ಅಂಕಣ

ಈ ದೇಶ ಎನ್ನುವುದು ಇವರ ಅಪ್ಪನ ಮನೆ ಆಸ್ತಿನಾ?! ಅಂಬೇಡ್ಕರ್, ಬೋಸ್, ಶಾಸ್ತ್ರಿ, ಭಗತ್ ಇವರ್ಯಾರು ಯಾಕಿಲ್ಲ?!

ಯಾಕೆ ಯಾವಾಗಲೂ ಕಾಂಗ್ರೆಸ್ಸನ್ನು ತೆಗಳುತ್ತಾರೆ. ಅದೂ ಒಂದು ರಾಷ್ಟ್ರೀಯ ಪಕ್ಷ. ಆ ಪಕ್ಷಕ್ಕೂ ಅದರದೇ ಆದಂತಹ ಇತಿಹಾಸ, ಗೌರವ, ಸಿದ್ಧಾಂತಗಳು ಇದ್ದೇ ಇರುತ್ತೆ. ಅಷ್ಟಕ್ಕೇ ಸರ್ವಾಧಿಕಾರಿ ಅನ್ನೋದಾ..?

ಹೌದು. ಸದ್ಯ ಕಾಂಗ್ರೆಸ್ ಅನ್ನುವ ರಾಷ್ಟ್ರೀಯ ಪಕ್ಷವೊಂದು ರಾಷ್ಟ್ರ ಮಾತ್ರವಲ್ಲದೆ ಅಂತರಾಷ್ಟ್ರೀಯ ಮಟ್ಟದಲ್ಲಿಯೂ ನಗೆಪಾಟಾಲಿಗೀಡಾಗಿದೆ. ಪ್ರಸ್ತುತ ಈ ಪರಿಸ್ಥಿತಿಗೆ ನೆಹರೂ ಸಂತಾನದ ಕುಡಿ ರಾಹುಲ್ ಗಾಂಧಿ ಮಾಡುತ್ತಿರುವ ಕಾಮಿಡಿಯೋ ಅಥವಾ ಆತನಿಂದ ಪಕ್ಷ ಅನುಭವಿಸಿರುವ ಹೀನಾಯ ಸೋಲೋ ಎಂಬುವುದು ಚರ್ಚೆ.

ಆದರೆ ಮತ್ತೊಂದು ವಿಷಯವನ್ನು ಪ್ರತಿಯೊಬ್ಬ ಪ್ರಜೆಯೂ ನೆನಪಿನಲ್ಲಿಟ್ಟುಕೊಂಡಿದ್ದಾನೆ. ಕಾಂಗ್ರೆಸ್‍ನ ಇಂದಿನ ಈ ಪರಿಸ್ಥಿತಿಗೆ ಅದೂ ಕಾರಣವೆಂದರೆ ತಪ್ಪಾಗಲಾರದು. ಏಕೆಂದರೆ ಈವಾಗ ಪ್ರತಿಯೊಬ್ಬರೂ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿದ್ದಾರೆ. ಮಾಧ್ಯಮಗಳು ಹೇಳುತ್ತಿರುವುದು ಸತ್ಯವೋ ಸುಳ್ಳೋ ಎಂಬುವುದನ್ನು ಈಗಿನ ಜನತೆ ಸುಲಭವಾಗಿ ಅರ್ಥಮಾಡಿಕೊಳ್ಳಬಲ್ಲರು.

ಕಾಂಗ್ರೆಸ್ ಅಂದ್ರೇನೆ ಹಾಗೇನೆ. ಅದು ವಂಶ ಪಾರಂಪರ್ಯದಿಂದ ತನ್ನ ಪಕ್ಷವನ್ನು ಬೆಳೆಸಿ, ಅದೇ ವಂಶ ಪಾರಂಪರ್ಯವನ್ನು ಮುಂದಿಟ್ಟುಕೊಂಡು ಪ್ರಧಾನಿಗಳಾಗಿ, ಮತ್ತದೇ ವಂಶಪಾರಂಪರ್ಯದಲ್ಲಿ ದೇಶವನ್ನು ಕೊಳ್ಳೆ ಹೊಡೆದ ಪಕ್ಷ. ಸರ್ಧಾರ್ ವಲ್ಲಭ ಭಾಯಿ ಪಟೇಲರು ಪ್ರಧಾನಿಯಾಗಬೇಕಿದ್ದ ಸಮಯದಲ್ಲಿ, ತನ್ನ ತಂದೆ ಮೋತಿಲಾಲರ ಮೂಲಕ, ಗಾಂಧೀಜಿ ಬಳಿ ಕಾಡಿ ಬೇಡಿ, ಸಣ್ಣ ಮಕ್ಕಳಂತೆ ರಚ್ಚೆ ಹಿಡಿದು ಮೊದಲ ಪ್ರಧಾನಿ ಅನ್ನಿಸಿಕೊಂಡ ಜವಹರಲಾಲ್ ನೆಹರೂ. ತಾನು ಪ್ರಧಾನಿ ಪಟ್ಟಕ್ಕೆ ಅರ್ಹನಲ್ಲದಿದ್ದರೂ ಸ್ವಪ್ರತಿಷ್ಟೆಗಾಗಿ ದೇಶವನ್ನು ಬಲಿಕೊಡಲು, ಮೊದಲ ಪ್ರಧಾನಿ ಇಟ್ಟ ಮೊದಲ ಹೆಜ್ಜೆ.

ನಂತರ ಎಲ್ಲವೂ ಇತಿಹಾಸ. ತರಾತುರಿಯಲ್ಲಿ ತನ್ನ ಮಗಳು ಇಂದಿರಾ ಗಾಂಧಿಯನ್ನು ಕಾಂಗ್ರೆಸ್‍ನ ಅಧ್ಯಕ್ಷೆಯನ್ನಾಗಿಸಿ, ನನ್ನ ನಂತರದ ಉತ್ತರಾಧಿಕಾರಿ ಎಂದು ಬಿಂಬಿಸಿ, ದೇಶಕ್ಕಾಗಿ ಅವಿರತ ಹೋರಾಟಗಳನ್ನು ಮಾಡಿದ್ದ ಮೂಲ ಕಾಂಗ್ರೆಸ್ಸಿಗರನ್ನು ಮೂಲೆಗುಂಪು ಮಾಡಿ ತನ್ನ ವಂಶವೇ ದೇಶವನ್ನು ಕೊನೆವರೆಗೆ ಆಳಬೇಕೆನ್ನುವ ದೃಷ್ಟಿಕೋನದೊಂದಿಗೆ ಕನಸು ಕಂಡಿದ್ದರು ನೆಹರೂ.

ನೆಹರೂ ಕಂಡಂತಹ ಕನಸು ಸ್ವಲ್ಪ ಮಟ್ಟಿಗೆ ನನಸೂ ಆಯಿತು. ನೆಹರೂ ಮಗಳು ಇಂದಿರಾ ಗಾಂಧಿ, ಇಂದಿರಾ ಮಗ ರಾಜೀವ್ ಗಾಂಧಿ ಕೂಡಾ ಪ್ರಧಾನಿಯಾಗಿದ್ದರು. ರಾಜಕೀಯದ ಆಯಾಮಗಳೇ ಗೊತ್ತಿಲ್ಲದ ರಾಜೀವ್ ಗಾಂಧಿ ಜಗತ್ತಿನ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರದ ಪ್ರಧಾನಿಯಾಗಿದ್ದು ದುರಾದೃಷ್ಟವೆ ಸರಿ. ಆದರೆ ಈ ಎಲ್ಲಾ ನಾಯಕರು ಹತ್ಯೆಗಳಿಂದಲೇ ಮರಣ ಹೊಂದಿದ್ದರಿಂದ ರಾಜೀವ್ ಪತ್ನಿ, ಇಟಲಿಯ ಸೋನಿಯಾ ಗಾಂಧೀಗೆ ನಡುಕ ಉಂಟಾಗಿತ್ತು. ಆಕೆ ತನ್ನ ರಿಮೋಟ್ ಕಂಟ್ರೋಲ್ ಆಗಿ ಆರ್ಥಿಕ ತಜ್ನ ಮನಮೋಹನ್ ಸಿಂಗ್‍ರನ್ನು ಪ್ರಧಾನಿಯನ್ನಾಗಿಸಿದರು. ದೇಶ ವಿನಾಶದ ಅಂಚನ್ನು ತಲುಪಿತ್ತು. ನಕಲಿ ಗಾಂಧೀ ಪರಿವಾರದ ಅಧಿಕಾರದ ದಾಹದಿಂದ ಇಡೀ ದೇಶದ ಪ್ರಜಾತಂತ್ರವೇ ಅಲ್ಲೋಲ ಕಲ್ಲೋವಾಗಿತ್ತು. ಈ ಸಮಯದಲ್ಲಿ ಕಾಂಗ್ರೆಸ್‍ಗೆ ಕಂಡ ಮತ್ತೊಬ್ಬ ಗಾಂಧಿ ಪರಿವಾರದ ಕುಡಿ ರಾಹುಲ್ ಗಾಂಧಿ. ಅದು ಬಿಡಿ. ಜೋಕ್ ಮಾಡುತ್ತಾ ಪಪ್ಪು ಅಂತಾನೆ ಪ್ರಸಿದ್ಧಿ ಪಡೆದಿರುವ ಸೋಗಲಾಡಿ ನಾಯಕ.

ಈ ಕಾಂಗ್ರೆಸ್ ಎಂಬ ರಾಷ್ಟ್ರೀಯ ಪಕ್ಷವು ಗಾಂಧಿ ಕುಟುಂಬದ ಮೇಲಿರುವ ಪ್ರೀತಿಯನ್ನು ಪದೇ ಪದೇ ನಿರೂಪಿಸುತ್ತಲೇ ಬರುತ್ತಿದೆ. ಅದೆಲ್ಲಿಗೆ ಹೋದರೂ ಗಾಂಧೀ, ಗಾಂಧೀ ಎಂದು ಗಾಂಧಿ ಜಪ ಮಾಡುತ್ತಿರುವ ಕಾಂಗ್ರೆಸ್ ತಾನು ಮಾಡಿಕೊಂಡು ಬರುತ್ತಿರುವ ಪ್ರತಿಯೊಂದು ಯೋಜನೆಗೂ ಗಾಂಧಿ ಪರಿವಾರದ ಹೆಸರಿಡುತ್ತಾ ಆ ಪರಿವಾರವನ್ನು ದೇಶದ ಜನಮಾನಸದಲ್ಲಿ ಅಚ್ಚಳಿಯದೆ ಉಳಿಯುವಂತೆ ಮಾಡಲು ಪ್ರಯತ್ನಿಸುತ್ತಿದೆ.

ಅಷ್ಟಕ್ಕೂ ಕಾಂಗ್ರೆಸ್ ಪಕ್ಷ ದೇಶದಾದ್ಯಂತ ತಾನು ಜಾರಿಗೊಳಿಸಿದ ಯೋಜನೆಗಳಲ್ಲಿ ಗಾಂಧಿ ಪರಿವಾರದ ನಾಯಕರ ಹೆಸರಿಟ್ಟು, ಗಾಂಧಿ ಪರಿವಾರಕ್ಕೆ ನಾವು ನಿಷ್ಟರು, ನಮ್ಮ ಕಾಂಗ್ರೆಸ್ ಪಕ್ಷಕ್ಕೆ ಗಾಂಧೀ ಪರಿವಾರವೇ ಎಲ್ಲಾ ಎಂಬುವುದನ್ನು ಪದೇ ಪದೇ ನಿರೂಪಿಸುತ್ತಿದೆ. ನಿಜವಾದ ಗಾಂಧೀ ಪರಿವಾರದ ಪ್ರೇಮವೋ ಅಥವಾ ರಾಜಕೀಯ ಓಲೈಕೆಯೋ… ಒಟ್ಟಾರೆಯಾಗಿ ಎಲ್ಲೆಡೆಯೂ ಗಾಂಧೀ ಗಾಂಧೀ ಎಂದು ಗಾಂಧೀ ಜಪ ಮಾಡುವುದನ್ನು ಬಿಟ್ಟಿಲ್ಲ.

ನಿಮಗಿದು ಗೊತ್ತೇ… ದೇಶದ ಪ್ರಮುಖ 99 ಸಂಸ್ಥೆಗಳು ಹಾಗೂ 66 ಯೋಜನೆಗಳಿಗೆ ಗಾಂಧೀ ಕುಟುಂಬದ ಹೆಸರು.!!!

ಇತ್ತೀಚೆಗೆ ಬಾಲಿವುಡ್ ನಟ ರಿಷಿ ಕಪೂರ್ ತುಂಬಾನೆ ಗರಂ ಆಗಿದ್ದರು. ತಮ್ಮ ಕುಟುಂಬದವರ ಹೆಸರುಗಳನ್ನು ಕೆಲವೊಂದು ಸಂಸ್ಥೆಗಳಿಗೆ ಇಟ್ಟಿರುವುದಕ್ಕೆ ಬಂದಂತಹ ಟೀಕೆಗಳಿಗೆ ಸರಿಯಾಗಿಯೇ ಉತ್ತರಿಸಿದ್ದಾರೆ. ತಾವು ತಮ್ಮ ಸಂಸ್ಥೆಗಳಿಗೆ ಹೆಸರನ್ನಿಟ್ಟಿದ್ದಕ್ಕೆ ಯಾರಿಗೇನು ನಷ್ಟ.? ಕಾಂಗ್ರೆಸ್ ಪಕ್ಷ ರಾಷ್ಟ್ರೀಯ ಸ್ವತ್ತುಗಳಿಗೆ ತಮ್ಮ ಕುಟುಂಬದ ಹೆಸರುಗಳನ್ನು ಇಟ್ಟಿಲ್ಲವೇ ಎಂದು ಕಿಡಿಕಾರಿದ್ದರು. ಕಾಂಗ್ರೆಸ್ ಪಕ್ಷ ರಾಷ್ಟ್ರೀಯ ಸ್ವತ್ತುಗಳಿಗೆ ತಮ್ಮ ಪರಿವಾರದ ಹೆಸರನ್ನಿಟ್ಟಿರುವ ಬಗ್ಗೆ ಎಳೆಎಳೆಯಾಗಿ ಬಿಚ್ಚಿಟ್ಟಿದ್ದರು. ಅವರು ಬಹಿರಂಗ ಪಡಿಸಿದ ಆ ಮಾಹಿತಿ ದೇಶವನ್ನು ಬೆಚ್ಚಿ ಬೀಳಿಸಿವೆ.

ನಟ ರಿಷಿ ಕಪೂರ್ ಮತ್ತು ಮಕ್ಕಳು ಈ ವಿಷಯದ ಬಗ್ಗೆ ಕೆಂಡಾಮಂಡಲರಾಗಿದ್ದು ದೇಶದದಲ್ಲಿ ಗಾಂಧೀ ಪರಿವಾರದ ಬಗ್ಗೆ ಟೀಕೆಗಳ ಸುರಿಮಳೆಗಳನ್ನೇ ಹರಿಸಿದ್ದಾರೆ. ದೇಶದಲ್ಲಿ ರಾಷ್ಟ್ರೀಯ ಸ್ವತ್ತುಗಳಿಗೆ ಕಾಂಗ್ರೆಸ್ ಇಟ್ಟಿರುವ ಹೆಸರುಗಳ ಬಗ್ಗೆ ಕಿಡಿಕಾರಿದ್ದಾರೆ.

ರಾಷ್ಟ್ರೀಯ ಸ್ವತ್ತುಗಳಿಗೆ ಗಾಂಧೀ ಪರಿವಾರದ ಹೆಸರು ಎಷ್ಟು ಪ್ರಭಾವ ಬೀರಿದೆ ಗೊತ್ತಾ..?

* ಕೇಂದ್ರ ಸರ್ಕಾರದ ಯೋಜನೆಗಳಲ್ಲಿ ಪ್ರಮುಖ 17 ಯೋಜನೆಗಳ ಹೆಸರುಗಳು ಗಾಂಧೀ ಪರಿವಾರದ್ದು.
* ರಾಜ್ಯ ಸರ್ಕಾರಗಳ ಒಟ್ಟು ಪ್ರಮುಖ 49 ಯೋಜನೆಗಳ ಹೆಸರುಗಳು ಗಾಂಧೀ ಪರಿವಾರದ್ದು.
* ಕ್ರೀಡೆ, ಪಂಧ್ಯಾವಳಿ, ಟ್ರೋಫಿ ಸಹಿತ ಒಟ್ಟು 26 ಹೆಸರುಗಳು ಗಾಂಧೀ ಪರಿವಾರದ್ದು.
* ಸ್ಟೇಡಿಯಂ ಮತ್ತು ಕ್ರೀಡಾ ಸಂಕೀರ್ಣಗಳಿಗೆ ಇಟ್ಟಿರುವ 17 ಹೆಸರುಗಳು ಗಾಂಧೀ ಪರಿವಾರದ್ದು.
* ಪೀಕ್ಸ್ ಮತ್ತು ಭೌಗೋಳಿಕ ಹೆಗ್ಗುರುತುಗಳಿಗೆ ಇಟ್ಟಿರುವ 4 ಹೆಸರುಗಳು ಗಾಂಧೀ ಪರಿವಾರದ್ದು.
* ವಿಮಾನ ನಿಲ್ದಾಣಗಳು, ಬಂದರುಗಳು ಹಾಗೂ ವಿಮಾನ ಯಾನ ಅಖಾಡೆಮಿಗಳಿಗೆ ಕಾಂಗ್ರೆಸ್ ಇಟ್ಟಿರುವ 9 ಹೆಸರುಗಳು ಗಾಂಧೀ ಪರಿವಾರದ್ದು.
* ಪವರ್ ಪ್ಲಾಂಟ್‍ಗೆ ಕಾಂಗ್ರೆಸ್ ಇಟ್ಟಿರುವ 4 ಹೆಸರುಗಳು ಗಾಂಧೀ ಪರಿವಾರದ್ದು.
* ವಿಶ್ವ ವಿದ್ಯಾಲಯ ಹಾಗೂ ವಿದ್ಯಾ ಸಂಸ್ಥೆಗಳಿಗೆ ಇಟ್ಟಿರುವ ಬರೋಬ್ಬರಿ 99 ಹೆಸರುಗಳು ಗಾಂಧೀ ಪರಿವಾರದ್ದು.
* ದೇಶದ ಪ್ರತಿಷ್ಟಿತ 41 ಪ್ರಶಸ್ತಿಗಳಿಗೆ ಕಾಂಗ್ರೆಸ್ ಇಟ್ಟಿರುವ ಹೆಸರು ಗಾಂಧೀ ಪರಿವಾರದ್ದು.
* ದೇಶದ ಅತ್ಯುನ್ನತ ವಿದ್ಯಾರ್ಥಿ ವೇತನ ಹಾಗೂ ಫೆಲೋಶಿಪ್‍ಗೆ ಇಟ್ಟಿರುವ 17 ಹೆಸರುಗಳು ಗಾಂಧೀ ಪರಿವಾರದ್ದು.
* ರಾಷ್ಟ್ರೀಯ ಉದ್ಯಾನವನಗಳು, ಅಭಯಾರಣ್ಯಗಳು ಹಾಗೂ ವಸ್ತು ಸಂಗ್ರಹಾಲಯಗಳಿಗೆ ಇಟ್ಟಂತಹ ಒಟ್ಟು 17 ಹೆಸರುಗಳು ಗಾಂಧೀ ಪರಿವಾರದ್ದು.
* ಆಸ್ಪತ್ರೆಗಳು ಹಾಗೂ ವೈಧ್ಯಕೀಯ ಸಂಸ್ಥೆಗಳಿಗೆ ಇಟ್ಟಿರುವ 37 ಹೆಸರುಗಳು ಗಾಂಧೀ ಪರಿವಾರದ್ದು.
* ಸಂಸ್ಥೆಗಳು, ಚೇರ್ಗಳು ಮತ್ತು ಉತ್ಸವಗಳಿಗೂ ಇಟ್ಟಿರುವ 35 ಹೆಸರುಗಳು ಗಾಂಧೀ ಪರಿವಾರದ್ದು.
* ರಸ್ತೆಗಳಿಗೆ, ಕಟ್ಟಡಗಳಿಗೆ ಹಾಗೂ ಕೆಲವು ಪ್ರಮುಖ ಸ್ಥಳಗಳಿಗೆ ಇಟ್ಟಿರುವ 37 ಹೆಸರುಗಳು ಗಾಂಧೀ ಪರಿವಾರದ್ದು.

ಈ ಗಾಂಧೀ ಪರಿವಾರಕ್ಕೆ ಕಾಂಗ್ರೆಸ್ ಕೊಟ್ಟಿರುವ ಗೌರವ ನೋಡಿದ್ರೆ ಖಂಡಿತಾ ಎಂತವನೂ ದಂಗಾಗಬಹುದು. ಇವಿಷ್ಟು ರಾಷ್ಟ್ರೀಯ ಮಾನ್ಯತೆಯುಳ್ಳ ಹೆರುಗಳಷ್ಟೇ. ಇನ್ನು ಹಲವಾರು ಸರ್ಕಾರಿ ಸ್ವತ್ತುಗಳಿಗೆ, ಶಾಲಾ ಕಾಲೇಜುಗಳಿಗೆ, ಪಂಚಾಯತ್ ಕಟ್ಟಡಗಳಿಗೆ ಸಹಿತ ಹಲವಾರು ಸರ್ಕಾರಿ ಸಂಸ್ಥೆಗಳಿಗೆ ಗಾಂಧೀ ಪರಿವಾರದ ಹೆಸರು ಅಂಟಿಕೊಂಡಿದೆ.

ಇತ್ತೀಚೆಗೆ ಕರ್ನಾಟಕದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರ ಮಹತ್ವಾಕಾಂಕ್ಷೆಯ ಯೋಜನೆಯಾದ ಕ್ಯಾಂಟೀನ್‍ಗೆ ಇಟ್ಟಿರುವ ಹೆಸರು ಕೂಡಾ ಇಂದಿರಾ ಗಾಂಧೀಯದ್ದು. ಇಂದಿರಾ ಕ್ಯಾಂಟೀನ್ ಎಂದು ಹೆಸರಿಡುವ ಮೂಲಕ ತಾವುಗಳು ಗಾಂಧೀ ಪರಿವಾರವನ್ನು ಅತಿಯಾಗಿ ಪ್ರೀತಿಸುವವರು ಎಂದು ಪ್ರಸ್ತುತ ಇರುವ ಗಾಂಧೀಗಳನ್ನು ಓಲೈಕೆ ಮಾಡುವ ಹಂತದಲ್ಲಿದ್ದಾರೆ.

ಈ ದೇಶದಲ್ಲಿ ಹಲವಾರು ಸ್ವಾತಂತ್ರ್ಯ ಹೋರಾಟಗಾರರಿದ್ದಾರೆ. ಕ್ರಾಂತಿಕಾರಿಗಳು ತಮ್ಮ ಜೀವವನ್ನೇ ದೇಶಕ್ಕಾಗಿ ಬಲಿ ಕೊಟ್ಟಿದ್ದಾರೆ. ಆದರೆ ಅವರ ಹೆಸರು ಈ ಕಾಂಗ್ರೆಸ್ಸಿಗರ ಯೋಜನೆಯಲ್ಲಿ ಬಂದೇ ಇಲ್ಲ. ಕಾಂಗ್ರೆಸ್ ಪಕ್ಷದಲ್ಲೇ ದೇಶ ಸೇವೆ ಮಾಡಿ, ದೇಶದ ಏಳಿಗೆಗಾಗಿ ದುಡಿದ ಮಹಾನ್ ವ್ಯಕ್ತಿಗಳಿದ್ದಾರೆ. ಸರ್ದಾರ್ ಪಟೇಲ್, ಅಂಬೇಡ್ಕರ್,  ಲಾಲ್ ಬಹದ್ದೂರ್ ಶಾಸ್ತ್ರೀ ಸಹಿತ ಅನೇಕ ಮುಖಂಡರುಗಳು ದೇಶದ ಸ್ವಾಭಿಮಾನವನ್ನು ಜಗತ್ತಿನ ಮುಂದೆ ಎದ್ದು ನಿಲ್ಲಿಸಿದ್ದಾರೆ. ಆದರೆ ಅವರ ಹೆಸರುಗಳು ಕಾಂಗ್ರೆಸ್ಸಿಗರ ಯೋಜನೆಗಳಲ್ಲಿ ಬರಲೇ ಇಲ್ಲ.

ನೆಹರೂ ಜಯಂತಿ, ಇಂದಿರಾ ಗಾಂಧಿ ಜಯಂತಿ, ರಾಜೀವ್ ಗಾಂಧೀ ಜಯಂತಿ ಹೀಗೆ ಜಯಂತಿಗಳು. ನೆಹರೂ ಪುಣ್ಯತಿಥಿ, ಇಂದಿರಾ ಪುಣ್ಯತಿಥಿ, ರಾಜೀವ್ ಪುಣ್ಯತಿಥಿ ಎಂದು ಆಚರಿಸುವ ಕಾಂಗ್ರೆಸ್ಸಿಗರು ಯಾವಾಗಲಾದರೂ ಪಟೇಲ್ ಜನ್ಮದಿನಾಚರಣೆ ಅಥವಾ ಪುಣ್ಯತಿಥಿಯನ್ನು ಆಚರಿಸಿದ್ಧಾರೆಯೇ..? ಪ್ರಶ್ನಿಸಬೇಕು ತಾನೇ..? ಮೋದಿ ಬರಬೇಕಾಯ್ತು..!!!

ಯೆಸ್… ಪಟೇಲರು ಈ ದೇಶದ ಏಕತೆಗಾಗಿ ಎಷ್ಟು ದುಡಿದಿದ್ದಾರೆ. ನವಾಬರ, ನಿಜಾಮರ ಕೈವಶವಾಗಿದ್ದ ಹಲವಾರು ರಾಜ್ಯಗಳನ್ನು ಹೇಗೆ ವಾಪಾಸು ಈ ದೇಶಕ್ಕೆ ಮರಳಿ ಪಡೆದಿದ್ದಾರೆ ಎಂಬುವುದನ್ನು ಜಗತ್ತಿಗೆ ಸಾರಿಹೇಳಲು ದೇಶದ ಪ್ರಧಾನ ಮಂತ್ರಿಯಾಗಿ ಮೋದಿ ಬರಬೇಕಾಯ್ತು. ಸದ್ಯ ದೇಶಕ್ಕೆ ದೇಶವೇ ಪಟೇಲ್ ಜನ್ಮದಿನದಂದು “ಏಕತಾ ದಿನ”ವನ್ನಾಗಿ ಆಚರಿಸಿ ಅವರ ಸಾಧನೆಯನ್ನು ನೆನಪಿಸುವಂತೆ ಮಾಡುತ್ತಿದ್ದಾರೆ.

ಲಾಲ್ ಬಹದ್ದೂರ್ ಶಾಸ್ತ್ರೀಜಿಯವರ ಜಯಂತಿಯೂ ಕಾಂಗ್ರೆಸ್ಸಿನಿಂದ ಕಡೆಗಣಿಸಲ್ಪಟ್ಟಿತ್ತು. ಆದರೆ ಈಗಿನ ಯುವ ಜನತೆ ಅಕ್ಟೋಬರ್ 2ನೇ ತಾರೀಕಿಗೆ ಹಾಕುವುದು ಶಾಸ್ತ್ರೀಜಿ ಪ್ರೊಫೈಲ್ ಫೋಟೋವೆ ಹೊರತು ಗಾಂಧೀಜಿಯದ್ದಲ್ಲ. ಈ ಮೂಲಕ ದೇಶ ಪ್ರೇಮಿಗಳನ್ನು ಮರೆತು ಗಾಂಧೀ ಪರಿವಾರವನ್ನು ಆರಾಧಿಸುವ ಕಾಂಗ್ರೆಸ್ಸಿಗರಿಗೆ ದಿಟ್ಟ ಪಾಠವನ್ನು ಕಳಿಸುತ್ತಿದ್ದಾರೆ ಈಗಿನ ಯುವ ಜನತೆ.

“ಸತ್ಯ ಮೇವ ಜಯತೇ”

-ಸುನಿಲ್

Tags

Related Articles

Close