ಪ್ರಚಲಿತ

ಇಂತಹ ಕಾರ್ಯಕ್ರಮ ಪ್ರತಿ ಕ್ಷೇತ್ರದಲ್ಲೂ ಮಾಡಿದ್ರೆ ಬಿಜೆಪಿ ಕನಸು ನನಸು!! ಅರಣ್ಯ ಸಚಿವರ ವಿರುದ್ಧ ಅಲ್ಲಿ ನಡೆದ ಕ್ರಾಂತಿಯೇನು ಗೊತ್ತಾ?

ಅವರು ಕಳೆದ ಬಾರಿಯ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿ ಸೋಲುಂಡ ನಾಯಕ. ಭಾರತೀಯ ಜನತಾ ಪಕ್ಷದ ನಿಷ್ಠಾವಂತ ಕಾರ್ಯಕರ್ತ. ಆದರೆ ಆ ಚುನಾವಣೆಯಲ್ಲಿ ಸೋತ ನಂತರವೂ ಪಕ್ಷದಲ್ಲಿ ಯಾವುದೇ ಸ್ಥಾನಮಾನ ಬಯಸದೆ ಜವಾಬ್ದಾರಿಯುತ ನಾಯಕನಾಗಿ ಬೆಳೆದ ನಾಯಕ. ಅವರು ಕಳೆದ ವಿಧಾನಸಭಾ ಚುನಾವಣೆಯ ನಂತರ ತಾನು ಸೋತಿದ್ದೇನೆ ಎನ್ನುವ ಯಾವುದೇ ಹತಾಶೆಯನ್ನೂ ಇಟ್ಟುಕೊಳ್ಳದೆ ಪಕ್ಷದ ಏಳಿಗೆಗಾಗಿ ಅವರು ಶ್ರಮಿಸಿದ ಪರಿ ಅದ್ಭುತ.

ಅವರು ಮತ್ಯಾರೂ ಅಲ್ಲ. ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ವಿಧಾನ ಸಭಾ ಕ್ಷೇತ್ರದ ಕಳೆದ ಬಾರಿಯ ಭಾರತೀಯ ಜನತಾ ಪಕ್ಷದ ಅಭ್ಯರ್ಥಿಯಾಗಿದ್ದ ರಾಜೇಶ್ ನಾಯ್ಕ್ ಉಳಿಪಾಡಿ ಗುತ್ತು.

ಹೌದು… ರಾಜೇಶ್ ನಾಯ್ಕ್ ಉಳಿಪಾಡಿ ಗುತ್ತು. ಈ ಹೆಸರು ಬಂಟ್ವಾಳ ವಿಧಾನ ಸಭಾ ಕ್ಷೇತ್ರದಲ್ಲಿ ಮಾತ್ರವಲ್ಲದೆ ಮಂಗಳೂರಿನಲ್ಲೇ ಫೇಮಸ್.!!  ಹಲವಾರು ಜನಹಿತ ಕಾರ್ಯಕ್ರಮಗಳಿಂದಲೇ ಹೆಸರುವಾಸಿಯಾಗಿರುವ ಇವರು ರಾಜಕೀಯ ಕ್ಷೇತ್ರದಲ್ಲಿಯೂ ತನ್ನ ಛಾಪು ಮೂಡಿಸಿ ಜಗತ್ತಿನ ನಂಬರ್ ವನ್ ಪಕ್ಷ ಭಾರತೀಯ ಜನತಾ ಪಕ್ಷದ ನಾಯಕನಾಗಿ ಮಾತ್ರವಲ್ಲ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಅತ್ಯಲ್ಪ ಮತಗಳ ಅಂತರದಿಂದ ಸೋಲುಂಡ ನಾಯಕ. ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ನಾಯಕನಾಗಿದ್ದ ಪ್ರಸ್ತುತ ರಾಜ್ಯದಲ್ಲಿ ಅರಣ್ಯ ಸಚಿವರಾಗಿರುವ ರಮಾನಾಥ ರೈ ವಿರುದ್ಧ ಅಲ್ಪ ಮತಗಳಿಂದ ಸೋಲುಂಡವರು. ಸೋಲೇ ಗೆಲುವಿನ ಸೋಪಾನ ಎಂಬ ಧ್ಯೇಯವನ್ನು ತನ್ನ ಜೀವನದಲ್ಲಿ ಅಳವಡಿಸಿ ಭಾರತೀಯ ಜನತಾ ಪಕ್ಷದ ನಾಯಕನಾಗಿ ಬೆಳೆದು ಬಂಟ್ವಾಳದ ಮನೆಮಾತಾಗಿದ್ದಾರೆ ರಾಜೇಶ್ ನಾಯ್ಕ್ ಉಳಿಪಾಡಿ ಗುತ್ತು.

ಸಧ್ಯ ಈ ನಾಯಕ ಹೆಸರಾಗಿರುವುದು ಒಂದು ಅಧ್ಭುತ ಕೆಲಸದಿಂದ. ಅದೂ ಭಾರತೀಯ ಜನತಾ ಪಕ್ಷದ ನಾಯಕನಾಗಿ ಮುಂದಿನ ರಾಜ್ಯ ವಿಧಾನಸಭೆ ಚುನಾವಣೆಗೆ ನಡೆಸುತ್ತಿರುವ ತಯಾರಿ. ‘ಕಳೆದ ಬಾರಿ ಪಕ್ಷ ತನಗೆ ಅವಕಾಶ ಮಾಡಿಕೊಟ್ಟಿದೆ. ಈ ಬಾರಿ ನಾನು ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿ ಕೆಲಸ ಮಾಡುತ್ತೇನೆ. ಅವಕಾಶ ಕೊಟ್ಟರೆ ಸ್ಪರ್ಧಿಸುತ್ತೇನೆ. ಇಲ್ಲವಾದಲ್ಲಿ ಪಕ್ಷದ ಪರವಾಗಿ ನಿಷ್ಠಾವಂತ ಕಾರ್ಯಕರ್ತನಾಗಿ ದುಡಿಯುತ್ತೇನೆ’ ಎಂದು ಹೇಳಿದ್ದಾರೆ ರಾಜೇಶ್ ನಾಯ್ಕ್ ಉಳಿಪಾಡಿ ಗುತ್ತು ಇವರು.

ಇಂದು ಬಂಟ್ವಾಳದಲ್ಲಿ ನಡೆದ ಈ ಐತಿಹಾಸಿಕ ಕಾರ್ಯಕ್ರಮ ರಾಜೇಶ್ ನಾಯ್ಕರ ಹೋರಾಟದ ಪ್ರತೀಕವಾಗಿದ್ದು ಮುಂದಿನ ಬಾರಿ ಬಂಟ್ವಾಳದಲ್ಲಿ ಅರಣ್ಯ ಸಚಿವ ರಮಾನಾಥ ರೈಯನ್ನು ಸೋಲಿಸಿ ಭಾರತೀಯ ಜನತಾ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸುವುದು ಶತ ಸಿದ್ಧ ಎಂಬ ಮಾತು ವ್ಯಕ್ತವಾಗಿದೆ.

ಭಾರತೀಯ ಜನತಾ ಪಾರ್ಟಿ ಬಂಟ್ವಾಳ ವಿಧಾನಸಭಾ ಕ್ಷೇತ್ರಸಮಿತಿಯ  ನೇತೃತ್ವದಲ್ಲಿ ರಾಜೇಶ್ ನಾಯಕ್‌ ಉಳಿಪ್ಪಾಡಿ ಇವರ  ಮುಂದಾಳತ್ವದಲ್ಲಿ ಮಾಜಿ ಶಾಸಕರಾದ ಎ.ರುಕ್ಮಯ ಪೂಜಾರಿ, ಕೆ.ಪದ್ಮನಾಭ ಕೊಟ್ಟಾರಿ,   ಶ್ರೀಮತಿ ಸುಲೋಚನಾ ಜಿ.ಕೆ ಭಟ್,ಜಿ.ಆನಂದ, ನಾಗರಾಜ ಶೆಟ್ಟಿ, ತುಂಗಪ್ಪ ಬಂಗೇರ, ಮುಂತಾದಹಿರಿಯ ನಾಯಕರ ಮಾರ್ಗದರ್ಶನದಲ್ಲಿ ಪರಿವರ್ತನೆಗಾಗಿ ನಮ್ಮನಡಿಗೆ  ಬಂಟ್ವಾಳದ ಪರಿವರ್ತನೆಗೆ ಗ್ರಾಮದೆಡೆಗೆ ಬಿಜೆಪಿ ನಡಿಗೆ  ಎಂಬ ವಿನೂತನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ಕಳೆದ ನಾಲ್ಕುವರೆ ವರ್ಷದಲ್ಲಿ ಈ ರಾಜ್ಯದಲ್ಲಿ ಆಡಳಿತನಡೆಸುತ್ತಿರುವ ಕಾಂಗ್ರೆಸ್ ಸರಕಾರ ಜನವಿರೋಧಿ ನೀತಿಯನ್ನುಅನುಸರಿಸುತ್ತಿದೆ. ಮುಖ್ಯಮಂತ್ರಿ,ಸಚಿವರುಗಳು ನೀಡುತ್ತಿರುವಬೇಜವಾಬ್ದಾರಿ ಹೇಳಿಕೆಗಳು , ಹಿಂದೂ ದಮನಕಾರಿ ನೀತಿ, ಭ್ರಷ್ಟಾಚಾರ ಹಗರಣಗಳೇ ಇದಕ್ಕೆ ಸಾಕ್ಷಿ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪದೇ ಪದೇ ಅಶಾಂತಿಯ ವಾತಾವರಣದ್ವೇಷದ ರಾಜಕಾರಣ, ಮತಗಳಿಕೆಗಾಗಿ ಒಂದು ವರ್ಗದ ಜನರಓಲೈಕೆ ಶಾಂತಿ ಸುವ್ಯವಸ್ಥೆ ಕಾಪಾಡುವಲ್ಲಿನ  ವಿಫಲತೆ.ಅಧಿಕಾರಿಗಳಿಗೆ ಒತ್ತಡ.ಇವು ಈ ಜಿಲ್ಲೆಯ ಉಸ್ತುವಾರಿ ಸಚಿವರಸಾಧನೆ.

ಈ ಬಗ್ಗೆ ಜನಜಾಗೃತಿಗಾಗಿ ಬಂಟ್ವಾಳ ವಿಧಾನಸಭಾ ಕ್ಷೇತ್ರವ್ಯಾಪ್ತಿಯಲ್ಲಿ ೫೯ ಗ್ರಾಮ ವ್ಯಾಪ್ತಿಯಲ್ಲಿ ಈ ಕಾಲ್ನಡಿಗೆಸಂಚರಿಸಲಿದ್ದು ಜನವರಿ ೧೪ ಮಕರ ಸಂಕ್ರಮಣದ ದಿನ ಅರಳ ಶ್ರೀಗರುಡ ಮಹಾಂಕಾಳಿ ದೇವಸ್ಥಾನದಿಂದ ಮಧ್ಯಾಹ್ನ ಕಾಲ್ನಡಿಗೆಆರಂಭವಾಗಲಿದೆ.  ದಕ್ಷಿಣ ಕನ್ನಡ ಜಿಲ್ಲಾ ಸಂಸದರಾದ ನಳಿನ್ ಕುಮಾರ್ ಕಟೀಲ್‌ರವರು ಪಾದಯಾತ್ರೆಗೆ ಚಾಲನೆ ನೀಡಿದ್ದಾರೆ.ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಅಧ್ಯಕ್ಷರಾದ ಸಂಜೀವ ಮಠಂದೂರುರವರ ಅಧ್ಯಕ್ಷತೆಯಲ್ಲಿ ಉದ್ಫಾಟನಾ ಸಭೆ ನಡೆಯಲಿದ್ದು ರಾಜ್ಯಮತ್ತು ಜಿಲ್ಲೆಯ ಪ್ರಮುಖ ನಾಯಕರು ಭಾಗವಹಿಸಿದ್ದಾರೆ.

ಕಾಲ್ನಡಿಗೆಯಲ್ಲಿ  ರಾಜ್ಯ , ಜಿಲ್ಲೆ ಮತ್ತು ಕ್ಷೇತ್ರದ ಪ್ರಮುಖರುಭಾಗವಹಿಸಿದ್ದಾರೆ. ಪ್ರತಿದಿನ ನೂರಾರು ಕಾರ್ಯಕರ್ತರು ಈಪಾದಯಾತ್ರೆಯಲ್ಲಿ  ಜತೆ ಇರುತ್ತಾರೆ. ೧೩ ದಿನಗಳ ಕಾಲ ನಿರಂತರಪಾದಯಾತ್ರೆ ನಡೆಯಲಿದೆ. ಜನವರಿ ೨೬ರ ಸಂಜೆ ೩ ಗಂಟೆಗೆಬಿ.ಸಿ.ರೋಡಿನಲ್ಲಿ ಪಾದಯಾತ್ರೆಯ ಸಮಾರೋಪ ನಡೆಯಲಿದೆ.ರಾಜ್ಯದ ಪ್ರಮುಖ ನಾಯಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ. ಪಾದಯಾತ್ರೆಯ ಸಂದರ್ಭ ಪ್ರತಿದಿನ  ಸಂಜೆಸಾರ್ವಜನಿಕ ಸಭೆ ನಡೆಯಲಿದ್ದು ರಾತ್ರಿ ಕಾರ್ಯಕರ್ತರಮನೆಯಲ್ಲೇ ವಾಸ್ತವ್ಯದ ವ್ಯವಸ್ಥೆ ಮಾಡಲಾಗಿದೆ.

೨೦೧೪ರ ಜನವರಿ ೧೪ರಂದು ಬಂಟ್ವಾಳ ಕ್ಷೇತ್ರದಲ್ಲಿ ರಾಜೇಶ್ನಾಯಕ್‌ರವರ ನೇತೃತ್ವದಲ್ಲಿ ೧೩ ದಿನಗಳ ಪಾದಯಾತ್ರೆಯುನಡೆದಿದ್ದು ಆ ಸಂಧರ್ಭದಲ್ಲಿ  ೫೬ ಗ್ರಾಮ ವ್ಯಾಪ್ತಿಯಲ್ಲಿ ೨೭೨ಕಿ.ಮೀ ಸಂಚರಿಸಲಾಗಿತ್ತು. ಇದೀಗ ೨ನೇ ಬಾರಿ ಬಂಟ್ವಾಳಕ್ಷೇತ್ರದಲ್ಲಿ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ಬಂಟ್ವಾಳದಲ್ಲಿ ರಾಜಕೀಯ ಪರಿವರ್ತನೆಯನ್ನು ತರಲು ಮತ್ತುಪಕ್ಷದ ಕಾರ್ಯಕರ್ತರನ್ನು ಸಂಘಟಿಸಲು  ಪರಿವರ್ತನೆಗಾಗಿ ನಮ್ಮನಡಿಗೆ   ಬಂಟ್ವಾಳದ ಪರಿವರ್ತನೆಗಾಗಿ ಗ್ರಾಮದೆಡೆಗೆ ಬಿಜೆಪಿ ನಡಿಗೆಯನ್ನು ಹಮ್ಮಿಕೊಳ್ಳಲಾಗಿದೆ.

ರಾಜೇಶ್ ನಾಯ್ಕ್ ಉಳಿಪಾಡಿ ಗುತ್ತು ಇವರು ಕೇವಲ ಈ ಬಾರಿ ಈ ಕಾರ್ಯಕ್ರಮ ಮಾಡುತ್ತಿಲ್ಲ. ಯಾವಾಗ ಅವರು ವಿಧಾನಸಭೆಯ ಚುನಾವಣೆಯಲ್ಲಿ ಸೋಲು ಕಂಡಿದ್ದರೋ ಅಂದಿನಿಂದಲೇ ಇಂತಹ ಕಾರ್ಯಕ್ರಮವನ್ನು ಆಯೋಜಿಸಿದ್ದ ಕೀರ್ತಿ ರಾಜೇಶ್ ನಾಯ್ಕ್ ಅವರಿಗೆ ಸಲ್ಲುತ್ತದೆ.

ಇಂತಹ ಕಾರ್ಯಕ್ರಮ ರಾಜ್ಯದ ಪ್ರತಿ ವಿಧಾನ ಸಭಾ ಕ್ಷೇತ್ರದಲ್ಲೂ ನಡೆದರೆ ಕಾಂಗ್ರೆಸ್ ಸೋಲುವುದು ಮಾತ್ರವಲ್ಲದೆ ಕಾಂಗ್ರೆಸ್ ಮುಕ್ತ ಕರ್ನಾಟಕ ಆಗುವುದರಲ್ಲಿ ಸಂದೇಹವೇ ಇಲ್ಲ ಎಂಬುವುದು ಸುಳ್ಳಲ್ಲ.

-ಸುನಿಲ್ ಪಣಪಿಲ

Tags

Related Articles

Close