ಅಂಕಣ

ಈ ಸಣಕಲು ಶರೀರದ ಕಡ್ಡಿ ಪೈಲ್ವಾನಂತಿರುವ ವ್ಯಕ್ತಿ ಕರೆದರೆಂದರೆ ಸ್ವತಃ ಪ್ರಧಾನಸೇವಕ ಮೋದಿ ಕೆಲಸ ಕಾರ್ಯ ಬಿಟ್ಟು ಅವರಿದ್ದಲ್ಲಿಗೆ ದೌಡಾಯಿಸುತ್ತಾರೆ!! ಯಾರೀತ ಸಂಭಾಜಿ ಭಿಡೆ?

ಅಸ್ಥಿ ಪಂಜರದಂತೆ ತೋರುವ ಪೀಚಲು ಶರೀರದ ಕಡ್ದಿ ಪೈಲ್ವಾವನಂತಿರುವ ಈ ವ್ಯಕ್ತಿ ಬಿಳಿ ಜುಬ್ಬಾ ಪೈಜಾಮ ತೊಟ್ಟು, ತಲೆಗೊಂದು ಬಿಳಿ ಟೋಪಿ ಇಟ್ಟು ಬರಿಗಾಲಲ್ಲೆ ಸೈಕಲ್ ತುಳಿಯುತ್ತಾ ನಿಮ್ಮ ಬಳಿಯಿಂದ ಹಾದು ಹೋಗುತ್ತಿದ್ದರೆ ಇವನಾರೊ ಬಡಪಾಯಿ ಕೃಷಿಕನೊ, ಕೂಲಿ ಕಾರ್ಮಿಕನೊ ಇರಬೇಕೆಂದು ನೀವು ಊಹಿಸಿದರೆ ನಿಮ್ಮ ಊಹೆ ನೂರಕ್ಕೆ ನೂರರಷ್ಟು ತಪ್ಪು!! ತಲೆಗೆ ಭಗವಾ ಪಗಡಿ ಸುತ್ತಿಕೊಂಡು, ಬರಿಗಾಗಲ್ಲಿ ಓಡಾಡುವ 85 ವರ್ಷದ “ಚಿರ ಯುವಕ” ಸಂಭಾಜಿ ಭಿಡೆ ಎಂದರೆ ಮಹಾರಾಷ್ಟದ ಕೋಲ್ಹಾಪುರ ಬಿಡಿ, ಅಮೇರಿಕಾದ ನಾಸಾದವರಿಗೂ ಗೊತ್ತು!! ಸಂಭಾಜಿಯ ಒಂದು ಕರೆಗೆ ಆ ರಾಜ್ಯದ ಮುಖ್ಯಮಂತ್ರಿ, ಶಾಸಕರು ಮಾತ್ರವಲ್ಲ ನಮ್ಮ ಪ್ರಧಾನ ಸೇವಕ ಮೋದಿ ಕೂಡಾ ದೌಡಾಯಿಸಿ ಬರುತ್ತಾರೆಂದರೆ ಅವರ ವರ್ಚಸ್ಸು ಎಂಥದ್ದೆಂದು ನೀವೆ ಊಹಿಸಿ. ಸಂಭಾಜಿ ಭಿಡೆ “ಆದೇಶ” ನೀಡಿದರೆ ಸಾಕು ತಾನು ಬಂದೆ ಬರುತ್ತೇನೆ ಎನ್ನುತ್ತಾರೆ ಮೋದಿ!

ಫಕೀರನಂತೆ ಕಾಣುವ ಈ ವ್ಯಕ್ತಿಯ ವಿದ್ಯಾರ್ಹತೆ ಕೇಳಿದರೆ ತಲೆ ತಿರುಗಿ ಬೀಳುವಿರಿ ನೀವು! ಮಹಾರಾಷ್ಟ್ರದ ಸಾಂಗ್ಲಿಯ ಸಂಭಾಜಿ ವಿನಾಯಕ್ ರಾವ್ ಭಿಡೆ ಎಂದರೆ ನಾಸಾ ಕೂಡಾ ನತಮಸ್ತಕವಾಗುತ್ತದೆ. ಕೋಟ್ಯಂತರ ಯುವಕರ ಕಣ್ಮಣಿ, ಅಭಿಮಾನಿಗಳ ಕೈಯಲ್ಲಿ ಆದರದಿಂದ “ಗುರೂಜಿ” ಎಂದು ಕರೆಸಿಕೊಳ್ಳುವ ಸಂಭಾಜಿ, ಪುಣೆ ವಿಶ್ವವಿದ್ಯಾನಿಲಯದಿಂದ ಎಮ್.ಎಸ್.ಸಿ ಅಟೋಮಿಕ್ ಸೈನ್ಸ್ (ನೂಕ್ಲಿಯರ್ ಫಿಸಿಕ್ಸ್) ನಲ್ಲಿ ಚಿನ್ನದ ಪದಕ ಪಡೆದವರು! ಪುಣೆಯ ಫರ್ಗ್ಯೂಸನ್ ಕಾಲೇಜಿನಲ್ಲಿ ಪೊಫೆಸರ್ ಆಗಿ ಸೇವೆ ಸಲ್ಲಿಸಿರುವರು ಗುರೂಜಿ. ಅವರ ಸಾಧನೆಗಳನ್ನು ಕೇಳಿದರೆ ನಿಮ್ಮ ತಲೆ ಗಿರ್ ರ್… ಎನ್ನದಿರದು.

ಸಂಭಾಜಿ ಗುರೂಜಿ ಸಾಧನೆಗಳು:

  • ನೂರಕ್ಕಿಂತಲೂ ಹೆಚ್ಚು ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಪುರಸ್ಕಾರಗಳನ್ನು ಪಡೆದಿದ್ದಾರೆ.
  • 67 ಡಾಕ್ಟೋರಲ್ ಮತ್ತು ಸ್ನಾತಕೋತ್ತರ ಡಾಕ್ಟೋರಲ್ ಅನುಸಂಧಾನಗಳಲ್ಲಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶಕರಾಗಿ ಕೆಲಸ ನಿರ್ವಹಿಸಿದ್ದಾರೆ.
  • ಅಮೇರಿಕಾದ ಪೆಂಟಗನಿನಲ್ಲಿರುವ NASAದಲ್ಲಿ ಸಲಹೆಗಾರರಾಗಿ ಕಾರ್ಯನಿರ್ವಹಿಸಿದ್ದಾರೆ. ನೆನಪಿಡಿ NASAದಲ್ಲಿ ಸಲಹೆಗಾರರಾಗುವ ಸೌಭಾಗ್ಯ ದೊರೆತ ಮೊದಲ ಮತ್ತು ಏಕೈಕ ವಿಜ್ಞಾನಿ ಸಂಭಾಜಿ ಗುರೂಜಿ. ಇದು ಭಾರತೀಯರಿಗೆ ಹೆಮ್ಮೆಯ ವಿಚಾರ.

ತಾನು ಗೋಲ್ಡ್ ಮೆಡಲಿಸ್ಟ್ ಆಗಿದ್ದರೂ, ನಾಸಾದಲ್ಲಿ ಸಲಹೆಗಾರರಾದ ಭಾರತದ ಏಕೈಕ ವಿಜ್ಞಾನಿಯಾಗಿದ್ದರೂ ಯಾವುದೆ ಹಮ್ಮು-ಬಿಮ್ಮು ಇಲ್ಲದ ಸಾಮಾನ್ಯರಲ್ಲಿ ಅತಿ ಸಾಮಾನ್ಯರಾಗಿರುವಂತಹ ಭಿಡೆ ಗುರೂಜಿ ಮನಸ್ಸು ಮಾಡಿದ್ದರೆ ಇವತ್ತು ನಾಸಾದಲ್ಲಿ ಯಾವುದಾದರೂ ದೊಡ್ಡ ಹುದ್ದೆಯಲ್ಲಿದ್ದು ಬಿಲಿಯನ್ ಗಳಲ್ಲಿ ಸಂಪಾದಿಸಬಹುದಿತ್ತು. ಆದರೆ ಅವರು ಆಯ್ದುಕೊಂಡ ಮಾರ್ಗ ಯಾವುದು ಗೊತ್ತೆ? ಸಮಾಜ ಸೇವೆ ಮತ್ತು ಧರ್ಮ ರಕ್ಷಣೆಯ ಮಹತ್ಕಾರ್ಯ!! ಪ್ರಖರ ಹಿಂದುತ್ವದ ಪ್ರತಿಪಾದಕರಾದ ಭಿಡೆ ಗುರೂಜಿ ಶಿವಾಜಿ ಮಹಾರಾಜರ ಅನನ್ಯ ಭಕ್ತ. ತಾವು ದುಡಿದದ್ದೆಲ್ಲವನ್ನೂ ಸಮಾಜದ ಏಳಿಗೆಗೆ ಸುರಿದ ಗುರೂಜಿ ತನಗಾಗಿ ಏನೂ ಮಾಡಿಟ್ಟಿಲ್ಲ!! ಇವತ್ತು ದೇಶದ ಈ ದುಸ್ಥಿತಿಗೆ ನೆಹರೂರವರೆ ಕಾರಣ ಎನ್ನುವ ಗುರೂಜಿ,  ಜೀವನದ ಕೊನೆ ಘಳಿಗೆಯವರೆಗೂ ದೇಶ ಸೇವೆ ಮಾಡುತ್ತಲೆ ಇರುತ್ತೇನೆ ಎನ್ನುತ್ತಾರೆ.

ಜನರ ಸೇವೆಯೆ ಜೀವನ ಪರಮ ಗುರಿ ಎಂದು 1980 ರಲ್ಲಿ “ಶಿವ ಪ್ರತಿಷ್ಠಾನ ಸಂಸ್ಥೆ”ಯನ್ನು ಹುಟ್ಟು ಹಾಕಿ ಸಮಾಜ ಸೇವೆಗೆ ಧುಮುಕಿದರು ಭಿಡೆ ಗುರೂಜಿ. ಇಂದು ಈ ಸಂಸ್ಥೆಯಲ್ಲಿ ಕೋಟ್ಯಂತರ ಜನರು ಸಮಾಜ ಸೇವೆಗಾಗಿ ತಮ್ಮ ಜೀವನವನ್ನು ಮುಡುಪಾಗಿಟ್ಟಿದ್ದಾರೆ. ಸಂಭಾಜಿ ಭಿಡೆ ಎಂದರೆ ಮಹಾರಾಷ್ಟ್ರದ ದೊಡ್ಡ ದೊಡ್ಡ ನಾಯಕರುಗಳೆಲ್ಲ ಗಡ ಗಡ ನಡುಗುತ್ತಾರೆ. ಅವರ ವ್ಯಕ್ತಿತ್ವವೆ ಅಂಥಹುದು. ದೇಶ ಮತ್ತು ಧರ್ಮಕ್ಕೆ ಅಪಾಯ ಆಗುವಂತಹ ಯಾವುದೆ ವಿಷಯವನ್ನು ನಡೆಯಗೊಡುವುದಿಲ್ಲ ಭಿಡೆ ಗುರೂಜಿ. 2004ರಲ್ಲಿ ಜೇಮ್ಸ್ ಲಾಯಿನೋ ಎಂಬ ಲೇಖಕ ಶಿವಾಜಿ ಬಗ್ಗೆ ಅಪಮಾನಜನಕವಾಗಿ ಬರೆದ “Shivaji: Hindu King in Islamic India” ಪುಸ್ತಕದ ವಿರುದ್ದ ಪುಣೆಯಲ್ಲಿ ಪ್ರದರ್ಶನ ಮಾಡಿದ್ದರು. 2008 ರಲ್ಲಿ ತೆರೆಕಂಡ “ಜೋಧಾ-ಅಕ್ಬರ್” ಹಿಂದಿ ಚಲನಚಿತ್ರದಲ್ಲಿ ಜೋಧಾ ಬಾಯಿಯನ್ನು ವಿವಾದಾತ್ಮಕವಾಗಿ ಚಿತ್ರಿಸಿದಕ್ಕೆ ಆ ಚಿತ್ರದ ಪೋಸ್ಟರಗಳನ್ನೆ ಹರಿದು ಬಿಸಾಕಿ ಸಿನಿಮಾ ಮಂದಿರಗಳಿಗೆ ಎಚ್ಚರಿಕೆ ಕೊಟ್ಟಿದ್ದರು. ಇದಕ್ಕಾಗಿ ಅವರು ಜೈಲು ವಾಸವನ್ನೂ ಅನುಭವಿಸಬೇಕಾಯ್ತು.

ದೇಶ ಮತ್ತು ಧರ್ಮದ ವಿಷಯ ಬಂದಾಗ ಯಾರನ್ನೂ ಲೆಕ್ಕಿಸುವುದಿಲ್ಲ ಈ ಸಣಕಲು ಶರೀರ! ಉಗ್ರ ಹಿಂದುತ್ವ ಪ್ರತಿಪಾದನೆಯಿಂದಾಗಿ ಜಾತ್ಯಾತೀತರ ಹಿಟ್ ಲಿಸ್ಟಿನಲ್ಲಿರುವ ಭಿಡೆ ಅವರ ಮೇಲೆ ಇಲ್ಲಸಲ್ಲದ ಆರೋಪ ಹೊರಿಸಲಾಗಿದೆ. ಅವರಿಗೆ “ಹಿಂದೂ ಉಗ್ರಗಾಮಿ” ಎನ್ನುವ ಪಟ್ಟಕಟ್ಟಲಾಗಿದೆ. ಈ ದೇಶದ ದೌರ್ಭಾಗ್ಯವೆಂದರೆ ಇದೆ. ಇಲ್ಲಿ ಹಿಂದುತ್ವಕ್ಕಾಗಿ ಧ್ವನಿ ಎತ್ತಿದವರಿಗೆ ಉಗ್ರಗಾಮಿಯ ಪಟ್ಟ ಕಟ್ಟಲಾಗುತ್ತದೆ. ‘ಇಸ್ಲಾಮಿನ’ ಹೆಸರಿನಲ್ಲಿ ಸಾವಿರಾರು ಜನರ ಮಾರಣ ಹೋಮ ಮಾಡುವ ‘ಜಿಹಾದಿ’ಗಳು ಜಾತ್ಯತೀತರ ಕಣ್ಣಿಗೆ ದಾರಿ ತಪ್ಪಿದ ಅಮಾಯಕ ಯುವಕರು!! ಅದೇನೆ ಇರಲಿ, ಭಿಡೆ ಗುರೂಜಿ ಆರೋಪ-ಅಪವಾದಗಳಿಗೆ ತಲೆ ಕೆಡಿಸಿಕೊಳ್ಳುವುದಿಲ್ಲ. ನೂರಾರು ಕೇಸುಗಳನ್ನು ಮೈ ಮೇಲೆ ಹಾಕಿಕೊಂಡಿದ್ದರೂ ಧರ್ಮ ರಕ್ಷಣೆಯ ಕಾರ್ಯ ಮಾಡುತ್ತಲೆ ಇದ್ದಾರೆ. ನಾಸಾದಿಂದ ಗುರುತಿಸಲ್ಪಟ್ಟ ಭಾರತದ ವಿಜ್ಞಾನಿ, ಮಹಾನ್ ಧರ್ಮ ಭೀರು ಸಂಭಾಜಿ ಭಿಡೆ ಗುರೂಜಿಯಂತಹ ದೇಶ ಪ್ರೇಮಿಗಳ ಪಾದಾರವಿಂದಕ್ಕೆ ದೀರ್ಘ ದಂಡ ನಮಸ್ಕಾರ. ಭಿಡೆ ಗುರೂಜಿಯವರ ಕಾರ್ಯ ಮುಂದೆ ಇನ್ನಷ್ಟು ಯುವಕರಿಗೆ ಪ್ರೇರಣೆಯಾಗಲಿ.

-ಶಾರ್ವರಿ

Tags

Related Articles

Close