ಪ್ರಚಲಿತ

ಯುಪಿಎ ಸರ್ಕಾರದ ಅವಧಿಯಲ್ಲಿ ನಿರ್ಭೀತಿಯಿಂದ ತಿರುಗಾಡುತ್ತಿದ್ದ ನಕ್ಸಲರ ಆರ್ಭಟವನ್ನು ಹುಟ್ಟಡಗಿಸಿದ ಮೋದಿ ಸರ್ಕಾರ!! ಪೊಲೀಸರ ಅತಿಥಿಗಳಾಗುತ್ತಿದ್ದಾರೆ ನಕ್ಸಲರು!!

ವಂಶಾಡಳಿತದ ರಾಜಕೀಯವನ್ನು ಹೊಡೆದೊಡಿಸಿ ಭಾರತದಲ್ಲಿ ಹೊಸ ಕ್ರಾಂತಿಯ ಅಲೆಯನ್ನೇ ಎಬ್ಬಿಸಿರುವ ನರೇಂದ್ರ ಮೋದಿಯವರ ಕಾರ್ಯವೈಖರಿಯ ಬಗ್ಗೆ ಅದೆಷ್ಟು ಬಾರಿ ಹೊಗಳಿದರೂ ಅದು ಸಾಲದು!! ಈಗಾಗಲೇ ಉಗ್ರರ ಪಾಲಿಗೆ ಸಿಂಹಸ್ವಪ್ನವಾಗಿರುವ ನರೇಂದ್ರ ಮೋದಿಯವರ ರಾಜತಾಂತ್ರಿಕ ನಿರ್ಧಾರಗಳು ಅದೆಷ್ಟು ಪ್ರಬಲವಾಗಿದೆ ಎಂದರೆ ಇಂದು ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತದಲ್ಲಿ ಅತೀಮುಖ್ಯವಾಗಿ ದೇಶಕ್ಕೇ ಮುಳುವಾಗಿರುವ ನಕ್ಸಲರು ನಿರ್ನಾಮವಾಗುತ್ತಿದ್ದಾರೆ ಎಂದರೆ ನಂಬ್ತೀರಾ??

ಆದರೆ ಅದನ್ನು ನಂಬಲೇಬೇಕು!! ಭಾರತದ ಆಂತರಿಕ ಭದ್ರತೆಗೆ ನಕ್ಸಲೀಯರು ಅತ್ಯಂತ ಅಪಾಯಕಾರಿಯಾಗಿ ಪರಿಣಮಿಸತೊಡಗಿದ್ದಾರೆ ಎನ್ನುವ ವಿಚಾರಗಳು ಹಲವು ದಶಕಗಳಿಂದಲೂ ಕೇಳಿ ಬರುತ್ತಿದೆ. ಆದರೆ ಈ ಬಗ್ಗೆ ಕ್ಯಾರೆ ಎನ್ನದ ದೇಶವನ್ನಾಳುತ್ತಿದ್ದ ಯುಪಿಎ ಸರಕಾರದ ನಿರ್ಲಕ್ಷ್ಯದಿಂದಾಗಿ ಅದೆಷ್ಟೋ ಅಮಾಯಕ ನಾಗರೀಕರು, ಆರಕ್ಷಕರು ಹಾಗೂ ಸೇನಾ ಜವಾನರು ಹತ್ಯೆಯಾದರು!! ನಕ್ಸಲ್ ನಾಯಕರನ್ನು ಸಂಧಾನಕ್ಕೆ ಕರೆಯುವ ಪ್ರಶ್ನೆಯೇ ಇಲ್ಲವೆಂದು ಅಂದಿನ ಸರಕಾರ ಕಡ್ಡಿ ಮುರಿಯುವ ಹಾಗೆ ಹೇಳಿಯೇ ಬಿಟ್ಟರು!! ಅಷ್ಟೇ ಯಾಕೆ?? ಚಿದ‌ಂಬರಂ ರವರು ಹಿಂದೆ-ಮುಂದೆ ಯೋಚಿಸದೆ ಆಂಗ್ಲದಲ್ಲಿ ಟಸ್-ಪುಸ್ ಅಂತ “ನಕ್ಸಲರು ದೇಶಕ್ಕೆ ಅಪಾಯಕಾರಿಯಲ್ಲ, ಅವರು ನಮ್ಮ ಹಿಡಿತದಲ್ಲಿಯೇ ಇದ್ದಾರೆ” ಎಂಬ ಒಂದೇ ಹೇಳಿಕೆ ಸುಮಾರು ದಿನಗಳಿಂದ ಇರದಿದ್ದ ನಕ್ಸಲ್ ನರಮೇಧ ಪುನ: ಉಂಟಾಗಲು ಕಾರಣವಾಯಿತು. 

ಹೀಗೆ ಪ್ರತಿಬಾರಿಯು ನಕ್ಸಲರನ್ನು ತಮ್ಮ ಒಡಹುಟ್ಟಿದವರಂತೆ ಕಾಣುತ್ತಿದ್ದ ಕಾಂಗ್ರೆಸ್ಸಿಗರು ದೇಶಕ್ಕೆ ಅನ್ಯಾಯವನ್ನೇ ಮಾಡಿ ಬಿಟ್ಟರು ಎಂದರೆ ತಪ್ಪಾಗಲಾರದು!! ಆದರೆ, ಯಾವಾಗ ನರೇಂದ್ರ ಮೋದಿಯವರು ಅಧಿಕಾರದ ಗದ್ದುಗೆಯನ್ನೇರಿದರೋ ಅಂದಿನಿಂದ ಭ್ರಷ್ಟರಿಗೆ, ಉಗ್ರರಿಗೆ ಸಿಂಹಸ್ವಪ್ನರಾದದ್ದಂತೂ ಅಕ್ಷರಶಃ ನಿಜ!! ನರೇಂದ್ರ ಮೋದಿಯವರು ಪ್ರಧಾನಿಯಾದ ಈ ನಾಲ್ಕು ವರ್ಷದಲ್ಲಿ ನಕ್ಸಲರ ಆರ್ಭಟವನ್ನು ಹುಟ್ಟಡಗಿಸಿದ್ದಲ್ಲದೇ ದೇಶದಲ್ಲಿ ಅನ್ಯಾಯ, ಅನಾಚಾರಗಳನ್ನು ಮಾಡಿ ದೇಶಕ್ಕೆ ಕಂಟಕರಾಗಿದ್ದ ನಕ್ಸಲರನ್ನು ಹೆಡೆಮುರಿಕಟ್ಟಲಾಗಿದೆ.

143 per cent increase in surrenders, how security forces are breaking backs of naxals

ಹಾಗಾಗಿ ಇದೀಗ, ಕೇಂದ್ರ ಸರಕಾರಕ್ಕೆ ಹೆದರಿ ನಕ್ಸಲರು ಪೊಲೀಸರಿಗೆ ಬಂದು ಶರಣಾಗುತ್ತಿದ್ದು, ಈ ಪ್ರಮಾಣ ನಾಲ್ಕು ವರ್ಷದಲ್ಲಿ ಶೇ.143ರಷ್ಟು ಪ್ರಗತಿ ಕಂಡಿದೆ ಎಂದರೆ ಅದು ನರೇಂದ್ರ ಮೋದಿಯವರು ತೆಗೆದುಕೊಂಡಿರುವ ದಿಟ್ಟ ನಿರ್ಧಾರಗಳಿಂದ ಮಾತ್ರ ಸಾಧ್ಯ ಅನ್ನೋದೇ ಹೆಮ್ಮೆಯ ವಿಚಾರ!! ಈ ಹಿಂದೆ ಮೊದಲ ಬಾರಿಗೆ ಭಾರತದ ಪ್ರಧಾನಿಯೊಬ್ಬರು ಇಸ್ರೇಲ್ ಗೆ ಭೇಟಿ ನೀಡುತ್ತಿರುವ ವೇಳೆ “ಎದ್ದೇಳಿ… ವಿಶ್ವದ ಅತ್ಯಂತ ಪ್ರಮುಖ ಪ್ರಧಾನಿ” ಬರುತ್ತಿದ್ದಾರೆ ಎಂದು ನರೇಂದ್ರ ಮೋದಿ ಅವರನ್ನು ಇಸ್ರೇಲ್ ನ ಪ್ರಮುಖ ಬ್ಯುಸಿನೆಸ್ ದಿನ ಪತ್ರಿಕೆ ಹಾಡಿ ಹೊಗಳಿತ್ತು ಎಂದರೆ ಮೋದಿ ಹವ ಎಷ್ಟರ ಮಟ್ಟಿಗೆ ಇದೆ ಎನ್ನುವುದನ್ನು ಯೋಚಿಸಬೇಕಾಗಿದೆ!!

ಈಗಾಗಲೇ ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥರು ಗೂಂಡಾಗಳ ವಿರುದ್ಧ ತೆಗೆದುಕೊಂಡ ನಿರ್ಧಾರದಿಂದ ಅದೆಷ್ಟೋ ಗೂಂಡಾಗಳು ಪೊಲೀಸರಿಗೆ ತಾವೇ ಬಂದು ಶರಣಾಗಿದ್ದರೆ, ಇನ್ನು ಅದೆಷ್ಟೋ ಮಂದಿ ಗೂಂಡಾಗಳು ಸಾಮಾನ್ಯ ಜನರಂತೆ ಕೆಲಸ ಕಾರ್ಯಗಳನ್ನು ಮಾಡುತ್ತಿದ್ದಾರೆ ಎನ್ನುವ ವಿಚಾರ ತಿಳಿದೇ ಇದೆ. ಇನ್ನು, ಕೇಂದ್ರದಲ್ಲಿ ನರೇಂದ್ರ ಮೋದಿ ಸರ್ಕಾರ ರಚನೆಯಾದ ಬಳಿಕ ಪಾಕಿಸ್ತಾನ ಬಾಲ ಮುದುರಿಕೊಂಡು ಕೂತಿದೆ. ಪಾಕ್ ದಾಳಿಗೆ ಭಾರತ ಪ್ರತಿದಾಳಿ ಮಾಡುವ ಮೂಲಕ ಛಾಟಿಯೇಟು ನೀಡಿದೆ. ಅಷ್ಟೇ ಯಾಕೆ, ಚೀನಾವೂ ಭಾರತದ ಎದುರು ಮಂಡಿಯೂರಿರುವುದು ನರೇಂದ್ರ ಮೋದಿಯವರ ರಾಜತಾಂತ್ರಿಕ ಯಶಸ್ಸಿಗೆ ನಿದರ್ಶನ!!

ಇವರಷ್ಟೇ ಅಲ್ಲದೇ, ದೇಶದ ಆಂತರಿಕ ಕಂಟವಾಗಿರುವ ನಕ್ಸಲರೂ ಹೆದರುತ್ತಿದ್ದಾರೆ. ಅದಕ್ಕೆ ಸಾಕ್ಷಿ ಎನ್ನುವಂತೆ 2014ರಲ್ಲಿ ಕೇಂದ್ರದಲ್ಲಿ ನರೇಂದ್ರ ಮೋದಿ ಸರ್ಕಾರ ರಚಿಸಿದ ಬಳಿಕ ನಕ್ಸಲರ ವಿರುದ್ಧ ಸಮರ ಸಾರಿದ್ದು, ಭಾರತೀಯ ಭದ್ರತಾ ಪಡೆಗಳು 2014ರಿಂದ ಇದುವರೆಗೆ ಹಲವು ಕಾರ್ಯಾಚರಣೆಗಳನ್ನು ಕೈಗೊಳ್ಳುವ ಮೂಲಕ ಹಲವು ನಕ್ಸಲರನ್ನು ಹೊಡೆದುರುಳಿಸಿದ್ದಾರೆ. ಇದರ ಪರಿಣಾಮವಾಗಿ 2014ರಿಂದ ಇದುವರೆಗೆ 3,373 ನಕ್ಸಲರು ಪೊಲೀಸರಿಗೆ ಶರಣಾಗಿದ್ದು, ಈ ಶರಣಾಗತಿ ಪ್ರಕ್ರಿಯೆಯಲ್ಲಿ ಶೇ.143ರಷ್ಟು ಪ್ರಗತಿಯಾಗಿದೆ ಎಂದು ಕೇಂದ್ರ ಗೃಹಸಚಿವಾಲಯ ಮಾಹಿತಿ ನೀಡಿದೆ.

Image result for modi

ಅಷ್ಟೇ ಅಲ್ಲದೇ, ನಕ್ಸಲರ ದಾಳಿ ಹಾಗೂ ಹಿಂಸಾತ್ಮಕ ಘಟನೆಯಲ್ಲೂ ಕಡಿಮೆಯಾಗಿದ್ದು 2016ರಲ್ಲಿ 6,524 ದಾಳಿಗಳಾದರೆ, 2017ರಲ್ಲಿ ಇದರ ಪ್ರಮಾಣ 4,136ಕ್ಕೆ ಕುಸಿದಿದ್ದು, ಶೇ. 36ರಷ್ಟು ಕುಸಿತ ಕಂಡಿದೆ. ಇದರ ಜತೆಗೆ ನಕ್ಸಲರ ದಾಲಿಯಿಂದ ಮೃತಪಡುವವರ ಸಂಖ್ಯೆಯಲ್ಲೂ ಇಳಿಮುಖವಾಗಿದ್ದು, ಶೇ55.5ರಷ್ಟು ಕುಸಿತವಾಗಿದೆ. ಇನ್ನು, 2017ರಲ್ಲಿ ನಕ್ಸಲರ ದಾಳಿಯಲ್ಲಿ 188 ಜನ ಮೃತಪಟ್ಟಿದ್ದು, 1999-2017ರ ಅವಧಿಯಲ್ಲಿ ಇದೇ ವರ್ಷ ಕಡಿಮೆ ಜನ ಮೃತಪಟ್ಟಿದ್ದಾರೆ.

ಆದರೆ ಕೇಂದ್ರದಲ್ಲಿ ಯುಪಿಎ ಸರ್ಕಾರ ಇದ್ದಾಗ, ಅಂದರೆ 2010ರ ಇಸವಿಯಲ್ಲಿ 720 ಜನ ನಕ್ಸಲರ ದಾಳಿಯಿಂದ ಮೃತಪಟ್ಟಿದ್ದರು ಎನ್ನುವುದು ತಿಳಿದು ಬಂದಿದೆ. ಒಟ್ಟಿನಲ್ಲಿ, ಇತ್ತಿಚೇಗಷ್ಟೇ ರಾಷ್ಟ್ರ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿರುವ ಸರ್ಕಾರೇತರ ಸಂಸ್ಥೆ(ಎನ್.ಜಿ.ಒ)ಗಳಿಗೆ ಹೇಗೆ ಆರ್ಥಿಕ ನೆರವು ಹರಿದು ಬರುತ್ತಿದೆ ಎಂಬುದನ್ನು ತಿಳಿಯಲು ಭದ್ರತಾ ಅಧಿಕಾರಿಗಳಿಗೆ ಪ್ರಧಾನಿ ನರೇಂದ್ರ ಮೋದಿ ಸೂಚಿಸುವ ಮೂಲಕ ಭ್ರಷ್ಟರ ಎದೆಯಲ್ಲಿ ನಗಾರಿ ಬಾರಿಸಿದ್ದರು. ಆದರೆ ಇದೀಗ ಭ್ರಷ್ಟರಿಗೆ ಮಾತ್ರವಲ್ಲದೇ ನಕ್ಸಲರ ಪಾಲಿಗೂ ಮೋದಿ ಸಿಂಹಸ್ವಪ್ನರಾಗಿರುವುದೇ ಹೆಮ್ಮೆಯ ವಿಚಾರ!!

ಮೂಲ: https://www.oneindia.com/india/143-per-cent-increase-in-surrenders-how-security-forces-are-breaking-backs-of-naxals-2713749.html

– ಅಲೋಖಾ

Tags

Related Articles

Close