ಅಂಕಣ

ಇವರ ಬಳಿ ಮೃತ್ಯುವೂ ಸುಳಿಯಲಾರದು!!! ಭಾರತದ ನಿಗೂಢತೆಗೆ ಸಾಕ್ಷಿಯಾದ ಆ ಚಿರಂಜೀವಿಗಳ ಬಗ್ಗೆ ಗೊತ್ತೇ?

ಹಿಂದೂ ಧರ್ಮದಲ್ಲಿ “ಹುಟ್ಟು ಮತ್ತು ಸಾವು” ಖಚಿತ!! ಅಂತೆಯೇ, ಹುಟ್ಟು ಮತ್ತು ಸಾವಿನ ನಡುವೆ ಜೀವಿಸುವ ಜೀವಿತಾವಧಿ ಅದೆಷ್ಟೋ ಪಾಪ ಪುಣ್ಯದ ಕಾರ್ಯಗಳನ್ನು ಮಾಡುತ್ತೋ ಗೊತ್ತಿಲ್ಲ!! ಆದರೆ ಮನುಷ್ಯ ಒಮ್ಮೆ ಮರಣಿಸಿದರೆ ಮತ್ತೆ ಹುಟ್ಟುವ ಅವಕಾಶಗಳಿಲ್ಲ ಎನ್ನುವುದು ತಿಳಿದಿರುವ ವಿಚಾರ. ಆದರೆ ಒಂದು ಜೀವಿ ಹುಟ್ಟಿದಾಗ ಆತನ ಸಾವು ಯಾವಾಗ ಅಂತಲೂ ನಿರ್ಧಾರವಾಗಿರುತ್ತೆ ಅಲ್ಲದೇ ಮನುಷ್ಯನಿಗೆ ಮರಣ ಅನಿವಾರ್ಯ!! ಮನುಷ್ಯ ಎಲ್ಲಾ ಕ್ಷೇತ್ರಗಳಲ್ಲೂ ಸಾಧನೆ ಮಾಡಿ, ಎಲ್ಲವನ್ನೂ ಜಯಿಸಿದ್ದಾನೆ ಆದರೆ ಮರಣವನ್ನು ಯಾರಿಂದಲೂ ಜಯಿಸಲಾಸಾಧ್ಯ!!

ಹುಟ್ಟು ನಮ್ಮ ಕೈಯಲಿಲ್ಲ, ಹಾಗೇ ಸಾವೂ ಕೂಡ (ಆತ್ಮಹತ್ಯೆಗಳನ್ನು ಹೊರತುಪಡಿಸಿ)!! ಆದರೆ ಇವರೆಡರ ನಡುವಿನ ಬದುಕು ನಮ್ಮ ಕ್ಯೆಯಲ್ಲೇ ಇದೆ, ಇದನ್ನು ನಮಗೆ ಬೇಕಾದಂತೆ ರೂಪಿಸಿಕೊಳ್ಳುವ ಅವಕಾಶವೂ ನಮಗಿದೆ!! ಅದೇರೀತಿ ಮನುಷ್ಯನಾದವನು ಒಂದಲ್ಲ ಒಂದು ದಿನ ಮರಣಿಸಲೇಬೇಕು. ಅವನು ಹೇಗೆ ಮರಣಿಸಿದರೂ ,ಮನುಷ್ಯನಿಗೆ ಮರಣ ಅನಿವಾರ್ಯ!!! ಆದುದರಿಂದ, ಯಾರೇ ಆಗಲಿ ಒಂದು ಸಲ ಮರಣಿಸಲೇಬೇಕು. ಆದರೆ, ಹಿಂದೂ ಪುರಾಣಗಳ ಪ್ರಕಾರ ಕೆಲ ಮಹಾನ್ ವ್ಯಕ್ತಿಗಳಿಗೆ ಮರಣವೇ ಇಲ್ಲ ಎಂದು ಹೇಳಲಾಗುತ್ತೆ!! ಹಲವಾರು ಯುಗಗಳಿಂದ ತನ್ನ ದೇಹಕ್ಕಾಗಲಿ, ಆತ್ಮಕ್ಕಾಗಲಿ ಸಾವನ್ನೇ ತಂದುಕೊಳ್ಳದೇ ಭೂಲೋಕದಲ್ಲಿ ಇನ್ನೂ ಬದುಕಿದ್ದಾರಂತೆ ಎಂದರೆ ನಂಬ್ತೀರಾ?? ಅಷ್ಟೇ ಅಲ್ಲದೇ ಪುರಾಣಗಳ ಪ್ರಕಾರ ದೇವರ ಆಶೀರ್ವಾದದಿಂದ ಸಾವನ್ನೇ ಗೆದ್ದ ಮಹಾನ್‍ವ್ಯಕ್ತಿಗಳು ಯಾರೆಂದು ನಿಮಗೆ ತಿಳಿದೆಯೇ?.

ಪುರಾಣಗಳ ಪ್ರಕಾರ, ಇನ್ನೂ ಜೀವಂತವಾಗಿರುವ ಮಹಾನ್ ವ್ಯಕ್ತಿಗಳು!!

ಬಲಿ ಚಕ್ರವರ್ತಿ

ಹಿರಣ್ಯಕಶಪುವಿನ ಪುತ್ರ ಪ್ರಹ್ಲಾದ. ಆತನು ಮಹಾ ವಿಷ್ಣುಭಕ್ತನಾಗಿದ್ದು, ಆತನ ಮಗ ವಿರೋಚನ. ವಿರೋಚನನ ಪುತ್ರನೇ ಬಲಿಚಕ್ರವರ್ತಿ!! ಈತನು ಕೂಡಾ ಮಹಾನ್ ವಿಷ್ಣುಭಕ್ತನೇ. ಆದರೆ ರಾಕ್ಷಸ ವಂಶದಲ್ಲಿ ಹುಟ್ಟಿದವನಾದ್ದರಿಂದ ರಜೋತ್ತಮ ಗುಣ ಪ್ರಬಲನಾಗಿದ್ದನು. ಈತನ ರಾಜ್ಯವು ಸುಭಿಕ್ಷವಾಗಿತ್ತು. ಎಷ್ಟು ವಿಷ್ಣುವನ್ನು ಪೂಜಿಸುತ್ತಾನೋ ಅಷ್ಟೇ ಹಿಂಸೆಯನ್ನು ಇತರರಿಗೆ ನೀಡುತ್ತಿದ್ದನು. ಋಷಿಗಳ ತಪಸ್ಸಿಗೆ ತಪೆÇೀಭಂಗ ಮಾಡುತ್ತಿದ್ದಲ್ಲದೇ, ಯಜ್ಞಯಾಗಾದಿಗಳಿಗೆ ಅಡ್ಡಿಮಾಡುತ್ತಿದ್ದನು.!!

ಅದೇ ಸಮಯಕ್ಕೆ ಬಲಿಚಕ್ರವರ್ತಿಗೆ ಅಶ್ವಮೇಧಯಾಗ ಮಾಡಬೇಕೆಂಬ ಯೋಚನೆ ಬಂತು. ಈ ಯಾಗ ಮಾಡುವಾಗ ಯಾರೇ ಬರಲಿ, ಬಂದವರಿಗೆಲ್ಲರಿಗೂ ಅವರು ಕೇಳಿದ ವಸ್ತುಗಳನ್ನು ದಾನವಾಗಿ ಕೊಡಬೇಕೆಂಬ ನಿರ್ಧಾರವನ್ನು ಕೈಗೊಂಡಿದ್ದಲ್ಲದೇ, ಬಂದವರಿಗೆಲ್ಲಾ ದಾನವನ್ನೂ ನೀಡಲಾಯಿತು!! ಇದೇ ಸಮಯದಲ್ಲಿ ಬಲಿಚಕ್ರವರ್ತಿಯನ್ನು ಸಂಹಾರ ಮಾಡಲು ತಕ್ಕ ಸಮಯವೆಂದು ಭಾವಿಸಿದ ವಿಷ್ಣುವು, ವಾಮನ ರೂಪವನ್ನು ತಾಳಿ ಯಾಗ ನಡೆಯುವ ಸ್ಥಳಕ್ಕೆ ಬಂದನು. ವಾಮನನು ನನಗೆ ಮೂರು ಹೆಜ್ಜೆ ಜಾಗ ನೀಡಿದರೆ ಸಾಕು ಎಂದು ಹೇಳಿ ತ್ರಿವಿಕ್ರಮನಾದನು. ತ್ರಿವಿಕ್ರಮ ಎಂದರೆ ಬಹಳ ಅಗಲವಾದ ಪಾದಗಳುಳ್ಳವ ಎಂದರ್ಥ. ಸರಿ ಎಂದು ಬಲಿಚಕ್ರವರ್ತಿ ನಿನ್ನ ಜಾಗವನ್ನು ತೆಗೆದುಕೋ ಎಂದನು.

ತ್ರಿವಿಕ್ರಮನ ಒಂದನೇ ಹೆಜ್ಜೆ ಇಡೀ ಭೂಮಿಯನ್ನು ಆವರಿಸಿತು. ಎರಡನೇ ಹೆಜ್ಜೆಯನ್ನು ಆಕಾಶದ ಮೇಲಿಟ್ಟನು. ಮೂರನೇ ಹೆಜ್ಜೆ ಎಲ್ಲಿಡಬೇಕೆಂದು ಚಕ್ರವರ್ತಿಯನ್ನು ಕೇಳಿದಾಗ, ಬೇರೇನೂ ತೋಚದ ಬಲಿ, ತನ್ನ ತಲೆಯ ಮೇಲಿಡುವಂತೆ ಕೇಳಿಕೊಂಡನು. ಮೂರನೇ ಹೆಜ್ಜೆಯನ್ನು ಆತನ ತಲೆಮೇಲಿಟ್ಟು ತ್ರಿವಿಕ್ರಮನು ಬಲಿಚಕ್ರವರ್ತಿಯನ್ನು ಪಾತಾಳಲೋಕಕ್ಕೆ ತಳ್ಳಿದನು. ನಂತರ ಬಲಿಚಕ್ರವರ್ತಿಗೆ ವಿಷ್ಣುವು ಒಂದು ವರ ನೀಡಿದನು. ಅದೇನೆಂದರೆ ಆಶ್ವೀಜ ಮಾಸದಲ್ಲಿ ಮೂರು ದಿವಸಗಳ ಕಾಲ ನೀನು ಭೂಲೋಕಕ್ಕೆ ಬರಬಹುದು. ಅಲ್ಲಿ ನಿನ್ನನ್ನು ಜನತೆ ಪೂಜೆಗೈಯುವರು. ಇದರ ಫಲವಾಗಿಯೇ ದೀಪಾವಳಿ ಸಮಯದಲ್ಲಿ ಎಲ್ಲರೂ ದೀಪ ಹಚ್ಚಿ ಬಲೀಂದ್ರ ಪೂಜೆ ಕೈಗೊಳ್ಳುತ್ತಾರೆ. ಅದೇ ದಿನದಂದು ಕೇರಳ ರಾಜ್ಯದ ಪ್ರಜೆಗಳು ಓಣಂ ಹಬ್ಬ ವನ್ನು ಆಚರಿಸುತ್ತಾರೆ.

ವಿಭೀಷಣ

ವಿಭೀಷಣನು ಶಾಂತ ಸ್ವಭಾವದವನೂ, ಸಾತ್ವಿಕನೂ ಆಗಿದ್ದನು. ಅಷ್ಟೇ ಅಲ್ಲದೇ, ಧರ್ಮದಲ್ಲಿ ಮನಸ್ಸುಳ್ಳವನಾಗಿದ್ದನು!! ರಾವಣನ ತಮ್ಮನಾಗಿರುವ ಈತ ಘೋರ ತಪಸ್ಸನ್ನು ಮಾಡಿ ಬ್ರಹ್ಮನನ್ನು ಒಲಿಸಿಕೊಂಡ ವಿಭೀಷಣನು, ತನಗೆ ಎಂಥ ಪರಿಸ್ಥಿತಿಯಲ್ಲಿದ್ದರೂ ಧರ್ಮದಲ್ಲಿಯೇ ಮನಸ್ಸಿರಬೇಕೆಂದು ಕೇಳಿಕೊಂಡನು.
ಸಂತೋಷಕೊಂಡ ಬ್ರಹ್ಮನು ವಿಭೀಷಣನಿಗೆ ನೀನು ಚಿರಂಜೀವಿಯಾಗೆಂದು ಆಶೀರ್ವದಿಸಿದನು!! ರಾವಣ ಬ್ರಹ್ಮನಿಂದ ವರ ಪಡೆದ ನಂತರ ಈತನ ಅಟ್ಟಹಾಸ
ಮುಗಿಲೆದ್ದಿತ್ತು. ತದನಂತರದಲ್ಲಿ ರಾವಣನನ್ನು ಹುಟ್ಟಡಗಿಸಲು ಶ್ರೀಹರಿಯು ಭೂಲೋಕದಲ್ಲಿ ಅವತರಿಸಲು ನಿರ್ಧರಿಸಿದನು. ಇದು ರಾಮಾವತಾರಕ್ಕೆ
ನಾಂದಿಯಾಯಿತು!! ಅಷ್ಟೇ ಅಲ್ಲದೇ, ಈತ ರಾಮನಿಗೆ ಯುದ್ಧದಲ್ಲಿ ಸಹಾಯಮಾಡಿದ್ದನಂತೆ. ಪ್ರತಿಫಲವಾಗಿ ರಾಮ , ವಿಭೀಷಣನನ್ನು ಮೃತ್ಯಂಜಯನನ್ನಾಗಿ
ಮಾಡುತ್ತಾನೆ. ಇದರಿಂದಾಗಿ ಈಗಲೂ ಸಹ ಕೆಲವು ಪ್ರದೇಶಗಳಲ್ಲಿ ವಿಭೀಷಣ ಸಂಚರಿಸುತ್ತಾನಂತೆ!! ವಿಭೀಷಣನ ಗುಡಿಯೊಂದು ರಾಜಸ್ತಾನದ “ಕೋಟಾ”
ಪಟ್ಟಣದಲ್ಲಿದೆಯಂತೆ ಎಂದು ಹೇಳಲಾಗುತ್ತಲ್ಲದೇ, ಇದು ಭಾರತದಲ್ಲಿ ವಿಭೀಷಣನಿಗಾಗಿ ನಿರ್ಮಿಸಲಾಗಿರುವ ಏಕೈಕ ದೇವಾಲಯವಾಗಿದೆ. ಅಲ್ಲದೇ, ಇಂದಿಗೂ ಇಲ್ಲಿ ವಿಭೀಷಣ ಸಂಚರಿಸುತ್ತಿರುತ್ತಾನೆ ಎನ್ನುವ ಸುದ್ದಿಯೂ ಇದೆ!!

ಪರಶುರಾಮ

ರೇಣುಕಾ ಹಾಗೂ ಸಪ್ತರ್ಷಿ ಜಮದಗ್ನಿಯ ಪುತ್ರನಾಗಿರುವ ಪರಶುರಾಮ, ವಿಷ್ಣುವಿನ ಆರನೆಯ ಅವತಾರ ಎಂದು ಹೇಳಲಾಗುತ್ತದೆ!! ಅಷ್ಟೆ ಅಲ್ಲದೇ, ಬ್ರಹ್ಮನ ವಂಶಸ್ಥ ಹಾಗು ಶಿವನ ಶಿಷ್ಯನಾಗಿದ್ದ!! ತ್ರೇತಾಯುಗದ ಕೊನೆಯಲ್ಲಿ ಜೀವಿಸಿದ್ದನಲ್ಲದೇ, ಹಿಂದೂ ಧರ್ಮದ ಏಳು ಅಮರ್ತ್ಯರು ಅಥವಾ ಚಿರಂಜೀವಿಗಳ ಪೈಕಿ ಒಬ್ಬನು. ಹುಟ್ಟುವಾಗಲೇ ಬ್ರಾಹ್ಮಣರಾಗಿದ್ದರೂ, ಕ್ಷತ್ರಿಯರ ಆಕ್ರಮಶೀಲತೆ ಮತ್ತು ಧೈರ್ಯ ಪರಶುರಾಮನಿಗೆ ಇದ್ದುದರಿಂದ ಬ್ರಹ್ಮ ಕ್ಷತ್ರಿಯನೆಂಬ ಹೆಸರನ್ನೂ ಪರಶುರಾಮ ಪಡೆದುಕೊಂಡಿದ್ದಾರೆ!!! ಪರಶು ಎಂಬುದು ಕೊಡಲಿ ಅರ್ಥವನ್ನು ಹೊಂದಿರುವುದರಿಂದ ಕೊಡಲಿಯನ್ನು ಹೊಂದಿರುವ ರಾಮ ಎಂಬ ಹೆಸರಿನಿಂದ ಕೂಡ ಪರಶುರಾಮ ಜನಜನಿತರಾಗಿದ್ದರು. ತ್ರೇತಾಯುಗದಲ್ಲಿ ಜನಿಸಿ, ಹಿಂದೂ ಧರ್ಮದಲ್ಲಿ ಕರೆಯಲಾದ ಏಳು ದೇವತೆಗಳಲ್ಲಿ ಒಬ್ಬರೆನಿಸಿದ್ದಾರೆ. ಯುದ್ಧ ವಿದ್ಯಾ ಪರಿಣಿತನಾಗಿದ್ದ ಪರಶುರಾಮ ಭ್ರಷ್ಟ ಯೋಧರಿಗೆ ಸಿಂಹಸ್ವಪ್ನ ಎಂದೆನಿಸಿದ್ದರು. 21 ಸಲ ವಿಶ್ವದಲ್ಲಿರುವ ಚಕ್ರವರ್ತಿಗಳೆಲ್ಲರನ್ನೂ ಜಯಿಸಿದ್ದು, ಇದರಿಂದಾಗಿಯೇ ಶ್ರೀ ಮಹಾವಿಷ್ಣು ಈತನನ್ನು ಕಾಲಗಳ ಸಮನ್ವಯಕರ್ತನನ್ನಾಗಿ ನಿಯಮಿಸಿರುವುದಾಗಿ ಹೇಳುತ್ತಾರೆ. ಹಾಗಾಗಿ ಪರಶುರಾಮ ಚೀರಂಜೀವಿ ಎಂದು ಹೇಳಲಾಗುತ್ತದೆ!!

ವೇದವ್ಯಾಸ
ವ್ಯಾಸ ಅಥವಾ ವೇದವ್ಯಾಸ ಹಿಂದೂ ಧರ್ಮ ಪರಂಪರೆ ಮತ್ತು ಸಾಹಿತ್ಯದಲ್ಲಿ ಬಹಳ ಪ್ರಮುಖರು!! ಬ್ರಹ್ಮನ ಸಾರ್ಥಕತೆಯನ್ನು ತಿಳಿದ ಇವರನ್ನು ಆದರ್ಶ ಬ್ರಹ್ಮರ್ಷಿ ಎಂದು ಕರೆಯಲಾಗುತ್ತದೆ. ಮಹಾಭಾರತವನ್ನು ಬರೆದ ವೇದವ್ಯಾಸರೂ ಸಹ ಮೃತ್ಯುಂಜಯರಂತೆ. ಅವರು ಇಂದಿಗೂ ಬದುಕಿದ್ದಾರಂತೆ!! ಮಹಾಭಾರತದ ಪ್ರಕಾರ, ವ್ಯಾಸರು ಪರಾಶರ ಮುನಿ ಮತ್ತು ಮೀನುಗಾರನ ಮಗಳಾದ ಮತ್ಸ್ಯಗಂಧಿನಿ ಅಥವಾ ಸತ್ಯವತಿಯ ಪುತ್ರ. ಜನ್ಮ ಯಮುನಾ ನದಿ ಯ ಒಂದು ದ್ವೀಪದಲ್ಲಿ. ಇದು ಈಗಿನ ಕಾಲದ ಉತ್ತರ ಪ್ರದೇಶದ ಜಲುವಾ ಜಿಲ್ಲೆಯ ‘ಕಲ್ಪಿ’ ಎನ್ನುವ ಸ್ಥಳದ ಬಳಿಯಿದೆ. ವ್ಯಾಸರ ಬಣ್ಣ ಕಪ್ಪಾಗಿದ್ದ ಕಾರಣ ‘ಕೃಷ್ಣ’ ಎಂದು ಕರೆಯಲಾಗುತ್ತಿತ್ತು. ದ್ವೀಪದಲ್ಲಿ ಜನಿಸಿದ ಕಾರಣ ‘ದ್ವೈಪಾಯನ’ ಎಂದೂ ಹೆಸರಿತ್ತು. ಈ ಕಾರಣದಿಂದ ಇವರನ್ನು “ಕೃಷ್ಣ-ದ್ವೈಪಾಯನ” ಎಂದೂ ಕರೆಯಲಾಗುತ್ತದೆ. ಮಗು ವಾಗಿ ಹುಟ್ಟಿದ ಕ್ಷಣವೇ ದೊಡ್ಡವರಾಗಿ ಬೆಳೆದು, ತಾಪಸ ಜೀವನ ನಡೆಸಿ ಅತಿ ಪ್ರಮುಖ ಋಷಿಗಳಲ್ಲಿ ಒಬ್ಬರಾಗಿ ಪರಿಗಣಿತರಾಗಿದ್ದಾರೆ. ಪುರಾಣಗಳಲ್ಲಿ ಇವರನ್ನು ವಿಷ್ಣುವಿನ ಒಂದು ಅವತಾರವೆಂದೇ ಪರಿಗಣಿಸಲಾಗಿದೆ. ಹಿಂದೂ ಪುರಾಣದ ಪ್ರಕಾರ ಇವರು ಏಳು ಚಿರಂಜೀವಿಗಳಲ್ಲಿ ಒಬ್ಬರು!!

ಅಶ್ವತ್ಥಾಮ

7 ಚಿರಂಜೀವಿಗಳಲ್ಲಿ ಒಬ್ಬನಾದ ಅಶ್ವತ್ಥಾಮ, ಮಹಾಭಾರತದ ಗುರು ದ್ರೋಣಾಚಾರ್ಯರ ಮಗ!! ಸುಳ್ಳು ಹೇಳಿ ಪಾಂಡವರು ತನ್ನ ತಂದೆ ದ್ರೋಣರನ್ನು ಕೊಂದರೆಂದು ತಿಳಿದು ಪಾಂಡವರನ್ನೇ ಕೊಲ್ಲುತ್ತೇನೆ ಎಂದು ಹೊರಟು ಉಪ ಪಾಂಡವರನ್ನು ಕೊಲ್ಲುತ್ತಾನೆ!! ಮಹಾಭಾರತದಲ್ಲಿ ಅಶ್ವತ್ಥಾಮನದೊಂದು ಮುಖ್ಯವಾದ ಪಾತ್ರ. ಈತ ನಿದ್ರಿಸುತ್ತಿದ್ದ ದ್ರೌಪದಿಕುಮಾರರನ್ನು ಕೊಂದಾತಾ!! ಅಭಿಮನ್ಯುವಿನ ಪುತ್ರನಾದ ಪರೀಕ್ಷಿತನನ್ನೂ ಸಹ ತಾಯಿ ಕೃಪಿಯ ಗರ್ಭದಲ್ಲಿರುವಾಗಲೇ ಸಾಯಿಸುತ್ತಾನೆ. ಆದರೆ, ಶ್ರೀಕೃಷ್ಣ ಪರೀಕ್ಷಿತನನ್ನು ಬದುಕಿಸಿ, ಅಶ್ವತ್ಥಾಮನನ್ನು ಶಪಿಸದ ಎಂದು ಹೇಳಲಾಗುತ್ತೆ!! ಇದರ ಫಲವಾಗಿ ಅಶ್ವತ್ಥಾಮ ಇಂದಿಗೂ ಬದುಕಿದ್ದಾನೆ ಎಂದು ಹೇಳಲಾಗುತ್ತೆ!!

ಕೃಷ್ಣಾಚಾರ್ಯ

ಪಾಂಡವರ ಹಾಗೂ ಕೌರವರ ಗುರು ಕೃಷ್ಣಾಚಾರ್ಯ. ಅಷ್ಟೆ ಅಲ್ಲದೇ, ಈತ ದ್ರೋಣನ ಬಂಧುವಂತೆ!! ಅಷ್ಟೇ ಅಲ್ಲದೇ ಈತ ಮರಣವನ್ನು ಜಯಿಸಿದಾತ!! ಆದರೆ ಈತ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಿರದಿದ್ದೇ ಸೋಜಿಗದ ಸಂಗತಿ!!

ಮಾರ್ಕಂಡೇಯ ಮಹರ್ಷಿ

ಭಾರತದ ಎಂಟು ಚಿರಂಜೀವಿ(ಮೃತ್ಯುವಿಲ್ಲದವರು) ಗಳಲ್ಲಿ ಒಬ್ಬರೆಂದು ಬಹಳ ಪೂಜ್ಯಭಾವದಿಂದ ಗೌರವಿಸಲ್ಪಟ್ಟಿದೆ. ಮೃಕಂಡು ಮುನಿಯ ಪುತ್ರರಾದ ಇವರು
ಭೃಗುಮಹರ್ಷಿಯ ವಂಶದಲ್ಲಿ ಜನಿಸಿದವರು. ಸಂತಾನವಿಲ್ಲದ ಮೃಕಂಡು ದಂಪತಿಗಳು, ಸಂತಾನ ಪ್ರಾಪ್ತಿಗಾಗಿ, ವರವನ್ನು ಬೇಡಿದರು!! ಆದರೆ ಶಿವ ವರಕೊಡುವಾಗ, ಅಲ್ಪಾಯುವಾದ!! ಕೇವಲ ಹದಿನಾರೇ ವರ್ಷ ಜೀವಂತವಾಗಿರುವ ಅತಿಮೇಧಾವಿಯಾದ ಪುತ್ರ ಬೇಕೋ ಅಥವಾ ಪೂರ್ಣಾಯಸ್ಸನ್ನು ಹೊತ್ತು, ಮಂದಮತಿಯಾದ ಪುತ್ರನು ಬೇಕು ಎಂದು ಎರಡು ಪರ್ಯಾಯಗಳನ್ನು ಸೂಚಿಸಿದನು. ನಿಸ್ಸಂಕೋಚವಾಗಿ ಮೃಕಂಡು ಮಹರ್ಷಿ ಅಲ್ಪಾಯುಷಿಯಾದರೂ, ಮೇಧಾವಿಯಾದ ಪುತ್ರನನ್ನೇ ಬೇಡಿದನು. ಹೀಗೆ ಶಿವ ವರದ ಕೃಪೆಯಿಂದ ಜನಿಸಿದವರೇ ಮಾರ್ಕಂಡೇಯ!! ಆದರೆ ಬಹಳ ಚಿಕ್ಕ ವಯಸಿನಲ್ಲಿಯೇ ಮರಣಿಸುತ್ತೇನೆಂಬುದನ್ನು ತಿಳಿದ ಮಾರ್ಕಂಡೇಯ , ತಪಸ್ಸು ಮಾಡಿ ಶಿವನಿಂದ ಮೃತ್ಯುಂಜಯ ಮಂತ್ರವನ್ನು ಪಡೆಯುತ್ತಾನೆ. ಇದರಿಂದಾಗಿ ಮಾರ್ಕಂಡೇಯ ಮೃತ್ಯುಂಜಯನಾಗುತ್ತಾನೆ. ಇಂದಿಗೂ ಬದುಕಿದ್ದಾನೆಂದು ಹೇಳಲಾಗುತ್ತಿದೆ!!

ಆಂಜನೇಯ ಸ್ವಾಮಿ

ಹನುಮಂತ ಹಿಂದೂ ಧರ್ಮಗ್ರಂಥಗಳಲ್ಲೊಂದಾದ ರಾಮಾಯಣದಲ್ಲಿನ ಪ್ರಮುಖ ಪಾತ್ರಗಳಲ್ಲೊಬ್ಬ ಹಾಗೂ ಹಿಂದು ದೇವತೆಗಳಲ್ಲಿ ಒಬ್ಬ!! ವಾಯುಪುತ್ರ,
ಕಪಿವೀರನೆಂದು ಕರೆಯಲ್ಪಡುವ ಹನುಮಂತ ಕೇಸರಿ ಎಂಬ ವಾನರ ಮತ್ತು ಅಂಜನಾದೇವಿಯ ಮಗ ಮತ್ತು ರಾಮನ ಪರಮಭಕ್ತ. ಶಕ್ತಿಯ ದೇವತೆಯೆಂದು
ಹನುಮಂತನನ್ನು ಪೂಜಿಸಲಾಗುತ್ತದೆ. ಭಕ್ತರನ್ನು ಕಾಪಾಡುವ ಕಲಿಯುಗ ದೈವವಾಗಿ ಹನುಮಂತ ಹೆಸರು ಪಡೆದಿದ್ದಾನೆ!! ಅಷ್ಟೇ ಅಲ್ಲದೇ, ಈತನೂ ಸಹ ಮೃತ್ಯುಂಜಯನೇ. ಮರಣ ಈತನ ಹತ್ತಿರ ಸುಳಿಯುವುದಿಲ್ಲವೆಂದು ಪುರಾಣಗಳು ಹೇಳುತ್ತೆ!!

-ಅಲೋಖಾ

Tags

Related Articles

Close