ಪ್ರಚಲಿತ

ಕೇರಳದಲ್ಲೂ ಪಿಎಂ ಮೋದಿ ಹವಾ?: ಸಮೀಕ್ಷೆ ಏನಂದಿತು ಗೊತ್ತಾ!

ಭಾರತ ಸರ್ಕಾರವನ್ನು ಸಮರ್ಥವಾಗಿ ಎರಡು ಬಾರಿ ಮುನ್ನಡೆಸಿದ ಪ್ರಧಾನಿ ಮೋದಿ ಅವರು ಅಭಿವೃದ್ಧಿಯ ಮೂಲಕವೇ ಜನರ ಮನೆ ಮನಗಳ‌ ಮಾತಾಗಿದ್ದಾರೆ ‌ಎನ್ನುವುದು ಅಕ್ಷರಶಃ ಸತ್ಯ.

ಪ್ರಧಾನಿ ಮೋದಿ ಅವರು ತಮ್ಮ ಎರಡು ಅವಧಿಯ ಆಡಳಿತದಲ್ಲಿ ರಾಷ್ಟ್ರೀಯ ನಾಯಕರಾಗಿ ತಮ್ಮ ಸ್ಥಾನವನ್ನು ಮತ್ತಷ್ಟು ಭದ್ರಗೊಳಿಸಿಕೊಂಡಿದ್ದಾರೆ ಎಂದು ಮೂಡಿ ಆಫ್ ದ ನೇಶನ್ ಡಿಜಿಟಲ್ ಸಮೀಕ್ಷೆಯಲ್ಲಿ ಬಹಿರಂಗಗೊಂಡಿದೆ.

ಏಷ್ಯಾನೆಟ್ ನ್ಯೂಸ್ ನೆಟ್ವರ್ಕ್ ಬಹು ಭಾಷೆಗಳ ತನ್ನ ಡಿಜಿಟಲ್ ವೇದಿಕೆಗಳನ್ನು ಬಳಸಿಕೊಂಡು ಈ ಸಮೀಕ್ಷೆ ನಡೆಸಿದ್ದು, ಈ ಸಮೀಕ್ಷೆಯಲ್ಲಿ ಪ್ರಧಾನಿ ಮೋದಿ ಅವರ ಹತ್ತು ವರ್ಷಗಳ ಆಡಳಿತ ಜನರಿಗೆ ತೃಪ್ತಿ ನೀಡಿರುವುದು ಬಹಿರಂಗಗೊಂಡಿದೆ. ಹಾಗೆಯೇ ಮುಂದಿನ ಬಾರಿಯೂ ದೇಶದಲ್ಲಿ ಪ್ರಧಾನಿ ಪಟ್ಟಕ್ಕೆ ನರೇಂದ್ರ ಮೋದಿ ಅವರೇ ಉತ್ತಮ ಆಯ್ಕೆ ಎಂಬ ಪ್ರತಿಕ್ರಿಯೆ ಹೆಚ್ಚು ಜನರಿಂದ ಬಂದಿದೆ. ಮುಂದಿನ ಐದು ವರ್ಷಗಳ ಅವಧಿಗೆ ಯಾವ ಸರ್ಕಾರ ಭಾರತವನ್ನು ಮುನ್ನಡೆಸಬೇಕು ಎಂಬುದಕ್ಕೆ ಸಂಬಂಧಿಸಿದ ಹಾಗೆಯೂ ಈ ಸಮೀಕ್ಷೆಯಲ್ಲಿ ಉತ್ತರ ಬಹಿರಂಗಗೊಂಡಿದೆ.

ಈ ಸಮೀಕ್ಷೆಯಲ್ಲಿ ಬಿಜೆಪಿ ನೇತೃತ್ವದ ಎನ್ ಡಿ ಎ ಸರ್ಕಾರದ ಪರ 78.6% ಗಳಷ್ಟು ಜನರು ಮತ ಚಲಾಯಿಸಿದ್ದಾರೆ‌. ಎನ್.ಡಿ.ಎ. ಮೈತ್ರಿಗೆ ಇಷ್ಟು ಪ್ರಮಾಣದಲ್ಲಿ ಜನ ಜೈ ಎಂದರೆ, ಕಾಂಗ್ರೆಸ್‌ ನೇತೃತ್ವದ ಇಂಡಿ ಒಕ್ಕೂಟಕ್ಕೆ ಕೇವಲ 21.4% ಗಳಷ್ಟು ಜನ ಬೆಂಬಲ ದೊರೆತಿರುವುದಾಗಿದೆ.

ದೇಶದ ಮುಂದಿನ ಪ್ರಧಾನಿ ಯಾರಾಗಬೇಕು ಎನ್ನುವ‌ ಪ್ರಶ್ನೆಗೆ ಪ್ರಧಾನಿ ಮೋದಿ ಅವರಿಗೆ 51.6% ಜನರು ಮತ ಹಾಕಿದ್ದರೆ, ರಾಹುಲ್ ಗಾಂಧಿಗೆ 46.45% ಮತ ದೊರೆತಿದೆ. ಕೇರಳದಂತಹ ಕಮ್ಯೂನಿಸ್ಟ್ ಪಟಾಲಂನಲ್ಲಿಯೂ ಪ್ರಧಾನಿ ಮೋದಿ ಅವರೇ ಮುಂದಿನ ಬಾರಿಯೂ ಪ್ರಧಾನಿ ಆಗಬೇಕು ಎಂಬಂತೆ 40% ಗೂ ಅಧಿಕ ಮತ ಬಿದ್ದಿರುವುದು ಅಚ್ಚರಿಯ ಬೆಳವಣಿಗೆ ಎಂದೇ ಹೇಳಬಹುದು. ಹಾಗೆಯೇ ಅತೀ ಹೆಚ್ಚು ಭರವಸೆಗಳನ್ನು ಈಡೇರಿಸಿದ್ದು ಸಹ ಪ್ರಧಾನಿ ಮೋದಿ ಅವರೇ ಎಂದು ಜನರು ಹೇಳಿದ್ದಾರೆ. ಹಾಗೆಯೇ ಭ್ರಷ್ಟಾಚಾರವನ್ನು ಪರಿಣಾಮಕಾರಿಯಾಗಿ ನಿಗ್ರಹಿಸಿದ್ದು ಮೋದಿ ಅವರೇ ಎನ್ನುವ ಅಭಿಪ್ರಾಯ ಸಹ ಜನಮಾನಸದಿಂದ ‌ವ್ಯಕ್ತವಾಗಿದೆ.

ಒಟ್ಟಿನಲ್ಲಿ ಪ್ರಧಾನಿ ಮೋದಿ ಅವರು ಓರ್ವ ಸಮರ್ಥ ನಾಯಕ. ಅವರನ್ನು ಮೀರಿಸುವ ‌ನಾಯಕ ಬೇರೆ ಯಾವ ಪಕ್ಷದಲ್ಲೂ ‌ಇಲ್ಲ. ಪ್ರಧಾನಿ ಮೋದಿ ಅವರು ನುಡಿದಂತೆ ನಡೆಯುವ ನಾಯಕ ಎನ್ನುವುದು ಈ ಸಮೀಕ್ಷೆಯಿಂದ ಬಹಿರಂಗವಾಗಿದೆ ಎನ್ನಬಹುದು.

Tags

Related Articles

Close