ಪ್ರಚಲಿತ

ಅಹಮದಾಬಾದ್‍ನ ಜಾಮಿಯಾ ಮಸೀದಿ ಹಿಂದೆ ಭದ್ರಕಾಳಿ ದೇಗುಲವಾಗಿತ್ತು!! ಬಿಜೆಪಿಯ ಮುಖಂಡರೊಬ್ಬರು ಹೇಳಿದ್ದೇನು ಗೊತ್ತೇ?!

ಅಯೋಧ್ಯೆಯ ವಿಚಾರವೊಂದು ದೆಹಲಿಯ ಜಾಮಿಯಾ ಮಸೀದಿಯ ಚರ್ಚೆಗೆ ನಾಂದಿ ಹಾಡಿತೇ?!

ಮೊಘಲ್ ದೊರೆ ಬಾಬರನು ಅಯೋಧ್ಯೆಯ ರಾಮಮಂದಿರವನ್ನು ಧ್ವಂಸಗೊಳಿಸಿ ಅಲ್ಲೊಂದು ಅಲ್ಲೊಂದು ಕಟ್ಟಡ ನಿರ್ಮಿಸಿದ. ಅದನ್ನೇ ಮುಂದೆ ಮಸೀದಿ ಎಂದು ಕರೆಯಲಾಯಿತು. ಆದರೆ ಅದೇ ಕಟ್ಟಡವನ್ನು ಹಿಂದೂಗಳು ಧ್ವಂಸಗೊಳಿಸಿ ಈಗ ಅಲ್ಲೊಂದು ರಾಮಮಂದಿರವನ್ನು ನಿರ್ಮಿಸಬೇಕು ಎಂದು ಆಗ್ರಹಿಸಿದ್ದು, ಈ ಸಂಬಂಧ ಕಾನೂನು ಸಮರ ನಡೆಯುತ್ತಿದೆ.

ಇದೇ ರೀತಿ ಮುಸ್ಲಿಂ ದೊರೆಗಳು ದಾಳಿ ನಡೆಸಿ ಅನೇಕ ದೇಗುಲಗಳನ್ನು ಧ್ವಂಸಗೊಳಿಸಿ ಅಲ್ಲಿ ಮಸೀದಿ ನಿರ್ಮಿಸಿದರು. ದೇವಸ್ಥಾನದ ಸಂಪತ್ತನ್ನು ಕೊಳ್ಳೆಹೊಡೆದು ತಮ್ಮತಮ್ಮೊಳಗಡೆ ಹಂಚಿಕೊಂಡರು. ಅದೇ ರೀತಿ ಅಹಮದಾಬಾದ್‍ನ ಜಾಮಿಯಾ ಮಸೀದಿ ಹಿಂದೊಮ್ಮೆ ಭದ್ರಕಾಳಿ ದೇಗುಲವಾಗಿತ್ತು. ಇದನ್ನು ಕ್ರಿ.ಶ. 1424ರಲ್ಲಿ ಅಹ್ಮದ್ ಶಾ ಎಂಬಾತ ಭದ್ರಕಾಳಿ ದೇಗುಲವನ್ನು ಧ್ವಂಸಗೊಳಿಸಿ ಮಸೀದಿ ನಿರ್ಮಿಸಿದ ಎಂದು ಹೇಳಲಾಗುತ್ತಿದೆ.

ಅಹಮದಾಬಾದ್‍ನ ಜಾಮಿಯಾ ಮಸೀದಿ ಹಿಂದೆ ಭದ್ರಕಾಳಿ ದೇಗುಲವಾಗಿತ್ತು ಎನ್ನುವ ಬಗ್ಗೆ ಇತಿಹಾಸಕಾರರು ಹೇಳಿದ್ದಾರೆ.

ಮೂಲತಹ ಇದನ್ನು ರಾಜಸ್ಥಾನದ ಮಾಲ್ವಾ ದೊರೆ ರಜಪೂತ್ ಪರ್ಮಾರ್ 9ರಿಂದ 14ರ ಶತಮಾನಗಳ ಮಧ್ಯೆ ನಿರ್ಮಿಸಿದ. ಮುಝಾಫ್ರಿದ್ ಮನೆತನದ ದೊರೆ ಅಹ್ಮದ್ ಶಾ 1411ರಲ್ಲಿ ಕರ್ನಾವತಿಗೆ ದಾಳಿ ನಡೆಸಿದ. ಅಹಮದಾಬಾದ್‍ನ ಮೂಲ ಹೆಸರು ಕರ್ನಾವತಿ ಆಗಿದ್ದು ಅಹ್ಮದ್ ಶಾನಿಂದಾಗಿ ಅದಕ್ಕೆ ಅಹಮದಾಬಾದ್ ಎಂದು ಹೆಸರು ಬಂದಿತು. ಜಮಾ ಮಸೀದಿ ಭದ್ರಾ ಬಂದರ್‍ನ ಹೊರಭಾಗದಲ್ಲಿದ್ದು, ಟೀತಗ ದರ್ವಾಝಾದಿಂದ ಮಾಣಿಕ್‍ಚೌಕ್ ರಸ್ತೆಯ ಸಮೀಪದಲ್ಲಿದೆ.

ಈ ಮಸೀದಿಯ ಕಟ್ಟಡ ತಾವರೆಯ ಪ್ರತಿಕೃತಿ, ಹಾವು, ಮಂಡಲ, ಆನೆ, ಕುಂಡಲಿನಿ ಪ್ರತಿನಿಧಿಸುವ ಸುರುಳಿಯಾಕಾರದ ಸರ್ಪಗಳು, ನೃತ್ಯ ಕನ್ಯೆಯರು ಇವೆ. ಇದರೊಳಗಡೆ ಗುಹೆಗಳಿದ್ದು ಇವೆಲ್ಲಾ ಹಿಂದೂ ದೇಗುಲವೆನ್ನಲು ಆಧಾರಗಳಾಗಿವೆ ಎನ್ನುವುದು ಇತಿಹಾಸಕಾರರ ಅಭಿಪ್ರಾಯ.

ಇಸ್ಲಾಮ್‍ನಲ್ಲಿ ಮೂರ್ತಿಪೂಜೆಗೆ ವಿರೋಧವಿದೆ. ತಾವರೆಗಳ ಪ್ರತಿಕೃತಿಗಳು ಹೆಚ್ಚಾಗಿ ಜೈನ ದೇಗುಲದಲ್ಲಿಯೂ ಕಂಡುಬರುತ್ತದೆ. ಘಂಟೆಗಳೆಲ್ಲಾ ಇರುವುದು ಹಿಂದೂ ದೇವಸ್ಥಾನವನ್ನು ತೋರಿಸುತ್ತದೆ. ಅದರೊಳಗಡೆ ಕಂಡುಬರುವ ಪಿಲ್ಲರ್‍ಗಳು ಕೂಡಾ ಇದಕ್ಕೆ ಆಧಾರ ಒದಗಿಸುತ್ತಿದ್ದು, ಇಂದು ಅದೇ ಸ್ಥಳದಲ್ಲಿ ನಮಾಝ್ ಮಾಡಲಾಗುತ್ತದೆ. ಮಸೀದಿ ಮತ್ತು ಕಮಾನುಗಳನ್ನು ಹಳದಿ ಮರಳುಗಲ್ಲಿನಿಂದ ನಿರ್ಮಿಸಲಾಗಿದೆ. ಇದರೊಳಗಡೆ ಒಂದು ದೊಡ್ಡ ಸಂಕೀರ್ಣವಿದ್ದು, ಇದು ಆಯತಾಕಾರವಿದ್ದು, 75 ಮೀ ಉದ್ದ ಮತ್ತು 66 ಮೀ ಅಗಲವನ್ನು ಹೊಂದಿದ್ದು, ಬಿಳಿ ಬಣ್ಣದಿಂದ ಕೂಡಿದೆ. ಆದರೆ ಇವುಗಳನ್ನು ಮಾರ್ಪಡಿಸಿ ಮಸೀದಿಯನ್ನಾಗಿ ಪರಿವರ್ತಿಸಲಾಯಿತು ಎನ್ನುವುದು ಇತಿಹಾಸಕಾರರ ಅಭಿಪ್ರಾಯ.

ಚರ್ಚೆಗೆ ಇಂಬು ನೀಡಿದ ಬಿಜೆಪಿ ಮುಖಂಡ ವಿನಯ್ ಕಟಿಯಾರ್ ಹೇಳಿಕೆ!!!

ಇದೀಗ ದೆಹಲಿಯ ಜಾಮಿಯಾ ಮಸೀದಿ ಕೂಡಾ ಹಿಂದೂಗಳದ್ದೇ ಎನ್ನುವ ಪ್ರಶ್ನೆ ಮೂಡಿದೆ. ಇದಕ್ಕೆ ಕಾರಣವೆಂದರೆ ಐತಿಹಾಸಿಕ ಜಾಮಾ ಮಸೀದಿ ಮೂಲತಃ ಜಮುನಾ ದೇವಿ ದೇವಸ್ಥಾನವಾಗಿತ್ತು ಎಂದು ಭಾರತೀಯ ಜನತಾ ಪಾರ್ಟಿ ಪ್ರತಿಪಾದಿಸಿದೆ. ಈ ಬಗ್ಗೆ ಬಿಜೆಪಿ ನಾಯಕ ವಿನಯ್ ಕಟಿಯಾರ್ ಚರ್ಚೆಗೆ ಇಂಬು ನೀಡಿದ ಹೇಳಿಕೆಯೊಂದನ್ನು ನೀಡಿದ್ದಾರೆ. ಅವರ ಮಾತುಗಳ ಪ್ರಕಾರ,

ಮೊಘಲ್ ದೊರೆಗಳಿಂದ ಸುಮಾರು 6000 ಸ್ಥಳಗಳು ನಾಶವಾಗಿವೆ. ತಾಜ್‍ಮಹಲ್ ಹೇಗೆ ತೇಜೋ ಮಹಾಲಯವಾಗಿತ್ತೋ ಹಾಗೆಯೇ ಜಾಮಾ ಮಸೀದಿ ಹಿಂದೆ ಜಮುನಾ ದೇವಾಲಯವಾಗಿತ್ತು ಎಂದು ಬಿಜೆಪಿ ನಾಯಕ ವಿನಯ್ ಕಟಿಯಾರ್ ಹೇಳಿಕೊಂಡಿದ್ದು, ಭಾರೀ ಚರ್ಚೆಗೆ ಕಾರಣವಾಗಿದೆ. ನಮ್ಮ ಧಾರ್ಮಿಕ ಕ್ಷೇತ್ರಗಳೆಲ್ಲಾ ಮುಸ್ಲಿಮರಿಂದ ದಾಳಿಗೊಳಪಟ್ಟಿವೆ. ಆದರೆ, ನಾವು ಮಾತ್ರ ರಾಮಜನ್ಮ ಭೂಮಿ, ಕಾಶಿಯ ಬಾಬ ವಿಶ್ವನಾಥ ಮಂದಿರ, ಮಥುರಾದ ಕೃಷ್ಣ ಜನ್ಮಭೂಮಿ ಬಗ್ಗೆ ಮಾತ್ರ ಮಾತನಾಡುತ್ತಿದ್ದೇವೆ. ಆದರೆ, ಸದ್ಯಕ್ಕೆ ರಾಮಮಂದಿರ ನಿರ್ಮಾಣ ಮಾತ್ರ ನಮ್ಮ ಬೇಡಿಕೆಯಾಗಿದೆ ಎಂದು ತಿಳಿಸಿದ್ದಾರೆ. ಅಲ್ಲದೆ ಸುಪ್ರೀಂಕೋರ್ಟ್‍ನಲ್ಲಿ ನಡೆದ ಅಯೋಧ್ಯೆ ಪ್ರಕರಣದ ವಿಚಾರಣೆ ವೇಳೆ ಸುನ್ನಿ ವಕ್ಫ್ ಬೋರ್ಡ್ ಅನ್ನು ಪ್ರತಿನಿಧಿಸಿದ್ದ ಕಾಂಗ್ರೆಸ್ ನಾಯಕ ಕಪಿಲ್ ಸಿಬಲ್ ತಾಳಿದ ನಿಲುವನ್ನು ಕಟಿಯಾರ್ ತೀವ್ರವಾಗಿ ವಿರೋಧಿಸಿದ್ದಾರೆ.

ಮುಸ್ಲಿಮರು ರಾಮಮಂದಿರದ ಜಾಗದಲ್ಲಿ ಮಸೀದಿಯನ್ನು ನಿರ್ಮಿಸಲು ಹೊರಟಿದ್ದಾರೆ. ಆದರೆ, ನಾವು ಅದನ್ನು ಬಿಡುವುದಿಲ್ಲ. ಒಂದು ವೇಳೆ ಕಾಂಗ್ರೆಸ್ ಅಲ್ಲಿ ಮಸೀದಿ ನಿರ್ಮಿಸುವ ಸಾಹಸ ಮಾಡಿದರೆ, ನಾವು ಉಳಿದ 6000 ಸ್ಥಳಗಳ ಬಗ್ಗೆಯೂ ಮಾತನಾಡಬೇಕಾಗುತ್ತದೆ ಎಂದಿದ್ದಾರೆ.

ಸಾವಿರಾರು ದೇಗುಲಗಳು ಮುಸ್ಲಿಂ ದೊರೆಗಳ ಆಕ್ರಮಣದಿಂದ ನಾಶವಾದವು. ಆದರೆ ಹಿಂದೂಗಳು ಅವೆಲ್ಲನ್ನೂ ಬಿಟ್ಟು ತಮ್ಮ ಆರಾಧ್ಯ ದೇವರಾದ ರಾಮಮಂದಿರ ನಿರ್ಮಿಸಲು ಮುಂದಾಗುತ್ತಿದ್ದಾರೆ. ಆದರೆ ಇದಕ್ಕೆ ಮುಸ್ಲಿಮರು ಯಾವ ರೀತಿ ವಿರೋಧ ವ್ಯಕ್ತಪಡಿಸಿದ್ದರೋ ಅದೇ ರೀತಿ ಕಾಂಗ್ರೆಸಿಗರೂ ವಿರೋಧಿಸುತ್ತಿದ್ದಾರೆ. ಇದೇ ಸಂದರ್ಭದಲ್ಲಿ ದೆಹಲಿಯ ಜಾಮಿಯಾ ಮಸೀದಿಯ ಚರ್ಚೆಯೂ ಆರಂಭಗೊಂಡಿದೆ.

source:http://vijayavani.net/first-taj-now-jama-masjid-bjp-leader-claims-mosque-was-jamuna-devi-temple/

ಚೇಕಿತಾನ

Tags

Related Articles

Close