ಅಂಕಣ

ಇಲ್ಲಿ ಕೊಟ್ಟ ಪುರಾವೆಗಳನ್ನು ನೋಡಿದ ಮೇಲೆ ನೀವೇ ಹೇಳುವಿರಿ ಅಂಬಾನಿ ಯಾರ ಎಜಂಟನೆಂದು !

ಧೀರೂಬಾಯ್ ಅಂಬಾನಿ ಮಕ್ಕಳನ್ನು ಹುಟ್ಟಿಸಿದ್ದೇ ಮುಂದೆ ಮೋದಿ ನನ್ನ ಮಕ್ಕಳ ವ್ಯಹಾರಗಳಿಗೆ ಸಹಕಾರ ಕೊಡುತ್ತಾರೆ ಅಂತ.

ಮುಖೇಶ್ ಅಂಬಾನಿ ಬ್ಯುಸಿನೆಸ್ ಗೆ ಕೈ ಹಾಕಿದ್ದೇ ಮೋದಿ ಮುಖ್ಯಮಂತ್ರಿಯಾದ ಮೇಲೆ.

ಅಂಬಾನಿಯ ರಿಲಯನ್ಸ್ ಉದ್ಧಾರವಾಗಿದ್ದೇ ಮೋದಿ ಪ್ರಧಾನಿಯಾದಮೇಲೆ.ಏಕೆಂದರೆ ಮೋದಿಗೂ ಅಂಬಾನಿಗೂ ನಿಕಟ ಸಂಪರ್ಕವಿದೆ….

ಎಂದು ಹೇಳುತ್ತಾ ಮೋದಿಯವರ ಜೊತೆ ಅಂಬಾನಿಯ ಹೆಸರು ಸೇರಿಸದೇ ಮಾತಾಡಲು ಬರುವುದೇ ಇಲ್ಲವೇನೋ ಎನ್ನುವಂತೆ ಈ ದೇಶದ ಕಮ್ಯುನಿಸ್ಟರು,ಕಾಂಗ್ರೆಸ್ಸಿಗರು ಮತ್ತು ಇತರ ಬಡವರ ಪರ ಎಂದು ಹೇಳಿಕೊಳ್ಳುವ ಪಕ್ಷಗಳು ನಡೆದುಕೊಳ್ಳುವುದನ್ನು ನಾವೆಲ್ಲರೂ ನಿತ್ಯವೂ ನೋಡುತ್ತಲೇ ಇದ್ದೇವೆ.

ಆದರೆ ಇಲ್ಲೊಂದಷ್ಟು ಚಿತ್ರಗಳನ್ನು ನಿಮಗೆ ತೋರಿಸುತ್ತೇನೆ.ಅಂಬಾನಿಯವರ ಜೊತೆ ಮೋದಿಯವರಿಗೆ ಮಾತ್ರ ನಿಕಟ ಸಂಬಂಧವಿದೆ,ಮೋದಿಯಿಂದಲೇ ಅಂಬಾನಿ ಉದ್ಧಾರವಾಗಿದ್ದು ಎನ್ನುವವರು ಇದಕ್ಕೆ ಏನು ಹೇಳುತ್ತಾರೋ ನೋಡೋಣ.

ಈಗಿನ ಅಂಬಾನಿಗಳ ತಂದೆ ಧೀರೂಬಾಯ್ ಅಂಬಾನಿ ಗರೀಬಿ ಹಠಾವೋ ಘೋಷಣೆ ಮಾಡಿ ಈ ದೇಶದ ಮೇಲೆ ತುರ್ತು ಪರಿಸ್ಥಿತಿ ಹೇರಿದ್ದ ಅಂದಿನ ಪ್ರಧಾನಿ ಶ್ರೀಮತಿ ಇಂದಿರಾ ಗಾಂಧಿಯವರ ಜೊತೆ ಭೋಜನ ಸವಿಯುತ್ತಿರುವುದು.ಹಾಗೆ ಸರ್ವಾಧಿಕಾರಿ ಇಂದಿರಾರವರ ಜೊತೆ ಅಂಬಾನಿ ಭೋಜನ ಸವಿಯುತ್ತಿದ್ದಾಗ ನರೇಂದ್ರ ಮೋದಿಯವರು ಯಾವ ಗಲ್ಲಿಯಲ್ಲಿ ಚಿನ್ನಿದಾಂಡು ಆಡುತ್ತಿದ್ದರೋ ಏನೋ…

ಆದರೂ ಕಾಂಗ್ರೆಸ್ ನವರು ಆರೋಪಿಸುತ್ತಿರುವುದು ಅಂಬಾನಿಗಳನ್ನು ಉದ್ಧಾರ ಮಾಡಿದ್ದು ನರೇಂದ್ರ ಮೋದಿ ಎಂದು!

ಹಸ್ತದ ಪಾರ್ಟಿಯ ಧೀರ್ಘಾವಧಿ ಪ್ರಧಾನಿ ಶ್ರೀ ಮನಮೋಹನ್ ಸಿಂಗ್ ಅವರು ತಮ್ಮ ಸ್ವ ಹಸ್ತದಿಂದ ಅಂಬಾನಿಗೆ ಪ್ರಶಸ್ತಿ ನೀಡುತ್ತಿರುವುದು!ಅಂದರೆ ಮೋದಿಯವರು ಪ್ರಧಾನಿಯಾಗುವುದಕ್ಕೂ ಮೊದಲೇ ಈ ದೇಶದ ಪ್ರಧಾನಿಯವರ ಕೈಯಿಂದ ಬ್ಯುಸಿನೆಸ್ ಲೀಡರ್ ಎನ್ನುವ ಪ್ರಶಸ್ತಿ ಸ್ವೀಕರಿಸಿದ ವ್ಯಕ್ತಿಯನ್ನು ಮೋದಿ ಪ್ರಧಾನಿಯಾದ ನಂತರ ಆತನನ್ನು ಉದ್ಧಾರ ಮಾಡಿದರು ಎನ್ನುವ ಆರೋಪಗಳಿಗೆ ಬೆಲೆಯುಂಟೆ?

ಇದೇ ಕಾಂಗ್ರೆಸ್ ಪಕ್ಷದ ಅತೀ ಹಿರಿಯ ನಾಯಕ ಕಮಲ್ ನಾಥ್ ಅವರು ಇದೇ ಅಂಬಾನಿ ಹಾಗೂ ಇನ್ನೊಬ್ಬ ಉದ್ಯಮಿ ಸುನಿಲ್ ಮಿತ್ತಲ್ ಅವರೊಂದಿಗೆ ಪಾರ್ಟಿ ಮಾಡುತ್ತಿರುವುದು!ಇದನ್ನು ನೋಡಿದ ಮೇಲೂ ಕಾಂಗ್ರೆಸ್ ಪಕ್ಷಕ್ಕೂ ಈ ಉದ್ಯಮಿಗಳಿಗೂ ಏನೂ ಸಂಬಂಧವಿಲ್ಲ ಎನ್ನುತ್ತೀರಾ?

ಕಾಂಗ್ರೆಸ್ ನಾಯಕ ಮಿಲಿಂದ್ ಡಿಯೋರಾ ಅವರು ಅಂಬಾನಿ ಮತ್ತವರ ಪತ್ನಿಯನ್ನು ಭೇಟಿಯಾದ ಸಂದರ್ಭದಲ್ಲಿ ತೆಗೆದ ಚಿತ್ರ.ಈ ಚಿತ್ರದಲ್ಲಿ ಮಿಲಿಂದ್ ಡಿಯೋರಾ ಅವರ ಹೆಗಲ ಮೇಲೆ ಕೈ ಹಾಕಿರುವ ಅಂಬಾನಿ ಮತ್ತು ಅಂಬಾನಿ ಪತ್ನಿಯೊಂದಿಗೆ ಆತ ಮಾತಾಡುತ್ತಿರುವ ಶೈಲಿಯನ್ನು ಗಮನಿಸಿದ ಮೇಲೂ ಅಂಬಾನಿ ಕೇವಲ ಮೋದಿಯವರ ಆತ್ಮೀಯ ಮಾತ್ರ ಎಂದು ಹೇಳಲು ಯಾರಿಗಾದರೂ ಸಾಧ್ಯವಿದೆಯೇ?

ಎನ್.ಸಿ.ಪಿ.ಯ ಹಿರಿಯ ನಾಯಕ ಪ್ರಫುಲ್ ಪಟೇಲ್ ಅಂಬಾನಿಯ ಜೊತೆ ಕ್ರಿಕೆಟ್ ವೀಕ್ಷಿಸುತ್ತಿರುವುದು.ಏನೂ ಸಂಬಂಧವಿಲ್ಲದೆ ರಾಜಕೀಯ ಪಕ್ಷದ ಹಿರಿಯ ನಾಯಕನೊಬ್ಬ ಉದ್ಯಮಿಯೊಬ್ಬನೊಂದಿಗೆ ಕ್ರಿಕೆಟ್ ನೋಡಲು ಹೋಗುತ್ತಾನಾ?ಹಾಗಿರಲಿಕ್ಕಿಲ್ಲ.ಇದೇ ಪ್ರಫುಲ್ ಪಟೇಲ್ ಮನಮೋಹನ್ ಸಿಂಗ್ ಸರ್ಕಾರದಲ್ಲಿ ಬೃಹತ್ ಉದ್ಯಮ ಮತ್ತು ಸಾರ್ವಜನಿಕ ಉದ್ದಿಮೆಗಳ ಮಂತ್ರಿಯಾಗಿದ್ದರು.ಇದೇ ಅಂಬಾನಿ ಈ ದೇಶದ ಬೃಹತ್ ಉದ್ಯಮಿ!!

ಈ ಚಿತ್ರಗಳು ಮೋದಿಯೊಂದಿಗೆ ಅತ್ಯಂತ ಆಪ್ತ ಸಂಬಂಧ ಹೊಂದಿದ್ದಾರೆ ಎನ್ನಲಾದ ಅದೇ ಅಂಬಾನಿಯೊಂದಿಗೆ ಈ ದೇಶದ ಮುಂಚೂಣಿಯ ಮೋದಿ ವಿರೋಧಿ ನಾಯಕಿ ಮಮತಾ ಬ್ಯಾನರ್ಜಿ ಅವರದ್ದು!

ಮೇಲಿನ ಚಿತ್ರದಲ್ಲಿ ಮೋದಿ ವಿರೋಧಿ ಮಮತಾ ಅವರು ಮೋದಿ ಆಪ್ತ ಅಂಬಾನಿ ಅವರೊಂದಿಗೆ ಅದೆಷ್ಟು ಆತ್ಮೀಯತೆಯಿಂದ ಹರಟುತ್ತಿದ್ದಾರೆ ನೋಡಿ!

ಈ ಚಿತ್ರದಲ್ಲಿ ಅದೇ ಮೋದಿ ವಿರೋಧಿ ಮಮತಾ ಅವರು ಮೋದಿ ಆಪ್ತ ಅಂಬಾನಿ ಅವರ ಸಾಧನೆಯನ್ನು ಗೌರವಿಸಿ ಶಾಲು ಹೊದಿಸಿ ಸನ್ಮಾನ ಮಾಡುತ್ತಿರುವುದನ್ನೂ ನೋಡಿ!

ಈ ಚಿತ್ರದಲ್ಲಿ ಅದೇ ಮೋದಿ ವಿರೋಧಿ ಮಮತಾ ಅವರು ಮೋದಿ ಆಪ್ತ ಅಂಬಾನಿ ಅವರೊಂದಿಗೆ ಅದೆಷ್ಟು ಸಂಭ್ರಮದಿಂದ ಕ್ರಿಕೆಟ್ ವೀಕ್ಷಿಸುತ್ತಿದ್ದಾರೆ ನೋಡಿ!

ಈಗ ಮಮತಾ ಬ್ಯಾನರ್ಜಿಯವರಿಂದ ಅಂಬಾನಿಯವರ ಉದ್ಯಮಗಳಿಗೆ ಯಾವುದೇ ಸಹಕಾರವೂ ದೊರೆತಿಲ್ಲ ಎಂದು ಅದೇ ಮಮತಾ ಬ್ಯಾನರ್ಜಿಯವರ ತಲೆ ಮೇಲೆ ಕೈಯಿಟ್ಟು ಹೇಳಿ ನೋಡೋಣ.

ಕೊನೆಯ ಚಿತ್ರದಲ್ಲಿ ಮೋದಿಯವರ ಆತ್ಮೀಯ ಅಂಬಾನಿಯನ್ನು ತಬ್ಬಿಕೊಂಡು ನಿಂತಿರುವುದು ಸುಧೀರ್ಘ ಕಾಲ ಪಶ್ಚಿಮ ಬಂಗಾಳವನ್ನಾಳಿದ
‘ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾದ’ ನಾಯಕ ಬುದ್ಧದೇಬ್ ಭಟ್ಟಾಚಾರ್ಯ!

 

ಗಮನಿಸಿ:ಮೇಲಿನ ಎಲ್ಲಾ ಸಂದರ್ಭಗಳಲ್ಲೂ ಮೋದಿಯವರು ಈ ದೇಶದ ಪ್ರಧಾನಿಯಾಗಿರಲೇ ಇಲ್ಲ.ಆದರೆ ಅಂಬಾನಿ ಮಾತ್ರ ಈ ದೇಶದ ದೊಡ್ಡ ಉದ್ಯಮಿಯೆಂದೇ ಗುರುತಿಸಿಕೊಂಡಿದ್ದರು!

ಸರಿ, ಮುಂದಿನ ಭಾಗದಲ್ಲಿ ಯಾರ್ಯಾರ ಕಾಲದಲ್ಲಿ ಅಂಬಾನಿಗಳ ಉದ್ಯಮಕ್ಕೆ ಎಷ್ಟೆಷ್ಟು ಸಹಕಾರ ದೊರೆತಿದೆ,ಎಷ್ಟೆಷ್ಟು ಸಾಲ ದೊರೆತಿದೆ ಎನ್ನುವ ಬಗ್ಗೆ ಚರ್ಚೆ ಮಾಡೋಣ.

Praveen Kumar Mavinakadu

Tags

Related Articles

Close