ಅಂಕಣ

ಈ ದೇಶದಲ್ಲಿ ರಾಮನಿಗೆ ಮಂದಿರ ಕಟ್ಟಿಸಲು ಸ್ಥಳವಿಲ್ಲ ಆದರೆ ನಾಮಧಾರಿ ನೆಹರು-ಗಾಂಧಿಗಳ ಸಮಾಧಿ ಕಟ್ಟಲು ಎಕರೆಗಟ್ಟಲೆ ಜಾಗವಿದೆ! ಮಂದಿರದ ಬದಲು ಆಸ್ಪತ್ರೆ ಕಟ್ಟಿಸಿ ಎನ್ನುವವರಿಗೆ ಇದು ಕಾಣುವುದಿಲ್ಲವೆ?

ವಿಡಂಬನೆಯೊ ಇದು? ಹಿಂದುಗಳ ಒಳ್ಳೆಯತನದ ದುರುಪಯೊಗವೊ? ಆಳುವವರ ದುರಂಹಕಾರದ ಪರಮಾವಧಿಯೊ? ಇಲ್ಲಿ ರಾಮನಿಗೆ ಅವನದೆ ಜನ್ಮ ಭೂಮಿಯಲ್ಲಿ ಮಂದಿರ ಕಟ್ಟುವುದಕ್ಕೂ ಕಾನೂನು ಮೂಲಕ ಹೋರಾಡಬೇಕು. ರಾಮನಿಗೆ ಮಂದಿರ ಏಕೆ ಬೇಕು? ಅಯೋಧ್ಯೆಯಲ್ಲೆ ಏಕೆ ಬೇಕು? ಮಂದಿರದ ಬದಲಿಗೆ ಆಸ್ಪತ್ರೆಯೊ-ಶಾಲೆಯೊ ಕಟ್ಟಿಸಿ ಎಂದು ಹಿಂದೂಗಳಿಗೆ ಬುದ್ದಿವಾದ ಹೇಳುತ್ತಾರೆ ತಲೆಯಲ್ಲಿ ಲದ್ದಿ ತುಂಬಿದ ಜೀವಿಗಳು. ಆದರೆ ಈ ಜೀವಿಗಳಿಗೆ ದೆಹಲಿಯ ಹೃದಯ ಭಾಗದಲ್ಲಿ ಎಕರೆಗಟ್ಟಲೆ ಜಾಗದಲ್ಲಿ ನಾಮಧಾರಿ ಗಾಂಧಿ-ನೆಹರೂ ಪರಿವಾರದ ಜನರಿಗೆ ಸಮಾಧಿ ಕಟ್ಟಿಸಿರುವುದು ಕಾಣುವುದಿಲ್ಲ!!

ದೇಶದ ರಾಜಧಾನಿ ದೆಹಲಿಯಲ್ಲಿ ಅಂಗೈಯಷ್ಟಗಲದ ಭೂಮಿಗೆ ಸಾವಿರಾರು ಕೋಟಿ ರೂಪಾಯಿಯಷ್ಟಾಗುತ್ತದೆ. ದೆಹಲಿಯಲ್ಲಿ ಒಂದು ಎಕರೆ ಜಾಗ ಸರಿ ಸುಮಾರು 1500 ಕೋಟಿ ರುಪಾಯಿ ಬೆಲೆ ಬಾಳುತ್ತದೆ! ಅಂಥಹದರಲ್ಲಿ ನೆಹರು ಪರಿವಾರದ ನಾಲ್ಕು ಜನರ ಸಮಾಧಿಗೆ ಎಕರೆಗಟ್ಟಲೆ ಭೂಮಿಯನ್ನು ದಾನವಾಗಿ ನೀಡಲಾಗಿದೆ ಎಂದರೆ ಒಟ್ಟು ಎಷ್ಟು ಕೋಟಿ ರೂಪಾಯಿಯ ಭೂಮಿಯನ್ನು ಪರಿವಾರ ಸತ್ತ ನಂತರವೂ ಕಬಳಿಸಿ ಕೂತಿದೆ ಎನ್ನುವುದನ್ನು ಲೆಕ್ಕ ಹಾಕಿ!!

ಶಾಂತಿವನದಲ್ಲಿರುವ ಕಾಂಗ್ರೆಸಿನ ವಿಕಾಸ ಪುರುಷ ನೆಹರೂರವರ ಸಮಾಧಿ: 52.6 ಎಕರೆ ಜಾಗದಲ್ಲಿ ಹಬ್ಬಿಕೊಂಡಿರುವ ಸಮಾಧಿಯ ಸುತ್ತ ಹಸಿರು ಹುಲ್ಲಿನ ಹಾಸು ಇದೆ.

ಶಕ್ತಿ ಸ್ಥಳ ಎಂದು ಕರೆಯಲಾಗುವ ಜಾಗದಲ್ಲಿ ಇಂದಿರಾ ಗಾಂಧಿಯ ಸಮಾಧಿ: 45 ಎಕರೆ ಜಾಗದಲ್ಲಿ ಹಬ್ಬಿಕೊಂಡಿರುವ ಸಮಾಧಿಯಲ್ಲಿ ಕೆಂಪು-ಬೂದು ಬಣ್ಣದ ಏಕಶಿಲೆ ಇದೆ.

ವೀರ ಭೂಮಿಯಲ್ಲಿ ರಾಜೀವ್ ಗಾಂಧಿಯವರ ಸಮಾಧಿ: 15 ಎಕರೆ ಜಾಗದಲ್ಲಿ ಹಬ್ಬಿಕೊಂಡಿರುವ ಸಮಾಧಿಯಲ್ಲಿ ತಾವರೆ ಆಕಾರವಿದೆ.

ಶಾಂತಿವನದಲ್ಲಿ ಸಂಜಯ್ ಗಾಂಧಿಯ ಸಮಾಧಿಯೂ ಹಲವಾರು ಎಕರೆ ಜಾಗಗಳಲ್ಲಿ ಹಬ್ಬಿಕೊಂಡಿದೆ.

ನೆಹರು-ಇಂದಿರಾ-ರಾಜೀವ್ ಮಾಜಿ ಪ್ರಧಾನಿಗಳು ಹಾಗಾಗಿ ಇವರಿಗೆ ದೆಹಲಿಯಲ್ಲಿ ಸಮಾಧಿ ಕಟ್ಟಲಾಯಿತು ಎಂದಿಟ್ಟುಕೊಳ್ಳೋಣ ಆದರೆ ಈ ಸಂಜಯ್ ಗಾಂಧಿ ಯಕಶ್ಚಿತ್ ಮಂತ್ರಿಯೂ ಆಗಿರಲಿಲ್ಲ ಮತ್ತೇಕೆ ಎಕರೆಗಟ್ಟಲೆ ಜಾಗದಲ್ಲಿ ಆತನ ಸಮಾಧಿ? ನಾಳೆ ಸೋನಿಯಾ, ರಾಹುಲ್, ಪ್ರಿಯಾಂಕಾ ಮತ್ತು ಆಕೆಯ ಮಕ್ಕಳಿಗೂ ಇಲ್ಲಿ ಜಾಗ ಮೀಸಲಾಗಿರಬಹುದು. ಅವರೆಲ್ಲ ಯಾರು? ಈ ದೇಶಕ್ಕಾಗಿ ಇವರೆಲ್ಲ ಏನು ಮಾಡಿದ್ದಾರೆ? ದೆಹಲಿಯಂತಹ ದುಬಾರಿ ಜಾಗದಲ್ಲಿ ಇವರಿಗೆಲ್ಲ ಏಕೆ ಸಮಾಧಿ? ಒಬ್ಬ ವ್ಯಕ್ತಿಯನ್ನು ಹೂಳಲು 6 ಅಡಿ ಉದ್ದ 3 ಅಡಿ ಅಗಲ ಜಾಗ ಸಾಕು ಮತ್ತೆ ಎಕರೆಗಟ್ಟಲೆ ಜಾಗದಲ್ಲಿ ಸಮಾಧಿ ಏಕೆ? ಪರಿವಾರದವರಿಗೆಲ್ಲರಿಗೂ ಸಮಾಧಿ ಕಟ್ಟಿಸಲು ದೆಹಲಿ ಏನು ಇವರ ತಾತನ ಜಹಗೀರೆ?

ನೆಹರೂ ಪರಿವಾರದ ಸಮಾಧಿಗಳ ಒಟ್ಟು ವಿಸ್ತೀರ್ಣ 123 ಎಕರೆ ಎಂದು ಆಂದಾಜಿಸೋಣ. ಒಂದು ಎಕರೆಗೆ 1500 ಕೋಟಿ ರುಪಾಯಿ. ಅಂದರೆ 184500 ಕೋಟಿ ರುಪಾಯಿಯ ಆಸ್ತಿ ಸತ್ತ ಮೇಲೂ ನೆಹರೂ-ಗಾಂಧಿ ಹೆಸರಿನಲ್ಲಿದೆ! ಇಷ್ಟೆಕರೆ ಜಾಗದಲ್ಲಿ ಎಷ್ಟು ಆಸ್ಪತ್ರೆ, ಶೌಚಾಲಯ, ಶಾಲೆ, ವಿಶ್ವವಿದ್ಯಾಲಯಗಳನ್ನು ಕಟ್ಟಿಸಬಹುದು ಅಂದಾಜು ಮಾಡಿ. ಇನ್ನು ಈ ಸಮಾಧಿಯ ಸುತ್ತ ಮುತ್ತಲೂ ವಿಶೇಷ ರೀತಿಯ ಹುಲ್ಲು ಬೆಳೆಯಲಾಗುತ್ತದೆ ಅದಕ್ಕೆ ಲಕ್ಷಾಂತರ ರುಪಾಯಿಗಳು ಖರ್ಚಾಗುತ್ತವೆ. ಸಮಾಧಿಗಳ ನಿರ್ವಹಣೆಗೆ ಪ್ರತಿವರ್ಷ 16 ಕೋಟಿ ರುಪಾಯಿ ಖರ್ಚಾಗುತ್ತವೆ. ಇನ್ನು “ಸತ್ತವರ ಸುರಕ್ಷತೆಗಾಗಿ” ಭದ್ರತೆ ಒದಗಿಸಲು ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ. ಇವರ ಖರ್ಚು ಸರಿ ಸುಮಾರು ಒಂದು ಕೋಟಿ ಎನ್ನಲಾಗುತ್ತದೆ.

ಇದಕ್ಕೆಲ್ಲಾ ಹಣ ಎಲ್ಲಿಂದ ಇಟಲಿಯಮ್ಮನ ಮನೆಯಿಂದ ಬರುತ್ತೊ? ಸತ್ತವರ ಸಮಾಧಿಗಾಗಿ ಕೋಟ್ಯಂತರ ರುಪಾಯಿ ಖರ್ಚು ಮಾಡುವುದು ನಾವು ಹೊರತು ಬಿಟ್ಟಿ ಭಾಗ್ಯಗಳನ್ನು ತಿನ್ನುವವರಲ್ಲ. ಯಾರದ್ದೊ ದುಡ್ಡಿನಲ್ಲಿ ಎಲ್ಲಮ್ಮನ ಜಾತ್ರೆ ಮಾಡುವುದು ನಾಮಧಾರಿ ಗಾಂಧಿಗಳು. ಮಂದಿರ ಕಟ್ಟಲು ಕೋಟ್ಯಂತರ ರುಪಾಯಿ ಖರ್ಚು ಮಾಡುವುದೇಕೆ ಎಂದು ಕ್ಯಾತೆ ತೆಗೆಯುವ ಬುದ್ದಿಜೀವಿಗಳ ಬಾಯಿಗೆ ಈಗ ಲಕ್ವ ಹೊಡೆಯುತ್ತದೆ ನೋಡಿ. ಸತ್ತವರ ಸಮಾಧಿಗೆ ಕೋಟ್ಯಂತರ ಖರ್ಚು ಮಾಡುವ ನಾವು ರಾಮನಿಗೆ ಮಂದಿರ ಕಟ್ಟಿಸಲು ಮಿಲಿಯಗಟ್ಟಲೆ ಬೇಕಾದರೂ ಸುರಿಯುತ್ತೇವೆ. ದುಡ್ದು ಇಟಲಿಯಮ್ಮನ ತಾತನ ಮನೆಯದ್ದಲ್ಲ, ನಾವು ಬೆವರು ಸುರಿಸಿ ಸಂಪಾದಿಸಿದ್ದು. ನಮ್ಮ ದುಡ್ಡಿನಲ್ಲಿ ನಾವು ರಾಮನಿಗೂ ಮಂದಿರ ಕಟ್ಟಿಸುತ್ತೇವೆ ರಾಮನ ಬಂಟ ಹನುಮನಿಗೂ ಮಂದಿರ ಕಟ್ಟಿಸುತ್ತೇವೆ. ಜಾಗವು ನಮ್ಮದೆ ಹಣವೂ ನಮ್ಮದೆ. ಎಂಜಲು ಕಾಸಿಗೆ ಹಲುಬುವ ಗಂಜಿ ಗಿರಾಕಿಗಳ ಒಂದು ಪೈಸೆಯೂ ರಾಮನಿಗೆ ಬೇಡ.

ಅಯೋಧ್ಯೆಯಲ್ಲಿ ಏನಾದರೂ ಕಟ್ಟಿದರೆ ಅದು ರಾಮ ಮಂದಿರವೆ ಹೊರತು ಆಸ್ಪತ್ರೆ, ಶಾಲೆ-ಕಾಲೇಜುಗಳಲ್ಲ. ಅಷ್ಟಕ್ಕೂ ಶಾಲೆ, ಆಸ್ಪತ್ರೆಗಳನ್ನು ಕಟ್ಟಲೇ ಬೇಕೆಂದಿದ್ದರೆ ದೆಹಲಿಯಲ್ಲಿ ಇರುವ ನಾಮಧಾರಿ ಗಾಂಧಿಗಳ ಸಮಾಧಿಗಳನ್ನು ಒಡೆದು ಕಟ್ಟಿ ಯಾರು ಬೇಡವೆನ್ನುತ್ತಾರೆ? ಹಿಂದೂಗಳಿಗೆ ಬುದ್ದಿವಾದ ಹೇಳಲು ಬರುವ ಮುಂಚೆ ಬುದ್ದಿಯಲ್ಲಿ ತುಂಬಿದ ಲದ್ದಿಯನ್ನು ಕೊಡಕಿ ಬನ್ನಿ.

-ಶಾರ್ವರಿ

Tags

Related Articles

Close