. ಹೀಗಾಗಿ ಕಾಂಗ್ರೆಸ್‍ನ ಅತೃಪ್ತ ಶಾಸಕರಿಂದಲೇ ಬಂಡಾಯ ಸಾರುವ ಭೀತಿಯೂ ಮುಖ್ಯಮಂತ್ರಿ ಕುಮಾರ ಸ್ವಾಮಿಗೆ ಎದುರಾಗಿದೆ. ಹೀಗಾದರೆ ಈ ಕಿರಿಕಿರಿಯಿಂದ ತಾಳಲಾರದೆ ಮುಖ್ಯಮಂತ್ರಿ ಸ್ಥಾನಕ್ಕೆ ಕುಮಾರ ಸ್ವಾಮಿ ರಾಜೀನಾಮೆ ನೀಡಿದ್ರೂ ನೀಡಬಹುದು ಎಂಬ ಸಾಧ್ಯತೆನೂ ಇದೆ ಎನ್ನಲಾಗಿದೆ.

Image result for kumaraswamy sad

ಹೀಗಾಗಿ ಯಥಾ ಶೀಘ್ರ ಈ ಮೈತ್ರಿ ಸರ್ಕಾರ ಉರುಳುತ್ತದೆ ಹಾಗೂ ಮತ್ತೆ ಭಾರತೀಯ ಜನತಾ ಪಕ್ಷ ಅಧಿಕಾರಕ್ಕೆ ಬಂದೇ ಬರುತ್ತದೆ ಎಂಬ ಲೆಕ್ಕಾಚಾರ ಭಾರತೀಯ ಜನತಾ ಪಕ್ಷದ್ದು. ಈ ಬಾರಿ ಗೋಲ್ಡನ್ ಟೈಮ್. ಅದನ್ನು ಯಾವುದೇ ಕಾರಣಕ್ಕೂ ಮಿಸ್ ಮಾಡಿಕೊಳ್ಳಬಾರದೆಂದಿರುವ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರು ಮತ್ತೆ ಮುಖ್ಯಮಂತ್ರಿಯಾಗುವ ಹುಮ್ಮಸ್ಸಿನಲ್ಲಿದ್ದಾರೆ. ಇದು ಈಡೇರುವ ಸಾಧ್ಯತೆಯೂ ನಿಶ್ಚಳವಾಗಿದೆ.

-ಸುನಿಲ್ ಪಣಪಿಲ

Tags

Related Articles

Close