ಅಂಕಣಪ್ರಚಲಿತ

ಆತನೊಬ್ಬ ‘ಶೇರ್ ಷಾ’ , ಕಾರ್ಗಿಲ್ ನಲ್ಲಿ ತ್ರಿವರ್ಣ ಧ್ವಜ ಹಾರಿಸಿದ ಶೇರ್ ಷಾ ಮನೆಗೆ ಹೇಗೆ ಬಂದದ್ದು ಹೇಗೆ ಗೊತ್ತೇನು?

“ಒ೦ದೋ ನಾನು ತ್ರಿವರ್ಣ ಧ್ವಜವೇರಿಸಿ ಬರುತ್ತೇನೆ ,ಇಲ್ಲವೇ ಅದೇ ತ್ರಿವರ್ಣ ಧ್ವಜವನ್ನು ಹೊಂದ್ದುಕೊಂಡು ಬರುವೆ, ಆದರೆ ಖಂಡಿತವಾಗಿಯೂ ಬ೦ದೇ ಬರುತ್ತೇನೆ”

– ಕ್ಯಾಪ್ಟನ್ ವಿಕ್ರಮ್ ಬಾತ್ರಾ

 

ವಿಕ್ರಮ್ ಬಾತ್ರ ಅವರು 9 ಸೆಪ್ಟೆಂಬರ್ 1974ರಲ್ಲಿ, ಹಿಮಾಚಲ್ ಪ್ರದೇಶ್  ಪಲಂಪುರ್ ಹತ್ತಿರದ ಘುಗ್ಗರ್ ಎಂಬ ಹಳ್ಳಿಯಲ್ಲಿ ಅವಳಿಗಳಾದ ವಿಕ್ರಮ್ ಮತ್ತು   ವಿಶಾಲ್ ಜನಿಸಿದರು. ಇವರ ತಂದೆ ಜಿ.ಎಲ್. ಬಾತ್ರ, ಚಂಡೀಗಢ ಸಮೀಪದ ಪಾಲಂಪುರದ ಶಾಲೆಯೊಂದರ ಹೆಡ್ ಮಾಸ್ಟರ್ ಹಾಗು ತಾಯಿ ಜೈ ಕಮಲ್   ಬಾತ್ರ ಶಿಕ್ಷಕಿ. ಇವರ ಶಾಲಾ ವಿದ್ಯಾಬ್ಯಾಸವನ್ನು ಪಲಂಪುರಿನ D.A.V. Public School ನಲ್ಲಿ ಮುಗಿಸಿದರು, ಇವರ                          ತಾಯಿ ಸಹಶಾಲೆಯಶಿಕ್ಷಕಿ ಆಗಿದ್ದರು. ಇವರ ಪದವಿ ಪೂರ್ವ ಶಿಕ್ಷಣವನ್ನು Central School, ಪಲಂಪುರ್ ನಲ್ಲಿ ಮಾಡಿದ್ದರು.ಇವರು B.Sc. ಪದವಿಯನ್ನು ಚಂಡೀಗರ್ ನ D.A.V. ಕಾಲೇಜಿನಲ್ಲಿ ಮಾಡಿದ್ದರು, ಅದೇ ಕಾಲೇಜಿನಲ್ಲಿ N.C.C (ಏರ್ವಿಂಗ್) ನಲ್ಲಿ ಅತ್ಯುತ್ತಮ ಉಮೇದುವಾರ ಎಂದು ಗುರಿತಿಸಿ ಕೊಂಡಿದ್ದರು. ತದ ನಂತರ 1996 ರಲ್ಲಿ ಡೆಹರಡೂನಿನ ಇಂಡಿಯನ್ ಮಿಲಿಟರಿ ಅಕಾಡೆಮಿಯಲ್ಲಿ ಆಯ್ಕೆ ಆದರು. ನಂತರ 13 ಜಮ್ಮು ಮತ್ತು ಕಾಶ್ಮಿರ ಕೋವಿಗೆ ಲೆಫ್ಟಿನೆಂಟ್ ಆದರು. ವೇಗವಾಗಿ ಕ್ಯಾಪ್ಟನ್ ಮಟ್ಟಕ್ಕೆ ಬೆಳದರು. ಅವತ್ತು ವಿಕ್ರಮ್ ಬಾತ್ರಾ ಮನೆಗೆ ಬಂದಿದ್ದ.             ಮಿಲಿಟರಿ ಸೇರಿ ೧೮ ತಿಂಗಳಾಗಿತ್ತು. ಮೊದಲ ಬಾರಿಗೆ ಅಮ್ಮ-ಅಪ್ಪ ಮತ್ತು ತಮ್ಮನನ್ನು ನೋಡಲು ಆಸೆಯಿಂದ ಬಂದಿದ್ದ.                                          ಅದು ರಂಗುರಂಗಿನ ಹೋಳಿ ಹಬ್ಬದ ಸಂದರ್ಭ. ಪಾಲಂಪುರದಲ್ಲೊಂದು ಹೋಟೆಲ್ ಇದೆ. ನೇವುಗಲ್ ಕೆಫೆ!ಪಕ್ಕದಲ್ಲೇ ನೇವುಗಲ್ ನದಿ ಕೂಡ ಹರಿಯುತ್ತಾಳೆ. ವಿಕ್ರಮ್ ಹೋಟೆಲ್ಗೆ ಬಂದಿದ್ದ. ಅಲ್ಲೇ ಇದ್ದ ಪರಿಚಿತ ವ್ಯಕ್ತಿಯ್ಬೊರು ವಿಕ್ರಮ್ನನ್ನು                                       ಕಂಡಿದ್ದೇ ತಡ ಯುದ್ಧದ ಬಗ್ಗೆ ಮಾತನಾಡಲಾರಂಭಿಸಿದರು. ‘ಯುದ್ಧ ಪ್ರಾರಂಭವಾಗಿದೆ. ಯಾರಿಗೆ ಗೊತ್ತು…. ಯಾವ ಕ್ಷಣದಲ್ಲಿ ಬೇಕಾದರೂ                         ನಿನಗೆ ಕರೆ ಬರಬಹುದು. ಎಚ್ಚರಿಕೆಯಿಂದಿರು….’ ಎಂದು ಕಿವಿಮಾತುಹೇಳಿದರು.

ಅದುವರೆಗೂ ಶಾಂತಚಿತ್ತನಾಗಿ ಕೇಳಿಸಿಕೊಳ್ಳುತ್ತಿದ್ದ ವಿಕ್ರಮ್, ‘ತಲೆಕೆಡಿಸಿಕೊಳ್ಳಬೇಡಿ. ಒಂದೋ ಗೆದ್ದು ತ್ರಿವರ್ಣ ಧ್ವಜವನ್ನು ಹಾರಿಸಿ                              ಬರುತ್ತೇನೆ, ಇಲ್ಲವೇ ಅದೇ ಧ್ವಜದಲ್ಲಿ ಸುತ್ತಿರುವ ನನ್ನ ಹೆಣ ಬರುತ್ತೆ ಅಂದಿದ್ದ!!

 

ವಿಕ್ರಮ್ ಬಾತ್ರಾರವರಿಗೆ, ಜೂನ್ 1, 1999 ರಂದು ಕಾರ್ಗಿಲ್ನಲ್ಲಿ ಸೇವೆಗೆ ಹಾಜರಾಗಬೇಕೆಂದು ಸೇನೆಯಿಂದ ಆದೇಶ ಬಂದಿತ್ತು. 17 ಸಾವಿರ ಅಡಿ ಎತ್ತರದಲ್ಲಿರುವ ಶಿಖರದ ತುದಿಗೆ ಮೊದಲ ಬೆಳಕು ಬೀಳುತ್ತದೆ. ಕಾಶ್ಮೀರ ಕಣಿವೆಯಲ್ಲೇ ಅತಿ ಎತ್ತರದ ಶಿಖರ.  ಜೂನ್ 19ರಂದು ದಟ್ಟ ಕತ್ತಲು ಮುಸುಕಿತ್ತು. ಹಾಗಾಗಿ ಭಯೋತ್ಪಾದಕರನ್ನುಕೊಲ್ಲುವಂತಹ ಕಾರ್ಯಕ್ಕೆ ಕೆಲವೇ ಗಂಟೆಗಳು ಬಾಕಿ ಉಳಿದಿದ್ದವು.                        ಬೆಳಗಾದರೆ ಶಿಖರವೇರಲು ಸಾಧ್ಯವೇ ಇಲ್ಲ.ಶತ್ರುವಿನ ಗುಂಡಿಗೆ ಎದೆಗೊಡಬೇಕಾಗುತ್ತದೆ. ಕಾರ್ಗಿಲ್ ಯುದ್ಧ ಆರಂಭವಾಗಿ                                                      ದು ವಾರಗಳಾಗಿತ್ತು. ಆದರೂ ಹೆಚ್ಚಿನ ಯಶಸ್ಸು ಸಾಧಿಸಿರಲಿಲ್ಲ.   ಶಿಖರವನ್ನು ಜಯಿಸಲೇಬೇಕೆಂದು ಲೆಫ್ಟಿನೆಂಟ್ ವಿಕ್ರಮ್ ಬಾತ್ರಾ ಮತ್ತು ಕ್ಯಾಪ್ಟನ್  ಸಂಜೀವ್ ಜಾಮ್ವಾಲ್ಗೆ ಆದೇಶ ನೀಡಲಾಗಿತ್ತು. ಅದು ದೇಶದ ಘನತೆಯ ಪ್ರಶ್ನೆಯೂ ಗಿತ್ತು. ಕಡಿದಾದ ಭಾಗದ ಮೂಲಕ                                        ಶಿಖರವನ್ನೇರುವಂತೆ ತಮ್ಮ ಸಂಗಡಿಗರಿಗೆ ನಿರ್ದೇಶನ ನೀಡಿದ ಬಾತ್ರಾ, ತಾನು ಹಿಂದಿನಿಂದ ದಾಳಿ ಮಾಡಲು ನಿರ್ಧರಿಸಿದ.

vikram batra......

ಬೆಳಗಾಗುವಷ್ಟರಲ್ಲಿ ಉತ್ತುಂಗದಲ್ಲಿದ್ದ ಬಂಕರ್ ಸ್ಫೋಟಗೊಂಡಿತ್ತು. ಶತ್ರುಗಳು ಹೆಣವಾಗಿದ್ದರು. ವಿಕ್ರಮ್ಬಾತ್ರಾ  ನೇತೃತ್ವದ ‘13 ಜಮ್ಮು-ಕಾಶ್ಮೀರ್ ರೈಫಲ್ಸ್’ ಸೇನಾ ತುಕಡಿ ನಿರ್ಣಾಯಕ ಕಾಳಗದಲ್ಲಿ ಗೆದ್ದಿತ್ತು. ಆತನ ಸಾಹಸಕ್ಕೆ ದೇಶವೇ ಬೆರಗಾಗಿತ್ತು. ಟಿವಿ ಪರದೆಯ ಮೇಲೆ                             ಬಾತ್ರಾನದ್ದೇ ಚಿತ್ರ. ಪತ್ರಿಕೆಗಳಲ್ಲಿ ಆತನದ್ದೇ ಗುಣಗಾನ. ಬೆಳಗಾಗುವಷ್ಟರಲ್ಲಿ ಕಾರ್ಗಿಲ್ ಯುದ್ಧದ ಪ್ರೇರಣಾ ಶಕ್ತಿಯಾಗಿ ಹೊರಹೊಮ್ಮಿದ್ದ. ಜನರಲ್      ವೇದ್ ಪ್ರಕಾಶ್ ಮಲಿಕ್ ಸ್ವತಃಕರೆ ಮಾಡಿ ಬಾತ್ರಾಗೆ ಅಭಿನಂದನೆ ಸಲ್ಲಿಸಿದರು. ಸೆಟಲೈಟ್ ಫೋನ್ ಕೈಗೆತ್ತಿಕೊಂಡ ವಿಕ್ರಮ್, ‘ಅಪ್ಪಾ,ಶತ್ರುವಿನನೆಲೆಯನ್ನು ವಶಪಡಿಸಿಕೊಂಡಿದ್ದೇನೆ’ ಎಂದಾಗ, ಅದು ತಮ್ಮ ಜೀವಮಾನದ ಅತ್ಯಂತ ಹೆಮ್ಮೆಯ ಕ್ಷಣ ಎಂದುಜಿ.ಎಲ್.ಬಾತ್ರಾ ಖುಷಿಪಟ್ಟಿದ್ದರು. ಶೌರ್ಯದ ಪ್ರತೀಕವಾಗಿರುವ ‘ವಿಕ್ರಮ್’ ಎಂಬ ಹೆಸರನ್ನು ತಮ್ಮ ಮಗನಿಗಿಟ್ಟಿದ್ದರು.ಹೆಸರಿಗೆತಕ್ಕಂಥ ಸಾಧನೆಯೂ ಅದಾಗಿತ್ತು.  ಶಿಖರದ ವಶ,               ಟೈಗರ್ ಹಿಲ್ಸ್ನ ಜಯಕ್ಕೆ ಕಾರಣವಾಯಿತು. ಅದುಕಾರ್ಗಿಲ್ಯುದ್ಧದ ಮಹತ್ವದ ಘಟ್ಟ. ಮುಂದಿನ ಹಾದಿಯನ್ನು ಸುಗಮಗೊಳಿಸಿ ಸಾಧನೆ. ಇದಾಗಿ ಕೆಲವೇ ದಿನಗಳನಂತರ,ವಿಕ್ರಮ್ಗೆ ಮತ್ತೆ ಕರೆಬಂತು. ಅದು ಮತ್ತೊಂದು ಮಹತ್ವದ ಕಾರ್ಯಾಚರಣೆಯ ವಾಬ್ದಾರಿಯಾಗಿತ್ತು!

‘ವಿಕ್ರಮ್, ನೀನು ಮಹತ್ವದ ಕಾರ್ಯಾಚರಣೆಗೆ ತೆರಳುತ್ತಿರುವೆ.  ಕ್ಷಣದಲ್ಲಿ ನಿನ್ನ ಮನದಲ್ಲೇನಿದೆ?’ ಎಂದು ಟೀವಿ ವರದಿಗಾರರು ಪ್ರಶ್ನಿಸಿದರು. ಏ ದಿಲ್ ಮಾಂಗೆ ಮೋರ್ ಎಂದನು( ಇನ್ನೂ ತುಂಬಾ ಬೆಟ್ಟಗಳನ್ನ ನಮ್ಮದಾಗಿಸಿಕೊಳ್ಳಬೇಕು ).

ಇರುವ ಶಿಖರವನ್ನು ಜಯಿಸುವ ಜವಾಬ್ದಾರಿ ವಿಕ್ರಮ್  ಹೆಗಲೇರಿತ್ತು. ಮಂಜು ಮುಸುಕಿರುವ ವಾತಾವರಣದಲ್ಲಿ ಕಡಿದಾದ                                                     ಶಿಖರವನ್ನು ಏರುವುದು ಸಾಮಾನ್ಯ ಮಾತಾಗಿರಲಿಲ್ಲ. ‘ಶೇರ್ ಷಾ’ ಎಂದೇ ಖ್ಯಾತಿ ಪಡೆದಿರುವ ವಿಕ್ರಮ್ ಬಾತ್ರಾ ಬರಲಿದ್ದಾನೆ ಎಂಬ                                     ವಿಷಯ ಶತ್ರುಗಳಿಗೂ ಗೊತ್ತಾಗಿತ್ತು. ಜುಲೈ 8ರ ರಾತ್ರಿ ವಿಕ್ರಮ್ ಮತ್ತು ಮತ್ತೊಬ್ ಯುವ ಸೇನಾಧಿಕಾರಿ ಅನೂಜ್ ನಯ್ಯರ್                                            ತ್ರುಗಳ ಮೇಲೆ ಪ್ರತಿ ದಾಳಿ ಆರಂಭಿಸಿದರು. ಶಿಖರದ ಪ್ರತಿ ಹಂತದಲ್ಲೂ ಇದ್ದ ಶತ್ರುಗಳ ಬಂಕರ್ಗಳನ್ನು ನಾಶಪಡಿಸುತ್ತಲೇ ಸಾಗಿದರು. ಅಂತಿಮ ವಿಜಯ ಇನ್ನೇನು ಬಂತು ಎನ್ನುವಷ್ಟರಲ್ಲಿ ಶತ್ರುಗಳು ನಡೆಸಿದ ಸ್ಫೋಟದಲ್ಲಿ ಕಿರಿಯ                                                        ಅಧಿಕಾರಿಯೊಬ್ಬನ ಕಾಲುಗಳಿಗೆ ತೀವ್ರ ಗಾಯಗಳಾದವು.ಆತನನ್ನು ಬಂಕರ್ಗೆ ಎತ್ತಿಕೊಂಡು ಬರುವೆ ಎಂದು ಸನಿಹದಲ್ಲೇ ಇದ್ದ                                          ಸುಬೇದಾರ್ ಹೇಳಿದರೂ ವಿಕ್ರಮ್ ಕೇಳಲಿಲ್ಲ. ‘ನಿನಗೆ ಮಕ್ಕಳಿದ್ದಾರೆ,ದೂರ ಸರಿ’ ಎಂದು ತಾನೇ ಹೊರ ನೆಗೆದ. ಶತ್ರುವಿನ ಗುಂಡು ಎದೆಯನ್ನೇ ಹೊಕ್ಕಿತು!ಇನ್ನೊಂದು ಗುಂಡು ಸೊಂಟವನ್ನು ಸೀಳಿತು. ಆದರೂ ನೆಲಕ್ಕುರುಳುವ ಮುನ್ನ ಬಾತ್ರಾ ಬಂದೂಕು ಐವರು ಭಯೋತ್ಪಾದಕರನ್ನು ಕೊಂದಿತ್ತು.ಬೆಳಗಾಗುವಷ್ಟರಲ್ಲಿ ಶಿಖರವೇನೋ ಕೈವಶವಾಯಿತು. ಆದರೆ ವಿಕ್ರಮ್ನ ಪ್ರೇಯಸಿ,ಮದುವೆಯಾಗುವ ಮುನ್ನವೇ                                                   ವಿಧವೆಯಾಗಿದ್ದಳು. ಅನೂಜ್ ನಯ್ಯರ್ ಕೂಡ ಹುತಾತ್ಮನಾಗಿದ್ದ.ಇತ್ತ ಸೈನಿಕರಿಬ್ಬರು ಪಾಲಂಪುರದಲ್ಲಿ ಬಾತ್ರಾ ಮನೆಗೆ ಬಂದಾಗ                                       ಮ್ಮ ಕಮಲ್ ವಿಷಯ ತಿಳಿದು ಅಳಲಾರಂಭಿಸಿದರು. ಸೈನಿಕರು ಬರುವುದು ಕೆಟ್ಟ ಸುದ್ದಿ ಮುಟ್ಟಿಸಲು ಮಾತ್ರ ಎಂಬುದು                                              ಅವರಿಗೆ ತಿಳಿದಿತ್ತು. ಅದೇ ವೇಳೆಗೆ ಜಿ.ಎಲ್. ಬಾತ್ರಾ ಕೂಡ ಆಗಮಿಸಿದರು. ಹೊರಗೆ ಕಾದಿರುವಂತೆ ಸೈನಿಕರಿಗೆ ಸೂಚಿಸಿದ                                            ಬಾತ್ರಾ, ದೇವರ ಕೋಣೆಗೆ ಹೋಗಿ ತಲೆಬಾಗಿ ಹೊರಬಂದರು. ಆದರೆ ‘ಬಾತ್ರಾಸಾಬ್, ವಿಕ್ರಮ್ಇನ್ನಿಲ್ಲ’! ಎಂಬ ಮಾತು ಕೇಳಿದ ಕೂಡಲೇ ಅಲ್ಲೇ                 ಕುಸಿದರು. ಅಮ್ಮ ಕೂಡ ಬಿಕ್ಕಳಿಸಲಾರಂಭಿಸಿದರು. ದೇಶವೇ ಕಣ್ಣೀರಿಟ್ಟಿತು. ವಿಕ್ರಮ್ ಜುಲೈ  ೧೯೯೯ರಂದು ವಿಧಿವಶರಾದರು,ಅವರಿಗೆ ಅತಿ ದೊಡ್ಡ ಶೌರ್ಯ ಪ್ರಶಸ್ತಿಯಾದ ಪರಮ ವೀರ ಚಕ್ರವನ್ನುನೀಡಿ ಸರ್ಕಾರ ಗೌರವಿಸಿತು.

 

ಕಾರ್ಗಿಲ್ ಉಳಿಸಿಕೊಳ್ಳುವುದಕ್ಕಾಗಿ ಅಂದು 527 ಸೈನಿಕರು ತಮ್ಮ ಜೀವವನ್ನೇ ಬಲಿ ಕೊಟ್ಟರು. 1363 ಸೈನಿಕರು ಊನಗೊಂಡರು, ಅಂಗಾಂಗ                 ಕಳೆದುಕೊಂಡರು. ಮೇಜರ್ ಪದ್ಮಪಾಣಿ ಆಚಾರ್ ತೀರಿಕೊಂಡಾಗ ಅವರ ಪತ್ನಿಯ ಹೊಟ್ಟೆಯಲ್ಲಿ ಚೊಚ್ಚಲ ಮಗು                                        ಬೆಳೆಯುತ್ತಿತ್ತು, ಕ್ಯಾಪ್ಟನ್ ವಿಕ್ರಂ ಬಾತ್ರಾ ಮಡಿದಾಗ ಅವರ ಭಾವಿ ಪತ್ನಿ ವಿವಾಹಕ್ಕೆತಯಾರಿ ನಡೆಸುತ್ತಿದ್ದಳು, ಲೆಫ್ಟಿನೆಂಟ್ ಹನೀಫುದ್ದೀನ್ ಹುತಾತ್ಮನಾಗುವುದರೊಂದಿಗೆ ಆತನ ವಿಧವೆ ತಾಯಿ ಇದ್ದ ಒಬ್ಬಮಗನನ್ನೂ ಕಳೆದುಕೊಂಡಳು, ಕ್ಯಾಪ್ಟನ್                                                  ಕೆ. ಕ್ಲಿಫೋರ್ಡ್ ನೊಂಗ್ರುಮ್ ಮಡಿದಾಗ ಒಂದಿಡೀ ಮೇಘಾಲಯ ರಾಜ್ಯವೇ ಕಣ್ಣೀರ ಕಡಲಾಗಿತ್ತು.

-ಮಹೇಶ

Tags

Related Articles

Close