ಅಂಕಣ

ಕೇಳ್ರಪ್ಪೋ ಕೇಳಿ! ಈ ಸೂಟು ಬೂಟಿನ ಸರಕಾರದ ಬಗೆಗಿನ ಸ್ಫೋಟಕ ಮಾಹಿತಿ ಬಹಿರಂಗ!!

ಈಗಾಗಲೇ ಚುನಾವಣೆಯ ಜಿದ್ದಾಜಿದ್ದಿನ ಹೋರಾಟದಲ್ಲಿ ರಾಹುಲ್ ಗಾಂಧಿಯವರು ಮುಂದಿನ ಪ್ರಧಾನಿ ಹುದ್ದೆಯನ್ನು ಏರಲು ನಾನಾ ಕಸರತ್ತುಗಳನ್ನು ನಡೆಸುತ್ತಿರುವ ಜೊತೆಗೆ ಜನಾರ್ಶೀವಾದ ಕಾರ್ಯಕ್ರಮದೊಂದಿಗೆ ದೇಶದೆಲ್ಲೆಡೆ ಸಂಚರಿಸುತ್ತಿದ್ದಾರಲ್ಲದೇ ಟೆಂಪಲ್ ರನ್ ಮೂಲಕ ಎಲ್ಲೆಡೆ ಸುದ್ದಿಯಾಗಿರುವ ವಿಚಾರವೂ ತಿಳಿದೇ ಇದೆ. ಆದರೆ ಅದೆಷ್ಟು ಮಂದಿ ಅಖಿಲ ಭಾರತ ಕಾಂಗ್ರೆಸ್ ಸಮಿತಿಯ (ಎಐಸಿಸಿ) 84 ನೇ ಪೂರ್ಣಾಧಿವೇಶನದ ಮಾಹಿತಿಯನ್ನು ತಿಳಿದುಕೊಂಡಿದ್ದೀರಿ ಅನ್ನುವ ವಿಚಾರ ಗೊತ್ತಿಲ್ಲ. ಆದರೆ ಇದನ್ನು ಅದೆಷ್ಟು ಕೂಲಂಕುಷವಾಗಿ ಗಮನಿಸಿದ್ದೀರಾ ಅನ್ನೋದು ಅತೀ ಮುಖ್ಯವಾಗುತ್ತೆ!!

ಹೌದು….. ಈಗಾಗಲೇ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ 84 ನೇಯ ಪೂರ್ಣ ಅಧಿವೇಶನದಲ್ಲಿ ಕೃಷಿ, ಉದ್ಯೋಗ ಮತ್ತು ಬಡತನ ನಿವಾರಣೆಗೆ ಪಕ್ಷವು ಈ ಒಂದು ನಿರ್ಣಯವನ್ನು ಜಾರಿಗೊಳಿಸಿದ್ದು, ಭಾರತೀಯ ಜನತಾ ಪಾರ್ಟಿಯ (ಬಿಜೆಪಿ) ಆಡಳಿತಾವಧಿಯಲ್ಲಿ ನಡೆದಿರುವ ಸ್ಥಿತಿಗತಿಗಳ ಬಗ್ಗೆ ದೂಷಿಸಲು ಹೋಗಿ ತಾನೇ ಮುಜುಗರಕ್ಕೀಡಾ ಗಿರುವುದಂತೂ ಅಕ್ಷರಶಃ ನಿಜ.

84 ನೇಯ ಪೂರ್ಣ ಅಧಿವೇಶನದಲ್ಲಿ ಜಾರಿಗೊಳಿಸಿರುವ ಮಾಹಿತಿಯ ಡ್ರಾಫ್ಟ್ ಪ್ರತಿಯನ್ನು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷವು ಈ ಕುರಿತಾದ ಮಾಹಿತಿಯನ್ನು ತನ್ನ ವೆಬ್ ಸೈಟ್ ನಲ್ಲಿ ಹಾಕಲಾಗಿದೆ!! ಆ ಒಂದು ವೆಬ್ ಸೈಟ್ ನಲ್ಲಿ ಇಂಗ್ಲೀಷ್ ಆವೃತ್ತಿಯ ಪ್ರತಿ ಮಾತ್ರವಲ್ಲದೇ ಹಿಂದಿ ಆವೃತ್ತಿಯ ಪ್ರತಿಯನ್ನೂ ನಾವು ಕಾಣಬಹುದಾಗಿದೆಯಲ್ಲದೇ ಇವೆರಡನ್ನೂ ಕೂಡ ಒಂದೇ ಡಾಕ್ಯುಮೆಂಟ್ ನಲ್ಲಿ ಇರಿಸಲಾಗಿದೆ. ಈ ಒಂದು ವೆಬ್ ಸೈಟ್ ನಲ್ಲಿರುವ ಡ್ರಾಫ್ಟ್ ಪ್ರತಿಯ ಇಂಗ್ಲೀಷ್ ಆವೃತ್ತಿಯಲ್ಲಿ ಎಂಟು ಪುಟಗಳಿದ್ದರೆ ಉಳಿದ 11 ಪುಟಗಳು ಹಿಂದಿ ಆವೃತ್ತಿಯಲ್ಲಿದೆ.

ಆದರೆ ಈ ಒಂದು ಡ್ರಾಫ್ಟ್ ಪ್ರತಿಯ ಆರನೇ ಪುಟದಲ್ಲಿ ನೀಡಿರುವ ಅಂಶಗಳನ್ನು ಗಮನಿಸುವುದಾದರೆ ಕೆಲ ನೈಜ ಸಂಗತಿಗಳನ್ನು ಕಾಂಗ್ರೆಸ್ ಹೊರ ಹಾಕಿರುವುದೇ ಹೆಮ್ಮೆಯ ವಿಚಾರವಾಗಿದೆ. ಹಾಗಾಗಿ ಕಾಂಗ್ರೆಸ್ ತನ್ನ ಅಧಿಕಾರದ ಅವಧಿಯಲ್ಲಿ ಮಾಡಿರುವ ಸಾಧನೆ ಏನು ಎಂಬುವುದನ್ನು ಅಂಕಿ ಅಂಶಗಳ ಮೂಲಕ ತೋರಿಸಿದೆ. ಈ ಮೂಲಕ ಮೋದಿ ಸರ್ಕಾರದ ಅಚ್ಛೇ ದಿನ್ ಏನು ಎಂದು ಕೇಳುವವರಿಗೂ ಈ ಒಂದು ಮಾಹಿತಿಯೂ ಅಚ್ಚೇ ದಿನ್ ಗೆ ಉದಾಹರಣೆ ಆಗಲಿದೆ. ಹಾಗಾಗಿ ಡ್ರಾಫ್ಟ್ ಪ್ರತಿಯಲ್ಲಿನ 6 ಪುಟದಲ್ಲಿ ನೀಡಲಾಗಿರುವ ಮಾಹಿತಿ ಇಂತಿದೆ;

“ದೇಶದ ಒಂದು ಶೇಕಡಾ ಶ್ರೀಮಂತರ ಸಂಪತ್ತಿನಲ್ಲಿ 73 ಶೇಕಡಾ ಏರಿಕೆಯಾಗಿದ್ದರೆ, ಜನಸಂಖ್ಯೆಯ ಅರ್ಧಕ್ಕಿಂತಲೂ ಹೆಚ್ಚಿರುವ ಬಡವರ ಸಂಪತ್ತಿನಲ್ಲೂ ಭಾರತೀಯ ಜನತಾ ಪಾರ್ಟಿ (ಬಿಜೆಪಿ)ಯ ಆಳ್ವಿಕೆಯಲ್ಲಿ ಒಂದು ಶೇಕಡಾ ಏರಿಕೆ ಕಂಡು ಬಂದಿದೆ”

“The wealth of the richest 1 per cent has gone up by 73 per cent while the wealth of the bottom half of the population has grown by just 1 per cent during the Bharatiya Janata Party (BJP) regime.”

ದುರದೃಷ್ಟವಶಾತ್, ಇದು ಕಾಂಗ್ರೆಸ್ ಪಕ್ಷಕ್ಕೆ ನಾಚಿಕೆ ಗೇಡಿನ ವಿಚಾರ!! ಯಾಕೆಂದರೆ ಯಾವಾಗ ಬಿಜೆಪಿ ಸರ್ಕಾರವು ಅಧಿಕಾರದ ಗದ್ದುಗೆಯನ್ನು ಹಿಡಿಯಿತೋ ಅದೇ ಕಾರಣದಿಂದಾಗಿ ಇಂದು ದೇಶದ ಬಡವರ ಸಂಪತ್ತಿನಲ್ಲಿಯೂ ಒಂದು ಶೇಕಡಾ ಹೆಚ್ಚಾಗಿದೆ ಎಂದರೆ ಇದಲ್ಲವೇ ಅಚ್ಛೇ ದಿನ್!! ಆದರೆ ಅದನ್ನೇ ತಪ್ಪು ಎಂದು ತಿಳಿದಿರುವ ಕಾಂಗ್ರೆಸ್, ಚುನಾವಣೆಯ ಸಂದರ್ಭದಲ್ಲಿ ಭಾರತೀಯ ಜನತಾ ಪಕ್ಷವನ್ನು ತೇಜೋವಧೆ ಮಾಡಲು ಹೋಗಿದೆ ಎಂದರೆ ಕಾಂಗ್ರೆಸ್ಸಿಗರನ್ನು ಅದೆನೇನ್ನ ಬೇಕೋ ನಾ ಕಾಣೆ!!

ಯಾಕೆಂದರೆ ಈಗಾಗಲೇ ಕಾಂಗ್ರೆಸ್ಸಿನ ಅಧಿಕಾರದ ಅವಧಿಯಲ್ಲಿ ಮಾಡಿರುವ ಸಾಧನೆಗಳು ಅದೇನೂ ಎಂಬುವುದು ನಮಗೆ ತಿಳಿದೇ ಇದೆ. ಆಧರೆ ದೇಶದ ಆರ್ಥಿಕ ಸ್ಥಿತಿಗತಿಗಳ ಬಗ್ಗೆ ತಾಳೆ ಹಾಕುತ್ತಾ ಹೋದಾಗ ಒಂದಷ್ಟು ಅಂಶಗಳು ಗೋಚರವಾಗುತ್ತಾ ಹೋಗುತ್ತದೆ. ಆದರೆ ಕಾಂಗ್ರೆಸ್ ನ ವೆಬ್ ಸೈಟ್ ನಲ್ಲಿ ನೀಡಿರುವ ಮಾಹಿತಿಯ ಪ್ರಕಾರ, 2010 ಮತ್ತು 2014 ರ ನಡುವಿನ ಅವಧಿಯಲ್ಲಿ ಭಾರತದಲ್ಲಿದ್ದ ಒಟ್ಟು ಶೇಕಡಾ 90ರಷ್ಟು ಸಂಪತ್ತು, ಯುಎಸ್ ಡಾಲರ್ ನ ಸಿಎಜಿಆರ್ ಶೇಕಡಾ 3.75 ರಷ್ಟು ಕುಸಿದಿತ್ತು!! ಆದರೆ ಇದು 2014 ಮತ್ತು 2017 ರ ನಡುವೆ ಅಂದರೆ ನರೇಂದ್ರ ಮೋದಿ ಸರ್ಕಾರದ ಆಳ್ವಿಕೆಯಲ್ಲಿ ಇದೇ ಸಿಎಜಿಆರ್ ಶೇಕಡಾ 12.4 ರಷ್ಟು ಏರಿಕೆಯನ್ನು ಕಂಡಿದೆ ಎಂದರೆ ಇದಲ್ಲವೇ ಅಚ್ಛೇ ದಿನ್!!

ಹೌದು, 2010 ಮತ್ತು 2014 ರ ಕಾಂಗ್ರೆಸ್ ಆಡಳಿತದಲ್ಲಿ ರೂಪಾಯಿ ಮತ್ತು ಯುಎಸ್ ಡಾಲರ್ ನಡುವಿನ ಜಿದ್ದಾಜಿದ್ದಿನಲ್ಲಿ ರೂಪಾಯಿಯ ಬೆಲೆ ಕುಸಿತಕೊಂಡು ಆರ್ಥಿಕತೆಯಲ್ಲಿಯೇ ಭಾರತ ಹಿಂದುಳಿದ ರಾಷ್ಟ್ರವಾಗಿ ಬಿಟ್ಟಿತಲ್ಲದೇ ಇದು ಆರ್ಥಿಕತೆಗೆ ಬಿದ್ದ ಬಹು ದೊಡ್ಡ ಹೊಡೆತವಾಗಿತ್ತು!! ಅಷ್ಟೇ ಅಲ್ಲದೇ ಆ ಸಂದರ್ಭದಲ್ಲಿ ರೂಪಾಯಿ ಮತ್ತು ಡಾಲರ್ ಗಳ ಬೆಲೆಯು ಬಹು ದೊಡ್ಡ ಪಾತ್ರವನ್ನೇ ವಹಿಸಿದ್ದವು ಎನ್ನುವುದನ್ನು ಹೇಳಬಹುದಲ್ಲದೇ ಆರ್ಥಿಕ ದುರ್ಬಳಕೆಯ ಕಥೆಯ ಭಾಗವಾಗಿದೆ ಎಂದೂ ಹೇಳಬಹುದು!! ಯಾಕೆಂದರೆ ಡಾಲರ್ ಎದುರು ರೂಪಾಯಿ ಸ್ಥಾನಮಾನವೇ ಕುಸಿಯುವ ಮೂಲಕ ಆರ್ಥಿಕ ಸ್ಥಿತಿಗತಿಯಲ್ಲಿ ಭಾರತವು ಎದುರಿಸಿದಂತಹ ಸಂಕಷ್ಟಗಳು ಬಡವರನ್ನು ಇನ್ನೂ ಬಡವರನ್ನಾಗಿಯೇ ಮಾಡಿ ಬಿಟ್ಟಿತ್ತು!!

ಅಷ್ಟೇ ಅಲ್ಲದೇ, 2010 ರ ಮತ್ತು 2014 ರ ನಡುವಿನ ಅವಧಿಯಲ್ಲಿ ದೇಶದ ಸಂಪತ್ತಿನ ದರದಲ್ಲಿ ಒಂದು ಶೇಕಡಾ ಶ್ರೀಮಂತರ ಸಂಪತ್ತಿನ 90 ಶೇಕಡಾದಲ್ಲಿ 9.5 ರಷ್ಟು ಇಳಿಕೆಯಾಗಿತ್ತು. ಆದರೆ, 2014 ಮತ್ತು 2017 ರ ನಡುವಿನ ಬೆಳವಣಿಗೆ ದರಗಳಲ್ಲಿ ದೇಶದ ಒಂದು ಶೇಕಡಾ ಶ್ರೀಮಂತರ ಸಂಪತ್ತಿನ 90 ಶೇಕಡಾದಲ್ಲಿ 4.0 ರಷ್ಟು ಇಳಿಕೆಯಾಗಿದೆ!! ಹಾಗಾದರೆ ನರೇಂದ್ರ ಮೋದಿಯವರನ್ನು ದೂಷಿಸುವ ಮಂದಿಗೆ ನರೇಂದ್ರ ಮೋದಿಯವರ ಸಾಧನೆ ಏನು ಎಂಬುವುದು ಅರ್ಥವಾಗಿದೆ !! ಹಾಗಾದರೆ ದೇಶ ಅಭಿವೃದ್ಧಿಯತ್ತ ಹೋಗಿಯೇ ಇಲ್ಲ ಎಂದು ಹೇಳುತ್ತಾರಲ್ಲ ಇವರಿಗೆ ಅದೇನೂ ಹೇಳಬೇಕು??

ಇನ್ನು, 2014 ರಿಂದ 2017 ರ ನಡುವೆ ಅಂದರೆ ನರೇಂದ್ರ ಮೋದಿಯವರು ಅಧಿಕಾರದ ಗದ್ದುಗೆಯನ್ನು ಏರಿದಂದಿನಿಂದಲೂ ಇಲ್ಲಿಯವರೆಗೆ ರೂಪಾಯಿಯ ಬೆಲೆ ಸ್ಥಿರತೆಯನ್ನು ಕಂಡಿದೆಯಲ್ಲದೇ ಸ್ವಲ್ಪಮಟ್ಟಿಗೆ ಸದೃಢವಾಗಿ ನಿಂತಿದೆ!! ಅಷ್ಟೇ ಅಲ್ಲದೇ ಡಾಲರ್ ನ ಎದುರು ರೂಪಾಯಿಯ ಮೌಲ್ಯ ಸದೃಢವಾಗಿ ನಿಂತಿರುವ ವಿಚಾರವು ತಿಳಿದೇ ಇದೆ. ಹೀಗಿರಬೇಕಾದರೆ ನರೇಂದ್ರ ಮೋದಿಯವರ ರಾಜತಾಂತ್ರಿಕತೆಯ ಯಶಸ್ಸಿನ ಬಗ್ಗೆ, ಅಚ್ಛೇ ದಿನ ದ ಬಗ್ಗೆ ಕೊಂಕು ಮಾತಾನಾಡುತ್ತಾರಲ್ಲ, ಹಾಗಾದರೆ ತಾವೇ ನೀಡಿರುವ ಮಾಹಿತಿಯ ಬಗ್ಗೆ ಅದೇನೂ ಹೇಳಬೇಕೆಂದಿದ್ದೀರೋ ಕಾಂಗ್ರೆಸ್ಸಿಗರು, ತಾವೂ ದಯಮಾಡಿ ಹೇಳಬಹುದು!!

– ಅಲೋಖಾ

Tags

Related Articles

Close