ಅಂಕಣ

ಈ ಅಮೇರಿಕಾ ಪ್ರಜೆಯ ನರೇಂದ್ರ ಮೋದಿ ಹಾಗೂ ಭಾರತದ ರಾಜಕಾರಣದ ಬಗೆಗಿನ ಸಮೀಕ್ಷೆಯೊಂದು ಜಗತ್ತಿನಾದ್ಯಂತ ಸಂಚಲನ ಉಂಟು ಮಾಡಿತ್ತು!

“ನಾನು ಭಾರತದ ದೇಶದ ಉದ್ದಗಲವನ್ನು ಸಂಚರಿಸಿದ ಮತ್ತು ಭಾರತ ದೇಶವನ್ನು ಅತಿಯಾಗಿ ಪ್ರೀತಿಸುತ್ತಿರುವ ಒಬ್ಬ ಅಮೇರಿಕನ್. ಪ್ರಾಸಂಗಿಕವಾಗಿ, ದೇಶದ ಹಣಕಾಸಿನ ಯೋಜನೆಯನ್ನು ನೋಡಿಕೊಳ್ಳುತ್ತಿದ್ದು, ನಾನು ದೇಶದ ಬಡವರೊಂದಿಗೆ ಮತ್ತು ಅತೀ ಬಡವರೊಂದಿಗೆ ಮಾತುಕತೆ ನಡೆಸಿದ್ದೇನೆ. ಹಾಗಾಗಿ ಭಾರತದ ಮೇಲೆ ಕೆಲವರಲ್ಲಿರುವ ಮೂಡನಂಬಿಕೆಗಳ ಬಗ್ಗೆ ನನ್ನ ವಿರೋಧವಿದ್ದು, ಅದನ್ನು ಅಮೇರಿಕಾದ ಸಹೋದ್ಯೋಗಿಗಳು ಹಾಗೂ ಕೆಲವು ಭಾರತೀಯರು ಕೂಡ ಈ ಬಗ್ಗೆ ತಿಳಿಯಲೇಬೇಕಾಗಿದೆ:

1. ನೀವು ಇಷ್ಟ ಪಡುತ್ತಿರೋ ಅಥವಾ ಪಡೋದಿಲ್ಲವೋ ಗೊತ್ತಿಲ್ಲ. ಆದರೆ ಭಾರತದ ಒಳನಾಡುಪ್ರದೇಶವು ಮೋದಿಯ ಹಿಂದೆ ಸದೃಢವಾಗಿ ನಿಂತಿದೆ. ಅಧಿಕಾರದಲ್ಲಿರುವವರನ್ನು ಕೀಳರಿಮೆಯಿಂದ ಕಾಣುವುದನ್ನು ನೋಡಿದ್ದೇವೆ, ಆದರೆ ಇಲ್ಲಿ, ಮೋದಿ ಅನುಯಾಯಿಗಳನ್ನು ಭಕ್ತರು ಎಂದು ಕರೆಯುವುದನ್ನು ನಾನು  ಕೇಳಿದ್ದೇನೆ. ಆದರೆ ಮೊದಲ ಬಾರಿಗೆ ಒಬ್ಬ ದೇಶದ ನಾಯಕ ಯಾವುದೇ ರೀತಿಯ ಹಣಕಾಸಿನ ಹಗರಣವಿಲ್ಲದೇ 3 ವರ್ಷಗಳ ಕಾಲ ಅತ್ಯುತ್ತಮ ನಾಯಕರೆಂದೆನಿಸಿದ್ದಾರೆ. ಈ ಹಿಂದಿನ ಪ್ರಧಾನಿ ದೇಶದಲ್ಲಿ ಹಣಕಾಸಿನ ಹಗರಣ ಮತ್ತು ದೇಶದಲ್ಲಿ ಮೌನವನ್ನು ತೋರಿಸಿ ಹಾಸ್ಯಸ್ಪದ ವಿಚಾರಗಳಿಗೆ
ಪಾತ್ರರಾಗುತ್ತಿದ್ದರು. ಆದರೆ ನರೇಂದ್ರಮೋದಿಯ ಆಗಮನದಿಂದ ಸ್ವಾಗತಾರ್ಹ ಬದಲಾವಣೆಯಾಗಿದೆ.

2. ಮುಸ್ಲಿಂಮರು ಮೋದಿಯನ್ನು ದ್ವೇಷಿಸುವುದಿಲ್ಲ ಬದಲಾಗಿ ವಿದ್ಯಾವಂತರೆನಿಸಿಕೊಂಡಂತಹ ಮುಸ್ಲೀಂಮೇತರರು ಮೋದಿಯನ್ನು ದ್ವೇಷಿಸುತ್ತಾರೆ!! ಯಾಕೆಂದರೆ ತಮ್ಮ ಅಜೆಂಡಾವನ್ನು ಹೈಜಾಕ್ ಮಾಡಿದ್ದಕ್ಕಲ್ಲದೇ, ಎಚ್ಚರಿಕೆಯಿಂದ ರಚಿಸಲಾದ ಸಂಪಾದಕೀಯಗಳಿಗಿಂತ ಚುನಾವಣೆಯಲ್ಲಿ ಆಯ್ಕೆಯಾಗಿ ಸಾರ್ವಜನಿಕರಿಂದ ಹೆಚ್ಚು ಪ್ರಭಾವಯನ್ನು ಬೀರಿದ್ದಾರೆ. ರಾಜಕೀಯ ಗಣ್ಯಾತೀಗಣ್ಯರು ಶ್ರೀಮಂತಿಕೆಯ ಮದದಲ್ಲಿ ಸುಳ್ಳು ಸುದ್ದಿಯನ್ನು ನೀಡುತ್ತಿದ್ದರು. ಬುಕ್ಸಿಟ್ ನಿಂದ ನಮ್ಮ ಟ್ರಂಪ್‍ವರೆಗೆ ನಡೆಯುತ್ತಿದ್ದ ಸುಳ್ಳುವದಂತಿಗಳು ಇವರ ಮುಂದೆ ನಡೆಯುತ್ತಿಲ್ಲ ಎಂಬುವುದೇ ದ್ವೇಷಕ್ಕೇ ಕಾರಣ ಎಂದು ಹೇಳಬಹುದು.

3. ಭಾರತದಲ್ಲಿ ಮೋದಿ ಗುಜರಾತಿನ ಮುಖ್ಯಮಂತ್ರಿಗಳಾಗಿದ್ದಾಗ ಸ್ಪಷ್ಟವಾಗಿ ಚಿತ್ರಿಸಲಾದ ಗುಜರಾತ್ ಗಲಭೆಯೇ ಮೋದಿಯ ವಿರುದ್ಧ ಹೊಂದಿರುವ ಏಕೈಕ ವಿಷಯವಾಗಿದೆ. ಇದರ ಬಗ್ಗೆ ಸುಪ್ರೀಂಕೋರ್ಟ್, ಮೋದಿಯವರು ಯಾವುದೇ ರೀತಿಯ ತಪ್ಪನ್ನು ಮಾಡಿಲ್ಲ ಎಂದು ಹೇಳಿದರೂ ಕೂಡ, ಕೆಲ ಮಾಧ್ಯಮಗಳು ಹಾಗೂ ಕೆಲ ವಿರೋಧಿಗಳು ಇದನ್ನು ಫ್ಯಾಶನ್ ಆಗಿ ಮುಂದುವರೆಸುತ್ತಾ ಹೋಗುತ್ತಿದ್ದಾರೆ. ಅಷ್ಟೇ ಅಲ್ಲದೇ, ಎನ್‍ಕೌಂಟರ್ ಮೂಲಕ ಒಬ್ಬ ಹೆಣ್ಣು ಕೊಲ್ಲಲ್ಪಟ್ಟಾಗ ಮೋದಿ ಮೇಲೆ ಗೂಬೆಕೂರಿಸಿದಾದರೂ ತದನಂತರದಲ್ಲಿ ಅಲ್ ಖೈದಾ ವೈಬ್‍ಸೈಟ್ ಆಕೆಯನ್ನು ಅಲ್‍ಖೈದಾದವಳೆಂದೂ ಹೇಳಿತು!! ಹಾಗೂ ಆಕೆಯ ಉತ್ತಮ ಸಾಧನೆಯನ್ನು ಅವರೇ ಹೊಗಳಿ ತಮ್ಮ ವೈಬ್‍ಸೈಟ್‍ನಲ್ಲಿ ಹಾಕಿದ್ದರು! ತದ ನಂತರದಲ್ಲಿ ಈ ಬಗ್ಗೆ ಯಾವುದೇ ರೀತಿಯ ವಿರೋಧಗಳು ಕೇಳಿ ಬರಲಿಲ್ಲ.

 

4. ಮೋದಿಯನ್ನು ಬಹಳಷ್ಟು ಭಾರತೀಯರು ವಿರೋಧಿಸಿರುವುದನ್ನು ನಾನು ಗಮನಿಸಿದ್ದೇನೆ. ಬೌದ್ದಿಕ ಮತ್ತು ಜಾತ್ಯಾತೀತ ವಿಷಯಗಳನ್ನು ಮುಂದಿಟ್ಟು ವಿರೋಧಗಳು ವ್ಯಕ್ತವಾಗುತ್ತಿದುದ್ದನ್ನು ಕೂಡ ಗಮನಿಸಿದ್ದೇನೆ. ಆದರೆ ದೆಹಲಿ ಮುಖ್ಯಮಂತ್ರಿ ಹಾಗೂ ಕೆಲ ಬುದ್ದಿಜೀವಿಗಳು ಮೋದಿಯ ಶೈಕ್ಷಣಿಕ ಅರ್ಹತೆಗಳ ಬಗ್ಗೆ ಪ್ರಶ್ನಿಸಿ ಹೀಯಾಳಿಸುವ ಉದ್ದೇಶವನ್ನು ಹೊಂದಿದ್ದರು. ಆದರೆ ವಿಶ್ವವಿದ್ಯಾನಿಲಯ ಮೋದಿಯ ಶೈಕ್ಷಣಿಕ ವಿಷಯದ ಬಗ್ಗೆ ವಿಶ್ವಾಸಾರ್ಹತೆಯನ್ನು ದೃಢಪಡಿಸಿದಾಗ ಮೌನವರೆಸಿದರು. ಆದರೆ ‘ಉಗುಳುವ ಮತ್ತು ಚಲಾಯಿಸುವ’ ಬುದ್ಧಿಯನ್ನು ಶುರು ಮಾಡಿದರು. ಏನೇ ಮಾಡಿದರೂ ಕೂಡ ಜನರು ಮೋದಿಯ ಬಗ್ಗೆ ತೆಗಳುವ, ಉಗುಳುವ ಅಭ್ಯಾಸ ಮಾಡುವುದನ್ನು ಮಾತ್ರ ಬಿಡಲಿಲ್ಲ. ಏನೇ ಮಾಡಿದರೂ ಕೂಡ ಯಾವೊಬ್ಬನಿಗೂ ಇವರ ವಿರುದ್ಧವಾಗಿ ಹೋಗಲು ಮಾತ್ರ ಸಾಧ್ಯವಾಗಲಿಲ್ಲ ಎನ್ನುವುದನ್ನು ನಾನು ಗಮನಿಸಿದ್ದೇನೆ.

5. ಭಾರತದಲ್ಲಿನ ಜನರ ಸ್ಮರಣೆಯು ಬಹಳ ಕುಖ್ಯಾತವಾಗಿದೆ. 1984ರಲ್ಲಿ ನಡೆದ ಸಿಖ್ಖರ ಪಂಗಡವನ್ನು ಕರುಣಾಜನಕವಾಗಿ ಹತ್ಯೆಗೈಯಲಾಗಿತ್ತು. ಆದರೆ ಈ ಹತ್ಯಾಕಾಂಡವನ್ನು ಪಂಜಾಬ್ ರಾಜ್ಯ ಮರೆತುಬಿಟ್ಟಿದೆ. ಆದರೆ ಇದನ್ನು ಈಗ ಅಕಾಲಿ ದಳ ಮತ್ತು ಕಾಂಗ್ರೆಸ್ ಹೊರತಂದಿದೆ. ಇಲ್ಲಿ, ನಾನು ನೋಡಿದ ಪ್ರಕಾರ ಮರೆಗುಳಿತನದ ಉದಾಹರಣೆಗಳನ್ನು ನೋಡಿದ್ದೇನೆ. ಆದರೆ ಧನಾತ್ಮಕ ಮತ್ತು ಪ್ರೌಢ ಚಿಹ್ನೆಯಾಗಿರುವುದರಿಂದ, ಬಹಳ ಭ್ರಷ್ಟ ಸ್ಥಾನದಲ್ಲಿರುವ ಪಕ್ಷವನ್ನು ಹೊರಹಾಕಲಾಯಿತು. ಆದರೆ ಇದನ್ನು ಬಹಳಷ್ಟು ಬುದ್ದಿಜೀವಿಗಳು ಇದನ್ನು ಸ್ವಾಗತಿಸಿದರೆ, ಉತ್ತರ ಪ್ರದೇಶದಲ್ಲಿ ಬಿಜೆಪಿ ಮುಸ್ಲಿಂಮರ ಮತವನ್ನು ಪಡೆದುಕೊಂಡು ವಿಜಯಶಾಲಿಯಾಗಿದ್ದಾರೆ, ಹಾಗಾದರೆ ರಾಜಕೀಯದ ಒಂದು ಭಾಗವೇ ಯಾಕೆ ತಲೆಕೆಳಗಾಗಿದೆ? ಮುಸ್ಲಿಂಮರು ಬಿಜೆಪಿಯನ್ನು ಕ್ಷಮಿಸಿ ಬಿಡಬಹುದು ಆದರೆ ಸಿಖ್ಖರು ಕಾಂಗ್ರೆಸ್ಸನ್ನು ಹೇಗೆ ಕ್ಷಮಿಸಲು ಸಾಧ್ಯ?? ಇಲ್ಲಿ ದ್ವಂದ್ವ ಯುದ್ದದ ಮಟ್ಟಗಳು ಕಾಣುತ್ತೆ…. ಸಿಖ್ಖರಂತೆ, ಮುಸ್ಲಿಂಮರಿಗೆ ಉತ್ತಮ ಆಡಳಿತ ಮತ್ತು ಅಭಿವೃದ್ಧಿ ಯಾಕೆ ಬೇಡ?

6. ಭಾರತ ಪಿಪಿಪಿಯ ನಿಯಮಗಳಲ್ಲಿ ಮೂರನೇ ಅತೀದೊಡ್ಡ ಅರ್ಥವ್ಯವಸ್ಥೆಯಾಗಿದ್ದು, 86% ದಷ್ಟು ಕರೆನ್ಸಿ ಚಲಾವಣೆಗೊಂಡಿದೆ. ಈ ಮೂಲಕ ಭಾರತ ಜಗತ್ತನ್ನು ದಿಗ್ಭಮೆಗೊಳ್ಳುವಂತೆ ಮಾಡಿದೆ!! ಆದರೇ ಇದು ಇನ್ನೂ ಚರ್ಚಾಸ್ಫರ್ದೆಯಾಗಿ ಮುಂದುವರೆಯುತ್ತಿದ್ದು, ಇದೊಂದು ದೇಶದ ಉತ್ತಮವಾದ ಕ್ರಮವೇ(ಒಂದು ಪ್ರಮುಖ ಅರ್ಥಶಾಸ್ತ್ರದಂತೆ, ನನಗೆ ಸಂಪೂರ್ಣವಾಗಿ ಮನವರಿಕೆಯಾಗಿಲ್ಲ) ಎಂದು ಈ ಬಗ್ಗೆ ಕೆಲವು ಚರ್ಚೆಗಳು ನಡೆಯುತ್ತಿದೆ. ನಾನು ನೋಡಿರುವುದರ ಪ್ರಕಾರ ಇದೊಂದು ಉತ್ತಮ ನಿರ್ಧಾರನಾ ಅಥವಾ ಕೆಟ್ಟದಾ ; ಆದರೆ ಕಣ್ಣಿಗೆ ಗೋಚರಿಸುವಂತೆ, ಇದನ್ನು ಬಿಜೆಪಿಯೊಂದಿಗೆ ವಿಶ್ಲೇಷಿಸಿದಾಗ ಇಲ್ಲಿ ಯಾವುದೇ ರೀತಿಯ ಹಗರಣಗಳು ನಡೆದಿಲ್ಲ, ಅಷ್ಟೇ ಅಲ್ಲದೇ ಮೋದಿಯವರು ತಮ್ಮ ಆಡಳಿತದಲ್ಲಿ ವಿಶ್ವಾಸಾರ್ಹತೆಯನ್ನು ತೋರುವಂತೆ ಮಾಡಿದ್ದಾರೆ.

7. ಮೋದಿ ಎಲ್ಲಿ ತಮ್ಮ ಟ್ರಿಕ್‍ಅನ್ನು ಕಳೆದುಕೊಂಡರು(ನನ್ನ ಪ್ರಕಾರ) ಎಂದರೆ ಬಡವರಿಗೆ ಮತ್ತು ಆರ್ಥಿಕ ದುರ್ಬಲ ವ್ಯಕ್ತಿಗಳ ಖಾತೆಗೆ ಎರಡು ಮಿಲಿಯನ್ ರೂಪಾಯಿಗಳನ್ನು ಹಾಕಲು ಭರವಸೆ ನೀಡಿದ್ದರು ಮತ್ತು ಉತ್ತಮ ದಿನಗಳ ಭರವಸೆಯನ್ನು ನೀಡಿದ್ದರು. ಆದರೆ ಇವೆಲ್ಲವೂ, ಇವರಿಗೆ ವಿರುದ್ದ ರೀತಿಯ ಪರಿಣಾಮವನ್ನು ನೀಡಿದ್ದಲ್ಲದೇ ಭಾರತೀಯರು ಈ ಪವಾಡ ನಡೆಯುವ ನಿರೀಕ್ಷೆಯಲ್ಲಿರುವುದು ತೋರುತ್ತದೆ. ಆದರೆ ಪವಾಡ ನಡೆದರೂ ಆಶ್ಚರ್ಯವೆನಿಲ್ಲ. ಯಾಕಂದರೆ ಆಧ್ಯಾತ್ಮಿಕವಾದ ಜ್ಞಾನೋದಯಗಳು ನಡೆದ ಸ್ಥಳದಲ್ಲಿ ಪವಾಡಗಳು ನಡೆಯುದಿಲ್ಲ ಎನ್ನುವುದನ್ನು ಲಘವಾಗಿ ತೆಗೆದುಕೊಳ್ಳಲಾಗುವುದಿಲ್ಲ. ಹಾಗಾಗಿ ಈ ಬಗ್ಗೆ ನನಗೂ ನಿರೀಕ್ಷೆ ಇದೆ.

ಕೊನೆಗೂ, ನಾವು ಮಾಡಿದ ನಂತರ( ಟ್ರಂಪ್‍ನ್ನು ಪೋಟುಸ್ ಎಂದು ನೆನಪಿಸಿಕೊಳ್ಳಿ) ನನ್ನ ಅಭಿಪ್ರಾಯಕ್ಕೆ ನಾನು ಒಬ್ಬ ಅಮೇರಿಕನ್ನಾಗಿ ಭಾರತೀಯರ ಬುದ್ಧಿವಂತಿಕೆಗೆ ಮತ್ತು ಜಾತ್ಯಾತೀತಕ್ಕೆ ವಿರೋಧವಾಗಿ ಹೋಗಬಹುದು. ಆದರೆ ಅದು ಅಪಾಯವೆಂದು ತಿಳಿದುಕೊಳ್ಳತ್ತೇನೆ.

ಮೋದಿಯವರಿಗೆ ಅವಕಾಶ ನೀಡಿ! ಅವರು ಸರಿಯಾಗಿಯೇ ಕೆಲಸ ಮಾಡುತ್ತಿದ್ದಾರೆ. ಪವಿತ್ರ ಸ್ಥಳವಾದ ಕಾಶಿಂಗೆ ಒಪನ್ ಟ್ರಕ್ ರ್ಯಾಲಿಯನ್ನು ಮಾಡಿದರು. ಅದು ನಿಜವಾಗಿಯೂ ಬೃಹತ್‍ಮಟ್ಟದ ಸುದ್ದಿಯನ್ನು ಮಾಡಿತ್ತು. ಒಬ್ಬ ಪ್ರಧಾನಿಗೆ ಇರದಂತಹ ಧೈರ್ಯವನ್ನು ಮೋದಿಯಲ್ಲಿ ನಾನು ಕಂಡಿದ್ದೇನೆ. ಯಾವುದಾದರೂ ಅಪಾಯದ ಜಾಗ ಎಂದು ಗೊತ್ತಾದರೂ ಯಾವುದೇ ಸೆಕ್ಯುರಿಟಿ ಇಲ್ಲದೇ ಹೋಗುವ ಧೈರ್ಯವನ್ನು ನಾನು ಕಂಡಿದ್ದು ಮೋದಿಯವರಲ್ಲಿ, ಅದಕ್ಕೇ ಮೆಚ್ಚಲೇ ಬೇಕು!

ಮೋದಿಯವರನ್ನು ದ್ವೇಷಿಸುವವುದನ್ನು ನಿಲ್ಲಿಸಿ. ಆದರೆ ನೀವು ಅಂದುಕೊಂಡಿರಬಹುದು ಮೋದಿಯ್ನು ದ್ವೇಷಿಸುವುದು ಸುಲಭದ ವಿಚಾರ, ಆದರೆ ಇದುವೆ ದೊಡ್ಡ ಹಾಸ್ಯಸ್ಪದವಾಗಿ ಕಾಣುತ್ತೆ. ಅದೆಷ್ಟೋ ದೇಶಗಳು ಮೋದಿಯನ್ನು ಪ್ರೀತಿಸುತ್ತೆ!! ಅದರೆ ಇವರ ನೀತಿಗಳೊಂದಿಗೆ ಭಿನ್ನಾಭಿಪ್ರಾಯಗಳನ್ನು ಸೃಷ್ಟಿಸಿ ಮೋದಿಯನ್ನು ತೆಗಳುವುದು ನ್ಯಾಯಯುತವಾದುದಲ್ಲ. ಮೋದಿಯನ್ನು ತೆಗಳುವ ಮಂದಿ ಹಾಸ್ಯಸ್ಪದಕ್ಕೆ ಕಾರಣರಾಗುತ್ತಿದ್ದೀರಿ ಎಂದು ಯಾಕೆ ಅನಿಸುವುದಿಲ್ಲ. ಆದರೆ ಒಂದು ವಿಷಯವೇನಂದರೆ, ತೆಗೆಳುವ ಮೂಲಕವೇ ಹೆಚ್ಚು ಬೆಂಬಲವನ್ನು ಪಡೆಯುತ್ತಿದ್ದಾರೆ ನರೇಂದ್ರ ಮೋದಿ!! ಆಂಡ್ರಾಯ್ಡ್ ಬಳಕೆದಾರರು ಐಒಎಸ್ ಅನ್ನು ವಿಶ್ವದ ಅತ್ಯಂತ ಕೆಟ್ಟ ‘ಮುಚ್ಚಿದ ಸಾಫ್ಪ್‍ವೇರ್’ ಎಂದು ಅಪಹಾಸ್ಯ ಮಾಡಿದ್ದರು. ಆದರೆ ಆ ಸಮಯಕ್ಕೆ ಐಫೋನ್ ಬಂದಾಗ ಈಡೀ ವಿಶ್ವದ ಗಮನ ತನ್ನತ್ತ ಸೆಳೆಯುವಂತೆ ಮಾಡಿದಲ್ಲದೇ ತಮ್ಮ ಅಭಿಪ್ರಾಯವನ್ನು ಬದಲಾಯಿಸಿದ್ದಲ್ಲದೇ ಹ್ಯಾಂಡ್‍ಸೆಟ್‍ನ್ನು ಬದಲಾಯಿಸಿದರು.

ಮೋದಿಯ ವಿರೋಧಿಗಳು ತಮ್ಮ ಅಭಿಪ್ರಾಯಗಳ ಬಗ್ಗೆ ಉದ್ದೇಶಪೂರ್ವಕವಾಗಿ ಮಾತಾನಾಡಿ ತಮ್ಮ ಸಾಮಥ್ರ್ಯವನ್ನು ಕಳೆದುಕೊಳ್ಳುತ್ತಾರೆ ಎಂದು ತಿಳಿದಿದ್ದೀರಾ? ಮೋದಿಯವರನ್ನು ಯಾವೊಬ್ಬ ವಿರೋಧಿಯು ಕೂಡ ಕೂಲಂಕುಶವಾಗಿ ಕಂಡಿದ್ದನ್ನು ಯಾವತ್ತು ನಾನು ಗಮನಿಸಲಿಲ್ಲ ಮತ್ತು ಮೋದಿಯನ್ನು ಯಾಕೆ ವಿರೋಧಿಸುತ್ತಿದ್ದೇನೆ ಅನ್ನುವುದೇ ವಿರೋಧಿ ಗಳಿಗೆಯೇ ಗೊತ್ತಿಲ್ಲ!! ಮೋದಿಯವರ ಅನೇಕ ಬೆಂಬಲಿಗರು ನನಗೆ ಗೊತ್ತಿರುವ ಹಾಗೆ ಅವರ ನೀತಿಯನ್ನು ಟೀಕಿಸಿದ್ದಾರೆ ಮತ್ತು ಅವರ ನಿಷ್ಠೆಯನ್ನು ಬದಲಿಸಿದ್ದಾರೆ. ಆದರೆ ನಿಜವಾದ ಮೋದಿಯ ಭಕ್ತರು ಯಾರು ಅನ್ನೋದು ನನಗೆ ಆಶ್ಚರ್ಯವಾಗುತ್ತಿದೆ? ಯಾರು ಮೋದಿಯನ್ನು ಬೆಂಬಲಿಸುತ್ತಾರೆಯೋ ಅಥವಾ ವಿರೋಧಿಸುತ್ತಾರೆಯೋ ಅವೆಲ್ಲರೂ ಮೋದಿಯನ್ನು ತೊಡೆದುಹಾಕುತ್ತಾರೆಯೇ?

ಅಮೇರಿಕದಲ್ಲಿರುವ ಯಾವೊಬ್ಬನೇ ಆಗಲಿ ಅವರು ಅಮೇರಿಕಾದ ಸೈನ್ಯವನ್ನು ಯಾವತ್ತು ದೂಷಿಸುವುದಿಲ್ಲ. ಆದರೆ ಭಾರತ ಮಾತ್ರ ಹಾಗಲ್ಲ ಭಾರತದಲ್ಲಿ ಸರ್ಜಿಕಲ್‍ಸ್ಟ್ರೈಕ್ ನಡೆದಾಗಲೂ ಕೆಲವೊಂದು ಪಕ್ಷಗಳು ಅದನ್ನು ಅನುಮಾಸ್ಪದವಾಗಿ ಕಂಡಿದೆ. ನಮಗೆ ಗೊತ್ತಿದೆ ಟ್ರಂಪ್ ಇದ್ದಾರೆ. ಆದರೆ ಅದೆಷ್ಟೂ ವಿದ್ಯಾಭ್ಯಾಸ ಇಲ್ಲದ ಅಮೇರಿಕನ್ನರು ದೇಶದ ಬಗ್ಗೆ ಹೆಮ್ಮೆ ಪಟ್ಟುಕೊಳ್ಳುತ್ತಾರೆ. ಯಾವಾಗ ನೀವು ನಿಮ್ಮ ಸೈನ್ಯದ ಬಗ್ಗೆ ವಿಶ್ವಾಸಾರ್ಹತೆಯನ್ನು ಹೊಂದಿಲ್ಲವು ಅದು ಖಂಡಿತವಾಗಿಯೂ, ಖಂಡಿತವಾಗಿಯೂ ಅದು ನಿಮ್ಮಲ್ಲಿಯೇ, ನಿಮ್ಮಲ್ಲಿಯೇ ಸಮಸ್ಯೆ ಇದೆ. ನಾವು ನಮ್ಮ ದೇಶದ ಧ್ವಜಕ್ಕೆ ಅತೀ ದೊಡ್ಡ ಗೌರವವನ್ನು ನೀಡುತ್ತೇವೆ. ಆದರೆ ನೀವು ನಿಮ್ಮ ತಿರಂಗ ಧ್ವಜಕ್ಕೆ ಗೌರವವನ್ನು ನೀಡುವುದು ಕೆಲವರಲ್ಲಿ ಕಾಣುವುದೇ ಇಲ್ಲ!!

ನನಗೆ ಗೊತ್ತಿದೆ ಅಮೇರಿಕ ಮತ್ತೊಮ್ಮೆ ಶ್ರೇಷ್ಠ ರಾಷ್ಟ್ರ ಆಗಲು ಸಾಧ್ಯವಿಲ್ಲ. ಯಾಕಂದರೆ ನಾವು ಈಗಾಗಲೇ ಶ್ರೇಷ್ಠತೆಯನ್ನು ಹೊಂದಿದ್ದೇವೆ ಮತ್ತು ಹಾಗೆಯೇ ಅದು ಮುಂದುವರೆಯುತ್ತದೆ ಕೂಡ. ಟ್ರಂಪ್ 4 ವರ್ಷದಲ್ಲಿ ಹೋಗಬಹುದು ಆದರೆ ಮೋದಿ 5 ವರ್ಷ ಇದ್ದಾರೆ ಮತ್ತು 2019ರ ನಂತರದ 5 ವರ್ಷ ಇರಲಿದ್ದಾರೆ. ಇನ್ನೂ 5 ವರ್ಷಗಳು ಇದ್ದರೇ ದೇಶದಲ್ಲಿ ಹಗರಣ, ಎಲ್ಲವೂ ಮಾಯವಾಗಬಹುದು. ಆದರೆ ಮನಮೋಹನ್ ಸಿಂಗ್ 10ವರ್ಷಗಳಲ್ಲಿ ಪ್ರಧಾನಿಯಾಗಿದ್ದಾಗ ಮೌನದಿಂದ ಇದ್ದರೇ ಹೊರತು ಬೇರೆನೂ ಆಗಲಿಲ್ಲ. 10 ವರ್ಷಗಳಲ್ಲಿ ಅವರು ಮಾಡಿದ್ದು ಉನ್ನತ ವಿಶ್ವವಿದ್ಯಾನಿಲಯದಲ್ಲಿ ಒಳ್ಳೆಯ ಪದವಿಯನ್ನು ಪಡೆದಿದ್ದು, ಅದು ತನಗೋಸ್ಕರನೇ ಮಾಡಿದ್ದರು! ಅಷ್ಟೇ ಅಲ್ಲದೇ 10 ವರ್ಷದಲ್ಲಿ ಭಷ್ಟ್ರಚಾರದಂತಹ ಹಗರಣಗಳು ಹೆಚ್ಚಾದವೇ ಹೊರತು ಬೇರೆನೂ ಆಗಲಿಲ್ಲ. ಅದು ಅವರ ತಪ್ಪಲ್ಲ, ಆದರೆ ಅವರನ್ನು ಅವರ ಪಕ್ಷದ ಸೂತ್ರದಾರರು ನಿಯಂತ್ರಿಸುತ್ತಿದ್ದರು! ಹಾಗೂ ಆ ಹಳೆಯ ಪಕ್ಷವನ್ನು ವಂಶಪಾರಂಪರ್ಯವಾಗಿ ನಡೆಸಿಗೊಂಡು ಬರುತ್ತಿದ್ದಾರೆ ಮತ್ತು ಅವರೇ ನಾಶಮಾಡುತ್ತಿದ್ದಾರೆ!

ಈ ಶಬ್ಧವು ಕಟುವಾಗಿದ್ದರೆ ಕ್ಷಮಿಸಿ, ಆದರೆ ನಾನು ಭಾರತವನ್ನು ಪ್ರೀತಿಸುತ್ತೇನೆ ಹಾಗೂ ಭಾರತೀಯರನ್ನು ಪ್ರೀತಿಸುತ್ತೇನೆ. ಆಕ್ಸ್‍ಫರ್ಡ್‍ನಲ್ಲಿ ಶಶಿತರೂರ್ ಮಾಡಿದ ಭಾಷಣದಲ್ಲಿ ಭಾರತವು ಯಾವತ್ತೂ ಹೊಳೆಯುವುದಿಲ್ಲ ಮತ್ತು ಅಭಿವೃದ್ದಿಯನ್ನೂ ಹೊಂದುವುದಿಲ್ಲ ಎಂದು ಹೇಳಿದ್ದರು. ಇದೀಗಾ ಭಾರತ ವಿಶ್ವದಲ್ಲಿಯೇ ಉನ್ನತ ಸ್ಥಾನವನ್ನು ಪುನಃ ಪಡೆದುಕೊಳ್ಳಲಿದೆ ಮತ್ತು ನೀವು ನಿಮ್ಮ ದೇಶ ಪ್ರಗತಿ ಪರ ರಾಷ್ಟ್ರವನ್ನಾಗಿಸಲು ಗುಜರಾತಿನ ‘ಚಾಯ್‍ವಾಲ”ನನ್ನು ಹಿಂಬಾಲಿಸಿ, ಇದೇ ನಿಮ್ಮ ಮುಂದಿರುವ ಅತ್ಯುತ್ತಮ ಚಾಲೆಂಜ್ ಆಗಿದೆ.”

ಇಂಗ್ಲೀಷ್ ಮೂಲ: ಜಾನ್ಸನ್.ಕೆ

– ಅಲೋಖಾ

Tags

Related Articles

Close