ಅಂಕಣಪ್ರಚಲಿತ

ಅವಶ್ಯವಾಗಿ ಓದಲೇಬೇಕು! ಭಾರತೀಯ ಸೇನೆಗೆ ಇಂದಿರಾ ಗಾಂಧಿ ಮಾಡಿದ ಅತೀ ದೊಡ್ಡ ದ್ರೋಹ ಯಾವುದು ಗೊತ್ತೇ?!

1971 ರ ಯುದ್ಧವಾದ ಮೇಲೆ ಇಡೀ ಭಾರತ ಪಾಕಿಸ್ಥಾನದ ವಿರುದ್ಧ ಸಾಧಿಸಿದ ಗೆಲುವನ್ನು ಸಂಭ್ರಮಿಸತೊಡಗಿತ್ತಷ್ಟೇ! ಭಾರತದ ಭೌಗೋಳಿಕ ಪ್ರದೇಶಗಳ
ನಕ್ಷೆಯನ್ನೇ ಬದಲಿಸಿದ ಮಹತ್ತರವಾದ ಯುದ್ಧವಾಗಿತ್ತದು. ಯುದ್ಧದಲ್ಲಿ ಭಾಗವಹಿಸಿ ನೆತ್ತರು ಹರಿಸಿದ್ದು ಭಾರತದ ಯೋಧರಾದರೂ ಕೂಡ, ಅವತ್ತು ಇಂದಿರಾಗಾಂಧಿಗೆ ‘ದುರ್ಗಾ’ ಎಂಬ ಬಿರುದನ್ನು ನೀಡಿದ್ದು ಇದೇ ಯುದ್ಧ ಬಿಡಿ! ಎಲ್ಲೆಂದರಲ್ಲಿ ಭಾರತೀತ ಯೋಧರನ್ನು ಗೌರವಿಸಲಾಗಿತ್ತು. ಇಡೀ ಭಾರತ ಅವತ್ತು ಯೋಧರನ್ನು ಕೊಂಡಾಡಿತ್ತು. ಯುದ್ಧದ ಪ್ರತಿ.ಕ್ಷಣಗಳನ್ನೂ ಸಹ ಇತಿಹಾಸದ ಪುಟಗಳಲಿ ಬರೆದಿಡುವಂತಹ ಅಮೋಘ ಗೆಲುವದು! ಬರೋಬ್ಬರಿ 4000 ಯೋಧರನ್ನು ಭಾರತ ಕಳೆದುಕೊಂಡಿತ್ತು. 10,000 ಯೋಧರು ಗಂಭೀರವಾಗಿ ಗಾಯಗೊಂಡಿದ್ದರು! ಆ ಆರ್ತನಾದವೊಂದಿದೆಯಲ್ಲ, ಭಾರತದ ಧ್ವಜವೊಂದನ್ನು ಆಗಸದೆತ್ತರಕ್ಕೆ ಪ್ರಜ್ವಲಿಸುವಂತೆ ಮಾಡಿತ್ತು!

ಅವತ್ತಿದ್ದದ್ದು ಇಂದಿರಾ ಗಾಂಧಿ ಸರಕಾರ! ಭಾರತೀಯ ಸೇನೆಗಾದ ನಷ್ಟವನ್ನು ತುಂಬಲೇಬೇಕಾದದ್ದು ಆಕೆಯ ಕರ್ತವ್ಯವಾಗಿತ್ತಾದರೂ, ಉಹೂಂ! ಕರ್ತವ್ಯದ ನೆಪದಲ್ಲಿ ಇಂದಿರಾ ಗಾಂಧಿಯೆಂಬ ಸ್ವಯಂಘೋಷಿತ ದುರ್ಗೆ ಭಾರತೀಯ ಸೇನೆಯ ಬೆನ್ನಿಗೆ ಚೂರಿ ಹಾಕಿಬಿಟ್ಟಳು!

ಸೇನೆಯ ಬಗ್ಗೆ, ಕಾರ್ಯಚಟುವಟಿಕೆಗಳ ಬಗ್ಗೆ, ಸಶಸ್ತ್ರ ಪಡೆಗಳ ಬಗ್ಗೆ, ತ್ಯಾಗದ ಬಗ್ಗೆ ಏನೊಂದೂ ಅರಿಯದ ಅಧಿಕಾರಿಗಳು ಸಶಸ್ತ್ರ ಪಡೆಗಳ ಸಂಖ್ಯೆಯನ್ನು ತಗ್ಗಿಸಬೇಕೆಂಬ ಹೊಸ ನೀತಿಯನ್ನು ಪರಿಚಯಿಸಿಬಿಟ್ಟರು! ರಕ್ಷಣಾ ಕಾರ್ಯದರ್ಶಿಯಾಗಿದ್ದ ಕೆ.ಬಿ.ಲಾಲ್ ವೇತನ ಪ್ರಮಾಣದಲ್ಲಿ ಬದಲಾವಣೆಗಳನ್ನು ಮಾಡಬೇಕೆಂಬ ಶಿಫಾರಸ್ಸು ಕೊಟ್ಟರು! ಒಂದು ಪೆನ್ನು, ಒಂದು ಕಾಗದ ಭಾರತೀಯ ಸೇನೆಯ ರಕ್ತಚರಿತೆಯನ್ನು ಬರೆಯತೊಡಗಿದ್ದು ಅದೇ ಸಮಯದಲ್ಲಿಯೇ!

Third Pay Commission ನನ್ನು ಪರಿಚಯಿಸಿದ ರಕ್ತಚರಿತೆಯ ಮೊದಲ ಅಪರಾಧಿ ಕೆ.ಬಿ.ಲಾಲ್ ಎರಡು ವಿಷಯಗಳನ್ನು ಪ್ರಸ್ತಾಪಿಸಿದರು!

1. ಸಶಸ್ತ್ರ ಪಡೆಗಳಿಗೆ ಪ್ರತ್ಯೇಕ ವೇತನವನ್ನು ರದ್ದುಗೊಳಿಸಿ, ನಾಗರಿಕ ಸೇವೆಯಡಿಯಲ್ಲಿ ವೇತನ ವ್ಯವಸ್ಥೆ!!

ನಿಯಮದ ಪ್ರಕಾರ ಹೇಳಲೇಬೇಕಾದರೆ, “ಮೂರು ವರುಷ ಸೇನಾ ತರಬೇತಿ ಪಡೆದ ಸೈನಿಕನು ಒಬ್ಬ ನುರಿತ ಕಾರ್ಮಿಕನಿಗಿಂತ ಕೆಳಮಟ್ಟದಲ್ಲಿರುತ್ತಾನೆ!”

ಇಂತಹ ಅಮಾನವೀಯ ಹಾಗೂ ಅಷ್ಟೇ ಮೂರ್ಖವಾದ ನಿರ್ಧಾರವೊಂದನ್ನು ಜಗತ್ತಿನ ಯಾವ ದೇಶದ ರಕ್ಷಣಾ ಕಾರ್ಯದರ್ಶಿಯೂ ಮಾಡಿರಲಿಕ್ಕಿಲ್ಲ! ಕಾಲಾಳು ಪಡೆಗಳೆಂದು ಕರೆಸಿಕೊಳ್ಳುವ ಸೈನಿಕರು ಎಲ್ಲರಿಗಿಂತ ಮೊದಲು ನಿಲ್ಲುವವರು ಯುದ್ಧದಲ್ಲಿ! ಗಡಿ ಭಾಗಗಳನ್ನೂ ರಕ್ಷಿಸುವುದು ಇದೇ ಕಾಲಾಳು ಪಡೆಗಳೇ! 90% ನಷ್ಟು ಸಾವುನೋವುಗಳನ್ನು ಕಾಣುವವರೂ ಇದೇ ಸೈನಿಕರೇ!

2. ಸಶಸ್ತ್ರಪಡೆಗಳ ಪಿಂಚಣಿಯನ್ನು ಕಡಿಮೆ ಮಾಡುವುದು!

1972 ರ ವರೆಗೂ ಇದ್ದ OROP ಪಿಂಚಣಿಯೊಂದನ್ನು ಇದೇ ಇಂದಿರಾ ಗಾಂಧಿ ಸರಕಾರವೊಂದು, ವೇತನ ಆಯೋಗದ ಮಾತು ಕೇಳಿ, ರದ್ದು ಮಾಡಿತು! ಹಾಗಾಗಿ, 15 ವರ್ಷ ಸೇವೆ ಸಲ್ಲಿಸಿದ ಅಧಿಕಾರಿಗಳು 33-35 ರ ವಯಸ್ಸಿಗೇ ಪಿಂಚಣಿ ಜೀವನ ನಡೆಸತೊಡಗಿದರು! ಅಧಿಕಾರಿಗಳ ಪಿಂಚಣಿ 70% ಇದ್ದರೆ, ಕಾಲಾಳು ಪಡೆಗಳ ಪಿಂಚಣಿ ಮೂಲ ವೇತನದ 50% ಆಗಿತ್ತು. ಹೆಚ್ಚಿನ ಸೈನಿಕರು 58 ನೇ ವಯಸ್ಸಿನಲ್ಲಿ ನಿವೃತ್ತರಾದರು! ನೆನಪಿಡಿ! 58 ವರ್ಷಗಳ ತನಕ ಯಾವೊಬ್ಬನೂ ಯುದ್ಧದಲ್ಲಿ ಪಾಲ್ಗೊಳ್ಳಲು ಸಾಧ್ಯವೇ ಇಲ್ಲ! ನಾಗರಿಕ ಸೇವೆ ಸಲ್ಲಿಸುತ್ತಿದ್ದವರಿಗೆ ಮಣೆ ಹಾಕಿದ ಇದೇ ವೇತನ ಆಯೋಗ, ಕಾಲಾಳು ಪಡೆಗಳನ್ನು ತೀರಾ ಕೆಟ್ಟದಾಗಿ ನಡೆಸಿಕೊಂಡು ಬಿಟ್ಟಿತು!

ನಾಗರಿಕ ಸೇವಾ ಪಿಂಚಣಿಯನ್ನು 50% ರಷ್ಟು ಏರಿಸಿದರೆ, ಸೇನಾ ಪಿಂಚಣಿಯನ್ನು 50% ಗೆ ಇಳಿಸಿತು! ಪೂರ್ಣ ಪಿಂಚಣಿ ಪಡೆಯಲು 33 ವರ್ಷಗಳ ಸೇವೆಯನ್ನು ಕಡ್ಡಾಯಗೊಳಿಸಿದ ಪರಿಣಾಮ, ಅಧಿಕಾರಿಗಳು ಹೂಡಿದ ಮುಷ್ಕರದಿಂದ 33 ರಿಂದ 25 ವರ್ಷಗಳಿಗೆ ಇಳಿಸಲಾಯಿತು! ಇದರಿಂದ, ಸೈನಿಕರು 15 ವರ್ಷಗಳ ಸೇವೆಯ ನಂತರ ಮೂಲ ವೇತನದ 30% ರಷ್ಟು ಪಿಂಚಣಿಯನ್ನು ಪಡೆದರೆ, 25 ವರ್ಷಗಳ ಸೇವೆಯ ನಂತರ 50% ಪಿಂಚಣಿ ಲಭಿಸುವಂತಾಯಿತು!

ವಿಷಯ ಇಷ್ಟೇ! ನಾಗರಿಕ ಸೇವೆಯ ಅಧಿಕಾರಿಗಳ ಪಿಂಚಣಿಯನ್ನು 30% ರಿಂದ 50% ಗೆ ಏರಿಸಿದ ಇಂದಿರಾ ಗಾಂಧಿ ಸರಕಾರ, ಸೇನೆಯ ಪಿಂಚಣಿಯನ್ನು 70% ರಿಂದ 30% ಗೆ ಇಳಿಸಿತ್ತು! ಆದರೂ ಯಾವೊಬ್ಬ ಯೋಧನೂ ತುಟಿಬಿಚ್ಚಲಿಲ್ಲ! ಕಾರಣ?! “ದೇಶಕ್ಕೆ ರಕ್ತವನ್ನೆರೆದ ಯಾವೊಬ್ಬನಿಗೂ ಸರಕಾರ ದ್ರೋಹ ಬಗೆಯಲಾರದು” ಎಂಬುದೊಂದೇ ಅಚಲ ನಂಬಿಕೆ್ೆ ಅವತ್ತು ಇಡೀ ಭಾರತೀಯ ಸೇನೆ ಇಂದಿರಾ ಗಾಂಧಿಯ ವಿರುದ್ಧ ಒಂದೇ ಒಂದು ಬಾರಿಯೂ ಧ್ವನಿ ಎತ್ತಲಿಲ್ಲ!

ಚಾಲಾಕಿ ಇಂದಿರಾ!!

Image result for field marshal manekshaw

1971 ರ ಯುದ್ಧವನ್ನು ಗೆದ್ದ ನಂತರ ಇಷ್ಟೆಲ್ಲ ಬದಲಾವಣೆಗಳನ್ನು ಮಾಡಿದ ಇಂದಿರಾ ಗಾಂಧಿ ಚದುರಂಗದಾಟಕ್ಕೆ ಕೂತಿದ್ದಳು! 4000 ಯೋಧರ ಪ್ರಾಣತ್ಯಾಗವನ್ನಡವಿಟ್ಟು! ಮಾರ್ಷಲ್ ಮನೇಕ್ಷಾ ತಮ್ಮ ಹುದ್ದೆಯನ್ನು ಸೈನ್ಯದ ಮುಖ್ಯಸ್ಥರಿಗೆ ಬಿಟ್ಟುಕೊಟ್ಟರು! ಅತ್ಯಂತ ಪ್ರಭಾವಿ ವ್ಯಕ್ತಿಯಾಗಿದ್ದ ಮನೇಕ್ಷಾ ಸರಕಾರದ ವಿರುದ್ಧ ಧ್ವನಿಯೆತ್ತದಂತೆ ಮಾಡಿದ ಇಂದಿರೆ ನಗು ನಗುತ್ತಲೇ ಚೂರಿ ಹಾಕಿದ್ದಳು!

ಇದಷ್ಟೂ ಕಾರ್ಯಗಳಿಗೆ, ಸರಕಾರದ ವಿರುದ್ಧ ಧ್ವನಿಯೆತ್ತಬಹುದಾಗಿದ್ದ ಮನೇಕ್ಷಾರವರೇ ಇಂದಿರಾ ಗಾಂಧಿ ಸರಕಾರದ ಕೊನೆಯ ಗುರಿಯಾಗಿತ್ತು! ಸಾಮಾನ್ಯವಾಗಿ, ಒಮ್ಮೆ ಮಾರ್ಷಲ್ ಆಗಿ ಆಯ್ಕೆಯಾದರೆ ಎಂದಿಗೂ ನಿವೃತ್ತರಾಗುವುದಿಲ್ಲ., ಕೊನೆಯ ತನಕವೂ ಭುಜದ ಮೇಲೆ 5 ನಕ್ಷತ್ರಗಳನ್ನು ಸಂಕೇತವನ್ನು ಧರಿಸುವ ಮಾರ್ಷಲ್ ಗಳಿಗೆ ಬದುಕಿನುದ್ದಕ್ಕೂ ಪಿಂಚಣಿಯ ಸೌಲಭ್ಯ ಹಾಗೂ ಸೇನೆಯ ಮೇಲೆ ಅಷ್ಟೇ ಅಧಿಕಾರವನ್ನು ಹೊಂದಿರುತ್ತಾರೆ!

ಯಾವಾಗ ತಮ್ಮ ಹುದ್ದೆಯನ್ನೇ ಬಿಟ್ಟುಕೊಟ್ಟರೋ, ಮುಂದಿನ 36 ವರ್ಷಗಳ ಕಾಲ ಮನೇಕ್ಷಾರವರಿಗೆ ಯಾವ ವೇತನವೂ ಸಿಗಲಿಲ್ಲ! ಯಾವ ಪಿಂಚಣಿಯೂ ದೊರಕಲಿಲ್ಲ! ಯಾವ ಸರಕಾರೀ ಸೌಲಭ್ಯಗಳೂ ದೊರಕಲಿಲ್ಲ! 1971 ರ ಯುದ್ಧದಲ್ಲಿ ಸಿಕ್ಕ ಗೆಲುವಿನ ಮುಖ್ಯ ರೂವಾರಿಯಾಗಿದ್ದ ಮನೇಕ್ಷಾರಂತಹ ಅಪ್ರತಿಮ ದೇಶಭಕ್ತನಿಗೆ ಇಂದಿರಾಗಾಂಧಿ ಸರಕಾರ ಮಾಡಿದ ಅವಮಾನವಿದೆಯಲ್ಲವಾ?! ಒಂದು ದೇಶ ತನ್ನಿಡೀ ಆಯುಷ್ಯದಲ್ಲಿಯೇ ಮಾಡಬಹುದಾದ ಅತಿದೊಡ್ಡ ಅಪರಾಧ!!

ಮಾರ್ಷಲ್ ಮನೇಕ್ಷಾರವರಿಗೆ ಇಂದಿರಾಗಾಂಧಿ ಸರಕಾರ ಪಾವತಿಸಬೇಕಾಗಿದ್ದ ಹಣ 1.60 ಕೋಟಿ ರೂಗಳು! 2007 ರಲ್ಲಿ, ಅಬ್ದುಲ್ ಕಲಾಂ ಸ್ವತಃ ಮನೇಕ್ಷಾರವರ ಹತ್ತಿರ ಮಾತಿಗಿಳಿದರು! ತನ್ನ ಕೊನೆಗಾಲದಲ್ಲಿದ್ದ ಮನೇಕ್ಷಾರವರಿಗೆ, ತೀರುವ ಕೆಲವೇ ಕೆಲವು ದಿನಗಳ ಮುಂಚೆ ಕೊಡಬೇಕಾಗಿದ್ದ ಅಷ್ಟೂ ಹಣವನ್ನೂ ನೀಡಿದರು ಅಬ್ದುಲ್ ಕಲಾಂ!!

ಇದೊಂದು ರಾಷ್ಟ್ರೀಯ ಮಟ್ಟದಲ್ಲಿ ನಡೆದ ದುರಂತವಲ್ಲವೇ?! ತನ್ನ ದೇಶಕ್ಕಾಗಿ ನೆತ್ತರ ಹರಿಸಿದ ಒಬ್ಬ ಯೋಧನಿಗೆ ಇದಕ್ಕಿಂತ ಬೇರೆ ಯಾವುದಾದರೂ ದೊಡ್ಡ ದ್ರೋಹ ಬಗೆಯಲು ಸಾಧ್ಯವಿದೆಯಾ?!

ಇವತ್ತು, ಇದೇ ಕಾಂಗ್ರೆಸ್ OROP ಯ ಕುರಿತು ಧ್ವನಿಯೆತ್ತಿದೆ! ಆದರೆ, ಯಾವ ನೈತಿಕತೆಯ ಆಧಾರದ ಮೇಲೆ?! ಕೇವಲ ಮತಕ್ಕೋಸ್ಕರ, ಸ್ವಾರ್ಥಕ್ಕೋಸ್ಕರ ಇದೇ ಕಾಂಗ್ರೆಸ್ ದೇಶವನ್ನೂ ಮಾರಿತಲ್ಲವಾ?! ದೇಶದ ಸೈನಿಕನನ್ನೂ ಬಿಡದೇ ಅಡವಿಟ್ಟಿತಲ್ಲವಾ?! ಇದಕ್ಕೆಲ್ಲ, ಇವತ್ತಿನ ಕಾಂಗ್ರೆಸ್ ಉತ್ತರಕೊಡಬಲ್ಲದೇ?!

ಮಾತೆತ್ತಿದರೆ, ಸರ್ಜಿಕಲ್ ಸ್ಟ್ರೈಕ್ ಬಗ್ಗೆ ಮೋದಿ ಎದೆಯುಬ್ಬಿಸಿಕೊಂಡು ಸ್ವಯಂ ಪ್ರಶಂಸೆ ಮಾಡಿಕೊಳ್ಳುತ್ತಾರೆಂದು ಆರೋಪಿಸಿದ ಇದೇ ರಾಹುಲ್ ಗಾಂಧಿಗೆ ಮೋದಿ ಯಾವತ್ತೂ ಸ್ವಯಂ ಪ್ರಶಂಸೆಗೆ ಇಳಿಯಲೇ ಇಲ್ಲವೆಂಬ ವಾಸ್ತವವೂ ಅರಿವಾಗಿರಲಿಕ್ಕಿಲ್ಲ! ಇದೇ ಇಂದಿರೆ ಕಾಂಗ್ರೆಸ್ ಮ್ಯಾನಿಫೆಸ್ಟೋದಲ್ಲಿ 1971 ರ ಯುದ್ಧ ಗೆದ್ದಿದ್ದು ನಾನೆಂದು ಬೆನ್ನು ತಟ್ಟಿಕೊಂಡು, ಸ್ವಯಂ ಘೋಷಿತ ದುರ್ಗೆಯಾದ ಅರಿವೂ ಇಲ್ಲ ಬಿಡಿ!

– ತಪಸ್ವಿ

Tags

Related Articles

Close